ಸಂತ ಅಲೋಶಿಯಸ್ ಗೊನ್ಜಾಗಾ ಶಾಲೆಯಲ್ಲಿ 2025-26ನೇ ಸಾಲಿನ ಪೂರ್ವ ಪ್ರಾಥಮಿಕ ಹಂತದ ಕ್ರೀಡಾ ದಿನವನ್ನು ಜನವರಿ 30 ರಂದು ಶಾಲಾ ಮೈದಾನದಲ್ಲಿ ಬಹಳ ಉತ್ಸಾಹದಿಂದ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ದಕ್ಷಿಣ ಕನ್ನಡ ಜಿಲ್ಲಾ ಟೇಬಲ್ ಟೆನಿಸ್ ಸಂಘದ ಅಧ್ಯಕ್ಷರು ಮತ್ತು ಕರ್ನಾಟಕ ರಾಜ್ಯ ಟೇಬಲ್ ಟೆನಿಸ್ ಸಂಘದ ಉಪಾಧ್ಯಕ್ಷರಾದ ಶ್ರೀ ಗೌತಮ್ ಶೆಟ್ಟಿ ಅವರು ಕ್ರೀಡಾ ದಿನಾಚರಣೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು ಮತ್ತು ಚಿಣ್ಣರ ಉತ್ಸಾಹವನ್ನು ಶ್ಲಾಘಿಸಿದರು ಅಲ್ಲದೆ ಉತ್ತಮ ಆರೋಗ್ಯ, ನೈರ್ಮಲ್ಯ, ಶಿಸ್ತು […]
ಶ್ರೀನಿವಾಸಪುರ : ಇಂದಿನ ದಿನಗಳಲ್ಲಿ ಬಹುತೇಕ ರೈತರು ಕೃಷಿಯಲ್ಲಿ ನಿರಂತರ ನಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಕೃಷಿಯನ್ನು ತೊರೆದು ನಗರ ಪ್ರದೇಶಗಳತ್ತ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರಿಗೆ ಅನುಕೂಲವಾಗುವಂತೆ ಪರಿಣಾಮಕಾರಿ ಕೃಷಿ ಬೆಂಬಲ ಯೋಜನೆಗಳನ್ನು ರೂಪಿಸಬೇಕಾಗಿದೆ ಎಂದು ಕೆಎಸ್ಎಫ್ಸಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ವಿ. ಮೋಕ್ಷ ಅವರು ಹೇಳಿದರು. ತಾಲೂಕಿನ ನಲ್ಲಪಳ್ಳಿ ಗ್ರಾಮದಲ್ಲಿ ಶನಿವಾರ ರಾಗಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ರೈತರು […]
ಶ್ರೀನಿವಾಸಪುರ: ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಅಂಗವಾಗಿ ನಡೆದ ಶೋಭಾಯಾತ್ರೆಯಲ್ಲಿ ಅಪೂರ್ವ ಸೌಹಾರ್ದತೆಯ ದೃಶ್ಯ ಕಂಡುಬಂದಿತು. ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದ ಹಿಂದೂ ಬಾಂಧವರಿಗೆ ಮುಸ್ಲಿಂ ಸಮುದಾಯದ ಮೊಬೈಲ್ ರಿಪೇರಿ ಅಂಗಡಿಗಳ ಮಾಲೀಕರು ಮುಳಬಾಗಿಲು ವೃತ್ತದ ಬಳಿ ಸ್ವಯಂ ಪ್ರೇರಿತವಾಗಿ ನೀರು ಹಾಗೂ ಬಾಳೆಹಣ್ಣುಗಳನ್ನು ವಿತರಿಸಿ, ಪರಸ್ಪರ ಸಹಬಾಳ್ವೆ ಮತ್ತು ಸಹೋದರತ್ವದ ಸಂದೇಶವನ್ನು ಸಮಾಜಕ್ಕೆ ನೀಡಿದರು. ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಶೋಭಾಯಾತ್ರೆ ಸಾಗುವ ವೇಳೆ ಬಿಸಿಲಿನ ತೀವ್ರತೆಯಿಂದ ಶ್ರಮಿಸುತ್ತಿದ್ದ ಭಕ್ತರನ್ನು ಗಮನಿಸಿದ ಮುಸ್ಲಿಂ ವ್ಯಾಪಾರಿಗಳು ಮಾನವೀಯತೆ ಮತ್ತು […]
