ಗರ್ಭಿಣಿ ಮತ್ತು ಬಾಣಾಂತಿಯರಿಗೆ ಅಪೌಷ್ಠಿಕತೆ ನಿವಾರಿಸಲು ಅಂಗನವಾಡಿ ಕಾರ್ಯಕರ್ತರು ಶ್ರಮಿಸುತ್ತಿರುವುದು ಶ್ಲಾಘನೀಯ:ವಿಜಯಮ್ಮ

ಶ್ರೀನಿವಾಸಪುರ ; ಗರ್ಭಿಣಿ ಮತ್ತು ಬಾಣಾಂತಿಯರಿಗೆ ಅಪೌಷ್ಠಿಕತೆ ನಿವಾರಿಸಲು ಅಂಗನವಾಡಿ ಕಾರ್ಯಕರ್ತರು ಶ್ರಮಿಸುತ್ತಿರುವುದು ಶ್ಲಾಘನೀಯ ಅದೇ ರೀತಿ ಮಕ್ಕಳ ಬೆಳೆವಣಿಗೆಗೂ ತಮ್ಮ ಸೇವೆ ಪ್ರಾಮಾಣಿಕವಾಗಿ ಮಾಡಿದರೆ ಸಾರ್ಥಕತೆ ಹೆಚ್ಚುತ್ತದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ವಿಜಯಮ್ಮ ಹೇಳಿದರು.
ಶ್ರೀನಿವಾಸಪುರ ವೃತ್ತ ಅಂಗನವಾಡಿ ಕಾರ್ಯಕರ್ತರು ಪಟ್ಟಣದ ರಂಗಾರಸ್ತೆ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ದಿ ಯೋಜನೆ ಶ್ರೀನಿವಾಸಪುರ ಇವರ ಸಹಯೋಗದಲ್ಲಿ ಪೋಷಣ್ ಮಾಸಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಪೋಷಣ್ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪೋಷಣ್ ಅಭಿಯಾನ ಅನ್ನುವುದು ಕೇವಲ ಒಂದು ತಿಂಗಳಿಗೆ ಸೀಮಿತವಾಗಬಾರದು ನಿರಂತರವಾಗಿ ಗರ್ಭಿಣಿ ಮತ್ತು ಬಾಣಾಂತಿಯರ ಆರೋಗ್ಯ ರಕ್ಷಣೆಗೆ ಅಂಗನವಾಡಿಗಳನ್ನು ಸ್ಥಾಪಿಸಿರುವ ಹಿನ್ನಲೆಯಲ್ಲಿ ಅವರ ರಕ್ಷಣೆಯೇ ಕಾರ್ಯಕರ್ತರ ಮುಖ್ಯ ಧ್ಯೇಯವಾಗಬೇಕು. ಮಕ್ಕಳಲ್ಲಿ ಅಪೌಷ್ಠಿಕತೆ ನಿವಾರಿಸಲು ತಾವು ಮಾಡುತ್ತಿರುವ ಕೆಲಸವನ್ನು ಇನ್ನಷ್ಟು ಗಟ್ಟಿಗೊಳಿಸಿದಾಗ ಮಕ್ಕಳ ಸಾವಿನ ಸಂಖ್ಯೆ ಕಡಿಮೆಯಾಗುತ್ತದೆ ಇದರ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವೂ ಅಂಗನವಾಡಿ ಕಾರ್ಯಕರ್ತರು ಮಾಡಬೇಕಾಗಿದೆ ಅದೇ ರೀತಿ ತಮ್ಮ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ತಾಯಿ ಕಾರ್ಡ್‍ನ್ನು ಗಮನಿಸಿ ಕಾಲ-ಕಾಲಕ್ಕೆ ಲಸಿಕೆಗಳನ್ನು ಹಾಕಿಸಿಕೊಳ್ಳಲು ಸಲಹೆ ನೀಡಬೇಕು ಆರೋಗ್ಯ ಇಲಾಖೆ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಜೊತೆಗೂಡಿ ಕೆಲಸ ಮಾಡಿದಾಗ ಆರೋಗ್ಯಪೂರ್ಣ ಸಮಾಜವನ್ನು ನಿರ್ಮಾಣ ಮಾಡಬಹುದು, ಈಗಾಗಲೆ ಹಲವಾರು ಭಯಾನಕ ರೋಗಗಳನ್ನು ತಡೆಗಟ್ಟುವಲ್ಲಿ ಇಲಾಖೆಗಳು ಯಶಸ್ವಿಯಾಗಿದೆ ಎಂದು ತಿಳಿಸಿದರು.
ರಂಗಾರಸ್ತೆ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಆದಿಲಕ್ಷ್ಮಮ್ಮ ಮಾತನಾಡಿ ಗರ್ಭಿಣಿಯರು ಉತ್ತಮ ಪೋಷಕಾಂಶವುಳ್ಳ ಆಹಾರ ಸೇವನೆ ಮಾಡುವುದರಿಂದ ಆರೋಗ್ಯವಂತ ಮಗುವಿಗೆ ಜನ್ಮ ನೀಡಬಹುದು ಆದ್ದರಿಂದ ಪ್ರತಿ ತರಕಾರಿಯಲ್ಲೂ ಪೋಷಕಾಂಶಗಳು ಇರುವುದರಿಂದ ಎಲ್ಲ ಹಸಿರು ತರಕಾರಿಗಳನ್ನು ಸೇವಿಸುವುದು ಉತ್ತಮ ಎಂದು ತಿಳಿಸಿದರು.
ಗರ್ಭಿಣಿ ಮಹಿಳೆಯರಿಗೆ ಪೋಷಣ್ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಸೀಮಂತ ಕಾರ್ಯಕ್ರಮ ನಡೆಸಲಾಯಿತು ಮತ್ತು ಮಕ್ಕಳಿಗೆ ಅನ್ನಪ್ರಾಸನವನ್ನು ಆರೋಗ್ಯಾಧಿಕಾರಿ ನಡೆಸಿದರು.
ಕಾರ್ಯಕ್ರಮದಲ್ಲಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನವೀನ್ ಕುಮಾರ್, ಹಿರಿಯ ಮೇಲ್ವಿಚಾರಕಿ ಶರಣಮ್ಮ, ಆರೋಗ್ಯ ನಿರಿಕ್ಷಣಾಧಿಕಾರಿ ನಾಗಮಣಿ, ಬಾಲವಿಕಾಸ ಸಲಹಾ ಸಮಿತಿ ಸದಸ್ಯರಾದ ಅನ್ನಪೂರ್ಣಮ್ಮ, ರಾಜೇಶ್ವರಮ್ಮ, ಶ್ರೀನಿವಾಸಪುರ ವೃತ್ತ ಅಂಗನವಾಡಿ ಕಾರ್ಯಕರ್ತರು ಹಾಜರಿದ್ದರು.

