ಕುಂದಾಪುರ; ಯಾವುದೇ ಸ್ವಾರ್ಥ ಉದ್ದೇಶಗಳಿಂದ ಪ್ರೇರಿತವಾಗದ ದೇಶಪ್ರೇಮ ನಮ್ಮ ಯುವಜನತೆಯದ್ದಾಗಬೇಕು. ಮುಂದಿನ ದಿನಗಳಲ್ಲಿ ನಿಷ್ಪಕ್ಷಪಾತವಾದ ಧೋರಣೆಯಿಂದ ದೇಶ ಕಟ್ಟುವಲ್ಲಿ ಎಲ್ಲರೂ ಮುನ್ನಡೆದರೆ ದೇಶದ ಶ್ರೇಷ್ಠತೆಯನ್ನು ಕಾಪಾಡಬಹುದು’ ಎಂದು ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನವೀನ ಕುಮಾರ ಶೆಟ್ಟಿಯವರು ಕಾಲೇಜಿನಲ್ಲಿ 80 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣಗೈದು ಕರೆ ನೀಡಿದರು.ಹಲವು ಮೌಲ್ಯಯುತ ಸಂಘರ್ಷ, ತ್ಯಾಗಗಳಿಂದ ದೇಶಕ್ಕೆ ಲಭಿಸಿದ  ಸ್ವಾತಂತ್ರ್ಯ ಸಮರ್ಥವಾಗಿ ಉಳಿಸಿಕೊಳ್ಳಬೇಕಾದರೆ ನಾವೆಲ್ಲರೂ ಉತ್ತಮ ವಿಚಾರಶಕ್ತಿಯಿಂದ ಎಲ್ಲ ಕ್ಷೇತ್ರಗಳಲ್ಲಿ ಹೊಸತನಕ್ಕಾಗಿ […]

Read More

ಮಂಗಳೂರು ಸ್ಮಾರ್ಟ್ ಸಿಟಿಯಲ್ಲಿ ಜನರ ಸಹಯೋಗದೊಂದಿಗೆ ಅಭಿವೃದ್ಧಿ ಮಾಡಲು ನಾವು ಅಧಿಕಾರಿಗಳು ಉತ್ತಾಹಿತರಾಗಿದ್ದೇವೆ.ಜನರು ತಮ್ಮ ಸ್ಥಳೀಯ ಸಮಸ್ಯೆಗಳನ್ನು ಮತ್ತು ಬೇಕಾಗುವ ಅಭಿವೃದ್ಧಿ ಯೋಜನೆ ಮಾಹಿತಿಯನ್ನು ನಮಗೆ ಬರೆದು ನೀಡಿದರೆ ಹಣಕಾಸು ಒದಗಿಸಲು ಸಾಧ್ಯವಾಗುತ್ತದೆ ಎಂದು ಮಂಗಳೂರು ಸ್ಮಾರ್ಟ್ ಸಿಟಿಯ ಟೆಕ್ನಿಕಲ್ ವಿಭಾಗದ ಚೀಫ್ ಮೆನೆಜರ್ ಅರುಣ್ ಪ್ರಭಾ ಕೆಎಸ್ ನುಡಿದರು. ಅವರು ಮೇರಿಹಿಲ್ ಬಳಿಯ ಪ್ರಥ್ವಿ ಸೇವಾ ಟ್ರಸ್ಟ್ ಮತ್ತು ವ್ಯಾಲಿವೀವ್ ಲೇಅವ್ಟ್ ನಾಗರಿಕ ಸಮಿತಿಯ ಸಹಯೋಗದೊಂದಿಗೆ ಮೇರಿಹಿಲ್‌ನ ಗುರುನಗರದಲ್ಲಿ  ನಡೆದ 80ನೇ ಸ್ವಾತಂತ್ರ್ಯ ಉತ್ಸವದ ಪ್ರಯುಕ್ತ […]

Read More

ಮೂಡ್ಲಕಟ್ಟೆ ಐಎಂಜೆ ವಿದ್ಯಾ ಸಂಸ್ಥೆಯಗಳಲ್ಲಿ 80 ನೆ ಸ್ವಾತಂತ್ರ್ಯ ದಿನಾಚರಣೆಯನ್ನು ದೇಶಭಕ್ತಿ ಹಾಗೂ ಸಂಭ್ರಮದಿಂದ  ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ MUTBI, ಮಣಿಪಾಲದ ಸಿ ಈ ಓ ಡಾ. ಸಂತೋಷ್ ರಾವ್ ಅವರು ವಿಕಸಿತ ಭಾರತ – 2047ರ ಪರಿಕಲ್ಪನೆಯನ್ನು ವಿವರಿಸಿದರು. ಭಾರತವು ಸ್ವಾತಂತ್ರ್ಯದ 100 ವರ್ಷಗಳನ್ನು ಪೂರೈಸುವ 2047ರ ವೇಳೆಗೆ ಆರ್ಥಿಕವಾಗಿ ಬಲಿಷ್ಠ, ತಾಂತ್ರಿಕವಾಗಿ ಮುಂದುವರಿದ, ಆತ್ಮನಿರ್ಭರ ಹಾಗೂ ಸಮಗ್ರವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು ಎಂಬುದು ವಿಕಸಿತ ಭಾರತದ ದೃಷ್ಟಿಕೋನವಾಗಿದೆ ಎಂದು ಅವರು ತಿಳಿಸಿದರು. […]

Read More

ಶಿರೂರು: ಜ್ಞಾನದಾ ಶೈಕ್ಷಣಿಕ ಸಂಸ್ಥೆ, ಶಿರೂರು ವತಿಯಿಂದ ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಹಾಗೂ ದೇಶಭಕ್ತಿಯ ಸಂಭ್ರಮದೊಂದಿಗೆ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಞಾನದಾ ಶೈಕ್ಷಣಿಕ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ರಾಮಚಂದ್ರ ಬಿ. ಶಿರೂರ್ಕರ್ ವಹಿಸಿದ್ದರು. ಧ್ವಜಾರೋಹಣ ನೆರವೇರಿಸಿದ ಅವರು ಅಧ್ಯಕ್ಷೀಯ ಭಾಷಣ ಮಾಡಿದರು. ಸಂಸ್ಥೆಯ ಕಾರ್ಯದರ್ಶಿ ಶ್ರೀ ಧೀರಜ್ ಆರ್. ಶಿರೂರ್ಕರ್ ಅವರು ಸ್ವಾತಂತ್ರ್ಯ ದಿನಾಚರಣೆಯ ಮಹತ್ವ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಹಾಗೂ ಯುವಜನರ ಜವಾಬ್ದಾರಿಗಳ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ […]

Read More

ದಿನಾಂಕ 13-08-2026 ಗುರುವಾರ ಬೆಳ್ಳಿಗ್ಗೆ 10:30 ಕ್ಕೆ ನಡೆಯಬೇಕಾದ ಗ್ರಾಮಸಭೆಯು 11:15 ಸಮಯವಾದರು ಇಲಾಖಾಧಿಕಾರಿಗಳು ಗ್ರಾಮಸಭೆಗೆ ಬಾರದೆ ಇದ್ದ ಕಾರಣ ಸಭೆಯುಮುಂದೂಡಲಾಗಿತು. ಇಂದಿನ ಗ್ರಾಮಸಭೆಯ ನೋಡಲ್ ಅಧಿಕಾರಿಯಾಗಿ ಕೃಷ್ಣ, ಸಹಾಯಕ ನಿರ್ದೇಶಕರು ಕೃಷಿ ಇಲಾಖೆ ಮತ್ತು ಪಂಚಾಯತ್ ಆಡಳಿತಾಧಿಕಾರಿ ಶ್ರೀಮತಿ ಎಸ್.ಆರ್. ಗಿರಿಜಮ್ಮ ಹಾಗೂ ಪಿಡಿಒ ನಾಗರಾಜ್ ಎಂ.ಕೆ. ಹಾಜರಿದ್ದುಆರಂಭದಲ್ಲಿ ಪಿಡಿಓ ರವರು ಸ್ವಾಗತಿಸಿದರು. ತದನಂತರ ಗ್ರಾಮಸ್ಥರು ಹಲವು ಅದಿಕಾರಿಗಳು ಗೈರು ಹಾಜರಿಯಲ್ಲಿ ಗ್ರಾಮ ಸಭೆ ಆರಂಭಿಸುವಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಇಲಾಖಾಧಿಕಾರಿಗಳು ತಮ್ಮ ಇಲಾಖೆಯ ಬಗ್ಗೆ ಜವಾಬ್ದಾರಿಯನ್ನು […]

