ಶ್ರೀನಿವಾಸಪುರ : ದೇಶದ ಸಮಗ್ರ ಅಭಿವೃದ್ಧಿಗೆ ಯುವ ಪೀಳಿಗೆಯ ಆರೋಗ್ಯ ಅತ್ಯಂತ ಅಗತ್ಯವಾಗಿದ್ದು, ಪೌಷ್ಟಿಕ ಆಹಾರದಿಂದಲೇ ಆರೋಗ್ಯವಂತ ಮಕ್ಕಳ ನಿರ್ಮಾಣ ಸಾಧ್ಯ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಟಿ.ಆರ್. ಸುಲೋಚನ ಹೇಳಿದರು. ಪಟ್ಟಣದ ಜಾಕೀರ್ ಹುಸೇನ್ ಮೊಹಲ್ಲಾದ ಸರ್ಕಾರಿ ಉರ್ದು ಮತ್ತು ಆಂಗ್ಲ ಮಾಧ್ಯಮ ಹೈಯರ್ ಪ್ರೈಮರಿ ಶಾಲೆಯಲ್ಲಿ ತಾಲೂಕು ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ 2025-26ನೇ ಸಾಲಿನ ತಾಲೂಕು ಮಟ್ಟದ ಅಡುಗೆ ಸಿಬ್ಬಂದಿಗಳಿಗಾಗಿ ಆಯೋಜಿಸಿದ್ದ ಅಡುಗೆ ತಯಾರಿಕಾ ಸ್ಪರ್ಧೆಗೆ ಚಾಲನೆ ನೀಡಿ […]
ಶ್ರೀನಿವಾಸಪುರ : ಪಟ್ಟಣದ ವಾಸವಿ ಕನ್ನಿಕಾಪರಮೇಶ್ವರಿ ದೇವಾಲಯ ಆವರಣದಲ್ಲಿ ಶ್ರೀ ರಾಮನವಮಿ ಹಬ್ಬದ ಪ್ರಯುಕ್ತ ವಾಸವಿ ಗಂಗಾ ಆರತಿ ತಂಡದ ವತಿಯಿಂದ ಭಕ್ತರಿಗೆ ಪಾನಕ ಹಾಗೂ ಕೋಸಂಬರಿ ವಿತರಣೆ ಮಾಡುವ ಕಾರ್ಯಕ್ರಮ ಭಕ್ತಿಭಾವದಿಂದ ನಡೆಯಿತು. ಹಬ್ಬದ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಆರತಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಭಕ್ತರು ಭಕ್ತಿ ಶ್ರದ್ಧೆಯಿಂದ ಆಚರಿಸಿದರು. ಬೆಳಿಗ್ಗೆಯಿಂದಲೇ ದೇವಸ್ಥಾನಕ್ಕೆ ಭಕ್ತರ ಆಗಮನ ಹೆಚ್ಚಾಗಿದ್ದು, ಕುಟುಂಬ ಸಮೇತರಾಗಿ ಬಂದು ದೇವರ ದರ್ಶನ ಪಡೆದು ಆಶೀರ್ವಾದ ಪಡೆದರು. ನಂತರ ವಾಸವಿ ಗಂಗಾ ಆರತಿ […]
ಶ್ರೀನಿವಾಸಪುರ : ತಾಲ್ಲೂಕಿನ ಮೀಸಗಾನಹಳ್ಳಿ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕವನ್ನು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಸರ್ವೇಶ್ ಪರಿಶೀಲಿಸಿದರು. ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಒಟ್ಟು 245 ಶುದ್ಧ ಕುಡಿಯುವ ನೀರು ಘಟಕಗಳಿದ್ದು, ಅವುಗಳಲ್ಲಿ 216 ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ. ಉಳಿದ 29 ಘಟಕಗಳಿಗೆ ದುರಸ್ತಿ ಅಗತ್ಯವಿದ್ದು, […]
