ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಎ ದರ್ಜೆ ಗೌರವಕ್ಕೆ ಭಾಜನ:ಅಫೆಕ್ಸ್ ಬ್ಯಾಂಕಿನಿಂದ ಪ್ರಶಸ್ತಿಯ ಹೆಗ್ಗಳಿಕೆ – ಬ್ಯಾಲಹಳ್ಳಿ ಗೋವಿಂದಗೌಡ

ಕೋಲಾರ:- ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಇದೇ ಮೊದಲ ಬಾರಿಗೆ ಅಫೆಕ್ಸ್ ಬ್ಯಾಂಕಿನಿಂದ ರಾಜ್ಯದ ಎ ದರ್ಜೆ ಬ್ಯಾಂಕ್ ಪ್ರಶಸ್ತಿಗೆ ಭಾಜನವಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹರ್ಷವ್ಯಕ್ತಪಡಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು 1954ರಲ್ಲಿ ಆರಂಭವಾದ ಡಿಸಿಸಿ ಬ್ಯಾಂಕಿನ ಇತಿಹಾಸದಲ್ಲೇ ಇದೇ ಮೊದಲಬಾರಿಗೆ ಅಪೆಕ್ಸ್ ಬ್ಯಾಂಕಿನಿಂದ ಎ ದರ್ಜೆ ಬ್ಯಾಂಕ್ ಎಂಬ ಗೌರವ ಸಿಕ್ಕಿದ್ದು ಇದಕ್ಕೆ ಕಾರಣರಾದ ಬ್ಯಾಂಕಿನ ಆಡಳಿತ ಮಂಡಳಿ ಸಿಬ್ಬಂದಿ ಹಾಗೂ ಪ್ಯಾಕ್ಸ್ ನ ಸಿಬ್ಬಂದಿಗೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಕಳೆದ ಬಾರಿ ಬ್ಯಾಂಕಿಗೆ ಬಿ ದರ್ಜೆಯಲ್ಲಿ ರಾಜ್ಯಕ್ಕೆ ಪ್ರಥಮ ಎಂಬ ಗೌರವವಿತ್ತು. ಆದರೆ ಈ ಬಾರಿ ಎ ದರ್ಜೆ ಗೌರವ ದೊರಕಿದ್ದು ಮಂಗಳೂರು, ಬೆಳಗಾಂ ನಂತರ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಮೂರನೇ ಸ್ಥಾನದ ಗೌರವವನ್ನು ಗಳಿಸಿಕೊಂಡಿದೆ.
ಎ ದರ್ಜೆಯಲ್ಲಿ ಪ್ರಥಮ ಸ್ಥಾನಕ್ಕೆ ಏರಲು ಬ್ಯಾಂಕಿನ ಸಿಬ್ಬಂದಿ, ಪ್ಯಾಕ್ಸ್‍ಗಳ ಆಡಳಿತ ಮಂಡಳಿ ಮತ್ತು ಸಿಇಓ ಗಳು ಬದ್ದತೆಯಿಂದ ಕೆಲಸ ಮಾಡುವ ಮೂಲಕ ಬ್ಯಾಂಕಿನ ಘನತೆಯನ್ನು ಹೆಚ್ಚಿಸಬೇಕೆಂದು ಮನವಿ ಮಾಡಿದ್ದಾರೆ.
2004ರ ಮೊದಲು ದಿವಾಳಿಯಾಗಿದ್ದ ಡಿಸಿಸಿ ಬ್ಯಾಂಕ್ ಬೆಂಗಳೂರು ಗ್ರಾಮಾಂತರ ಜಿಲ್ಲಾ ಡಿಸಿಸಿ ಬ್ಯಾಂಕ್ ಜೊತೆ ವಿಲೀನವಾಗುವ ದುಸ್ಥಿತಿಯನ್ನು ತಲುಪಿತ್ತು ಆದರೆ ಇಂದು ರಾಜ್ಯದ ಮೊದಲ ಬ್ಯಾಂಕುಗಳ ಪಟ್ಟಿಯಲ್ಲಿ ಗೌರವಗಳಿಸಿಕೊಂಡಿದೆ.
ಬ್ಯಾಂಕಿನ ಎನ್.ಪಿ.ಎ. ಇಂದು ಶೇ.2ಕ್ಕಿಂತಲೂ ಕಡಿಮೆಯಾಗಿದ್ದು ಇದೊಂದು ಐತಿಹಾಸಿಕ ದಾಖಲೆಯಾಗಿದೆ. ಇಂದು ಸಮಾಜದ ಕಟ್ಟಕಡೆಯ ಬಡವರಿಗೂ ಸಾಲಸೌಲಭ್ಯ ಒದಗಿಸುವ ಮೂಲಕ ಮಹಿಳೆಯರನ್ನು ಮೀಟರ್ ಬಡ್ಡಿ ಶೋಷಣೆಯಿಂದ ತಪ್ಪಿಸುವಲ್ಲಿ ಪ್ರಮುಖಪಾತ್ರವಹಿಸಿದೆ ಎಂದು ತಿಳಿಸಿದ್ದಾರೆ.
ಸಹಕಾರಿ ರಂಗದಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸದಸ್ಯತ್ವ ನೀಡುವ ಗುರಿಯೊಂದಿಗೆ ಬ್ಯಾಂಕನ್ನು ಮುನ್ನೆಡಸಲು ಆಡಳಿತ ಮಂಡಳಿ ಸಹಕಾರ ನೀಡುತ್ತಿದ್ದು ಸಿಬ್ಬಂದಿಯೂ ಸಹ ಬದ್ದತೆಯಿಂದ ಕಾರ್ಯನಿರ್ವಹಿಸಬೇಕು ಎಂದು ತಾಕೀತು ಮಾಡಿದ್ದಾರೆ.
ದೇಶದಲ್ಲೇ ಅತಿ ಹೆಚ್ಚು ಮಹಿಳೆಯರಿಗೆ ಸಾಲ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಎರಡೂ ಜಿಲ್ಲೆಗಳಿಂದ 7.5ಲಕ್ಷ ಮಹಿಳೆಯರಿಗೆ ಸಾಲ ಸೌಲಭ್ಯ ನೀಡಿದ ಗೌರವ ಡಿಸಿಸಿ ಬ್ಯಾಂಕಿನದ್ದಾಗಿದೆ ಎಂದು ತಿಳಿಸಿದ್ದಾರೆ.
ಪ್ಯಾಕ್ಸ್‍ಗಳ ಗಣಕೀಕರಣ ಮತ್ತು ಗಣಕೀಕೃತ ಲೆಕ್ಕ ಪರಿಶೋಧನೆಯಲ್ಲಿ ರಾಜ್ಯದಲ್ಲೆ ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಪ್ರಥಮ ಸ್ಥಾನದ ಹೆಗ್ಗಳಿಕೆಗೆ ಪಾತ್ರವಾಗಿದೆ. ಜೊತೆಗೆ ಇ-ಶಕ್ತಿ ಅನುಷ್ಠಾನದಲ್ಲಿಯೂ ಬ್ಯಾಂಕೇ ಮುಂದಿದ್ದು ಈ ಸಾಧನೆಯನ್ನು ಮುಂದುವರೆಸಿಕೊಂಡು ಹೋಗಬೇಕಾಗಿದೆ ಎಂದರು.
ನಬಾರ್ಡ್ ಪರಿಶೀಲನೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಕೋಲಾರ ಡಿಸಿಸಿ ಬ್ಯಾಂಕ್ ಪ್ರಥಮ ಸ್ಥಾನದ ಗೌರವಕ್ಕೆ ಬಾಜವಾಗಿದೆ. ಆದರೆ ಠೇವಣಿ ಸಂಗ್ರಹದಲ್ಲಿ ನಾವು ನಿರೀಕ್ಷಿತ ಗುರಿಯನ್ನು ಸಾಧಿಸಲು ಸಾಧ್ಯವಾಗಿಲ್ಲ ಎಂದು ವಿಷಾಧಿಸಿದ್ದಾರೆ.
ಬ್ಯಾಂಕಿನ ಸಿಬ್ಬಂದಿ ಬಧ್ಧತೆಯಿಂದ ನೀಡಿರುವ ಗುರಿಯಂತೆ ಠೇವಣಿ ಸಂಗ್ರಹಿಸಿ ಬ್ಯಾಂಕಿನ ಘನತೆಯನ್ನು ಹೆಚ್ಚಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದ್ದಾರೆ.

