ಹಳ್ನಾಡಿನ ತುಳಸಿ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಚಾರ್ಯ ಅಕಾಡೆಮಿ ಸಂಸ್ಥೆ ವತಿಯಿಂದ ಜಿಲ್ಲಾ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರ್ಥ್ಮೆಟಿಕ್ ಸ್ಪರ್ಧೆಯನ್ನು ವಿದ್ಯಾರ್ಥಿಗಳಿಗೆ ನಡೆಸಲಾಯಿತು.ಶಿಕ್ಷಣ ಎನ್ನುವುದು ಪಠ್ಯಪುಸ್ತಕಕ್ಕೆ ಮಾತ್ರ ಸೀಮಿತವಲ್ಲ. ಮಕ್ಕಳು ಕೇವಲ ಪಠ್ಯಪುಸ್ತಕದ ಹುಳುಗಳಾಗಿರದೆ ತಮ್ಮನ್ನು ಎಲ್ಲಾ ರೀತಿಯ ಸಹಪಠ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಾಗ ಮಾತ್ರ ಮಗುವಿನ ಸರ್ವತೋಮುಖ ಬೆಳವಣಿಗೆ ಸಾಧ್ಯ. ಮಕ್ಕಳ ಏಕಾಗ್ರತೆ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಅಬಾಕಸ್ ಒಂದು ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಶಾಲಾ ಮುಖ್ಯಸ್ಥೆ ಶ್ರೀಮತಿ ರೇಷ್ಮಾ ಪ್ರದೀಪ್ […]
ಮಂಗಳೂರು; ಎಜೆ ವೈದ್ಯಕೀಯ ಕಾಲೇಜಿನ ಇಎನ್‌ಟಿ ಪ್ರಾಧ್ಯಾಪಕ ಡಾ. ದೇವನ್ ಅವರನ್ನು ಇತ್ತೀಚೆಗೆ ಸೇಂಟ್ ಅಲೋಶಿಯಸ್‌ನಲ್ಲಿ ನಡೆದ ಅತ್ಯಂತ ಪ್ರತಿಷ್ಠಿತ TED x St Aloshyus ಸಮ್ಮೇಳನದಲ್ಲಿ ಭಾಷಣಕಾರರಾಗಿ ಆಹ್ವಾನಿಸಲಾಗಿತ್ತು. ಅವರು ತಮ್ಮದೇ ಆದ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಬೊಜ್ಜುತನವನ್ನು ಹೇಗೆ ಗುಣಪಡಿಸಿಕೊಂಡರು ಎಂಬುದರ ಕುರಿತು ತಮ್ಮ ಮೂಲ ಒಳನೋಟಗಳ ಬಗ್ಗೆ ಮಾತನಾಡಿದರು. ಪ್ರಪಂಚದಾದ್ಯಂತ ಲಕ್ಷಾಂತರ ಜನರು ಈ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು. ಡಾ. ದೇವನ್ ಡಬಲ್ ಚಿನ್ನದ ಪದಕ ವಿಜೇತರಾಗಿದ್ದು, ಮಾನ್ಯತೆ […]
Mother Teresa Vichara Vedike to Hold Souharda Iftar Gathering on March 10 ಮಂಗಳೂರು; ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಆಶ್ರಯದಲ್ಲಿ ಪ್ರೀತಿ ಹರಡಲಿ ಎಲ್ಲೆಡೆ ಎಂಬ ಘೋಷವಾಕ್ಯದೊಂದಿಗೆ,ಸರ್ವ ಧರ್ಮದ ಹಬ್ಬಗಳು ಸರ್ವ ಜನತೆಯ ಹಬ್ಬವಾಗಲಿ ಎಂಬ ಆಶಯದೊಂದಿಗೆ,ರಂಜಾನ್ ಹಬ್ಬದ ಪ್ರಯುಕ್ತ ಸೌಹಾರ್ದ ಇಫ್ತಾರ್ ಕೂಟವನ್ನು ತಾ.10-03-2026ರಂದು ಸಂಜೆ 5.15ಕ್ಕೆ ಬಾವುಟಗುಡ್ಡದಲ್ಲಿರುವ ಸಂತ ಅಲೋಶಿಯಸ್ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ವೇದಿಕೆಯ ಅಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋರವರು ಪತ್ರಿಕಾಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ._ *ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ […]
