ಪರೋಪಕಾರಕ್ಕೆ ಹೆಸರಾದ ಪೌರ ಕಾರ್ಮಿಕರು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕು:ಎಂ.ಜಯರಾಂ

ಶ್ರೀನಿವಾಸಪುರ: ಪರೋಪಕಾರಕ್ಕೆ ಹೆಸರಾದ ಪೌರ ಕಾರ್ಮಿಕರು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಎಂ.ಜಯರಾಂ ಹೇಳಿದರು.
ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ಪುರಸಭೆ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಪೌರ ಕಾರ್ಮಿಕರು ಸಮರ್ಪಣಾ ಭಾವದಿಂದ ಕಾರ್ಯನಿರ್ವಹಿಸುವುದರ ಮೂಲಕ ಸಮಾಜದ ಎಲ್ಲ ವರ್ಗದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪೌರ ಕಾರ್ಮಿಕರು, ಕಚೇರಿ ಸಿಬ್ಬಂದಿ, ನಿವೃತ್ತರಾದ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಪೌರ ಕಾರ್ಮಿಕರ ಕ್ರೀಡಾ ಕೂಟದಲ್ಲಿ ವಿಜೇತರಾಗಿದ್ದ ಪೌರ ಕಾರ್ಮಿಕರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್, ಉಪಾಧ್ಯಕ್ಷೆ ಆಯಿಷಾ ನಯಾಜ್, ಕಂದಾಯ ನಿರೀಕ್ಷಕರಾದ ಫಾತಿಮಾ ಬೇಗಂ, ವಿ.ನಾಗರಾಜ್, ಶಂಕರ್, ಎಂಜಿಯರ್‍ಗಳಾದ ರೂಪಾ, ವೇದಾಂತ್, ಸಿಬ್ಬಂದಿ ಸುರೇಶ್, ಸಂತೋಷ್, ಪ್ರತಾಪ್, ಗೌತಮ್, ಸದಸ್ಯರಾದ ಬಿ.ವೆಂಕಟರೆಡ್ಡಿ, ಉನಿಕಿಲಿ ನಾಗರಾಜ್, ಮುನಿರಾಜು, ಶ್ರೀನಿವಾಸ್, ನಲ್ಲಪ್ಪಲ್ಲಿ ರೆಡ್ಡಪ್ಪ, ಷಫಿವುಲ್ಲಾ, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಆಂಜನಪ್ಪ, ಮುಖಂಡರಾದ ಬಾಲಕೃಷ್ಣ, ರಾಮಚಂದ್ರ, ಸತೀಶ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಜಿ.ಎನ್.ಕುಬೇರಗೌಡ ಇದ್ದರು.
ಮೆರವಣಿಗೆ: ಪೌರ ಕಾರ್ಮಿಕರು ಹಾಗೂ ಕಚೇರಿ ಸಿಬ್ಬಂದಿ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಮಾಡಿದರು.

ಸಹಕಾರ ಸಂಘ ರೈತ ಸಮುದಾಯದ ಸಮಸ್ಯೆಗಳಿಗೆ ಸಂದ್ಸಿಸಿ ಕಾರ್ಯನಿರ್ವಹಿಸಬೇಕು : ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ವೆಂಕಟರೆಡ್ಡಿ