ಪ್ರಧಾನಿ ಮೋದಿ ಅವರ ಅಶಯದಂತೆ ಸ್ವಚ್ಛ ಪರಿಸರ ನಿರ್ಮಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು:ಡಾ. ಕೆ.ಎನ್.ವೇಣುಗೋಪಾಲ್

ಶ್ರೀನಿವಾಸಪುರ: ಪ್ರಧಾನಿ ಮೋದಿ ಅವರ ಅಶಯದಂತೆ ಸ್ವಚ್ಛ ಪರಿಸರ ನಿರ್ಮಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಡಾ. ಕೆ.ಎನ್.ವೇಣುಗೋಪಾಲ್ ಹೇಳಿದರು.
ಪಟ್ಟಣದ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ಸೇವಾ ಪಾಕ್ಷಿಕದ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ಸ್ವಚ್ಛತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸ್ವಚ್ಛ ಭಾರತ ನಿರ್ಮಾಣಕ್ಕೆ ಹೆಚ್ಚಿನ ಮಹತ್ವ ನೀಡಿದೆ ಎಂದು ಹೇಳಿದರು.
ಅಮೃತ್ ಸರೋವರ್ ಯೋಜನೆ ಅಡಿಯಲ್ಲಿ ಕೆರೆಗಳ ಅಭಿವೃದ್ಧಿ ಮಾಡಲಾಗುವುದು. ಕೆರೆ ತುಂಬಿದರೆ ಅಂತರ್ಜಲ ವೃದ್ಧಿಸಲು ಸಾಧ್ಯವಾಗುತ್ತದೆ. ಗ್ರಾಮೀಣ ಪರಿಸರ ಚೇತರಿಸಿಕೊಳ್ಳುತ್ತದೆ. ಮಳೆ ನೀರು ಸಂಗ್ರಹ ಹಾಗೂ ನೀರು ಶೇಖರಣಾ ಕಾರ್ಯಾಗಾರಗಳ ಮೂಲಕ ಜಲ ಸಂಪತ್ತಿನ ರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುವುದು ಎಂದು ಹೇಳಿದರು.
ಸೆ.25 ರಂದು ಪಟ್ಟಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ಬಿಜೆಪಿ ರಾಜಕೀಯ ಚುನಾವಣೆಗೆ ಸೀಮಿತ, ಚುನಾವಣೆ ಮುಗಿದ ಮೇಲೆ ದೇಶದ ಅಭಿವೃದ್ಧಿ ಕಡೆ ಗಮನ ನೀಡಲಾಗುವುದು ಎಂದು ಹೇಳಿದರು.
ಮುಖಂಡರಾದ ರೋಣೂರು ಚಂದ್ರಶೇಖರ್, ಡಾ. ನಾಗರಾಜ್, ರೆಡ್ಡಪ್ಪ, ವಿ.ನಿಶಾಂತ್ ಕುಮಾರ್, ಷಫಿ, ನಾರಾಯಣಸ್ವಾಮಿ, ರಾಜು, ನಾರಾಯಣಪ್ಪ, ರಾಮಾಂಜಿ, ರಮೇಶ್, ಎನ್.ಆರ್.ಚಂದ್ರಶೇಖರ್ ಇದ್ದರು.

ಜಾನುವಾರುಗಳಿಗೆ ಬಾಧಿಸುತ್ತಿರುವ ಚರ್ಮ ಗಂಟು ರೋಗ ನಿಯಂತ್ರಣ ಹಾಗೂ ಬಿತ್ತನೆ ಆಲೂಗಡ್ಡೆ ಬೆಲೆ ನಿಗಧಿ ಮಾಡಲು ರೈತಸಂಘ ಆಗ್ರಹ

