ಕೋಲಾರ ಜಿಲ್ಲೆಯ ಹಲವು ಸಮಸ್ಯೆಗಳ ವಿಚಾರವಾಗಿ ಹೆಚ್.ಡಿ.ಕುಮಾರಸ್ವಾಮಿಗೆ ಕೆ.ಎನ್.ರವೀಂದ್ರನಾಥ್ ಮನವಿ

ಕೋಲಾರ ಸೆಪ್ಟೆಂಬರ್ 18 : ಕೋಲಾರ ಜಿಲ್ಲೆಯ ಹಲವು
ಸಮಸ್ಯೆಗಳ ವಿಚಾರವಾಗಿ ಮಾಜಿ ಮುಖ್ಯಮಂತ್ರಿ
ಹೆಚ್.ಡಿ.ಕುಮಾರಸ್ವಾಮಿರವರಿಗೆ ಸಾಮಾಜಿಕ ಕಾರ್ಯಕರ್ತ ಗೌರಿಪೇಟೆ
ಕೆ.ಎನ್.ರವೀಂದ್ರನಾಥ್ ರವರು ಮನವಿ ಸಲ್ಲಿಸಿದರು.
ಮೊದಲನೇಯದಾಗಿ ಮೇಕೆದಾಟು ಯೋಜನೆಯನ್ನು
ಅನುμÁ್ಠನಗೊಳಿಸಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ
ಕುಡಿಯುವ ನೀರನ್ನು ಪೂರೈಸಲು ಯೋಜನೆಯನ್ನು
ರೂಪಿಸಲು ಎರಡನೇಯದಾಗಿ ಕೋಲಾರ ಜಿಲ್ಲೆಗೆ ಸರ್ಕಾರಿ
ವೈದ್ಯಕೀಯ ಕಾಲೇಜು ಮತ್ತು ಸೂಪರ್ ಸ್ಪೆಷಲಿಟಿ
ಆಸ್ಪತ್ರೆಯನ್ನು ಮಂಜೂರು ಮಾಡುವ ಮತ್ತು
ಮೂರನೆಯದಾಗಿ ಕೋಲಾರ ನಗರಸಭೆಯಲ್ಲಿ 418 ವಿವಿಧ
ಹುದ್ದೆಗಳು ಮಂಜೂರಾತಿ ಇದ್ದು ಇದರಲ್ಲಿ 275 ಮಂದಿ
ಕಾರ್ಯನಿರ್ವಹಿಸುತ್ತಿದ್ದು ಬಾಕಿ ಇರುವ 143 ಹುದ್ದೆಗಳನ್ನು
ಶೀಘ್ರವಾಗಿ ತುಂಬುವಂತೆ ಕೋರಿ ಮನವಿ ಪತ್ರ ಸಲ್ಲಿಸಿದರು.
ಕೋಲಾರ ಜಿಲ್ಲೆಯ ಅಂತರ್ಜಲ ವಿಷಯುಕ್ತವಾಗಿದ್ದು ಅನೇಕ
ವಿಷಕಾರಿಯ ಲವಣಾಂಶಗಳನ್ನು, ಆರೋಗ್ಯಕ್ಕೆ
ಹಾನಿಕರವಾಗಿರುವ ಫೆÇ್ಲೀರೈಡ್, ಆ ರ್ಸಿನಿಕ್ ಮಟ್ಟಕಿಂತ ಅತಿ ಹೆಚ್ಚು
ಪ್ರಮಾಣದಲ್ಲಿ ಹೊಂದಿದ್ದು ಕುಡಿಯುಲು ಯೋಗ್ಯವಲ್ಲದಂತಾಗಿದೆ.
ಸರ್ಕಾರವು ನಿರ್ಮಿಸುತ್ತಿರುವ ನೀರು ಶುದ್ಧಿಕರಣ
ಘಟಕಗಳನ್ನು ಸಹ ಈ ಅಧಿಕ ಪ್ರಮಾಣದ ರಾಸಾಯನಿಕ ಮತ್ತು
ಲವಣಗಳ ಪರಿಣಾಮವಾಗಿ 2-3ತಿಂಗಳಲ್ಲಿಯೇ ನೀರು ಶುದ್ಧಿಕರಿಸುವ
ಪಿಲಮೆಂಟ್‍ಗಳನ್ನು ಬದಲಾಯಿಸಬೇಕಾಗಿದ ಅನಿವಾರ್ಯ
ಪರಿಸ್ಥಿತಿಯನ್ನು ಎದುರಿಸುತ್ತಿವೆ. ಖಔ ಪ್ಲಾಂಟ್‍ಗಳು ಕಡಿಮೆ
ಅವಧಿಯಲ್ಲಿಯೇ ಕೆಟ್ಟು ನಿಲ್ಲುತ್ತಿವೆ. ಇದರ ಪರಿಣಾಮವಾಗಿ ಜನರಿಗೆ
ಶುದ್ಧ ಆರೋಗ್ಯಕ್ಕೆ ಹಾನಿಕರವಲ್ಲದ ಕುಡಿಯುವ ನೀರನ್ನು
ಒದಗಿಸುವ ಈ ಯೋಜನೆ ನಿರೀಕ್ಷಿತ ಯಶಸ್ಸನ್ನು ಕಾಣದೆ. ಇದು ನದಿ
ನೀರನ್ನು ಹರಿಸಬೇಕಾಗುವ ಅನಿವಾರ್ಯತೆಯನ್ನು ಸಾರಿ ಹೇಳಿತ್ತಿದೆ.
ಸರ್ಕಾರವು ತಕ್ಷಣ ಮೇಕೆದಾಟು ಯೋಜನೆಯನ್ನು ಪ್ರಾರಂಭಿಸಿ
ಅನುμÁ್ಠನ ಗೊಳಿಸುವಂತೆ ಒತ್ತಡ ಏರಿ ಕೋಲಾರ ಮತ್ತು
ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಈ ಯೋಜನೆ ಅನುಕೂಲ ಮಾಡಲು
ಕೋರಿದರು.
ಕೋಲಾರವು ಜಿಲ್ಲಾ ಕೇಂದ್ರವಾಗಿದ್ದರೂ ಸಹ
ಸುಸಜ್ಜಿತವಾದ ಸರ್ಕಾರಿ ಸೂಪರ್ ಸ್ಪೆಷಲಿಟಿ ಆಸ್ಪತ್ರೆ ಮತ್ತು ಸರ್ಕಾರಿ
ವ್ಯದ್ಯಕೀಯ ಕಾಲೇಜು ಇಲ್ಲದ ಕಾರಣ ಇಂತಹ ರೋಗಗಳಿಗೆ
ಚಿಕಿತ್ಸೆ ಪಡಿಯಲು ಸಾಧ್ಯವಾಗುತ್ತಿಲ್ಲ. ಈ ಭಾಗದ ಶೇ.90% ಜನರು
ಹಣಕಾಸಿನಲ್ಲಿ ಸ್ಥಿತಿವಂತರಲ್ಲದ ಕಾರಣ ಖಾಸಿಗಿ ಆಸ್ಪತ್ರೆಗಳಿಗೆ ಹೋಗಿ,
ಹಣವನ್ನು ಕೊಟ್ಟು ಚಿಕಿತ್ಸೆಯನ್ನು ಪಡಿಯುವ ಸ್ಥಿತಿಯಲ್ಲಿ
ಇರುವುದಿಲ್ಲ.ಕೋಲಾರದ ಹೊರವಲಯದಲ್ಲಿ ಸರ್ಕಾರದ
ಕಮಲಾ ನೆಹರು ಸಾನಿಟೋರಿಯಂ ಎಂಬ ಕ್ಷಯ ಆಸ್ಪತ್ರೆಅನ್ನು
ಸುಮಾರು 50 ಎಕ್ಕರೆ ಜಾಗದಲ್ಲಿ ನಿರ್ಮಿಸಲು ಸರ್ಕಾರದ ಗಮನಕ್ಕೆ
ವಿಧಾನ ಮಂಡಲದ ಅಧಿವೇಶನದಲ್ಲಿ ತರುವಂತೆ ಕೋರಿದರು.
ಕೋಲಾರದಲ್ಲಿ ಸುಮಾರು ಎರಡು ಲಕ್ಷದಷು ಜನರು
ವಾಸವಾಗಿದ್ದು 35 ವಾರ್ಡ್‍ಗಳು ಇರುತ್ತವೆ. ನಗರವು ಅತಿ ವೇಗವಾಗಿ
ಬೆಳಯುತ್ತಿದ್ದು ನಗರಸಭೆಯಲ್ಲಿ ಅಗತ್ಯ ಸಿಬ್ಬಂದಿಯ
ಕೊರತೆ ಇರುವದರಿಂದ ಮೂಲಭೂತ ಸಮಸ್ಯೆಗಳಾದ ರಸ್ತೆ,
ದೀಪಗಳು, ಒಳಚರಂಡಿ ವ್ಯವಸ್ಥೆ, ಡ್ರೈನೇಜ್, ಕುಡಿಯುವ
ಹಾಗೂ ದಿನಬಳಕೆಯ ನೀರಿನ ವ್ಯವಸ್ಥೆ, ರಸ್ತೆ ಹಾಗೂ

