ನಕಲಿ ಬಯೋ ಔಷಧಿಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ದಾಳಿ-ಕ್ರಿಮಿನಲ್ ಮೊಕದಮ್ಮೆ

ಮುಳಬಾಗಿಲು-ಸೆ-02: ನಕಲಿ ಬಯೋ ಔಷಧಿಗಳನ್ನು ಮಾರಾಟ ಮಾಡಿ ರೈತರನ್ನು ವಂಚನೆ ಮಾಡುತ್ತಿದ್ದು, ರಘು ಆಗ್ರೋ ಟ್ರೇಡರ್ಸ್ ಅಂಗಡಿ ಮೇಲೆ ಕೃಷಿ ಜಂಟಿ ನಿರ್ದೇಶಕರಾದ ರೂಪಾದೇವಿ ಹಾಗೂ ತಾಲ್ಲೂಕು ಕೃಷಿ ಅಧಿಕಾರಿ ರವಿ ರವರ ನೇತೃತ್ವದಲ್ಲಿ 26-08-2022 ರಂದು ದಾಳಿ ಮಾಡಿ ಲಕ್ಷಾಂತರ ರೂಪಾಯಿ ಔಷಧಿಯನ್ನು ವಶಪಡಿಸಿಕೊಂಡು ಮಾಲೀಕರಾದ ರಘುನಾಥರೆಡ್ಡಿ ವಿರುದ್ದ ನಂಗಲಿಠಾಣೆಯಲ್ಲಿ ಕ್ರಿಮಿನಲ್ ಮೊಕದಮ್ಮೆ ದಾಖಲೆ ಮಾಡಿದರು.ರೈತ ಸಂಘದ ದೂರಿನ ಆಧಾರದ ಮೇಲೆ ಕೃಷಿ ಅಧಿಕಾರಿಗಳು ಮುಳಬಾಗಿಲು ತಾಲ್ಲೂಕು ಬೈರಕೂರು ಹೋಬಳಿ ಹೆಚ್.ಬಯ್ಯಪ್ಪನಹಳ್ಳಿ ಗಡಿ ಭಾಗದಲ್ಲಿ ರಘು ಆಗ್ರೋಟೇಡರ್ಸ್ಮಾಲೀಕರಾದ ರಘುನಾಥರೆಡ್ಡಿ ರವರು ನಕಲಿ ಬಯೋ ಔಷಧಿಗಳನ್ನು ಅಕ್ರಮವಾಗಿ ಮಾರಾಟ ಮಾಡುವ ಮುಖಾಂತರ ರೈತರನ್ನು ವಂಚನೆ ಮಾಡುವ ಜೊತೆಗೆ ಸರ್ಕಾರದ ಆದಾಯಕ್ಕೆ ಮತ್ತು ಕೃಷಿ ಅಧಿಕಾರಿಗಳ ದಿಕ್ಕು ತಪ್ಪಿಸಿ ಔಷಧಿಗಳ ಮಾರಾಟದ ಹೆಸರಿನಲ್ಲಿ ನಕಲಿ ರಸಗೊಬ್ಬರಗಳನ್ನು ಪರವಾನಿಗೆ ಪಡೆಯದೆ ಮಾರಾಟ ಮಾಡುತ್ತಿರುವುದು ಕಂಡು ಬಂದಿತು.

ಅಂಗಡಿ ಮೇಲೆ ದಾಳಿ ಮಾಡಿ ನಕಲಿ ಔಷಧಿಗಳನ್ನು ವಶಪಡಿಸಿಕೊಳ್ಳುವಾಗ ಅಧಿಕಾರಿಗಳ ಮೇಲೆ ಪ್ರಭಾವಿ ಬಿ.ಜೆ.ಪಿ ಮುಖಂಡರು ಒತ್ತಡ ಹಾಕಿ ಯಾವುದೇ ಕಾರಣಕ್ಕೂ ಅಂಗಡಿ ಸೀಜ್ ಮಾಡಬೇಡಿ ಹಾಗೂ ಮಾಲೀಕರ ವಿರುದ್ದ ಕೇಸು ದಾಖಲು ಮಾಡದಂತೆ ಬೆದರಿಕೆ ಕೆರೆಗಳು ಸಹ ಬಂದಿದ್ದವು ಯಾವುದಕ್ಕೂ ಕೇರೆ ಮಾಡದ ಅಧಿಕಾರಿಗಳು ರೈತರ ಹಿತದೃಷ್ಟಿಯಿಂದ ಅಂಗಡಿ ಮಾಲೀಕರ ವಿರುದ್ದ ಕ್ರಿಮಿನಲ್ ಮೊಕದಮ್ಮೆ ದಾಖಲು ಮಾಡಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಗಮನಕ್ಕೆ ತಂದು ಪ್ರಕರಣವನ್ನು ಗಂಭೀರವಾಗಿ ತನಿಖೆ ಮಾಡಿ ನಕಲಿ ಔಷಧಿ ಮಾರಾಟ ಮಾಡುವ ದಂದೆಕೋರರ ಬೆನ್ನು ಮೂಳೆ ಮುರಿಯುವ ಭರವಸೆ ನೀಡಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ 5 ವರ್ಷಗಳಿಂದ ಜಿಲ್ಲೆಯ ಟೆಮೋಟೋ ಕ್ಯಾಪ್ಸಿಕಂ ಮತ್ತಿತರ ಬೆಳೆಗಳಿಗೆ ಬಾದಿಸುತ್ತಿರುವ ನುಸಿ ಊಜಿ, ಬೊಬ್ಬೆ ರೋಜ್, ಮುಂತಾದ ರೋಗಗಳಿಗೆ ಲಕ್ಷಾಂತರ ರೂಪಾಯಿ ಕೊಟ್ಟು ಖರೀದಿ ಮಾಡುವ ಔಷಧಿಯಿಂದ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲವೆಂದು ಉಸ್ತುವಾರಿ ಸಚಿವರಿಂದ ಜಿಲ್ಲಾಧಿಕಾರಿಗಳು ಕೃಷಿ ಅಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಿದ ಹಿನ್ನಲೆಯಲ್ಲಿ ಇಂದು ನಕಲಿ ಔಷಧಿಗಳ ಮಾರಾಟ ದಂದೆಕೋರರ ವಿರುದ್ದ ದಾಳಿ ನಡೆಸಿರುವುದಕ್ಕೆ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಗಡಿಭಾಗದ ರಘು ಟ್ರೇಡರ್ಸ್ ಮಾಲೀಕರು ಆಂಧ್ರ ಮೂಲಕದ ಬಯೋ ಅಔಷದಿಗಳನ್ನು ರಾತ್ರಿವೇಳೆ ಅಕ್ರಮವಾಗಿ ದಾಸ್ತಾನು ಮಾಡಿ ಯಾವುದೇ ಬಿಲ್ಲನ್ನು ರೈತರಿಗೆ ಔಷಧಿ ಖರೀದಿ ಮಾಡುವಾಗ ನೀಡದೆ ವಂಚನೆ ಮಾಡುವ ಜೊತೆಗೆ ರಸಗೊಬ್ಬರ ಹಾಗೂ ಡ್ರಿಪ್ ಗೊಬ್ಬರಗಳನ್ನು ನಕಲಿ ಮಾರಾಟ ಮಾಡುತ್ತಿದ್ದಾರೆ.ಇವರು ಈ ದಂದೆ ಸಂಜೆ 5 ಗಂಟೆಯಿಂದ ರಾತ್ರಿ 11 ಗಂಟೆಯ ವರೆಗೆ ನಡೆಯುತ್ತದೆ. ಏಕೆಂದರೆ ಅಧಿಕಾರಿಗಳು ತಮ್ಮ ಸರ್ಕಾರಿ ಕೆಲಸ ಮುಗಿದ ನಂತರ ಇವರ ದಂದೆಗೆ ಯಾರು ಅಡ್ಡಿ ಇಲ್ಲವೆಂದು ಮಾರಾಟ ಮಾಡುವ ಇವರ ವಿರುದ್ದ ಗೂಂಡಾ ಕಾಯ್ದೆಯಡಿಯಲ್ಲಿ ಕೇಸು ದಾಖಲಿಸಬೇಕೆಂದು ಕೃಷಿ ಅಧಿಕಾರಿಗಳನ್ನು ಒತ್ತಾಯಿಸಿದರು. ತಾಲ್ಲೂಕು ಕೃಷಿ ಅಧಿಕಾರಿ ರವಿಕುಮಾರ್ ಮಾತನಾಡಿ ಅಂಗಡಿ ಮಾಲೀಕರು ಯಾವುದೇ ಸ್ಟಾಕ್ ಪುಸ್ತಕ ಹಾಗೂ ರೈತರಿಗೆ ನಿಡಿರುವ ರಸೀದಿ ಬುಕ್ ಇಲ್ಲ ಜೊತೆಗೆ ನಕಲಿ ಜಿ.2 ಪಾರಂ ಹೆಸರಿನಲ್ಲಿ ರೈತರನ್ನು ವಂಚನೆ ಮಾಡುತ್ತಿದ್ದಾರೆ. ಪ್ರಕರಣವನ್ನು ಗಂಬೀರವಾಗಿ ಪರಿಗಣಿಸಿ ತಾಲ್ಲೂಕಿನಾದ್ಯಂತ ನಕಲಿ ಔಷಧಿ ಮಾರಾಟ ಮಾಡುವ ಅಂಗಡಿ ಮಾಲೀಕರಿಗೆ ಈ ಪ್ರಕರಣ ಎಚ್ಚೆತ್ತುಕೊಳ್ಳಲು ಅವಕಾಶವೆಂದು ಎಚ್ಚರಿಕೆ ನೀಡಿದರು. ಸಂದರ್ಭದಲ್ಲಿ ಕೃಷಿ ಅಧಿಕಾರಿಗಳಾದ ಭವ್ಯ ರವರು ರೈತ ಸಂಘದ ಮುಖಂಡರಾದ ಮಂಜುನಾಥ, ಶ್ರೀನಿವಾಸ, ಆಂಜಿನಪ್ಪ, ಆನಂದರೆಡ್ಡಿಯಲವಳ್ಳಿ ಪ್ರಭಾಕರ್, ಹತ್ತಾರು ರೈತರು ಹಾಜರಿದ್ದರು.


