ಹಾಸನ: ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ಸೊಂದು ಚಲಿಸುತ್ತಿರುವಾಗಲೇ ದಿಢೀರ್ ಬೆಂಕಿಗಾಹುತಿಯಾದ ಭೀಕರ ಘಟನೆ ಹಾಸನ ತಾಲೂಕಿನ ಶಾಂತಿಗ್ರಾಮ ಬಳಿ ಸಂಭವಿಸಿದೆ. ಚಾಲಕನ ಸಮಯಪ್ರಜ್ಞೆಯಿಂದಾಗಿ ಬಸ್ಸಿನಲ್ಲಿದ್ದ ಎಲ್ಲಾ 36 ಮಂದಿ ಪ್ರಯಾಣಿಕರು ಪ್ರಾಣಾಪಾಯವಿಲ್ಲದೆ ಅದೃಷ್ಟವಶಾತ್ ಪಾರಾಗಿದ್ದಾರೆ. ಹಾಸನ ತಾಲೂಕಿನ ಶಾಂತಿಗ್ರಾಮದ ಬಳಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ , ಈ ಖಾಸಗಿ ಬಸ್ ಭರತ್ ಕಂಪನಿಗೆ ಸೇರಿದ್ದು ಆಗಿತ್ತು. ಶಾಂತಿಗ್ರಾಮದ ಬಳಿ ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ, ಹಿಂಬದಿ ಟೈಯರ್ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿತ್ತು, ಚಾಲಕನ ಸಮಯಪ್ರಜ್ಞೆಯಿಂದಾಗಿ ಬಸ್ಸಿನಲ್ಲಿದ್ದ ಎಲ್ಲಾ 36 ಪ್ರಯಾಣಿಕರು ಯಾವುದೇ […]
ಶ್ರೀನಿವಾಸಪುರ: ತಾಲೂಕಿನ ಚಲ್ದಿಗಾನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಬ್ಬಟ ಗ್ರಾಮದಲ್ಲಿ ಉರ್ದು ಶಾಲೆಯಿಂದ ಮಸೀದಿ ರಸ್ತೆಯ ನಜಿರ್ ಸಾಬ್ ಅವರ ಮನೆ ಸಮೀಪದವರೆಗೆ ಮೋರಿ ನಿರ್ಮಾಣ ಕಾಮಗಾರಿಯನ್ನು ಶೀಘ್ರದಲ್ಲಿ ಪ್ರಾರಂಭಿಸಿ ಚರಂಡಿ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮ ಪಂಚಾಯತಿ ಮಾಜಿ ಸದಸ್ಯ ಎಚ್.ಎಂ. ಆನಂದ್ ಕುಮಾರ್ ತಿಳಿಸಿದ್ದಾರೆ. ಗ್ರಾಮದ ಪ್ರಮುಖ ರಸ್ತೆಯ ಭಾಗದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ಹಾಗೂ ಚರಂಡಿ ನೀರು ರಸ್ತೆ ಮೇಲೆ ನಿಂತು ಸಾರ್ವಜನಿಕರಿಗೆ ತೀವ್ರ […]
ಮಂಗಳೂರು, ಮೇ 14, 2026: ಹಿರಿಯ ಪತ್ರಕರ್ತ, “ಚಾರೋಳಿ ಕಿಂಗ್” ಹಾಗೂ ಬಹುಭಾಷಾ ಸಾಹಿತಿ ರೇಮಂಡ್ ಡಿಕುನ್ಹಾ ತಾಕೋಡೆ ಅವರ ಕೊಂಕಣಿ ಕವನ ಸಂಕಲನ “ಚುನ್ಯಾಚೊ ಫೊಂಡ್” ಬುಧವಾರ ಮಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಯಿತು. ಕನ್ನಡ ಹಾಗೂ ದೇವನಗರಿ ಲಿಪಿಯಲ್ಲಿ ಪ್ರಕಟಗೊಂಡಿರುವ ಈ ಕವನ ಸಂಕಲನವನ್ನು ಅನಿವಾಸಿ ಭಾರತೀಯ ಉದ್ಯಮಿ ಹಾಗೂ ಸಮಾಜಸೇವಕರಾದ ಮೈಕಲ್ ಡಿಸೋಜಾ ಬಿಡುಗಡೆಗೊಳಿಸಿದರು. ಪುಸ್ತಕ ಬಿಡುಗಡೆ ಬಳಿಕ ಮಾತನಾಡಿದ ಮೈಕಲ್ ಡಿಸೋಜಾ , “ಮೈಕಲ್ ಡಿಸೋಜಾ ವಿಷನ್ ಕೊಂಕಣಿ” (MDVK) ಯೋಜನೆ […]
