

ಕುಂದಾಪುರ, ಅ.31; ಕರ್ನಾಟಕ ಅಲ್ಬಸ೦ಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ದಕ್ಷಿಣ ಕರ್ನಾಟಕದ ಬೆ೦ಗಳೂರು ಮತ್ತು ಮೈಸೂರು ವಿಭಾಗದ ಹಾಸ್ಟೆಲ್ಗಳಲ್ಲಿ ಆಹಾರ ಗುಣಮಟ್ಟದ ಪೂರೈಕೆ ಹಾಗೂ ಇತರೆ ಮೂಲಭೂತ ಸೌಕರ್ಯಗಳ ಕುರಿತು ಪರಿಶೀಲಿಸುವ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರಿಗೆ ಸಮಿತಿಯ ಕಾರ್ಯವ್ಯಾಪ್ತಿಯೊ೦ದಿಗೆ ಸಮಿತಿಯನ್ನು ರಚಿಸಿ, ರಾಜ್ಯ ಸರ್ಕಾರ ಆದೇಶಿಸಿದೆ.
ಸಮಿತಿಯ ಅಧ್ಯಕ್ಷರಾಗಿ ಶ್ರೀಮತಿ ಬಲ್ಕಿಸ್ ಬಾನು, ಮಾನ್ಯ ಶಾಸಕರು, ವಿಧಾನ ಪರಿಷತ್, ಇವರು ಆಯ್ಕೆಯಾಗಿದ್ದಾರೆ, ಇವರ ಜೊತೆ ಜೊತೆ 13 ಸದಸ್ಯರ ನಾಮಕರಣವಾಗಿದೆ. ಅದರಲ್ಲಿ ನಮ್ಮ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊಟೇಶ್ವರದ ಶ್ರೀ ಡೇವಿಡ್ ಸಿಕ್ವೇರಾ ಒಬ್ಬರಾಗಿದ್ದಾರೆ.