ಬಡಾವಣೆಗಳಲ್ಲಿನ ಕಸ ವಿಲೇವಾರಿ ಸರಿಯಾಗಿ ಆಗದೇ ನಿವಾಸಿಗಳು
ಪರೀತಪ್ಪಿಸುವಂತೆ ಆಗಿದೆ. ಅಧಿಕಾರಿಗಳು, ಆಡಳಿತ ಸಿಬ್ಬಂದಿ, ಗ್ರೂಪ್ ‘ಸಿ ‘
ಮತ್ತು ‘ ಡಿ ‘ ಗ್ರೂಪ್ ನೌಕರರನ್ನು ಒಳಗೊಂಡಂತೆ ಒಟ್ಟು 418
ಹುದ್ದೆಗಳ ಮಂಜೂರಾತಿ ಇದ್ದು, ಇದರ ಪೈಕಿ 275 ಹುದ್ದೆಗಳ
ಭರ್ತಿಯಾಗ್ಗಿದು 143 ಹುದ್ದೆಗಳು ಖಾಲ್ಲಿ ಇರುತ್ತವೆ. ಎಲ್ಲಾ
ಅವಲೋಕಿಸಿ ಖಾಲ್ಲಿ ಇರುವಂತಹ ಎಲ್ಲಾ 143 ಹುದ್ದೆಗಳುನ್ನು
ತಕ್ಷಣ ಭರ್ತಿ ಮಾಡಲು ಸರ್ಕಾರದ ಗಮನ ಸೆಳೆಯಲು ಕ್ರಮ
ತೆಗೆದುಕೊಂಡು ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದ್ದು
ಸಾರ್ವಜನಿಕರ ಹಿತದೃಷ್ಟಿಯಿಂದ ಮನವಿ ಸಲ್ಲಿಸುತ್ತಿರುವುದಾಗಿ
ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಪಾಲ್ಗೊಂಡು ಸೌಲಭ್ಯಗಳ ಸದ್ಭಳಕೆ ಮಾಡಿಕೊಳ್ಳಿ :ಶರೀನಾತಾಜ್

ಶ್ರೀನಿವಾಸಪುರ 1 : ಸರ್ಕಾರದ ಆದೇಶ ಮೇರೆಗೆ ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ ಕಾರ್ಯಕ್ರವನ್ನು ಆಯೋಜಿಸಲಾಗಿದ್ದು , ಸಾರ್ವಜನಿಕರು ಇಂತಹ ಕಾರ್ಯಕ್ರಮದಲ್ಲಿ ಪಾಲ್ಗುಂಡು ಸರ್ಕಾರದ ಸೌಲಭ್ಯಗಳ ಸದ್ಭಳಕೆ ಮಾಡಿಕೊಳ್ಳುವಂತೆ ತಹಶೀಲ್ದಾರ್ ಶರೀನಾತಾಜ್ ಹೇಳಿದರು.
ರಾಯಲ್ಪಾಡು ಹೋಬಳಿಯ ಚಿಲ್ಲಾರ್ಲಪಲ್ಲಿ ಗ್ರಾಮದಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯ ಕಡೆ ಕಾರ್ಯಕ್ರಮದ ಅಡಿಯಲ್ಲಿ ತಾಲ್ಲೂಕು ಆಡಳಿತ ಮತ್ತು ತಾಲ್ಲೂಕು ಪಂಚಾಯಿತಿ ಸಹಯೋಗದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾರ್ವಜನಿಕರು ಸಮಸ್ಯೆ ಇದ್ದಲ್ಲಿ ಅರ್ಜಿ ಸಲ್ಲಿಸಬಹುದು. ಸಾರ್ವಜನಿಕರು ಗ್ರಾಮದಲ್ಲಿನ ಸ್ಮಶಾನವು ಒತ್ತುವರಿಯಾಗಿರುವ ಬಗ್ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬೇಟಿ ನೀಡಿ , ಒತ್ತುವರಿದಾರರನ್ನು ಸ್ಥಳಕ್ಕೆ ಕರೆಯಿಸಿ ತಕ್ಷಣವೇ ಒತ್ತವರಿಯನ್ನು ತೆರವುಗೊಳಿಸಿದಕ್ಕೆ ಒತ್ತುವಾರಿದಾರರಿಗೆ ಅಭಿನಂದನೆ ಸಲ್ಲಿಸಿದರು.
ಗುಂಡುತೋಪುಗಳಲ್ಲಿ ಅರಣ್ಯ ಇಲಾಖೆಯಿಂದ ಗಿಡಗಳನ್ನು ನಡೆಲಾಯಿತು. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ದಾಖಲಿಸಲು ಇಲಾಖಾಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು. ರಸ್ತೆ ಸಮಸ್ಯೆ ಹಾಗು ಗ್ರಾಮಕ್ಕೊಂದು ಗ್ರಂಥಾಲಯ ಬೇಕೆಂಬ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಲಿಖಿತ ರೂಪದಲ್ಲಿ ಅರ್ಜಿ ಸಲ್ಲಿಸಿ ಸಂಬಂದಪಟ್ಟ ಇಲಾಖೆಯ ಗಮನಕ್ಕೆ ತಂದು ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಮತದಾರರ ಗುರುತಿನ ಚೀಟಿಗೆ ಆದಾರ ಲಿಂಕ್ ಮಾಡುವ ಪ್ರಕ್ರಿಯೆಯು ಚಾಲನೆಯಲ್ಲಿ ಇದ್ದು, 40% ಆಗಿದ್ದು, ಉಳಿದ 60% ಫಲಾನುಭವಿಗಳು ಅದನ್ನು ಸಂಬಂದ ಪಟ್ಟ ಅಧಿಕಾರಿಗಳ ಮೂಲಕ ಲಿಂಕ್ ಮಾಡಿಸಿಕೊಳ್ಳುವಂತೆ ತಿಳಿಸಿದರು. ರೈತರ ಬೆಳೆ ಸಮೀಕ್ಷೆ 20% ಆಗಿದೆ ಉಳಿದ 80% ಬೆಳೆ ಸಮೀಕ್ಷೆ ಬಾಕಿ ಇದ್ದು, ರೈತರು ಸಂಬಂದಪಟ್ಟ ಅಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಿದರು.
17 ರೀತಿಯ ವಿವಿಧ ಪಿಂಚಣಿಗಳು ಇದ್ದು, ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಿ ಸರ್ಕಾರದ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಸೂಚಿಸಿದರು.
ಪೌವತಿ ಖಾತೆ ದಾರರು ಮರಣಪ್ರಮಾಣ ಪತ್ರ ಹಾಗೂ ವಂಶವೃಕ್ಷ ಇತರೆ ದಾಖಲೆಗಳನ್ನು ನೀಡಿದರೆ ಅವುಗಳನ್ನು ಪರಿಶೀಲಿಸಿ 45 ದಿನಗಳಲ್ಲಿ , ಅರ್ಹ ಫಲಾನುಭವಿಗಳಿಗೆ ದಾಖಲೆ ನೀಡಲಾಗುವುದು ಎಂದರು.
ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮು ಇಲಾಖೆಯಲ್ಲಿ ಸಿಗುವಂತಹ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಗ್ರಾ.ಪಂ.ಅಧ್ಯಕ್ಷೆ ನಿರ್ಮಲಮ್ಮ , ಬಿಇಒ ವಿ.ಉಮಾದೇವಿ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸನ್, ಪಿಡಬ್ಲೂಡಿ ಹಿರಿಯ ಅಭಯಂತರ ಎಂ.ಕೆ.ಹಸೇನ್ ಸಾಬ್, ಕಿರಿಯ ಅಭಯಂತರ ಗೋವಿಂದಪ್ಪ, ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಶಿವಕುಮಾರ್, ರೇಷ್ಮೆ ಇಲಾಖೆ ಅಧಿಕಾರಿ ಕೃಷ್ಣಪ್ಪ, ಕೃಷಿ ಇಲಾಖೆ ಅಧಿಕಾರಿ ಮಂಜುನಾಥ್, ಶಿರಸ್ತೆದಾರ್ ಬಲರಾಮೇಗೌಡ ಆರ್‍ಐಗಳಾದ ಅಂಬರೀಶ್, ಜನಾರ್ಧನ್, ಮುನಿರೆಡ್ಡಿ, ಗುರುರಾಜರಾವ್, ಗ್ರಾ.ಪಂ ಸದಸ್ಯರು ಮಮತ, ಸೋಮಶೇಖರ್, ಬೈರೆಡ್ಡಿ, ಕಾರ್ಯದರ್ಶಿ ಮಂಜುಳ, ತಹಶೀಲ್ದಾರ್ ಕಚೇರಿ ಎಫ್‍ಡಿಎ ಭಾವನ ಇದ್ದರು.