Rev. Dr Leslie Clifford D’Souza Appointed New Bishop of Udupi ಉಡುಪಿ, 31 ಜನವರಿ 2026: ಪೋಪ್ ಲಿಯೋ XIV ಅವರು ರೆವರೆಂಡ್ ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರನ್ನು ಉಡುಪಿಯ ನೂತನ ಬಿಷಪ್ ಆಗಿ ನೇಮಿಸಿದ್ದಾರೆ. ಅವರು ಪ್ರಸ್ತುತ ಶಿರ್ವದ ಅವರ್ ಲೇಡಿ ಆಫ್ ಹೆಲ್ತ್ ಚರ್ಚ್ನ ಪ್ರಧಾನ ಧರ್ಮಗುರುಗಳಾಗಿದ್ದಾರೆ. ಈ ನೇಮಕಾತಿಯನ್ನು ಜನವರಿ 31, 2026 ರ ಶನಿವಾರ ರೋಮ್ನಲ್ಲಿ ಭಾರತೀಯ ಸಮಯ 04:30 ಕ್ಕೆ ಅನುಗುಣವಾಗಿ ಮಧ್ಯಾಹ್ನ 12:00 ಗಂಟೆಗೆ […]
ಶ್ರೀನಿವಾಸಪುರ : ಪಟ್ಟಣದ ಪತಂಜಲಿ ಯೋಗ ಮಂದಿರದಲ್ಲಿ ಗರುವಾರ ಹಿಂದೂ ಸಮಾಜ್ಯೋತ್ಸವ ಸಮಿತಿವತಿಯಿಂದ ನಡೆದ ಪೂರ್ವ ಬಾವಿಸಭೆಯ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದರು.ಹಿಂದೂ ಸಮಾಜ್ಯೋತ್ಸವ ಸಮಿತಿ ಅಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಮಾತನಾಡಿ ೩೧ ಶನಿವಾರ ವೇದಿಕೆ ಕಾರ್ಯಕ್ರಮವನ್ನ ವರದಬಾಲಾಂಜನೇಯ ಸ್ವಾಮಿ ದೇವಾಯಲದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ವರದ ಬಾಲಾಂಜನೇಯ ಸ್ವಾಮಿ ದೇವಾಯಲದ ಆವರಣದಲ್ಲಿ ವೇದಿಕೆ ಕಾರ್ಯಕ್ರಮಕ್ಕೂ ಪ್ರಾರಂಭವಾಗುವ ಮುನ್ನಾ, ಶೋಭಾಯಾತ್ರೆಯನ್ನ ಎಂಜಿ ರಸ್ತೆಯ ಮೂಲಕ ಮುಳಬಾಗಿಲು ವೃತ್ತ, ಕೋಲಾರ ವೃತ್ತ, ಚಿಂತಾಮಣಿ ವೃತ್ತ, ಮೂಲಕ ವೇದಿಕೆಯ ಬಳಿ ಶೋಬಾಯಾತ್ರೆಯು ಪೂರ್ಣವಾಗುವುದು […]
ಬೆಂಗಳೂರು : ಸಾರ್ವಜನಿಕರ ಸುರಕ್ಷತೆ ಹಾಗೂ ಕಾನೂನು ಜಾರಿಗೆ ನಿರಂತರ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ವೈಯಕ್ತಿಕ ಬದುಕಿನ ಮಹತ್ವದ ಕ್ಷಣಗಳಿಗೆ ಗೌರವ ನೀಡುವ ನಿಟ್ಟಿನಲ್ಲಿ, ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವದ ದಿನ ರಜೆ ಕೋರಿದಲ್ಲಿ ಕಡ್ಡಾಯವಾಗಿ ಮಂಜೂರು ಮಾಡಬೇಕೆಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಆರಕ್ಷಕ ಮಹಾನಿರೀಕ್ಷಕರಾದ ಡಾ. ಎಂ.ಎ. ಸಲೀಂ ಐಪಿಎಸ್ ಅವರು ಸುತ್ತೋಲೆ ಹೊರಡಿಸಿದ್ದಾರೆ. ಕಠಿಣ ಪರಿಸ್ಥಿತಿಗಳಲ್ಲಿಯೂ ನಿರಂತರ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗೆ ಭಾವನಾತ್ಮಕ ಪುನಶ್ಚೇತನ ಹಾಗೂ ಕುಟುಂಬದೊಂದಿಗೆ […]
ಬೆಂಗಳೂರು : ರಾಜ್ಯದ ವಿವಿಧ ನಿಗಮ ಹಾಗೂ ಮಂಡಳಿಗಳ ಅಧ್ಯಕ್ಷರಾಗಿ ನೇಮಕಗೊಂಡಿದ್ದ 25 ಶಾಸಕರ ಸೇವಾವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ಅವರ ಅವಧಿಯನ್ನು ಮುಂದಿನ ಆದೇಶದವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಮಹತ್ವದ ಅಧಿಸೂಚನೆ ಹೊರಡಿಸಿದೆ. 2024ರ ಜನವರಿ 26ರಂದು ಎರಡು ವರ್ಷಗಳ ಅವಧಿಗೆ ನಿಗಮ ಹಾಗೂ ಮಂಡಳಿಗಳ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಶಾಸಕರ ಸೇವಾವಧಿ 2026ರ ಜನವರಿ 26ರಂದು ಪೂರ್ಣಗೊಂಡಿತ್ತು. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಅಧಿಕೃತ ಅಧಿಸೂಚನೆ ಹೊರಡಿಸಿ, ಎಲ್ಲಾ 25 ಅಧ್ಯಕ್ಷರ […]
ಕರ್ನಾಟಕ ಶಿಕ್ಷಣ ಮಂಡಳಿ ನಡೆಸಿದ 2025-26 ಸಾಲಿನ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಕುಂದಾಪುರದ ಗುರುಕುಲ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಕುಮಾರಿ ಸಾನಿಧ್ಯ ಎಸ್ ನಾಯ್ಕ್ ವಿಶೇಷ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾಳೆ. ಕುಂದಾಪುರದ ಖಾರ್ವಿಕೇರಿ ನಿವಾಸಿ ಶ್ರೀಮತಿ ಶ್ಯಾಮಲಾ ಮತ್ತು ಸಂತೋಷ ನಾಯ್ಕ್ ಇವರ ಪುತ್ರಿಯಾಗಿರುವ ಇವರು, ಪ್ರಸ್ತುತ ಚಿತ್ರಕಲಾ ಶಿಕ್ಷಕರಾದ ಮಲ್ಲಪ್ಪ ಇವರ ಮಾರ್ಗದರ್ಶನದಲ್ಲಿ ಚಿತ್ರಕಲೆಯನ್ನು ಅಭ್ಯಾಸ ಮಾಡುತ್ತಿದ್ದಾರೆ.
ರಾಜ್ಯಮಟ್ಟದ ರಾಷ್ಟ್ರೀಯ ಆವಿಷ್ಕಾರ ರಸಪ್ರಶ್ನೆ ಸ್ಪರ್ಧೆ ಡಿಡಿ ಚಂದನ ಕೇಂದ್ರ ಬೆಂಗಳೂರು. ಮೈಸೂರು ವಿಭಾಗದಿಂದ ಸ.ಹಿ.ಪ್ರಾ ಶಾಲೆ ಉಳ್ಳೂರು -11 5ನೇ ತರಗತಿಯ ವಚನ ಮತ್ತು ಹಾಸನದ ಸ ಹಿ ಪ್ರಾ ಶಾಲೆ ಹೊಳೆನರಸೀಪುರ 5ನೇ ತರಗತಿಯ ಹರ್ಷ ಇವರಿಬ್ಬರು ಪ್ರತಿನಿಧಿಸಿರುತ್ತಾರೆ. ವಚನ ದ್ವಿತೀಯ ಸ್ಥಾನವನ್ನು ಪಡೆದು ಉಳ್ಳೂರು ಸರಕಾರಿ ಶಾಲೆಯ ಶಾಲೆಯ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಿದ ವಚನಾಳಿಗೆ ಹಾಗೂ ತರಬೇತಿ ಗೊಳಿಸಿದ ಶಿಕ್ಷಕರಿಗೂ ಶಾಲಾ ಹಳೇವಿಧ್ಯಾರ್ಥಿ ಸಂಘ , ಶಾಲಾ ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿಯ […]