Read More

Freedom in Action: YCS and ICYM Milagres Take Up Mission Swachhta ಮಂಗಳೂರು, ಆಗಸ್ಟ್ 15: ನಮ್ಮ ಮನೆ ಎಂದು ಕರೆಯುವ ಸ್ಥಳಕ್ಕೆ ಸೇವೆ ಸಲ್ಲಿಸುವುದಕ್ಕಿಂತ ಸ್ವಾತಂತ್ರ್ಯವನ್ನು ಆಚರಿಸಲು ಉತ್ತಮ ಮಾರ್ಗ ಇನ್ನೊಂದಿಲ್ಲವೇ? ಈ ಚಿಂತನೆಯನ್ನು ಕಾರ್ಯರೂಪಕ್ಕೆ ತರುವ ಮೂಲಕ, ಮಿಲಾಗ್ರಿಸ್‌ನ ಅವರ್ ಲೇಡಿ ಆಫ್ ಮಿರಾಕಲ್ಸ್ ಚರ್ಚ್‌ನ ವೈಸಿಎಸ್ ಮತ್ತು ಐಸಿವೈಎಂ ಮಿಲಾಗ್ರಿಸ್ ಘಟಕವು ಸ್ವಾತಂತ್ರ್ಯ ದಿನದಂದು “ಮಿಷನ್ ಸ್ವಚ್ಛತಾ – ಟುಗೆದರ್ ವಿ ಕ್ಲೀನ್, ಟುಗೆದರ್ ವಿ ಕೇರ್” ಅನ್ನು ಆಯೋಜಿಸಿತು. […]

Read More

ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಇದರ 2024-25ನೇ ಸಾಲಿನ ವಾರ್ಷಿಕ ಮಹಾ ಸಭೆಯು ದಿನಾಂಕ 16/8/2026 ರಂದು ಮಂಗಳೂರಿನ ಮಿಲಾಗ್ರಿಸ್ ಕಾಲೇಜ್ ಆಡಿಟೋರಿಯಂ ಇಲ್ಲಿ ನಡೆಸಲಾಯಿತು. ಸಭೆಯನ್ನು ಪ್ರಾರ್ಥನೆಯೊಂದಿಗೆ ಆರಂಭಿಸಿ ಕಳೆದ ವರ್ಷದಲ್ಲಿ ಸೇವೆ ಸಲ್ಲಿಸಿ ದೈವಾಧೀನರಾದ ಸಂಘಟನೆಯ ಸದಸ್ಯರಿಗೆ ಶೃದ್ಧಾಂಜಲಿಯನ್ನು ಅರ್ಪಿಸಿ ಪ್ರಾರ್ಥಿಸಲಾಯಿತು. ಸಭಾಧ್ಯಕ್ಷರಾದ ಶ್ರೀ ಸಂತೋಷ್ ಡಿಸೋಜಾರವರು ಹಾಜರಿದ್ದ ಎಲ್ಲರನ್ನು ಸ್ವಾಗತಿಸಿದರು. 2026-27ನೇ ವರ್ಷದ ಕಾರ್ಯದರ್ಶಿಯವರಾದ ಶ್ರೀಮತಿ ವಿಲ್ಮಾ ಮೊಂತೇರೊರವರು ಕಳೆದ ವಾರ್ಷಿಕ ಸಭೆಯ ಹಾಗೂ ವಾರ್ಷಿಕ ವರದಿಯನ್ನು ವಾಚಿಸಿದರು. ಖಜಾಂಚಿಯವರಾದ ಶ್ರೀ ಫ್ರಾನ್ಸಿಸ್ […]