ಬೈಂದೂರು ಹೋಲಿ ಕ್ರಾಸ್ ಚರ್ಚಿನಲ್ಲಿ ಶೋಕ ಮಾತೆಯ ದಿನಾಚರಣೆ


ಬೈಂದೂರು: ಸ್ಥಳೀಯ ಹೋಲಿ ಕ್ರಾಸ್ ಚರ್ಚಿನಲ್ಲಿ ಭಾನುವಾರದಂದು ಶೋಕ ಮಾತೆಯ ದಿನಾಚರuಯನ್ನು ಆಚರಿಸಲಾಯಿತು. ಉಡುಪಿ ದಿವ್ಯ ಜ್ಯೋತಿ ಕೇಂದ್ರದ ನಿರ್ದೇಶಕರಾದ ರೆ.ಫಾ.ಸಿರಿಲ್ ಲೋಬೊ ಅವರು ದಿವ್ಯಬಲಿ ಪೂಜೆಯನ್ನು ನೇರವೇರಿಸಿದರು.
ಈ ಸಂಭ್ರಮದಲ್ಲಿ ಉಡುಪಿಯ ರೆ.ಫಾ. ಹೆರಾಲ್ಡ್ ಡಿಸೋಜಾ, ಹೋಲಿ ಕ್ರಾಸ್ ಚರ್ಚಿನ ಧರ್ಮಗುರು ರೆ.ಫಾ. ವಿನ್ಸೆಂಟ್ ಕುವೆಲ್ಲೊ, ಆಚರಣೆಗಾರ ಅಂತೋನಿ ಲೋಬೊ ಮತ್ತು ಅವರ ಕುಟುಂಬ ಹಾಗೂ ಧರ್ಮಕೇಂದ್ರದ ಭಕ್ತಾಧಿಗಳು ಹಾಜರಿದ್ದರು
.

ತಾಲ್ಲೂಕಿನಾದ್ಯಂತ ಗ್ರಾಮೀಣ ಪ್ರದೇಶಗಳು ಹಾಗೂ ಡಾಬಾಗಳಲ್ಲಿ ಅಕ್ರಮ ಮದ್ಯ ಮಾರಾಟ-ನಿಯಂತ್ರಣ ಮಾಡಲು ರೈತ ಸಂಘ ಮನವಿ

