ಶ್ರೀನಿವಾಸಪುರ : ಮಾನವನು ದಿನನಿತ್ಯದ ಜಂಜಾಟಗಳಲ್ಲಿ ತೊಡಗಿರುವುದರಿಂದ ಮಾನಸಿಕವಾಗಿ ಒಂದಿಲ್ಲದೊಂದು ಸಮಸ್ಯೆ ಎದುರಿಸುತ್ತಲೇ ಇರುತ್ತಾನೆ. ಎಷ್ಟೇ ಮಾನಸಿಕ ಒತ್ತಡಗಳಿದ್ದರೂ ದೇವಾಲಯಗಳಿಗೆ ಭೇಟಿ ನೀಡಿ ಬಂದರೆ ಮನಸ್ಸಿಗೆ ಶಾಂತಿ ಮತ್ತು ಸಂತಸ ದೊರೆಯುತ್ತದೆ ಎಂದು ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಭೀಮಗುಂಟಪಲ್ಲಿ ಬಿ.ವಿ. ಶಿವಾರೆಡ್ಡಿ ಹೇಳಿದರು. ತಾಲೂಕಿನ ಇಲದೋಣಿ ಗ್ರಾಮದಲ್ಲಿ ಓಂ ಶಕ್ತಿ ಮಾಲಾಧಾರಿಗಳಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಿ ಮಾತನಾಡಿದ ಅವರು, ಬ್ರಿಟಿಷರ ಆಡಳಿತ ಕಾಲದಲ್ಲಿ ನಮ್ಮ ದೇಶದ ಹಿಂದೂಗಳನ್ನು ಕೀಳುಮಟ್ಟದಲ್ಲಿ ನಡೆಸಿಕೊಳ್ಳಲಾಗುತ್ತಿತ್ತು.  ಆ ಸಂದರ್ಭದಲ್ಲಿ […]

Read More

ಶ್ರೀನಿವಾಸಪುರ: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಾವು ಬೆಳೆಗಾರರಿಗೆ ಉಪಯುಕ್ತವಾಗುವಂತೆ ಮಾವು ಬೆಳೆಯ ಸಮಗ್ರ ಪೋಷಕಾಂಶ ನಿರ್ವಹಣೆ, ಕೀಟ, ರೋಗ ನಿಯಂತ್ರಣ ಹಾಗೂ ರಫ್ತು ಮಾರುಕಟ್ಟೆ ಉತ್ತೇಜನ ಕುರಿತ ವಿಶೇಷ ತರಬೇತಿ ಕಾರ್ಯಕ್ರಮವನ್ನು ಜನವರಿ 19, 2026 (ಸೋಮವಾರ) ರಂದು ಹಮ್ಮಿಕೊಳ್ಳಲಾಗಿದೆ. ಶ್ರೀನಿವಾಸಪುರ ಪಟ್ಟಣದ ಶ್ರೀ ಮಾರುತಿ ಸಭಾ ಭವನದಲ್ಲಿ (ತಾಲೂಕು ತೋಟಗಾರಿಕೆ ಕಚೇರಿ ಸಮೀಪ) ನಡೆಯಲಿರುವ ಈ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ (KSMDMC), ಅಫೆಡಾ (APEDA), ಕೆಫೆ […]

Read More

ಬೆಂಗಳೂರು: ನಗರದ ಆಸ್ಟಿನ್ ಟೌನ್ ನೀಲಸಂದ್ರ ಪ್ರದೇಶದಲ್ಲಿರುವ ಸರ್ಕಾರಿ ಮಾದರಿ ಉರ್ದು ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಲ್ಲಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಹಾಗೂ ಗಣಿತ (ಸ್ಟೆಮ್) ವಿಷಯಗಳ ಮೇಲೆ ಆಸಕ್ತಿ ಮತ್ತು ಕೌಶಲ್ಯ ಹೆಚ್ಚಿಸುವ ಉದ್ದೇಶದಿಂದ ಸ್ಥಾಪಿಸಲಾದ ಸ್ಟೆಮ್ ಲ್ಯಾಬ್ ಅನ್ನು ಶುಕ್ರವಾರ (ಜನವರಿ 16, 2025) ಬೆಳಿಗ್ಗೆ 11 ಗಂಟೆಗೆ ಭಾವ್ಯವಾಗಿ ಉದ್ಘಾಟಿಸಲಾಯಿತು. ಈ ಸ್ಟೆಮ್ ಲ್ಯಾಬ್‌ನ್ನು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಯೋಜನೆಯಡಿ ಆಪ್ಟಮ್ ಸಂಸ್ಥೆಯ ಆರ್ಥಿಕ ಸಹಕಾರದೊಂದಿಗೆ, ಹೋಪ್ ಫೌಂಡೇಶನ್ ಸಂಸ್ಥೆಯು ಅನುಷ್ಠಾನಗೊಳಿಸಿದೆ.ಸರ್ಕಾರಿ […]

