ಶ್ರೀಮತಿ ಲಕ್ಷ್ಮೀದೇವಿ ಶ್ಯಾನುಭಾಗ ನಿಧನ

ಕುಂದಾಪುರದ ಬೇಳೂರಿನವರಾಗಿದ್ದು ಹೊಸಪೇಟೆಯ ಶ್ಯಾನುಭಾಗ ಇಂಟರ್‍ನ್ಯಾಶನಲ್ ಹೋಟೆಲ್ ಉದ್ಯಮ ಸಹಿತ ವಿವಿಧ ಉದ್ಯಮ ನಡೆಸುತ್ತಿರುವ ಬೇಳೂರು ಕಮಲಾಕ್ಷ ಶ್ಯಾನುಭಾಗರ ಧರ್ಮಪತ್ನಿ, ಶ್ಯಾನುಭಾಗ ಉದ್ಯಮ ಸಂಸ್ಥೆಗಳ ಪಾಲುದಾರರೂ ಆಗಿರುವ ಶ್ರೀಮತಿ ಲಕ್ಷ್ಮೀದೇವಿ ಶ್ಯಾನುಭಾಗ (70) ಸೆಪ್ಟೆಂಬರ್ 14 ರಂದು ನಿಧನರಾದರು.
ದೈವಭಕ್ತರೂ, ಧಾರ್ಮಿಕ, ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಪತಿಗೆ ಬೆನ್ನೆಲುಬಾಗಿ ಸ್ಪೂರ್ತಿ ತುಂಬುತ್ತಿದ್ದ ಇವರು ಇಬ್ಬರು ಪುತ್ರರು, ನಾಲ್ವರು ಪುತ್ರಿಯರನ್ನು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

ದೇಶಕ್ಕಾಗಿ ಜೀವವನ್ನು ಮುಡುಪಾಗಿಟ್ಟಿರುವ ಮಾಜಿ ಸೈನಿಕರಿಗೆ ಭೂ ಮಂಜೂರಾತಿ ಮಾಡುವಂತೆ ರೈತ ಸಂಘ ಆಗ್ರಹ