ಶ್ರೀನಿವಾಸಪುರ, ಸ.17, ತಾಲ್ಲೂಕಿನಾದ್ಯಂತ ಗ್ರಾಮೀಣ ಪ್ರದೇಶಗಳು ಹಾಗೂ ಡಾಬಾಗಳಲ್ಲಿ ಅಕ್ರಮ ಮದ್ಯ ಮಾರಾಟ ನಿಯಂತ್ರಣ ಮಾಡಲು ವಿಶೇಷ ತಂಡ ರಚನೆ ಮಾಡುವಂತೆ ರೈತ ಸಂಘದಿಂದ ಅಬಕಾರಿ ಇಲಾಖೆ ಮುಂದೆ ಹೋರಾಟ ಮಾಡಿ ಅಬಕಾರಿ ನಿರೀಕ್ಷಕರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ವಿಧಾನ ಸಭಾಧ್ಯಕ್ಷ ಜನ ಪ್ರಿಯ ಶಾಸಕರಾದಂತಹ ಕೆ.ಆರ್.ರಮೇಶ್‍ಕುಮಾರ್ ರವರ ತವರು ಜಿಲ್ಲೆಯಲ್ಲೇ ಗ್ರಾಮೀಣ ಪ್ರದೇಶಗಳ ಅಕ್ರಮ ಮದ್ಯ ಮಾರಾಟ ದಂದೆ ರಾಜಾರೋಷವಾಗಿ ನಡೆಯುತ್ತಿದ್ದರು ಯಾವುದೇ ಕ್ರಮ ಕೈಗೊಳ್ಳದೆ ಮೌನವಾಗಿರುವುದಕ್ಕೆ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಶಾಸಕರ ವಿರುದ್ದ ಅಸಮದಾನ ವ್ಯಕ್ತಪಡಿಸಿದರು.
ಕುಡಿಯುವವನು ಕೇವಲ ಮದ್ಯವನ್ನು ಕುಡಿಯವುದಿಲ್ಲ. ತಾಯಿಯ ಸುಖ ಹೆಂಡತಿಯ ನೆಮ್ಮದಿ ಮಕ್ಕಳ ಕನಸುಗಳು, ತಂದೆಯ ಪ್ರತಿಷ್ಠೆ ಎಲ್ಲವನ್ನು ಒಂದೇ ಗುಟಕಿನಲ್ಲಿ ಕುಡಿದು ಇಡೀ ಸಂಸಾರದ ಮಾನ ಸಾರ್ವಜನಿಕವಾಗಿ ಹರಾಜು ಹಾಕಿ ಕುಟುಂಬಗಳೇ ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆಗಳು ಇದ್ದರೂ ಈ ದುರಂತಗಳಿಗೆ ಅಬಕಾರಿ ಇಲಾಖೆಯ ಅಧಿಕಾರಿಗಳ ಭ್ರಷ್ಟಾಚಾರವೇ ಅವ್ಯವಸ್ಥೆಗೆ ಕಾರಣವೆಂದು ಕಿಡಿಕಾರಿದರು.
ಸಾಂಕ್ರಾಮಿಕ ರೋಗಗಳು ಅತಿವೃಷ್ಟಿಯಿಂದ ತತ್ತರಿಸಿ ದುಡಿಯುವ ಕೈಗೆ ಕೆಲಸ ವಿಲ್ಲದೆ ಬೆಳೆದ ಬೆಳೆಗೆ ಬೆಲೆ ಇಲ್ಲದೆ ತತ್ತರಿಸಿರುವ ಜನ ಸಾಮಾನ್ಯರು ಬುದುಕು ಕಟ್ಟಿಕೊಳ್ಳುತ್ತಿರುವ ಸಮಯದಲ್ಲಿ ಗ್ರಾಮೀಣ ಪ್ರದೇಶಗಳ ಅಕ್ರಮ ಮದ್ಯ ಮಾರಾಟ ಬಡವರ ಅನ್ನವನ್ನು ಕಸಿದುಕೊಳ್ಳುತ್ತಿದೆ. ಕೂಲಿ ಮಾಡಿ ಮನೆಯ ಸಂಸಾರ ನಿರ್ವಹಣೆ ಮಾಡಬೇಕಾದ ಮದ್ಯೆ ಪ್ರಿಯರು ದುಡಿದ ಹಣವನ್ನು ಸಂಜೆ ಮದ್ಯದ ಅಂಗಡಿಗೆ ಇಟ್ಟು ಬರೀ ಕೈಯಲ್ಲಿ ಮನೆಗೆ ಬಂದು ಅವರನ್ನೇ ನಂಬಿರುವ ಕುಟುಂಬ ಅನ್ನವಿಲ್ಲದೆ ಹಸಿದ ಹೊಟ್ಟೆಯಿಂದ ತನ್ನೀರು ಬಟ್ಟೆ ಹಾಕಿಕೊಂಡು ಜೀವನ ಮಾಡಬೇಕಾದ ಪರಿಸ್ಥಿತಿ ಅಬಕಾರಿ ಇಲಾಖೆಯರು ತಂದು ನಿಲ್ಲಿಸಿದ್ದಾರೆಂದು ಆರೋಪ ಮಾಡಿದರು.
ತಾಲ್ಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ ಮಾತನಾಡಿ ಸರ್ಕಾರ ನಿಂತಿರುವುದು ಬಡ ರೈತ ಕೂಲಿಕಾರ್ಮಿಕರ ಕುಟುಂಗಳನ್ನು ಹಾಳು ಮಾಡುವ ಮದ್ಯ ಮಾರಾಟದ ಆದಾಯದಿಂದ ಎಂಬ ಸರ್ಕಾರದ ಹೇಳಿಕೆಗೆ ಅಬಕಾರಿ ಇಲಾಖೆಗಳು ತಮಗೆ ಇಷ್ಟ ಬಂದಂತೆ ತಾಲ್ಲೂಕಿನಾದ್ಯಂತ ಮದ್ಯೆ ಮಾರಾಟಗಾರರಿಗೆ ಕಡ್ಡಾಯವಾಗಿ ತಿಂಗಳಿಗೆ ಇಷ್ಟು ಆದಾಯ ಇಲಾಖೆಗೆ ಬರುವಂತೆ ಮದ್ಯ ಮಾರಾಟ ಮಾಡುವ ಆದೇಶ ಗ್ರಾಮೀಣ ಪ್ರದೇಶದ ಬಡ ಕೂಲಿಕಾರ್ಮಿಕರ ಕುಟುಂಬಗಳನ್ನು ಬೀದಿ ಪಾಲು ಮಾಡುವ ಮುಖಾಂತರ ಸರ್ಕಾರ ಬಡವರ ಅನ್ನದ ಮೇಲೆ ಸವಾರಿ ಮಾಡುತ್ತಿರುವುದಕ್ಕೆ ಲಕ್ಷಾಂತರ ಮಹಿಳೆಯರ ಶಾಪ ತಟ್ಟುತ್ತದೆ ಎಂದು ಭವಿಷ್ಯ ನುಡಿದರು.
ಲಕ್ಷಾಂತರ ಕುಟುಂಬಗಳ ಸ್ವಾಭಿಮಾನ ಬುದುಕು ಕಟ್ಟಿಕೊಟ್ಟಿರುವ ಹಾಲಿನ ಧರ 25 ರೂಪಾಯಿ ಅದೇ ಕುಟುಂಬಗಳನ್ನು ನಾಶ ಮಾಡುವ ಮದ್ಯದ ಬೆಲೆ 150 ರಿಂದ 1000 ರೂಪಾಯಿಯವರೆಗೆ ಮಾರಾಟ ಮಾಡುತ್ತಿರುವ ಸರ್ಕಾರಕ್ಕೆ ಬಡವನ ಬದುಕಿನ ಬೆಲೆ ಗೊತ್ತಿಲ್ಲವೆಂದು ಅವ್ಯವಸ್ಥೆ ವಿರುದ್ದ ಕಣ್ಣೀರು ಹಾಕಿದರು.
ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಡಾಬಾಗಳಲ್ಲಿ ರಾಜಾರೋಷವಾಗಿ ದಿನದ 24 ಗಂಟೆ ಅಕ್ರಮ ಮದ್ಯೆ ಮಾರಾಟ ರಾಜರೋಷವಾಗಿ ನಡೆಯುತ್ತಿದ್ದರು ತಡೆಯಬೇಕಾದ ಅಧಿಕಾರಿಗಳು ನಾಪತ್ತೆಯಾಗಿದ್ದಾರೆ. ದೂರು ನೀಡಿದಾಗ ನೆಪಮಾತ್ರಕ್ಕೆ 1 ಮತ್ತು 2 ಕೇಸು ದಾಖಲಿಸಿ ತಮ್ಮ ಪೌರುಷವನ್ನು ತೋರಿಸಿ ದಿನದ 24 ಗಂಟೆ ಗ್ರಾಮೀಣ ಪ್ರದೇಶಗಳಿಗೆ ಸರಬರಾಜು ಮಾಡುವ ಅಂಗಡಿಗಳ ವಿರುದ್ದ ಕ್ರಮ ಕೈಗೊಳ್ಳಲು ರಾಜಕೀಯ ಒತ್ತಡವೇ ಇಲ್ಲವೆ ಅವರು ನೀಡುವ ತಿಂಗಳ ಪ್ರಸಾದಕ್ಕೆ ತಮ್ಮ ಕರ್ತವ್ಯವನ್ನು ಮರತಂತೆ ಕಾಣುತ್ತಿದೆ ಅದಕ್ಕೆ ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟದಿಂದ ಅಶಾಂತಿಯ ಜೊತೆಗೆ ಗೌರವದಿಂದ ಬದುಕುವ ಕುಟುಂಬಗಳು ನೆಮ್ಮದಿಯಿಂದ ಜೀವನ ಮಾಡಲು ಸಾದ್ಯವಾಗದ ಮಟ್ಟಕ್ಕೆ ಹಳ್ಳಿಗಳು ಹದಗೆಟ್ಟಿವೆ ಎಂದು ಆರೋಪ ಮಾಡಿದರು.
24 ಗಂಟೆಯಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ ಮದ್ಯ ಮಾರಾಟ ಮಾಡುವ ದಂದೆಕೋರ ಹಾಗೂ ಅವರಿಗೆ ಸಹಕರಿಸುತ್ತಿರುವ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಗೊಂಡು ಬಡ ಕೂಲಿಕಾರ್ಮಿಕರ ಸಂಸಾರಗಳನ್ನು ಉಳಿಸಬೇಕು ಇಲ್ಲವಾದರೆ ಶಾಸಕರ ಮನೆ ಮುಂದೆ ಸಾವಿರಾರು ಮಹಿಳೆಯರೊಂದಿಗೆ ಆಹೋರಾತ್ರಿ ಧರಣಿ ಮಾಡುವ ಎಚ್ಚರಿಕೆಯೊಂದಿಗೆ ಮನವಿ ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಅಬಕಾರಿ ನಿರೀಕ್ಷಕರಾದ ರೋಹಿತ್ ರವರು ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ದ ಕ್ರಿಮಿನಲ್ ಮೊಕದಮ್ಮೆ ದಾಖಲು ಮಾಡುವ ಜೊತೆಗೆ ಅವರಿಗೆ ಸಹಕರಿಸುತ್ತಿರುವ ಅಧಿಕಾರಿಗಳಿಗೆ ನೋಟೀಸ್ ನೀಡಿ ಸಮಸ್ಯೆ ಬಗೆ ಹರಿಸುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಕೋಟೆ ಶ್ರೀನಿವಾಸ್, ಶೇಷಾದ್ರಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಮಂಗಸಂದ್ರ ತಿಮ್ಮಣ್ಣ, ರಾಮಕ್ಕ, ವೆಂಕಟಮ್ಮ, ಕೊಲ್ಲೂರು ವೆಂಕಟ್, ರಾಜೇಂದ್ರಣ್ಣ, ಶೇಕ್‍ಷಪಿವುಲ್ಲಾ, ಕುಡುವನಹಳ್ಳಿ ಸುರೇಶ್, ಮುಳಬಾಗಿಲು ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ವಕ್ಕಲೇರಿ ಹನುಮಯ್ಯ, ಸಂದೀಪ್‍ರೆಡ್ಡಿ, ಸಂದೀಪ್‍ಗೌಡ, ವೇಣು, ಮುದುವಾಡಿ ಗಂಗಪ್ಪ, ಲೋಕೇಶ್, ಸಹದೇವಣ್ಣ, ಗಂಗಾಧರ್, ಆಲವಾಟಿ ಶಿವ ಇನ್ನು ಮುಂತಾದವರು ಇದ್ದರು.

ಕುಂದಾಪುರ ರೋಜರಿ ಕ್ರೆಡಿಟ್ ಕೋ- ಆಪರೇಟಿವ್ ವಾರ್ಷಿಕ ಸಭೆ-500 ಕೋಟಿ ವ್ಯವಹಾರ 2 ಕೋಟಿ 10 ಲಕ್ಷ ನಿವ್ವಳ ಲಾಭ ಶೇ. 20% ಡಿವಿಡೆಂಡ್ ಘೋಷಣೆ.

