ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಬೆಳ್ಮಣ್ಣು ಎಸ್.ಕೆ. ಸಾಲ್ಯಾನ್ ಅವರಿಗೆ ಸನ್ಮಾನ

ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನೇತೃತ್ವದಲ್ಲಿ ಅಬ್ಬನಡ್ಕದ ಕುಂಟಲಗುಂಡಿಯಲ್ಲಿ ಜರಗಿದ 22ನೇ ವರ್ಷದ ವಾರ್ಷಿಕೋತ್ಸವ ಮತ್ತು 16ನೇ ವರ್ಷದ ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂಭ್ರಮದ ವೇದಿಕೆಯಲ್ಲಿ ಬೆಳ್ಮಣ್ಣು ಶ್ರೀ ಕೃಷ್ಣ ಸಮೂಹ ಸಂಸ್ಥೆಗಳ ಮಾಲಕರಾದ ಎಸ್.ಕೆ.ಸಾಲ್ಯಾನ್ ಅವರನ್ನು ಸನ್ಮಾನಿಸಲಾಯಿತು.
ಕೊಡುಗೈ ದಾನಿಗಳು, ಪ್ರಗತಿಪರ ಹಿರಿಯ ಕೃಷಿಕರು, ಬೆಳ್ಮಣ್ಣು ಬ್ರಹ್ಮಶ್ರೀ ನಾರಾಯಣಗುರು ಸಮಾಜಸೇವಾ ಸಂಘದ ಗೌರವಾಧ್ಯಕ್ಷರು, ಮಕ್ಕೇರಿಬೈಲು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರು, ಪಳ್ಳಿ ಅದಪಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ರಜತ ಮಹೋತ್ಸವದ ಗೌರವಾಧ್ಯಕ್ಷರಾಗಿರುವ ಬೆಳ್ಮಣ್ಣು ಶ್ರೀ ಕೃಷ್ಣ ಸಮೂಹ ಸಂಸ್ಥೆಗಳ ಮಾಲಕರಾದ ಎಸ್.ಕೆ.ಸಾಲ್ಯಾನ್ ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷರಾದ ನಂದಳಿಕೆ ಪ್ರಶಾಂತ್ ಪೂಜಾರಿ ವಹಿಸಿದ್ದರು. ವೇದಿಕೆಯಲ್ಲಿ ಸಂಘದ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಬೋಳ ರಘುವೀರ್ ಶೆಟ್ಟಿ, ಪೂವಾಧ್ಯಕ್ಷ ಪ್ರಕಾಶ್ ಆಚಾರ್ಯ, ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನಿಕಟ ಪೂರ್ವಾಧ್ಯಕ್ಷ ಹರೀಶ್ ಪೂಜಾರಿ, ಸದಸ್ಯರಾದ ಕೀರ್ತನ್ ಕುಮಾರ್ ಮೊದಲಾದವರಿದ್ದರು.

ತೆಂಗಿನ ನಾರಿನ ಕೈಗಾರಿಕಾ ಕೆಲಸಗಾರರ ಸಹಕಾರಿ ಸಂಘ ನಿ., ಕಂದಾವರ

2021-22 ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯ ನೋಟೀಸು
ಸನ್ಮಾನ್ಯ ಸದಸ್ಯರೇ,
ನಮ್ಮ ಸಂಘದ 2021-22 ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ದಿನಾಂಕ 24-09-2022ನೇ ಶನಿವಾರ ಮಧ್ಯಾಹ್ನ ಗಂಟೆ 3:00ಕ್ಕೆ ಅಧ್ಯಕ್ಷರಾದ ಶ್ರೀ ಎಸ್. ಜನಾರ್ಧನ ಇವರ ಅಧ್ಯಕ್ಷತೆಯಲ್ಲಿ ಸಂಘದ ಆವರಣದಲ್ಲಿ ನಡೆಯಲಿದೆ. ಮಾನ್ಯ ಸದಸ್ಯರು ತಪ್ಪದೇ ಸಕಾಲದಲ್ಲಿ ಹಾಜರಾಗಲು ಕೋರಲಾಗಿದೆ.