Read More

ಬೆಂಗಳೂರು: ಶಾಲಾ ಹಾಗೂ ಕಾಲೇಜುಗಳಲ್ಲಿ ಪತ್ರಿಕೆಗಳ ಪ್ರಮುಖ ಸುದ್ದಿಗಳನ್ನು ವಿದ್ಯಾರ್ಥಿಗಳು ಓದುವುದು ಹಾಗೂ ಅವುಗಳನ್ನು ನೋಟೀಸ್‌ ಬೋರ್ಡ್‌ನಲ್ಲಿ ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸುವ ಕುರಿತು ಸರ್ಕಾರದಿಂದ ಆದೇಶ ಹೊರಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ತಿಳಿಸಿದ್ದಾರೆ.ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಉಪಾಧ್ಯಕ್ಷ ಎಚ್.ಬಿ. ಮದನಗೌಡ ಹಾಗೂ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಕೆ. ಶಂಭುಲಿಂಗ ಅವರು ಸಲ್ಲಿಸಿದ ಮನವಿಯನ್ನು ಸ್ವೀಕರಿಸಿ ಅವರು ಈ […]

Read More

ಶ್ರೀನಿವಾಸಪುರ : ಮಕ್ಕಳಲ್ಲಿ ಪಠ್ಯಾಧಾರಿತ ಶಿಕ್ಷಣದ ಜೊತೆಗೆ ವ್ಯಾವಹಾರಿಕ ಜ್ಞಾನ, ಉದ್ಯಮಶೀಲತೆ ಹಾಗೂ ಜೀವನ ಕೌಶಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಪಟ್ಟಣದ ಜಾಕಿರ್ ಹುಸೇನ್ ಮೊಹಲ್ಲಾದ ಸರ್ಕಾರಿ ಉರ್ದು ಹಾಗೂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ಸಂತೆ ಮೇಳ’ವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಶಾಲಾ ಮಕ್ಕಳಿಂದಲೇ ರೂಪುಗೊಂಡ ಈ ಮೇಳ ಸಾರ್ವಜನಿಕರ ಗಮನ ಸೆಳೆಯಿತು. ಮೇಳವನ್ನು ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷರಾದ ಅಬ್ದುಲ್ ಮಜೀದ್ (ಅಲಿಯಾಸ್ ಅಫ್ಸರ್ ಪಾಷಾ), ಎಂಪಿ ಫ್ರೂಟ್ಸ್ ಮಾಲೀಕರು ಉದ್ಘಾಟಿಸಿ ಮಾತನಾಡಿದರು. […]

Read More

ಶ್ರೀನಿವಾಸಪುರ : ಪಟ್ಟಣದ ಚಿಂತಾಮಣಿ ರಸ್ತೆಯಲ್ಲಿರುವ ಸರ್ಕಾರಿ ಉರ್ದು ಇಂಗ್ಲಿಷ್ ಮಾಧ್ಯಮ ಬಾಲಕಿಯರ ಶಾಲಾ ಆವರಣದಲ್ಲಿ ಉರ್ದು ಸಿಆರ್‌ಸಿ ಜಾಕೀರ್ ಹುಸೇನ್ ಮೊಹಲ್ಲಾ ವತಿಯಿಂದ ಕಲಿಕಾ ಹಬ್ಬ (ಎಫ್‌ಎಲ್‌ಎನ್) ಕಾರ್ಯಕ್ರಮವನ್ನು ಸಂಭ್ರಮದಿಂದ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿಆರ್‌ಸಿ ಸಂಯೋಜಕ ವಸಂತ್, ಪ್ರಾಥಮಿಕ ಹಂತದಲ್ಲೇ ಮಕ್ಕಳಲ್ಲಿ ಓದು, ಬರವಣಿಗೆ ಮತ್ತು ಗಣಿತದ ಮೂಲಭೂತ ಕೌಶಲ್ಯಗಳನ್ನು ಬಲಪಡಿಸುವುದೇ ಎಫ್‌ಎಲ್‌ಎನ್ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು. ಇಂತಹ ಕಲಿಕಾ ಹಬ್ಬಗಳು ಮಕ್ಕಳಲ್ಲಿ ಕಲಿಕೆಗೆ ಆಸಕ್ತಿ ಮೂಡಿಸಲು ಸಹಕಾರಿಯಾಗುತ್ತವೆ. ಶಿಕ್ಷಕರ ನವೀನ […]