ಕೋಲಾರ,ಸೆ-15, ದೇಶಕ್ಕಾಗಿ ತಮ್ಮ ಜೀವವನ್ನು ಮುಡುಪಾಗಿಟ್ಟಿರುವ ಮಾಜಿ ಸೈನಿಕರಿಗೆ ಭೂ ಮಂಜೂರಾತಿ ಮಾಡುವಂತೆ ರೈತ ಸಂಘದಿಂದ ಅಪರ ಜಿಲ್ಲಾಧಿಕಾರಿಗಳಾದ ಸ್ನೇಹಾ ರವರಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ಕಾಯುವ ಯೋಧ, ಅನ್ನ ಹಾಕುವ ರೈತರನ್ನು ಸರ್ಕಾರಗಳು ನಿರ್ಲಕ್ಷೆ ಮಾಡುತ್ತಾ ಬರುತ್ತಿವೆ. ಅತಿವೃಷ್ಟಿ ಅನಾವೃಷ್ಟಿಯಾದಾಗ ರೈತರು ಕಛೇರಿಗಳಿಗೆ ಪರಿಹಾರಕ್ಕೆ ಅಲೆದಾಡಿದರೆ ದೇಶದ ಗಡಿಭಾಗ ಕಾಯುವ ನಿವೃತ್ತ ಯೋಧÀರು ಸರ್ಕಾರ ಆದೇಶದಂತೆ ಭೂ ಮಂಜೂರಾತಿಗೆ ಕಛೇರಿಗೆ ಅಲೆದಾಡಿ ಸುಸ್ತಾಗಿ ಭೂಮಿಯು ಬೇಡ ಈ ಕಷ್ಟವು ಬೇಡ ಎಂದು ಕಣ್ಣೀರು ಸುರಿಸುತ್ತಿರುವ ಲಕ್ಷಾಂತರ ಯೋಧರ ಸಮಸ್ಯೆ ಬಗೆಹರಿಸುವಲ್ಲಿ ಸರ್ಕಾರಗಳು ಹಾಗೂ ಜಿಲ್ಲೆಯ ಕಂದಾಯ ಅಧಿಕಾರಿಗಳು ವಿಫಲವಾಗಿದ್ದಾರೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಅವ್ಯಸ್ಥೆ ವಿರುದ್ದ ಆರೋಪ ಮಾಡಿದರು.
ಸರ್ಕಾರಗಳ ನಿರ್ಲಕ್ಷ ದೇಶಕ್ಕಾಗಿ ಸೇವೆ ಸಲ್ಲಿಸಿ ವೀರ ಮರಣ ಹೊಂದಿದ ಹಾಗೂ ನಿವೃತ್ತ ಯೋಧರಿಗೆ ಸರ್ಕಾರವು ಜೀವನೋಪಾಯಕ್ಕಾಗಿ ನೀಡಬೇಕಾದ ಭೂಮಿ ಇನ್ನು ಶೇಕಡ 90 ರಷ್ಟು ಸೈನಿಕರ ಕೈ ಸೇರಿಲ್ಲ, 2 ದಶಕಗಳಿಂದಲೂ ಸರ್ಕಾರ ಹುಸಿ ಭರವಸೆ ನೀಡುತ್ತಲೇ ಬರುತ್ತಿವೆ. ಸೇವೆಯಲ್ಲಿದ್ದಾಗ ಹುತಾತ್ಮರಾದರೆ ಅಥವಾ ನಿವೃತ್ತರಾದರೆ ಸರ್ಕಾರದಿಂದ 4 ಎಕರೆ 18 ಗುಂಟೆ ಕೃಷಿ ಭೂಮಿ ನೀಡಬೇಕೆಂದು ಸರ್ಕಾರ ಅಧಿಸೂಚನೆ ಹೊರಡಿಸಿ ಆದೇಶ ತುರ್ತು ಪರಿಸ್ತಿತಿಗೆ ಮಾತ್ರ ಸೀಮಿತವಾಗಿದೆಂದು ಆಕ್ರೊಷ ವ್ಯಕ್ತಪಡಿಸಿದರು.
ನಿವೃತ್ತರಾದ ಯೋಧರು ಜಿಲ್ಲಾಧಿಕಾರಿ ಕಚೇರಿಯಿಂದ ತಾಲ್ಲೂಕು ಕಛೇರಿಗೆ, ತಾಲ್ಲೂಕು ಕಛೇರಿಯಿಂದ ನಾಡ ಕಚೇರಿಗೆ ಅಲೆದಾಡಿ ಸುಸ್ತಾಗಿ ಭೂಮಿ ಆಸೆಯನ್ನು ಬಿಟ್ಟಿರುವ ಜೊತೆಗೆ ದೇಶಕ್ಕೆ ತನ್ನ ಜೀವವನ್ನು ಮುಡುಪಾಗಿಟ್ಟ ಸೈನಿಕರ ಹಗಲು ರಾತ್ರಿಯ ಕಷ್ಟಕ್ಕೆ ಸ್ಪಂಧಿಸದ ಅಧಿಕಾರಿಗಳು ಭೂ ಮಂಜೂರಾತಿಯಗಬೇಕಾದರೆ ದಲ್ಲಾಳಿಗಳ ಮುಖಾಂತರ ಹಣ ನೀಡಿದರೆ ಮಾತ್ರ ನಿಮ್ಮ ಕಡತವನ್ನು ಮುಂದೆ ಟೇಬಲ್‍ಗೆ ಕಳುಹಿಸುತ್ತೇವೆಂದು ಬೇಜವಾಬ್ದಾರಿಯಿಂದ ಯೋಧರನ್ನು ನಡೆಸಿಕೊಳ್ಳುತ್ತಿದ್ದಾರೆಂದು ತಾಲ್ಲೂಕು ದಂಡಾಧಿಕಾರಿಗಳ ವಿರುದ್ದ ಆರೋಪ ಮಾಡಿದರು.
ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ ದೇಶದ ಹೊರಗಿನ ಸೈನಿಕರೊಂದಿಗೆ ಹೋರಾಡಿ ಗೆಲ್ಲಬಹುದು ಆದರೆ ನಮ್ಮ ಹಕ್ಕಿಗಾಗಿ ಹದಗೆಟ್ಟಿರುವ ವ್ಯವಸ್ತೆಯಲ್ಲಿ ಹೆಜ್ಜೆ ಹೆಜ್ಜೆಗೂ ಭ್ರಷ್ಟಾಚಾರದ ಮದ್ಯೆ ಸಿಲುಕಿರುವ ವ್ಯವಸ್ಥೆಯಲ್ಲಿ ನಮ್ಮವರ ವಿರುದ್ದ ಹೊರಾಡಿ ಗೆಲ್ಲಲು ಸಾಧ್ಯವಿಲ್ಲ ಎಂದು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿ ಹುತಾತ್ಮರಾದ ಪತ್ನಿಯರನ್ನು ಸರ್ಕಾರ ವೀರನಾರಿ. ಯಾರೆಂದು ಗೌರವಿಸುತ್ತಿದ್ದು ಅಂತಹವರಿಗೂ ಸಹ ಭೂ ಮಂಜೂರಾತಿಯಾಗಿಲ್ಲವೆಂದು ಅವ್ಯವಸ್ಥೆ ವಿರುದ್ದ ಅಸಮದಾನ ವ್ಯಕ್ತ ಪಡಿಸಿದರು.
ಜಿಲ್ಲಾಧ್ಯಂತ ಸಾವಿರಾರು ಎಕರೆ ಗೋಮಾಳ ಅಕ್ರಮ ದಾಖಲೆ ಸೃಷ್ಟಿ ಮಾಡಿಕೊಂಡು ಜನ ಪ್ರತಿನಿಧಿಗಳು, ರಿಯಲ್ ಎಸ್ಟೇಟ್ ದಂದೆಕೋರರು ಕೋಟಿ ಕೋಟಿಗೆ ಮಾರಾಟ ಮಾಡುತ್ತಿರುವ ಇಂತಹವರಿಗೆ ಭೂಮಿ ಸಿಗುತ್ತದೆ. ಆದರೆ ನಿಜವಾದ ಹೀರೋಗಳಾದ ದೇಶ ಕಾಯುವ ರೈತರಿಗೆ ಭೂ ರಹಿತ ಕೃಷಿಕನಿಗೆ ಭೂಮಿ ಮಂಜೂರಾತಿ ಎಂಬುದು ಆಕಾಶದ ಎತ್ತರದಲ್ಲಿರುವ ನಕ್ಷತ್ರದಂತಾಗಿದೆ ಎಂದು ಅಧಿಕಾರಿಗಳ ವಿರುದ್ದ ಕಿಡಿಕಾಡಿದರು.
ಒಂದು ವಾರದೊಳಗೆ ಮಾನ್ಯರು 6 ತಾಲ್ಲೂಕಿನ ಕಂದಾಯ ಅಧಿಕಾರಿಗಳ ಸಭೆ ಕರೆದು ಜಿಲ್ಲೆಯಲ್ಲಿರುವ ನಿವೃತ್ತ ಯೋಧರ ಪಟ್ಟಿ ತರಿಸಿಕೊಂಡು ಸರ್ಕಾರದ ನಿಯಮದಂತೆ ಭೂ ಮಂಜೂರಾತಿ ಮಾಡಿ ನಿವೃತ್ತ ಯೋಧರಿಗೆ ಗೌರವ ಕೊಡುವಂತೆ ಮನವಿ ನೀಡಿ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿಗಳಾದ ಸ್ನೇಹಾ ರವರು ಸಂಬಂಧಪಟ್ಟ ಅಧಿಕಾರಿಗಳನ್ನು ಸಭೆ ಕರೆದು ನಿವೃತ್ತ ಯೋಧರ ಸಮಸ್ಯೆಯನ್ನು ಬಗೆ ಹರಿಸುವ ಭರವಸೆಯನ್ನು ನೀಡಿದರು.