ಕೋಲಾರ; ಸೆ.20: ಜಿಲ್ಲಾದ್ಯಂತ ಜಾನುವಾರುಗಳಿಗೆ ಬಾಧಿಸುತ್ತಿರುವ ಚರ್ಮ ಗಂಟು ರೋಗ ನಿಯಂತ್ರಣಕ್ಕೆ ಹಾಗೂ ಬಿತ್ತನೆ ಆಲೂಗಡ್ಡೆ ಬೆಲೆ ನಿಗಧಿ ಮಾಡಲು ವಿಶೇಷ ತಂಡ ರಚನೆ ಮಾಡಿ ಸಂಕಷ್ಟದಲ್ಲಿರುವ ರೈತರ ರಕ್ಷಣೆಗೆ ನಿಲ್ಲಬೇಕೆಂದು ಆಗ್ರಹಿಸಿ ರೈತಸಂಘದಿಂದ ಡಿಸಿ ಕಚೇರಿಯೆದುರು ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಸಲ್ಲಿಸಿ ಮಾತನಾಡಿದ ರೈತಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಹೈನುಗಾರಿಕೆಯೇ ಜೀವಾಳವಾಗಿರುವ ಜಿಲ್ಲೆಯ ಲಕ್ಷಾಂತರ ಕುಟುಂಬಗಳ ಸ್ವಾಭಿಮಾನ ಬದುಕು ಕಲ್ಪಿಸಿರುವ ಹೈನೋದ್ಯಮಕ್ಕೆ ಮಾರಕವಾಗಿರುವ ರೋಗ ನಿಯಂತ್ರಣ ಮಾಡುವಲ್ಲಿ ಪಶು ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
3 ತಿಂಗಳಿಂದ ಗಡಿ ಭಾಗಗಳಲ್ಲಿ ಜಾನುವಾರುಗಳಿಗೆ ಚರ್ಮ ಗಂಟು ರೋಗ ನಿಯಂತ್ರಣಕ್ಕೆ ಬಾರದೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿರುವ ಹಸುಗಳು ಸೂಕ್ತ ಚಿಕಿತ್ಸೆ ದೊರೆಯದೆ ಕಣ್ಣ ಮುಂದೆಯೇ ಸಾವನ್ನಪ್ಪುತ್ತಿದ್ದರೂ ಸಿಬ್ಬಂದಿ ನೆಪದಲ್ಲಿ ಗ್ರಾಮೀಣ ಪ್ರದೇಶಗಳತ್ತ ಸುಳಿಯದ ಪಶು ವೈದ್ಯರು ಕಚೇರಿಯಲ್ಲೇ ಕುಳಿತು ಕಾಲಹರಣ ಮಾಡುತ್ತಿದ್ದಾರೆಂದು ಆರೋಪಿಸಿದರು.
ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕರಪತ್ರದ ಮುಖಾಂತರ ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಿ ರೋಗ ನಿಯಂತ್ರಣಕ್ಕೆ ಅವಶ್ಯಕತೆಯಿರುವ ಔಷಧಿಗಳನ್ನು ವಿತರಣೆ ಮಾಡಬೇಕಾದ ಪಶು ವೈದ್ಯರು ಸಮಯಕ್ಕೆ ಸಿಗದೆ ಚಿಕಿತ್ಸೆಗಾಗಿ ದುಬಾರಿ ವೆಚ್ಚ ನೀಡಿ ಖಾಸಗಿ ವೈದ್ಯರು ಇಲ್ಲವೇ ಚಿಕಿತ್ಸೆಯ ಗಂಧ ಗಾಳಿ ಗೊತ್ತಿಲ್ಲದ ಕೃತಕ ಗರ್ಭಧಾರಣೆ ಮಾಡುವವರೇ ವೈದ್ಯರಾಗಿ ಮಾರ್ಪಟ್ಟು ಹಸುಗಳ ಮಾರಣ ಹೋಮಕ್ಕೆ ಕಾರಣರಾಗಿದ್ದಾರೆಂದು ಅಸಮಧಾನ ವ್ಯಕ್ತಪಡಿಸಿದರು.
ಹೈನೋದ್ಯಮವನ್ನೇ ನಂಬಿರುವ ರೈತ ಬಡ ಕೂಲಿ ಕಾರ್ಮಿಕರು ಇದನ್ನೇ ಹಾಲಿನ ಬಟವಾಡೆಯನ್ನು ನಂಬಿ ಚೀಟಿ, ಸ್ತ್ರೀಶಕ್ತಿ ಸಂಘಗಳ ಸಾಲಗಳನ್ನು ಮಾಡಿ ಈಗ ದಿಕ್ಕು ತೋಚದೆ ಜಿಲ್ಲಾಡಳಿತದ ಸಮಸ್ಯೆ ಬಗೆಹರಿಸುವಂತೆ ಒತ್ತಾಯ ಮಾಡುತ್ತಿದ್ದಾರೆಂದು ಹೇಳಿದರು.
ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಮುಂಗಾರು ಮಳೆ ಆರ್ಭಟ ಹಾಗೂ ನಿಯಂತ್ರಣಕ್ಕೆ ಬರದ ರೋಗಗಳಿಂದ ಟೊಮೇಟೊ, ಕ್ಯಾಪ್ಸಿಕಂ ಬೆಳೆಗಾರರ ಬದುಕು ಮುಂಗಾರು ನೀರಿನಲ್ಲಿ ಕೊಚ್ಚಿ ಹೋಗಿ ಮತ್ತೆ ಖಾಸಗಿ ಸಾಲ ಮಾಡಿ ಆಲೂಗಡ್ಡೆ ಕೃಷಿಯತ್ತ ಮುಖ ಮಾಡುತ್ತಿರುವ ಜಿಲ್ಲೆಯ ರೈತರಿಗೆ ದುಬಾರಿ ಬೆಲೆ ಹಾಗೂ ಗುಣಮಟ್ಟದ ಆಲೂಗಡ್ಡೆ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡುವಲ್ಲಿ ಎಪಿಎಂಸಿ ಹಾಗೂ ತೋಟಗಾರಿಕೆ ಅಧಿಕಾರಿಗಳು ವಿಫಲವಾಗಿ ಖಾಸಗಿ ಮಂಡಿ ಮಾಲೀಕರು ನಿಗಧಿ ಮಾಡುವ ಬೆಲೆಗೆ ತಕ್ಕಂತೆ ಅಧಿಕಾರಿಗಳು ಕುಣಿಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗುಣಮಟ್ಟ, ದುಬಾರಿ ಬೆಲೆ, ಬಿಳಿ ಚೀಟಿ ದಂಧೆಗೆ ಕಡಿವಾಣ ಹಾಕುವಂತೆ ಪ್ರತಿವರ್ಷ ಅಧಿಕಾರಿಗಳಿಗೆ ದೂರು ನೀಡಿದರೆ ಸಮಸ್ಯೆ ಬಗೆಹರಿಸಬೇಕಾದ ಎಪಿಎಂಸಿ, ತೋಟಗಾರಿಕೆ ಅಧಿಕಾರಿಗಳಿಗೆ ಮಾಹಿತಿ ಇಲ್ಲವಂತೆ. ಒತ್ತಡ ಹೇರಿದರೆ ಖಾಸಗಿ ಮಂಡಿ ಮಾಲೀಕರ ಜೊತೆ ಶಾಮೀಲಾಗಿ ದೂರು ನೀಡಿರುವವರ ವಿರುದ್ಧ ಗೂಂಡಾಗಿರಿ ಮಾಡುತ್ತಾರೆಂದು ಆರೋಪಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ 2200 ರಿಂದ 4000ರೂ ವರೆಗೆ ಬೆಲೆಯಿದ್ದರೆ ಕೋಲಾರದಲ್ಲಿ 3000 ದಿಂದ 5000 ವರೆಗೆ ಮಾರಾಟ ನಡೆಯುತ್ತಿದೆ. ಇದನ್ನು ಪರಿಶೀಲಿಸಿ ಕರಪತ್ರದ ಮೂಲಕ ರೈತರಿಗೆ ಜಾಗೃತಿ ಮೂಡಿಸಬೇಕಾದ ಅಧಿಕಾರಿಗಳು ಮೌನವಾಗಿದ್ದಾರೆ.
ಹಾಗಾಗಿ ಮಾನ್ಯರು ಜಾನುವಾರುಗಳಿಗೆ ಬಾಧಿಸುತ್ತಿರುವ ಚರ್ಮ ಗಂಟು ರೋಗ ನಿಯಂತ್ರಣ ಹಾಗೂ ಬಿತ್ತನೆ ಆಲೂಗಡ್ಡೆಗೆ ಬೆಲೆ ನಿಗಧಿ ಮಾಡಿ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸಿ ಸಂಕಷ್ಟದಲ್ಲಿರುವ ರೈತರು ರಕ್ಷಣೆಗೆ ನಿಲ್ಲಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿಗಳಾದ ವೆಂಕಟರಾಜಾ ರವರು, ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ವಕ್ಕಲೇರಿ ಹನುಮಯ್ಯ, ಕದಿರಿನತ್ತ ಅಪ್ಪೋಜಿರಾವ್, ಹೆಬ್ಬಣಿ ಆನಂದರೆಡ್ಡಿ, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಕುವ್ವಣ್ಣ, ಮಾಲೂರು ತಾಲೂಕು ಅಧ್ಯಕ್ಷ ಯಲ್ಲಣ್ಣ, ಸಂದೀಪ್‍ರೆಡ್ಡಿ, ಸಂದೀಪ್‍ಗೌಡ, ವೇಣು, ಕಿರಣ್, ಮುಳಬಾಗಿಲು ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ಫಾರೂಖ್ ಪಾಷ, ಬಂಗಾರಿ ಮಂಜು, ರಾಜೇಶ್, ಸುನೀಲ್‍ಕುಮಾರ್, ಗುರುಮೂರ್ತಿ, ಭಾಸ್ಕರ್, ವೇಣು, ನವೀನ್ ಶ್ರೀಕಾಂತ್, ವರುಣ್, ತರುಣ್, ಜಗನ್, ವೇಣು, ರಾಧ, ಲಕ್ಷೀ, ಶೈಲ, ಮುಂತಾದವರಿದ್ದರು.

