

ಜೆಪ್ಪು; ದಿನಾಂಕ 5/6/2026 ರಂದು ಬೆಂಗಳೂರಿನ ಕಂಠೀರವ ಆಟದ ಮೈದಾನದಲ್ಲಿ ನಡೆದ ಕರ್ನಾಟಕ ರಾಜ್ಯ ಕಿಟ್ಸ್ ಅಥ್ಲೆಟಿಕ್ ಮೀಟ್ – 2026 ಬ್ರೋಡ್ ಜಂಪ್ ಸ್ಪರ್ಧೆಯಲ್ಲಿ ನಮ್ಮ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ, ಶ್ರೀ ಲಾರೆನ್ಸ್ ಡಿಸೋಜ ಹಾಗೂ ಶ್ರೀಮತಿ ಸುನಿತಾ ಕ್ರಾಸ್ತಾ ಇವರ ಮಗಳಾದ ಕುಮಾರಿ ಲಿಯಾನಿ ಡಿಸೋಜರವರು ಕಂಚಿನ ಪದಕವನ್ನು ಗಳಿಸುವುದರ ಮೂಲಕ ಶಾಲೆಗೆ ಹೆಮ್ಮೆಯನ್ನು ತಂದಿರುತ್ತಾರೆ.
ಇವರಿಗೆ ಶಾಲಾ ಸಂಚಾಲಕರು, ಮುಖ್ಯ ಶಿಕ್ಷಕಿ, ಬೋಧಕ/ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.