ಮನವಿ ನೀಡುವಾಗ ಮಹಿಳಾ ಜಿಲ್ಲಾಧ್ಯಕ್ಷ ಎ.ನಳಿನಿಗೌಡ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಮಂಗಸಂದ್ರ ತಿಮ್ಮಣ್ಣ, ಕುವಣ್ಣ, ವೆಂಕಟೇಶಪ್ಪ, ಮಾಲೂರು ತಾಲ್ಲೂಕು ಅಧ್ಯಕ್ಷ, ಯಲ್ಲಣ್ಣ, ತೆರ್ನಹಳ್ಳಿ ಆಂಜಿನಪ್ಪ, ಕೋಟೆ ಶ್ರೀನಿವಾಸ್, ಚಂದ್ರಪ್ಪ, ಪುತ್ತೇರಿ ರಾಜು, ಹರೀಶ್, ಸಂದೀಪ್‍ರೆಡ್ಡಿ, ಸಂದೀಪ್‍ಗೌಡ, ರಾಮಸಾಗರ ವೇಣು, ಕಿರಣ್, ಚಾಂದ್‍ಪಾಷ, ಪಾರುಕ್‍ಪಾಷ, ಜಿಲ್ಲಾ ಉಪಾಧ್ಯಕ್ಷ ಸುನಿಲ್ ಕುಮಾರ್, ಬಂಗಾರಿ ಮಂಜು, ರಾಜೇಶ್, ಭಾಸ್ಕರ್, ಮುಂತಾದವರು ಇದ್ದರು.

ಮಹಿಳೆಯರು ಸಾಲ ಸೌಲಭ್ಯ ಬಳಸಿಕೊಂಡು ಆರ್ಥಿಕವಾಗಿ ಮುಂದೆ ಬರಬೇಕು:ಕೆ.ಆರ್.ರಮೇಶ್ ಕುಮಾರ್

ಶ್ರೀನಿವಾಸಪುರ: ಮಹಿಳೆಯರು ಸಾಲ ಸೌಲಭ್ಯ ಬಳಸಿಕೊಂಡು ಆರ್ಥಿಕವಾಗಿ ಮುಂದೆ ಬರಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ಗೌನಿಪಲ್ಲಿ ಗ್ರಾಮದಲ್ಲಿ ಸ್ಥಳೀಯ ದೊಡ್ಡಪ್ರಮಾಣದ ವ್ಯವಸಾಯ ಸೇವಾ ಸಹಕಾರ ಸಂಘದ ವತಿಯಿಂದ ಬುಧವಾರ ಏರ್ಪಡಿಸಿದ್ದ ಸ್ತ್ರೀ ಶಕ್ತಿ ಸಂಘಗಳ ಸದಸ್ಯರ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಗ್ರಾಮೀಣ ಮಹಿಳೆಯರನ್ನು ಖಾಸಗಿ ಲೇವಾದೇವಿಗಾರರ ಶೋಷಣೆಯಿಂದ ಮುಕ್ತಗೊಳಿಸಿ, ಸ್ವಾವಲಂಬಿ ಜೀವನ ನಡೆಸುವಂತೆ ಮಾಡುವ ಉದ್ದೇಶದಿಂದ ಸಾಲ ಸೌಲಭ್ಯ ಒದಗಿಸಲಾಯಿತು ಎಂದು ಹೇಳಿದೆ.
ಈಗ ರೂ.50 ಬಡ್ಡಿರಹಿತ ಹಾಗೂ ಶೇ.4 ರಷ್ಟು ಬಡ್ಡಿ ದರದಲ್ಲಿ ರೂ.50 ಸಾವಿರ ಸಾಲ ನೀಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರೂ.1 ಲಕ್ಷ ಬಡ್ಡಿರಹಿತ ಸಾಲ ನೀಡಲಾಗುವುದು. ಮಹಿಳೆಯರ ಅಭಿವೃದ್ಧಿಗೆ ಹೊಸ ಯೋಜನೆ ರೂಪಿಸಿ ಜಾರಿಗೊಳಿಸಲಾಗುವುದು ಎಂದು ಹೇಳಿದರು.
ಪ್ರಧಾನಿ ಮೋದಿ ಅವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಶ್ರೀಮಂತರ ಪರ ಒಲವುಳ್ಳ ಅವರು, ಶ್ರೀಮಂತ ಉದ್ಯಮಿಗಳಿಗೆ ದೊಡ್ಡ ಮೊತ್ತದ ಸಾಲ ನೀಡುತ್ತಿದ್ದಾರೆ. ಅವರು ದೇಶ ತೊರೆದು ಹೋಗುತ್ತಿದ್ದಾರೆ. ಬಡವರಿಗೆ ಸಾಲ ನೀಡುತಿಲ್ಲ. ನೀಡಿದರೂ ಇರುವ ಅಲ್ಪಸ್ವಲ್ಪ ಜಮೀನು ಆಧಾರ ಪಡೆಯುತ್ತಾರೆ. ಸಾಲ ನೀಡುವುದು ತಡವಾದರೆ ಡಂಗುರ ಬಾರಿಸಿ ಮರ್ಯಾದೆ ಕಳೆಯುತ್ತಾರೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದ ಗೌಡ ಮಾತನಾಡಿ, ಬಡವರು ಮೋಸಗಾರರಲ್ಲ. ಅವರು ಪಡೆದುಕೊಂಡ ಸಾಲ ಮರುಪಾವತಿ ಮಾಡುತ್ತಿದ್ದಾರೆ. ಅವರಳಿ ಜಿಲ್ಲೆಗಳಲ್ಲಿ ಸ್ತ್ರಿ ಶಕ್ತಿ ಸಂಘಗಳಿಗೆ ನೀಡಲಾಗಿರುವ ಕೋಟ್ಯಂತರ ರೂಪಾಯಿ ಸಾಲ ಸದುಪಯೋಗವಾಗುತ್ತಿದೆ. ಮಹಿಳೆಯರು ಉದ್ದೇಶಿತ ಅಭಿವೃದ್ಧಿ ಯೋಜನೆಗಳಲ್ಲಿ ತೊಡಗಿಸಿ, ಆರ್ಥಿಕ ಸ್ವಾವಲಂಬನೆ ಸಾಧಿಸುತ್ತಿದ್ದಾರೆ ಎಂದು ಹೇಳಿದರು.
ಪ್ರಗತಿಪರ ಚಿಂತಕರಾದ ಮಾವಳ್ಳಿ ಶಂಕರ್, ಗೊಲ್ಲಹಳ್ಳಿ ಶಿವಪ್ರಸಾದ್, ಪಿಚ್ಚಳ್ಳಿ ಶ್ರೀನಿವಾಸ್, ವೀರಸಂಗಯ್ಯ, ವೆಂಕಟೇಶ್, ಸಿ.ಎಂ.ಮುನಿಯಪ್ಪ ಮಹಿಳಾ ಜಾಗೃತಿ ಅಗತ್ಯ ಕುರಿತು ಮಾತನಾಡಿದರು.
ಮುಖಂಡರಾದ ದಿಂಬಾಲ ಅಶೋಕ್, ಸಂಜಯರೆಡ್ಡಿ, ಸುಬ್ಬಿರೆಡ್ಡಿ, ಶಂಕರ್ ಪ್ರಸಾದ್, ಸುಧಾಕರ್, ವೆಂಕಟರೆಡ್ಡಿ, ಮುನಿಶಾಮಿ, ಎಂ.ಶ್ರೀನಿವಾಸನ್, ವಿಶ್ವನಾಥ್, ಶ್ರೀಕೃಷ್ಣ, ಆಜಾಮ್ ಇದ್ದರು.

ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ

” ಅಂತರ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಕಬಡ್ಡಿ ಪಂದ್ಯವು ಎಲ್ಲ ಜಿಲ್ಲೆಗಳ ಮೂಲೆ ಮೂಲೆಗಳಲ್ಲೂ ಪಸರಿಸುವಲ್ಲಿ  ಇಂಥ ರೋಚಕ ಪಂದ್ಯಾಟಗಳು  ಸಹಕಾರಿಯಾಗಿವೆ. ” ಎಂದು ಕುಂದಾಪುರ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿಯವರಾದ ಶ್ರೀ ಸೀತಾರಾಮ್ ನಕ್ಕತ್ತಾಯ ಇವರು ಆರ್. ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ, ಉಡುಪಿ -ಇದರ ಸಹಯೋಗದಲ್ಲಿ ಆಯೋಜಿಸಲಾದ
ಕುಂದಾಪುರ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ‌ ಮಾತನಾಡಿದರು.


ಮುಖ್ಯ ಅತಿಥಿಯಾಗಿ‌ ಆಗಮಿಸಿದ ಕುಂದಾಪುರ ತಾಲೂಕು ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿಯವರಾದ ಶ್ರೀ ಕುಸುಮಾಕರ ಶೆಟ್ಟಿಯವರು ವಿದ್ಯಾರ್ಥಿಗಳು ಕ್ರೀಡೆಯನ್ನು ಜೀವನದ ಒಂದು ಮುಖ್ಯ ಭಾಗವಾಗಿ ಪರಿಗಣಿಸಿದರೆ ಸಧೃಢ ಪ್ರಜೆಯಾಗಬಹುದೆಂದು ತಿಳಿಸಿದರು. ಕುಂದಾಪುರದ ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ಶ್ರೀ ಪ್ರಕಾಶ್ಚಂದ್ರ ಶೆಟ್ಟಿ, ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ನಾಗರಾಜ ಶೆಟ್ಟಿ ಯವರು ಪಂದ್ಯಾಟಕ್ಕೆ ಶುಭ ಹಾರೈಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ ಕುಮಾರ ಶೆಟ್ಟಿ ಯವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಕ್ರೀಡೆಯ ಕೆಲವು ತತ್ವಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ನಾಗರೀಕರಾಗಲು ಸಾಧ್ಯ ಎಂದು ಕರೆ ನೀಡಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ರಾಮ್ ಶೆಟ್ಟಿ ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಕೃಷ್ಣಮೂರ್ತಿ ಡಿ.ಬಿ ಯವರು ಕಾರ್ಯಕ್ರಮವನ್ನು ನಿರ್ವಹಿದರು. 

ಕೋಲಾರ ತಾಲ್ಲೂಕಿನ ಹುತ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ದಾನಿ ಧರ್ಮೇಶ್ ವಿವಿಧ ಸೌಲಭ್ಯ ವಿತರಿಸಿದರು.

