ನೀಟ್ ಪರೀಕ್ಷಾ ಸಾಧನೆ ಆರ್. ಎನ್. ಶೆಟ್ಟಿ ಪಿ.ಯು.ಕಾಲೇಜ್ ಪಲ್ಲವಿ.ಪಿ. ಗೆ 97.84 %

2021-22 ನೇ ಸಾಲಿನ ನೀಟ್ ಪರೀಕ್ಷೆಯಲ್ಲಿ ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾದ ಪಲ್ಲವಿ. ಪಿ ಇವರು 97.84 ಪರ್ಸೆಂಟೈಲ್ ಪಡೆದಿರುತ್ತಾಳೆ..ಪಲ್ಲವಿ ಯ ಈ ಉತ್ಕೃಷ್ಟ ಸಾಧನೆಯನ್ನು ಶ್ಲಾಘಿಸಿ ಕಾಲೇಜಿನ‌ ಸಂಚಾಲಕರಾದ ಶ್ರೀ ಸುಕುಮಾರ್ ಶೆಟ್ಟಿಯವರು,  ಕಾಲೇಜಿನ ಆಡಳಿತ ಮಂಡಳಿ ಕುಂದಾಪುರ ಎಜುಕೇಶನ್ ಸೊಸೈಟಿ, ಪ್ರಾಂಶುಪಾಲರು ಹಾಗೂ ಅಧ್ಯಾಪಕ ವೃಂದದವರು ಅಭಿನಂದನೆ ಸಲ್ಲಿಸಿರುತ್ತಾರೆ. 

ಸಂಗೀತ, ಸಾಹಿತ್ಯ, ಸಂಸ್ಕøತಿಗೆ ಕರ್ಣಾಟಕ ಬ್ಯಾಂಕ್ ಸದಾ ಪ್ರೇರಣೆ


ಕರ್ಣಾಟಕ ಬ್ಯಾಂಕ್ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದ್ದು ಎಲ್ಲರ ಜೀವನಕ್ಕೆ ಸ್ಪೂರ್ತಿಯಾಗಿರುವ ಉತ್ತಮ ಸಂಗೀತ, ಸಾಹಿತ್ಯ, ಸಾಂಸ್ಕøತಿಕ ಚಟುವಟಿಕೆಗಳಿಗೆ ನಿರಂತರವಾಗಿ ಸ್ಪೂರ್ತಿ, ಪ್ರೇರಣೆ ನೀಡುತ್ತಾ ಬಂದಿದೆ. ಅದರಲ್ಲೂ ಯುವ ಜನಾಂಗ ಶಿಕ್ಷಣ, ವೃತ್ತಿಯ ಒತ್ತಡದಲ್ಲೂ ಸಾಹಿತ್ಯ ಸಂಗೀತದಂತಹ ಉತ್ತಮ ಚಟುವಟಿಕೆಯ ಬಗ್ಗೆ ಆಸಕ್ತಿ ತೋರುವಾಗ ಸಂತೋಷವಾಗುತ್ತದೆ. ಕುಂದಾಪುರದಲ್ಲಿ ಸಂಗೀತ ಭಾರತಿ ಟ್ರಸ್ಟ್ (ರಿ.), ಚಿರಂತನ ಚಾರಿಟೆಬಲ್ ಟ್ರಸ್ಟ್ (ರಿ.) ಸುರತ್ಕಲ್ ಸಂಯುಕ್ತ ಆಶ್ರಯದಲ್ಲಿ ಹದಿಮೂರು ಮಂದಿ ಯುವ ಕಲಾವಿದರು ತಮ್ಮ ಸಂಗೀತ ಹಾಗೂ ಸಂಗೀತ ವಾದನಗಳ ಪ್ರತಿಭೆ ತೋರಿಸಲು ಅವಕಾಶ ನೀಡಿರುವುದು ಬಹಳ ಅಭಿನಂದನೀಯ ಕಾರ್ಯವಾಗಿದೆ. ಈ ಪ್ರತಿಭೆಗಳೆಲ್ಲ ಉತ್ತಮ ಭವಿಷ್ಯವಿದೆ. ಕರ್ಣಾಟಕ ಬ್ಯಾಂಕ್ ಭವಿಷ್ಯದಲ್ಲೂ ಸಂಗೀತ ಭಾರತಿಯ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಲಿದೆ ಎಂದು ಕರ್ಣಾಟಕ ಬ್ಯಾಂಕಿನ ಸಿಒಒ ವೈ. ವಿ. ಬಾಲಚಂದ್ರ ಅವರು ಹೇಳಿದರು.
ಕುಂದಾಪುರ ಭಂಡಾರ್‍ಕಾರ್ಸ್ ಕಾಲೇಜಿನ ಕುಂಭಾಸಿ ರಾಧಾಬಾಯಿ ವೆಂಕಟರಮಣ ಪ್ರಭು ರಂಗ ಮಂದಿರ, ರಂಗ ಅಧ್ಯಯನ ಕೇಂದ್ರದಲ್ಲಿ ಏರ್ಪಡಿಸಿದ ಹಿಂದುಸ್ತಾನಿ ಯುವ ಸಂಗೀತೋತ್ಸವ “ಅಮೃತ ಭಾರತಿಗೆ ಸಂಗೀತದಾರತಿ” ಸಮಾರಂಭದಲ್ಲಿ ಯುವ ಸಂಗೀತ ಕಲಾವಿದರನ್ನು ಗೌರವಿಸುತ್ತಾ ಅವರು ಮಾತನಾಡುತ್ತಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಗೀತ ಭಾರತಿ ಅಧ್ಯಕ್ಷ ಕೆ. ಶ್ರೀಧರ ಕಾಮತ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕರ್ಣಾಟಕ ಬ್ಯಾಂಕ್ ಎ. ಜಿ. ಎಂ. ರಾಜಾರಾಮ್ ಹಾಗೂ ಕರ್ಣಾಟಕ ಬ್ಯಾಂಕ್‍ನ ಮಾಜಿ ನಿರ್ದೇಶಕ
ಡಾ. ಎಚ್. ರಾಮ ಮೋಹನ ಆಗಮಿಸಿದ್ದರು.
ಚಿರಂತನ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷ ತೇಜಸ್ವಿ ಜ್ಯೂ. ಶಂಕರ್ ಅತಿಥಿಗಳನ್ನು ಗೌರವಿಸಿದರು. ಆಡಳಿತ ನಿರ್ದೇಶಕ ಭಾರವೀ ದೇರಾಜೆ ಕಲಾವಿದರನ್ನು ಪರಿಚಯಿಸಿದರು.
ಅನುರಾಧ ಭಟ್ ಉಡುಪಿ, ಬಸವರಾಜ ವಂದಲಿ ಧಾರವಾಡ, ಸಮರ್ಥ ಹೆಗಡೆ ತಂಗಾರಮನೆ, ಶಮಂತ ದೇಸಾಯಿ, ಪಂಚಮ ಉಪಾಧ್ಯಾಯ ಧಾರವಾಡ, ವಿಭಾ ಹೆಗಡೆ ಯಲ್ಲಾಪುರ, ಅಭಿಷೇಕ ಪ್ರಭು ಮುಂಬೈ, ರವಿ ಶೆಟ್ಟಿ ಧಾರವಾಡ, ಕೌಶಿಕ್ ಭಟ್ ಬೆಂಗಳೂರು, ಅನಂತರಾಯ ನಾಯಕ್ ಬ್ರಹ್ಮಾವರ, ಹರ್ಷಿತ್ ಪಾಟೀಲ್ ಪೇತ್ರಿ ಹಾಗೂ ಕಲಾವಿದರಿಗೆ ಸಹಕರಿಸಿದ ಯುಕ್ತಾ ಹೊಳ್ಳ ಮತ್ತು ರಾಘವೇಂದ್ರ ಆಚಾರ್ ಕುಂದಾಪುರ ಇವರನ್ನು ಗೌರವಿಸಲಾಯಿತು.
ಮ್ಯಾಕ್ಸ್ ಮೀಡಿಯಾ ಉಡುಪಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಭಂಡಾರ್‍ಕಾರ್ಸ್ ಕಾಲೇಜು ಸಂಸ್ಥೆಗಳು ಹಾಗೂ ಶ್ರೀ ವಿನಾಯಕ ದೇವಸ್ಥಾನ ಆನೆಗುಡ್ಡೆ, ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಹಟ್ಟಿಯಂಗಡಿ ಸಹಕಾರಕ್ಕೆ ಅಭಿನಂದಿಸಲಾಯಿತು.
ಕರ್ಣಾಟಕ ಬ್ಯಾಂಕ್‍ನ ಸಿಒಒ ವೈ. ವಿ. ಬಾಲಚಂದ್ರ ಅವರನ್ನು ಸಂಗೀತ ಭಾರತಿ ಟ್ರಸ್ಟ್ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಸಂಗೀತ ಭಾರತಿ ಟ್ರಸ್ಟ್‍ನ ಟ್ರಸ್ಟಿಗಳಾದ ಸೀತಾರಾಮ ನಕ್ಕತ್ತಾಯ, ಡಾ. ಹೆಚ್. ಆರ್. ಹೆಬ್ಬಾರ್, ರೇಖಾ ಕಾರಂತ, ಸುಪ್ರಸನ್ನ ನಕ್ಕತ್ತಾಯ ಉಪಸ್ಥಿತರಿದ್ದರು.
ಟ್ರಸ್ಟಿ ಯು. ಎಸ್. ಶೆಣೈ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ನಾರಾಯಣ ಕೆ. ವಂದಿಸಿದರು.
ಬೆಳಿಗ್ಗೆಯಿಂದ ಸಂಜೆ ತನಕ ನಡೆದ ಗಾಯನ, ಬಾನ್ಸುರಿ ವಾದನ, ತಬಲಾ ಜುಗಲಬಂಧಿ, ಗೀಟಾರ್ ವಾದನ ಕಾರ್ಯಕ್ರಮವನ್ನು ಸಂಗೀತ ಆಸಕ್ತರು ಆಸ್ವಾದಿಸಿ, ಕಲಾವಿದರನ್ನು ಅಭಿನಂದಿಸಿದರು.

ಅಮೃತ ಭಾರತಿಗೆ ಸಂಗೀತದಾರತಿ : ಯುವ ಸಂಗೀತೋತ್ಸವ

ಸಂಗೀತ ಭಾರತಿ ಟ್ರಸ್ಟ್ ಕುಂದಾಪುರ, ಚಿರಂತನ ಚಾರಿಟೆಬಲ್ ಟ್ರಸ್ಟ್ ಸುರತ್ಕಲ್ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮ್ಯಾಕ್ಸ್ ಮೀಡಿಯಾ ಉಡುಪಿ, ಭಂಡಾರ್‍ಕಾರ್ಸ್ ಕಾಲೇಜು ಇವುಗಳ ಸಹಯೋಗದಲ್ಲಿ ಕುಂದಾಪುರದ ರಂಗ ಅಧ್ಯಯನ ಕೇಂದ್ರದಲ್ಲಿ ರವಿವಾರ “ಅಮೃತಭಾರತಿಗೆ ಸಂಗೀತದಾರತಿ” ಹಿಂದುಸ್ಥಾನಿ ಯುವ ಶಾಸ್ತ್ರಿಯ ಸಂಗೀತೋತ್ಸವ ಕಾರ್ಯಕ್ರಮ ನಡೆಯಿತು.
ಭಂಡಾರ್‍ಕಾರ್ಸ್ ಕಾಲೇಜಿನ ಆಡಳಿತ ಮಂಡಳಿಯ ವಿಶ್ವಸ್ಥ ಕೆ. ಶಾಂತಾರಾಮ ಪ್ರಭು ಕಾರ್ಯಕ್ರಮ ಉದ್ಘಾಟಿಸಿ ಸಂಗೀತಕ್ಕೆ ತನ್ನದೇ ಆದ ಮಾಂತ್ರಿಕ ಶಕ್ತಿ ಇದ್ದು, ಇಂತಹ ಸಂಗೀತೋತ್ಸವ ಯುವ ಕಲಾವಿದರಿಗೆ ಉತ್ತಮ ವೇದಿಕೆ. ಇಂತಹ ಕಾರ್ಯಕ್ರಮಗಳು ನಿರಂತರ ನಡೆಯುತ್ತಿರಲಿ ಎಂದರು.
ಸಂಗೀತ ಭಾರತಿ ಟ್ರಸ್ಟ್‍ನ ಅಧ್ಯಕ್ಷ ಕೆ. ಶ್ರೀಧರ್ ಕಾಮತ್, ಕಾರ್ಯದರ್ಶಿ ನಾರಾಯಣ್, ಟ್ರಸ್ಟಿಗಳಾದ ಎ. ಎಸ್. ಎನ್. ಹೆಬ್ಬಾರ್, ಸೀತಾರಾಮ ನಕ್ಕತ್ತಾಯ, ಡಾ| ಎಚ್. ಆರ್. ಹೆಬ್ಬಾರ್, ರೇಖಾ ಕಾರಂತ್, ಸುಪ್ರಸನ್ನ ನಕ್ಕತ್ತಾಯ, ಚಿರಂತನ ಚಾರಿಟೆಬಲ್ ಟ್ರಸ್ಟ್‍ನ ಭಾರವಿ ದೇರಾಜೆ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಬೆಳಗ್ಗಿನಿಂದ ಸಂಜೆಯವರೆಗೆ ಯುವ ಕಲಾವಿದರಿಂದ ಹಿಂದುಸ್ಥಾನಿ ಯುವ ಶಾಸ್ತ್ರಿಯ ಸಂಗೀತೋತ್ಸವ ನಡೆಯಿತು. ಸಂಗೀತ ಭಾರತಿ ಟ್ರಸ್ಟ್‍ನ ಟ್ರಸ್ಟಿ, ಸಂಪಾದಕ ಯು. ಎಸ್. ಶೆಣೈ ಸ್ವಾಗತಿಸಿ, ನಿರೂಪಿಸಿದರು.

bishop-gerald-lobo-celebrated-the-monti-festival-at-thottam-church

ಬಿಷಪ್ ಜೆರಾಲ್ಡ್ ಲೋಬೊರವರು ತೊಟ್ಟಂ ಚರ್ಚಿನಲ್ಲಿ ಮೋಂತಿ ಹಬ್ಬವನ್ನು ಆಚರಿಸಿದರು

ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಅ|ವಂ| ಧರ್ಮಗುರು ಡಾ| ಜೆರಾಲ್ಡ್ ಐಸಾಕ್ ಲೋಬೊ ಅವರು 8 ಸೆಪ್ಟೆಂಬರ್ 2022 ರಂದು ತೊಟ್ಟಂನ ಸೇಂಟ್ ಆನ್ಸ್ ಚರ್ಚ್‌ನಲ್ಲಿ ಮೋಂತಿ ಹಬ್ಬದ ಪ್ರಯುಕ್ತ ದಿವ್ಯ ಬಲಿದಾನವನ್ನು ಅರ್ಪಿಸಿ ಆಚರಿಸಿದರು.

ಬೆಳಗ್ಗೆ 7.30ಕ್ಕೆ ಸೇಂಟ್ ಆನ್ಸ್ ಪ್ರಾರ್ಥನಾ ಮಂದಿರದ ಮುಂಭಾಗದಲ್ಲಿ ಧರ್ಮಗುರು ವಂ| ಡೆನಿಸ್ ಡೆಸಾ ಅವರು ಹೊಸ ತೇನೆಯನ್ನು ಆಶೀರ್ವದಿಸಿದರು. ನಂತರ ಸೇಂಟ್ ಆನ್ಸ್ ಚರ್ಚ್ ತೊಟ್ಟಂಗೆ ಮೆರವಣಿಗೆ ನಡೆಸಿ ಮೇರಿ ಮಾತೆಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು.

  ಸಾಮೂಹಿಕ ಬಲಿದಾನದ ವೇಳೆ ಬಿಷಪ್ ಸ್ವಾಮಿಗಳು, ಮಾತೆ ಮೇರಿ ಅವರ ಜೀವನದ ಬಗ್ಗೆ ಬೋಧಿಸಿದರು. ಚರ್ಚಿನ ಧರ್ಮಗುರು ವಂ| ಡೆನಿಸ್ ಡೆಸಾ ಬಲಿದಾನದಲ್ಲಿ ಪಾಲ್ಗೊಂಡರು..

ಸಾಮೂಹಿಕ ಪ್ರಾರ್ಥನೆಯ ನಂತರ ಬಿಷಪ್ ಎಲ್ಲರಿಗೂ ಶುಭಾಷಯ ಕೊರೀದರು. ವಿದೇಶದಲ್ಲಿರವರಿಗಾಗಿ, ಬಲಿದಾನಕ್ಕೆ ಬರಲು ಸಾಧ್ಯವಾಗದವರಿಗೆ, ಅಸ್ವಸ್ಥೆಯಲ್ಲಿರುವರಿಗಾಗಿ  ವಿಶೇಷವಾಗಿ ಹರಸಿದರು.

ಕುಂದಾಪುರ: ನೀಟ್‌ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದ ಹಿನ್ನೆಲೆಯಲ್ಲಿ ಸಂಗಮ್ ಹತ್ತಿರದ ಸೇತುವೆಯಿಂದ ಹಾರಿ ಯುವಕ ಆತ್ಮಹತ್ಯೆ

ಕುಂದಾಪುರ/ಜಗಳೂರು(ಸೆ.09):  ನೀಟ್‌ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದ ಹಿನ್ನೆಲೆಯಲ್ಲಿ ಮನನೊಂದ ಕುಂದಾಪುರದ ವಡೇರಹೋಬಳಿ ಜೆಎಲ್‌ಬಿ ರಸ್ತೆ ನಿವಾಸಿ ರಘುವೀರ್‌ ಶೆಟ್ಟಿ ಎಂಬವರ ಪುತ್ರ ಸಾಯೀಶ್‌ ಶೆಟ್ಟಿ(18) ಕುಂದಾಪುರ ಸಂಗಮ್ ಬಳಿಯ ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ. ನೀಟ್‌ ಪರೀಕ್ಷೆ ಫಲಿತಾಂಶ ಬುಧವಾರ ರಾತ್ರಿಯಷ್ಟೇ ಪ್ರಕಟವಾಗಿತ್ತು. ಶಿವಮೊಗ್ಗದ ಕಾಲೇಜಲ್ಲಿ ಓದುತ್ತಿದ್ದ ಸಾಯೀಶ್‌ ಕಲಿಕೆಯಲ್ಲಿ ಸಾಕಷ್ಟು ಮುಂಚೂಣಿಯಲ್ಲಿದ್ದ.

ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಮತ್ತೊಂದು ಪ್ರಕರಣ

ಇದೇ ರೀತಿ ನೀಟ್ ಪರೀಕ್ಷೆಯಲ್ಲಿ ನಿರೀಕ್ಷಿತ ಅಂಕ ಬರದ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಗುರುವಾರ ನಡೆದಿದೆ. ಚೈತ್ರಾ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದ ಕಾರಣಕ್ಕೆ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ

ರೈತ ಸ್ನೇಹಿಯಲ್ಲದ ವ್ಯವಸ್ಥೆ ಕೃಷಿಕ ಸಮುದಾಯದ ಪಾಲಿಗೆ ಶಾಪ : ದಿಂಬಾಲ ಅಶೋಕ್

ಶ್ರೀನಿವಾಸಪುರ: ರೈತ ಸ್ನೇಹಿಯಲ್ಲದ ವ್ಯವಸ್ಥೆ ಕೃಷಿಕ ಸಮುದಾಯದ ಪಾಲಿಗೆ ಶಾಪವಾಗಿ ಪರಿಣಮಿಸಿದೆ ಎಂದು ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್ ಹೇಳಿದರು.
ಪಟ್ಟಣದ ಹೊರವಲಯದ ಪನಸಮಾಕನಹಳ್ಳಿ ಗ್ರಾಮದಲ್ಲಿ ಬುಧವಾರ ಏರ್ಪಡಿಸಿದ್ದ ಸಮಾಂಭದಲ್ಲಿ ಅನುಗ್ರಹ ರೈತ ಉತ್ಪಾದಕರ ಕಂಪನಿ ಕಚೇರಿ ಕಟ್ಟಡ ಉದ್ಘಾಟಿಸಿ ಮಾತನಾಡಿ, ಕಂಪನಿ ವತಿಯಿಂದ ಉತ್ತಮ ಗುಣಮಟ್ಟದ ಬಿತ್ತನೆ ಬೀಜ, ಗೊಬ್ಬರ ಹಾಗೂ ಕೀಟನಾಶಕ ಸರಬರಾಜು ಮಾಡಬೇಕು. ಉತ್ತಮ ಗುಣಮಟ್ಟದ ಬೆಳೆ ಬೆಳೆಯಲು ಅಗತ್ಯವಾದ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.
ಕೋಚಿಮುಲ್ ಮಾಜಿ ಅಧ್ಯಕ್ಷ ಎನ್.ಬಿ.ಬ್ಯಾಟಪ್ಪ ಮಾತನಾಡಿ, ಇಸ್ರೇಲ್ ಹಾಗೂ ಚೀನಾ ವೈಜ್ಞಾನಿಕ ಕೃಷಿಕಗೆ ಮಾದರಿಯಾಗಿವೆ. ಅದೇ ಮಾದರಿಯಲ್ಲಿ ನಮ್ಮ ರೈತರಿಗೆ ಅಗತ್ಯವಾದ ತರಬೇತಿ ನೀಡಬೇಕು. ರೈತರ ಹಿತದೃಷ್ಟಿಯಿಂದ ಪ್ರಾರಂಭಿಸಲಾಗುವ ಸಂಸ್ಥೆಗಳು ದಾರಿ ತಪ್ಪಬಾರದು. ಅತ್ಯಂತ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಲಾಭದ ದೃಷ್ಟಿಯಿಂದ ಅಲ್ಲದೆ, ಸೇವಾ ಮನೋಭಾವದಿಂದ ನಡೆದುಕೊಳ್ಳಬೇಕು ಎಂದು ಹೇಳಿದರು.
ಅನುಗ್ರಹ ರೈತ ಉತ್ಪಾದಕರ ಕಂಪನಿ ಅಧ್ಯಕ್ಷ ಹೂಹಳ್ಳಿ ಬಾಬು ಮಾತನಾಡಿ, ಕೃಷಿ ಇಲಾಖೆಯಿಂದ ಮಾಹಿತಿ ಪಡೆದು, ಪ್ರಾರಂಭದಲ್ಲಿ 320 ಶೇರುದಾರರನ್ನು ಹಿಡಿದು, ಅವರಿಂದ ಪಡೆದ ಶೇರು ಹಣದಿಂದ ಕಂಪನಿಯ ಪ್ರಾಥಮಿಕ ಅಗತ್ಯಗಳನ್ನು ಪೂರೈಸಲಾಗಿದೆ. ಒಂದು ಸಾವಿರಕ್ಕೂ ಹೆಚ್ಚು ಶೇರುದಾರರನ್ನು ಕಂಪನಿ ಹೊಂದಬೇಕಾಗಿದೆ. ಗ್ರಾಮ ಮಟ್ಟದಲ್ಲಿ 20 ಸದಸ್ಯರನ್ನು ಒಳಗೊಂಡ ಸಮಿತಿ ಮಾಡಲಾಗುವುದು ಎಂದು ಹೇಳಿದರು.
ಕಂಪನಿ ಸಿಇಒ ಕೆ.ವಿ.ರೆಡ್ಡಪ್ಪ, ಜಿಲ್ಲಾ ಸಂಚಾಲಕ ಮುನಿರಾಜು, ನಿರ್ದೇಶಕರಾದ ನಂಬಿಹಳ್ಳಿ ಶ್ರೀರಾಮರೆಡ್ಡಿ, ಮುನಿವೆಂಕಟೇಗೌಡ, ಕೋಚಿಮುಲ್ ಮಾಜಿ ಅಧ್ಯಕ್ಷ ಮುನಿವೆಂಕಟಪ್ಪ, ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ನಾಗರಾಜ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟರೆಡ್ಡಿ, ಮುಖಂಡರಾದ ರಾಮಚಂದ್ರಪ್ಪ, ಚಂದ್ರೇಗೌಡ, ಬಂಗವಾದಿ ನಾಗರಾಜ್, ಶ್ರೀನಿವಾಸರೆಡ್ಡಿ, ಪಾಳ್ಯ ಗೋಪಾಲರೆಡ್ಡಿ ಇದ್ದರು.

ಬೈಂದೂರು : ಹೋಲಿಕ್ರಾಸ್ ಇಗರ್ಜಿಯಲ್ಲಿ ಸಂಭ್ರಮದ ತೆನೆ ಹಬ್ಬ

ಬೈಂದೂರಿನ ಹೋಲಿಕ್ರಾಸ್ ಇಗರ್ಜಿಯಲ್ಲಿ  ತೆನೆ ಹಬ್ಬವನ್ನು ಆಚರಿಸಲಾಯಿತು.ಧರ್ಮಗುರು ವಂದನಿಯ ವಿನ್ಸೆಂಟ್ ಕುವೆಲ್ಲೋ ಹಾಗೂ ವಂದನಿಯ ಜೋಕೀಂ ಡಿಸೋಜಾ ರವರ ನೇತ್ರತ್ವದಲ್ಲಿ ತೆನೆಗಳೊಂದಿಗೆ ಮೆರವಣಿಗೆ ಮೂಲಕ ದೇವಾಲಯಕ್ಕೆ ತಂದು   ಬಾಲೆ ಮರಿಯಮ್ಮಳಿಗೆ ಹೂವುಗಳನ್ನು ಅರ್ಪಿಸಿ,  ತೆನೆಗಳ ಆಶೀರ್ವಚನ ನಡೆಸಲಾಯಿತು.
 ನಂತರ ವಿಶೇಷ ಬಲಿಪೂಜೆಯನ್ನು ನೆರೆವೆರಿಸಿ, ಸಮಸ್ತರಿಗೆ ತೆನೆ ಮತ್ತು ಕಬ್ಬುಗಳನ್ನು ವಿತರಿಸಲಾಯಿತು.

ಕುಂದಾಪುರದಲ್ಲಿ ಸಂಭ್ರಮದ ಮೊಂತಿ ಫೆಸ್ತ್ (ತೇನೆ ಹಬ್ಬ)


ಕುಂದಾಪುರ,ಸೆ.8: ರೋಜಾರಿ ಅಮ್ಮನವರ ಇಗರ್ಜಿಯಲ್ಲಿ ಮಾತೆ ಮೇರಿಯ “ಮೊಂತಿ ಫೆಸ್ತ್” ಹುಟ್ಟು ಹಬ್ಬವನ್ನು ಬಹಳ ಶ್ರದ್ದಾಭಕ್ತಿ ಗೌರವ ಹಾಗೂ ವಿಜ್ರಂಭಣೆಯಿಂದ ಆಚರಿಸಲಾಯಿತು. ಚಿಕ್ಕ ಮಕ್ಕಳು ಬಾಲಾ ಮೇರಿ ಮಾತೆಗೆ ಪುಷ್ಪಗಳನ್ನು ಅರ್ಪಿಸುವ ಮೂಲಕ ಹಬ್ಬಕ್ಕೆ ಚಾಲನೆಯನ್ನು ನೀಡಿದರು. ನಂತರ ಹೊಸ ತೆನೆಯನ್ನು ಸಹಾಯಕ ಧರ್ಮಗುರು ವಂ| ಅಶ್ವಿನ್ ಆರಾನ್ಹಾ ಆಶಿರ್ವದಿಸಿ ಪವಿತ್ರ ಬಲಿದಾನವನ್ನು ಅರ್ಪಿಸಿ ಸಂದೇಶ ನೀಡಿದರು.
‘ಮೇರಿ ಮಾತೆ ಎಸುವಿನ ತಾಯಿ, ನಮ್ಮನ್ನು ಪಾಪಗಳಿಂದ ವಿಮುಕ್ತಿಗೊಳಿಸಲು ಹುಟಬೇಕಾಗಿದ್ದ ಯೇಸುವಿನ ಜನನಕ್ಕೆ ಯೋಗ್ಯಳಾದ ಮೇರಿ ಮಾತೆಯನ್ನು ದೇವನು ಆರಿಸಿದ್ದನು, ಮೇರಿ ಮಾತೆಯಿಂದ ನಮಗೆ ಯೇಸುವಿನ ಸಮೀಪಕ್ಕೆ ಹೋಗಲು ಸುಲಭವಾಗುತ್ತದೆ. ಮೇರಿ ಮಾತೆ ನಮಗೆ ಯೇಸು ಕ್ರಿಸ್ತರು ತೋರಿಸಿದ ದಾರಿಯನ್ನು ನಮಗೆ ತೋರಿಸುತ್ತಾರೆ. ಮೇರಿ ಮತೆ ಮತ್ತು ಸಂತ ಜೋಸೆಫರಿಗೆ ಕಷ್ಟ ಸಂಕಶ್ಟಗಳು ಬರಲಿಲ್ಲವೆ? ಬಂದಿದೆ, ಆದರೆ ಅವೆಲ್ಲವನ್ನು ಅವರು ಸಹಿಸಿಕೊಂಡು ದೇವರ ಆಣತಿಯಂತೆ ವಿಧೇಯರಾಗಿ ಜೀವಿಸಿ ಪುಣ್ಯವಂತರಾದದು. ಅವರು ತಮ್ಮ ಕುಟುಂಬವನ್ನು ಪವಿತ್ರ ಕುಟುಂಬವನ್ನಾಗಿ ಮಾಡಿದರು. ಅದರಂತೆ ನಾವು ನಮ್ಮ ಕುಟುಂಬವನ್ನು ಪವಿತ್ರ ಕುಟುಂಬಗಳನ್ನಾಗಿ ಪರಿವರ್ತಿಸಬೆಕು. ಇದು ಕುಟುಂಬದ ಹಬ್ಬ. ಇಂದು ನಾವು ಮೇರಿ ಮಾತೆಯ ಹಬ್ಬವನ್ನು ಬೆಳೆಗಳ ಹಬ್ಬವೆಂದು ಕೂಡ ಆಚರಿಸುತ್ತೇವೆ, ದೇವರು ನಮಗೆ ಪ್ರಕ್ರತಿ ಮುಖಾಂತರ ನಾನಾ ವಿಧಗಳಿಂದ ಪೋಷಿಸುತ್ತಾ ಬಂದಿದ್ದಾನೆ, ಅದಕ್ಕೆ ನಮಗೆ ಬೆಳೆಗಳನ್ನು ದಯಪಾಲಿಸಿದಕ್ಕಾಗಿ ಕ್ರತ್ನಜ್ನತೆಯನ್ನು ಸಲ್ಲಿಸುವ ಹಬ್ಬ. ಜೊತೆಗೆ ಈ ಹಬ್ಬವನ್ನು ಹೆಣ್ಣಿಗೆ ಸಮರ್ಪಿಸಿದ್ದೇವೆ, ಕಾರಣ ಮೇರಿ ಮಾತೆ ಪಾಪ ಕಳಂಕಿತಳು, ಮೇರಿ ಮಾತೆ ಎಲ್ಲರಿಗೂ ಆದರ್ಶೆ, ಅವಳ ಆದರ್ಶವನ್ನು ನಮ್ಮ ಹೆಣ್ಣು ಮಕ್ಕಳು ಪಾಲಿಸಬೇಕು” ಎಂದು ಅವರು ಸಂದೇಶ ನೀಡಿದರು.
ಚರ್ಚಿನ ಪ್ರಧಾನ ಧರ್ಮಗುರು ಅ|ವಂ| ಸ್ಟ್ಯಾನಿ ತಾವ್ರೊ ಹಬ್ಬದ ಶುಭಾಶಯಗಳನ್ನು ಕೋರಿ ವಂದನಾರ್ಪಣೆ ಮಾಡಿದರು. ಬೆಳಾಂಬೆಳ್ಳಗ್ಗೆಯಿಂದ ಮಳೆಯ ಆರ್ಭಟ ಜೋರಾಗಿತ್ತು, ಆದರೆ ಮಳೆಯನ್ನು ಲೆಕ್ಕಿಸದೆ, ಬ್ಯಾಂಡು ವಾದ್ಯಗಳ ಜೊತೆ ಗುರಿಕಾರರು ಹೊಸ ತೆನೆಗಳನ್ನು ಹಿಡಿದುಕೊಂಡು, ಭಕ್ತಾಧಿಗಳೊಂದಿಗೆ, ಬ್ಯಾಂಡು ಗಾಯನದೊಂದಿಗೆ ಬಾಲ ಮೇರಿ ಮಾತೆಯ ಮೂರ್ತಿಯನ್ನು ಭಕ್ತಿ ಶ್ರದ್ದಾಪೂರ್ವಕವಾಗಿ ಇಗರ್ಜಿಯಿಂದ ಮೆರವಣಿಗೆ ಹೊರಟು ಪುನ: ತಿರುಗಿ ಚರ್ಚಿನೊಳಗೆ ತಂದು, ಎಲ್ಲಾ ಕುಟುಂಬದವರಿಗೆ ತೆನೆಗಳನ್ನು ಹಂಚಲಾಯಿತು.ಮಕ್ಕಳಿಗೆ ಕಬ್ಬುಗಳನ್ನು ಹಂಚಲಾಯಿತು.

ದೈಹಿಕ ಶಿಕ್ಷಕರ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಒತ್ತಡ ತನ್ನಿ:ಸಂಸದ ಮುನಿಸ್ವಾಮಿ ಅವರಿಗೆ ದೈಹಿಕ ಶಿಕ್ಷಕರ ಸಂಘ ಮನವಿ

ಕೋಲಾರ:- ದೈಹಿಕ ಶಿಕ್ಷಣ ಶಿಕ್ಷಕರ ವೃಂದ & ನೇಮಕಾತಿ ನಿಯಮಗಳ ತಿದ್ದುಪಡಿ ಆದೇಶ ಜಾರಿ, ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಮೇಲೆ ಒತ್ತಡ ತರುವಂತೆ ರಾಜ್ಯ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಚೌಡಪ್ಪ, ಜಿಲ್ಲಾಧ್ಯಕ್ಷ ವಿ.ಮುರಳಿಮೋಹನ್ ಸಂಸದ ಎಸ್.ಮುಜನಿಸ್ವಾಮಿ ಅವರಿಗೆ ಮನವಿ ಮಾಡಿದರು.
ಜಿಲ್ಲಾ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಪ್ರೌಢಶಾಲಾ ಕ್ರೀಡಾಕೂಟದ ಉದ್ಘಾಟನೆಗೆ ಆಗಮಿಸಿದ್ದ ಸಂಸದರಿಗೆ ಮನವಿ ನೀಡಿದ ಅವರು,
ಈ ಕುರಿತು ಹೇಳಿಕೆ ರಾಜ್ಯದ ದೈಹಿಕ ಶಿಕ್ಷಣದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರವು 2006ರಲ್ಲಿ ಪ್ರೊ. ಎಲ್.ಆರ್.ವೈದ್ಯನಾಥನ್ ಅಧ್ಯಕ್ಷತೆಯಲ್ಲಿ 7 ಜನ ದೈಹಿಕ ಶಿಕ್ಷಣ ತಜ್ಞರನ್ನು ನೇಮಿಸಿ, ಆ ಸಮಿತಿ ನೀಡಿದ ವರದಿಯನ್ನು ಅನುಮೋದಿಸಿ 14 ಶಿಫಾರಸ್ಸು ಮಾಡಿತ್ತು.
ಆದರೆ ಸದರಿ ವರದಿಯಲ್ಲಿನ 14 ಅಂಶಗಳ ಪೈಕಿ 13 ಅಂಶಗಳನ್ನು ಜಾರಿಗೊಳಿಸಲಾಗಿದ್ದು, 14ನೇ ಅಂಶವಾದ ದೈಹಿಕ ಶಿಕ್ಷಣ ಶಿಕ್ಷಕರುಗಳ ಪದನಾಮವನ್ನು ಸಹ ಶಿಕ್ಷಕರು ಎಂದು ಪರಿಗಣಿಸಿ ಸಹ ಶಿಕ್ಷಕರಿಗೆ ದೊರೆಯುವ ಎಲ್ಲಾ ಸೌಲಭ್ಯವನ್ನು ದೈಹಿಕ ಶಿಕ್ಷಣ ಶಿಕ್ಷಕರಿಗೂ ನೀಡಲು ವಿಳಂಬವಾಗಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ತಿನ ಶಾಸಕರು ಸದನದ ಒಳಗೆ ಮತ್ತು ಹೊರಗೆ ವೃಂದ ಮತ್ತು ನೇಮಕಾತಿ ತಿದ್ದುಪಡಿ ಪ್ರಶ್ನೆ ಕೇಳಿದಾಗ ಇಲ್ಲಿಯ ತನಕ ಪ್ರತಿ ಬಾರಿಯೂ ಇಲಾಖೆಯಿಂದ ನೀಡುವ ಉತ್ತರ ಅಂತಿಮ ಹಂತದಲ್ಲಿದೆ ಎಂದು ಆದರೆ ಇಲ್ಲಿಯ ತನಕ ಸಚಿವ ಸಂಪುಟದ ಅನುಮೋದನೆ ಪಡೆದು, ಕರಡು ನಿಯಮಗಳನ್ನು ಪ್ರಕಟಿಸಿ ಆದೇಶ ಮಾಡಲಿಲ್ಲ ಈ ಕುರಿತು ಸಚಿವರ ಗಮನಕ್ಕೆ ತರಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಅನಿಲ್‍ಕುಮಾರ್, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಅಪ್ಪೇಗೌಡ,ಎಂ.ನಾಗರಾಜ್, ಮುನಿಯಪ್ಪ, ದೈಹಿಕ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು.