

ಶ್ರೀನಿವಾಸಪುರ : ಐದು ವರ್ಷದ ಸದಸ್ಯರ ಅವಧಿ ಮುಕ್ತಯವಾದ್ದರಿಂದ ಪಂಚಾಯಿತಿ ವತಿಯಿಂದ ಎಲ್ಲಾ ಅಧ್ಯಕ್ಷ, ಉಪಾಧ್ಯಕ್ಷ ಹಾಗು ಸದಸ್ಯರಿಗೆ ಅಭಿನಂದನೆಯನ್ನ ಹಮ್ಮಿಕೊಳ್ಳಲಾಗಿದೆ ಎಂದು ಪಿಡಿಒ ಮಂಜುನಾಥರೆಡ್ಡಿ ಹೇಳಿದರು.
ತಾಲೂಕಿನ ಜೆ.ತಿಮ್ಮಸಂದ್ರ ಗ್ರಾ.ಪಂ. ಕಚೇರಿಯಲ್ಲಿ ಸೋಮವಾರ ಗ್ರಾ.ಪಂ ಅಧ್ಯಕ್ಷ,ಉಪಾಧ್ಯಕ್ಷ ಹಾಗು ಸದಸ್ಯರಿಗೆ ಅಭಿನಂದಿಸಿ ಮಾತನಾಡಿದರು.
ಪಂಚಾಯಿತಿಯ ಎಲ್ಲಾ ಗ್ರಾಮಗಳ ಅಭಿವೃದ್ಧಿಗಾಗಿ ಹಾಗು ಗ್ರಾಮಗಳಲ್ಲಿನ ಮೂಲಭೂತ ಸೌಲಭ್ಯಗಳಿಗೆ ಒಗ್ಗಟ್ಟಿನಿಂದ ಅಧ್ಯಕ್ಷ ಹಾಗು ಸದಸ್ಯರು ಎಲ್ಲರೂ ಸಹಕರಿಸಿರುವ ಹಿನ್ನೆಲೆಯಲ್ಲಿ ಎಲ್ಲರಿಗೂ ಕೃತಜ್ಞನತೆ ಸಲ್ಲಿಸುತ್ತೇನೆ ಎಂದರು.
ಈ ಸಮಯದಲ್ಲಿ ಅಧ್ಯಕ್ಷೆ ರತ್ನಮ್ಮ.ಕೆ, ಉಪಾಧ್ಯಕ್ಷೆ ಭಾರತಮ್ಮ, ಸದಸ್ಯರಾದ ಕೃಷ್ಣಮ್ಮ, ವಿ.ನಾಗೇಶ್ರಡ್ಡಿ, ಮಂಜುಳ, ಸುಮಂಗಳ,ಗಂಗರಾಜು, ಶಿಲ್ಪ, ಕೆ.ನಾರಾಯಣಸ್ವಾಮಿ, ರೋಜ, ಯಶೋಧಮ್ಮ, ಎಂ.ವೆಂಕಟಸ್ವಾಮಿ, ವೆಂಕಟಲಕ್ಷಮ್ಮ, ಚೌಡರೆಡ್ಡಿ.ಎಂ, ಅಶ್ವಿನಿ, ರತ್ನಮ್ಮ, ಕೆ.ಎನ್.ಶಂಕರರೆಡ್ಡಿ ಇದ್ದರು.