ಬಡ ಮಕ್ಕಳಲ್ಲಿ ದೇವರನ್ನು ಕಾಣಬೇಕು

ಕೋಲಾರ: ಮಕ್ಕಳಲ್ಲಿ ದೇವರನ್ನು ಕಾಣಬೇಕು. ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ನೆರವಾದರೆ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಎಂದು ಶಿಕ್ಷಕ ಹಾಗೂ ದಾನಿ ಧರ್ಮೇಶ್ ಹೇಳಿದರು.
ತಾಲ್ಲೂಕಿನ ಹುತ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ, ತಟ್ಟೆ ಲೋಟ ಹಾಗೂ ಲೇಖನ ಸಾಮಗ್ರಿ ವಿತರಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಬುದ್ಧಿವಂತ ಮಕ್ಕಳಿದ್ದಾರೆ. ಆದರೆ ಬಡತನದಿಂದಾಗಿ ಅವರ ಪ್ರಗತಿಗೆ ಹಿನ್ನಡೆ ಉಂಟಾಗುತ್ತಿದೆ. ಸರ್ಕಾರದ ಸೌ¯ಭ್ಯದ ಜತೆಗೆ ಸಮುದಾಯ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿಗೆ ಮುಂದಾಗಬೇಕು ಎಂದು ಹೇಳಿದರು.
ಇಸಿಒ ನಂಜುಂಡಗೌಡ ಮಾತನಾಡಿ, ಧರ್ಮೇಶ್ ಪ್ರತಿ ತಿಂಗಳೂ ತಮ್ಮ ಸಂಬಳದಲ್ಲಿ ರೂ.10 ಸಾವಿರ ಉಳಿಸಿ ವಿದ್ಯಾರ್ಥಿಗಳಿಗೆ ಅಗತ್ಯವಾದ ವಸ್ತುಗಳನ್ನು ಖರೀದಿಸಿ ದಾನ ಮಾಡುತ್ತಾರೆ. ಸಮುದಾಯದ ಆರೋಗ್ಯ ಹಾಗೂ ಪರಿಸರ ರಕ್ಷಣೆಗೆ ಪೂರಕವಾದ ಕಾರ್ಯಕ್ರಮಗಳಿಗೂ ಆರ್ಥಿಕ ನೆರವು ನೀಡುತ್ತಿದ್ದಾರೆ. ಅಂಥ ಕೊಡುಗೈ ದಾನಿಗಳು ಇರುವುದು ಮಕ್ಕಳ ಸೌಭಾಗ್ಯ ಎಂದು ಹೇಳಿದರು.
ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಲ್.ಶ್ರೀನಿವಾಸ್ ಮಾತನಾಡಿ, ವಿದ್ಯಾರ್ಥಿಗಳು ದಾನಿಗಳು ನೀಡುವ ಸೌಲಭ್ಯ ಸದುಪಯೋಗ ಪಡಿಸಿಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸಬೇಕು. ಮಕ್ಕಳ ಹಿತ ಬಯಸುವ ವ್ಯಕ್ತಿಗಳು ನಿಜವಾದ ದಾನಿಗಳು. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಅವರು ಬುದ್ಧಿವಂತರಾದರೆ ದೇಶಕ್ಕೆ ಅದರಿಂದ ಒಳ್ಳೆಯದಾಗುತ್ತದೆ ಎಂದು ಹೇಳಿದರು.
ಇಸಿಒ ಕೆ.ಶ್ರೀನಿವಾಸ್ ಮಾತನಾಡಿ, ಧರ್ಮೇಶ್ ಅವರು ಎಲೆ ಮರೆ ಕಾಯಿಯಂತೆ, ಪ್ರಚಾರ ಬಯದೆ ದಾನ ಮಾಡುತ್ತಿದ್ದಾರೆ. ಈಗಾಗಲೇ ನೂರಾರು ವಿದ್ಯಾರ್ಥಿಗಳು ಅವರ ಸಹಾಯ ಪಡೆದು ಶೈಕ್ಷಣಿಕವಾಗಿ ಮುಂದುವರಿಯುತ್ತಿದ್ದಾರೆ ಎಂದು ಹೇಳಿದರು.
ಶಾಲೆಯ ಮುಖ್ಯ ಶಿಕ್ಷಕ ಜಿ.ಶ್ರೀನಿವಾಸನ್, ಸಾಹಿತಿ ಆರ್.ಚೌಡರೆಡ್ಡಿ, ಎಸ್‍ಡಿಎಂಸಿ ಅಧ್ಯಕ್ಷ ಜಗದೀಶ್, ಸದಸ್ಯರಾದ ಶ್ರೀರಾಂ, ಕವಿತಾ, ಸುಶೀಲ, ಶಿಕ್ಷಕಿಯರಾದ ಆರತಿ, ಶಾಮಲಮ್ಮ ಇದ್ದರು.

ಆಸ್ಕರ್‌ ಫೆರ್ನಾಂಡಿಸ್ ಪುಣ್ಯತಿಥಿ:ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣುಹಂಪಲು ವಿತರಣೆ

ಕುಂದಾಪುರ: ರೋಗಿಗಳಿಗೆ ಹಣ್ಣುಹಂಪಲು ವಿತರಿಸುವ ಮೂಲಕ ಸೆಪ್ಟಂಬರ್ 13 ರಂದು ಹಣ್ಣುಹಂಪಲು ವಿತರಿಸುವ ಮೂಲಕ ಕೇಂದ್ರ ಮಾಜಿ ಸಚಿವ ದಿ. ಆಸ್ಕರ್‌ ಫೆರ್ನಾಂಡಿಸ್‌ ಅವರ್ ಪ್ರಥಮ ಪುಣ್ಯತಿಥಿಯನ್ನು ಆಸ್ಕರ್‌ ಫೆರ್ನಾಂಡಿಸ್‌ ಅಭಿಮಾನಿ ಬಳಗವರು ಆಚರಿಸಿದರು.

