ಮಂಗಳೂರು; ದಿನಾಂಕ: 09/07/2025 ಸೆಂಟ್ ರೀಟಾ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ 2025ರ ಜುಲೈ 9 ರಂದು ವನಮಹೋತ್ಸವವನ್ನು ಉತ್ಸಾಹಭರಿತವಾಗಿ ಆಚರಿಸಲಾಯಿತು.ಕಾರ್ಯಕ್ರಮವನ್ನು ಶಾಲೆಯ ನಿವೃತ್ತ ಶಿಕ್ಷಕಿ ಶ್ರೀಮತಿ ಮೇಬಲ್ ಪಿಂಟೋ, ಸಂಚಾಲಕರಾದ ಫಾ. ಎರಿಕ್ ಕ್ರಾಸ್ಟಾ ಹಾಗೂ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮೆಟಲ್ಡಾ ಡಿಕೋಸ್ತಾ ಅವರು ಸಸಿ ನೆಡುವುದರ ಮೂಲಕ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಪರಿಸರದ ಮಹತ್ವವನ್ನು ವಿವರಿಸುವ ನೃತ್ಯ, ಪರಿಸರ ಸಂರಕ್ಷಣೆಯ ಕುರಿತಾಗಿ ಹಾಡು, ಮತ್ತು ವನಮಹೋತ್ಸವದ ಮಹತ್ವವನ್ನು ತೋರಿಸುವ ನಾಟಕ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಶಿಕ್ಷಕರು ಮತ್ತು ಮಕ್ಕಳು ಒಟ್ಟಾಗಿ […]
ಕುಂದಾಪುರ; ಜೆಸಿಯಲ್ಲಿ ಹಲವು ವರ್ಷಗಳಿಂದ ಕ್ರಿಯಾಶೀಲ ರಾಗಿದ್ದು, ತರಬೇತಿ ನೀಡುವಲ್ಲಿ ಗಾಢ ಅನುಭವ ಹೊಂದಿರುವ ಹಿರಿಯ ತರಬೇತುದಾರರ ಉತ್ಸಾಹದಿಂದ ವಿನೂತನವಾಗಿ ಕುಂದಾಪುರದ ಆರ್. ಎನ್. ಎಸ್. ಕಾಲೇಜಿನಲ್ಲಿ ಜಿಲ್ಲೆಯ ಮೊದಲ ಯೂತ್ ವಿಂಗ್ ಆರಂಭವಾಗಿದ್ದು ಸಂತಸದ ವಿಷಯ. ವಿದ್ಯಾರ್ಥಿಗಳು ಪರಿಣಿತ ತರಬೇತುದಾರರು ನೀಡುವ ಮಾರ್ಗದರ್ಶನ ಮತ್ತು ಎಲ್ಲ ತರಹದ ಅವಕಾಶಗಳನ್ನು ಸದುಪಯೋಗಪಡಿಸಿ ಕೊಳ್ಳಬೇಕು ‘ ಎಂದು ಸೀನಿಯರ್ ಛೇಂಬರ್ಸ್ ಇಂಟರ್ ನ್ಯಾಶನಲ್ ನ ರಾಷ್ಟ್ರೀಯ ಅಧ್ಯಕ್ಷ SNR PPF ಎಮ್. ಆರ್. ಜಯೇಶ ರವರುಸೀನಿಯರ್ ಛೇಂಬರ್ಸ್ ಕೋಟಾ ಲೀಜನ್ ನ ಆಶ್ರಯದಲ್ಲಿ ಕುಂದಾಪುರದ ಆರ್.ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಉಡುಪಿ ಜಿಲ್ಲೆಯ ಪ್ರಪ್ರಥಮ ‘ ‘ ‘ಯೂತ್ ವಿಂಗ್ ‘ ನ್ನು ಉದ್ಘಾಟಿಸಿ ಯುವ ವಿದ್ಯಾರ್ಥಿ ಸಮೂಹಕ್ಕೆ ಕರೆ ನೀಡಿದರು. ಜೆಸಿಐ ನ ಪೂರ್ವ ರಾಷ್ಟ್ರೀಯ ಅಧ್ಯಕ್ಷ JFP ಕಾರ್ತಿಕೇಯ ಮಧ್ಯಸ್ಥರವರು ವಿದ್ಯಾರ್ಥಿಗಳು ಇನ್ನೊಬ್ಬರಿಗೆ ಸ್ಪೂರ್ತಿಯಾದಾಗ, ಮತ್ಯಾರಿಗೋ ರೋಲ್ ಮಾಡೆಲ್ ಆದಾಗ ಸಿಗುವ ಸಂತೃಪ್ತಿ – ಸಾರ್ಥಕತೆ ಅನನ್ಯವಾದುದು ಎಂಬುದನ್ನು ಅರಿತುಕೊಂಡು ಆ ನಿಟ್ಟಿನಲ್ಲಿ ಕೆಲವು ಸರಳ ಸೂತ್ರಗಳನ್ನು ಅನುಸರಿಸಬೇಕೆಂದು ತಿಳಿಸಿದರು.ಯೂತ್ ವಿಂಗ್ ಉದ್ಘಾಟನೆಯ ಅಂಗವಾಗಿ ಕಾಲೇಜಿನ ವಿದ್ಯಾರ್ಥಿನಿ ಭರತನಾಟ್ಯ ಪ್ರವೀಣೆ ಗಾರ್ಗಿದೇವಿ ಯ ನೃತ್ಯ ಪ್ರದರ್ಶನ ನಡೆಯಿತು. SCI ನ ಏರಿಯಾ-G ಇದರ ರಾಷ್ಟ್ರೀಯ ಉಪಾಧ್ಯಕ್ಷ SNR PPF ಸಿದ್ಧಗಂಗಯ್ಯ ರವರು ಯೂತ್ ವಿಂಗ್ ನ ಯಶಸ್ಸಿಗೆ ಶುಭ ಹಾರೈಸಿದರು. SCI ಯ ತರಬೇತಿ ಮತ್ತು ಯುವ ವ್ಯವಹಾರಗಳ ರಾಷ್ಟ್ರೀಯ ನಿರ್ದೇಶಕರಾದ SNR ಹುಸೇನ್ ಹೈಕಾಡಿಯವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಕೋಟಾ ಲೀಜನ್ ನ ಅಧ್ಯಕ್ಷರಾದ SNR ಕೇಶವ ಆಚಾರ್ ಅತಿಥಿಗಳನ್ನು ಸ್ವಾಗತಿಸಿದರು. ಸೀನಿಯರ್ ಛೇಂಬರ್ಸ್ ಕುಂದಾಪುರದ ಅಧ್ಯಕ್ಷರಾದ SNR ರಾಘವೇಂದ್ರ ಚರಣ್ ನಾವಡ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ನವೀನ ಕುಮಾರ್ ಶೆಟ್ಟಿ, ಯೂತ್ ವಿಂಗ್ ಘಟಕದ ಅಧ್ಯಕ್ಷ YWಕೌಶಿಕ್, ಕಾರ್ಯದರ್ಶಿ YW ಕೃತಿ ದೇವಾಡಿಗ, ಖಜಾಂಚಿ YW ಅಕ್ಷಯಾ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶರಧಿ ಪ್ರಾರ್ಥಿಸಿದರು.SCI ಕೋಟಾ ಲೀಜನ್ ನ ಕಾರ್ಯದರ್ಶಿ SNR ವಿನಯಚಂದ್ರ ರವರು ಧನ್ಯವಾದ ಸಲ್ಲಿಸಿದರು. ಯೂತ್ ವಿಂಗ್ ಸಂಯೋಜಕಿ ನಿರೂಪಿಸಿದರು.