ಗುರುಭವನ ಶಿಲಾನ್ಯಾಸಕ್ಕೆ ದಿನಾಂಕ ನಿಗಧಿಗೊಳಿಸಿ:ಶಿಕ್ಷಕ ಸಂಘಟನೆಗಳ ಮುಖಂಡರಿಗೆ ಡಾ.ವೈಎಎನ್ ಸಲಹೆ

ಕೋಲಾರ:- ಗುರುಭವನ ನಿರ್ಮಾಣ ಈಗಾಗಲೇ ಸಾಕಷ್ಟು ವಿಳಂಬವಾಗಿದೆ, ಇದು ಸರಿಯಾದ ಕ್ರಮವಲ್ಲ ನೀವು ಕೂಡಲೇ ಶಿಲಾನ್ಯಾಸಕ್ಕೆ ದಿನಾಂಕ ನಿಗಧಿ ಮಾಡಿ, ಅದಕ್ಕೆ ಅಗತ್ಯವಾದ ಅನುದಾನ ಕ್ರೋಢೀಕರಿಸೋಣ ಎಂದು ಶಿಕ್ಷಕ ಸಂಘಟನೆಗಳ ಮುಖಂಡರಿಗೆ ವಿಧಾನಪರಿಷತ್ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ ಸೂಚಿಸಿದರು.
ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಆಹ್ವಾನಪತ್ರಿಕೆ ನೀಡಲು ಆಗಮಿಸಿದ್ದ ಶಿಕ್ಷಕರ ಸಂಘಟನೆಗಳ ಮುಖಂಡರಿಗೆ ಸಲಹೆ ನೀಡಿದ ಅವರು, ಗುರುಭವನ ಶಿಲಾನ್ಯಾಸ ಮಾಡಿ ಕಾಮಗಾರಿ ಶೀಘ್ರ ಆರಂಭಿಸಲು ಕ್ರಮವಹಿಸಿ ಎಂದು ಕಿವಿಮಾತು ಹೇಳಿದರು.
ನಿರಂತರ ಮಳೆ ಹಾಗೂ ಸಿದ್ದತೆಗಳ ಕೊರತೆಯಿಂದಾಗಿ ಸೆ.5 ರಂದು ಶಿಲಾನ್ಯಾಸ ಕಾರ್ಯಕ್ರಮ ಕೈಬಿಟ್ಟಿದ್ದು, ಮುಂದಿನ ದಿನಗಳಲ್ಲಿ ಶಿಲಾನ್ಯಾಸಕ್ಕೆ ಸಿದ್ದತೆ ಮಾಡುವುದಾಗಿ ಶಿಕ್ಷಕರ ಸಂಘದ ಮುಖಂಡರು ಗಮನಕ್ಕೆ ತಂದರು.
ಸಂಸದ ಮುನಿಸ್ವಾಮಿ ಮಾತನಾಡಿ, ಗುರುಭವನ ಕಾಮಗಾರಿ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಇದು ಸರಿಯಲ್ಲ ಎಂದ ಅವರು, ಅನುದಾನವನ್ನು ನೀಡಲು ಜನಪ್ರತಿನಿಧಿಗಳು ಸಿದ್ದರಿದ್ದಾರೆ ಎಂದರು.
ಗುರುಭವನವನ್ನು ರಾಜ್ಯದಲ್ಲೇ ಮಾದರಿಯಾಗಿ ನಿರ್ಮಿಸಲು ಯೋಜನೆ ರೂಪಿಸಿ ಎಂದ ಅವರು, ಸರ್ಕಾರದಿಂದಲೂ ಅಗತ್ಯ ಅನುದಾನ ಕೊಡಿಸಲು ತಾವು ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಪ್ಪೇಗೌಡ, ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ್,ಬಂಗಾರಪೇಟೆ ತಾಲ್ಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜಪ್ಪ, ಶ್ರೀನಿವಾಪುರ ತಾಲ್ಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟಸ್ವಾಮಿ ಮತ್ತಿತರರಿದ್ದರು
.