ಶ್ರೀನಿವಾಸಪುರ : ಅಂತಹ ಪ್ರಕರಣಗಳು ಕಂಡು ಬಂದಲ್ಲಿ ಬಾಡಿಗೆದಾರರಿಗೆ ಮುನ್ಸೂಚನೆಯನ್ನು ನೀಡದೇ ಸದರಿ ಛಾವಣಿಯನ್ನು ಪುರಸಭೆ ಸಿಬ್ಬಂದಿಯಿಮದ ತೆರವುಗೊಳಸಲಾಗುವುದು. ಠೇವಣಿದಾರರು ನಿಗಧಿತ ದಿನಾಂಕದಂದು ಬಾಡಿಗೆಗಳನ್ನು ಕಟ್ಟುವಂತೆ ಸೂಚಿಸಿ, ಪುರಸಭೆಯು ಸೂಚಿಸಿರುವ ಷರತ್ತುಗಳನ್ನು ಪಾಲಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ವಿ.ನಾಗರಾಜು ಕರೆನೀಡಿದರು.ಪಟ್ಟಣದ ಪುರಸಭೆ ಕಚೇರಿಯಲ್ಲಿ ಗುರುವಾರ ವಿವಿಧ ಬಾಬ್ತುಗಳ ಬಹಿರಂಗ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದರು. ಈ ಸಾಲಿನಲ್ಲಿ ದಿನವಹಿ ಮಾರುಕಟ್ಟೆ, ವಾರದ ಸಂತೆ, ಕಸಾಯಿಖಾನೆ, ಬಸ್ಟಾಂಡ್ ಶುಲ್ಕ, ಮುಸಾಫೀರ್‌ಖಾನ ವಾಣಿಜ್ಯ ಸಂಕೀರ್ಣ ನೆಲಮಹಡಿಯ ವಾಹನ ಶುಲ್ಕ […]
ಶ್ರೀನಿವಾಸಪುರ : ತಾಲೂಕಿನಲ್ಲಿ ಕೆರೆಗಳಿಗೆ ಕೆಸಿ ವ್ಯಾಲಿ ನೀರನ್ನು ಹರಿಸುವ ಕಾಮಗಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ, ತಕ್ಷಣವೇ ಎಲ್ಲಾ ಕೆರೆಗಳಿಗೆ ನೀರು ಹರಿಸುವಂತೆ ವಿವಿಧ ಮುಖಂಡರು ಆಗ್ರಹಿಸಿದ್ದಾರೆ. ಮಂಗಳವಾರ ಪಟ್ಟಣದ ಕೆಎಸ್‌ಆರ್‌ಟಿಸಿ ಹೊಸ ಬಸ್ ನಿಲ್ದಾಣದಲ್ಲಿ ರಮೇಶ್‌ಕುಮಾರ್ ಅಭಿಮಾನಿ ಬಳಗದ ವತಿಯಿಂದ ನೀರಾಗಿ ನಮ್ಮ ಹಕ್ಕು ಕಾರ್ಯಕ್ರಮದಡಿ ಶ್ರೀನಿವಾಸಪುರದಿಂದ ಮುದುವಾಡಿ ಕೆರೆ ಹಾಗೂ ನರಸಾಪುರದ ಲಕ್ಷ್ಮಿಸಾಗರದವರೆಗೆ ಕಾರುಗಳ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್, ಮಾಜಿ ಶಾಸಕ ಕೆ.ಆರ್. ರಮೇಶ್‌ಕುಮಾರ್ ಅವರ ಕಾಳಜಿಯಿಂದ […]
ಶ್ರೀನಿವಾಸಪುರ : ಪವಿತ್ರ ರಮಝಾನ್ ಉಪವಾಸದ ಸಮಾಪ್ತಿಯನ್ನು ಸೂಚಿಸುವ ಈದ್-ಉಲ್-ಫಿತ್ರ್ ಹಬ್ಬವನ್ನು ಪಟ್ಟಣದ ಮುಸ್ಲಿಂ ಸಮುದಾಯವು ಶನಿವಾರ ಭಕ್ತಿಪೂರ್ವಕವಾಗಿ ಹಾಗೂ ಸಂಭ್ರಮದಿಂದ ಆಚರಿಸಿತು. ಸಹೋದರತ್ವ, ಶಾಂತಿ ಮತ್ತು ದಾನಧರ್ಮದ ಸಂದೇಶ ಸಾರುವ ಈ ಹಬ್ಬವು ಪಟ್ಟಣದಾದ್ಯಂತ ವಿಶೇಷ ಧಾರ್ಮಿಕ ವಾತಾವರಣವನ್ನು ನಿರ್ಮಿಸಿತು.ಪಟ್ಟಣದ ಚಾರ್ಮಿನಾರ್ ಈದ್ಗಾ ಮೈದಾನ, ಜಾಮಿಯಾ ಮಸೀದಿ ಈದ್ಗಾ ಮೈದಾನ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಈದ್ಗಾಗಳಲ್ಲಿ ಸಾವಿರಾರು ಭಕ್ತರು ಸೇರಿ ಸಮೂಹವಾಗಿ ಈದ್ ನಮಾಜ್ ಸಲ್ಲಿಸಿದರು. ಬೆಳಗಿನ ಜಾವವೇ ಹೊಸ ಬಟ್ಟೆ ಧರಿಸಿ ಕುಟುಂಬ […]
