

ಶ್ರೀನಿವಾಸಪುರ : ಜೀವನವೆಂಬ ನದಿಯು ಹರಿ ಹರಿಯುತ್ತ ತನ್ನಲ್ಲಿನ ಕಲ್ಮಶವನ್ನು ತೊಳೆದು, ನಿಕಲ್ಮಶವಾದ ನೀರಾದಾಗ ಅದು ನಮ್ಮನ್ನು ಕಾಪಾಡುತ್ತದೆ ಜೀವನವೆಂಬ ಸಾಗರವನ್ನು ಸಾಗಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಹೇಳಿದರು.
ತಾಲೂಕಿನ ರಾಯಲ್ಪಾಡು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗು ಪ್ರೌಡಶಾಲಾವರಣದಲ್ಲಿ ಶನಿವಾರ ಅರಿವು ಕೇಂದ್ರ ವತಿಯಿಂದ ಅರಿವು ಭಾರತ ಅಡಿಯಲ್ಲಿ ನಮ್ಮ ನಡೆ ಅಸ್ಪೃಶ್ಯತೆ ಮುಕ್ತ ಭಾರತದೆಡೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದು ಅರಿವು ಕೇಂದ್ರವು ಸಮಾಜದಲ್ಲಿನ ಅಸ್ಪೃಶ್ಯತೆಯನ್ನು ಹೋಗಲಾಡಿಸುವ ಮತ್ತು ಸಾಮಾಜಿಕ ಸಮಾನತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಇದರ ಸಂಸ್ಥಾಪಕ ಅರಿವು ಶಿವಪ್ಪ ಅವರು ಸಮಾಜದಲ್ಲಿ ಬೇರೂರಿರುವ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡಲು ಶ್ರಮಿಸುತ್ತಿರುವುದು ಶ್ಲಾಘನೀಯವೆಂದರು. ಇದೇ ಸಮಯದಲ್ಲಿ ವಿದ್ಯಾರ್ಥಿಗಳೊಂದಿಗೆ ಶೈಕ್ಷಣಿಕ ಪ್ರಗತಿ ಬಗ್ಗೆ ಚರ್ಚೆ ಮಾಡಿ , ಸಮಾಜದಲ್ಲಿನ ಅಸ್ಪೃಶ್ಯತೆ ಹೋಗಲಾಡಿಸಲು ಎಲ್ಲರೂ ಕ್ರಮಕೈಗೊಳ್ಳಬೇಕು ಎಂದು ಕರೆ ನೀಡಿದರು.
ಗ್ರಾ.ಪಂ.ಅಧ್ಯಕ್ಷರ ಮನೆಯಲ್ಲಿ ಸಮಾನತೆಗಾಗಿ ಸಹಭೋಜನ ವ್ಯವಸ್ಥೆ ಆಗಿತ್ತು. ತಹಶೀಲ್ದಾರ್ ಜಿ.ಎನ್.ಸುದೀಂದ್ರ, ಕಸಾಪ ಜಿಲ್ಲಾಧ್ಯಕ್ಷ ಎನ್.ಬಿ.ಗೋಪಾಲ್, ಇಒ ಕೆ.ಸರ್ವೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಬೈರೇಗೌಡ, ಪ್ರಧಾನ ಕಾರ್ಯದರ್ಶಿ ಆರ್.ಕಳಾಚಾರಿ, ಭೀಮಸೇನೆ ರಾಜ್ಯಾಧ್ಯಕ್ಷ ಪಂಡಿತ್ಮುನಿವೆAಕಟಪ್ಪ, ಗ್ರಾ.ಪಂ. ಅಧ್ಯಕ್ಷ ಆರ್.ಗಂಗಾಧರ್, ಪಿಡಿಒ ನರೇಂದ್ರಬಾಬು, ಪಿಎಸ್ಐ ರಾಮು, ಇಸಿಒ ಕೆ.ಸಿ.ಶ್ರೀನಿವಾಸ್, ಪ್ರಾಂಶುಪಾಲ ಪಿ.ಗಣೇಶ್, ಪ್ರೌಡಶಾಲೆ ಮುಖ್ಯ ಶಿಕ್ಷಕ ಶ್ರೀಶೈಲಹಲವಾರು, ಎಸ್ಡಿಎಂಸಿ ಅಧ್ಯಕ್ಷ ರೆಡ್ಡಪ್ಪ, ಪ್ರಾಥಮಿಕ ಶಾಲೆಮುಖ್ಯ ಶಿಕ್ಷಕ ಟಿ.ಆಂಜಪ್ಪ, ಅರಿವು ಕೇಂದ್ರದ ಪದಾಧಿಕಾರಿಗಳಾದ ಅರಿವು ಶಿವಪ್ಪ, ಓಂಪ್ರಕಾಶ್, ಕೋಲಾರ ಸರ್ಕಾರಿ ಪ್ರಥಮ ಧರ್ಜೆ ಕಾಲೇಜು ಪ್ರಾಂಶುಪಾಲ ಶ್ರೀನಿವಾಸಗೌಡ, ಉಪನ್ಯಾಸಕ ಎಂ.ಜಿ.ಗಿರೀಶ್ , ವಾರಧಿ ಅಂತರರಾಷ್ಟಿçÃಯ ಶಾಲಾ ಅಧ್ಯಕ್ಷ ಮಂಜುನಾಥರೆಡ್ಡಿ ಇದ್ದರು.