ಕುಂದಾಪುರದಲ್ಲಿ ಶಿಕ್ಷಕರ ದಿನಾಚರಣೆ – ಶಿಕ್ಷಕರು ವಿದ್ಯಾರ್ಥಿಗಳಿಗೆ ಆದರ್ಶರಾಗಬೇಕು:ಫಾ|ಸ್ಟ್ಯಾನಿ ತಾವ್ರೊ

ಕುಂದಾಪುರ, ಸೆ.5: ಕುಂದಾಪುರ ರೋಜರಿ ಚರ್ಚಿನಲ್ಲಿ ಶಿಕ್ಷಕರ ದಿನಾಚರಣೆ ನಡೆಯಿತು. ಚರ್ಚಿನಲ್ಲಿ ಶಿಕ್ಷಕರೊಂದಿಗೆ ಪವಿತ್ರ ಬಲಿದಾನವನ್ನು ಅ|ವಂ| ಸ್ಟ್ಯಾನಿ ತಾವ್ರೊ ಬಲಿದಾನವನ್ನು ಅರ್ಪಿಸಿ “ಶಿಕ್ಷಕರು ವಿದ್ಯಾರ್ಥಿಗಳಿಗೆ ಆದರ್ಶರಾಗಬೇಕು. ವಿದ್ಯಾರ್ಥಿಗಳ ಜೀವನಲ್ಲಿ ಮೌಲ್ಯಗಳನ್ನು ಕಲಿಸಿಕೊಟ್ಟು ವಿದ್ಯಾರ್ಥಿಗಳನ್ನು ಸಮಾಜದ ಗೌರವಾನ್ವಿತ ನಾಗರಿಕರನ್ನಾಗಿ ರೂಪಿಸಬೇಕೆಂದು” ಹೇಳಿದರು.

     ಚರ್ಚಿನ ವೈ.ಸಿಎಸ್. ಸಂಘಟನೆಯಿಂದ ನಡೆದ ಕಾರ್ಯಕ್ರಮದಲ್ಲಿ ಅ|ವಂ| ಸ್ಟ್ಯಾನಿ ತಾವ್ರೊ ಎಲ್ಲಾ ಶಿಕ್ಷಕರಿಗೆ ಪುಷ್ಪಗಳನ್ನು ನೀಡಿ ಗೌರವಿಸಿದರು. ಉಪಾಧ್ಯಕ್ಷರಾದ ನಿವ್ರತ್ತ ಶಿಕ್ಷಕ ಎಲ್.ಜೆ.ಫೆರ್ನಾಂಡಿಸ್ ಶುಭ ಕೋರಿದರು. ಶಿಕ್ಷಕರಾದ ಸಿಸ್ಟರ್ ಆಶಾ ಮತ್ತು ಶಿಕ್ಷಕ ಜೋನ್ ಡಿಸೋಜಾ ತಮ್ಮ ಅನುಭವಗಳನ್ನು ಹಂಚಿಕೊಂಡರು. ವೈ.ಸಿ.ಎಸ್. ಸದಸ್ಯೆ ಶೈನಾ ವಾಜ್ ಶಿಕ್ಷಕರ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಳು. ವೈ.ಸಿ.ಎಸ್.  ಸದಸ್ಯರು ಶಿಕ್ಷಕರಿಗಾಗಿ ಲಘು ಆಡೋಟಗಳನ್ನು ನಡೆಸಿ ಗಾಯನದ ಮೂಲಕ ಶುಭ ಕೋರಿದರು.

    ಕಾರ್ಯಕ್ರಮದಲ್ಲಿ ಚರ್ಚ್ ವ್ಯಾಪ್ತಿಯ ಎಲ್ಲಾ ಶಿಕ್ಷಕರಿದ್ದು ವೇದಿಕೆಯಲ್ಲಿ ಕುಂದಾಪುರ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ವಂ|ಅಶ್ವಿನ್ ಅರಾನ್ಹಾ,, ಚರ್ಚಿನ ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ವೈ.ಸಿಎಸ್. ಪ್ರೇರಕಿ ಶೈಲಾ ಡಿಆಲ್ಮೇಡಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವೈ.ಸಿಎಸ್.ಅಧ್ಯಕ್ಷ ಪ್ರಜ್ವಲ್ ಪಾಯ್ಸ್ ನಿರೂಪಿಸದರು. ರೇಚೆಲ್ ಸಿಕ್ವೇರ ವಂದಿಸಿದರು.

