ಶ್ರೀನಿವಾಸಪುರ : ಐದು ವರ್ಷದ ಸದಸ್ಯರ ಅವಧಿ ಮುಕ್ತಯವಾದ್ದರಿಂದ ಪಂಚಾಯಿತಿ ವತಿಯಿಂದ ಎಲ್ಲಾ ಅಧ್ಯಕ್ಷ, ಉಪಾಧ್ಯಕ್ಷ ಹಾಗು ಸದಸ್ಯರಿಗೆ ಅಭಿನಂದನೆಯನ್ನ ಹಮ್ಮಿಕೊಳ್ಳಲಾಗಿದೆ ಎಂದು ಪಿಡಿಒ ಮಂಜುನಾಥರೆಡ್ಡಿ ಹೇಳಿದರು.ತಾಲೂಕಿನ ಜೆ.ತಿಮ್ಮಸಂದ್ರ ಗ್ರಾ.ಪಂ. ಕಚೇರಿಯಲ್ಲಿ ಸೋಮವಾರ ಗ್ರಾ.ಪಂ ಅಧ್ಯಕ್ಷ,ಉಪಾಧ್ಯಕ್ಷ ಹಾಗು ಸದಸ್ಯರಿಗೆ ಅಭಿನಂದಿಸಿ ಮಾತನಾಡಿದರು. ಪಂಚಾಯಿತಿಯ ಎಲ್ಲಾ ಗ್ರಾಮಗಳ ಅಭಿವೃದ್ಧಿಗಾಗಿ ಹಾಗು ಗ್ರಾಮಗಳಲ್ಲಿನ ಮೂಲಭೂತ ಸೌಲಭ್ಯಗಳಿಗೆ ಒಗ್ಗಟ್ಟಿನಿಂದ ಅಧ್ಯಕ್ಷ ಹಾಗು ಸದಸ್ಯರು ಎಲ್ಲರೂ ಸಹಕರಿಸಿರುವ ಹಿನ್ನೆಲೆಯಲ್ಲಿ ಎಲ್ಲರಿಗೂ ಕೃತಜ್ಞನತೆ ಸಲ್ಲಿಸುತ್ತೇನೆ ಎಂದರು. ಈ ಸಮಯದಲ್ಲಿ ಅಧ್ಯಕ್ಷೆ ರತ್ನಮ್ಮ.ಕೆ, ಉಪಾಧ್ಯಕ್ಷೆ ಭಾರತಮ್ಮ, […]
ಶ್ರೀನಿವಾಸಪುರ: ಪಟ್ಟಣದ ಆಂಬಿಷನ್ ನ್ಯಾಷನಲ್ ಶಾಲೆಯಲ್ಲಿ 2025–26ನೇ ಶೈಕ್ಷಣಿಕ ಸಾಲಿನ ಅಂಗವಾಗಿ ಶನಿವಾರ ಸೃಜನಾತ್ಮಕ ಮಕ್ಕಳ ವಾರ್ಷಿಕ ಕಲಾ, ಕರಕುಶಲ ಹಾಗೂ ವಿಜ್ಞಾನ ಪ್ರದರ್ಶನವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಶಾಲೆಯ ನಿರ್ವಹಣಾ ಮಂಡಳಿ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳ ಸಹಕಾರದಲ್ಲಿ ನಡೆದ ಈ ಪ್ರದರ್ಶನದಲ್ಲಿ, ವಿದ್ಯಾರ್ಥಿಗಳು ಸಮಾಜೋಪಯೋಗಿ ಮತ್ತು ದೈನಂದಿನ ಜೀವನಕ್ಕೆ ಸಂಬಂಧಿಸಿದ ವಿವಿಧ ವಿಷಯಾಧಾರಿತ ಮಾದರಿ ಹಾಗೂ ಪ್ರದರ್ಶನಗಳನ್ನು ಸಿದ್ಧಪಡಿಸಿ ವೀಕ್ಷಕರ ಗಮನ ಸೆಳೆದರು. ಸಂಚಾರ ನಿಯಮಗಳ ಮಹತ್ವ, ರೈಲ್ವೆ ಸಂಚಾರ ವ್ಯವಸ್ಥೆ, ಮಾನವ ಜೀರ್ಣಾಂಗ ವ್ಯವಸ್ಥೆ, […]
ಶ್ರೀನಿವಾಸಪುರ : ಈಗಾಗಲೇ ನನ್ನ ಅವಧಿಯಲ್ಲಿ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಪಾತಕೋಟೆ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಸೂಚನೆ ನೀಡಲಾಗಿದೆ. ಅಲ್ಲದೆ ಗೌಡತಾತಗಡ್ಡ ಪುಲಗೂರಕೋಟೆ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಸಾತನೂರು ಗೊಲ್ಲಪಳ್ಳಿ ಗ್ರಾಮದಲ್ಲಿ ಅನೇಕ ವರ್ಷಗಳಿಂದ ಬಾಕಿ ಉಳಿದಿದ್ದ ಕಾಮಗಾರಿಯನ್ನು ಅಂದಾಜು ₹60 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಿಸುವ ಮೂಲಕ ಪೂರ್ಣಗೊಳಿಸಲಾಗಿದೆ ಎಂದು ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಹೇಳಿದರು. ತಾಲ್ಲೂಕಿನ ಲಕ್ಷ್ಮಿಪುರ ಗ್ರಾಮದಲ್ಲಿ ಮಂಗಳವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ […]
ಕೋಲಾರ, ಫೆಬ್ರವರಿ 3 : ಸ್ವಾತಂತ್ರ‍್ಯ ಬಂದು 78 ವರ್ಷಗಳು ಕಳೆದರೂ ಕರ್ನಾಟಕ ಸೇರಿದಂತೆ ಭಾರತದ ಹಲವಾರು ರಾಜ್ಯಗಳಲ್ಲಿ ಆರೋಗ್ಯದ ಹಕ್ಕು ಇನ್ನೂ ಜಾರಿ ಆಗಿಲ್ಲ. ಭಾರತದಲ್ಲಿ ಪ್ರತಿ ವರ್ಷ ಆರೋಗ್ಯ ಚಿಕಿತ್ಸೆಯ ಖರ್ಚುಗಳಿಂದಾಗಿ 10 ಕೋಟಿ ಜನರು ಬಡತನಕ್ಕೆ ತಳ್ಳಲ್ಪಡುತ್ತಿದ್ದಾರೆ. ಆರೋಗ್ಯ ಸೇವೆ ಹಾಗು ಚಿಕಿತ್ಸೆ ವೆಚ್ಚಗಳು ದಿನೇ ದಿನೇ ದುಬಾರಿಯಾಗುತ್ತಿದ್ದು ಖರ್ಚು ಭರಿಸಲಾರದೆ ಎಷ್ಟೋ ಜನರು ಸಾವನ್ನಪ್ಪುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಕೋಲಾರ ಜಿಲ್ಲಾ ಆಸ್ಪತ್ರೆಗಳು ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಒಟ್ಟಾರೆಯಾಗಿ ಬಲಪಡಿಸುವ ಬದಲು, […]
ಪಟ್ಟಣದ ವರದ ಬಾಲಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ತಾಲೂಕು ಮಟ್ಟದ ಹಿಂದುಸಮಾಜ್ಯೋತ್ಸವ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಇಂದು ಪಟ್ಟಣದ ಕೆಲಭಾಗಗಳಲ್ಲಿ ಶೋಭಯಾತ್ರೆ ನಡೆಸಲು ಪೊಲೀಸರಿಂದ ಅನುಮತಿ ದೊರಕಿಲ್ಲ ಎಂದು ಕೆಲವರು ಹೇಳುತ್ತಿದ್ದರೂ ಸಹ ಪಟ್ಟಣದ ಎಲ್ಲಾ ಭಾಗಗಳಲ್ಲಿ ಶೋಭಾಯಾತ್ರೆಯನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ.ಇಂದು ನಮ್ಮ ಧರ್ಮವನ್ನು ರಕ್ಷಿಸಲು ತಮ್ಮ ಮಕ್ಕಳಿಗೆ ಚಿಕ್ಕವಯಸ್ಸಿನಲ್ಲಿಯೇ ನಮ್ಮ ಧರ್ಮದ ಬಗ್ಗೆ ಅರಿವು ಮೂಡಿಸುತ್ತಿರಬೇಕು.ಇಸ್ಲಾಂರಿಗೆ ೫೭ ದೇಶ ಇದೆ ಆದರೆ ನಮಗೆ ಇರುವದೊಂದೆ ಭಾರತ. ನಮ್ಮ ದೇಶಕ್ಕೆ ಏನೇ ತೊಂದರೆ ಆದರೆ […]
ಶ್ರೀನಿವಾಸಪುರ: ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಅಂಗವಾಗಿ ನಡೆದ ಶೋಭಾಯಾತ್ರೆಯಲ್ಲಿ ಅಪೂರ್ವ ಸೌಹಾರ್ದತೆಯ ದೃಶ್ಯ ಕಂಡುಬಂದಿತು. ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದ ಹಿಂದೂ ಬಾಂಧವರಿಗೆ ಮುಸ್ಲಿಂ ಸಮುದಾಯದ ಮೊಬೈಲ್ ರಿಪೇರಿ ಅಂಗಡಿಗಳ ಮಾಲೀಕರು ಮುಳಬಾಗಿಲು ವೃತ್ತದ ಬಳಿ ಸ್ವಯಂ ಪ್ರೇರಿತವಾಗಿ ನೀರು ಹಾಗೂ ಬಾಳೆಹಣ್ಣುಗಳನ್ನು ವಿತರಿಸಿ, ಪರಸ್ಪರ ಸಹಬಾಳ್ವೆ ಮತ್ತು ಸಹೋದರತ್ವದ ಸಂದೇಶವನ್ನು ಸಮಾಜಕ್ಕೆ ನೀಡಿದರು. ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಶೋಭಾಯಾತ್ರೆ ಸಾಗುವ ವೇಳೆ ಬಿಸಿಲಿನ ತೀವ್ರತೆಯಿಂದ ಶ್ರಮಿಸುತ್ತಿದ್ದ ಭಕ್ತರನ್ನು ಗಮನಿಸಿದ ಮುಸ್ಲಿಂ ವ್ಯಾಪಾರಿಗಳು ಮಾನವೀಯತೆ ಮತ್ತು […]
ಶ್ರೀನಿವಾಸಪುರ : ವಿದ್ಯಾರ್ಥಿಗಳು ಇಂತಹ ವೇದಿಕೆಗಳನ್ನು ಸದ್ಬಳಕೆ ಮಾಡಿಕೊಂಡು ತಮ್ಮೊಳಗೆ ಅಡಗಿರುವ ಪ್ರತಿಭೆಯನ್ನು ಹೊರಹೊಮ್ಮಿಸಬೇಕು. ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ವಿದ್ಯಾವಂತರಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಬಿ.ಸಿ. ಮುನಿಲಕ್ಷ್ಮಯ್ಯ ಸಲಹೆ ನೀಡಿದರು. ಪಟ್ಟಣದ ತ್ಯಾಗರಾಜ ಬಡಾವಣೆಯ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಕಸಬಾ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಹಿಂದೆ ಪಾಠಪ್ರವಚನಗಳಿಗೆ ಮಾತ್ರ ಸೀಮಿತವಾಗಿದ್ದ ಸರ್ಕಾರಿ ಶಾಲೆಗಳು, ಇದೀಗ […]
ಶ್ರೀನಿವಾಸಪುರ: ಪಟ್ಟಣದ ಎಂಜಿ ರಸ್ತೆಯಲ್ಲಿರುವ ಹೋಲ್ಸೇಲ್ ಮಾರಾಟ ಅಂಗಡಿ ಒಂದರಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಸುಮಾರು 200 ಕೆಜಿ ಪ್ಲಾಸ್ಟಿಕ್ ವಸ್ತುಗಳನ್ನು ಪುರಸಭೆ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಹಾಗೂ ಮಾರಾಟದ ಮೇಲೆ ನಿಷೇಧ ಜಾರಿಯಲ್ಲಿರುವ ಹಿನ್ನೆಲೆ, ಪುರಸಭೆ ಆರೋಗ್ಯ ನಿರೀಕ್ಷಕ ಟಿ.ವಿ. ಸುರೇಶ್ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು. ದಾಳಿಯಲ್ಲಿ ಸ್ವಚ್ಛತಾ ಸಿಬ್ಬಂದಿ ಸಹ ಭಾಗವಹಿಸಿ ಅಕ್ರಮವಾಗಿ ಸಂಗ್ರಹಿಸಿದ್ದ ಪ್ಲಾಸ್ಟಿಕ್ ವಸ್ತುಗಳನ್ನು ಜಪ್ತಿ ಮಾಡಿದರು. ನಿಷೇಧಿತ ಪ್ಲಾಸ್ಟಿಕ್ ಬಳಕೆ ಪರಿಸರ ಹಾಗೂ […]
ಶ್ರೀನಿವಾಸಪುರ : ಪಟ್ಟಣದ ಪತಂಜಲಿ ಯೋಗ ಮಂದಿರದಲ್ಲಿ ಗರುವಾರ ಹಿಂದೂ ಸಮಾಜ್ಯೋತ್ಸವ ಸಮಿತಿವತಿಯಿಂದ ನಡೆದ ಪೂರ್ವ ಬಾವಿಸಭೆಯ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದರು.ಹಿಂದೂ ಸಮಾಜ್ಯೋತ್ಸವ ಸಮಿತಿ ಅಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಮಾತನಾಡಿ ೩೧ ಶನಿವಾರ ವೇದಿಕೆ ಕಾರ್ಯಕ್ರಮವನ್ನ ವರದಬಾಲಾಂಜನೇಯ ಸ್ವಾಮಿ ದೇವಾಯಲದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ವರದ ಬಾಲಾಂಜನೇಯ ಸ್ವಾಮಿ ದೇವಾಯಲದ ಆವರಣದಲ್ಲಿ ವೇದಿಕೆ ಕಾರ್ಯಕ್ರಮಕ್ಕೂ ಪ್ರಾರಂಭವಾಗುವ ಮುನ್ನಾ, ಶೋಭಾಯಾತ್ರೆಯನ್ನ ಎಂಜಿ ರಸ್ತೆಯ ಮೂಲಕ ಮುಳಬಾಗಿಲು ವೃತ್ತ, ಕೋಲಾರ ವೃತ್ತ, ಚಿಂತಾಮಣಿ ವೃತ್ತ, ಮೂಲಕ ವೇದಿಕೆಯ ಬಳಿ ಶೋಬಾಯಾತ್ರೆಯು ಪೂರ್ಣವಾಗುವುದು […]