Read More

ಬೈಂದೂರು; 80 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಬೈಂದೂರು ಹೋಲಿ ಕ್ರಾಸ್ ಚರ್ಚ್ ನಲ್ಲಿ ಬಲಿಪೂಜೆಯನ್ನು ನೆರವೇರಿಸಿದ ಬಳಿಕ ಸಮಸ್ತ ಕ್ರೈಸ್ತ ಬಾಂಧವರು ಹೋಲಿ ಕ್ರಾಸ್ ಕನ್ನಡ ಮಾಧ್ಯಮ ಶಾಲಾ ವಠಾರದಲ್ಲಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದ್ದು, ಮುಖ್ಯ ಅತಿಥಿಯಾಗಿ ವಂದನೀಯ ಧರ್ಮಗುರುಗಳು ಡೆನಿಸ್ ಡಿಸೋಜರವರು ಧ್ವಜಾರೋಹಣವನ್ನು ನೆರವೇರಿಸಿದ್ದು, ಭಾರತೀಯರಾದ ನಾವು ಸಾರ್ವಭೌಮತ ಹಾಗೂ ಏಕತೆಯಿಂದ ನಮ್ಮ ಹಕ್ಕುಗಳನ್ನು ರಕ್ಷಿಸುವ ಮೂಲಕ ಸಮಾಜದ ಹಾಗೂ ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸಿ ದೇಶಕ್ಕೆ ಕೊಡುಗೆಯನ್ನು ನೀಡಬೇಕು ಹಾಗೂ ನಮ್ಮ ದೇಶ ಹೆಮ್ಮೆ […]

Read More

ಕುಂದಾಪುರ; ಭಯ, ಭಕ್ತಿ ಮತ್ತು ಶ್ರದ್ಧೆಯ ಪ್ರತೀಕವಾಗಿ ನಮ್ಮ ಕರಾವಳಿಯಲ್ಲಿ ಆರಾಧಿಸಲ್ಪಡುವ ಪ್ರಕೃತಿ ನಾಗ ದೇವರ ಕಲ್ಪನೆಯಡಿಯಲ್ಲಿ ರಚನೆಗೊಂಡ “ನಾಗಬನ” ಎಂಬ ಶೀರ್ಷಿಕೆಯಡಿ Save Nature ಎಂಬ ಸಂದೇಶವನ್ನು ಸಾರುವ ವಿಶೇಷ ಕಲಾಕೃತಿ ಕೋಟೇಶ್ವರದ ಹಳೆ ಅಳಿವೆ ಕಡಲ ಕಿನಾರೆಯಲ್ಲಿ ಆಕರ್ಷಿಸಲ್ಪಟ್ಟಿತು. ಕಲಾವಿದ್ಯಾರ್ಥಿಗಳಾದ ಅದ್ವಿತ್ ಶಂಕರ್ , ಸಾತ್ವಿಕ್ ಕೆ.ಆರ್, ಪ್ರಣತಿ ಪ್ರಶಾಂತ್ ಭಟ್, ಸಮನ್ವಿ, ಅದ್ವಿತ್ ಕುಮಾರ್ ಆರ್. ಸುನೇರಿ ಹೆಗ್ಡೆ, ವಿದ್ಯಾ ರಾಣಿ ಕೇಂದ್ರದ ಮಾರ್ಗದರ್ಶಕ ಹರೀಶ್ ಸಾಗಾ ತರಬೇತಿಯಲ್ಲಿ 12 ಅಡಿ ಅಗಲದ […]

Read More
1 11 12 13 14 15 587