ತಿಲಕ್ ವಿನಾಯಕ ವಿಸರ್ಜನಾ ಸಮಿತಿಯಿಂದ 20ನೇ ವರ್ಷದ ಭವ್ಯ ಮೆರವಣಿಗೆ:ಕೇಸರಿಮಯವಾದ ಕೋಲಾರ-ಕಲಾತಂಡಗಳ ವೈಭವ-ಸಂಸದ ಮುನಿಸ್ವಾಮಿ ಚಾಲನೆ

ಕೋಲಾರ:- ನಗರದಲ್ಲಿ ಬಾಲಗಂಗಾಧರ ತಿಲಕ್ ವಿನಾಯಕ ವಿಸರ್ಜನಾ ಸಮಿತಿಯಿಂದ ನಡೆದ ಸಾರ್ವಜನಿಕ ಗಣಪತಿ ಮೂರ್ತಿಗಳ ಭವ್ಯ ಮೆರವಣಿಗೆಗೆ ಸಂಸದ ಎಸ್.ಮುನಿಸ್ವಾವಿ, ನಟ ಡಾಲಿ ಧನಂಜಯ್ ಹಾಗೂ ಮಾಜಿ ಸಚಿವ ವರ್ತೂರು ಪ್ರಕಾಶ್ ಚಾಲನೆ ನೀಡಿದರು.
ಬಾಲಗಂಗಾಧರ ತಿಲಕ್ ವಿನಾಯಕ ವಿಸರ್ಜನಾ ಸಮಿತಿಯ 20ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಗಾಂಧಿವನದಲ್ಲಿ ನಿರ್ಮಿಸಿದ್ದ ಬೃಹತ್ ವೇದಿಕೆಯಲ್ಲಿ ಚಾಲನೆ ನೀಡಿದ್ದು, ಮೆರವಣಿಗೆಯ ಉಸ್ತುವಾರಿ ವಹಿಸಿದ್ದ ಬಜರಂಗದಳದ ಬಾಲಾಜಿ,ಬಾಬು, ಡಿ.ಆರ್.ನಾಗರಾಜ್, ಅಪ್ಪಿ,ಪುಟ್ಟು,ಮಂಜುನಾಥ್, ಕೆ.ಎಸ್.ರಾಜೇಂದ್ರ,ಬಿಆರ್‍ಎಂ ಸಂತೋಷ್ ಸೇರಿದಂತೆ ಹಲವಾರು ಮುಖಂಡರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಸಾಂಸ್ಕøತಿಕ ಸಮನ್ವಯತೆಗೆ ಯುವಕರ ಸಂಘಟನೆ


ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಮುನಿಸ್ವಾಮಿ, ನಗರದ ಯುವ ಸಮುದಾಯ ಜಾತಿ ಬೇಧ ಮರೆತು ಒಂದೇ ವೇದಿಕೆಗೆ ಸಂಘಟಿತಗೊಳ್ಳಲು ತಿಲಕ್ ವಿನಾಯಕ ವಿಸರ್ಜನಾ ಸಮಿತಿ ಅವಕಾಶ ಕಲ್ಪಿಸಿಕೊಟ್ಟಿರುವುದು ಸ್ವಾಗತಾರ್ಹ ಎಂದು ತಿಳಿಸಿದರು.
ನಮ್ಮ ಭಾರತೀಯ ಸಂಸ್ಕøತಿ, ಧರ್ಮ, ಪರಂಪರೆ ಉಳಿಸಲು ಯುವಕರು ಸಂಘಟಿತರಾಗಲು ಗಣೇಶನೇ ಅವಕಾಶ ಕಲ್ಪಿಸಿಕೊಟ್ಟಿದ್ದು, ವಿನಾಯಕ ಚೌತಿಯ ಆಚರಣೆಯ ಮೂಲಕ ಯುವಕರ ಸಂಘಟನೆ ಬಲಗೊಳ್ಳಲಿ ಎಂದರು.
ಕೋಲಾರ ಜಿಲ್ಲೆಯಲ್ಲಿ ಮಳೆಯಿಲ್ಲ ಬರಗಾಲ ಕಾಡುತ್ತಿದೆ, ಗಣಪ ಜಿಲ್ಲೆಗೆ ಒಳ್ಳೆಯ ಮಳೆ ತರಿಸಲಿ ಯುವ ಸಮುದಾಯದ ಬದುಕಿಗೆ ದಾರಿ ತೋರಲಿ ಎಂದು ಹಾರೈಸಿದರು.
ಯಾವುದೇ ಕೋಮುಭಾವನೆಗೆ ಪ್ರಚೋದನೆ ನೀಡದೇ ಸೌಹಾರ್ದತೆ ಕಾಪಾಡಿಕೊಳ್ಳಲು ಈ ಕಾರ್ಯಕ್ರಮ ಸಹಕಾರಿಯಾಗಲಿ ಎಂದು ಶುಭ ಕೋರಿದರು.