ಶ್ರೀನಿವಾಸಪುರ: ಸಹಕಾರ ಸಂಘ ರೈತ ಸಮುದಾಯದ ಸಮಸ್ಯೆಗಳಿಗೆ ಸಂದ್ಸಿಸಿ ಕಾರ್ಯನಿರ್ವಹಿಸಬೇಕು ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ವೆಂಕಟರೆಡ್ಡಿ ಹೇಳಿದರು.
ತಾಲ್ಲೂಕಿನ ಮಣಿಗಾನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸ್ಥಳೀಯ ವ್ಯವಸಾಯ ಸೇವಾ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿ ಅವರು, ಸಂಘ ಉಳಿಯಬೇಕಾದರೆ ಸಾಲ ವಸೂಲಾತಿ ಪ್ರಮಾಣ ನೂರಕ್ಕೆ ನೂರರಷ್ಟಿರಬೇಕು ಎಂದು ಅಭಿಪ್ರಾಯಪಟ್ಟರು.
ಸಹಕಾರ ಸಂಘದ ಅಧ್ಯಕ್ಷ ಬಿ.ವಿ.ಸುರೇಶ್ ರೆಡ್ಡಿ ಮಾತನಾಡಿ, ಮಣಿಗಾನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘ ಸಾಲ ನೀಡಿಕೆ ಹಾಗೂ ಸಾಲ ವಸೂಲಾತಿಯಲ್ಲಿ ಜಿಲ್ಲೆಯಲ್ಲಿಯೇ ಮೊದಲ ಸ್ಥಾನದಲ್ಲಿದೆ. 54 ಸ್ತ್ರೀ ಶಕ್ತಿ ಸಂಘಗಳಿಗೆ ರೂ.2.70 ಕೋಟಿ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಸಾಲ ಮರುಪಾವತಿ ತೃಪ್ತಿಕರವಾಗಿದೆ. ಸಂಘ ರೂ.4 ಲಕ್ಷ ಲಾಭದಲ್ಲಿದೆಸಂಘದ ಸದಸ್ಯರ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಹೇಳಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುನಿಯಪ್ಪ, ಉಪಾಧ್ಯಕ್ಷೆ ವೇದಾವತಿ, ನಿರ್ದೇಶಕರಾದ ಕೆ.ಲಕ್ಷ್ಮಣರೆಡ್ಡಿ, ಎಂ.ನರಸಿಂಹರೆಡ್ಡಿ, ಕೆ.ಎನ್.ನಾರಾಯಣಸ್ವಾಮಿ, ಟಿ.ವಿ.ಬೈರೆಡ್ಡಿ, ಎಂ.ಆಂಜಪ್ಪ, ಎನ್.ಶ್ರೀರಾಮರೆಡ್ಡಿ, ಚಿಕ್ಕರಾಮಪ್ಪ, ಸುಲ್ತಾನ್‍ಸಾಬಿ, ಚಲಪತಿ, ಯಶೋದಮ್ಮ, ಸಿಬ್ಬಂದಿ ಎಂ.ಎ.ನಾರಾಯಣರೆಡ್ಡಿ ಇದ್ದರು.

ಕೋಲಾರ ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಮತ್ತು ಡಿ.ವಿ.ಗುಂಡಪ್ಪನವರ ಪ್ರತಿಮೆಗಳನ್ನು ಸ್ಥಾಪಿಸಲು ಕೋರಿ ಮನವಿ ಮುಖ್ಯಮಂತ್ರಿಗಳಿಗೆ ಮನವಿ

ಮುಖಾಂತರ
ಮಾನ್ಯ ಜಿಲ್ಲಾಧಿಕಾರಿಗಳು
ಕೋಲಾರ ಜಿಲ್ಲೆ, ಕೋಲಾರ.

ಮಾನ್ಯರೇ,

    ವಿಷಯ : ಕೋಲಾರ ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗದಲ್ಲಿ ಕರ್ನಾಟಕ 

ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೆ.ಸಿ.ರೆಡ್ಡಿರವರ ಪ್ರತಿಮೆ ಸ್ಥಾಪಿಸಲು ಮತ್ತು ಕೋಲಾರ ನಗರದ ಡಿ.ವಿ.ಗುಂಡಪ್ಪ ಜಿಲ್ಲಾ ಗ್ರಂಥಾಲಯದ ಮುಂಭಾಗದಲ್ಲಿ ಡಿ.ವಿ.ಗುಂಡಪ್ಪನವರ ಪ್ರತಿಮೆ ಸ್ಥಾಪಿಸಲು ಕೋರಿ ಮನವಿ.


ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಪ್ರಥಮ ಮುಖ್ಯಮಂತ್ರಿಯಾದ ಕೋಲಾರ ಜಿಲ್ಲೆಯ, ಬೇತಮಂಗಲ ಹೋಬಳಿ ಕ್ಯಾಸಂಬಳ್ಳಿಯ ಕೆ.ಸಿ.ರೆಡ್ಡಿಯವರನ್ನು ನಮ್ಮ ಜಿಲ್ಲೆಯವರು ಎಂದು ಹೇಳಿಕೊಳ್ಳುವುದು ಹೆಮ್ಮಯ ವಿಷಯವಾಗಿದೆ. ಇಂತಹ ವ್ಯಕ್ತಿಯ ಪ್ರತಿಮೆಯು ಜಿಲ್ಲೆಯ ಜಿಲ್ಲಾ ಕೇಂದ್ರದಲ್ಲಿ ಸ್ಥಾಪನೆ ಮಾಡದಿರುವುದು ಸಹ ಬೇಸರದ ಸಂಗತಿ. ಜಿಲ್ಲಾಡಳಿತ ಕಛೇರಿಯ ಮುಂಭಾಗದಲ್ಲಿ ಕೆ.ಸಿ.ರೆಡ್ಡಿಯವರ ಪ್ರತಿಮೆಯನ್ನು ಸ್ಥಾಪಿಸಿ ಅವರಿಗೆ ಗೌರ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಅದೇ ರೀತಿ ಡಿ.ವಿ.ಜಿ ಎಂಬ ಹೆಸರಿನಿಂದ ಪ್ರಸಿದ್ಧರಾದ ಡಾ. ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರು ಕರ್ನಾಟಕದ ಪ್ರಸಿದ್ಧ ಸಾಹಿತಿ, ಪತ್ರಕರ್ತರು. ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಇವರು ಕನ್ನಡದ ಆಧುನಿಕ ಸರ್ವಜ್ಞ ಎಂದೇ ಪ್ರಸಿದ್ಧರಾದವರು. ಮೂಲತಹ ಕೋಲಾರ ಜಿಲ್ಲೆಯ ಮುಳಬಾಗಿಲಿನ ಇವರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅಪಾರ. ಕೋಲಾರದ ಡಿ.ವಿ. ಗುಂಡಪ್ಪನವರ ಹೆಸರನ್ನು ಜಿಲ್ಲಾ ಗ್ರಂಥಾಲಯಕ್ಕೆ ಇಡಲಾಗಿದೆ. ಸದರಿ ಗ್ರಂಥಾಲಯದ ಮುಂಭಾಗದಲ್ಲಿ ಡಿ.ವಿ.ಗುಂಡಪ್ಪನವರ ಪ್ರತಿಯನ್ನು ಸ್ಥಾಪಿಸಲು ತಮ್ಮಲ್ಲಿ ಈ ಮೂಲಕ ಕೋರುತ್ತೇವೆ.
ವಂದನೆಗಳೊಂದಿಗೆ,
ಇಂತಿ ತಮ್ಮ ವಿಶ್ವಾಸಿಗಳು,
ದಿನಾಂಕ :
ಸ್ಥಳ : ಕೋಲಾರ

ಮುಖಾಂತರ
ಮಾನ್ಯ ಜಿಲ್ಲಾಧಿಕಾರಿಗಳು
ಕೋಲಾರ ಜಿಲ್ಲೆ, ಕೋಲಾರ.




