

ಕುಂದಾಪುರ ಭಂಡಾರ್ಕಾರ್ಸ್ ಕಾಲೇಜು, ಮಣಿಪಾಲ ಅಕಾಡೆಮಿ ಮಾರ್ಗದರ್ಶನದಲ್ಲಿ, ಪ್ರಾಯೋಜಕರ ಸಹಭಾಗಿತ್ವದಲ್ಲಿ 31-01-2027 ರಂದು ಪ್ರಪ್ರಥಮ ಬಾರಿಗೆ ಕುಂದಾಪುರದಲ್ಲಿ ಮ್ಯಾರಥಾನ್ ಓಟ ಏರ್ಪಡಿಸುತ್ತಿದ್ದು, ಓಟದ ಈ ಹಬ್ಬದಲ್ಲಿ ಪಾಲ್ಗೊಳ್ಳಲು ಎಲ್ಲಾ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ಮುಕ್ತ ಆಹ್ವಾನ ನೀಡಲಾಗಿದೆ.
ಮುಂಜಾನೆ ನೂರಾರು ಕ್ರೀಡಾಪಟುಗಳು, ಹಲವಾರು ಸಂಘ ಸಂಸ್ಥೆಗಳ ಸದಸ್ಯರು, ಶಾಲಾ, ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಳ್ಳುವ ಈ ಮ್ಯಾರಥಾನ್ಗೆ ಉತ್ತಮ ಸ್ಫೂರ್ತಿದಾಯಕ ಹೆಸರು, ಆಕರ್ಷಕ ಲೋಗೋ ಹಾಗೂ ಪ್ರೇರಣೆ ನೀಡುವ ಸ್ಲೋಗನ್-ಘೋಷ ವಾಕ್ಯ ನೀಡಲು ಕರೆ ನೀಡಲಾಗಿದೆ. ವಿದ್ಯಾರ್ಥಿಗಳು, ಸಾರ್ವಜನಿಕರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದ್ದು, ಆಯ್ಕೆಯಾದುದಕ್ಕೆ ಪ್ರತ್ಯೇಕವಾಗಿ ವಿಶೇಷ ಬಹುಮಾನ ನೀಡಿ ಗೌರವಿಸಲಾಗುತ್ತದೆ.
30-10-2026ರೊಳಗೆ ವಿಷಯವನ್ನು ಮ್ಯಾರಥಾನ್ ಸಮಿತಿ, ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ ಈ ವಿಳಾಸಕ್ಕೆ ಕಳುಹಿಸಬಹುದು. ಹೆಚ್ಚಿನ ವಿವರಗಳಿಗೆ ಅರುಣ ಎ. ಎಸ್. 9972404202, ಶರಣ್ 8722742172 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

