

ಕುಂದಾಪುರ, ಅ. 15 ರಂದು ಸಂತ ಜೋಸೆಫ್ ಪ್ರೌಢ ಶಾಲೆಯಲ್ಲಿ 79 ನೇ ಸ್ವಾತಂತ್ರ್ಯೋತ್ಸವ ಶಾಲೆಯ ಮೈದಾನದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಮಕ್ಕಳಿಗೆ ಸಿಹಿ ಹಂಚಲಾಯಿತು ಕಾರ್ಯಕ್ರಮದಲ್ಲಿ ಕುಂದಾಪುರ ರೋಟರಿ ಕ್ಲಬ್ ರಿವರ್ಸೈಡ್ ಇದರ ಅಧ್ಯಕ್ಷರಾದ ರೋ. ಸದಾನಂದ ಉಡುಪ. ರೊಟೇರಿಯನ್ ಉಲ್ಲಾಸ್ ಕ್ರಾಸ್ತ, ರೋಟೋರಿಯಂ ದಂಡಪಾಣಿ (ಸಾರ್ಜೆಂಟ್) ನಿತೀಶ್ ರಾವ್ ಭಾಗವಹಿಸಿದ್ದರು. ಶಾಲಾ ಮುಖ್ಯೋಪಾದ್ಯಾಯಿನಿ ಭಗಿನಿ ಐವಿ, ಶಾಲಾ ದೈಹಿಕ ಶಿಕ್ಷಕ ಮೈಕಲ್ ಪುಟಾರ್ಡೊ, ಇನ್ನಿತರ ಶಿಕ್ಷಕ ಶಿಕ್ಷೇತರರು ಉಪಸ್ಥಿತರಿದ್ದರು.