ಕುಂದಾಪುರ ; ಸಿಟಿ ವತಿಯಿಂದ ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಸನ್ಮಾನ ಕಾರ್ಯಕ್ರಮ (8-7-2025)ಜ್ಯೂನಿಯರ್ ಜೆ.ಸಿ.ಕುಂದಾಪುರ ಸಿಟಿ ಇವರ ಆಶ್ರಯದಲ್ಲಿ ಕುಂದಾಪುರದ ಆರ್.ಎನ್.ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ ಸಮಾರಂಭದಲ್ಲಿ ‘ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ’ ದ ಅಂಗವಾಗಿ ಆರ್. ಎನ್. ಎಸ್. ಸಂಯುಕ್ತ ಪ.ಪೂ ಕಾಲೇಜಿನ ಪ್ರಾಂಶುಪಾಲರಾದಪ್ರೊ.ನವೀನ ಕುಮಾರ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಓರಿಯಂಟೇಶನ್ ಮತ್ತು ಯುತ್ ಎಫೇರ್ಸ್ನ ರಾಷ್ಟ್ರೀಯ ನಿರ್ದೇಶಕರಾದ SNR. PPF. ಹುಸೇನ್ ಹೈಕಾಡಿಯವರು ಸನ್ಮಾನಿತರಾದ ನವೀನ ಕುಮಾರ್ ಶೆಟ್ಟಿಯವರ ಸಾಮಾಜಿಕ ಕೊಡುಗೆಗಳ ಬಗ್ಗೆ ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ತಿಳಿಸಿದರು. ಸೀನಿಯರ್ ಛೇಂಬರ್ಸ್ ಇಂಟರ್ ನ್ಯಾಶನಲ್ ನ ರಾಷ್ಟ್ರೀಯ ಅಧ್ಯಕ್ಷ SNR PPF ಎಮ್. ಆರ್. ಜಯೇಶ್, SCI ನ ಏರಿಯಾ-G ಇದರ ರಾಷ್ಟ್ರೀಯ ಉಪಾಧ್ಯಕ್ಷ SNR,PPF ಸಿದ್ಧಗಂಗಯ್ಯ, ಕೋಟಾ ಲೀಜನ್ ನ ಅಧ್ಯಕ್ಷ SNR ಕೇಶವ ಆಚಾರ್, ಜೆಜೆಸಿ ಸುಮೇಧಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ‘ ಸೇವ್ ವಾಟರ್’ ಥೀಮ್ ನ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಕಾಲೇಜಿನ ವಿಜ್ಞಾನ ವಿಬಾಗದ ವಿದ್ಯಾರ್ಥಿನಿ ಶರಧಿ ಪ್ರಾರ್ಥಿಸಿದರು. JCI ಕುಂದಾಪುರ ಸಿಟಿ ಜೆ.ಸಿ ಯ ಅಧ್ಯಕ್ಷ JC ಸಲೀಮ್ ರವರು ಧನ್ಯವಾದ ಸಲ್ಲಿಸಿದರು. ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥೆ ಜಯಶೀಲಾ ಪೈಯವರು ಕಾರ್ಯಕ್ರಮ ನಿರೂಪಿಸಿದರು.
