

ಬೆಳ್ತಂಗಡಿ : ಬೆಳ್ತಂಗಡಿಯಲ್ಲಿ ನಿನ್ನೆ ನಡೆದ ಕಾಲೇಜು ವಿದ್ಯಾರ್ಥಿನಿ ಅಪಹರಣ ಪ್ರಯತ್ನ ಪ್ರಕರಣ ದೊಡ್ಡದಾಗಿ ಸೌಂಡ್ ಮಾಡಿತ್ತು. ಆದರೆ ಸಂಬಂಧಪಟ್ಟಂತೆ ಪೊಲೀಸರ ತನಿಖೆಯಲ್ಲಿ ಇದೀಗ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ದೊರಕಿದೆ ತನ್ನ ಅಪಹರಣದ ಪ್ರಯತ್ನ, ಹುಡುಗಿಯೆ ಕಟ್ಟಿರುವ ಕಟ್ಟುಕಥೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ವಿದ್ಯಾರ್ಥಿನಿಯೇ ತನ್ನ ಕೈಗೆ ಬ್ಲೇಡ್ನಲ್ಲಿ ಗೀರಿ ಅಪಹರಣದ ಕಥೆ ಕಟ್ಟಿದ್ದಾಳೆಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ. ಕಾಶಿಬೆಟ್ಟು ಸರಕಾರಿ ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿನಿಯ ಸ್ಕೂಟರ್ ತಡೆದು ಕಾರಿನಲ್ಲಿ ಬಂದ ಮೂವರು ಮೂವರು ಮುಸುಕು ಹಾಕಿಕೊಂಡವರು, ಸುದೆಮುಗೇರು ಎಂಬಲ್ಲಿ ಅಪಹರಣ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಚೂರಿಯಿಂದ ಹಲ್ಲೆ ಮಾಡಲಾಗಿದೆ ಎಂದು ಯುವತಿ ದೂರಿದ್ದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಈ ಘಟನೆಯ ನಂತರ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮತ್ತು ಪೊಲೀಸರು ಆಸ್ಪತ್ರೆಗೆ ತೆರಳಿ ಘಟನೆ ಕುರಿತು ಮಾಹಿತಿ ಕೂಡಾ ಪಡೆದಿದ್ದರು.
ಕಾರಿನ ನಂಬರ್ ಪ್ಲೇಟ್ಗೆ ಬಟ್ಟೆ ಕಟ್ಟಿದ್ದು, ಮುಖಕ್ಕೆ ಮುಸುಕು ಹಾಕಿದ್ದರು, ಮೂವರಿದ್ದರು, ಬೈಕ್ವೊಂದು ಹಿಂದಿನಿಂದ ಬಂದಿದ್ದಕ್ಕೆ ನನ್ನನ್ನು ಬಿಟ್ಟು ಎಸ್ಕೇಪ್ ಆಗಿದ್ದರು ಎನ್ನುವ ಕಥೆಯನ್ನು ಯುವತಿ ಪೊಲೀಸರಲ್ಲಿ ಹೇಳಿದ್ದಳು.
ಇದರಂತೆ ಪೊಲೀಸರು ಘಟನೆ ನಡೆದಲ್ಲಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಿದ್ದು, ಯಾವುದೇ ಸಾಂದರ್ಭಿಕ ಸಾಕ್ಷಿ ದೊರಕಲಿಲ್ಲ. ಹಾಗಾಗಿ ವಿದ್ಯಾರ್ಥಿನಿಯಿಂದ ಹೆಚ್ಚಿನ ಮಾಹಿತಿ ಪಡೆಯಲು ಮುಂದಾಗಿದ್ದಾರೆ.
ಕಾರಿನ ಬಣ್ಣ, ಕಾರು ಯಾವುದು? ಎಲ್ಲವನ್ನೂ ಕರೆಕ್ಟ್ ಆಗಿ ಹೇಳಲು ಹೇಳಿದಾಗ ಆಕೆ ತಬ್ಬಿಬ್ಬಾಗಿದ್ದಾಳೆ. ನಂತರ ಅಪಹರಣ ಘಟನೆಯೇ ಸುಳ್ಳು ಎಂದು ಯುವತಿ ಹೇಳಿದ್ದು, ಬೇರೆ ಕಾಲೇಜು ಸೇರುವುದಕ್ಕೆ ಅಪಹರಣದ ಕತೆ ಕಟ್ಟಿದ್ದಾಗಿ ಹೇಳಿರುವುದಾಗಿ ವರದಿಯಾಗಿದೆ.
