

ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ ಕುಂದಾಪುರ ಇಲ್ಲಿನ ಎಂ.ಬಿ.ಎ ಮತ್ತು ಎಂ.ಸಿ. ಎ ವಿಭಾಗದ ವತಿಯಿಂದ ದಿನಾಂಕ ನವೆಂಬರ್ 4 2025 ರಂದು ಪ್ರಥಮ ವರ್ಷದ ಎಂ.ಬಿ.ಎ ಮತ್ತು ಎಂ.ಸಿ.ಎ ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ಪ್ರೋಗ್ರಾಮ್ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಉದ್ಯಮಿ ಶ್ರೀ ಬಿ. ಎಸ್. ಸುರೇಶ್ ಶೆಟ್ಟಿ ಫೌಂಡರ್ ಅಂಡ್ ಮ್ಯಾನೇಜಿಂಗ್ ಡೈರೆಕ್ಟರ್ ಸುಮುಖ ಸರ್ಜಿಕಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಉಪ್ಪುಂದ ಇವರು ಆಗಮಿಸಿ ಮಾಸ್ಟರ್ ಡಿಗ್ರಿ ಇಂದ ಆಗುವ ಪ್ರಯೋಜನಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಮ್ಮ ಸ್ವಂತ ಅನುಭವಗಳನ್ನು ಹಂಚಿಕೊಳ್ಳುವುದರ ಮೂಲಕ ಪ್ರೇರಣೆ ನೀಡಿದರು. ವಿದ್ಯಾರ್ಥಿಗಳು ಜೀವನದಲ್ಲಿ ಗುರಿಯನ್ನು ಹೊಂದಿ ಆ ಗುರಿ ಸಾಧನೆಗೆ ಮುಂದಾದಾಗ ಏನೇ ಅಡಕು ತೊಡಕುಗಳು ಉಂಟಾದಾಗ ಕುಗ್ಗದೆ ಮುಂದೆ ನಿಮ್ಮ ಜೀವನದಲ್ಲಿ ಇದಕ್ಕೂ ಹೆಚ್ಚಿನ ಅವಕಾಶಗಳು ನಿಮಗಾಗಿ ಕಾಯುತ್ತಿದೆ ಎಂಬ ಸಕಾರಾತ್ಮಕ ಆಲೋಚನೆಯ ಜೊತೆಗೆ ಮುನ್ನುಗ್ಗಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಹೆಗ್ಡೆ ಇವರು ಪಿಜಿ ವಿದ್ಯಾರ್ಥಿಗಳು ಹೇಗೆ ತಮಗೆ ಸಿಗುವ ಅವಕಾಶಗಳನ್ನು ಸದುಪಯೋಗ ಪಡೆದುಕೊಳ್ಳಬೇಕೆಂಬುದು ತಿಳಿಸಿದರು. ಎಂಬಿಎ ವಿಭಾಗದ ಮುಖ್ಯಸ್ಥೆ ಡಾ. ಸುಚಿತ್ರ ಪೂಜಾರಿ ಇವರು ಸ್ವಾಗತಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಹಾಗೆ ಎಂ.ಸಿ.ಎ ವಿಭಾಗದ ಮುಖ್ಯಸ್ಥೆ ಡಾ. ನಂದಿನಿ ಇವರು ಎ.ಐ ಯುಗದಲ್ಲಿ ಎಂ.ಸಿ.ಎ ವಿದ್ಯಾರ್ಥಿಗಳಿಗೆ ಇರುವ ಅವಕಾಶಗಳ ಬಗ್ಗೆ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಎಂ.ಬಿ.ಎ ಮತ್ತು ಎಂ.ಸಿ.ಎ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು. ಕುಮಾರಿ ಶಾಂಭವಿ ಈ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