ಕುಂದಾಪುರ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ಅನಾರೋಗ್ಯ ಪೀಡಿತರಿಗೆ ದೇಣಿಗೆ

ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ತಾಲೂಕು ಘಟಕ ಈ ದಿನ ಹಳ್ಳಿಹೊಳೆಯ ತಲೆಸ್ಸೀಮಿಯ ದಿಂದ ಬಳಲುತ್ತಿರುವ ಪ್ರೀತಿಕಾ ಎನ್ನುವ ಬಾಲಕಿಯ ಶಸ್ತ್ರ ಚಿಕಿತ್ಸೆಗೆ ರೂಪಾಯಿ 25,000/- ದೇಣಿಗೆ ನೀಡಿದರು. ಈ ದೇಣಿಗೆ ಯನ್ನು ಸಭಾಪತಿ ಎಸ್. ಜಯಕರ ಶೆಟ್ಟಿ ಹಸ್ತಾಂತರಿಸಿದರು. ಈ ಕಾರ್ಯಕ್ರಮ ದಲ್ಲಿ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಗಣೇಶ್ ಆಚಾರ್ಯ, ಡಾ. ಸೋನಿ, ಅಬ್ದುಲ್ ಬಶೀರ್, ಸತ್ಯನಾರಾಯಣ ಪುರಾಣಿಕ, ನಾರಾಯಣ ದೇವಾಡಿಗ ಮತ್ತು ಬಿ.ಎಮ್. ಚಂದ್ರಶೇಖರ ಉಪಸ್ಥಿತರಿದ್ದರು. ಈ ದೇಣಿಗೆಯನ್ನು ನೀಡಿದ ಎಲ್ಲಾ ಸದಸ್ಯ ರಿಗೆ ಸಭಾಪತಿ ಯವರು ದನ್ಯವಾದ ತಿಳಿಸಿದರು.

ಎರಡನೇಯ ಕಾರ್ಯಕ್ರಮ:- ಪಾರ್ಶ್ವ ವಾತ ದಿಂದ ಬಳಲುತ್ತಿರುವ ಗೋಪಾಲ ನಾಯಕ್ ಇವರಿಗೆ ರೂಪಾಯಿ ಆರು ಸಾವಿರ ದೇಣಿಗೆ ನೀಡಲಾಯಿತು. ಗೋಪಾಲ ನಾಯಕ್ ಇವರ ಇಬ್ಬರು ಮಕ್ಕಳು ಕೂಡಾ ವಿಶೇಷ ಚೇತನರು. ಈ ದೇಣಿಗೆಯನ್ನು ಸಭಾಪತಿ ಎಸ್ ಜಯಕರ ಶೆಟ್ಟಿ ಹಸ್ತಾಂತರಿಸಿದರು. ಕಾರ್ಯಕ್ರಮ ದಲ್ಲಿ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರು ಗಳಾದ ಗಣೇಶ್ ಆಚಾರ್ಯ, ಡಾ. ಸೋನಿ ಮತ್ತು ಸದಾನಂದ ಶೆಟ್ಟಿ ಉಪಸ್ಥಿತರಿದ್ದರು.

54 ರ ಪ್ರಾಯದಲ್ಲಿ ಮಹಿಳೆಯೊಬ್ಬಳು (ವಿಲ್ಮಾ ಕ್ರಾಸ್ಟೊ) ಅಡಿ 17,982 ಎತ್ತರದ ಖಾರ್ದುಂಗ್ಲಾದಲ್ಲಿ !!!

(ವಿಶ್ವದ ಎರಡನೇ ಅತಿ ಎತ್ತರದ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಬೈಕಿನಲ್ಲಿ 900 ಕಿ.ಮೀ ಪಯಣಿಸಿ ದಾಖಲೆ ಬರೆದ ಕುಂದಾಪುರದ ವಿಲ್ಮಾ ಕ್ರಾಸ್ಟೊ ಕರ್ವಾಲೋ ಬಗ್ಗೆ ವಿಶೇಷ ಲೇಖನ)

ಸಣ್ಣ ಪಟ್ಟಣದ ಊರಿನ ಜನರು ಯಾವಾಗಲೂ ದೊಡ್ಡ ಕನಸು ಕಾಣುತ್ತಾರೆ ಮತ್ತು ಸರಿಯಾದ ಸಮಯಕ್ಕೆ ಅಥವ ವಯಸ್ಸಾದರೂ ತಮ್ಮ ಕನಸುಗಳನ್ನು ಸಾಧಿಸಬೇಕು. ಕುಂದಾಪುರದ ಅನೇಕರು ತಮ್ಮ ಸಾಧನೆಯಿಂದ ಕುಂದಾಪುರವನ್ನು ಜಾಗತಿಕ ಭೂಪಟದಲ್ಲಿ ಗುರುತಿಸುವಂ ಮಾಡಿದ್ದಾರೆ. ಕ್ರೀಡಾಪಟುಗಳು, ಕಬಡ್ಡಿ ಆಟಗಾರರು, ರಂಗಭೂಮಿ ಕಲಾವಿದರು, ಹೋಟೆಲ್ ಉದ್ಯಮಿಗಳು ಹೀಗೆ ಈ ಪಟ್ಟಿಯನ್ನು ಇನ್ನೂ ಮುಂದುವರಿಸಬಹುದು ಹೀಗೆ ಹಲವಾರು ಕ್ಷೇತ್ರಗಳಲ್ಲಿ ನಮ್ಮ ಊರಿನವರು ಮಿಂಚಿದ್ದಾರೆ.

     ಹೀಗೆ ಇದು ನಮ್ಮದೇ ಊರಿನವರಾದ ಮತ್ತು ಈಗ ಬೆಂಗಳೂರಿನಲ್ಲಿ ನೆಲೆಸಿರುವ ಒರ್ವ ಮಹಿಳೆಯ ಕಥೆ.

25 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ವಿಲ್ಮಾ ಕ್ರಾಸ್ಟೊ ಕರ್ವಾಲೋ ಅವರು ಕುಂದಾಪುರದಲ್ಲಿ ಭದ್ರ ನೆಲೆ ಹೊಂದಿದವರಾಗಿದ್ದಾರೆ. ಅವರು ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಓದಿದವರು. ವಿಲ್ಮಾತನ್ನ ಕಾಲೇಜು ದಿನಗಳಲ್ಲಿ ವಾಲಿಬಾಲ್ ಆಡುತ್ತಿದ್ದಳು ಮಾತ್ರವಲ್ಲ ಉತ್ತಮ ವಾಲಿಬಾಲ್ ಪಟು, ವಿಶ್ವವಿಧ್ಯಾಲಯದ ಪರವಾಗಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕವನ್ನೂ ಪ್ರತಿನಿಧಿಸಿದ್ದಾರೆ.

    ಅವರು ಹೇಳುತ್ತಾರೆನೆಂದರೆ, ಮಹಿಳೆಯರು ಯಾವಾಗಲೂ ಮದುವೆಯಾದ ನಂತರ ಜೀವನದಲ್ಲಿ ತಮ್ಮ ಕನಸುಗಳನ್ನು ಮರೆತುಬಿಡುತ್ತಾರೆ. ಕುಟುಂಬದೊಂದಿಗೆ ಜವಾಬ್ದಾರಿಯನ್ನು ಅವರು ತಮ್ಮ ಕನಸುಗಳನ್ನು ಬದಿಗೊತ್ತುತ್ತಾರೆ.