ಸಾಂಸ್ಕøತಕ,ಕಲಾ ತಂಡಗಳ ಮೆರುಗು


ನಾದಸ್ವರ , ಡೋಲು ಮೆರವಣಿಗೆಯೊಂದಿಗೆ ಸಾಗಿದ್ದು, ಗಾರುಡಿಗೊಂಬೆ, ಕೀಲುಕುದುರೆ, ಕೋಲಾಟ, ಡೊಳ್ಳುಕುಣಿತ, ತಮಟೆ ಕಲಾವಿದರು, ಮೆರವಣಿಗೆಯಲ್ಲಿ ಸಾಗಿ ಬಂದಾಗ 50 ಸಾವಿರಕ್ಕೂ ಮೀರಿದ ಜನಸ್ತೋಮ ರಸ್ತೆಯ ಇಕ್ಕೆಲಗಳಲ್ಲಿ ನಿಂತು ವೀಕ್ಷಿಸಿ ಆನಂದಿಸಿದರು.
ವಿವಿಧ ಬಡಾವಣೆಗಳು ಮತ್ತು ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಪ್ರತಿಷ್ಟಾಪಿಸಿದ ವಿವಿಧ ರೂಪಿ ಗಣಪ ಮೂರ್ತಿಗಳಲ್ಲಿ ಸಾಯಿ ರೂಪಿ ಗಣಪ, ನಾಟ್ಯ ಗಣಪ, ಹನುಮನೊಂದಿಗೆ ನಿಂತ ಗಣಪ, ಶಿವನ ತೊಡೆಯಮೇಲೆ ಗಣಪ, ನಂದಿಯ ಮೇಲೆ ಸವಾರಿ ಮಾಡುತ್ತಿರುವ ಗಣಪ, ಗಣಪ, ವಿಶ್ವರೂಪಿ ಗಣಪ, ಕಾಳಿಂಗ ಮರ್ಧಣ ಗಣಪ ಹೀಗೆ ಹತ್ತಾರು ಮಾದರಿಗಳು ಮೆರವಣಿಗೆಯಲ್ಲಿ ಸಾಗಿ ಬಂದವು.
ಇಡೀ ಮೆರವಣಿಗೆಗೆ ಭಗವಧ್ವಜಗಳನ್ನಿಡಿದ ಯುವಕರು ರಸ್ತೆಯಲ್ಲಿ ಸಾಗಿ ಇಡೀ ಎಂ.ಜಿ.ರಸ್ತೆಕೇಸರಿಮಯವಾಗುವಂತೆ ಮಾಡಿದ್ದರು.ಎಲ್ಲೆಲ್ಲಿಯೂ ಹಾರಾಡಿದ ಭಗವಧ್ವಜಗಳು, ಜಾತಿ, ಮತಗಳ ಬೇಧವಿಲ್ಲದೇ ಎಲ್ಲಾ ಯುವಜನರನ್ನು ಒಂದೇ ವೇದಿಕೆಗೆ ಸಂಘಟಿಸುವಲ್ಲಿ ತಿಲಕ್ ವಿನಾಯಕ ವಿಸರ್ಜನಾ ಸಮಿತಿ ಯಶಸ್ವಿಯಾಯಿತು.
ಭಜರಂಗದಳ, ವಿಹಿಂಪ, ನಗರದ ವಿವಿಧ ಯುವಕ, ಕನ್ನಡ, ಕ್ರೀಡಾ, ಸಮುದಾಯದ ಸಂಘಟನೆಗಳು ತಮ್ಮ ತಮ್ಮ ಬಡಾವಣೆಗಳಲ್ಲಿ ಮತ್ತು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರತಿಷ್ಟಾಪಿಸಿದ್ದ ಎಲ್ಲಾ ಗಣಪ ಮೂರ್ತಿಗಳನ್ನು ಮೆರವಣಿಗೆಗೆ ತರುವ ಮೂಲಕ ಒಂದೇ ವೇದಿಕೆಯಲ್ಲಿ ಮಿಲನಗೊಂಡಿತು.
ಸ್ವಾತಂತ್ರ್ಯ ಹೋರಾಟಕ್ಕಾಗಿ ತಿಲಕರ ಆಶಯವಾಗಿದ್ದ ಈ ಗಣೇಶೋತ್ಸವ ಸಾವಿರಾರು ಮಂದಿ ಯುವಕರನ್ನು ಒಂದೇ ವೇದಿಕೆಯಲ್ಲಿ ಸಂಘಟಿತರಾಗುವಂತೆ ಮಾಡಿ ಧರ್ಮ ರಕ್ಷಣೆಗೆ ಆಶಯಗಳನ್ನು ಸಾಕಾರಗೊಳಿಸಿತು.ನಗರದ ವಿವಿಧ ರಸ್ತೆಗಳಲ್ಲಿ ಮೆರವಣಿಗೆ ಸಾಗಿ ಬಂದಾಗ ಕೆಲವು ಪ್ರದೇಶಗಳಲ್ಲಿ ಮಹಿಳೆಯರು ಪುಷ್ಪವೃಷ್ಟಿ ಸುರಿಸಿ ಸ್ವಾಗತ ಕೋರಿದರು.
ಮೆರವಣಿಗೆಯಲ್ಲಿ 55ಕ್ಕೂ ಹೆಚ್ಚು ವಿವಿಧ ಬಡಾವಣೆ ಹಾಗೂ ಸುತ್ತಮುತ್ತಲ ಗ್ರಾಮಗಳ ಗಣೇಶ ಮೂರ್ತಿಗಳ ಪಲ್ಲಕ್ಕಿಗಳು ಪಾಲ್ಗೊಂಡಿದ್ದುದು ವಿಶೇಷವಾಗಿತ್ತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಚಿತ್ರನಟ ಡಾಲಿ ಧನಂಜಯ್, ಮಾಜಿ ಸಚಿವ ವರ್ತೂರು ಪ್ರಕಾಶ್, ಎಸ್ಪಿ ಡಿ.ದೇವರಾಜ್, ಮುಖಂಡರಾದ ಬೆಗ್ಲಿ ಸೂರ್ಯಪ್ರಕಾಶ್, ಕೆಯುಡಿಎ ಅಧ್ಯಕ್ಷ ವಿಜಯಕುಮಾರ್,ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ, ರಾಜ್ಯ ಅರಣ್ಯ ಅಭಿವೃದ್ದಿ ಸಮಿತಿ ಸದಸ್ಯ ಕೆ.ಎಸ್.ರಾಜೇಂದ್ರ ಮತ್ತಿತರರು ಪಾಲ್ಗೊಂಡಿದ್ದರು.
ಇಡೀ ಕಾರ್ಯಕ್ರಮದ ಉಸ್ತುವಾರಿಯನ್ನು ಬಾಲಗಂಗಾಧರ ತಿಲಕ್ ವಿನಾಯಕ ವಿಸರ್ಜನಾ ಸಮಿತಿಯ ಭಜರಂಗದಳದ ಬಾಲಾಜಿ,ಬಾಬು, ಅಪ್ಪಿ, ಮಂಜುನಾಥ್, ಬಿಜೆಪಿ ಸ್ಲಂಮೋಚಾರ ರಾಜ್ಯ ಕಾರ್ಯದರ್ಶಿ ಕೆ.ಎಸ್.ರಾಜೇಂದ್ರ ಮತ್ತಿತರರು ವಹಿಸಿದ್ದು, ವಿವಿಧ ಸಂಘಟನೆಗಳ ಮುಖಂಡರಾದ ಡಾ.ಶಿವಣ್ಣ, ಡಿ.ಆರ್.ನಾಗರಾಜ್,ವಿಹಿಂಪದ ವೆಂಕಟೇಶ್, ಬಿಜೆಪಿಯ ವಿಶ್ವನಾಥ್, ರವಿ, ಪ್ರಕಾಶ್, ಮಂಜುನಾಥ್, ಸಂಜಯ್, ಶ್ರೀನಿವಾಸ್, ಶಬರಿ, ನರೇಶ್, ಹರೀಶ್, ಕನಕೇಶ್ ನಾಗರಾಜ್, ಗಿರೀಶ್, ಪಿಳ್ಳಿ, ಮುರಳಿ ಮತ್ತಿತರ ನೂರಾರು ಯುವಕರು ವಹಿಸಿದ್ದರು.
ಮೆರವಣಿಗೆ ಎಂ.ಜಿ ರಸ್ತೆ, ಅಮ್ಮವಾರಿಪೇಟೆ ಎಂ.ಬಿ.ರಸ್ತೆ, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ವೃತ್ತ, ಶಾರದಾ ಚಿಂತ್ರಮಂದಿರ ರಸ್ತೆ, ದೊಡ್ಡಪೇಟೆ, ಕಾಲೇಜು ವೃತ್ತ, ಇಟಿಸಿಎಂ ವೃತ್ತಗಳಲ್ಲಿ ಮೆರವಣಿಗೆ ನಡೆಯಿತು.
ಮೆರವಣಿಗೆ ನಡೆದ ರಸ್ತೆ ಹಾಗೂ ವೃತ್ತಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಹಲವೆಡೆ ಬ್ಯಾರಿಕೇಡ್‍ಗಳನ್ನು ಹಾಕಿ ತಾತ್ಕಾಲಿಕವಾಗಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸ್ ಅಧಿಕಾರಿಗಳು ನಿಯಮಿತವಾಗಿ ಗಸ್ತು ನಡೆಸಿದರು.

