ಶ್ರೀನಿವಾಸಪುರ ( www.vknews.in ): ಸರ್ಕಾರಿ ಶಾಲೆಗಳ ಜಮೀನುಗಳನ್ನು ಉಳಿಸುವಲ್ಲಿ ಶಿಕ್ಷಕರು ಸಕ್ರಿಯವಾಗಿ ಕ್ರಮಕೈಗೊಳ್ಳಬೇಕು. ಸರ್ಕಾರಿ ಶಾಲೆಗಳ ಜಮೀನುಗಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಕಂಡುಬಂದಲ್ಲಿ ತಕ್ಷಣವೇ ಮೇಲಾಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ (ಡಿಡಿಪಿಐ) ಅಲ್ಮಾಸ್ ಫರ್ವೀನ್‌ತಾಜ್ ಅವರು ಸೂಚಿಸಿದರು. ಪಟ್ಟಣದ ಬಿಆರ್‌ಸಿ ಕಚೇರಿಯಲ್ಲಿ ಮಂಗಳವಾರ ಓದು ಕರ್ನಾಟಕ ನೈತಿಕ ಗಣಿತ, ಎಲ್‌ ಬಿ ಎಂ ಹಾಗೂ ಮೌಲ್ಯ ಶಿಕ್ಷಣ ವಿಷಯಗಳ ಕುರಿತು ಆಯೋಜಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. […]

Read More

ಶ್ರೀನಿವಾಸಪುರ : ಶ್ರೀನಿವಾಸಪುರ –ಮುಳಬಾಗಿಲು ಮುಖ್ಯ ರಸ್ತೆಯ ಯದರೂರು ಸಮೀಪ ವೀಲಿಂಗ್ ಮಾಡುತ್ತಿದ್ದ ಯುವಕರನ್ನು ಶ್ರೀನಿವಾಸಪುರ ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ. ಯದರೂರು ಸಮೀಪ ಯುವಕರ ಗುಂಪೊಂದು ವೀಲಿಂಗ್ ನಡೆಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಈ ಕುರಿತು ಮಾಹಿತಿ ಪಡೆದ ಶ್ರೀನಿವಾಸಪುರ ಠಾಣೆಯ ಪಿಎಸ್‌ಐ ಹೆಚ್. ಜಯರಾಮ್ ಅವರ ಮಾರ್ಗದರ್ಶನದಲ್ಲಿ ಎಎಸ್ಐ ಮುನಿಗುರಪ್ಪ ಹಾಗೂ ಸಿಬ್ಬಂದಿ ಟಿ.ಎ. ನಾಗರಾಜ್, ಎಂ. ಆನಂದ್ ಕುಮಾರ್, ಸಂತೋಷ್ ಕುಮಾರ್, ರಮೇಶ್, ಮುರುಳಿ, ರಾಜೇಶ್ ಮತ್ತು ಪತ್ರಿಬಸಪ್ಪ ಅವರು ಕಾರ್ಯಾಚರಣೆ […]

Read More

ಶ್ರೀನಿವಾಸಪುರ: ಪಟ್ಟಣದ ಚಿಂತಾಮಣಿ ರಸ್ತೆಯಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ನಡೆಸುತ್ತಿರುವ ಕರ್ನಾಟಕ ಮೌಲಾನಾ ಆಜಾದ್ ಪಬ್ಲಿಕ್ ಶಾಲೆ ಕಳೆದ ತಿಂಗಳು ಎಲ್‌ಕೆಜಿ ತರಗತಿಯನ್ನು ಪ್ರಾರಂಭಿಸಿದ್ದು, ಈಗಾಗಲೇ 30ಕ್ಕೂ ಹೆಚ್ಚು ಮಕ್ಕಳು ದಾಖಲಾಗಿದ್ದು, ಶಾಲೆಗೆ ಹೊಸ ಚೈತನ್ಯ ತುಂಬಿದೆ. ಹೊಸ ಶೈಕ್ಷಣಿಕ ವರ್ಷಕ್ಕೆ ಮಾಡಿದ ಈ ಪ್ರಾರಂಭವು ಮಕ್ಕಳಿಗಾಗಿ ಒಂದು ಹೊಸ ಪ್ರೇರಣೆಯಾದಂತಾಗಿದೆ. ಎಲ್‌ಕೆಜಿ ತರಗತಿಯ ಆರಂಭದೊಂದಿಗೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಮಕ್ಕಳಿಗೆ ಉಚಿತ ಯೂನಿಫಾರ್ಮ್‌ಗಳು, ಶಾಲಾ ಬ್ಯಾಗ್‌ಗಳು, ಶೂಸ್, ಪಠ್ಯಪುಸ್ತಕಗಳು ಹಾಗೂ ಲೇಖನಿ ಸಾಮಗ್ರಿಗಳನ್ನು ವಿತರಿಸಿ, ಮಕ್ಕಳ […]