   ಆದರೆ, ತಡವಾದರೂ ವಿಲ್ಮಾ ತನ್ನ ಕನಸನ್ನು ಸಾಕಾರಗೊಳಿಸಲು ಬಯಸಿದ್ದಳು, ರೋಹ್ಟಾಂಗ್ ಪಾಸ್ ಸುಮಾರು 8 ವರ್ಷಗಳ ಹಿಂದೆ.  ಪ್ರಸಿದ್ಧ ಬಾಲಿವುಡ್ ನಟಿಯೊಬ್ಬರು ತಮ್ಮ ತಂದೆಯೊಂದಿಗೆ ಮೋಟಾರ್‌ಬೈಕ್ ಸವಾರಿ ಮಾಡುತ್ತಿರುವ ಬಗ್ಗೆ ಅವರು ತಿಳಿದುಕೊಂಡು ಅವಳು ತನ್ನಷ್ಟಕ್ಕೆ ತಾನೇ ಯೋಚಿಸಿದಳು: “ನಾನು ಎಂದಾದರೂ ಏನನ್ನಾದರೂ ಸಾಧಿಸಬೇಕು ಆಗ ಪ್ರಶ್ನೆಯೊಂದು ಕಾಡತೊಡಗಿತು, ಪಾಸ್ ಎಂದರೇನು ಎಂದು ತಿಳಿಯದೆ, ಅವಳಿಗೆ ಅದರಲ್ಲಿ ಒಮ್ಮೆಲೇ ಕುತೂಹಲ ಹೆಚ್ಚಾಯಿತು. ಅದರ ಬಗ್ಗೆ ಸಂಶೋಧನೆ ಮಾಡಲು ಆರಂಭಿಸಿದರು.ಆ ಹೊತ್ತಿಗೆ, ಅವಳು ಹಿಮಾಲಯದಲ್ಲಿ ಪಾಸ್ ಎಂದರೇನು, ಬಾರ್ಡರ್ ರೋಡ್ ಆರ್ಗನೈಸೇಶನ್ (BRO) ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಳು.

   ಸಮುದ್ರ ಮಟ್ಟದಿಂದ ಸುಮಾರು 15000 ಅಡಿ ಎತ್ತರದಲ್ಲಿ ಇನ್ನೂ ಕೆಲವು ಪಾಸ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ. 2020 ರ ಹೊತ್ತಿಗೆ, ಹಿಮಾಲಯದಲ್ಲಿ ವಿಶ್ವದ ಅತಿ ಎತ್ತರದ ಮೋಟಾರು ರಸ್ತೆ,  ಸಮುದ್ರ ಮಟ್ಟದಿಂದ ಅಡಿ 17982 ರ ಖರ್ದುಂಗ್ಲಾ ಪಾಸ್ ಆಗಿತ್ತು. ಆಗ ಅವಳು ಹಿಮಾಲಯಕ್ಕೆ ತನ್ನ ಮೊದಲ ಪ್ರವಾಸವನ್ನು ಮಾಡಲು ನಿರ್ಧರಿಸಿದಳು. ಆದರೆ ಕೋವಿಡ್‌ ಮಾಹಾಮಾರಿಯಿಯ ಲಾಕ್‌ಡೌನ್ ಕಾರಣದಿಂದ ಮತ್ತು ಚೀನಾದ ಆಕ್ರಮಣದಿಂದ ಅವಳು ತನ್ನ ಯೋಜನೆಯನ್ನು ತಡೆಹಿಡಿಯಬೇಕಾಯ್ತು.

     2021 ರಲ್ಲಿ, ಅವರು ಖರ್ದುಂಗ್ಲಾ ಪಾಸ್‌ಗೆ ಸವಾರಿ ಮಾಡುವ ಕನಸಿನ ಯೋಜನೆಯೊಂದಿಗೆ ಲೇಹ್‌ಗೆ ತೆರಳಿದರು. ಆದರೆ ಅವಳ ಮೋಟಾರುಬೈಕಿಗೆ ಸಂಬಂಧಿಸಿದ ತಾಂತ್ರಿಕ ದೋಷದಿಂದ ಅದನ್ನು ಅವಳು ಸಾಧಿಸಲು ಸಾಧ್ಯವಾಗಲಿಲ್ಲ. ನಂತರ ಅವಳಿಗೆ ಇದನ್ನು ಸಾಧಿಸಲು ಇದಕ್ಕೆ ಸರಿಯಾದ ಪೂರ್ವ ತಯಾರಿ ಮಾಡಿಕೊಳ್ಳಬೇಕು ಎಂದು ತಿಳಿಯಿತು.

     ಈ ವರ್ಷ, ಮಾರ್ಚ್‌ನಲ್ಲಿಯೇ ಅವಳು ತನ್ನ ಮಗಳ ಜೊತೆಗೆ ಮತ್ತೊಮ್ಮೆ ಪ್ರಯತ್ನಿಸಲು ನಿರ್ಧರಿಸಿದಳು, ಅವಳ ಪ್ರಕಾರ ತನ್ನ ಮಗಳು ಮತ್ತು ಮಗ ಅವಳಿಗೆ ದೊಡ್ಡ ಪ್ರೇರಣೆ.ಅವರು ಒಳ್ಳೆಯ ಬೈಕ್ ಸವಾರರು.ಈ ಸಾಧನೆಗಾಗಿ ದೈಹಿಕವಾಗಿ ಸುಧ್ರಡಗೊಳ್ಳಲು ತಯಾರಿ ನಡೆಸಲಾಯಿತು. ಫಿಟ್ನೆಸ್, ಯೋಗ ಮತ್ತು ಉಸಿರಾಟದ ವ್ಯಾಯಾಮ ಮಾಡಲು ಆರಂಭಿಸಿದರು. ಕಾರಣ ಹಿಮಾಲಯದಲ್ಲಿ ಮೇಲಕ್ಕೆ ಪ್ರಯಾಣ ಸಾಗಿದಂತೆ, ಆಮ್ಲಜನಕದ ಮಟ್ಟ ಕಡಿಮೆ ಆಗುತ್ತದೆ.

ವಿಲ್ಮಾ ಮತ್ತು ಮಗಳು ಚೇರಿಶ್ ಕರ್ವಾಲ್ಲೊ

40% ಸವಾರಿ ಆಫ್‌ರೋಡ್‌ನಲ್ಲಿ ಇರುವುದರಿಂದ ಖರ್ದುಂಗ್ಲಾ ಪಾಸ್ ಕಡೆಗೆ ಸವಾರಿ ಮಾಡುವುದು ತುಂಬಾ ಸವಾಲಿನ ಸಂಗತಿಯಾಗಿದ್ದು ಕಡಿದಾದ ರಸ್ತೆಗಳು,ಯಾವುದೇ ಬ್ಯಾರಿಕೇಡ್ ಇಲ್ಲದೆ ಮತ್ತು ಕಡಿಮೆ ಆಮ್ಲಜನಕದ ಮಟ್ಟವು ಸವಾರರನ್ನು ತುಂಬಾ ತಲೆತಿರುಗುವಿಕೆಯಿಂದ ಮತ್ತು ವಾಕರಿಕೆಯಿಂದ ದುರ್ಬಲಗೊಳಿಸುತ್ತದೆ.