ಕುಂದಾಪುರ ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ 2021-22ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಂಘದ ಸದಸ್ಯರಿಗೆ ಶೇ. 20 % ಡಿವಿಡೆಂಡ್ ಘೋಷಿಸಲಾಯಿತು

ಕುಂದಾಪುರದ ಆರ್ ಎನ್ ಶೆಟ್ಟಿ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಶ್ರೀ ಜಾನ್ಸನ್ ಡಿ’ ಅಲ್ಮೇಡಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘದ ನಿರ್ದೇಶಕ ಶ್ರೀ ಡೇರಿಕ್ ಡಿ ಸೋಜಾ ಪರಿಶೋಧಿತ ಲೆಕ್ಕಪತ್ರಗಳನ್ನು ಮಂಡಿಸಿದರು ವರದಿ ಸಾಲಿನ ಅಂತ್ಯಕ್ಕೆ ಒಟ್ಟು 3940 ಸದ್ಯಸ್ಯರಿಂದ 91.87 ಲಕ್ಷ ಪಾಲು ಬಂಡವಾಳ ಹಾಗೂ 122.59 ಕೋಟಿ ರೂ ಠೇವಣಿ ಇದ್ದು 98.43 ಕೋಟಿ ಹೊರಬಾಕಿ ಸಾಲ ಹೊಂದಿರುತ್ತದೆ.
2022 ರ ಆಗಸ್ಟ್ ಅಂತ್ಯಕ್ಕೆ ಒಟ್ಟು ರೂಪಾಯಿ 130 ಕೋಟಿ ಠೇವಣಿ ಹಾಗೂ ರೂ 106 ಕೋಟಿ ಸಾಲ ಇದೆ.
ವರದಿ ಸಾಲಿನಲ್ಲಿ ಸಂಘವು ರೂ 2 ಕೋಟಿ 11 ಲಕ್ಷ ನಿವ್ವಳ ಲಾಭವನ್ನು ಗಳಿಸಿದೆ ಎಂದು ಸಂಘದ ಅಧ್ಯಕ್ಷರು ಸಭೆಯಲ್ಲಿ ತಿಳಿಸಿದರು.
ಕಳೆದ ಸಾಲಿನಲ್ಲಿ ಸಂಸ್ಥೆ ಒಟ್ಟು ರೂಪಾಯಿ 500 ಕೋಟಿ ವ್ಯವಹಾರ ಮಾಡಿದೆ ಈವರೆಗೆ ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೊಸೈಟಿ ಇನ್ನು ಮುಂದೆ ಇತರ ಜಿಲ್ಲೆಗಳಿಗೆ ವಿಸ್ತರಿಸಲು ಹಾಗೂ ಬಾಕಿ ಇರುವ ಶಾಖೆಗಳಿಗೆ ಸ್ವಂತ ಕಟ್ಟಡ, ಗ್ರಾಹಕರ ಅನುಕೂಲಕ್ಕಾಗಿ ಹೊಸ ಶಾಖೆ, ಸಂಘದ ಮುಂದಿನ ಭವಿಷ್ಯಕ್ಕಾಗಿ ಕುಂದಾಪುರದ ಆಸುಪಾಸಿನಲ್ಲಿ ಒಂದು ಸ್ವಂತ ಜಾಗ ಖರೀದಿ, ಸಂಘದ ಪ್ರಧಾನ ಕಛೇರಿಯ ಮೂರನೇ ಅಂತಸ್ತಿನಲ್ಲಿ ಸಭಾಂಗಣ ಮಾಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ನುಡಿದರು. ಸಂಘದ ಮುಖ್ಯ ಸಲಹದಾರರಾದ ಅತೀ ವಂದನಿಯ ಸ್ಟೇನಿ ತಾವ್ರೋ ರವರು ಪ್ರಗತಿಗೆ ಮುಖ್ಯ ಕಾರಣ ಉತ್ತಮ ನಿರ್ದೇಶನ ಹಾಗೂ ಸಿಬ್ಬಂದಿಗಳ ಕಾರ್ಯತತ್ಪರತೆ ಮತ್ತು ಗ್ರಾಹಕರ ಪ್ರಾಮಾಣಿಕತೆಗೆ ಸಂಘವು ಇಷ್ಟು ಎತ್ತರಕ್ಕೆ ಬೆಳೆಯಲು ಕಾರಣವಾಯಿತು , ಅಲ್ಲದೆ ಮುಂದೆಯೂ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಹರಸಿದರು

ಸಂಘದ ಸ್ಥಾಪಕ ಹಾಗೂ ಪ್ರಸ್ತುತ ನಿರ್ದೇಶಕರಾದ ಶ್ರೀ ಫಿಲಿಪ್ ಡಿ ಕೋಸ್ಟಾ ಸ್ವಾಗತಿಸಿದರು, ನಿರ್ದೇಶಕ ಶ್ರೀ ವಿಲ್ಸನ್ ಡಿ ಸೋಜಾ ಪ್ರಾಸ್ತವಿಕ ಭಾಷಣ ನುಡಿದರು ನಿರ್ದೇಶಕಿ ಶ್ರೀಮತಿ ಡೈನಾ ಡಿ ಅಲ್ಮೇಡ ವಂದನಾರ್ಪಣೆ ಮಾಡಿದರು ನಿರ್ದೇಶಕಿ ಶ್ರೀಮತಿ ಶಾಂತಿ ಆರ್ ಕರ್ವಾಲ್ಲೊ , ಶ್ರೀ ಕಿರಣ್ ಮೇಲ್ವಿನ್ ಲೋಬೋ ಕಾರ್ಯಕ್ರಮ ನಿರೂಪಿಸಿದರು
ಸಭೆಯಲ್ಲಿ ಸಂಘದ ನಿರ್ದೇಶಕರಾದ ಶ್ರೀ ವಿನೋದ್ ಕ್ರಾಸ್ಟೋ, ಶ್ರೀ ಬ್ಯಾಪ್ಟಿಸ್ಟ್ ಡಾಯಾಸ್, ಶ್ರೀ ಓಜಲಿನ್ ರೆಬೆಲ್ಲೊ, ಶ್ರೀ ಪ್ರಕಾಶ್ ಲೋಬೋ, ಶ್ರೀಮತಿ ಶಾಂತಿ ಡಾಯಾಸ್, ಶ್ರೀ ಸಂತೋಷ್ ಓಝೋಲ್ಡ ಡಿ ಸಿಲ್ವಾ, ಶ್ರೀ ವಿಲ್ಫ್ರೆಡ್ ಮಿನೇಜಸ್, ಶ್ರೀ ಟೆರೆನ್ಸ್ ಸುವಾರಿಸ್, ಮತ್ತು ಶ್ರೀ ತಿಯೋದರ ಒಲಿವೇರ ಉಪಸ್ಥಿತರಿದ್ದರು.

ಮಕ್ಕಳ ಹೃದಯದಲ್ಲಿ ಕನ್ನಡ ಸಂಸ್ಕ್ರತಿಯನ್ನು ಬಿತ್ತಬೇಕು. ಕನ್ನಡ ಪ್ರೀತಿ ಅರಳುವಂತೆ ಮಾಡಬೇಕು:ಸಿ.ಸೋಮಶೇಖರ