ಮನಸ್ಸು ಬುದ್ದಿ ಸಾತ್ವಿಕತೆಗಳು ನಿಷ್ಕಳಂಕವಾಗಿ ಸ್ಥಿತಿ ಪ್ರಜ್ಞೆಯಿಂದ ವಿಚಾರಾತ್ಮಕ ರೀತಿಯಲ್ಲಿ ಬಳಿಸಿದಾಗ ವ್ಯಕ್ತಿತ್ವದ ಬೆಳವಣಿಗೆಯಾಗುತ್ತದೆ

ರಾಯಲ್ಪಾಡು 1 : ಮನಸ್ಸು ಬುದ್ದಿ ಸಾತ್ವಿಕತೆಗಳು ನಿಷ್ಕಳಂಕವಾಗಿ ಸ್ಥಿತಿ ಪ್ರಜ್ಞೆಯಿಂದ ವಿಚಾರಾತ್ಮಕ ರೀತಿಯಲ್ಲಿ ಬಳಿಸಿದಾಗ ವ್ಯಕ್ತಿಯ ವ್ಯಕ್ತಿತ್ವದ ಬೆಳವಣಿಗೆಯಾಗುತ್ತದೆ ಜಿ.ಪಂ. ಮಾಜಿ ಸದಸ್ಯ ಮ್ಯಾಕಲ ನಾರಾಯಣಸ್ವಾಮಿ ಹೇಳಿದರು.
ಗ್ರಾಮದ ಸರ್ಕಾರಿ ಪ್ರೌಡಶಾಲಾವರಣದಲ್ಲಿ ಗುರುವಾರ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿನ ವಿದ್ಯಾರ್ಥಿಗಳಿಂದ ನಮ್ಮ ದೇಶದ ಕಲೆ ಸಂಸ್ಕøತಿಯನ್ನು ಉಳಿಸಲು ಸಾದ್ಯ , ವಿದ್ಯಾರ್ಥಿಗಳು ತಮ್ಮ ಹಳ್ಳಿಯಲ್ಲಿನ ಹಿರಿಯರು ಹೊಲಗದ್ದೆಗಳಲ್ಲಿ ಕೆಲಸ ಮಾಡುವ ಸಮಯದಲ್ಲಿ ಹಾಡುವ ಜಾನಪದ ಹಾಡುಗಳನ್ನು , ಭಜನೆಯ ಹಾಡುಗಳನ್ನು , ನಾಟಕಗಳನ್ನು , ವಿವಿಧ ವೇಷಭೂಷಣಗಳ ವಿಚಾರವಾಗಿ ತಮ್ಮ ಹಿರಿಯ ಬಳಿ ಮಕ್ಕಳು ಕೇಳಿ ಅರಿಯುತ್ತಾರೆ . ಅವುಗಳನ್ನು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದೇಶ ಕಲೆ ಸಂಸ್ಕøತಿಯನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆಂದರು.
ತಾಲ್ಲೂಕು ಯುವ ಕಾಂಗ್ರೆಸ್ ಉಪಾಧ್ಯಕ್ಷ ಸಿ.ಎಸ್.ವೆಂಕಟರಮಣಪ್ಪ, ತಾ.ಪಂ.ಮಾಜಿ ಅಧ್ಯಕ್ಷ ನರೇಶ್ , ಗ್ರಾ.ಪಂ.ಅಧ್ಯಕ್ಷೆ ಅರುಣ ವೆಂಕಟ್, ಪಿಡಿಒ ನರೇಂದ್ರಬಾಬು, ಕೂರಿಗೇಪಲ್ಲಿ ಗ್ರಾ.ಪಂ. ಅಧ್ಯಕ್ಷ ವಿಶ್ವನಾಥರೆಡ್ಡಿ, ಗ್ರಾ.ಪಂ.ಸದಸ್ಯರಾದ ಆರ್.ಗಂಗಾದರ್, ಅಶೋಕ್‍ರೆಡ್ಡಿ, ನಾಗೇಶ್, ಸಿಆರ್‍ಪಿ ವರದರೆಡ್ಡಿ, ಕಾಲೇಜಿನ ಪ್ರಾಂಶುಪಾಲ ಶಶಿಕುಮಾರ್, ಮುಖ್ಯ ಶಿಕ್ಷಕ ಪಿ.ಮಾರಣ್ಣ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಧನಲಕ್ಷ್ಮಿ, ಎಸ್‍ಡಿಎಂಸಿ ಅಧ್ಯಕ್ಷೆ ಗಾಯತ್ರಿ, ಜಿಂಕಲವಾರಿಪಲ್ಲಿ ಶಾಲೆ ಮುಖ್ಯ ಶಿಕ್ಷಕ ಎಂ.ಕೆ.ವೆಂಕಟರಮಣ ಇದ್ದರು.

