

ಶ್ರೀನಿವಾಸಪುರ : ಠಾಣೆಗೆ ಯಾರೇ ಬಂದರೂ ಸೌಜನ್ಯದಿಂದ ಮಾತನಾಡಿ ಅವರ ಸಮಸ್ಯೆಗಳನ್ನ ಆಲಿಸಿ ನೊಂದು ಬಂದತವರಿಗೆ ಅಧಿಕಾರಿಗಳು ನ್ಯಾಯವನ್ನು ಒದಗಿಸಿ ನಮ್ಮ ಇಲಾಖೆಯ ಬಗ್ಗೆ ಅವರಿಗೆ ನಂಬಿಕೆ ಬರುತ್ತದೆ ಎಂದು ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನಿಕಾ ಸಕ್ರಿವಾಲಾ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಗೆ ಶನಿವಾರ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿಡೀರ್ ಬೇಟಿ ನೀಡಿ ಕಾನೂನು ವ್ಯವಸ್ಥೆ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಸಿಬ್ಬಂದಿ ಕಡಿಮೆ ಇದೆ ಸುಗಮ ಸಂಚಾರಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂ.ಜಿ ರಸ್ತೆಯಲ್ಲಿ ಅವರೆಕಾಯಿ ವ್ಯಾಪಾರ ಮಾಡುವುದರಿಂದ ಸಂಚಾರ ಸಮಸ್ಯೆ ಎದುರಾಗುತ್ತಿದೆ ಇದಕ್ಕೆ ಅವಕಾಶ ಮಾಡಿಕೊಡಬಾರದು. ಕಾನೂನು ಬಾಹಿರ ಚಟುವಟಿಕೆಗಳು ನಿಯಂತ್ರಿಸಬೇಕು ಮಾದಕ ವಸ್ತುಗಳ ಮಾರಾಟ ಪತ್ತೆ ಮಾಡಬೇಕು ಸಾರ್ವಜನಿಕರು ಪೊಲೀಸ್ ಠಾಣೆಗೆ ಬಂದಾಗ ಗೌರವದಿಂದ ಮಾತನಾಡಿ ಅವರ ಕಷ್ಟಕ್ಕೆ ಸ್ಪಂದಿಸಬೇಕು.
ಶ್ರೀನಿವಾಸಪುರ ಸ್ಟೇಷನ್ ಗೆ ವ್ಯಾಪ್ತಿಗೆ ಬರುವ. ಸೋಮಯಾಜಲಹಳ್ಳಿ, ಯಲ್ದೂರು ಹೊರ. ಠಾಣೆಗಳು ಮುಚ್ಚಬಾರದು ಸಿಬ್ಬಂದಿ ಅಲ್ಲೇ ಕೆಲಸ ಮಾಡಬೇಕು ಆ ಭಾಗದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಮರಳು ದಂಧೆ ನಿಯಂತ್ರಿಸಬೇಕು ಎಂದು ಪೊಲೀಸ್ ಠಾಣಾ ಅಧಿಕಾರಿಗಳಿಗೆ ಸೂಚಿಸಿದರು.
ನಾನು ಹೊಸದಾಗಿ ಜಿಲ್ಲಾ ವರಿಷ್ಠಾಧಿಕಾರಿಗಳಾಗಿ ಅಧಿಕಾರವನ್ನು ಪಡೆದಿದ್ದೇನೆ ಜಿಲ್ಲೆಯ ಎಲ್ಲಾ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ಕಾನೂನು ಸುವಸ್ಥೆ ಭದ್ರವಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಈ ವೇಳೆಯಲ್ಲಿ ಮುಳಬಾಗಲು ಡಿ ವೈ ಎಸ್ ಪಿ. ಮನೀಶಾ. ಸಿಪಿಐ ಮಹಮದ್ ಗೊರವನ ಕೊಳ್ಳ, ಪಿಎಸ್ಐ ಜಯರಾಮ್ ಎಸ್.ಬಿ. .ರಾಜು ಸಿಬ್ಬಂದಿ ಹಾಜರಿದ್ದರು.