Read More

ಶ್ರೀನಿವಾಸಪುರ: ಪಟ್ಟಣದ ಚಿಂತಾಮಣಿ ರಸ್ತೆಯಲ್ಲಿರುವ ಸರ್ಕಾರಿ ಉರ್ದು ಹಾಗೂ ಆಂಗ್ಲ ಮಾಧ್ಯಮ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಹಾಜರಾತಿಗೆ ಸಂಬಂಧಿಸಿದಂತೆ ಗಂಭೀರ ಗೊಂದಲ ಬೆಳಕಿಗೆ ಬಂದಿದ್ದು, ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ವರ್ತನೆ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಅನುಮಾನಗಳು ವ್ಯಕ್ತವಾಗಿವೆ. ಶಾಲೆಯ ಒಬ್ಬ ಶಿಕ್ಷಕಿ ಡಿಸೆಂಬರ್ 2ರಿಂದ 12ರವರೆಗೆ ನಿರಂತರವಾಗಿ ಗೈರು ಹಾಜರಾಗಿದ್ದರೂ, ಈ ಅವಧಿಯಲ್ಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗೆ ಭೇಟಿ ನೀಡಿ ಡಿಸೆಂಬರ್ 10ರಂದು ಹಾಜರಾತಿ ಪುಸ್ತಕವನ್ನು ಪರಿಶೀಲಿಸಿರುವುದು ಮಾಹಿತಿ ಹಕ್ಕು ಕಾಯ್ದೆ–2005ರಡಿ ಸಲ್ಲಿಸಲಾದ […]

Read More

ಶ್ರೀನಿವಾಸಪುರ : ಪಟ್ಟಣದ ಜಾಕಿರ್ ಹುಸೇನ್ ಮೊಹಲ್ಲಾ ಸರ್ಕಾರಿ ಉರ್ದು ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಹೆಚ್ಚುತ್ತಿರುವುದರಿಂದ ಈಗಾಗಲೇ ಇರುವ ತರಗತಿ ಕೊಠಡಿಗಳು ಸಾಲದೇ ಭಾರೀ ಸಂಕಷ್ಟ ಉಂಟಾಗಿದೆ. ತರಗತಿ ಕೊಠಡಿಗಳ ಕೊರತೆಯ ಪರಿಣಾಮವಾಗಿ ವಿದ್ಯಾರ್ಥಿಗಳು ಅಸೌಕರ್ಯಕರ ಪರಿಸ್ಥಿತಿಯಲ್ಲಿ ಪಾಠಗಳನ್ನು ಕಲಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಗಂಭೀರ ಪರಿಸ್ಥಿತಿಯನ್ನು ಮನಗಂಡು, ಜಾಕಿರ್ ಹುಸೇನ್ ಮೊಹಲ್ಲಾದ ವಿದ್ಯಾರ್ಥಿಗಳನ್ನು ಚಿಂತಾಮಣಿ ರಸ್ತೆಯ ಸರ್ಕಾರಿ ಉರ್ದು ಬಾಲಕರ ಶಾಲೆಯ ನಾಲ್ಕು ತರಗತಿ ಕೊಠಡಿಗಳಿಗೆ ತಾತ್ಕಾಲಿಕವಾಗಿ […]

Read More

ಶ್ರೀನಿವಾಸಪುರ : ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸುವಲ್ಲಿ ಹಿಂದಿನ ಬಿಜೆಪಿ ಸರ್ಕಾರ ಹಾಗು ಇಂದಿನ ಕಾಂಗ್ರೆಸ್ ಸರ್ಕಾರವು ವಿಫಲವಾಗಿವೆ ಎಂದು ಕೆಪಿಆರ್‍ಎಸ್ ಸಂಘದ ರಾಜ್ಯ ಉಪಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಆರೋಪಿಸಿದರು .ಪಟ್ಟಣದ ಶಂಕರಮಠದ ಬಳಿಯ ಕೆಪಿಆರ್‍ಎಸ್ ಕಚೇರಿಯಲ್ಲಿ ಶುಕ್ರವಾರ ಕೆಪಿಆರ್‍ಎಸ್ ವತಿಯಿಂದ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದರು.ಜಿಲ್ಲೆಯಲ್ಲಿ ಯಾವ ರೈತರ ಭೂಮಿಯನ್ನು ಕಿತ್ತುಕೊಂಡಿಲ್ಲ ಎಂದು ಸುಳ್ಳು ವರಧಿಯನ್ನು ನೀಡಿರುವ ಸಚಿವರ ಬಗ್ಗೆ ಅಸಮದಾನವನ್ನು ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳು ಅರಣ್ಯ ಇಲಾಖೆಗೆ ಪದೇ ಪದೇ ಯಾವದೇ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸಬಾರದೆಂದು ಹೇಳುತ್ತಿದ್ದರು , […]