ಶ್ರೀನಿವಾಸಪುರ: ಮಕ್ಕಳ ಹೃದಯದಲ್ಲಿ ಕನ್ನಡ ಸಂಸ್ಕøತಿಯನ್ನು ಬಿತ್ತಬೇಕು. ಕನ್ನಡ ಪ್ರೀತಿ ಅರಳುವಂತೆ ಮಾಡಬೇಕು ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ.ಸೋಮಶೇಖರ ಹೇಳಿದರು.
ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಆತ್ಮಶ್ರೀ ಕನ್ನಡ ಸಾಂಸ್ಕøತಕ ಪ್ರತಿಷ್ಠಾನದ ವತಿಯಿಂದ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಶುಕ್ರವಾರ ಗಡಿನಾಡ ಉತ್ಸವ ಹಾಗೂ ಗಡಿಯಲ್ಲಿ ಕನ್ನಡ ಕಲರವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಂಸ್ಕøತಿಕ ಅಸ್ಮಿತತೆ ಉಂಟುಮಾಡುವುದು ಹಾಗೂ ಕನ್ನಡ ಜಾಗೃತಿ ಮೂಡಿಸುವುದು ಗಡಿ ಉತ್ಸವದ ಆಶಯವಾಗಿದೆ. ಈಗಾಗಲೆ ರಾಜ್ಯದಲ್ಲಿ 500 ಸಂಸ್ಥೆಗಳಿಗೆ ಸಾಂಸ್ಕøತಿಕ ಕಾರ್ಯಕ್ರಮ ನಡೆಸಲು ಅನುದಾನ ಬಿಡುಗಡೆ ಮಾಡಲಾಗಿದೆ. ನಾಡಿನ ಗಡಿಯಲ್ಲಿ ಕನ್ನಡ ಕಹಳೆ ಮೊಳಗಿಸಲು ಹಾಗೂ ಸಾಂಸ್ಕøತಿಕ ಉತ್ಸವ ನಡೆಸಲು ಇನ್ನೂ 400 ಸಂಸ್ಥೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಪ್ರತಿ ಕಾರ್ಯಕ್ರಮಕ್ಕೆ ಕನಿಷ್ಠ ರೂ.1 ಲಕ್ಷ ನೀಡಲಾಗುತ್ತಿದೆ ಎಂದು ಹೇಳಿದರು.
ಕನ್ನಡ ಭಾಷೆಗೆ 2000 ವರ್ಷಗಳ ಇತಿಹಾಸವಿದೆ. ಗಡಿನಾಡಲ್ಲೂ ಕನ್ನಡ ಭಾಷೆ ಗಟ್ಟಿಯಾಗಿದೆ. ಗಡಿಯಲ್ಲಿನ ಅನ್ಯ ಭಾಷೆಗಳಿಂದ ಕನ್ನಡ ಭಾಷೆಗೆ ಹಾನಿ ಉಂಟಾಗುವುದಿಲ್ಲ. ಗಡಿನಾಡಿನ ಜನರ ಹೃದಯದ ಭಾಷೆ ಕನ್ನಡವಾಗಿದೆ. ನಾಡಿನ ಯಾವುದೇ ಭಾಗವನ್ನು ಇನ್ನೊಂದು ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಹಾಗಾಗಿ ಭಾಷಾ ವಿಷಯದಲ್ಲಿ ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಹೇಳಿದರು.
ವೆಂಕಟೇಶ್ವರ ಗ್ರಾಮೀಣ ಆರೋಗ್ಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ವೈ.ವಿ.ವೆಂಕಟಾಚಲ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಬಿ.ಗೋಪಾಲಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಗಡಿ ಭಾಗದಲ್ಲಿ ಕನ್ನಡ ಭಾಷಾಭಿವೃದ್ಧಿಗಾಗಿ ಶ್ರಮಿಸಿರುವ ನಿವೃತ್ತ ಪ್ರಾಂಶುಪಾಲ ಸಿ.ಬೈರಪ್ಪ, ನಿವೃತ್ತ ವಲಯ ಅರಣ್ಯಾಧಿಕಾರಿ ಗೋವಿಂದಯ್ಯ ಅವರಿಗೆ ಗಡಿನಾಡ ಕನ್ನಡ ಸೇನಾನಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಶಾಲಾ ಶಿಕ್ಷಕರು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ನೆನೆಪಿನ ಕಾಣಿಕೆ ನೀಡಲಾಯಿತು.
ಡಾ. ವೈ.ವಿ.ವೆಂಕಟಾಚಲ ನಿರ್ಮಾಣ ಹಾಗೂ ಡಾ. ಗುಣವಂತ ಮಂಜು ನಿರ್ದೇಶನದ ಅಂಗಾಂಗ ದಾನದ ಮಹತ್ವ ಸಾರುವ ರಾಷ್ಟ್ರ ಪ್ರಶಸ್ತಿ ಪುರಸ್ಕøತ ಪುಣ್ಯವತಿ ಕಿರುಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.
ಗೊವಿಂದಹಳ್ಳಿ ಕೃಷ್ಣೇಗೌಡ ಅಧ್ಯಕ್ಷತೆಯಲ್ಲಿ ಸಾಹಿತಿ ಆರ್.ಚೌಡರೆಡ್ಡಿ, ಉಪನ್ಯಾಸಕ ಎನ್.ಶಂಕರೇಗೌಡ ಅವರಿಂದ ವಿಚಾರ ಗೋಷ್ಠಿ ಏರ್ಪಡಿಸಲಾಗಿತ್ತು. ಸಾಹಿತಿ ಸ.ರಘುನಾಥ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಏರ್ಪಡಿಸಲಾಗಿತ್ತು. ಲಕ್ಷ್ಮೀಗೌಡ, ವಿ.ರಾಧಾಕೃಷ್ಣ, ಎಂ.ಪ್ರಸನ್ನಕುಮಾರ್, ಎಸ್.ಅನೀಫ್ ಸಾಬ್, ಕೆ.ವೇಣುಗೋಪಾಲ್ ಕಾವ್ಯ ವಾಚನ ಮಾಡಿದರು.
ಶಾಲಾ ಮಕ್ಕಳ ಬಳಕೆಗಾಗಿ ಡಾ. ವೈ.ವಿ.ವೆಂಕಟಾಚಲ ನಿರ್ಮಿಸಿಕೊಟ್ಟ ಕೈ ತೊಳೆಯುವ ನೀರಿನ ಘಟಕ ಲೋಕಾರ್ಪಣೆ ಮಾಡಲಾಯಿತು. ಎಂ.ಅರುಣ್ ಕುಮಾರ್ ನಿರ್ದೇಶನದಲ್ಲಿ ಸಂಗೊಳ್ಳಿ ರಾಯಣ್ಣ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು.
ಮೆರವಣಿಗೆಳ: ಗ್ರಾಮದಲ್ಲಿ ಭುವನೇಶ್ವರಿ ಭಾವಚಿತ್ರ ಮರವಣಿಗೆ ಏರ್ಪಡಿಸಲಾಗಿತ್ತು. ಮೆರವಣಿಗೆಯಲ್ಲಿ ಕೀಲು ಕುದುರೆ ಮತ್ತಿತರ ಜಾನಪದ ನೃತ್ಯಗಳು ಜನರ ಗಮನ ಸೆಳೆದವು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ.ಸೋಮಶೇಖರ ಅವರ ನೇತೃತ್ವದಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಆತ್ಮಶ್ರೀ ಕನ್ನಡ ಸಾಂಸ್ಕøತಕ ಪ್ರತಿಷ್ಠಾನದ ಅಧ್ಯಕ್ಷ ಡಾ. ಗುಣವಂತ ಮಂಜು, ಡಾ. ವೈ.ಸಿ.ಬೀರೇಗೌಡ, ಮುಖ್ಯ ಶಿಕ್ಷಕ ಕೆ.ಆರ್.ಶ್ರೀನಿವಾಸಲು, ಸಾಹಿತಿ ಅಕ್ಬರ್ ಪಾಷ, ಲಲಿತಾ ರಾಮಲಿಂಗಾರೆಡ್ಡಿ, ಗೌತಮಿ ಮುನಿರಾಜು, ಪದ್ಮ, ಶಾರದಾ, ಶಿವಾನಂದ, ನೂರುಲ್ಲಾ, ಜಯರಾಂ, ಶ್ರೀನಿವಾಸರೆಡ್ಡಿ, ಡಾ. ಗುರುಮಹೇಶ್, ಚಿತ್ರ ನಟಿ ಪ್ರೇಮಲತಾ ಇದ್ದರು.

ಕೆಜಿಎಫ್ ಜನರ ಸಂಕಷ್ಟಗಳತ್ತ ಸರ್ಕಾರದ ಗಮನ ಸೆಳೆಯುವಲ್ಲಿ ಶಾಸಕಿ ರೂಪಕಲಾ ಯಶಸ್ವಿ
ಕೈಗಾರಿಕಾ ಟೌನ್‍ಷಿಫ್ ಸ್ಥಾಪನೆಗೆ ಅಗತ್ಯ ಕ್ರಮ-ಸದನದಲ್ಲಿ ಮುಖ್ಯಮಂತ್ರಿಗಳಿಂದಲೇ ಭರವಸೆ