ಉಡುಪಿ : ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಇದರ 2025- )26 ನೇ ಸಾಲಿನ ಪದಪ್ರಧಾನ ಸಮಾರಂಭವು ಉಡುಪಿಯ ಟೌನ್ ಹಾಲ್ ನಲ್ಲಿ ನಡೆಯಿತು. ನೂತನ ಅಧ್ಯಕ್ಷ ಲಯನ್ ಜೆರಾಲ್ಡ್ ಪಿರೇರಾ ಮತ್ತು ಅವರ ತಂಡ ಅಧಿಕಾರ ಸ್ವೀಕರಿಸಿತು. ಜಿಲ್ಲಾ ದ್ವಿತೀಯ ಉಪ ಗವರ್ನರ್ ಲಯನ್ ಹರಿಪ್ರಸಾದ್ ರೈ, ನೂತನ ತಂಡಕ್ಕೆ ಪದ ಪ್ರಧಾನ ಭೋಧಿಸಿ, ಶುಭ ಹಾರೈಸಿದರು. ರಾಜ್ಯ ಸರ್ಕಾರದ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಪ್ರಶಾಂತ್ ಜತ್ತನ್ನ ಮಾತನಾಡಿ, ಸಮಾಜದಲ್ಲಿ ವಿವಿಧ ಸಾಮಾಜಿಕ […]
ಕಥೋಲಿಕ್ ವಿಜಯಡ್ಕ ಘಟಕದಿಂದ ಜುಲಾಯ್ 6 ರಂದು ಭಾಬುವಾರ ಗದ್ದೆಯಲ್ಲಿ ಒಂದು ದಿನ ಕಾರ್ಯಕ್ರಮ ನಡೆಯಿತು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯಡ್ಕ ಚರ್ಚ್ ಧರ್ಮಗುರುಗಳಾದ ವಂದನೀಯ ಫಾದರ್ ನವೀನ್ ಪ್ರಕಾಶ್ ಡಿಸೋಜರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಥೊಲಿಕ್ ಸಭಾ ಸಂತ ಜೋಸೆಫ್ ವಾಸ್ ವಲಯದ ಅಧ್ಯಕ್ಷ ಡೊಲ್ಫಿ ಡಿಸೋಜ ಆಗಮಿಸಿದ್ದರು. ಕಾರ್ಯದರ್ಶಿ ಟ್ರೆಸ್ಸಿ ರೊಡ್ರಿಗಸ್, ಕಥೊಲಿಕ್ ಸಭಾ ವಿಜಯಡ್ಕ ಘಟಕದ ಅಧ್ಯಕ್ಷ ರಾಜೇಂದ್ರ ಡಿಸೋಜ, ಕಾರ್ಯದರ್ಶಿ ವೀರಾ ಡಿಸೋಜ, ಸಂಚಾಲಕ ಜೋನ್ ಡಿಸೋಜ, ವಿಜಯಡ್ಕ ಚರ್ಚ್ ಪಾಲನಾ […]
ಮೂಡುಬಿದಿರೆ; ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ)ಇದರ ನೇತೃತ್ವದಲ್ಲಿ ಕಥೊಲಿಕ್ ಸಭಾ ಮೂಡಬಿದ್ರೆ ವಲಯ ಹಾಗೂ ಎಲ್ಲಾ ಘಟಕಗಳು ಹಾಗೂ ಅರಣ್ಯ ಇಲಾಖೆ, ಮೂಡಬಿದ್ರೆ. ಇದರ ಸಹಭಾಗಿತ್ವದಲ್ಲಿ “ಪರಿಸರ ದಿನಾಚರಣೆ’ಯನ್ನು ದಿನಾಂಕ 6/1/2025 ರಂದು ಮೂಡಬಿದಿರೆ ಆಲಂಗಾರು ಮೌಂಟ್ ರೋಜರಿ ಸಂಸ್ಥೆಯಲ್ಲಿ ಬೆಳಗ್ಗೆ 8 ಗಂಟೆಗೆ ದಿವ್ಯ ಬಲಿಪೂಜೆಯನ್ನು ಅರ್ಪಿಸಿ ಆರಂಭಿಸಲಾಯಿತು.ಸಭಾ ಕಾರ್ಯಕ್ರಮವನ್ನು ಪರಿಸರ ಗೀತೆಯೊಂದಿಗೆ ಆರಂಭಿಸಿ ಕೊರ್ಪುಸ್ ಕ್ರಿಸ್ತೀ ದೇವಾಲಯ, ಮೂಡಬಿದ್ರೆ, ಹಾಗೂ ವಲಯ ಧರ್ಮಗುರುಗಳಾದ ಅತೀ ವಂದನೀಯ ಫಾದರ್ ಓನಿಲ್ ಡಿಸೋಜಾ, ಇವರು ಅಶೀರ್ವಚನಗೈದರು. ಕರ್ನಾಟಕ […]