ಪಿಟಿಸಿಎಲ್ ಕಾಯ್ದೆ ತಿದ್ದುಪಡಿಗಾಗಿ ಆಗ್ರಹಿಸಿ ಸೆ.21 ರಂದು ಪಟ್ಟಣದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‍ಗೆ ಕಾಲ್ನಡಿಗೆ ಜಾಥಾ

ಶ್ರೀನಿವಾಸಪುರ: ಪಿಟಿಸಿಎಲ್ ಕಾಯ್ದೆ ತಿದ್ದುಪಡಿಗಾಗಿ ಆಗ್ರಹಿಸಿ ಸೆ.21 ರಂದು ಪಟ್ಟಣದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‍ಗೆ ಕಾಲ್ನಡಿಗೆ ಜಾಥಾ ಏರ್ಪಡಿಸಲಾಗಿದೆ ಎಂದು ಜಾಥಾ ಆಯೋಜಕ ಜೆವಿ ಕಾಲೋನಿ ವೆಂಕಟಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಸೇರಿದ ಜಮೀನು ಪರಭಾರೆ ನಿಷೇಧ ಕಾಯ್ದೆ 1978ಕ್ಕೆ ಕಾಲ ಮಿತಿ ಅನ್ವಯಿಸದಂತೆ ತಿದ್ದುಪಡಿ ಮಾಡುವಂತೆ ಒತ್ತಾಯಿಸಲು ಸೆ.21 ರಂದು ಬೆಳಿಗ್ಗೆ 9 ಗಂಟೆಗೆ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕೋಲಾರ ಮಾರ್ಗವಾಗಿ ಬೆಂಗಳೂರಿಗೆ ಜಾಥಾ ಹೊರಡಲಾಗುವುದು ಎಂದು ತಿಳಿಸಿದ್ದಾರೆ.

ಶ್ರೀನಿವಾಸಪುರ – ಜನರ ಆರೋಗ್ಯ ರಕ್ಷಣೆಯಲ್ಲಿ ಕಾರ್ಮಿಕರ ಪಾತ್ರ ಹಿರಿದು : ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್

ಪಟ್ಟಣದ ಹೊರವಲಯದ ಕ್ರೀಡಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಪೌರ ಕಾರ್ಮಿಕರ ಕ್ರೀಡಾ ಕೂಟ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಗಳು ಮನೋಲ್ಲಾಸ ಉಂಟುಮಾಡುತ್ತವೆ. ಸದಾ ದುಡಿಯುವ ಪೌರ ಕಾರ್ಮಿಕರು ಆಟೋಟಗಳಲ್ಲಿ ಭಾಗವಹಿಸಬೇಕು. ಕೆಲಸದ ದಣಿವು ಮರೆತು ಆಟ ಆಡಬೇಕು ಎಂದು ಹೇಳಿದರು.
ಉಪಾದ್ಯಕ್ಷೆ ಅಯೀಷಾ ನಾಯಜ್ ಮಾತನಾಡಿ, ನಿಮ್ಮ ವೈಯಕ್ತಿಕ ಆರೋಗ್ಯದ ಕಡೆವು ಹೆಚ್ಚಿನ ಕಾಳಜಿ ವಹಿಸಿ ಕಾರ್ಯನಿರ್ವಹಣಾ ವೇಳೆಯಲ್ಲಿ ಆರೋಗ್ಯದ ದೃಷ್ಠಿಯಿಂದ ತಮಗೆ ನೀಡಿರುವ ಸಾಧನ ಸಲಕರಣೆಗಳನ್ನು ಕಡ್ಡಾಯವಾಗಿ ಬಳಸಬೇಕೆಂದರು.
ಮುಖ್ಯಾಧಿಕಾರಿ ಎಂ.ಜಯರಾಂ ಮಾತನಾಡಿ, ದೈಹಿಕ ಹಾಗೂ ಮಾನಸಿಕ ದೃಢತೆ ಕ್ರೀಡೆಗಳಿಂದ ಬರುತ್ತದೆ. ದೃಢ ಕಾಯ ಹಾಗೂ ದೃಢ ಮನಸ್ಸು ಉತ್ತಮ ವ್ಯಕ್ತಿತ್ವದ ಲಕ್ಷಣ. ಪೌರ ಕಾರ್ಮಿಕರು ಕ್ರೀಡಾಸಕ್ತಿ ಬೆಳೆಸಿಕೊಳ್ಳಬೇಕು. ತಮ್ಮ ಮಕ್ಕಳಲ್ಲೂ ಕ್ರೀಡಾಸಕ್ತಿ ಬೆಳೆಸಬೇಕು ಎಂದು ಹೇಳಿದರು.
ಪುರಸಭೆ ಉಪಾಧ್ಯಕ್ಷೆ ಆಯಿಷಾ ನಯಾಜ್, ಕಂದಾಯ ನಿರೀಕ್ಷಕರಾದ ವಿ.ನಾಗರಾಜ್, ಶಂಕರ್, ಎಂಜಿನಿಯರ್‍ಗಳಾದ ರೂಪ, ವೇದಾಂತ್ ಶಾಸ್ತ್ರಿ, ಅಧಿಕಾರಿಗಳಾದ ಸುರೇಶ್, ಪ್ರತಾಪ್, ಸದಸ್ಯರಾದ ಬಿ.ವೆಂಕಟರೆಡ್ಡಿ, ಷಬ್ಬೀರ್, ರಸೂಲ್ ಖಾನ್, ರಾಮಾಂಜಿ, ರೆಡ್ಡಪ್ಪ, ಜರೀನಾ ಬೇಗಂ, ವಹೀದಾ ಬೇಗಂ, ಇರ್ಷಾದ್ ಇದ್ದರು.

ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ 2022-23ನೇ ಸಾಲಿನ ಅಧ್ಯಕ್ಷರಾಗಿ ಪ್ರಶಾಂತ್ ಪೂಜಾರಿ ಪುನಾರಯ್ಕೆ

ರಾಜ್ಯ ಹಾಗೂ ಜಿಲ್ಲಾ ಪ್ರಶಸ್ತಿ ಪುರಸ್ಕ್ರತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ 2022-23ನೇ ಸಾಲಿನ 23ನೇ ವರ್ಷದ ನೂತನ ಅಧ್ಯಕ್ಷರಾಗಿ ಪ್ರಶಾಂತ್ ಪೂಜಾರಿ ಅವರು ಅವಿರೋಧವಾಗಿ ಪುನಾರಾಯ್ಕೆಯಾಗಿದ್ದಾರೆ.




ಪದಾಧಿಕಾರಿಗಳ ವಿವರಗಳು: 

ಸಂಚಾಲಕರು- ಅಬ್ಬನಡ್ಕ ಸಂದೀಪ್ ವಿ. ಪೂಜಾರಿ
ಗೌರವಾಧ್ಯಕ್ಷರು- ರಾಜು ಶೆಟ್ಟಿ ಕುಂಟಲಗುಂಡಿ
ಸ್ಥಾಪಕಾಧ್ಯಕ್ಷರು- ವಿಠಲ ಮೂಲ್ಯ
ನಿಕಟ ಪೂರ್ವಾಧ್ಯಕ್ಷರು- ಬೋಳ ಉದಯ ಅಂಚನ್
ಉಪಾಧ್ಯಕ್ಷರು- ಲೀಲಾ ಪೂಜಾರಿ
ಕಾರ್ಯದರ್ಶಿ- ಲಲಿತಾ ಆಚಾರ್ಯ
ಜೊತೆ ಕಾರ್ಯದರ್ಶಿ- ಸುದರ್ಶನ್ ಕುಂದರ್
ಕೋಶಾಧಿಕಾರಿ- ಆಶ್ವಿನಿ ಪ್ರಭಾಕರ್
ಅಭಿವೃದ್ಧಿ ಸಮಿತಿಯ ಅಧ್ಯಕ್ಷರು – ದಿನೇಶ್ ಪೂಜಾರಿ ಬೀರೊಟ್ಟು
ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ – ಸಂಧ್ಯಾ ಶೆಟ್ಟಿ
ಮಹಿಳಾ ಸಂಘಟನಾ ಕಾರ್ಯದರ್ಶಿ- ಪದ್ಮಶ್ರೀ ಪೂಜಾರಿ
ಭಜನಾ ಮಂಡಳಿಯ ಗೌರವಾಧ್ಯಕ್ಷರು – ರಾಜೇಶ್ ಕೋಟ್ಯಾನ್
ಭಜನಾ ಮಂಡಳಿಯ ಆಧ್ಯಕ್ಷರು- ಸುಲೋಚನಾ ಕೋಟ್ಯಾನ್
ಭಜನಾ ಮಂಡಳಿಯ ಕಾರ್ಯದರ್ಶಿ- ಕೀರ್ತನ್ ಕುಮಾರ್
ಶ್ರೀ ವನದುರ್ಗಾ ಸ್ವಸಹಾಯ ಸಂಘದ ಅಧ್ಯಕ್ಷೆ- ವೀಣಾ ಪೂಜಾರಿ
ಶ್ರೀ ವನದುರ್ಗಾ ಸ್ವಸಹಾಯ ಸಂಘದ ಕಾರ್ಯದರ್ಶಿ- ಪುಷ್ಪ ಕುಲಾಲ್
ವಿವಿಧ ಸಮಿತಿಯ ನಿರ್ದೇಶಕರುಗಳು- ಸುರೇಶ್ ಕಾಸ್ರಬೈಲು, ಸತೀಶ್ ಪೂಜಾರಿ, ಸುರೇಶ್ ಅಬ್ಬನಡ್ಕ, ಆರತಿ ಕುಮಾರಿ, ಕಿರಣ್ ಶೆಟ್ಟಿ ಮೊದಲಾದವರು ಆಯ್ಕೆಯಾಗಿದ್ದಾರೆ.