ಕೋಲಾರ:- ಕೆ.ಜಿ.ಎಫ್ ನಗರದಲ್ಲಿ ಬಿಇಎಂಎಲ್ ಕಾರ್ಖಾನೆಯಿಂದ ಸರ್ಕಾರ ವಾಪಸ್ಸು ಪಡೆದಿರುವ 973.24 ಎಕರೆ ಬಳಕೆಯಾಗದ ಭೂಮಿಯನ್ನು ಕೆಐಡಿಬಿಗೆ ಹಸ್ತಂತರಿಸುವ ಪ್ರಕ್ರಿಯೆ ಮುಗಿಸಿ ಕೈಗಾರಿಕಾ ಟೌನ್‍ಷಿಫ್ ಸ್ಥಾಪನೆಗೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಶಾಸಕಿ ರೂಪಕಲಾ ಶಶಿಧರ್ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ವಿಧಾನಸಭೆಯಲ್ಲಿ ಶುಕ್ರವಾರ ಒಟ್ಟು 1870 ಎಕರೆ ಜಮೀನಿನ ಪೈಕಿ ಬಿಎಎಂಎಲ್ ಬಳಸಿಕೊಳ್ಳದ 973.24 ಎಕರೆ ಜಮೀನನ್ನು ಕಂದಾಯ ಇಲಾಖೆ ವಶದಿಂದ ಕೈಗಾರಿಕಾ ಇಲಾಖೆ, ಕೆಐಡಿಬಿಗೆ ಹಸ್ತಂತರಿಸುವ ಪ್ರಕ್ರಿಯೆ ವಿಳಂಬವಾಗಿರುವ ಕುರಿತು ಶಾಸಕಿ ರೂಪಕಲಾ ಸರ್ಕಾರದ ಗಮನ ಸೆಳೆದ ಹಿನ್ನಲೆಯಲ್ಲಿ ಮಧ್ಯೆ ಪ್ರವೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು ಈ ಭರವಸೆ ನೀಡಿದರು.
ಸದನದಲ್ಲಿ ಸರ್ಕಾರದ ಗಮನ ಸೆಳೆದು ಮಾತನಾಡಿದ ಶಾಸಕಿ ರೂಪಕಲಾ, ಬೃಹತ್,ಮಧ್ಯಮ ಕೈಗಾರಿಕಾ ಸಚಿವ ನಿರಾಣಿ ಅವರು ಅನುಭವಿಯಾಗಿದ್ದಾರೆ, ಸ್ವತಃ ಉದ್ಯಮಿಯಾಗಿದ್ದಾರೆ, ಕೆಜಿಎಫ್ ನಗರಕ್ಕೆ ಪ್ರವಾಸ ಬಂದಿದ್ದಾಗ ಜಮೀನು ಪರಿಶೀಲಿಸಿದ ಸಂದರ್ಭದಲ್ಲಿ ಕೈಗಾರಿಕಾ ವಲಯ ಸ್ಥಾಪನೆಗೆ ಸೂಕ್ತ ಜಾಗ ಎಂದು ತಿಳಿಸಿ ಭರವಸೆಯನ್ನೂ ನೀಡಿದ್ದಾರೆ, ಕಳೆದ 2021ರ ಫೆ.18 ಹಾಗೂ ನ.30 ರಂದು ಸಭೆ ನಡೆಸಿ ಸದರಿ ಜಮೀನನ್ನು ಕೆಐಡಿಬಿಗೆ ಪಡೆದುಕೊಳ್ಳುವ ಕುರಿತ ತೀರ್ಮಾನವನ್ನು ಕೈಗೊಂಡಿದ್ದಾರೆ ಎಂದರು.

3 ವರ್ಷಗಳಿಂದ ನೆನೆಗುದಿಗೆ-ಬೇಸರ


ಕೈಗಾರಿಕಾ ವಲಯ ಸ್ಥಾಪನೆ ಸಂಬಂಧ ಬೆಮೆಲ್‍ನ ಈ ಜಾಗವನ್ನು ಕಂದಾಯ ಇಲಾಖೆಯಿಂದ ಕೆಐಡಿಬಿಗೆ ಪಡೆದುಕೊಳ್ಳುವ ಕಾರ್ಯಕ್ಕೆ ಸತತ ಒತ್ತಡ ಹಾಕುತ್ತಿದ್ದರೂ 3 ವರ್ಷಗಳಿಂದ ಸಾಧ್ಯವಾಗಿಲ್ಲ, ನನ್ನ ಕ್ಷೇತ್ರದ ಬಗ್ಗೆ ಈ ನಿರ್ಲಕ್ಷ್ಯ ಏಕೆ? ಅಲ್ಲಿ ಬಡವರಿದ್ದಾರೆ, ಗಣಿ ಮುಚ್ಚಿದ ನಂತರ ಜೀವನ ನಡೆಸಲಾಗದೇ ಸಂಕಷ್ಟ ಅನುಭವಿಸುತ್ತಿದ್ದಾರೆ, ಕೋವಿಡ್ ಸಂದರ್ಭದಲ್ಲಿ ಕೆಲಸಕ್ಕಾಗಿ ಅಲೆದಾಟ ನಡೆಸಿ ನೋವುಂಡಿದ್ದಾರೆ ಎಂದರು.
ನನ್ನ ಕ್ಷೇತ್ರದ ಜನ ಕಷ್ಟದ ಬದುಕು ನಡೆಸುತ್ತಿದ್ದಾರೆ, ಅವರ ನೋವಿನ ಪರಿಚಯವನ್ನು ಸಚಿವರು, ಸಿಎಂ ಅವರಿಗೂ ಅರ್ಥ ಮಾಡಿಸುವ ಕೆಲಸ ಮಾಡಿದ್ದೇನೆ ಆದರೂ ಇನ್ನೂ ಸ್ಪಂದನೆ ಸಿಗಲಿಲ್ಲ, ಕೂಡಲೇ ಕೈಗಾರಿಕಾ ವಲಯ ಘೋಷಿಸಿ ಎಂದು ರೂಪಕಲಾ ಮನವಿ ಮಾಡಿದರು.
ರಾಜ್ಯ ಸರ್ಕಾರ ಹಾಗೂ ಕೈಗಾರಿಕಾ ಸಚಿವರು ಮಾತೆತ್ತಿದರೆ 80 ಸಾವಿರ ಎಕರೆ ಕೈಗಾರಿಕಾ ಪ್ರದೇಶಕ್ಕೆ ಜಮೀನು ಹಸ್ತಂತರ ಹಾಗೂ ಬೃಹತ್ ಕೈಗಾರಿಕೆಗಳ ಸ್ಥಾಪನೆಯ ಮಾತನಾಡುತ್ತಾರೆ, ನನ್ನ ಕ್ಷೇತ್ರ ಬೆಂಗಳೂರಿನಿಂದ ಕೇವಲ 70 ಕಿಮೀ ದೂರದಲ್ಲಿದೆ, ಕೋಟ್ಯಾಂತರ ರೂ ಬೆಲೆ ಬಾಳುವ 873 ಎಕರೆ ಜಮೀನಿದೆ, ಅಲ್ಲಿ ಕೈಗಾರಿಕಾ ವಲಯ ಸ್ಥಾಪಿಸಿದರೆ 50 ಸಾವಿರದಿಂದ 1 ಲಕ್ಷ ಮಂದಿಗೆ ಉದ್ಯೋಗ ಸೃಷ್ಟಿಯಾಗುತ್ತದೆ ಇಷ್ಟಾದರೂ ಈ ವಿಳಂಬ ಧೋರಣೆ ಏಕೆ ಎಂದು ಪ್ರಶ್ನಿಸಿದರು.

ಸಚಿವ ನಿರಾಣಿ ಹೇಳಿಕೆಗೆ ಪ್ರತಿರೋಧ


ಕೈಗಾರಿಕಾ ಸಚಿವ ನಿರಾಣಿ ಇದಕ್ಕೂ ಮುನ್ನಾ ಮಾತನಾಡಿ,ಕಳೆದ 18 ತಿಂಗಳಿಂದ ಪತ್ರ ವ್ಯವಹಾರ ನಡೆಸಿದ್ದರೂ, ಕಂದಾಯ ಇಲಾಖೆಯಿಂದ ಕೈಗಾರಿಕೆ ಇಲಾಖೆಗೆ ಜಮೀನು ಹಸ್ತಂತರವಾಗಿಲ್ಲ, ಈ ಕಾರ್ಯ ಮುಗಿದ ಕೂಡಲೇ ಕೈಗಾರಿಕಾ ವಲಯ ಮಾಡುವ ಕುರಿತು ಕ್ರಮ ಕೈಗೊಳ್ಳುವ ಭರವಸೆ ನೀಡುತ್ತಿದ್ದಂತೆ ಶಾಸಕಿ ರೂಪಕಲಾ ಶಶಿಧರ್ ಪ್ರತಿರೋಧ ಒಡ್ಡಿದರು ಅವರಿಗೆ ಶಾಸಕ ಕೆ.ಶ್ರೀನಿವಾಸಗೌಡ, ಮಾಜಿ ಸಚಿವ ದೇಶಪಾಂಡೆ ಬೆಂಬಲ ವ್ಯಕ್ತಪಡಿಸಿದರು.
ಮಾಜಿ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, ನಾನು ಕೈಗಾರಿಕಾ ಸಚಿವನಾಗಿದ್ದಾಗ ಸಾವಿರಾರು ಎಕರೆ ಸರ್ಕಾರಿ ಜಾಗ ಕೆಐಡಿಬಿಗೆ ಹಸ್ತಂತರಿಸಿದ್ದೇನೆ, ಬೆಂಗಳೂರು ಸುತ್ತಮುತ್ತ ಕೈಗಾರಿಕೆ ಸ್ಥಾಪಿಸಲು ಜಮೀನು ಒದಗಿಸುವುದು ಕಷ್ಟ, ಅಷ್ಟೊಂದು ಹಣ ನೀಡಿ ಉದ್ಯಮಿಗಳು ಜಾಗ ಖರೀದಿ ಮಾಡಲು ಮುಂದೆ ಬರಲ್ಲ, ಕೆಜಿಎಫ್ ದೂರವಿಲ್ಲ, ಅಲ್ಲಿ ಸರ್ಕಾರಿ ಜಾಗವಿದೆ, ಕಂದಾಯ ಇಲಾಖೆಯೂ ಕೈಗಾರಿಕಾ ಇಲಾಖೆಯ ಸಹೋದರನಿದ್ದಂತೆ ಸಿಎಂ ಮಧ್ಯೆ ಪ್ರವೇಶಿಸಿ ಕೈಗಾರಿಕೆ ವಲಯ ಮಂಜೂರು ಮಾಡಿ ಎಂದರು. ಶಾಸಕ ಕೆ.ಶ್ರೀನಿವಾಸಗೌಡರು, ಜಮೀನು ಹಸ್ತಂತರಕ್ಕೆ ಎಷ್ಟುದಿನ ಬೇಕು ಎಂದು ಪ್ರಶ್ನಿಸುತ್ತಿದ್ದಾರೆ ಉತ್ತರ ನೀಡಿ ಎಂದು ನಿರಾಣಿಯವರನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಭಾಧ್ಯಕ್ಷ ಕಾಗೇರಿ ಅವರು, ಸಿಎಂ ಉತ್ತರ ನೀಡುವಂತೆ ಸೂಚಿಸಿದಾಗ ಸಿಎಂ. ಶಾಸಕರ ಮನವಿಗೆ ಸ್ಪಂದಿಸಿ ಕೈಗಾರಿಕಾ ವಲಯ ಸ್ಥಾಪನೆ, ಜಮೀನು ಹಸ್ಥಂತರ ಪ್ರಕ್ರಿಯೆಗೆ ಕೂಡಲೇ ಅಗತ್ಯಕ್ರಮ ವಹಿಸುವ ಭರವಸೆ ನೀಡಿದರು.
ಒಟ್ಟಾರೆ ಸರ್ಕಾರದ ಮೇಲೆ ಒತ್ತಡ ತಂದು ಮುಖ್ಯಮಂತ್ರಿಗಳಿಂದಲೇ ಕೈಗಾರಿಕಾ ವಲಯ ಮಂಜೂರಿಗೆ ಸದನದಲ್ಲಿ ಒಪ್ಪಿಗೆ ಪಡೆಯುವಲ್ಲಿ ಶಾಸಕಿ ರೂಪಕಲಾ ಯಶಸ್ವಿಯಾದರು.