ಪಡುಕೋಣೆ ; ದಿನಾಂಕ 1.3.2026 ರಿಂದ ದಿ.4.3.2026 ರ ತನಕ 4 ದಿನಗಳ “ಬನ್ನಿ ದೇವರ ಪ್ರೀತಿಯ ಅನುಭವಿಸೋಣಾ” ಎಂದು ವಾರ್ಷಿಕ ಅಧ್ಯಾತ್ಮಿಕ ಧ್ಯಾನ ಕೂಟವನ್ನು, ಪ್ರಸಿದ್ಧ ಪ್ರಸಂಗದವರಾದ ಶಿವಮೊಗ್ಗಧರ್ಮಪ್ರಾಂತ್ಯದ ಕಬಳೆ ಚರ್ಚಿನ ಧರ್ಮಗುರು ವಂ।ರೋಮನ್ ಪಿಂಟೋ,, ಇವರು ನಡೆಸಿಕೊಟ್ಟರು. ಚರ್ಚಿನ ಧರ್ಮ ಗುರುಗಳಾದ ವಂದನೀಯ ಫಾ। ಪ್ರಾನ್ಸಿಸ್ ಕರ್ನೆಲಿಯೊರವರು ಎಲ್ಲಾ ಯುವಕರನ್ನು ಒಗ್ಗೂಡಿಸಿ ಪ್ರಾರ್ಥನೆ ಕೂಟಕ್ಕೆ ಚಾಲನೆ ನೀಡಿದರು. ವಂದನೀಯ ಫಾ। ರೋಮನ್ ಪಿಂಟೋ ರವರು ಯುವಕರನ್ನು ಉದ್ದೇಶಿಸಿ, ಅನೇಕ ಚಟುವಟಿಕೆಗಳ ಮುಖಾಂತರ ಯುವಕರು ತಮ್ಮ […]
ಕುಂದಾಪುರ; ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರದ ಜನೌಷಧಿ ಕೇಂದ್ರವು ಮಾರ್ಚ್ ಒಂದರಿಂದ ಮಾರ್ಚ ಏಳರ ತನಕ 8ನೇ ಜನೌಷಧಿ ಸಪ್ತಾಹವನ್ನು ಕೇಂದ್ರದ ಸೂಚನೆಯಂತೆ ವಿಶಿಷ್ಟ ರೀತಿಯಲ್ಲಿ ಆಚರಿಸಿತು. ಉಡುಪಿ ಜಿಲ್ಲೆಯ ಪ್ರಪ್ರಥಮ ಜನೌಷಧಿ ಕೇಂದ್ರವಾದ ಈ ಸಂಸ್ಥೆ ರಾಜ್ಯದಲ್ಲಿ ನಾಲ್ಕನೆಯ ಅತೀ ದೊಡ್ಡ ಕೇಂದ್ರವಾಗಿ ಹೊರಹೊಮ್ಮಿದೆ. ಸಪ್ತಾಹದ ಸಂದರ್ಭದಲ್ಲಿ ಮಾರ್ಚ್ 2ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡು ಇದರ ಉದ್ಘಾಟನೆಯ ಸಲುವಾಗಿ ಕುಂದಾಪುರ ಸರಕಾರಿ ಆಸ್ಪತ್ರೆಯ ಎಲಬು ಮತ್ತು ಮೂಳೆ ತಜ್ಞ ಡಾ. ಅರವಿಂದ್ […]
ಉಡುಪಿ; ಜನಸಂಖ್ಯಾ ಸ್ಫೋಟದಂತೆ ಅನೇಕ ಸಮಸ್ಯೆ ಎದುರಿಸುತ್ತಿರುವ ಭಾರತದಲ್ಲೂ ಮಾದಕ ವಸ್ತುಗಳ ಹಾವಳಿ ಕಳವಳ ಉಂಟುಮಾಡುತ್ತಿದೆ. ಡ್ರಗ್ಸ್ ಚಟಕ್ಕೆ ಅಂಟಿದವರನ್ನು ಸಾಮಾನ್ಯ ಮನುಷ್ಯರಂತೆ ಮಾಡುವುದು ಅಷ್ಟು ಸುಲಭವಲ್ಲ. ಈ ಅನಿಷ್ಟ ಅಭ್ಯಾಸ ಚೆನ್ನಾಗಿ ಬೇರೂರಿದ ಮೇಲೆ ಕ್ಯಾನ್ಸರನ್ನು ಸಂಪೂರ್ಣವಾಗಿ ವಾಸಿ ಮಾಡುವುದು ಎಷ್ಟು ಕಷ್ಟವೋ ಡ್ರಗ್ಸ್ ವ್ಯಸನವನ್ನು ಸರಿಪಡಿಸುವುದು ಅಷ್ಟೇ ಕಷ್ಟ ಎಂದು ರೊ| ಗುರುರಾಜ ಕೋತ್ವಾಲ್ ಅವರು ಅಭಿಪ್ರಾಯಪಟ್ಟರು.ಅವರು ಇತ್ತೀಚೆಗೆ ಅಭಿವೃದ್ಧಿ ಸಂಸ್ಥೆ (ರಿ.) ಬಾಳ್ಕುದ್ರು ಹಂಗಾರಕಟ್ಟೆ, ರೋಟರಿ ಕ್ಲಬ್ ಕುಂದಾಪುರ, ಸನ್‌ರೈಸ್ ಹಾಗೂ ಕರ್ನಾಟಕ […]
ಮಾರ್ಚ್ 8ರಿಂದ 14ರವರೆಗೆ ಜಪಸರ ಪ್ರಾರ್ಥನೆ, ಮಾ.13ರಂದು ಉಪವಾಸ-ಪ್ರಾರ್ಥನೆಗೆ ಕರೆ ಉಡುಪಿ: ಮಧ್ಯಪ್ರಾಚ್ಯ ಪ್ರದೇಶದಲ್ಲಿ, ವಿಶೇಷವಾಗಿ ಇರಾನ್ ಹಾಗೂ ನೆರೆಯ ರಾಷ್ಟ್ರಗಳನ್ನು ಒಳಗೊಂಡ ಇತ್ತೀಚಿನ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆ, ದೇಶದ ಕ್ರೈಸ್ತ ಸಮುದಾಯವು ಶಾಂತಿಗಾಗಿ ಪ್ರಾರ್ಥನೆ ಸಲ್ಲಿಸಲು ಬಿಷಪರ ಮಂಡಳಿ ಎಂದು ಕರೆ ನೀಡಲಾಗಿದ್ದು ಅದರಂತೆ ಉಡುಪಿ ಕಥೊಲಿಕ ಧರ್ಮಪ್ರಾಂತ್ಯದಲ್ಲಿ ಮಾರ್ಚ್ 8 ರಂದು ಶಾಂತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುವಂತೆ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಕ್ರೈಸ್ತ ಸಮುದಾಯಕ್ಕೆ ಮನವಿ ಮಾಡಿದ್ದಾರೆ. ಯುದ್ಧ ಮತ್ತು […]
ಮಂಗಳೂರು ಧರ್ಮಕ್ಷೇತ್ರದ ಮಂಗಳೂರು ದಕ್ಷಿಣ ಸಂತ ಜೋಸೆಫ್ ವಾಜ್ ವಲಯಕ್ಕೆ ನೂತನ ಕಾರ್ಯದರ್ಶಿ ಹಾಗೂ ಇಬ್ಬರು ಪ್ರತಿನಿಧಿಗಳ ಆಯ್ಕೆ ಪ್ರಕ್ರಿಯೆ ತಾ. 03/03/2026 ರಂದು ಮಂಗಳವಾರ ಸಂಜೆ 5.30 ಗಂಟೆಗೆ ಪರ್ಮನ್ನೂರ್ ಚರ್ಚ್ ಸಭಾಂಗಣದಲ್ಲಿ ಅತ್ಯಂತ ವ್ಯವಸ್ಥಿತವಾಗಿ ನಡೆಯಿತು. ಚುನಾವಣೆಯಲ್ಲಿ ವಲಯದ ಕಾರ್ಯದರ್ಶಿ ಮತ್ತು ಇಬ್ಬರು ಪ್ರಮುಖ ಪ್ರತಿನಿಧಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ನೂತನ ಪದಾಧಿಕಾರಿಗಳ ವಿವರ: ಕಾರ್ಯದರ್ಶಿ: ರೋಷನ್ ಡಿ ಸೋಜ (ಮುಡಿಪು ಚರ್ಚ್ ಕಾರ್ಯದರ್ಶಿ) ಪ್ರತಿನಿಧಿ 1: ಅಲ್ವಿನ್ ಡಿ ಸೋಜ (ಆಯೋಗದ ಸಂಯೋಜಕರು, […]
ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ 6 ನೇ ಬ್ಯಾಚ್‌ನ ಬಿ.ಎಸ್ಸಿ. ನರ್ಸಿಂಗ್ ವಿದ್ಯಾರ್ಥಿಗಳ ಲ್ಯಾಂಪ್ ಲೈಟಿಂಗ್ ಮತ್ತು ಪ್ರಮಾಣ ವಚನ ಸ್ವೀಕಾರ ಸಮಾರಂಭವು ಇತ್ತೀಚೆಗೆ ಕಾಲೇಜು ಸಭಾಂಗಣದಲ್ಲಿ ನಡೆಯಿತು.ಈ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾದ ವಿದ್ಯಾರತ್ನ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲಾರಾದ ಡಾ. ಅನಿತಾ ಸಿ. ರಾವ್, ಐಎಂಜೆ ವಿದ್ಯಾ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕ ಡಾ. ಎಸ್. ಎನ್. ಭಟ್; ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಜೆನ್ನಿಫರ್ ಫ್ರೀಡಾ ಮೆನೆಜಸ್; ಮತ್ತು ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ ಉಪ ಪ್ರಾಂಶುಪಾಲೆ ಶ್ರೀಮತಿ […]