ಲಕ್ಷ್ಮೀಸಾಗರ ಗ್ರಾಮ ಪಂಚಾಯಿತಿ ಪ್ರಭಾರ ಪಿಡಿಒ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ

ಶ್ರೀನಿವಾಸಪುರ: ಪೆದ್ದೂರು ಗ್ರಾಮದ ಹೊರವಲಯದಲ್ಲಿ ಪ್ರಭಾರ ಪಿಡಿಒ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.
ಪೆದ್ದೂರು ಗ್ರಾಮದ ವಿಶ್ವನಾಥರೆಡ್ಡಿ ಮೃತರು. ಅವರು ಮುಳಬಾಗಿಲು ತಾಲ್ಲೂಕಿನ ಲಕ್ಷ್ಮೀಸಾಗರ ಗ್ರಾಮ ಪಂಚಾಯಿತಿ ಪಿಡಿಒ ಆಗಿ ಸೇವೆ ಸಲ್ಲಿಸುತ್ತಿದ್ದರು ಎಂದು ಹೇಳಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಗೌನಿಪಲ್ಲಿ ಪೋಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪಾತಪಲ್ಲಿ ಗ್ರಾಮದ ಅಪ್ಪಿರೆಡ್ಡಿ ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಶ್ರೀನಿವಾಸಪುರದ ಪೊಲೀಸರು ಯಶಸ್ವಿ

ಶ್ರೀನಿವಾಸಪುರ: ಪಾತಪಲ್ಲಿ ಗ್ರಾಮದ ಅಪ್ಪಿರೆಡ್ಡಿ ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಶ್ರೀನಿವಾಸಪುರದ ಪೊಲೀಸರು ಯಶಸ್ವಿಯಾಗಿದ್ದಾರೆ.
ಸೆ.9 ರಂದು ತಾಲ್ಲೂಕಿನ ಆವಲಕುಪ್ಪ ಗ್ರಾಮದ ಅಮಾನಿಕೆರೆ ಕಾಲುವೆ ಸಮೀಪ ಅಪ್ಪಿರೆಡ್ಡಿ ಶವ ಪತ್ತೆಯಾಗಿತ್ತು. ಕೊಲೆ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದ ಪೊಲೀಸರು ಸೆ.11 ರಂದು ಅಲಂಬಗಿರಿ ಗ್ರಾಮದ ಮಂಜುನಾಥ ಮತ್ತು ಮಂಜುನಾಥ ಎಂಬ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಅಪ್ಪಿರೆಡ್ಡಿ ಅವರ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿ, ಅವರ ಬಳಿಯಿದ್ದ ಒಂದು ಚಿನ್ನದ ಉಂಗುರು ಮತ್ತು ಅವರ ಮನೆಯಲ್ಲಿ ಚಿನ್ನದ ಒಡವೆ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಆರೋಪಿಗಳಿಂದ ಒಂದು ಬೈಕ್, ಒಂದು ಮೊಬೈಲ್ ಫೋನ್ ಹಾಗೂ ರೂ.1.25 ಲಕ್ಷ ಬೆಲೆಬಾಲುವ ಚಿನ್ನದ ಒಡವೆ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ನೀಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್, ಹೆಚ್ಚುವರಿ ವರಿಷ್ಠಾಧಿಕಾರಿ ಸಚಿನ್ ಘೋರ್ಪಡೆ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್‍ಪಿ ಜಯಶಂಕರ್ ನೇತೃತ್ವದಲ್ಲಿ ಪೊಲೀಸ್ ಇನ್ಸ್‍ಪೆಕ್ಟರ್ ಜಿ.ಸಿ.ನಾರಾಯಣಸ್ವಾಮಿ, ಪೊಲೀಸ್ ಸಹಾಯಕ ಸಬ್ ಇನ್ಸ್‍ಪೆಕ್ಟರ್ ಮುನಿವೆಂಕರೆಡ್ಡಿ ಅವರು ಸಿಬ್ಬಂದಿ ನೆರವಿನಿಂದ ಕೊಲೆ ಆರೋಪಿಗಳನ್ನು ಪತ್ತೆಹಚ್ಚಿದರು ಎಂದು ತಿಳಿಸಲಾಗಿದೆ.