ಸ್ಥಳ : ಕೋಲಾರ

ಓಕ್ ವುಡ್ ಇಂಡಿಯನ್ ಶಾಲೆಯಲ್ಲಿ ನೂತನವಾಗಿ ಇಂಟರ್ಯಾಕ್ಟ ಕ್ಲಬ್ ಉದ್ಘಾಟನೆ

ರೋಟರಿ ಕ್ಲಬ್ ಕುಂದಾಪುರ ದಕ್ಷಿಣವು ಮಾತೃ ಸಂಸ್ಥೆಯಾಗಿ ಕುಂದಾಪುರದ ಓಕ್ ವುಡ್ ಇಂಡಿಯನ್ ಶಾಲೆಯಲ್ಲಿ ಹೊಸದಾಗಿ ಇಂಟರ್ಯಾಕ್ಟ ಕ್ಲಬ್ ಪ್ರಾರಂಭಿಸಿದರು. ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ, ಮಾಜಿ ರೋಟರಿ ಗವರ್ನರ್ ಅಭಿನಂದನ್ ಶೆಟ್ಟಿ, ಇಂಟರ್ಯಾಕ್ಟ ಸಂಯೋಜಕಿ ಜುಡಿತ್ ಮೆಂಡೋನ್ಸಾ, ರೋ. ಸುರೇಖಾ ಪುರಾಣಿಕ, ಶಾಲಾ ಪ್ರಿನ್ಸಿಪಾಲ್ ನೀತಾ ಶೆಟ್ಟಿ ಹಾಗೂ ಸಹನಾ ಶೆಟ್ಟಿ ಪಾಲ್ಗೊಂಡಿದ್ದರು.
ರೋ. ಅಭಿನಂದನ್ ಶೆಟ್ಟಿ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಇಂಟರ್ಯಾಕ್ಟ ಕ್ಲಬ್ ನ ಧ್ಯೇಯ ಉದ್ದೇಶಗಳ ಬಗ್ಗೆ ತಿಳಿಸಿದರು.

ಹುಟ್ಟು ಹಬ್ಬ ವಿಶೇಷ ಮಕ್ಕಳ ವಸತಿ ಶಾಲೆ ಮಾನಸ ಜ್ಯೋತಿಯಲ್ಲಿ

ರೋಟರಿ ಕುಂದಾಪುರ ದಕ್ಷಿಣದ ಸದಸ್ಯರಾದ ರೋ. ಮನೋಹರ ಪಿ ತಮ್ಮ ಹುಟ್ಟು ಹಬ್ಬವನ್ನು ವಿಶೇಷ ಮಕ್ಕಳ ವಸತಿ ಶಾಲೆ ಮಾನಸ ಜ್ಯೋತಿಯಲ್ಲಿ ಹಣ್ಣು ಹಂಪಲು ಹಂಚಿ, ದೇಣಿಗೆಯನ್ನು ನೀಡಿ, ಮಕ್ಕಳೊಂದಿಗೆ ಆಚರಿಸಿಕೊಂಡರು.
ರೋಟರಿ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ, ಮಾಜಿ ಅಧ್ಯಕ್ಷರಾದ ವಾಸುದೇವ ಕಾರಂತ, ಕೆ.ಪಿ.ಭಟ್ , ಕಾರ್ಯದರ್ಶಿ ಸಚಿನ್ ನಕ್ಕತ್ತಾಯ,ರೋ. ಸುರೇಖಾ ಪುರಾಣಿಕ ,ಶ್ರೀಮತಿ ವಿಜಯಲಕ್ಷ್ಮಿ ಮನೋಹರ ಹಾಗೂ ಮಾನಸ ಜ್ಯೋತಿಯ ಶೋಭಾ ಮಧ್ಯಸ್ಥ ಪಾಲ್ಗೊಂಡಿದ್ದರು.

ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ತಂಬಾಕು ಸೇವನೆ ನಿಯಂತ್ರಣಾ ಮಾಹಿತಿ ಕಾರ್ಯಕ್ರಮ

“ಹದಿಹರೆಯವೆನ್ನುವುದು ತಂಬಾಕು ಸೇವಿಸಬೇಕೆನ್ನುವ ಆಮಿಷಗಳಿಗೆ ಒಳಗಾಗುವ ಆರಂಭಿಕ ಹಂತ.  ವೈಯುಕ್ತಿಕ ಆರೋಗ್ಯದ ಮೇಲೆ ತಂಬಾಕು ಸೇವನೆ ಬೀರುವ ಅಪಾಯಕಾರಿ ಪರಿಣಾಮಗಳ ಬಗ್ಗೆ ಯುವಜನರು ಗಂಭೀರವಾಗಿ ಯೋಚಿಸಿ, ಆರೋಗ್ಯ ಇಲಾಖೆ ಹೊರಡಿಸುವ ಮುನ್ನೆಚ್ಚರಿಕಾ ಮಾಹಿತಿಗಳು ಸಂದೇಶಗಳನ್ನು ಚೆನ್ನಾಗಿ ಮನಗಂಡು ತಂಬಾಕು- ಮುಕ್ತ ಸಮಾಜ ಸೃಷ್ಟಿಯಾಗಬೇಕು” ಎಂದು ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಅಂಗವಾಗಿ ಉಡುಪಿ ಜಿಲ್ಲಾ ತಂಬಾಕು ನಿಯಂತ್ರಣ ಸೆಲ್ ನ ಆರೋಗ್ಯಾಧಿಕಾರಿಯಾದ ಶ್ರೀಮತಿ ಮಂಜುಳಾ ಶೆಟ್ಟಿ ಯವರು ಕರೆ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಶ್ರಿ ನವೀನ್ ಕುಮಾರ ಶೆಟ್ಟಿಯವರು  ವಿದ್ಯಾರ್ಥಿಗಳು ಉತ್ತಮ ನಾಗರೀಕರಾಗುವುದೆಂದರೆ ಮುಖ್ಯವಾಗಿ ಆರೋಗ್ಯವಂತ ಸಮಾಜ ಕಟ್ಟುವ ಜವಾಬ್ದಾರಿಯನ್ನು ಅರ್ಥ ಮಾಡಿಕೊಳ್ಳುವುದು ಎಂದು ತಿಳಿಸಿದರು. ಆಂಗ್ಲಭಾಷಾ ಉಪನ್ಯಾಸಕಿ ಶ್ರೀಮತಿ ಸುಮತಿ ಶೆಣೈ ಧನ್ಯವಾದ ಸಲ್ಲಿಸಿದರು. 

ಕುಂದಾಪುರ:ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲಾ ಆಶ್ರಯದಲ್ಲಿ ಪ್ರಾಥಮಿಕ ಶಾಲಾ ವೃತ್ತ ಮಟ್ಟದ ಕ್ರೀಡಾಕೂಟ