ಶಾಸಕ ರಮೇಶ್ ಕುಮಾರ್ ವಿರುದ್ಧ – ಮಾಜಿ ಶಾಸಕ ಜಿ.ಕೆ ವೆಂಕಟಶಿವಾರೆಡ್ಡಿ ವಾಗ್ದಾಳಿ

ಶ್ರೀನಿವಾಸಪುರ : ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಕೆಳದ ಒಂದು ವಾರದಿಂದ ಸತತವಾಗಿ ಬೀಳುತ್ತಿರುವ ಮಳೆಗೆ ರೈತರ ಬೆಳೆಗಳು ನಷ್ಟವಾಗಿದ್ದರೂ ಅಧಿಕಾರಿಗಳನ್ನಾಗಲಿ ಜಿಲ್ಲಾಡಳಿತವನ್ನು ಸ್ಥಳಕ್ಕೆ ಕರೆದುಕೊಂಡು ಬಂದು ಪರಿಹಾರ ಕೊಡಿಸುವಲ್ಲಿ ಸ್ಥಳೀಯ ಶಾಸಕರು ವಿಫಲರಾಗಿದ್ದಾರೆ ಎಂದು ಶಾಸಕ ಕೆ.ಆರ್ ರಮೇಶ್ ಕುಮಾರ್ ವಿರುದ್ಧ ಮಾಜಿ ಶಾಸಕ ಜಿ.ಕೆ ವೆಂಕಟಶಿವಾರೆಡ್ಡಿ ವಾಗ್ದಾಳಿ ನಡೆಸಿದರು .
ತಾಲೂಕಿನ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಹೋಳೂರು ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಯಾಗಿರು ರೈತರ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಈ ಸಂದರ್ಭದಲ್ಲಿ ಸ್ಥಳೀಯ ರೈತರು ಹಾಗೂ ಮುಖಂಡರು ಕೋಲಾರ ಮತ್ತು ಶ್ರೀನಿವಾಸಪುರ ಮಾರ್ಗದ ಮುದುವಾಡಿ ಕೆರೆಗೆ ಹೆಚ್ಚು ಮಳೆಯಾದಗ ಕೊಡಿಯ ನೀರಿನಿಂದಾಗಿ ವಾಹನಗಳು ಓಡಾಡಲು ಕಷ್ಟವಾಗಿತ್ತಾ ಇದ್ದು ಪರ್ಯಾಯಯವಾಗಿ ಬೆಳ್ಳಂಬರಿ ಮಾರ್ಗವಾಗಿ ಹೋಗುವಾಗ ರಾಜಕಾಲುವೆ ದುರಸ್ತಿ ಇಲ್ಲದೇ ನೀರು ರಸ್ತೆಯಲ್ಲಿ ಬರುತ್ತಾ ಇದೆ .
ಕೆಸಿ ವ್ಯಾಲಿ ನೀರಿನಿಂದಾಗಿ ಹೋಳೂರು ಕೆರೆಯ ಅಚ್ಚುಕಟ್ಟು ಪ್ರದೇಶವಾದ ಕಾನಿಯಲ್ಲಿ ನೀರು ತುಂಬಿಕೊಂಡಿದ್ದು ಇದರಿಂದಾಗದಿ ಅಪಾರವಾದ ಬೆಳೆ ನಷ್ಟವಾಗಿದೆ ಎಂದು ಮಾಜಿ ಶಾಸಕರ ಗಮನಕ್ಕೆ ರೈತರು ತಂದರು ಈ ಸಂದರ್ಭದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ನವಾಗಿದ್ದು ಈ ಬಗ್ಗೆ ಗಮನ ಹರಿಸಿ ಸರಕಾರದಿಂದ ಪರಿಹಾರ ಕೊಡಿಸಬೇಕಾದ ಶಾಸಕರು ರೈತರ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ ಎ೦ದರು.
ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಬೆಳೆ ನಾಶವಾಗಿದೆ ಶಾಸಕರು ಸಂಬಂಧಪಟ್ಟ ಅಧಿಕಾರಿಗಳನ್ನು ರೈತರ ಜಮೀನಿಗಳಿಗೆ ಕರೆದುಕೊಂಡು ಹೋಗಿ ರೈತರ ಸಮಸ್ಯೆಗಳನ್ನು ಅಧಿಕಾರಿಗಳಿಗೆ ಮನವರಿಕೆ ಮಾಡಿಸಬೇಕಾಗಿತ್ತು ಆದರೆ ಶಾಸಕರು ರೈತರ ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತಾ ಇರುವುದು ಎದ್ದು ಕಾಣುತ್ತಾ ಇದೆ ಕೋಲಾರ ಜಿಲ್ಲೆಯಲ್ಲಿ ಮಳೆಯಿಂದಾಗಿ ಕೋಟ್ಯಾಂತರ ರೂಪಾಯಿ ಮೌಲ್ಯದ ಬೆಳೆಗಳಿಗೆ ಹಾನಿಯಾಗಿದೆ ರಾಜ್ಯ ಸರ್ಕಾರ ಕೊಡುವ ಪರಿಹಾರದ ಮೊತ್ತದಿಂದ ರೈತರ ಕಣ್ಣೀರು ಹೊರೆಸುವ ಕೆಲಸ ಆಗುವುದಿಲ್ಲ .
ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಚರ್ಚಿಸಿ ನ೦ತರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಬಳಿಗೆ ನಿಯೋಗ ತರೆಳಿ ಹೆಚ್ಚಿನ ಪರಿಹಾರ ಮೊತ್ತವನ್ನು ಕೊಡುವಂತೆ ಒತ್ತಾಯಿ ಸಲಾಗುವುದು ಎಂದು ಇದೇ ಸಂದರ್ಭ ದಲ್ಲಿ ತಿಳಿಸಿದರು .
ಕೋಲಾರ ಜಿಲ್ಲೆಯಾದ್ಯಂತ ಮಳೆಯಿಂದಾಗಿ ಇಷ್ಟು ಎಲ್ಲಾ ದೊಡ್ಡ ಪ್ರಮಾಣದಲ್ಲಿ ನಷ್ಟವಾಗಿದ್ದರೂ ಜಿಲ್ಲಾಡಳಿತ ಅಥವಾ ಜನ ಪ್ರತಿನಿಧಿ ಗಳಾಗಲಿ ಗಮನ ಹರಿಸದೇ ರೈತರನ್ನು ನಿರ್ಲಕ್ಷ್ಯ ತೋರಿದ್ದಾರೆ.
ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ತೂಪಲ್ಲಿ ನಾರಾಯಣ ಸ್ವಾಮಿ , ತಾಪಂ ಮಾಜಿ ಸದಸ್ಯ ಜಡೇರಿ ಗೋಪಾಲಗೌಡ , ಎಪಿಎಂಸಿ ವಾಜಿ ನಿರ್ದೇಶಕ ಹೊಳೂರು ನಾರಾಯಣ ಸ್ವಾಮಿ , ಮುಖಂಡರಾದ ಜನಪನಹಳ್ಳಿ ಆನಂದ್ , ಹೋಳೂರು ಸಂತೋಷ್ , ಎಚ್.ಎಸ್ ರೆಡ್ಡಿ , ಶ್ರೀರಾಮಪ್ಪ , ಮನು , ವಿವೇಕ್ , ರಮೇಶ್ , ಶುಭಾ , ಮುಂತಾದವರು ಇದ್ದರು
.

ರಾಜಕೀಯ ವಿಶ್ಲೇಷಣೆಯಲ್ಲಿ ಪಳಗಿದ ಆರ್.ಪಿ.ಜಗದೀಶ್ ಅವರಿಗೆ ಕೆಯುಡಬ್ಲ್ಯೂಜೆ ಗೌರವ-ಕೇವಲ ಗ್ಲಾಮರ್ ಗಾಗಿ ಪತ್ರಕರ್ತರಾಗದಿರಲು ಕರೆ

ಬೆಂಗಳೂರು : ಮೂರೂವರೆ ದಶಕಗಳ ಕಾಲ ಒಂದೇ ಪತ್ರಿಕೆಯಲ್ಲಿ ಕೆಲಸ ಮಾಡುವುದು ನಿಜಕ್ಕೂ ಸವಾಲಿನ ಕೆಲಸ. ಪ್ರಜಾವಾಣಿ ಪತ್ರಿಕೆಗೆ ವರದಿಗಾರನಾಗಿ ಸೇರಿ, ಮುಖ್ಯ ವರದಿಗಾರರಾಗಿ, ಸಂಪಾದಕರಾಗಿ ನಿವೃತ್ತಿ ಹೊಂದಿದ ಆರ್.ಪಿ.ಜಗದೀಶ್ ಅವರಿಗೆ ಎಪ್ಪತ್ತೈದು ವಸಂತಕ್ಕೆ ಕಾಲಿಡುವ ಸಂಭ್ರಮ.
ಸತತವಾಗಿ ನಾಲ್ಕು ದಶಕಗಳ ಕಾಲ ಪತ್ರಕರ್ತರಾಗಿ ಸುದ್ದಿ ಮನೆಯಲ್ಲಿದ್ದ ಆರ್.ಪಿ.ಜಗದೀಶ್ ಅವರನ್ನು ಸ್ವಾತಂತ್ರ್ಯತ್ಸವದ‌ ಅಮೃತ ಮಹೋತ್ಸವ ಅಂಗವಾಗಿ ಅವರ ಮನೆಯಂಗಳದಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಜಾವಾಣಿ ಪತ್ರಿಕೆಯಲ್ಲಿ ಆರ್.ಪಿ.ಜಗದೀಶ್ ಅವರು ತಮ್ಮ ರಾಜಕೀಯ ವಿಶ್ಲೇಷಣೆಗಳನ್ನು ಕಾದು ಓದುವಷ್ಟರ ಮಟ್ಟಿಗೆ ವಿಭಿನ್ನ ಪ್ರಭಾವವನ್ನು ಸೃಷ್ಟಿಸಿದ್ದರು. ಈಗಲೂ ರಾಜಕೀಯ ವಿದ್ಯಮಾನಗಳಿಗೆ ಪ್ರತಿಕ್ರಿಯಿಸುವಷ್ಟು ಕ್ರಿಯಾಶೀಲತೆಯನ್ನು ಉಳಿಸಿಕೊಂಡಿದ್ದಾರೆ ಎಂದರು.
ಕೆಯುಡಬ್ಲ್ಯೂಜೆ ಸದಸ್ಯರಾಗಿ, ಪದಾಧಿಕಾರಿಯಾಗಿ ಸಂಘಟನೆ ಜೊತೆಗೆ ಸತತವಾಗಿ ಬಾಂಧವ್ಯವನ್ನು ಬೆಳೆದುಕೊಂಡು ಬಂದಿರುವ ಜಗದೀಶ್ ಅವರು, ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದವರು ಎಂದು ಅವರ ಸೇವೆ ಸ್ಮರಿಸಿದರು.
ಕೆಯುಡಬ್ಲ್ಯೂಜೆ ಗೌರವ ಸ್ವೀಕರಿಸಿ ಮಾತನಾಡಿದ ಆರ್.ಪಿ.ಜಗದೀಶ್, ನಾನು ಲೆಕ್ಚರರ್ ಆಗಲು ಹೊರಟವನು. ಒಂದು ಗೀಳಿಗೆ ಕಟ್ಟು ಬಿದ್ದು ಪತ್ರಕರ್ತನಾದೆ. ಲೋಕವಾಣಿ ಮೂಲಕ ಪ್ರಜಾವಾಣಿ ಸೇರಿದೆ ಎಂದು ವೃತ್ತಿ ಪ್ರವೇಶ ದಿನಗಳನ್ನು ನೆನೆದರು.
ಪತ್ರಕರ್ತ ಆಗಬೇಕು ಎಂಬ ಹಂಬಲದಿಂದ ಬರುತ್ತಿದ್ದರು. ಆದರೆ ಈಗ ಕಾಲಘಟ್ಟ ಬದಲಾಗಿದ್ದು ಮನೋಭಾವ, ಧ್ಯೇಯ ಉದ್ದೇಶಗಳು ವಿಭಿನ್ನವಾಗಿವೆ. ಮಾಧ್ಯಮ ಕ್ಷೇತ್ರ ಕೂಡ ವಿಸ್ತಾರವಾಗಿದೆ. ವೃತ್ತಿಯಲ್ಲಿ ಮೌಲ್ಯದ ಬೆಳಕು ಹೆಚ್ಚಾಗುವಂತ ಕೆಲಸವನ್ನು ಸಂಘಟನೆಯ ಮೂಲಕ ಮಾಡಬೇಕು‌ ಎಂದರು.
ಕೋವಿಡ್ ಕಾಲಘಟ್ಟದಲ್ಲಿ ಕೆಯುಡಬ್ಲ್ಯೂಜೆ ಪತ್ರಕರ್ತರ ಕುಟುಂಬಕ್ಕೆ ತಲಾ 5 ಲಕ್ಷ ರೂ ಪರಿಹಾರ ಕೊಡಿಸಿರುವುದು ಶ್ಲಾಘನೀಯ ಕೆಲಸ ಎಂದರು. ಶಿವಾನಂದ ತಗಡೂರು ಅಧ್ಯಕ್ಷರಾದ ಮೇಲೆ ನಾನು ಗಮನಿಸಿದಂತೆ ಪತ್ರಕರ್ತರ ಹಿತ ಕಾಯುವ ಮತ್ತು ಕ್ಷೇಮಾಭಿವೃದ್ಧಿಗೆ ಅತಿ ಹೆಚ್ಚು ಆದ್ಯತೆ ನೀಡುವ ಕೆಲಸ ಮಾಡಿದ್ದಾರೆ ಎಂದರು.
ಪತ್ರಕರ್ತರು ಗ್ಲಾಮರ್ ಬೆನ್ನತ್ತುವುದು ಸರಿಯಲ್ಲ. ಇದೊಂದು ಸೇವೆ ಎನ್ನುವ ಭಾವನೆಯಿಂದ ಕೆಲಸ‌ ಮಾಡಿದರೆ ಮಾತ್ರ ಎತ್ತರಕ್ಕೆ ಬೆಳೆಯಲು ಸಾಧ್ಯ. ಅದ್ದರಿಂದ ವೃತ್ತಿ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಕೆಲಸ ಮಾಡುವಂತೆ ಕರೆ ನೀಡಿದರು. ಬೆಂಗಳೂರು ನಗರ ಘಟಕದ ಸೋಮಶೇಖರ್ ಗಾಂಧಿ, ಜುಕ್ರೀಯ, ಹರೀಶ್ ಮತ್ತಿತರರು ಹಾಜರಿದ್ದರು.