ಪ್ರಧಾನಿ ಶ್ರೀ ನರೇಂದ್ರ ಮೋದಿ ಇವರ ಎಪ್ಪತ್ತೆರನೇ ಹುಟ್ಟು ಹಬ್ಬದ ಅಂಗವಾಗಿ ದೇಶದಾದ್ಯಂತ ರಕ್ತ ದಾನ ಶಿಬಿರ

ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿ ಇವರ ಎಪ್ಪತ್ತೆರನೇ ಹುಟ್ಟು ಹಬ್ಬದ ಅಂಗವಾಗಿ ದೇಶದಾದ್ಯಂತ ರಕ್ತ ದಾನ ಶಿಬಿರ ಆಯೋಜಿಸಲಾಯಿತು. ಭಾರತೀಯ ರೆಡ್ ಕ್ರಾಸ್‌ ಸಂಸ್ಥೆಯ ರಕ್ತ ನಿಧಿ ಕೇಂದ್ರ ದಲ್ಲಿ ಈದಿನ ಆಯೋಜಿಸಲಾದ ರಕ್ತ ದಾನ ಶಿಬಿರ ವನ್ನು ಶಾಸಕರಾದ ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿ ಉದ್ಗಾಟಿಸಿ ಉದ್ಘಾಟನಾ ಭಾಷಣ ಮಾಡಿದರು. ಸಭಾಪತಿ ಎಸ್ ಜಯಕರ ಶೆಟ್ಟಿ ಸರ್ವರಿಗೂ ಸ್ವಾಗತ ಕೋರಿದರು. ಸಭೆಯಲ್ಲಿ ಕರ್ಣಾಟಕ ಆಹಾರ ನಿಗಮದ ಉಪಾಧ್ಯಕ್ಷ ರಾದ ಕಿರಣ ಕುಮಾರ್ ಕೊಡ್ಗಿ, ಪುರಸಭಾ ಅಧ್ಯಕ್ಷರಾದ ವೀಣಾ ಮೆಂಡನ್, ಪ್ರಾಧಿಕಾರದ ಅದ್ಯಕ್ಷರಾದ ವಿಜಯ, ಶಂಕರ್ ಅಂಕದ ಕಟ್ಟೆ, ಪ್ರಜ್ವಲ್ ಶೆಟ್ಟಿ ಕಾಲ್ತೋಡು, ಸದಾನಂದ ಉಪ್ಪಿನಕುದ್ರು ಖಜಾಂಚಿ ಶಿವರಾಮ ಶೆಟ್ಟಿ, ಸದಸ್ಯರು ಗಳಾದ ಗಣೇಶ್ ಆಚಾರ್ಯ, ಡಾ. ಸೋನಿ, ಎ. ಮುತ್ತಯ್ಯ ಶೆಟ್ಟಿ, ಸೀತಾರಾಮ ನಕ್ಕತ್ತಾಯ, ಸದಾನಂದ ಶೆಟ್ಟಿ, ನಾರಾಯಣ ದೇವಾಡಿಗ, ದಿನಕರ ಶೆಟ್ಟಿ ಮತ್ತು ಸಂಪತ್ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ ವಂದನಾರ್ಪಣೆ ಗೈದರು.

ಕೋಲಾರ ಜಿಲ್ಲೆಯ ಹಲವು ಸಮಸ್ಯೆಗಳ ವಿಚಾರವಾಗಿ ಹೆಚ್.ಡಿ.ಕುಮಾರಸ್ವಾಮಿಗೆ ಕೆ.ಎನ್.ರವೀಂದ್ರನಾಥ್ ಮನವಿ