ಕುಂದಾಪುರದ ಸರಕಾರಿ ಆಸ್ಪತ್ರೆಯ ಎಲ್ಲಾ ರೋಗಿಗಳಿಗೆ ಹಣ್ಣು ಹಂಪಲು ಗಳನ್ನು ಆಸ್ಕರ್‌ ಫೆರ್ನಾಂಡಿಸ್‌ ಅಭಿಮಾನಿ ಬಳಗವರು ವಿತರಿಸಿದರು.

    ಈ ಸಂದರ್ಭದಲ್ಲಿ ಆಸ್ಕರ್‌ ಫೆರ್ನಾಂಡಿಸ್‌ ಅಭಿಮಾನಿ ಬಳಗದ ಪ್ರಮುಖರಾದ ಮಂಜಿತ್‌ ನಾಗರಾಜ್‌, ಬರ್ನಾಡ್ ಡಿಕೋಸ್ತಾ, ಪವನ್ ಬಂಗೇರ, ಕಿಶನ್, ಭರತ್ ರಾವ್, ಕಾರ್ತಿಕ್, ಜಗದೀಶ್, ಅಖೀಲ್, ಮತ್ತು ಮನೀಷ್ ಇದ್ದು, ಕುಂದಾಪುರಸರಕಾರಿ ಆಸ್ಪತ್ರೆಯ ಮುಖ್ಯ ಆಡಳಿತ ಶಸ್ತ್ರ ಚಿಕಿತ್ಷಕರುಡಾ| ರೊಬರ್ಟ್ ರೆಬೆಲ್ಲೊ ಮತ್ತು ಶೂಶ್ರುಷಿಕ ಅಧೀಕ್ಷಕಿ ಅನ್ನಪೂರ್ಣ ಟಿ.ಅರ್. ಕಾರ್ಯಕ್ರಮಕ್ಕೆ ಸಹಕರಿಸಿದರು.

ಭಂಡಾರ್ಕಾರ್ಸ್ ಕಾಲೇಜಿನ ಎನ್.ಸಿ.ಸಿ ಆರ್ಮಿ ಕೆಡೆಟ್ಗಳು ದೆಹಲಿಯಲ್ಲಿ “ಥಲ್ ಸೈನಿಕ್ ಶಿಬಿರ”ದಲ್ಲಿ ಭಾಗವಹಿಸುವಿಕೆ

ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಎನ್.ಸಿ.ಸಿ ಆರ್ಮಿ ಕೆಡೆಟ್ ಗಳಾದ ಎಸ್.ಯು.ಒ.ರಂಜಿತ್ ಹಾಗೂ ಜೆ.ಯು.ಒ ಆನ್ಸ್ಟನ್ ಇಮ್ಯಾನ್ಯುಯಲ್ ರೆಬೆಲ್ಲೊ ಇವರುಗಳು ಇದೆ 14ನೇ ಸೆಪ್ಟೆಂಬರ್ 2022ರಿಂದ 25ನೇ ಸೆಪ್ಟೆಂಬರ್ 2022ರವರೆಗೆ ದೆಹಲಿಯಲ್ಲಿ ನಡೆಯಲಿರುವ “ಥಲ್ ಸೈನಿಕ್ ಶಿಬಿರ”ದಲ್ಲಿ ಭಾಗವಹಿಸುತ್ತಿದ್ದಾರೆ.
ಇವರಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ, ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗ ಅಭಿನಂದನೆಗಳನ್ನು ತಿಳಿಸಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇವರಿಗೆ ಕಾಲೇಜಿನ
ಎನ್ ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಅಂಜನ್ ಕುಮಾರ್ ಎಂ.ಎಲ್ ತರಬೇತಿ ನೀಡಿದ್ದರು.

ಜೆ.ಯು.ಒ ಆನ್ಸ್ಟನ್ ಇಮ್ಯಾನ್ಯುಯಲ್ ರೆಬೆಲ್ಲೊ
ಎಸ್.ಯು.ಒ.ರಂಜಿತ್

ಆಸ್ಕರ್‌ ಫೆರ್ನಾಂಡಿಸ್ ಪುಣ್ಯತಿಥಿ:ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆ ರೋಗಿಗಳಿಗೆ ಹಣ್ಣುಹಂಪಲು ವಿತರಣೆ

ಉಡುಪಿ: ಕೇಂದ್ರ ಮಾಜಿ ಸಚಿವ ದಿ. ಆಸ್ಕರ್‌ ಫೆರ್ನಾಂಡಿಸ್‌ ಪ್ರಥಮ ಪುಣ್ಯತಿಥಿಯನ್ನು ರೋಗಿಗಳಿಗೆ ಹಣ್ಣುಹಂಪಲು ವಿತರಿಸುವ ಮೂಲಕ ಸೆಪ್ಟಂಬರ್ 13 ರಂದು ಉಡುಪಿ ಜಿಲ್ಲೆಯ ಆಸ್ಕರ್‌ ಫೆರ್ನಾಂಡಿಸ್‌ ಅಭಿಮಾನಿ ಬಳಗವರು ಆಚರಿಸಿದರು.

ಉಡುಪಿಯ ಅಜ್ಜರಕಾಡು ಸರಕಾರಿ ಆಸ್ಪತ್ರೆ ಹಾಗೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.

    ಈ ಸಂದರ್ಭದಲ್ಲಿ ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ, ಆಸ್ಕರ್‌ ಫರ್ನಾಂಡಿಸ್‌ ಅಭಿಮಾನಿ ಬಳಗ ಗೌರವ ಅಧ್ಯಕ್ಷ ರೊನಾಲ್ಡ್‌ ಮನೋಹರ್‌ ಕರ್ಕಡ, ಪ್ರಮುಖರಾದ ಮಂಜಿತ್‌ ನಾಗರಾಜ್‌, ಮಹಮ್ಮದ್‌ ಶೀಶ್‌, ಕಾಂಗ್ರೆಸ್‌ ಮುಖಂಡರಾದ ಎಂ. ಐ. ಗಫೂರ್‌, ರಮೇಶ್‌. ಕಾಂಚನ್‌, ಪ್ರಖ್ಯಾತ್‌ ಶೆಟ್ಟಿ, ಯತೀಶ್‌ ಕರ್ಕೇರ, ಫರ್ನಾಂಡಿಸ್‌, ನವೀನ್‌ ಶಟ್ಟಿ, ಹರೀಶ್‌ ಶೆಟ್ಟಿ, ಜಿಲ್ಲಾಸ್ಪತ್ರೆ ಸರ್ಜನ್‌ ಡಾ. ಮಧುಸೂದನ ನಾಯಕ್‌ ಈ ಕಾರ್ಯಕ್ರಮಕ್ಕೆ ಸಹಕರಿಸಿದರು.

ರೈತ ಸಂಘದಿಂದ ಮಾಂಗಲ್ಯಗಳ ಸಮೇತ ಅಬಕಾರಿ ಇಲಾಖೆಯ ಕಚೇರಿಗೆ ಮುತ್ತಿಗೆ

ಶ್ರೀನಿವಾಸಪುರ.ಸೆ,13: ಬಡವರ ಅನ್ನ ಹಾಗೂ ಮಾಂಗಲ್ಯವನ್ನು
ಕಿತ್ತುಕೊಳ್ಳುತ್ತಿರುವ ಗ್ರಾಮೀಣ ಪ್ರದೇಶದ ಅಕ್ರಮ
ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಲ್ಲಿ ವಿಫಲವಾಗಿರುವ ಅಬಕಾರಿ
ಇಲಾಖೆಯ ಬಡ ವಿರೋಧಿ ನೀತಿಯನ್ನು ಖಂಡಿಸಿ ದಿನಾಂಕ: 17-09-2022
ರಂದು ಮಾಂಗಲ್ಯಗಳ ಸಮೇತ ಅಬಕಾರಿ ಕಚೇರಿ ಮುತ್ತಿಗೆ
ಹಾಕಲು ಪ್ರವಾಸಿ ಮಂದಿರದಲ್ಲಿ ಕರೆದಿದ್ದ ರೈತ ಸಂಘದ
ಸಭೆಯಲ್ಲಿ ತೀರ್ಮಾನಿಸಲಾಯಿತು.
ಕಿಲೋಮೀಟರ್ ಗಟ್ಟಲೆ ಅಲೆದಾಡಿದರು ಹನಿ ನೀರು ಸಿಗದೆ
ಇರಬಹುದು ಆದರೆ ದಿನದ 24 ಗಂಟೆ ಗ್ರಾಮೀಣ ಪ್ರದೇಶದ ದಿನಸಿ
ಅಂಗಡಿಗಳಲ್ಲಿ ಗಲ್ಲಿಗಲ್ಲಿಯಲ್ಲೂ ಅಕ್ರಮ ಮದ್ಯ ಮಾರಾಟ
ಮಾಡುವ ಮುಖಾಂತರ ಗ್ರಾಮೀಣ ಪ್ರದೇಶದಲ್ಲಿ ಅಶಾಂತಿ ಹಾಗೂ
ಬಡವರ ಅನ್ನವನ್ನು ಅಬಕಾರಿ ಇಲಾಖೆ ಅಧಿಕಾರಿಗಳೇ
ಕಸಿದುಕೊಳ್ಳುತ್ತಿದ್ದಾರೆ. ಮಹಿಳಾ ಜಿಲ್ಲಾಧ್ಯಕ್ಷ ಎ.ನಳಿನಿಗೌಡ
ಅವ್ಯವಸ್ಥೆ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.
ಎರಡು ವರ್ಷ ಸಾಂಕ್ರಾಮಿಕ ರೋಗಗಳಿಂದ ತತ್ತರಿಸಿ
ದುಡಿಯುವ ಕೈಗೆ ಕೆಲಸವಿಲ್ಲದೆ ಮಕ್ಕಳ ವಿದ್ಯಾಭ್ಯಾಸ ಹಿರಿಯರ
ಆರೋಗ್ಯಕ್ಕೆ ಖಾಸಗಿ ಸಾಲ ಮಾಡಿದ ಹಣ ತೀರಿಸುವ ಸಮಯದಲ್ಲಿ
ಗಲ್ಲಿಗಲ್ಲಿಯಲ್ಲೂ ಅಕ್ರಮ ಮದ್ಯ ಮಾರಾಟಕ್ಕೆ ಅಕ್ರಮ
ಪರವಾನಿಗೆ ನೀಡುವ ಮುಖಾಂತರ ಸರ್ಕಾರ ನಡೆಯಬೇಕಾದರೆ
ಅಬಕಾರಿ ಇಲಾಖೆಯ ಆದಾಯ ಹೆಚ್ಚಾಗಬೇಕೆಂಬ ಸರ್ಕಾರದ
ಆದೇಶಕ್ಕೆ ಅಬಕಾರಿ ಇಲಾಖೆ ಅಧಿಕಾರಿಗಳು ಗ್ರಾಮೀಣ ಪ್ರದೇಶ
ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ
ಕುಮ್ಮಕ್ಕು ನೀಡುವ ಮೂಲಕ ಅಬಕಾರಿ ಇಲಾಖೆ ಚಿನ್ನದ ಮೊಟ್ಟೆ
ಇಡುವ ಇಲಾಖೆಯಾಗಿ ಮಾರ್ಪಟ್ಟಿದೆ ಎಂದು ಆರೋಪ ಮಾಡಿದರು.
ಅಕ್ರಮ ಮದ್ಯ ಮಾರಾಟ ತಡೆಯಬೇಕಾದರೆ ಅಧಿಕಾರಿಗಳಿಗೆ
ಬಡ ಕೂಲಿ ಕಾರ್ಮಿಕರು ದೂರು ನೀಡಿದರೆ ನೆಪಮಾತ್ರಕ್ಕೆ ದಾಳಿ
ಮಾಡಿ ದಂಡ ವಿಧಿಸಿ, ಪತ್ರಿಕಾ ಮಾದ್ಯಮಕ್ಕೆ ಪೊಟೋ ನೀಡಿ ಆ
ನಂತರ ಯಥಾಸ್ಥಿತಿ ಮಾರಾಟ ಮಾಡಲು ಅವಕಾಶ ನೀಡುತ್ತಾರೆಂದು
ಆಕ್ರೋಷ ವ್ಯಕ್ತಪಡಿಸಿದರು.
ರಾಜ್ಯ ಸಂಚಾಲಕ ಬಂಗವಾದಿ ನಾಗರಾಜ್‍ಗೌಡ ಮಾತನಾಡಿ ಅಬಕಾರಿ
ಅಧಿಕಾರಿಗಳಿಗೆ ಹಣ ನೀಡಿದರೆ ಬಂಗಾರಪೇಟೆ ತಾಲ್ಲೂಕಿನಲ್ಲಿ ಮಾರಾಟ
ಮಾಡುತ್ತಾರೆ. ನಿಯಮವನ್ನು ಉಲ್ಲಂಘನೆ ಮಾಡಿ ಮದ್ಯದ ಅಂಗಡಿ
ಮಾಲೀಕರು ದಿನದ 24 ಗಂಟೆ ರಾಜ್ಯ ರೋಷವಾಗಿ ಮದ್ಯ ಮಾರಾಟ

ಮಾಡುವ ಮುಖಾಂತರ ಕೂಲಿ ಮಾಜಿ ಜೀವನ ಮಾಡುತ್ತಿರುವ
ಬಡವರು ದುಡಿದ ಹಣವನ್ನು ಮದ್ಯದ ಅಂಗಡಿಗೆ ಅಡಹಿಟ್ಟು ಮನೆಗೆ
ಹೋಗಿ ಹೆಂಡತಿ ಮಕ್ಕಳನ್ನು ಒಡೆಯುವ ಜೊತೆಗೆ
ಕೊಲೆಗಳಾಗಿರುವುದು ಉದಾಹರಣೆಗಳು ಬೇಕಾದಷ್ಟು
ಇದ್ದರೂ ಇದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ತಿಂಗಳ ಮಾಮೂಲಿ

ಪಡೆದುಕೊಳ್ಳುವ ಮುಖಾಂತರ ಅಕ್ರಮ ಮದ್ಯ ಮಾರಾಟ
ಅಧಿಕಾರಿಗಳ ನೆರಳಿನಲ್ಲಿ ನಡೆಯುತ್ತಿದೆ ಎಂದು ಕಿಡಿಕಾಡಿದರು.
ಗ್ರಾಮೀಣ ಪ್ರದೇಶದ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ
ಹಾಕಿ ಬಡವರ ಅನ್ನ ಹಾಗೂ ಮಾಂಗಲ್ಯವನ್ನು ಉಳಿಸಿಕೊಡುವಂತೆ
ಅಬಕಾರಿ ಅಧಿಕಾರಿಗಳನ್ನು ಒತ್ತಾಯಿಸಿ ದಿನಾಂಕ: 17-09-2022 ರ ಶನಿವಾರ
ಮಾಂಗಲ್ಯಗಳ ಸಮೇತ ಅಬಕಾರಿ ಇಲಾಖೆ ಮುತ್ತಿಗೆ ಹಾಕುವ
ವಿಚಾರವನ್ನು ಸಭೆಯಲ್ಲಿ ತೀರ್ಮಾನಿಸಲಾಯಿತೆಂದರು.
ಸಭೆಯಲ್ಲಿ ತಾಲ್ಲೂಕಾದ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ, ರಾಜ್ಯ
ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಕೋಟೆ ಶ್ರೀನಿವಾಸ್, ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ
ಹನುಮಯ್ಯ, ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ, ಗೀರೀಶ್,
ಮುನ್ನಾ, ಹರೀಶ್, ಯಲ್ಲಪ್ಪ, ಮಂಗಸಂದ್ರ ತಿಮ್ಮಣ್ಣ,
ವೆಂಕಟೇಶಪ್ಪ, ಸುಪ್ರೀಂಚಲ, ಬಂಗಾರಿ ಮಂಜು, ಜುಬೇರ್ ಪಾಷ,

ಪಾರುಕ್‍ಪಾಷ, ರಾಮಸಾಗರ ವೇಣು ಸಂದೀಪ್‍ರೆಡ್ಡಿ, ಸಂದೀಪ್‍ಗೌಡ,
ಕಿರಣ್, ವೆಂಕಟರವಣಪ್ಪ ನಾಗಯ್ಯ , ಮುನಿರಾಜು, ಮುನಿಕೃಷ್ಣ
ಮುಂತಾದವರು ಇದ್ದರು.