Read More

ಕೋಲಾರ : ಡಿಸೆಂಬರ್ 12. ದೀರ್ಘಕಾಲದವರೆಗೆ ಹಕ್ಕುಪಡೆಯದೆ ಉಳಿದಿರುವ ಬ್ಯಾಂಕ್ ಠೇವಣಿಗಳು, ವಿಮಾ ಕಂತುಗಳು ಮತ್ತು ಷೇರುಗಳನ್ನು ಅವುಗಳ ಮೂಲ ಮಾಲೀಕರು ಅಥವಾ ಕಾನೂನುಬದ್ಧ ವಾರಸುದಾರರಿಗೆ ಹಸ್ತಾಂತರಿಸುವ ಉದ್ದೇಶದಿಂದ ವಿಶೇಷ ಶಿಬಿರವನ್ನು ಇಂದು (12.12.2025, ಶುಕ್ರವಾರ) ಬೆಳಿಗ್ಗೆ 11 ಗಂಟೆಗೆ ಕೋಲಾರ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಕೋಲಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರವೀಣ್ ಪಿ. ಬಾಗೇವಾಡಿ, ಐ.ಎ.ಎಸ್. ಅವರು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದರು. ಪತ್ರಿಕಾ ಪ್ರಕಟಣೆಯಲ್ಲಿ, […]

Read More

ಶ್ರೀನಿವಾಸಪುರ: ತಾಲ್ಲೂಕಿನ ಪ್ರಮುಖ ಹೆದ್ದಾರಿಗಳಲ್ಲಿ ದಿನನಿತ್ಯ ಅಪಘಾತಗಳು ಸಂಭವಿಸುತ್ತಿದ್ದು, ಇದರಿಂದ ಜನರ ಜೀವಕ್ಕೆ ಅಪಾಯ ಉಂಟಾಗುತ್ತಿರುವುದಾಗಿ ಕರ್ನಾಟಕ ಜನಪರ ವೇದಿಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಪ್ರಕರಣಗಳ ಬಗ್ಗೆ ಸಂಬಂಧಿತ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ವೇದಿಕೆ ದೂರಿತಾಗಿದೆ. ಇಂದು ಕರ್ತವ್ಯಕ್ಕೆ ತಕ್ಕ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ಮತ್ತು ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ತಕ್ಷಣ ಸುರುಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಗಡುವು ನೀಡಲಾಯಿತು.  ವಿಶೇಷವಾಗಿ, ಕಡಪ ಬೆಂಗಳೂರು ಹೆದ್ದಾರಿ ಅಪಘಾತಗಳ ಹಾಟ್‌ಸ್ಪಾಟ್ ಆಗಿ ಪರಿಣಮಿಸಿದ್ದು, ರಸ್ತೆ ಅಪಾಯ ಸೂಚಕ […]

Read More

ಶ್ರೀನಿವಾಸಪುರ: ರೈತರ ಸಮಸ್ಯೆ ನಿವಾರಣೆಗೆ ಪದಾಧಿಕಾರಿಗಳು ಸಾಂಘಿಕ ಹೋರಾಟ ನಡೆಸಬೇಕು. ಭ್ರಷ್ಟಾಚಾರ ಮತ್ತು ನೇಪಥ್ಯದಲ್ಲಿರುವ ಅಕ್ರಮಗಳ ವಿರುದ್ಧ ಸಂಘಟಿತವಾಗಿ ನಿಲ್ಲುವ ಕಾಲ ಬಂದಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ವೀರಭದ್ರಸ್ವಾಮಿ ಕರೆ ನೀಡಿದರು. ಪಟ್ಟಣದ ರೈತ ಸಂಘ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ರೈತರು ನೀರು, ಬೆಳೆನಾಶ, ಬೆಲೆ ಸ್ಥಿರೀಕರಣ ಸೇರಿದಂತೆ ಅನೇಕ ಸಮಸ್ಯೆಗಳೊಂದಿಗೆ […]

Read More
1 16 17 18 19 20 384