    ಖಾರ್ದುಂಗ್ಲಾ ಕಡೆಗೆ ಅವಳ ಪ್ರಯಾಣದ ನಡುವೆ ಒಂದೆರಡು ವಿರಾಮಗಳೊಂದಿಗೆ, ಅಂತಿಮವಾಗಿ ಆಗಸ್ಟ್ 22 ರಂದು ಅವಳ ಕನಸು ನನಸಾಯಿತು.ತಾನು ಈ ಪ್ರಪಂಚದ ತುತ್ತಾ ತುದಿಯಲ್ಲಿ ಇದ್ದೆನೆಂದು ತಿಳಿದು ರೋಮಾಂಚನವಾದೆ ಎಂದು. ಹೇಳುತ್ತಾಳೆ,

    ಅವಳು ಅನ್ವೇಷಿದ ಪ್ರಕಾರ ಮತ್ತು ಅವರು ತಿಳಿದ ಮಟ್ಟಿಗೆ ಈ ಸಾಧನೆ ಮಾಡಿದ ಹಿರಿಯ ಮಹಿಳೆಯರು 51 ಮತ್ತು 53 ವರ್ಷಗಳು ಮತ್ತು ವಿಲ್ಮಾ ಅವರಿಗೆ 54 ವರ್ಷಗಳು.ಅವಳು ತನ್ನ ಕನಸನ್ನು ನನಸಾಗಿಸಿದ ನಂತರ, ಅವರ ಪ್ರವಾಸವು ಇನ್ನೂ ಕೆಲವು ದಿನಗಳವರೆಗೆ ವಿವಿಧ ಸ್ಥಳಗಳಿಗೆ ಸಾಗಿತು.

   ಈ ಸವಾರಿಯ ಸಂದರ್ಭ ಅವಳ ಮಗಳು ಚೇರಿಶ್ ಕರ್ವಾಲೋ ಸಂಗಾತಿಯಾಗಿದ್ದಳು. ಅವರ ಒಟ್ಟು ಪ್ರವಾಸವು ಸುಮಾರು 900 ಕಿಮೀ, ಚೀನಾ ಗಡಿಯವರೆಗೆ ಪ್ರಯಾಣಿಸಿತು.

ಆಫ್ ರೋಡ್ ರೈಡಿಂಗ್, ಕಡಿಮೆ ಆಮ್ಲಜನಕದ ಮಟ್ಟ, ರಸ್ತೆಯಲ್ಲಿ ಜಲ್ಲಿಕಲ್ಲು, ಸಡಿಲವಾದ ಮಣ್ಣು ಮತ್ತು ನೀರು ದಾಟುವಿಕೆ ಹೀಗೆ ಸವಾರಿ ತುಂಬಾ ಸವಾಲಿನದಾಗುತ್ತದೆ. ಆದರೆ ಒಮ್ಮೆ ನೀವು ಪ್ರವಾಸವನ್ನು ಪೂರ್ಣಗೊಳಿಸಿದರೆ, ನೀವು ಪ್ರಪಂಚದ ತುತ್ತ ತುದಿಯಲ್ಲಿ ಇದ್ದಂತೆ ಭಾವಿಸುತ್ತೀರಿ ಎಂದು ವಿಲ್ಮಾ ಹೇಳುತ್ತಾರೆ.

    ಈ ಬಾರಿ ಸವಾರಿ ಮಾಡಲು ಯೋಗ್ಯವಾದ ಬೈಕ್‌ (R E) ಹಿಮಾಲಯನ್ ನನ್ನು ಆಯ್ಕೆ ಮಾಡಿಕೊಂಡೆ, ಹಿಮಾಲಯ ಭೂಪ್ರದೇಶ.ಈ ರೀತಿಯ ಸಾಧನೆ ಮಾಡಲು ಆಸಕ್ತಿ, ಸಾಮರ್ಥ್ಯ ಮತ್ತು ಅವಕಾಶವನ್ನು ಹೊಂದಿರಬೇಕು, ಸವಾಲಿನ ಕನಸುಗಳು ಮತ್ತು ಅವಳು ಎಲ್ಲವನ್ನೂ ಹೊಂದಿರಬೇಕು ಎಂದು ವಿಲ್ಮಾ ಹೇಳುತ್ತಾರೆ, ಇದೆಲ್ಲವೂ ನನ್ನ ಹತ್ತಿರ ಇತ್ತುಎಂದು ಅವಳು ತುಂಬಾ ಹೆಮ್ಮೆಪಟ್ಟುಕೊಳ್ಳುತ್ತಾಳೆ.

   ವಿಲ್ಮಾಳ ಖರ್ದುಂಗ್ಲಾಗೆ ಸವಾರಿ ಮಾಡುವುದು ಅವಳ ಕನಸು ನನಸಾಯಿತು, ಅವಳು ಇನ್ನೂ ಕೆಲವು ಸಾಹಸ ಪ್ರವಾಸಗಳನ್ನು ಮಾಡಬೇಕೆಂದು ಆಶಿಸಿದ್ದಾಳೆ  “ನಾನು ನನ್ನ ಕನಸನ್ನು ಅನುಸರಿಸುತ್ತೇನೆ” ಎಂದು ವಿಲ್ಮಾ ಮಾತು.

ವಿಶ್ವದ ಎರಡನೇ ಅತಿ ಎತ್ತರದ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಬೈಕಿನಲ್ಲಿ ಪಯಣಿಸಿ 900 ಕಿ.ಮೀ. ದಾಖಲೆ ಬರೆದ ಕುಂದಾಪುರದ ವಿಲ್ಮಾ ಕ್ರಾಸ್ಟೊ ಕರ್ವಾಲ್ಲೊ

ಕುಂದಾಪುರ: ಕುಂದಾಪುರದ ಮಾಜಿ ಪುರಸಭಾ ಅಧ್ಯಕ್ಷ, ಕ್ರೀಡಾಳು ದಿ. ಎಡ್ವಿನ್ ಕ್ರಾಸ್ಟೊ ಅವರ ಪುತ್ರಿ ಹಾಗೂ ಕುಂದಾಪುರ ಪುರಸಭೆಯ ಮಾಜಿ ಉಪಾಧ್ಯಕ್ಷೆ ಲಿಯೋನೆಲ್ಲಾ ಕ್ರಾಸ್ಟೊ ಹಾಗೂ ಕುಂದಾಪುರ ಮೂಲದ ಲೆಸ್ಲಿ ಕರ್ವಾಲೊ ಅವರ ಪತ್ನಿ. ವಿಲ್ಮಾ  ಮೂಲದ 54 ವರ್ಷದ ವಿಲ್ಮಾ ಕ್ರಾಸ್ಟೊ ಕರ್ವಾಲ್ಲೊ  ಅವರು ವಿಶ್ವದ ಎರಡನೇ ಅತಿ ಎತ್ತರದ ಮೋಟಾರು ವಾಹನ ರಸ್ತೆಯಾದ ಖರ್ದುಂಗ್ ಲಾ ಪಾಸ್‌ನಲ್ಲಿ ಮೋಟಾರು ಬೈಕ್‌ನಲ್ಲಿ ಪ್ರಯಾಣಿಸುವ ಕನಸನ್ನು ನನಸಾಗಿಸುವುದರ ಮೂಲಕ ವಿಶೇಷ ಸಾಧನೆ ಮಾಡಿದ ದಾಖಲೆ ಬರೆದಿದ್ದಾಳೆ. 54 ವರ್ಷದ ಭಾರತೀಯ ಹಿರಿಯ ಮಹಿಳೆಯಾಗಿ ವಿಲ್ಮಾ ಮೋಟಾರ್‌ ಬೈಕಿನಲ್ಲಿ ಖುರ್ದುಂಗ್ ಲಾ, ನುಬ್ರಾ, ಹಂಟರ್, ಪಾಂಗಾಂಗ್ ಲೇಕ್, ತ್ಸೋ ಮೊರಿರಿ ಮೂಲಕ ಲೇಹ್ ತಲುಪಿದಳು. ಈ ಮಾರ್ಗ ತುಂಬ ಕಠಿಣವಾಗಿದ್ದು, ಉಷ್ಣ್ಸ್ತೆ 40 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ, ಈ ಪಯಣದ ಸಮಯ ಅವಳ ಮಗಳು ಚೇರಿಶ್ ಕರ್ವಾಲ್ಲೊ ಅವಳ ಜೊತೆಗಿದ್ದು, ಅವಳು ತಾಯಿಗೆ ಜೊತೆ ನೀಡಿದಳು. ಒಟ್ಟಾರೆಯಾಗಿ 500 ಕಿ.ಮಿ ವಿಲ್ಮಾ ಅವರೇ ಬೈಕ್ ಚಲಾಯ್ಸಿದರು. ಈ ಮಾರ್ಗ ಲಡಾಖಿನ 17,982 ಅಡಿ ಎತ್ತರ ಇದ್ದು ಖರ್ದ್ಲುಂಗಾ ಪಾಸ್ನ ತುತ್ತ ತುದಿಗ್ಎ ತೆರಳಿ ವಿಲ್ಮಾ ಈ ಸಾಧನೆ ಮಾಡಿದ್ದಾರೆ. ಈ ಪ್ರದೇಶದಲ್ಲಿ ಕಡಿಮೆ ಆಮ್ಲಜನಕದ ಮಟ್ಟವಾಗಿತ್ತು, ರಸ್ತೆ ಪರಿಸ್ಥಿತಿಗಳು ಮತ್ತು ಪ್ರದೇಶಗಳು ಸವಾಲಾಗಿತ್ತು.

      ಈ ಪ್ರಯಾಣವನ್ನು ಪ್ರಾರಂಭಿಸುವ ಮೊದಲು ನಾನು ಕಳೆದ ಆರು ತಿಂಗಳಿನಿಂದ ತರಬೇತಿ ಪಡೆದಿದ್ದೆ. ನನ್ನ ಮಗ ಮತ್ತು ಮಗಳು ನನ್ನ ದೊಡ್ಡ ಪ್ರೇರಕರು, ಎಂದು ವಿಲ್ಮಾ ಹೇಳುತ್ತಾರೆ. ಈ ಪ್ರವಾಸವು ನನ್ನ ಕನಸುಗಳಲ್ಲಿ ಒಂದಾಗಿತ್ತು ಮತ್ತು ಅವರು ಅದನ್ನು ನನಸಾಗಿಸಿದೆ ಎಂದು ಹೇಳಿದರು.

    ವಿಲ್ಮಾ ಮೊದಲಿನಿಂದಲೂ ಕ್ರೀಡೆಯಲ್ಲಿ ಹೆಸರು ಗಳಿಸಿದವರು. ಭಂಡಾರ್ಕಾರ್ಸ್ ಕಾಲೇಜಿನ ಹಳೆಯ ವಿದ್ಯಾರ್ಥಿನಿಯಾಗಿದ್ದು ಕರ್ನಾಟಕದಿಂದ ರಾಷ್ಟ್ರಮಟ್ಟದಲ್ಲಿ ವಾಲಿಬಾಲ್ ತಂಡವನ್ನು ಪ್ರತಿನಿಧಿಸುವ ಮೊದಲ ಹುಡುಗಿಯಾಗಿದ್ದಳು. ಕ್ರಾಸ್ಟೊ ಕುಟುಂಬ ಅವರ ತಂದೆಯಂತೆ ಕ್ರೀಡೆಯಲ್ಲಿ ತೊಡಗಿಕೊಂಡವರಿಗೆ ಸ್ಪೂರ್ತಿದಾಯಕರು. ವಿಲ್ಮಾಳ ಅಣ್ಣ ವಿನ್ಸೆಂಟ್ ಕ್ರಾಸ್ಟೊ ಕ್ರೀಡಾ ಪಟುಗಳಿಗೆ ಆಥ್ಲೆಟ್ ಗಳಿಗೆ ಪ್ರೇರಣಾ ಭರಿತರು. ಅದಕ್ಕೆ ನಾನೇ ಸಾಕ್ಷಿ, ನಾನು ತಾಲೂಕು ಮಟ್ಟದ ಒಟದಲ್ಲಿ ಒಡುವಾಗ ನನಗೆ ಪ್ರೇರಣೆ ನೀಡಲು ಟ್ರ್ಯಾಕ್ ಹೊರಗಡೆಯಿಂದ ಒಡುತ್ತಾ ನನ್ನನ್ನು ಹಿಂಬಾಲಿಸಿ ಪ್ರೇರಣೆ ನೀಡಿದ್ದು, ಈಗಲೂ ಆ ದ್ರಶ್ಯ ನನ್ನ ಕಣ್ಣ ಮುಂದೆ ನಿಲ್ಲುತ್ತದೆ. ಈಗ ವಿಲ್ಮಾ ಪ್ರಸ್ತುತ ಬೆಂಗಳೂರಿನಲ್ಲಿ ಕಾರ್ಪೊರೇಟ್ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದಾರೆ. ಜನನುಡಿ.ಡಾಟ್ ಕಾಮ್ ಸಂಸ್ಥೆ ವಿಲ್ಲಾ ಮತ್ತು ಅವಳ ಕುಟುಂಬಕ್ಕೆ ಶುಭಾಶಯವನ್ನು ಕೋರುತ್ತದೆ.

ಜಿಲ್ಲಾ ಫುಟ್ಬಾಲ್ ಪಂದ್ಯಾವಳಿಯಲ್ಲಿ ಸಂ.ಅಂತೋನಿ ಆಂ. ಮಾ. ಶಾಲಾ ಬಾಲಕಿಯರಿಗೆ ಪ್ರಥಮ ಸ್ಥಾನ- ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ

ಮಣಿಪಾಲ: ಎಂ ಪಿ ಯು ಸಿ ಕಾಲೇಜು ಮಣಿಪಾಲ ಆಯೋಜಿಸಿದ ಜಿಲ್ಲಾ ಮಟ್ಟದ ಪುಟ್ಬಾಲ್ ಪಂದ್ಯಾವಳಿಯಲ್ಲಿ, ಸಾಸ್ತಾನದ ಸಂತ ಅಂತೋನಿ ಆಂಗ್ಲ ಮಾಧ್ಯಮ ಶಾಲೆಯ ಬಾಲಕಿಯರು ಫೈನಲ್ ಪಂದ್ಯದಲ್ಲಿ ಗೆದ್ದು ಪ್ರಥಮ ಸ್ಥಾನ ಪಡೆದು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ.

    ಶಾಲೆಗೆ ಕೀರ್ತಿ ತಂದ ಬಾಲಕೀಯರ ತಂಡಕ್ಕೆ ಶಾಲೆಯ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ವಂ|ಫಾ|ಸುನೀಲ್ ಡಿಸಿಲ್ವಾ, ಶಾಲಾ ಮುಖ್ಯೋಪಾಧ್ಯಾಯಿನಿ ಸುಜಾ ಡಿಸೋಜಾ, ತರಬೇತಿದಾರರು, ಶಿಕ್ಷಕರು, ಪಾಲಕರು ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

ಪಿಯುಸ್ ನಗರ ಕಥೊಲಿಕ್ ಸಭಾ ಘಟಕದಿಂದ ಥಾವ್ನ್ ಭಾಷಣ್ ಸ್ಪರ್ಧೆ

ಕುಂದಾಪುರ, ಸೆ. 4: ಕಥೊಲಿಕ್ ಸಭಾ ಉಡುಪಿ ಪ್ರದೇಶ್ ಇವರ ನಿರ್ದೇಶನದಲ್ಲಿ ಪಿಯುಸ್ ನಗರ ಚರ್ಚಿನ ಕಥೊಲಿಕ್ ಸಭಾ ಘಟಕದ ಭಾಷಣ ಸ್ಪರ್ಧೆಯು, ಪಿಯುಸ್ ನಗರ ಚರ್ಚಿನ ಸಭಾಭವನದಲ್ಲಿ ನಡೆಯಿತು. ಭಾಷಣ ಸ್ಪರ್ಧೆಯು 1 ರಿಂದ 4 ನೇ ಕ್ಲಾಸಿನ ಮಕ್ಕಳಿಎ “ನನ್ನ ಊರು” 5 ರಿಂದ 7 ಕ್ಲಾಸಿನ ಮಕ್ಕಳಿಗೆ ಪ್ಲ್ಯಾಸ್ಟಿಕಿ “ದುಸ್ಪರಿಣಾಮ”  8 ರಿಂದ 10 ನೇ ಕ್ಲಾಸ್ ಮಕ್ಕಳಿಗೆ “ವಿವಿಧತೆ ಮತ್ತು ವಿಭಿನ್ನತೆಯಲ್ಲಿ  ಭಾರತದ ಏಕತೆ” ಮತ್ತು 16 ರಿಂದ 25 ವರ್ಷದ ಒಳಗಿನವರಿಗೆ ಕನ್ನಡ ಮತ್ತು ಕೊಂಕಣಿಯಲ್ಲಿ “ನವ್ಯ ಭಾರತದ ದ್ವನಿಯಾಗೋಣ” ವಿಷಯದ ಕುರಿತು ಭಾಷಗಳನು ನಡೆಯಿತು.

     1 ನೇ ವಿಭಾಗದಲ್ಲಿ ಸ್ಟೇರಲ್ ಮಸ್ಕರೇನ್ಹಾಸ್, ಪ್ರಥಮ.ಅನೋಲ್ಯ ಡಿಸೋಜಾ, ದ್ವೀತಿಯ. ಸೆಲ್ವಿಟಾ ಡಿಸೋಜಾ, ತ್ರತೀಯ. 2ನೇ ವಿಭಾಗದಲ್ಲಿ ರೀಯೊನಾ ಡಿಸೋಜಾ, ಪ್ರಥಮ. 3 ನೇ ವಿಭಾಗದಲ್ಲಿ ಬ್ರೆಂಡನ್ ರೆಬೆಲ್ಲೊ, ಪ್ರಥಮ. ಜೆನಿಶಾ ಡಿಸೋಜಾ ದ್ವೀತಿಯ.ಒಲ್ಗಾ ಡಿಮೆಲ್ಲೊ ತ್ರತೀಯ, 16 ರಿಂದ 25 ವರ್ಷದ ಒಳಗಿನವರ ಕನ್ನಡ ವಿಭಾಗದಲ್ಲಿ ಸೀಮೊನ್ ಪಿರೇರಾ, ಕೊಂಕಣಿ ವಿಭಾಗದಲ್ಲಿ ಅಲ್ವಿಟಾ ನಜರೇತ್ ಪ್ರಥಮ. ಸ್ಥಾನ ಪಡೆದರು.ಸ್ಪರ್ಧೆಯಲ್ಲಿ ಭಾಗವಹಿಸಿದರೆಲ್ಲರಿಗೂ ಬಹುಮಾನವನ್ನು ನೀಡಿ ಸಂಘಟಕರು ಸ್ಪರ್ಧಿಗಳಿಗೆ ಪ್ರೇರಣೆ ನೀಡಿದರು. ಸಾಹಿತಿ ಪತ್ರಕರ್ತ ಬರ್ನಾಡ್ ಡಿಕೋಸ್ತಾ, ನಿವ್ರತ್ತ ಶಿಕ್ಷಕ ಎಲ್.ಜೆ.ಫೆರ್ನಾಂಡಿಸ್,ಕುಂದಾಪುರ ವಲಯ ಕಥೊಲಿಕ್ ಸಭೆಯ ಮಾಜಿ ನಿಕಟಪೂರ್ವ ಅಧ್ಯಕ್ಷೆ ಮೇಬಲ್ ಡಿಸೋಜಾ ತೀರ್ಪುಗಾರಾಗಿದ್ದರು.

   ಪಿಯುಸ್ ನಗರ ಚರ್ಚಿನ ಕಥೊಲಿಕ್ ಸಭಾ ಘಟಕದ ನಿಕಟಪೂರ್ವ ಅಧ್ಯಕ್ಷ ಮೆಲ್ವಿನ್ ಡಿಮೆಲ್ಲೊ, ನಿಯೋಜಿತ ಅಧ್ಯಕ್ಷ ಅಲೆಕ್ಸಾಂಡರ್ ಲೂವಿಸ್, ರೀಟಾ ಕ್ವಾಡರ್ಸ್ ತೀರ್ಪುಗಾರರನ್ನು ಪರಿಚಯಿಸಿದರು ಅಧ್ಯಕ್ಷ ರೇಮಿ ಫೆರ್ನಾಂಡಿಸ್ ಸ್ವಾಗತಿಸಿದರು. ಖಜಾಂಚಿ ಸಂತಾನ್ ಕ್ರಾಸ್ತಾ ಧನ್ಯವಾದಗಳನ್ನು ಸಮರ್ಪಿಸಿದರು, ಕಾರ್ಯದರ್ಶಿ ಪ್ರಮೀಳಾ ಡೆಸಾ ನಿರೂಪಿಸಿದರು.

ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ಐಟಾ ಕರ್ನಾಟದ ವತಿಯಿಂದ “ಆನ್‌ಲೈನ್ ಶಿಕ್ಷಕ ದಿನಾಚರಣೆ-2022”

ಬೆಂಗಳೂರು: ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ಐಟಾ ಕರ್ನಾಟದ ವತಿಯಿಂದ ಸೆ.೫ ರಂದು ಸೋಮವಾರ ರಾತ್ರಿ ೯ಗಂಟೆಗೆ ರಾಜ್ಯಮಟ್ಟದ “ಆನ್‌ಲೈನ್ ಶಿಕ್ಷಕ ದಿನಾಚರಣೆ-೨೦೨೨” ನಡೆಯಲಿದೆ ಎಂದು ರಾಜ್ಯಾಧ್ಯಕ್ಷ ಮುಹಮ್ಮದ್ ರಝಾ ಮಾನ್ವಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಜಿ ಸಚಿವ ಹಾಗೂ ಪ್ರತಿಪಕ್ಷದ ಉಪನಾಯಕ ಯು.ಟಿ.ಕಾದರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ಕುವೆಂಪು ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಬಿ.ಪಿ. ವೀರಭದ್ರಪ್ಪ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ. ಸೆಂಟ್ರಲ್ ಎಜ್ಯುಕೇಶನ್ ಬೋರ್ಡ್ ನಿರ್ದೇಶಕ ಶಿಕ್ಷಣ ತಜ್ಞ ಸೈಯ್ಯದ್ ತನ್ವೀರ್ ಆಹ್ಮದ್ ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ರಾಷ್ಟಿಯ ಅಧ್ಯಕ್ಷ ಅಬ್ದುಲ್ ರಹೀಮ್ ಶೇಖ್ ಅಧ್ಯಕ್ಷತೆ ವಹಿಸಲಿದ್ದಾರೆ.

ಕಾರ್ಯಕ್ರಮ ಝೂಮ್ ಮೂಲಕ ಆನ್ಲೈನ್ ನಡೆಲಿದ್ದು YouTube.com/aiitakarnataka YouTube channel ನಲ್ಲಿ ನೇರ ಪ್ರಸಾರಗೊಳ್ಳುತ್ತಿದೆ. ರಾಜ್ಯದ ಶಿಕ್ಷಕ ಬಾಂಧವರು, ವಿದ್ಯಾರ್ಥಿಗಳು ಹಾಗೂ ಪಾಲಕರು ಯೂಟ್ಯೂಬ್ ಮೂಲಕ ಕಾರ್ಯಕ್ರಮವನ್ನು ವೀಕ್ಷಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ನೆಲವಂಕಿ ಗ್ರಾಮಪಂಚಾಯಿತಿ ಉಪಾಧ್ಯಕ್ಷೆಯಾಗಿ ಕಾಂಗ್ರೆಸ್ ಬೆಂಬಲಿತ ಅಲುಮೇಲಮ್ಮ ಆಯ್ಕೆ

ಶ್ರೀನಿವಾಸಪುರ : ತಾಲ್ಲೂಕಿನ ನೆಲವಂಕಿ ಗ್ರಾಮಪಂಚಾಯಿತಿ ಉಪಾಧ್ಯಕ್ಷರ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ 2ನೇ ಅವಧಿಗಾಗಿ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಲುಮೇಲಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಾಲ್ಲೂಕಿನ ನೆಲವಂಕಿ ಗ್ರಾ.ಪಂ. ಸೇರಿದಂತೆ ಒಟ್ಟು 18 ಸದಸ್ಯರಿದ್ದು, ಅದರಲ್ಲಿ ಕಾಂಗ್ರೆಸ್ ಬೆಂಬಲಿತ 14, ಜೆಡಿಎಸ್ ಬೆಂಬಲಿತ 4 ಸದಸ್ಯರಿದ್ದು, ಈ ಹಿಂದಿನ ಉಪಾಧ್ಯಕ್ಷರಾಗಿದ್ದ ಮಮತಸೋಮಶೇಖರ್ ರಾಜೀನಾಮೆಯಿಂದ ತೆರವುಗೊಂಡಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಲುಮೇಲಮ್ಮ ಏಕೈಕ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ .
ತಾ.ಪಂ ಮಾಜಿ ಸದಸ್ಯರಾದ ಕೆ.ಕೆ.ಮಂಜು ಮಾತನಾಡಿ ಶಾಸಕರಾದ ಕೆ.ಆರ್.ರಮೇಶ್‍ಕುಮಾರ್ ಮಾರ್ಗದರ್ಶನದಲ್ಲಿ ಉಪಾಧ್ಯಕ್ಷರ ಆಯ್ಕೆಯಾಗಿದ್ದು, ಈ ಗ್ರಾಮಪಂಚಾಯಿತಿಗೆ ಸಂಬಂದಿಸಿದಂತೆ ಎಲ್ಲಾ ಗ್ರಾಮಗಳಿಗೂ ಪಕ್ಷಬೇದವಿಲ್ಲದೆ ಸರ್ಕಾರದ ಸೌಲಭ್ಯಗಳನ್ನು ನೀಡಲಾಗಿದೆ ಎಂದರು.
ಚುನಾವಣಾ ಪ್ರಕ್ರಿಯೆಯನ್ನು ತೋಟಗಾರಿಕೆ ಇಲಾಖೆ ಹಿರಿಯ ನಿರ್ದೇಶಕ ಎಂ.ಶ್ರೀನಿವಾಸನ್ ನಡೆಸಿಕೊಟ್ಟರು. ಗ್ರಾ.ಪಂ.ಅಧ್ಯಕ್ಷೆ ಗೌತಮಿ ಮುನಿರಾಜು, ಪಿಡಿಒ ಗೌಸ್‍ಸಾಬ್, ಮುಖಂಡರಾದ ಮುನಿರಾಜು, ಬಾಬುರೆಡ್ಡಿ, ಮುನಿಯಪ್ಪ, ಸುದರ್ಶನ್, ಶಂಕರಪ್ಪ, ಎನ್.ರಘುನಾಥರೆಡ್ಡಿ, ರತ್ನಪ್ಪ ಹಾಗು ಗ್ರಾ.ಪಂ.ಸದಸ್ಯರು ಇದ್ದರು.