ಶ್ರೀನಿವಾಸಪುರ : ಯಾವುದೇ ರೀತಿಯಾಗಿ ಗ್ಯಾಸ್ ಸಿಲೆಂಡರ್ ಪೂರೈಕೆಯಲ್ಲಿ ವ್ಯತ್ಯವಿಲ್ಲ ಕೇಂದ್ರ ಹಾಗು ರಾಜ್ಯ ಸರ‍್ಕಾರ ವಾಣಿಜ್ಯ ಸಿಲೆಂಡರ್‌ಗಳನ್ನು ಹೊರತುಪಡಿಸಿ, ಗೃಹಬಳಕೆಯ ಸಿಲೆಂಡರ್‌ಗಳು ಸರ್ಕಾರ ಆದೇಶದಂತೆ ಪೂರೈಕೆಯಾಗಿಲಿವೆ ಎಂದು ತಹಶೀಲ್ದಾರ್ ಜಿ.ಎನ್.ಸುದೀಂದ್ರ ಹೇಳಿದರು .ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಶನಿವಾರ ತಾಲೂಕಿನ ಗ್ಯಾಸ್ ಮಾಲೀಕರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು.ತಾಲ್ಲೂಕಿನ ಸರ‍್ವಜನಿಕರಿಗೆ ಹೇಳುವೊಂದೆ ಸರ‍್ವರ್ ಪ್ರಬ್ಲಮ್ ನಿಂದ ಬುಕಿಂಗ್‌ಗೆ ಪ್ರಾಬ್ಲಮ್ ಆಗಿದೆ ಅಷ್ಟೆ. ತಡವಾಗಿ ತಗೆದುಕೊಳ್ಳುತ್ತಿದೆ. ಹೆಚ್ಚಿನ ಸಿಲೆಂಡರ್‌ಗಳನ್ನು ಬುಕ್ ಮಾಡುವುದರಿಂದ ಈ ವ್ಯತ್ಯಗಳು ನಡೆಯುತ್ತಿದೆ . ನಾಲೈದು ದಿನಗಳಲ್ಲಿ […]
ಶ್ರೀನಿವಾಸಪುರ: ತಾಲ್ಲೂಕಿನ ಕಸಬಾ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘ ನಿಯಮಿತದ ಆಡಳಿತ ಮಂಡಳಿ ಚುನಾವಣೆಯಲ್ಲಿ ಶಬ್ಬೀರ್ ಅಹ್ಮದ್ ಪಾಷಾ ಸೇರಿ ಒಟ್ಟು 12 ಮಂದಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಆಡಳಿತ ಮಂಡಳಿಯ ಒಟ್ಟು 12 ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿತ್ತು. ಅದರಲ್ಲಿ 11 ಸ್ಥಾನಗಳು ಸಾಲಗಾರರ ಕ್ಷೇತ್ರಕ್ಕೆ ಹಾಗೂ 1 ಸ್ಥಾನ ಸಾಲಗಾರರಲ್ಲದ ಕ್ಷೇತ್ರಕ್ಕೆ ಮೀಸಲಾಗಿತ್ತು.ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಸಲು ಮಾರ್ಚ್ 11 ಕೊನೆಯ ದಿನವಾಗಿತ್ತು. ವಿವಿಧ ಕ್ಷೇತ್ರಗಳಿಂದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. […]
ಶ್ರೀನಿವಾಸಪುರ: ಉಚ್ಚ ನ್ಯಾಯಾಲಯವು 2023ರ ಸೆಪ್ಟೆಂಬರ್ 11ರಂದು ನೀಡಿರುವ ಆದೇಶದ ಪ್ರಕಾರ ಅರಣ್ಯ ಇಲಾಖೆ ಸಿಬ್ಬಂದಿಗೆ ಈ ಜಾಗಕ್ಕೆ ಪ್ರವೇಶಿಸಲು ಅವಕಾಶವಿಲ್ಲ. ಆದರೂ ಅರಣ್ಯ ಇಲಾಖೆ ಸಿಬ್ಬಂದಿಯೇ ರೈತರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ರೈತ ಮುಖಂಡ ಆರ್. ತಿಮ್ಮಸಂದ್ರ ಆರ್. ಶಿವರಾಮಶರ್ಮ ಆರೋಪಿಸಿದರು. ಶುಕ್ರವಾರ ತಾಲ್ಲೂಕಿನ ಕೇತಗಾನಹಳ್ಳಿ ಗ್ರಾಮದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. 1999ರಲ್ಲಿ ಕೇತಗಾನಹಳ್ಳಿ ಗ್ರಾಮದ ಪ್ರತಿಯೊಬ್ಬ ರೈತರಿಗೆ 30 ಗುಂಟೆ ಪ್ರಮಾಣದಲ್ಲಿ ಸಾಗುವಳಿ ಚೀಟಿ ಮೂಲಕ ಜಮೀನು ಹಂಚಿಕೆ ಮಾಡಲಾಗಿದೆ. ಆ ಬಳಿಕ […]