ಕುಂದಾಪುರ: ಕ್ರೀಡೆ ಶಿಸ್ತಿನ ಜೊತೆಗೆ ಧೈರ್ಯ, ಸಾಹಸವನ್ನು ಕಲಿಸುತ್ತದೆ.ಕ್ರೀಡೆಯಲ್ಲಿ ವೇಗ,ಎತ್ತರ, ಶಕ್ತಿಯನ್ನು ಒಲಿಷ್ಠಗೊಳಿಸುವ ಹಾಗೇ ಅಭ್ಯಾಸ ಮಾಡಿ ಪದಕ ಪಡೆಯುವುದು ಎಲ್ಲರ ಗುರಿಯಾಗಬೇಕು ಎಂದು ಕುಂದಾಪುರ ಸೈಂಟ್ ಮೇರಿಸ್ ಸಮೂಹ ಸಂಸ್ಥೆಯ ಸಂಚಾಲಕ,ಕುಂದಾಪುರ ವಲಯದ ಪ್ರಧಾನ ಧರ್ಮಗುರು ಅತೀ ವಂ.ಫಾ.ಸ್ಟ್ಯಾನಿ ತಾವ್ರೊ ಹೇಳಿದರು.
ಅವರು ಬುಧವಾರ ನಗರದ ಗಾಂಧಿ ಮೈದಾನದಲ್ಲಿ ಕುಂದಾಪುರ ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲಾ ಆಶ್ರಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಂದಾಪುರದ ಸಹಯೋಗದಲ್ಲಿ ನಡೆದ ಕುಂದಾಪುರ ವೃತ್ತ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಧ್ವಜಾರೋಹಣಗೈದು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಕ್ರೀಡಾಪಟುಗಳು ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂದರು.
ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜ್‌ ಅವರು ಕ್ರೀಡಾಜ್ಯೋತಿ ಬೆಳಗಿಸಿ ದೈಹಿಕ ಸುಧ್ರಡತೆಗಾಗಿ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತದೆ, ದೈಹಿಕ ಸುಧ್ರಡತೆಗಾಗಿ ಕ್ರೀಡೆಗಳು ಜೀವನದಲ್ಲಿ ಅಗತ್ಯವಾಗಿದೆ” ಎಂದು ಹೇಳಿದರು.
ಕುಂದಾಪುರ ಪುರಸಭೆಯ ಸದಸ್ಯ ಪ್ರಭಾಕರ ಕುಂದಾಪುರ, ಉದ್ಯಮಿ ಸತೀಶ್ ಕಾವೇರಿ,ಕುಂದಾಪುರ ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಣೇಶ್ ಶೆಟ್ಟಿ, ಕುಂದಾಪುರ ವಲಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ಶೆಟ್ಟಿ ಬಲೂನ್ ಮತ್ತು ಪಾರಿವಾಳವನ್ನು ಹಾರಿ ಬಿಡುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ವೇದಿಕೆಯಲ್ಲಿ ಕುಂದಾಪುರ ತಾಲೂಕು ಯುವಜನ ಸೇವಾ ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ, ಬಿಆರ್ ಸಿ ಸಂತೋಷ ಶೆಟ್ಟಿ,ಸಿಆರ್ ಪಿ ಶಂಕರ್ ಶೆಟ್ಟಿ, ಸೈಂಟ್ ಮೇರಿಸ್ ಪ್ರೌಢಶಾಲೆಯ ಹಿರಿಯ ಶಿಕ್ಷಕ ಭಾಸ್ಕರ್ ಗಾಣಿಗ, ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ರೇಷ್ಮಾ ಫೆರ್ನಾಂಡೀಸ್,ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ಹಿರಿಯ ಶಿಕ್ಷಕಿ ನೀತಾ ಡಿ ಸೋಜಾ, ಹೋಲಿ ರೋಜರಿ ಕಿಂಡರ್ ಗಾರ್ಟನ್ ಸ್ಕೂಲ್ ಮುಖ್ಯ ಶಿಕ್ಷಕಿ ಶೈಲಾ ಲೂಯಿಸ್ ಮೊದಲಾದವರು ಉಪಸ್ಥಿತರಿದ್ದರು.
ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಡೋರಾ ಸುವಾರಿಸ್ ಸ್ವಾಗತಿಸಿದರು.ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ದತ್ತಾತ್ರೇಯ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿ,ಶಾಂತಿ ಬರೆಟ್ಟೋ ವಂದಿಸಿದರು.

OBITUARY- Richard Martin D’Almeida (63), Gangolli

Richard Martin D’Almeida (63), Gangolli

 

son of the late Martin D’Almeida and the late Cosses,

husband of Prafulla D’Almeida,

father of Minal and Kevin,

brother of Joyal, Noel, Sebastin and Jeeta,

son-in-law of the late Ignatius Lewis and Sophia Lewis,

 brother-in-law of Anita, Ajith and Arun Lewis,

 passed away on Wednesday September 21, 2022.