ಮಂಗಳೂರಿನ ಮೌಂಟ್ ಕಾರ್ಮೆಲ್ ಸೆಂಟ್ರಲ್ ಶಾಲೆಯ XII ನೇ ತರಗತಿಯ 12 ನೇ ಬ್ಯಾಚ್ ಮಾರ್ಚ್ 2026 ರಲ್ಲಿ ನಡೆದ CBSE ಬೋರ್ಡ್ ಪರೀಕ್ಷೆಯಲ್ಲಿ 100% ಫಲಿತಾಂಶದೊಂದಿಗೆ ಹೆಮ್ಮೆಯ ಯಶಸ್ಸಿನ ಕಥೆಯನ್ನು ಬರೆದಿದ್ದಾರೆ. ಹೆಚ್ಚು ವಿಶ್ಲೇಷಣಾತ್ಮಕ ಮತ್ತು ವೃತ್ತಿಪರ ಪ್ರಶ್ನೋತ್ತರ ಮಾದರಿಯೊಂದಿಗೆ CBSE ಪರೀಕ್ಷೆಗಳು ಹೆಚ್ಚು ಸವಾಲಿನದ್ದಾಗಿದ್ದರೂ, ಶಾಲೆಯ ವಿದ್ಯಾರ್ಥಿಗಳು ಆ ಸಂದರ್ಭಕ್ಕೆ ತಕ್ಕಂತೆ ಎದ್ದು ನಿಂತು ಆತ್ಮವಿಶ್ವಾಸ, ಪರಿಶ್ರಮ ಮತ್ತು ದೃಢನಿಶ್ಚಯದಿಂದ ಅತ್ಯುತ್ತಮ ಪ್ರದರ್ಶನ ನೀಡಿದರು. ಸಾಧಕರಲ್ಲಿ ಪ್ರಮುಖ ಪಾತ್ರ ವಹಿಸುತ್ತಾ, ದೀಕ್ಷಾ ಎನ್ ಅತ್ಯುತ್ತಮ […]
ಮಂಗಳೂರು; ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯು 2025-26ನೇ ಸಾಲಿನ ಸಿಬಿಎಸ್ಇ ದ್ವಿತೀಯ ಪಿಯುಸಿ (Class XII) ಬೋರ್ಡ್ ಪರೀಕ್ಷೆಯಲ್ಲಿ ಶೇ.100 ಫಲಿತಾಂಶವನ್ನು ಸಾಧಿಸಿದೆ. ಪರೀಕ್ಷೆಗೆ ಹಾಜರಾದ 28 ವಿದ್ಯಾರ್ಥಿಗಳಲ್ಲಿ 5 ವಿದ್ಯಾರ್ಥಿಗಳು ಶೇ.85 ಮತ್ತು ಅದಕ್ಕೂ ಹೆಚ್ಚಿನ ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ಪಡೆದಿದ್ದಾರೆ. 23 ವಿದ್ಯಾರ್ಥಿಗಳು ಶೇ.65 ರಿಂದ 85ರೊಳಗಿನ ಅಂಕಗಳನ್ನು ಪಡೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಇಶಾನ್ ಪೈ ಅವರು ಶೇ.95.60 ಅಂಕಗಳನ್ನು, ದ್ವಿತೀಯ ಸ್ಥಾನವನ್ನು ಪಡೆದ ನೀಲ್ ತಿಮಯ್ಯ […]
ಕೋಲಾರ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ) ವತಿಯಿಂದ 2026-27ನೇ ಸಾಲಿನ ಅರಿವು ವಿದ್ಯಾಭ್ಯಾಸ ಸಾಲ ಯೋಜನೆ ಅಡಿಯಲ್ಲಿ ಮತೀಯ ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ, ಜೈನ್, ಬೌದ್ಧ, ಸಿಖ್ ಹಾಗೂ ಪಾರ್ಸಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಸಾಲ ಸೌಲಭ್ಯ ನೀಡಲಾಗುತ್ತಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸುವ CET/NEET ಪರೀಕ್ಷೆಗಳ ಮೂಲಕ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಈ ಯೋಜನೆಯ ಸೌಲಭ್ಯ ದೊರೆಯಲಿದೆ. ವೈದ್ಯಕೀಯ (ಎಂ.ಬಿ.ಬಿ.ಎಸ್.), ಬಿ.ಡಿ.ಎಸ್., ಬಿ.ಇ./ಬಿ.ಟೆಕ್, ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್, ಬಿ.ಆಯುಷ್, ಫಾರ್ಮಸಿ, ಕೃಷಿ ವಿಜ್ಞಾನ ಹಾಗೂ ಪಶುವೈದ್ಯಕೀಯ […]