ಕುಂದಾಪುರ; ಪಿಯುಸ್ ನಗರ್ ಚರ್ಚಿನ ಕಥೋಲಿಕ್ ಸಭಾ ಘಟಕದಿಂದ ತ್ರಾಸಿ ವೃದಾಶ್ರಮದಲ್ಲಿ ಶ್ರೀಸಾಮನ್ಯರ ದಿನಾಚರಣೆ ಜು. 6 ರಂದು ಆಚರಿಸಲಾಯಿತು.85 ವರ್ಷ ಪ್ರಾಯದ್ (ನಿವೃತ್ತ) ಸಿಸ್ಟರ್ ಸುಪೀರಿಯರ್ ಮೇರಿ ಜೋನ್ ಇವರ್ ಜನ್ಮ ದಿನವನು ಕೇಕ್ ಕತರಿಸುವ ಮೂಲಕ ಆಚರಿಸಿ, ಅಲ್ಲಿನ ಎಲ್ಲಾ ವಯೋವ್ರದರೊಂದಿಗೆ ಆಟ ಆಡುವ, ಹಾಡು ಹೇಳಿ ಹಾಗೂ ಅವರೊಂದಿಗೆ ನ್ರತ್ಯ ಮಾಡಿ ಅವರನ್ನು ನಕ್ಕು ನಲಿಸುವ ಮೂಲಕ, ನಾವು ನಿಮ್ಮವರೇ, ಎನ್ನುವ ಸಂದೇಶ್ ನೀಡಿ, ನೀವೇ ಜೀವನದಲ್ಲಿ ನಿಜವಾದ ಲಾಯಿಕರು ಎನ್ನುವ ಭಾವನೆ […]
ಕುಂದಾಪುರ; ಎಮ್/ಎಸ್ ಟಿ ಎನ್ ಪ್ರಭು ಎಂಡ್ ಕೋ ಚಾರ್ಟೆಡ್ ಅಕೌಂಟ್ಸ್ ಸಂಸ್ಥೆಯಿಂದ ಹಲವು ವಿದ್ಯಾರ್ಥಿಗಳು ಸಿ ಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅವರ ವಿವರ ಕೆಳಗಡೆ ಇದೆ.
ಕುಂದಾಪ್ರ : ಕುಂದ ಕನ್ನಡ ಭಾಷಾಭಿವೃದ್ಧಿ ವೇದಿಕೆ, ಕುಂದಾಪುರ ಭಂಡಾರ್ಕಾರ್ಸ್ ಕಾಲೇಜು ಸಹಯೋಗದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಕುಂದಾಪ್ರ ಕನ್ನಡ ಸ್ಪರ್ಧೆ ದಿನಾಂಕ 19-07-2025 ರಂದು ಮಧ್ಯಾಹ್ನ 2:30ಕ್ಕೆ ಏರ್ಪಡಿಸಲಾಗಿದೆ.ಕುಂದ ಕನ್ನಡ ಗಾದೆಗಳನ್ನು ಎರಡು ನಿಮಿಷದಲ್ಲಿ ಸ್ಪಷ್ಟವಾಗಿ ಅತಿ ಹೆಚ್ಚು ಬಾರಿ ಹೇಳುವುದು ಹಾಗೂ 15 ನಿಮಿಷದಲ್ಲಿ ಕುಂದ ಕನ್ನಡ ಶಬ್ದಗಳನ್ನು ಅತಿ ಹೆಚ್ಚು ಬರೆಯುವುದು. ಈ ಎರಡು ಸ್ಪರ್ಧೆಗಳು ನಡೆಯುತ್ತವೆ.ಭಾಗವಹಿಸುವವರು ಜ್ಯೋತಿ ಸಾಲಿಗ್ರಾಮ, ರೇಡಿಯೋ ಕುಂದಾಪ್ರ 89.6 ಈಒ ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ ಈ ವಿಳಾಸಕ್ಕೆ […]