ವ್ಯಕ್ತಿತ್ವ ವಿಕಸನ ಮತ್ತು ಜೀವನ ಮೌಲ್ಯಗಳು ಮಾಹಿತಿ ಶಿಬಿರ 2022



ಯಾರು ಶ್ರೇಷ್ಠ ವ್ಯಕ್ತಿಗಳಾಗಿರುತ್ತಾರೋ ಅವರೆಲ್ಲಾ ತುಂಬಾ ಸಂಸ್ಕಾರವಂತರು, ಮೌಲ್ಯವಂತರು ಆಗಿರುತ್ತಾರೆ ಎಂದು ಶ್ರೀಮತಿ ಭೀಮವ್ವ ಅಧ್ಯಕ್ಷರು ಗ್ರಾಮ ಪಂಚಾಯತ್ ತಲ್ಲೂರು ಅವರು ಇತ್ತೀಚೆಗೆ ಅಭಿವೃದ್ಧಿ ಸಂಸ್ಥೆ (ರಿ) ಬಾಳ್ಕುದ್ರು ಹಂಗಾರಕಟ್ಟೆ ಗ್ರಾಮ ಪಂಚಾಯತ್ ತಲ್ಲೂರು ಸರಕಾರಿ ಪ್ರೌಢಶಾಲೆ ಉಪ್ಪಿನಕುದ್ರು ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ “ವ್ಯಕ್ತಿತ್ವ ವಿಕಸನ ಮತ್ತು ಜೀವನ ಮೌಲ್ಯಗಳು” ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿದರು. ಸಭಾದ್ಯಕ್ಷತೆಯನ್ನು ಶ್ರೀ ಉಮೇಶ್ ಮೊಗವೀರ ಅಧ್ಯಕ್ಷರು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸರಕಾರಿ ಪ್ರೌಢಶಾಲೆ ಉಪ್ಪಿನಕುದ್ರು ಇವರು ಮಾತಾಡಿ ಮೌಲ್ಯ ಸಾಧನೆಗಾಗಿ ದೀರ್ಘ ಹೋರಾಟ, ಪ್ರಯತ್ನಶೀಲತೆ ಕಷ್ಟಸಹಿಷ್ಣುತೆ ಅಗಾಧ ಆತ್ಮವಿಶ್ವಾಸ ವಿದ್ಯಾರ್ಥಿ ದೆಸೆಯಿಂದಲೇ ರೂಢಿಸಿಕೊಳ್ಳಬೇಕು. ಮುಂದೆ ಸಾಧನೆಯ ಶಿಖರವನ್ನು ಏರಲು ಸಾಧ್ಯವಾಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಶ್ರೀ ರಮೇಶ್ ದೇವಾಡಿಗ ವಂಡ್ಸೆ ಖ್ಯಾತ ಉದ್ಯಮಿ ಬೆಂಗಳೂರು ಇವರು ಮಾತಾಡಿ ಪ್ರತಿಭೆ ಎನ್ನುವುದು ಎಲ್ಲರ ಸ್ವತ್ತು ಅದನ್ನು ಕಾಲ ಕಾಲಕ್ಕೆ ನಾನಾ ಪರಿಸ್ಥಿತಿಯನ್ನು ಅವಲೋಕಿಸಿ ಶ್ರದ್ಧೆ ಆಸಕ್ತಿಯಿಂದ ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿದಾಗ ಮಾತ್ರ ಯಶಸ್ಸು ನಿಮ್ಮದಾಗುತ್ತದೆ. ಎಲ್ಲ ಅಡೆ-ತಡೆಯನ್ನು ಮೀರಿ ನಿಲ್ಲುವ ನಿಮ್ಮ ಗುರಿ ಅಚಲವಾಗಿರಬೇಕು. ಅದಕ್ಕಾಗಿ ನಿಮ್ಮ ಮನಸ್ಸು ಮತ್ತು ದೇಹದ ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಿ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಶ್ರೀ ರವಿ ದೇವಾಡಿಗ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಇವರು ಮಾತಾಡಿ ಜೀವನದ ಮೌಲ್ಯಗಳು ನೀತಿಯ ಅಂತರಂಗದ ನೆಲೆಗಳಾಗಿರುತ್ತವೆ. ಸಹನೀಯ ಮತ್ತು ಆಪ್ತವಾಗುವ ಸಮಾಜದ ಸಾಧ್ಯತೆಗಾಗಿ ನಾನಾ ರೀತಿಯ ಮೌಲ್ಯಗಳು ರೂಪುಗೊಂಡ ಹಾಗೆ ಆ ಮೌಲ್ಯಗಳ ಕಾರ್ಯರೂಪಿ ನೆಲೆಗಳಾಗಿ ನೀತಿ ಪ್ರಾಮುಖ್ಯತೆ ಪಡೆಯುತ್ತದೆ. ಒಂದು ನೀತಿಯು ಇರುವ ಮೌಲ್ಯ ಬೇರಾವುದೋ ಇರಬಹುದು. ಆದರೆ ಅದರ ಉದ್ದೇಶ ಕೂಡಾ ಸಹನೀಯ ಮತ್ತು ಆಪ್ತಸಮಾಜದ ಸುಧಾರಣೆ ನಿರ್ಮಾಣವೇ ಆಗಿರುತ್ತದೆ ಎಂದು ಅಭಿಪ್ರಾಯ ಪಟ್ಟರು.
ಸಭೆಯಲ್ಲಿ ಶ್ರೀ ಗಿರೀಶ್‍ನಾಯ್ಕ್ ಉಪಾಧ್ಯಕ್ಷರು, ಗ್ರಾಮ ಪಂಚಾಯತ್ ತಲ್ಲೂರು, ಶ್ರೀ ಮಂಜುನಾಥ್ ಮಯ್ಯ, ಶ್ರೀ ಸುಬ್ರಹ್ಮಣ್ಯ ಐತಾಳ್, ಶ್ರೀ ರಾಧಾಕೃಷ್ಣ ಸೇರಿಗಾರ, ಉಪ್ಪಿನಕುದ್ರು ಯುವಕಮಂಡಲದ ಅಧ್ಯಕ್ಷರಾದ ಶ್ರೀ ಗಿರೀಶ್ ಮೊಗವೀರ, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ ವಿ, ಶ್ರೀ ರಮೇಶ್ ವಕ್ವಾಡಿ, ಕಾರ್ಯದರ್ಶಿ ಅಭಿವೃದ್ಧಿ ಸಂಸ್ಥೆ (ರಿ.), ಬಾಳ್ಕುದ್ರು ಹಂಗಾರಕಟ್ಟೆ, ಶ್ರೀ ಅಬ್ದುಲ್ ರವೂಫ್, ಸಂಪನ್ಮೂಲ ವ್ಯಕ್ತಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕು| ಸುಧಾ ಭಟ್ ಬ್ರಹ್ಮಾವರ ನಿರೂಪಿಸಿ, ಶ್ರೀಮತಿ ಮಾಲತಿ ವಿ. ಮುಖ್ಯ ಶಿಕ್ಷಕರು, ಸರಕಾರಿ ಪ್ರೌಢಶಾಲೆ ಉಪ್ಪಿನಕುದ್ರು ಸ್ವಾಗತಿಸಿ, ಶ್ರೀ ರಮೇಶ್ ವಕ್ವಾಡಿ ಪ್ರಾಸ್ತಾವನೆಗೈದರು. ಸಭಾ ಕಾರ್ಯಕ್ರಮದ ನಂತರ ಸಂಪನ್ಮೂಲ ವ್ಯಕ್ತಿ, ಅಬ್ದುಲ್ ರವೂಫ್ ವ್ಯಕ್ತಿತ್ವ ವಿಕಸನ ಮತ್ತು ಜೀವನ ಮೌಲ್ಯಗಳು ಕುರಿತು ಉಪನ್ಯಾಸ ನೀಡಿ ಸಂವಾದ ನಡೆಸಿಕೊಟ್ಟರು. ಸುಮಾರು 63 ವಿದ್ಯಾರ್ಥಿಗಳು ಈ ಮಾಹಿತಿ ಶಿಬಿರದಿಂದ ಪ್ರಯೋಜನ ಪಡೆದರು.