First Holy Communion Celebration at Bajjodi ಬಜ್ಜೋಡಿಯ ಬಾಲ ಮೇರಿ ಚರ್ಚ್, ಮೇ 10, 2026 ರ ಭಾನುವಾರದಂದು ಏಳು ಮಕ್ಕಳ ಮೊದಲ ಪವಿತ್ರ ಸಂಸ್ಕಾರವನ್ನು ಬಹಳ ಸಂತೋಷದಿಂದ ಆಚರಿಸಿತು. ಆಡ್ಡನ್ ರಿಶನ್ ಪಿಂಟೊ, ಪರ್ಲ್ ಸ್ವೀಡಲ್ ಡಿ’ಕುನ್ಹಾ, ಪ್ರೇಮಲ್ ಸಲ್ಡಾನಾ, ಸೀನ್ ಸ್ಯಾಮ್ಯುಯೆಲ್ ಡಿ’ಸೋಜಾ, ಜಾಯ್ಸ್ಟನ್ ಡಿ’ಸೋಜಾ, ಜೋಶುವಾ ಪ್ರಜ್ವಲ್ ಸಲ್ಡಾನಾ ಮತ್ತು ಕ್ರಿಶ್ಚಿಯನ್ ಲಾರೆನ್ಸ್ ಮೊರಾಸ್ಇವರು ಒಂದು ತಿಂಗಳ ತೀವ್ರವಾದ ಧರ್ಮೋಪದೇಶದ ನಂತರ ಈ ಮಕ್ಕಳು ತಮ್ಮ ಹೃದಯದಲ್ಲಿ ಯೇಸುವನ್ನು ರೊಟ್ಟಿಯ ರೂಪದ […]
ಪಡುಕೋಣೆ : ಸಂತ ಅಂತೋನಿ ಚರ್ಚ್ ಪಡುಕೋಣೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ದಿನಾಂಕ 10.5.2026 ರಂದು ಪುರಸ್ಕಾರ ಕಾರ್ಯಕ್ರಮ ನಡೆಯಿತು. ವಂ| ಫಾದರ್ ಪ್ರಾನ್ಸಿಸ್ ಕರ್ನೆಲಿಯೊರವರು S.S.L.C ಮತ್ತು P.U.C. ಯಲ್ಲಿ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳನ್ನು ಪುಷ್ಪ, ನೆನಪಿನ ಕಾಣಿಕೆ ಹಾಗೂ ಧನ ಸಹಾಯವನ್ನು ನೀಡಿ ಸನ್ಮಾನಿಸಿದರು. ಈ ಸನ್ಮಾನವನ್ನು ದಿವಂಗತ ತೆರೆಜಾ ಕರ್ನೆಲಿಯೊ ಕೆಮ್ಮಣ್ಣು, ಅವರ ಸ್ಮರಣಾರ್ಥವಾಗಿ ಈ ನೀಡಲಾಯಿತು. S.S.L.Cಯಲ್ಲಿ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳು ಎಶೆಲ್ ಲುವಿಸ್, ರಶ್ವಿತಾ ಬುತ್ತೆಲ್ಲೊ, ರೊಜರ್ ಫೆರ್ನಾಂಡಿಸ್, […]
ಶ್ರೀನಿವಾಸಪುರ : ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮದಡಿ ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಅರ್ಹ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ವಿತರಿಸುವ ಮೂಲಕ ಮಹಿಳೆಯರನ್ನ ಅರ್ಥಿಕವಾಗಿ ಸ್ವಾವಲಂಬಿಯನ್ನಾಗಿಸುವ ಉದ್ದೇಶದಿಂದ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯನ್ನ ಸದ್ಭಳಿಕೆ ಮಾಡಿಕೊಂಡು ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುವಂತೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮನವಿ ಮಾಡಿದರು.ಪಟ್ಟಣದ ಪುರಸಭೆ ಕಚೇರಿಯಲ್ಲಿ ಮಂಗಳವಾರ ಬಿಸಿಎಂ ಕಾರ್ಪರೇಷನ್ ಇಲಾಖೆ ವತಿಯಿಂದ ಉಚಿತವಾಗಿ ಅರ್ಹ ಫಲಾನುಭಿವಿಗಳಿಗೆ 14 ಹೊಲಿಗೆ ಯಂತ್ರ ವಿತರಸಿ ಮಾತನಾಡಿದರು. ಪಶ್ಚಿಮ ಬಂಗಳಾದಲ್ಲಿ […]