ಗುರುಭವನ ನಿರ್ಮಾಣಕ್ಕೆ ಅಗತ್ಯ ಅನುದಾನ, ಶಿಕ್ಷಕರ ಸಂಘಟನೆಗಳಿಗೆ ಸಂಸದ ಮುನಿಸ್ವಾಮಿ ಭರವಸೆ

ಕೋಲಾರ:- ಗುರುಭವನ ನಿರ್ಮಾಣಕ್ಕೆ ಅಗತ್ಯವಾದ ಆರ್ಥಿಕ ನೆರವನ್ನುಸಂಸದರು,ಶಾಸಕರು,ವಿಧಾನಪರಿಷತ್ ಸದಸ್ಯರ ನಿಧಿ ಸೇರಿದಂತೆ ಸರ್ಕಾರದಿಂದಲೂ ಅಗತ್ಯ ಅನುದಾನ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಸಂಸದ ಎಸ್.ಮುನಿಸ್ವಾಮಿ ಭರವಸೆ ನೀಡಿದರು.
ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಆಹ್ವಾನಪತ್ರಿಕೆ ನೀಡಲು ಆಗಮಿಸಿದ್ದ ಶಿಕ್ಷಕರ ಸಂಘಟನೆಗಳ ಮುಖಂಡರಿಗೆ ಈ ಭರವಸೆ ನೀಡಿದ ಅವರು, ಗುರುಭವನಕ್ಕೆ ಸೂಚಿಸಿರುವ ಜಾಗದಲ್ಲೇ ಶಿಕ್ಷಕರ ದಿನಾಚರಣೆ ಆಚರಿಸುವುದು ಮತ್ತು ಅಂದೇ ಗುರುಭವನಕ್ಕೆ ಶಿಲಾನ್ಯಾಸ ಮಾಡಲು ತಿಳಿಸಿದ್ದೆ ಎಂದರು.
ನಿರಂತರ ಮಳೆ ಹಾಗೂ ಸಿದ್ದತೆಗಳ ಕೊರತೆಯಿಂದಾಗಿ ಸೆ.5 ರಂದು ಶಿಲಾನ್ಯಾಸ ಕಾರ್ಯಕ್ರಮ ಕೈಬಿಟ್ಟಿದ್ದು, ಮುಂದಿನ ದಿನಗಳಲ್ಲಿ ಶಿಲಾನ್ಯಾಸಕ್ಕೆ ಸಿದ್ದತೆ ಮಾಡುವುದಾಗಿ ಶಿಕ್ಷಕರ ಸಂಘದ ಮುಖಂಡರು ತಿಳಿಸಿದರು.
ಸಂಸದ ಮುನಿಸ್ವಾಮಿ ಮಾತನಾಡಿ, ಗುರುಭವನ ಕಾಮಗಾರಿ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಇದು ಸರಿಯಲ್ಲ ಎಂದ ಅವರು, ಅನುದಾನದ ಕೊರತೆ ಇದ್ದರೆ ನನ್ನ ಗಮನಕ್ಕೆ ತನ್ನಿ ನನ್ನ ಸಂಸದರ ಅನುದಾನ, ಶಾಸಕರ,ವಿಧಾನಪರಿಷತ್ ಸದಸ್ಯರ ಅನುದಾನ ಕ್ರೋಢೀಕರಿಸಿ ಗುರುಭವನ ನಿರ್ಮಿಸೋಣ ಎಂದರು.
ಗುರುಭವನವನ್ನು ರಾಜ್ಯದಲ್ಲೇ ಮಾದರಿಯಾಗಿ ನಿರ್ಮಿಸಲು ಯೋಜನೆ ರೂಪಿಸಿ ಎಂದ ಅವರು, ಸರ್ಕಾರದಿಂದಲೂ ಅಗತ್ಯ ಅನುದಾನ ಕೊಡಿಸಲು ತಾವು ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಪ್ಪೇಗೌಡ, ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ್, ತಾಲ್ಲೂಕು ಗೌರವಾಧ್ಯಕ್ಷ ಎಂ.ಎನ್.ಶ್ರೀನಿವಾಸಮೂರ್ತಿ,ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಮುರಳಿಮೋಹನ್,ಮುಖ್ಯಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಶ್ರೀನಿವಾಸ್, ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಕೆಂಬೋಡಿ ರವಿ ಮತ್ತಿತರರಿದ್ದರು.

ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಡೆಸುವುದರ ಮೂಲಕ ಜನರ ವಿಶ್ವಾಸ ಗಳಿಸಬೇಕು:ವೆಂಕಟರೆಡ್ಡಿ