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್:ಇಂಜಿನಿಯರ್ಸ್ ದಿನಾಚರಣೆ-ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯರವರ ಜನ್ಮದಿನಾಚರಣೆ

ನೆಹರು ಯುವ ಕೇಂದ್ರ ಉಡುಪಿ ಮತ್ತು ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ (ರಿ.) ಅಬ್ಬನಡ್ಕ ನಂದಳಿಕೆ ವತಿಯಿಂದ ಸಂಘದ ರಂಗಮಂದಿರದಲ್ಲಿ ಇಂಜಿನಿಯರ್ಸ್ ದಿನಾಚರಣೆ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನಾಚರಣೆ ಆಚರಿಸಲಾಯಿತು.
ಸಂಘದ ಅಧ್ಯಕ್ಷರಾದ ಪ್ರಶಾಂತ್ ಪೂಜಾರಿ ರವರು ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದವರು ಸರ್ ಎಂ. ವಿಶ್ವೇಶ್ವರಯ್ಯ ಅವರು ಪರಿಶ್ರಮದಿಂದ ರಾಜ್ಯದಲ್ಲಿ ಜಲಾಶಯ ನಿರ್ಮಾಣ ಮಾಡಲು ಸಾಧ್ಯವಾಯಿತು. ವಿಶ್ವೇಶ್ವರಯ್ಯ ಅವರು ಬುದ್ಧಿ ಶಕ್ತಿಯಿಂದ ರಾಜ್ಯದಲ್ಲಿ ಹಲವು ಯೋಜನೆಗಳು ಜಾರಿಯಾಗಿ ಬಡಜನರು ಸೇರಿದಂತೆ ಸಮಾಜದ ಎಲ್ಲ ವರ್ಗದ ಜನರಿಗೆ ಅನುಕೂಲವಾಗಿದೆ. ಅಂತಹ ಮಹನೀಯರ ಆದರ್ಶ ಗುಣಗಳನ್ನು ಇಂದಿನ ಯುವ ಎಂಜಿನಿಯರ್ಗಳು ಅಳವಡಿಸಿಕೊಳ್ಳುವ ಮೂಲಕ ದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದರು. 
ಈ ಸಂದರ್ಭದಲ್ಲಿ ಸಂಘದ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಸಂಘದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಬೀರೊಟ್ಟು ದಿನೇಶ್ ಪೂಜಾರಿ, ನಿಕಟ ಪೂರ್ವಾಧ್ಯಕ್ಷರಾದ ಬೋಳ ಉದಯ ಅಂಚನ್, ಪೂರ್ವಾಧ್ಯಕ್ಷರಾದ ಅಬ್ಬನಡ್ಕ ಸತೀಶ್ ಪೂಜಾರಿ, ಉಪಾಧ್ಯಕ್ಷರಾದ ಸುರೇಶ್ ಅಬ್ಬನಡ್ಕ, ಕೋಶಾಧಿಕಾರಿ ವೀಣಾ ಪೂಜಾರಿ, ಅಬ್ಬನಡ್ಕ ಶ್ರೀ ವನದುರ್ಗಾ ಸ್ವಸಹಾಯ ಸಂಘದ ಅಧ್ಯಕ್ಷೆ ಲಲಿತಾ ಆಚಾರ್ಯ, ಅಬ್ಬನಡ್ಕ ಭಜನಾ ಮಂಡಳಿಯ ಅಧ್ಯಕ್ಷೆ ಸುಲೋಚನಾ ಕೋಟ್ಯಾನ್, ಸದಸ್ಯರಾದ ಪದ್ಮಶ್ರೀ ಪೂಜಾರಿ, ಕೀರ್ತನ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.




ಶ್ರೀನಿವಾಸಪುರ: ಕ್ಷೇತ್ರದಲ್ಲಿ ಮೂಲ ಸೌಕರ್ಯ ಕಲ್ಪಿಸಲು ಮೊದಲ ಆದ್ಯತೆ ನೀಡಲಾಗಿದೆ ಕೆ.ಆರ್.ರಮೇಶ್ ಕುಮಾರ್

ಶ್ರೀನಿವಾಸಪುರ: ಕ್ಷೇತ್ರದಲ್ಲಿ ಮೂಲ ಸೌಕರ್ಯ ಕಲ್ಪಿಸಲು ಮೊದಲ ಆದ್ಯತೆ ನೀಡಲಾಗಿದೆ. ಎಲ್ಲೇ ಮೂಲ ಸೌಕರ್ಯದ ಕೊರತೆ ಕಂಡುಬಂದರೂ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ಮುದಿಮಡಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಟಪಲ್ಲಿ ಗ್ರಾಮಕ್ಕೆ ಗುರುವಾರ ಶಾಸಕ ಕೆ.ಆರ್.ರಮೇಶ್ ಕುಮಾರ್ ಭೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆ ವಿಚಾರಿಸಿ ಮಾತನಾಡಿದರು.
ತಾಲ್ಲೂಕಿನಲ್ಲಿ ಸರ್ಕಾರಿ ಸೌಲಭ್ಯ ನೀಡುವಲ್ಲಿ ತಾರತಮ್ಯ ಮಾಡಿಲ್ಲ. ಯಾವುದೇ ಸೌಲಭ್ಯವಿರಲಿ ಪಕ್ಷಾತೀತವಾಗಿ ಅರ್ಹ ಫಲಾನುಭವಿಗಳಿಗೆ ನೀಡಲಾಗಿದೆ. ಮನೆ ಇಲ್ಲದವರಿಗೆ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಎಚ್ಚರ ವಹಿಸಲಾಗಿದೆ. ಅಗತ್ಯ ಇರುವ ಕಡೆ ಶುದ್ಧ ಕುಡಿಯುವ ನೀರು ಘಟಕ ಸ್ಥಾಪಿಸಲಾಗಿದೆ. ಗ್ರಾಮೀಣ ರಸ್ತೆಗಳ ನಿರ್ಮಾಣ ಹಾಗೂ ದುರಸ್ತಿಗೆ ಗಮನ ನೀಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಸುಬ್ಬನಾಯಕ್, ಚಲಪತಿ, ಕಿಟ್ಟಣ್ಣ ಕುಟುಂಬದ ಸದಸ್ಯರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದರು. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಇದ್ದರು.