ಗ್ರಾಮೀಣ ಭಾಗದ ಕಾಲೇಜು ಬದಲು ಮಂಗಳೂರು ನಗರದ ಕಾಲೇಜಿಗೆ ಹೋಗಲು ಬಯಸಿದ್ದು, ಅದಕ್ಕಾಗಿ ಅಪಹರಣದ ಕತೆ ಕಟ್ಟಿದರೆ ಮನೆಯವರು ತನ್ನನ್ನು ಬೇರೆಡೆ ಕಾಲೇಜಿಗೆ ಸೇರಿಸುತ್ತಾರೆ ಎಂದು ನಂಬಿ, ಚಕಾಕಿ ಹುಡುಗಿ, ಬ್ಲೇಡ್ನಿಂದ ತಾನೇ ಕೈಯನ್ನು ಕೊಯ್ದು ಕೊಂಡಿರುವುದಾಗಿ ತಿಳಿಸಿದ್ದಾಳೆ.
ಬ್ಯಾಗ್ನಲ್ಲಿರುವ ಪುಸ್ತಕಗಳನ್ನು ಮನೆಯಲ್ಲೇ ಸುಟ್ಟು ಹಾಕಿದ್ದ ಈಕೆ, ಬಳಿಕ ಬ್ಯಾಗ್ನ ದಾರಿಯಲ್ಲೇ ಬಿಸಾಕಿದ್ದಳು. ಮತ್ತೊಂದೆಡೆ ವಿದ್ಯಾರ್ಥಿನಿ ಸ್ಕೂಟಿಯಿ೦ದ ಬಿದ್ದಿರುವಂತೆ ನಟಿಸುವ ವೇಳೆ ಹಿಬದಿಯಿ೦ದ ಬ೦ದಿದ್ದ ಅಬ್ಬುಸಾಲಿ ಎಂಬಾತ ಕೂಡ ತನನ್ನು ಅಪಹರಣ ಮಾಡಲು ಪ್ರಯತ್ನ ಮಾಡಲಾಗಿದೆ ಎಂದು ವಿವರಿಸಿದ್ದ ಕಾರಣ, ಅಬ್ಬುಸಾಲಿ ಹುಡುಗಿಯನ್ನು ಅವಳ ಮನೆ ತನಕ ಮುಟ್ಟಿಸಿದ್ದರು, ಹೀಗಾಗಿ ಈಕೆ ಹೇಳುತ್ತಿರುವುದು ಸತ್ಯ ಎಂದು ಎಲ್ಲರೂ ನಂಬಿದ್ದರು. ಇದನ್ನು ಕೇಳಿ ಕುಟುಂಬಸ್ಥರೂ ಕಂಗಾಲಾಗಿದ್ದರು. ಆದರೆ ಪೊಲೀಸರ ತನಿಖೆಯಿ೦ದ ಕೊನೆಗೂ ವಿದ್ಯಾರ್ಥಿನಿ ನಾಟಕ ಬಯಲಾಗಿದ್ದು ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.
ಆದರೆ ಇದೀಗ ಹೆತ್ತವರಿಗೆ ಆಪತ್ತು ಬಂದಿದೆ; ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ ಅಪ್ರಾಪ್ತೆಯ ಕಿಡ್ನಾಪ್ ಪ್ರಕರಣವೊಂದು ಒಂದೇ ದಿನದಲ್ಲಿ ಟ್ವಿಸ್ಟ್ ನೀಡಿದ್ದು, ವಿದ್ಯಾರ್ಥಿನಿಯ ಡ್ರಾಮಾ ಬಯಲಾಗಿದೆ. ಜೊತೆಗೆ ಅಪ್ರಾಪ್ತೆಗೆ ವಾಹನ ಚಲಾಯಿಸಲು ಕೊಟ್ಟಿದ್ದಕ್ಕೆ ಹೆತ್ತವರ ಮೇಲೆಯೇ ಕೇಸ್ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ

