

ಕುಂದಾಪುರ, ಅ. 20; ಉಳುವವನೇ ಹೊಲದ ಒಡೆಯ ಎಂಬ ಘೋಷವಾಕ್ಯದೊಂದಿಗೆ ಜಾರಿಗೆ ತಂದ , ಭೂ ಸುಧಾರಣೆ ಕಾಯಿದೆ ಬಡವರ, ಶೋಷಿತ ಸಮಾಜದ , ಗೇಣಿದಾರರ ಕುಟುಂಬದ ಭವಿಷ್ಯ ಉಜ್ವಲವಾಗಿಸಿತು ,ಮಾತ್ರವಲ್ಲದೆ ಪ್ರಧಾನಿ ಇಂದಿರಾಗಾಂಧಿಯವರ 20 ಅಂಶದ ಕಾರ್ಯಕ್ರಮ ರಾಜ್ಯದಲ್ಲಿ ಅನುಷ್ಠಾನಕ್ಕೆ ತಂದ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಅವರು , ಕೃಷಿ , ನೀರಾವರಿ ಮತ್ತು ಪ್ರತಿ ಬಡವರ ಮನೆಗೆ ಒಂದು ದೀಪವೆನ್ನುವ ಭಾಗ್ಯಜ್ಯೋತಿ ಯೋಜನೆಗೆ ಒತ್ತು ನೀಡಿದರು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿಯವರು ಹೇಳಿದರು.
ಜಿಲ್ಲಾ ವಕ್ತಾರಾ ವಿಕಾಸ ಹೆಗ್ಡೆ ಮಾತನಾಡಿ , ಮಾಜಿ ಪ್ರಧಾನಿ ರಾಜೀವ್ ಗಾಂಧಿ ಆಧುನಿಕ ಭಾರತದ ರೂವಾರಿ , ವಿಶ್ವದ ಹೊಸ ತಂತ್ರಜ್ಞಾನದ ಆವಿಷ್ಕಾರವನ್ನು , ಭಾರತದಲ್ಲಿ ಅಳವಡಿಸಿ , ದೇಶದಲ್ಲಿ ದೂರಸಂಪರ್ಕದ ಕ್ರಾಂತಿಯಾಗಲು ಮುನ್ನುಡಿ ಹಾಕಿದರು ಎಂದು ಹೇಳಿದರು.
ಸಭೆಯಲ್ಲಿ ಮಹಿಳಾ ಬ್ಲಾಕ್ ಅಧ್ಯಕ್ಷೆ ದೇವಕಿ ಸಣ್ಣಯ್ಯ , ಯುವ ಕಾಂಗ್ರೆಸ್ ಅಧ್ಯಕ್ಷ ಅಭಿಜಿತ್ ಪೂಜಾರಿ , ನಗರ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಶೇರಿಗಾರ್ , ಐ ಟಿ ಸೆಲ್ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ , ಜಿಲ್ಲಾ ಸೋಷಿಯಲ್ ಮೀಡಿಯಾ ಅಧ್ಯಕ್ಷ ರೋಷನ್ ಶೆಟ್ಟಿ , ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುನಾಫ್ ಕೋಡಿ , ಪಂಚಾಯತ್ ಸದಸ್ಯರಾದ ಗೀತಾ ಎಸ್ , ವಿಜಯಧರ್ ಕೆವಿ , ಪುರಸಭಾ ಸದಸ್ಯರಾದ ಶ್ರೀಧರ್ ಶೇರಿಗಾರ್ , ಪ್ರಭಾವತಿ ಶೆಟ್ಟಿ , ಮಹಮ್ಮದ್ ಅಶ್ವಕ್ , ಅಶೋಕ್ ಸುವರ್ಣ , ಶಶಿಧರ ಕೋಟೆ , ಶಶಿ ರಾಜ್ ಎಂ ಪೂಜಾರಿ ,ಸದಾನಂದ ಖಾರ್ವಿ ,ಜಿಲ್ಲಾ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಜೋಸೆಫ್ ರೆಬೆಲ್ಲೊ , ಗ್ಯಾರೆಂಟಿ ಸಮಿತಿಯ ಸದಸ್ಯೆ ಆಶಾ ಕರ್ವಾಲ್ಲೊ, ಯೋಜನಾ ಪ್ರಾಧಿಕಾರದ ಸದಸ್ಯ ಅಲ್ಫಾಜ್ , ಪಕ್ಷದ ಸಕ್ರಿಯ ಸದಸ್ಯರಾದ ರಾಕೇಶ ಶೆಟ್ಟಿ , ಕೆ ಎಸ್ ವಿಜಯ , ವಿವೇಕಾನಂದ ಚರ್ಚ್ ರಸ್ತೆ , ಪ್ರಭಾಕರ ಕಡ್ಗಿಮನೆ , ಕ್ಲಿಫರ್ಡ್ ಡಿಸಿಲ್ವಾ , ಎಡಾಲ್ಫ್ ಡಿಕೋಸ್ಟಾ ಇನ್ನಿತರರು ಉಪಸ್ಥಿತರಿದ್ದರು.
ಅಕ್ರಮ ಸಕ್ರಮ ಸಮಿತಿಯ ಸದಸ್ಯೆ ಜಾನಕಿ ಬಿಲ್ಲವ ಸ್ವಾಗತಿಸಿ , ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿನೋದ್ ಕ್ರಾಸ್ಟೊ ಪ್ರಾಸ್ತಾವಿಕ ಮಾತುಗಳನ್ನಾಡಿ , ನಿರೂಪಿಸಿದರು , ಪುರಸಭಾ ಸದಸ್ಯ ಅಬ್ಬು ಮಹಮ್ಮದ್ ವಂದಿಸಿದರು.