ಹಿರಿಯ ದಲಿತ ಚಿಂತಕರು ಪರಶುರಾಮ ಮಹಾರಾಜನವರ್ ನೂರಾರು ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಬಾಗಲಕೋಟೆ: ದಿನಾಂಕ 11-09-2022 ರಂದು ಬಾಗಲಕೋಟೆ ನಗರದ ಕಲಾ ಭವನದಲ್ಲಿ ಹಿರಿಯ ದಲಿತ ಚಿಂತಕರು ಹಾಗೂ ಸಂಸ್ಥಾಪಕ ಅಧ್ಯಕ್ಷರು ಪ್ರಜಾ ಪರಿವರ್ತನ ವೇದಿಕೆಯ ಪರಶುರಾಮ ಮಹಾರಾಜನವರ್ ಕಾಂಗ್ರೆಸ್ ಪಕ್ಷಕ್ಕೆ ನೂರಾರು ಬೆಂಬಲಿಗರೊಂದಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ ಸಾಹುಕಾರ ಸಮ್ಮುಖದಲ್ಲಿ ಸೇರ್ಪಡೆಯಾದರು.

ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷರ ಅಧಿಕೃತ ಭೇಟಿ

ಕುಂದಾಪುರ: ದಿನಾಂಕ 10.9.22 ರಂದು ಭಾರತೀಯ ವೈದ್ಯಕೀಯ ಸಂಘ (I M A) ಯ ರಾಜ್ಯಾಧ್ಯಕ್ಷರಾದ ಸುರೇಶ್ ಕುಡ್ವರು ಕುಂದಾಪುರ ಶಾಖೆಯ ತಮ್ಮ ಅಧಿಕೃತ ಭೇಟಿ ಗಾಗಿ ಆಗಮಿಸಿದ್ದರು.ಅವರೊಂದಿಗೆ ಜೊತೆ ಕಾರ್ಯದರ್ಶಿಗಳಾದ ವೈ . ಎಸ್ . ರಾವ್ ಅವರೂ ಆಗಮಿಸಿದ್ದರು .ಸಮಾರಂಭವು ಗಿಳಿಯಾರ ಕುಶಾಲ್ ಹೆಗ್ಡೆ ರೋಟರಿ ಭವನದಲ್ಲಿ ನಡೆಯಿತು. ರಾಜ್ಯಾಧ್ಯಕ್ಷರು ima ಯ ವಿವಿಧ ಕಾರ್ಯಕ್ರಮ ಗಳ ಮಹತ್ವ ದ ಬಗ್ಗೆ ವಿಶೇಷ ಮಾಹಿತಿ ನೀಡಿದರು.ಎಲುಬು ಕೀಲು ಶಸ್ತ್ರ ಚಿಕಿತ್ಸಕ ತಜ್ಞ Dr ಸಂದೀಪ ನಾವಡ ಪಡುಕೋಣೆ ಅಧ್ಯಕ್ಷತೆ ವಹಿಸಿದ್ದರು . ಭಾವಿ ಅಧ್ಯಕ್ಷ ಮಹೇಶ್ G ಅವರನ್ನು ಗೌರವಿಸಲಾಯಿತು. ಜೊತೆ ಕಾರ್ಯದರ್ಶಿ ಸಂದೀಪ ಶೆಟ್ಟಿ ಈ ವರ್ಷದ ಕಾರ್ಯಕ್ರಮಗಳ ವರದಿ ವಾಚಿಸಿ ವಂದಿಸಿದರು .ಸದಸ್ಯರು ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸಿದ್ದರು.

ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ವಾಹನಗಳ ಆಶಿರ್ವಾದಿಕರಣ

ಕುಂದಾಪುರ,ಸೆ.11: ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ಸೆಪ್ಟಂಬರ್ 11 ರಂದು ಭಾನುವಾರದ ಪವಿತ್ರ ಬಲಿದಾನದ ಬಳಿಕ ವಾಹನಗಳನ್ನು ಆಶಿರ್ವದಿಸಲಾಯಿತು. ಎಲ್ಲಾ ವಿಧದ ವಾಹನಗಳನ್ನು ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ, ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಮತ್ತು ಅತಿಥಿ ಧರ್ಮಗುರು ವಂ| ಜೋನ್ ಡಿಆಲ್ಮೇಡಾ (ಮುಂಬಯ್) ಆಶಿರ್ವಾದಿಕರಣವನ್ನು ನಡೆಸಿಕೊಟ್ಟರು.