Read More

ಶ್ರೀನಿವಾಸಪುರ ಹೊರವಲಯದ ಎಎಸ್‌ಆರ್ ಪ್ಯಾಲೇಸ್‌ನಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ 13ನೇ ಶೈಕ್ಷಣಿಕ ಕಾರ್ಯಾಗಾರವನ್ನು ಲೋಕಸಭಾ ಸದಸ್ಯ ಮಲ್ಲೇಶ್ ಬಾಬು ಉದ್ಘಾಟಿಸಿದರು.ಶ್ರೀನಿವಾಸಪುರ: ದೈಹಿಕ ಶಿಕ್ಷಕರು ಗ್ರಾಮೀಣ ಪ್ರದೇಶದ ಕ್ರೀಡಾ ಪ್ರತಿಭೆಗಳನ್ನು ಗುರ್ತಿಸಿ ಪ್ರೋತ್ಸಾಹಿಸಬೇಕು. ಅವರಿಗೆ ಪೂರಕವಾದ ತರಬೇತಿ ನೀಡಬೇಕು ಎಂದು ಲೋಕಸಭಾ ಸದಸ್ಯ ಮಲ್ಲೇಶ್ ಬಾಬು ಹೇಳಿದರು. ಪಟ್ಟಣದ ಹೊರವಲಯದ ಎಎಸ್‌ಆರ್ ಪ್ಯಾಲೇಸ್‌ನಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ 13ನೇ ಶೈಕ್ಷಣಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೈಹಿಕ […]

Read More

ಶ್ರೀನಿವಾಸಪುರ : ಪಟ್ಟಣದ ಅವರೆಕಾಯಿ ಮಾರುಕಟ್ಟೆ ಸ್ಥಳಾಂತರ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ವಿವಾದದ ನಡುವೆ, ಕಾಂಗ್ರೆಸ್ ಮುಖಂಡ ಬಿ.ಎಲ್. ಪ್ರಕಾಶ್ ಸುದ್ದಿಗೋಷ್ಠಿ ನಡೆಸಿ ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿದರು. ಕಳೆದ ೪೦–೫೦ ವರ್ಷಗಳಿಂದ ರೈತರು ಇದೇ ಸ್ಥಳದಲ್ಲಿ ಅವರೆಕಾಯಿ ವ್ಯಾಪಾರ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಇತ್ತೀಚೆಗೆ ಕೆಲವು ಮುಖಂಡರು ಹಾಗೂ ಸಂಘಟನೆಗಳು ಮಾರುಕಟ್ಟೆಗೆ ಬಂದು ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಹಣ ನೀಡದಿದ್ದರೆ ಹೋರಾಟ ನಡೆಸುವುದಾಗಿ ರೈತರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಮಾರುಕಟ್ಟೆಯನ್ನು ಬೇರೆಡೆಗೆ ವರ್ಗಾಯಿಸಿದರೆ […]

Read More

ಶ್ರೀನಿವಾಸಪುರ: ರಕ್ಷಣಾವೇದಿಕೆ ಹಾಗೂ ಕೆಲ ರೈತ ಸಂಘಟನೆಗಳು ಕಾನೂನು ಕೈಗೆ ತೆಗೆದುಕೊಳ್ಳಬಾರದು. ಯಾರೇ ಆಗಲಿ ಕಾನೂನು ಕೈಗೆ ತೆಗೆದುಕೊಂಡರೆ ಪರಿಸ್ಥಿತಿ ಕೈಮೀರಲಿದೆ. ಅದರ ಪರಿಣಾಮಗಳು ಗಂಭೀರವಾಗಿರುತ್ತವೆ. ಈ ಕುರಿತು ಎಲ್ಲರೂ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದು ಮಾಜಿ ಶಾಸಕ ಕೆ.ಆರ್. ರಮೇಶ್ ಕುಮಾರ್ ಎಚ್ಚರಿಸಿದರು. ಪಟ್ಟಣದ ಎಂ.ಜಿ. ರಸ್ತೆಯ ಮಾರ್ಕೆಟ್ ವೃತ್ತದಲ್ಲಿ ಶುಕ್ರವಾರ ಕಾಯಿ ವ್ಯಾಪಾರಸ್ಥರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದ ಅವರು, ಇತ್ತೀಚೆಗೆ ನಡೆದ ಪ್ರತಿಭಟನೆಯ ವೇಳೆ ವ್ಯಾಪಾರ ವಹಿವಾಟು ನಿಲ್ಲಿಸುವಂತೆ ಕೆಲವರು ಒತ್ತಡ ಹೇರಿರುವುದು ಹಾಗೂ ಪುರಸಭೆ […]

Read More
1 17 18 19 20 21 389