ಶ್ರೀನಿವಾಸಪುರ: ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಡೆಸುವುದರ ಮೂಲಕ ಜನರ ವಿಶ್ವಾಸ ಗಳಿಸಬೇಕು ಎಂದು ನಿವೃತ್ತ ಬೆಸ್ಕಾಂ ಎಂಜಿನಿಯರ್ ವೆಂಕಟರೆಡ್ಡಿ ಹೇಳಿದರು.
ಪಟ್ಟಣದ ತಾಲ್ಲೂಕು ಬೆಸ್ಕಾಂ ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷ ಕೆ.ಮೋಹನಾಚಾರಿ ಅವರ ನಿವಾಸದಲ್ಲಿ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ, ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ವಿದ್ಯುತ್ ಎಲ್ಲ ವರ್ಗದ ಜನರಿಗೆ ಅತ್ಯಗತ್ಯವಾಗಿದೆ. ಇಲಾಖೆ ಉತ್ತಮ ಗುಣಮಟ್ಟದ ಸೇವೆ ನಿರೀಕ್ಷಿಸಿ ಗುತ್ತಿಗೆ ನೀಡುತ್ತದೆ. ಇಲಾಖೆಗೆ ಒಳ್ಳೆ ಹೆಸರು ತರುವ ಕಾರ್ಯ ಗುತ್ತಿಗೆದಾರರಿಂದ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ತಾಲ್ಲೂಕು ವಿದ್ಯುತ್ ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷ ಕೆ.ಮೋಹನಾಚಾರಿ ಮಾತನಾಡಿ, ಎಂಜಿನಿಯರ್ ವೆಂಕಟರೆಡ್ಡಿ ಸಮಾಜ ಮುಖಿಯಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ಸೇವಾವಧಿಯಲ್ಲಿ ಕಳಪೆ ಕಾಮಗರಿಯೊಂದಿಗೆ ರಾಜಿಯಾದವರಲ್ಲ. ಪರಿಣಾಮಕಾರಿ ಕಾರ್ಯನಿರ್ವಹಣೆ ಮೂಲಕ ಗ್ರಾಮೀಣ ಪ್ರದೇಶದ ರೈತರು ಹಾಗೂ ಇತರ ವಿದ್ಯುತ್ ಗ್ರಾಹಕರ ಗೌರವಕ್ಕೆ ಪಾತ್ರರಾಗಿದ್ದರು ಎಂದು ಹೇಳಿದರು. ಪುರಸಭೆ ಮಾಜಿ ಸದಸ್ಯೆ ಕೆ.ಶಾರದಮ್ಮ, ಉಮಾಕಾಂತ್ ಇದ್ದರು.

ಕಂದಾವರ ಹಾಲು ಉತ್ಪಾದಕರ ಸಹಕಾರ ಸಂಘ ನಿ., ಕಂದಾವರ ವಾರ್ಷಿಕ ಸಾಮಾನ್ಯ ಸಭೆ


ಕಂದಾವರ ಹಾಲು ಉತ್ಪಾದಕರ ಸಹಕಾರ ಸಂಘ ನಿ., ಕಂದಾವರ ಇದರ 2021-22ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ದಿನಾಂಕ 22-08-2022ರಂದು ಸಂಘದ ವಠಾರದಲ್ಲಿ ನಡೆಯಿತು. ಸಂಘದ ಕಾರ್ಯದರ್ಶಿ ದೇವೇಂದ್ರ ಎನ್. ಉಗ್ರಾಣಿಯವರು ಸಂಘದ ವ್ಯವಹಾರ ಮತ್ತು ಆಡಳಿತ ವರದಿಯನ್ನು ಮಂಡಿಸಿದರು ಸಂಘದ ನಿರ್ದೇಶಕರಾದ ಎಸ್. ಜನಾರ್ಧನರವರು ಸ್ವಾಗತಿಸಿದರು. ಒಕ್ಕೂಟದ ಉಪ ವ್ಯವಸ್ಥಾಪಕರಾದ ಡಾ. ಮಾಧವ ಐತಾಳ್‍ರವರು ಪಶು ಆಹಾರ ಬಳಕೆ, ರಾಸುಗಳ ನಿರ್ವಹಣೆ ಮತ್ತು ಹಸುವಿನ ವಿಮೆ ಖನಿಜ ಮಿಶ್ರಣ ಬಳಕೆ ಬಗ್ಗೆ ಮಾಹಿತಿ ನೀಡಿದರು. ಒಕ್ಕೂಟದ ವಿಸ್ತರಣಾಧಿಕಾರಿ ಉಮೇಶ ಕುಂದರ್‍ರವರು ಹಾಲಿನ ಗುಣ ಮಟ್ಟ ಶುದ್ಧ ಹಾಲು ಉತ್ಪಾದನೆ ಮತ್ತು ಹಾಲಿನ ಉತ್ಪನ್ನಗಳನ್ನು ಬಳಸುವ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿ ಎಸ್. ರತ್ನಾಕರರವರು ಸಂಘವು ವರದಿ ಸಾಲಿನಲ್ಲಿ 2,36,176.70 ಪೈಸೆ ನಿವ್ವಳ ಲಾಭಾಂಶ ಬಂದಿರುತ್ತದೆ ಮತ್ತು ಹಾಲು ಉತ್ಪಾದಕ ಸದಸ್ಯರಿಗೆ 65% ಬೋನಸ್ ಹಾಗೂ 20% ಡಿವಿಡೆಂಡನ್ನು ನೀಡಲಾಗುವುದೆಂದು ತಿಳಿಸಿದರು ಹಾಗೂ ಎಲ್ಲಾ ಸದಸ್ಯರಿಗೆ ಬಹುಮಾನ ನೀಡಲಾಯಿತು.

ಕುಂದಾಪುರ ಸಂತ ಜೋಸೆಫ್ ವಿದ್ಯಾಸಂಸ್ಥೆಗೆ ಅಪಾಸ್ಟೋಲಿಕ್ ಕಾರ್ಮೆಲ್ ಶಿಕ್ಷಣ ಸಂಸ್ಥೆಯ ಸುಪೀರಿಯರ್ ಜನರಲ್ ಭಗಿನಿ ಮರಿಯಾ ನಿರ್ಮಲಿನಿ ಭೇಟಿ.



ಕುಂದಾಪುರ ಸಂತ ಜೋಸೆಫ್ ವಿದ್ಯಾ ಸಂಸ್ಥೆಗೆ ಆಗಮಿಸಿದ ಅಪೋಸ್ತಲಿಕ್ ಕಾರ್ಮೆಲ್ ಸಂಸ್ಥೆಯ ಸುಪಿರಿಯರ್ ಜನರಲ್ ಹಾಗೂ ಕಾರ್ಮೆಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿರುವ ಭಗಿನಿ ಮರಿಯ ನಿರ್ಮಲಿನಿ ಇವರನ್ನು ಶಾಲಾ ವಾದ್ಯ ವೃಂದದೊಂದಿಗೆ ಬರಮಾಡಿಕೊಳ್ಳಲಾಯಿತು. ಶಾಲಾ ಶಿಕ್ಷಕರನ್ನು ಭೇಟಿ ಮಾಡಿದ ಭಗಿನಿ ಮರಿಯಾ ನಿರ್ಮಲಿನಿ ಮಾತನಾಡಿ ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು.
ಶಿಕ್ಷಕರಾದವರು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದರು. ಶಾಲಾ ಜಂಟಿ ಕಾರ್ಯದರ್ಶಿಯರಾದ ಭಗಿನಿ ಆಶಾ ಇವರು ಸ್ವಾಗತಿಸಿದರು. ಕಾನ್ವೆಂಟಿನಾ ಸುಪಿರಿಯರ್ ಭಗಿನಿ ಸಂಗೀತ ಇವರು ಶುಭ ಹಾರೈಸಿದರು. ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿ ಭಗಿನಿ ಪ್ರೇಮಿಕಾ , ಶಿಕ್ಷಕ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯನಿ ಭಗಿನಿ ಐವಿ ಇವರು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಅಶೋಕ್ ದೇವಾಡಿಗ ಇವರು ವಂದಿಸಿದರು
.