Funeral cortege leaves residence  “Cosses”,  Moovathmoodi, for Immaculate Conception of BVM Church, Gangolli, on Thursday September 22, at 3.30 pm. Mass at 4.30 pm.

Contact:  +91 97412 49785 (Kevin),  +91 97429 15421 (Arun)

ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಯುಥ್ ರೆಡ್ ಕ್ರಾಸ್ ಘಟಕದ ಸಹಯೋಗದಲ್ಲಿ “ಮಣ್ಣು ರಕ್ಷಿಸಿ” ಜಾಗೃತಿ ಕಾರ್ಯಕ್ರಮ

ಕುಂದಾಪುರ: ಸೆಪ್ಟೆಂಬರ್ 20ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಯುಥ್ ರೆಡ್ ಕ್ರಾಸ್ ಘಟಕದ ಸಹಯೋಗದಲ್ಲಿ “ಮಣ್ಣು ರಕ್ಷಿಸಿ” ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಲ್ಕತ್ತಾ ದ ಸಾಹಿಲ್ ಝಾ ಮಾತನಾಡಿ, ಮಣ್ಣು
ನಮ್ಮ ಪರಿಸರದ ಮತ್ತು ಬದುಕಿಗೆ ಅವಿಭಾಜ್ಯ ಅಂಗವಾಗಿದೆ. ಸುಸ್ಥಿರ ಕೃಷಿ ಮತ್ತು ಪರಿಸರಕ್ಕಾಗಿ ಮಣ್ಣನ್ನು ಉಳಿಸಬೇಕಾಗಿದೆ. ಮಣ್ಣಿನ ರಕ್ಷಣೆ ಕುರಿತು ಜಾಗೃತಿ ಮೂಡಿಸುವುದಕ್ಕಾಗಿ ಸುಮಾರು ಸಾವಿರಾರು ಕಿಲೋಮೀಟರ್ ದೂರ ಸೈಕಲ್ ನಲ್ಲಿ ದೇಶಾದ್ಯಂತ ಸಂಚರಿಸುತ್ತಿದ್ದೇನೆ. “ಮಣ್ಣು ಕುರಿತು ಮಾತಾಡಿ, ಮಣ್ಣು ಕುರಿತು ಹಾಡಿ ಮಣ್ಣನ್ನೇ ಉಸಿರಾಗಿಸಿ, ಮಣ್ಣಿನಿಂದಲೇ ಬಾಳಿ” ನಾವೆಲ್ಲ ಜೊತೆಯಾಗಿ ಸೇರಿ ಮಣ್ಣಿನ ಪ್ರಾಮುಖ್ಯತೆಯನ್ನು ತಿಳಿಸಿ ಮಣ್ಣನ್ನು ರಕ್ಷಿಸೋಣ. ನೀವು ಸಹ ವಿವಿಧ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳ ಮೂಲಕ ಮಣ್ಣಿನ ರಕ್ಷಣೆಯಲ್ಲಿ ಭಾಗಿಯಾಗಿ ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು.
ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಕುಂದಾಪುರ ಘಟಕದ ಜಯಕರ ಶೆಟ್ಟಿ ಕಾಲೇಜಿನ ಮಧ್ಯಾಹ್ನದ ಊಟಕ್ಕೆ 25,000 ರೂಪಾಯಿಗಳನ್ನು ನೀಡಿದರು.
ವೇದಿಕೆಯಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಶುಭಕರಾಚಾರಿ, ವೆಂಕಟೇಶ್ ಬುದ್ಯಾ, ಕಾಲೇಜಿನ ರೆಡ್ ಕ್ರಾಸ್ ಘಟಕದ ಸಂಯೋಜಕರಾದ ಸತ್ಯನಾರಾಯಣ ಉಪಸ್ಥಿತರಿದ್ದರು.
ಉಪನ್ಯಾಸಕಿ
ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕ ವಿದ್ಯಾಧರ ವಂದಿಸಿದರು.