ಕೋಲಾರ ಸೆಪ್ಟೆಂಬರ್ 18 : ಕೋಲಾರ ಜಿಲ್ಲೆಯ ಹಲವು
ಸಮಸ್ಯೆಗಳ ವಿಚಾರವಾಗಿ ಮಾಜಿ ಮುಖ್ಯಮಂತ್ರಿ
ಹೆಚ್.ಡಿ.ಕುಮಾರಸ್ವಾಮಿರವರಿಗೆ ಸಾಮಾಜಿಕ ಕಾರ್ಯಕರ್ತ ಗೌರಿಪೇಟೆ
ಕೆ.ಎನ್.ರವೀಂದ್ರನಾಥ್ ರವರು ಮನವಿ ಸಲ್ಲಿಸಿದರು.
ಮೊದಲನೇಯದಾಗಿ ಮೇಕೆದಾಟು ಯೋಜನೆಯನ್ನು
ಅನುμÁ್ಠನಗೊಳಿಸಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ
ಕುಡಿಯುವ ನೀರನ್ನು ಪೂರೈಸಲು ಯೋಜನೆಯನ್ನು
ರೂಪಿಸಲು ಎರಡನೇಯದಾಗಿ ಕೋಲಾರ ಜಿಲ್ಲೆಗೆ ಸರ್ಕಾರಿ
ವೈದ್ಯಕೀಯ ಕಾಲೇಜು ಮತ್ತು ಸೂಪರ್ ಸ್ಪೆಷಲಿಟಿ
ಆಸ್ಪತ್ರೆಯನ್ನು ಮಂಜೂರು ಮಾಡುವ ಮತ್ತು
ಮೂರನೆಯದಾಗಿ ಕೋಲಾರ ನಗರಸಭೆಯಲ್ಲಿ 418 ವಿವಿಧ
ಹುದ್ದೆಗಳು ಮಂಜೂರಾತಿ ಇದ್ದು ಇದರಲ್ಲಿ 275 ಮಂದಿ
ಕಾರ್ಯನಿರ್ವಹಿಸುತ್ತಿದ್ದು ಬಾಕಿ ಇರುವ 143 ಹುದ್ದೆಗಳನ್ನು
ಶೀಘ್ರವಾಗಿ ತುಂಬುವಂತೆ ಕೋರಿ ಮನವಿ ಪತ್ರ ಸಲ್ಲಿಸಿದರು.
ಕೋಲಾರ ಜಿಲ್ಲೆಯ ಅಂತರ್ಜಲ ವಿಷಯುಕ್ತವಾಗಿದ್ದು ಅನೇಕ
ವಿಷಕಾರಿಯ ಲವಣಾಂಶಗಳನ್ನು, ಆರೋಗ್ಯಕ್ಕೆ
ಹಾನಿಕರವಾಗಿರುವ ಫೆÇ್ಲೀರೈಡ್, ಆ ರ್ಸಿನಿಕ್ ಮಟ್ಟಕಿಂತ ಅತಿ ಹೆಚ್ಚು
ಪ್ರಮಾಣದಲ್ಲಿ ಹೊಂದಿದ್ದು ಕುಡಿಯುಲು ಯೋಗ್ಯವಲ್ಲದಂತಾಗಿದೆ.
ಸರ್ಕಾರವು ನಿರ್ಮಿಸುತ್ತಿರುವ ನೀರು ಶುದ್ಧಿಕರಣ
ಘಟಕಗಳನ್ನು ಸಹ ಈ ಅಧಿಕ ಪ್ರಮಾಣದ ರಾಸಾಯನಿಕ ಮತ್ತು
ಲವಣಗಳ ಪರಿಣಾಮವಾಗಿ 2-3ತಿಂಗಳಲ್ಲಿಯೇ ನೀರು ಶುದ್ಧಿಕರಿಸುವ
ಪಿಲಮೆಂಟ್‍ಗಳನ್ನು ಬದಲಾಯಿಸಬೇಕಾಗಿದ ಅನಿವಾರ್ಯ
ಪರಿಸ್ಥಿತಿಯನ್ನು ಎದುರಿಸುತ್ತಿವೆ. ಖಔ ಪ್ಲಾಂಟ್‍ಗಳು ಕಡಿಮೆ
ಅವಧಿಯಲ್ಲಿಯೇ ಕೆಟ್ಟು ನಿಲ್ಲುತ್ತಿವೆ. ಇದರ ಪರಿಣಾಮವಾಗಿ ಜನರಿಗೆ
ಶುದ್ಧ ಆರೋಗ್ಯಕ್ಕೆ ಹಾನಿಕರವಲ್ಲದ ಕುಡಿಯುವ ನೀರನ್ನು
ಒದಗಿಸುವ ಈ ಯೋಜನೆ ನಿರೀಕ್ಷಿತ ಯಶಸ್ಸನ್ನು ಕಾಣದೆ. ಇದು ನದಿ
ನೀರನ್ನು ಹರಿಸಬೇಕಾಗುವ ಅನಿವಾರ್ಯತೆಯನ್ನು ಸಾರಿ ಹೇಳಿತ್ತಿದೆ.
ಸರ್ಕಾರವು ತಕ್ಷಣ ಮೇಕೆದಾಟು ಯೋಜನೆಯನ್ನು ಪ್ರಾರಂಭಿಸಿ
ಅನುμÁ್ಠನ ಗೊಳಿಸುವಂತೆ ಒತ್ತಡ ಏರಿ ಕೋಲಾರ ಮತ್ತು
ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಈ ಯೋಜನೆ ಅನುಕೂಲ ಮಾಡಲು
ಕೋರಿದರು.
ಕೋಲಾರವು ಜಿಲ್ಲಾ ಕೇಂದ್ರವಾಗಿದ್ದರೂ ಸಹ
ಸುಸಜ್ಜಿತವಾದ ಸರ್ಕಾರಿ ಸೂಪರ್ ಸ್ಪೆಷಲಿಟಿ ಆಸ್ಪತ್ರೆ ಮತ್ತು ಸರ್ಕಾರಿ
ವ್ಯದ್ಯಕೀಯ ಕಾಲೇಜು ಇಲ್ಲದ ಕಾರಣ ಇಂತಹ ರೋಗಗಳಿಗೆ
ಚಿಕಿತ್ಸೆ ಪಡಿಯಲು ಸಾಧ್ಯವಾಗುತ್ತಿಲ್ಲ. ಈ ಭಾಗದ ಶೇ.90% ಜನರು
ಹಣಕಾಸಿನಲ್ಲಿ ಸ್ಥಿತಿವಂತರಲ್ಲದ ಕಾರಣ ಖಾಸಿಗಿ ಆಸ್ಪತ್ರೆಗಳಿಗೆ ಹೋಗಿ,
ಹಣವನ್ನು ಕೊಟ್ಟು ಚಿಕಿತ್ಸೆಯನ್ನು ಪಡಿಯುವ ಸ್ಥಿತಿಯಲ್ಲಿ
ಇರುವುದಿಲ್ಲ.ಕೋಲಾರದ ಹೊರವಲಯದಲ್ಲಿ ಸರ್ಕಾರದ
ಕಮಲಾ ನೆಹರು ಸಾನಿಟೋರಿಯಂ ಎಂಬ ಕ್ಷಯ ಆಸ್ಪತ್ರೆಅನ್ನು
ಸುಮಾರು 50 ಎಕ್ಕರೆ ಜಾಗದಲ್ಲಿ ನಿರ್ಮಿಸಲು ಸರ್ಕಾರದ ಗಮನಕ್ಕೆ
ವಿಧಾನ ಮಂಡಲದ ಅಧಿವೇಶನದಲ್ಲಿ ತರುವಂತೆ ಕೋರಿದರು.
ಕೋಲಾರದಲ್ಲಿ ಸುಮಾರು ಎರಡು ಲಕ್ಷದಷು ಜನರು
ವಾಸವಾಗಿದ್ದು 35 ವಾರ್ಡ್‍ಗಳು ಇರುತ್ತವೆ. ನಗರವು ಅತಿ ವೇಗವಾಗಿ
ಬೆಳಯುತ್ತಿದ್ದು ನಗರಸಭೆಯಲ್ಲಿ ಅಗತ್ಯ ಸಿಬ್ಬಂದಿಯ
ಕೊರತೆ ಇರುವದರಿಂದ ಮೂಲಭೂತ ಸಮಸ್ಯೆಗಳಾದ ರಸ್ತೆ,
ದೀಪಗಳು, ಒಳಚರಂಡಿ ವ್ಯವಸ್ಥೆ, ಡ್ರೈನೇಜ್, ಕುಡಿಯುವ
ಹಾಗೂ ದಿನಬಳಕೆಯ ನೀರಿನ ವ್ಯವಸ್ಥೆ, ರಸ್ತೆ ಹಾಗೂ

ಬಡಾವಣೆಗಳಲ್ಲಿನ ಕಸ ವಿಲೇವಾರಿ ಸರಿಯಾಗಿ ಆಗದೇ ನಿವಾಸಿಗಳು
ಪರೀತಪ್ಪಿಸುವಂತೆ ಆಗಿದೆ. ಅಧಿಕಾರಿಗಳು, ಆಡಳಿತ ಸಿಬ್ಬಂದಿ, ಗ್ರೂಪ್ ‘ಸಿ ‘
ಮತ್ತು ‘ ಡಿ ‘ ಗ್ರೂಪ್ ನೌಕರರನ್ನು ಒಳಗೊಂಡಂತೆ ಒಟ್ಟು 418
ಹುದ್ದೆಗಳ ಮಂಜೂರಾತಿ ಇದ್ದು, ಇದರ ಪೈಕಿ 275 ಹುದ್ದೆಗಳ
ಭರ್ತಿಯಾಗ್ಗಿದು 143 ಹುದ್ದೆಗಳು ಖಾಲ್ಲಿ ಇರುತ್ತವೆ. ಎಲ್ಲಾ
ಅವಲೋಕಿಸಿ ಖಾಲ್ಲಿ ಇರುವಂತಹ ಎಲ್ಲಾ 143 ಹುದ್ದೆಗಳುನ್ನು
ತಕ್ಷಣ ಭರ್ತಿ ಮಾಡಲು ಸರ್ಕಾರದ ಗಮನ ಸೆಳೆಯಲು ಕ್ರಮ
ತೆಗೆದುಕೊಂಡು ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದ್ದು
ಸಾರ್ವಜನಿಕರ ಹಿತದೃಷ್ಟಿಯಿಂದ ಮನವಿ ಸಲ್ಲಿಸುತ್ತಿರುವುದಾಗಿ
ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಪಾಲ್ಗೊಂಡು ಸೌಲಭ್ಯಗಳ ಸದ್ಭಳಕೆ ಮಾಡಿಕೊಳ್ಳಿ :ಶರೀನಾತಾಜ್

ಶ್ರೀನಿವಾಸಪುರ 1 : ಸರ್ಕಾರದ ಆದೇಶ ಮೇರೆಗೆ ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ ಕಾರ್ಯಕ್ರವನ್ನು ಆಯೋಜಿಸಲಾಗಿದ್ದು , ಸಾರ್ವಜನಿಕರು ಇಂತಹ ಕಾರ್ಯಕ್ರಮದಲ್ಲಿ ಪಾಲ್ಗುಂಡು ಸರ್ಕಾರದ ಸೌಲಭ್ಯಗಳ ಸದ್ಭಳಕೆ ಮಾಡಿಕೊಳ್ಳುವಂತೆ ತಹಶೀಲ್ದಾರ್ ಶರೀನಾತಾಜ್ ಹೇಳಿದರು.
ರಾಯಲ್ಪಾಡು ಹೋಬಳಿಯ ಚಿಲ್ಲಾರ್ಲಪಲ್ಲಿ ಗ್ರಾಮದಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯ ಕಡೆ ಕಾರ್ಯಕ್ರಮದ ಅಡಿಯಲ್ಲಿ ತಾಲ್ಲೂಕು ಆಡಳಿತ ಮತ್ತು ತಾಲ್ಲೂಕು ಪಂಚಾಯಿತಿ ಸಹಯೋಗದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾರ್ವಜನಿಕರು ಸಮಸ್ಯೆ ಇದ್ದಲ್ಲಿ ಅರ್ಜಿ ಸಲ್ಲಿಸಬಹುದು. ಸಾರ್ವಜನಿಕರು ಗ್ರಾಮದಲ್ಲಿನ ಸ್ಮಶಾನವು ಒತ್ತುವರಿಯಾಗಿರುವ ಬಗ್ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬೇಟಿ ನೀಡಿ , ಒತ್ತುವರಿದಾರರನ್ನು ಸ್ಥಳಕ್ಕೆ ಕರೆಯಿಸಿ ತಕ್ಷಣವೇ ಒತ್ತವರಿಯನ್ನು ತೆರವುಗೊಳಿಸಿದಕ್ಕೆ ಒತ್ತುವಾರಿದಾರರಿಗೆ ಅಭಿನಂದನೆ ಸಲ್ಲಿಸಿದರು.
ಗುಂಡುತೋಪುಗಳಲ್ಲಿ ಅರಣ್ಯ ಇಲಾಖೆಯಿಂದ ಗಿಡಗಳನ್ನು ನಡೆಲಾಯಿತು. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ದಾಖಲಿಸಲು ಇಲಾಖಾಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು. ರಸ್ತೆ ಸಮಸ್ಯೆ ಹಾಗು ಗ್ರಾಮಕ್ಕೊಂದು ಗ್ರಂಥಾಲಯ ಬೇಕೆಂಬ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಲಿಖಿತ ರೂಪದಲ್ಲಿ ಅರ್ಜಿ ಸಲ್ಲಿಸಿ ಸಂಬಂದಪಟ್ಟ ಇಲಾಖೆಯ ಗಮನಕ್ಕೆ ತಂದು ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಮತದಾರರ ಗುರುತಿನ ಚೀಟಿಗೆ ಆದಾರ ಲಿಂಕ್ ಮಾಡುವ ಪ್ರಕ್ರಿಯೆಯು ಚಾಲನೆಯಲ್ಲಿ ಇದ್ದು, 40% ಆಗಿದ್ದು, ಉಳಿದ 60% ಫಲಾನುಭವಿಗಳು ಅದನ್ನು ಸಂಬಂದ ಪಟ್ಟ ಅಧಿಕಾರಿಗಳ ಮೂಲಕ ಲಿಂಕ್ ಮಾಡಿಸಿಕೊಳ್ಳುವಂತೆ ತಿಳಿಸಿದರು. ರೈತರ ಬೆಳೆ ಸಮೀಕ್ಷೆ 20% ಆಗಿದೆ ಉಳಿದ 80% ಬೆಳೆ ಸಮೀಕ್ಷೆ ಬಾಕಿ ಇದ್ದು, ರೈತರು ಸಂಬಂದಪಟ್ಟ ಅಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಿದರು.
17 ರೀತಿಯ ವಿವಿಧ ಪಿಂಚಣಿಗಳು ಇದ್ದು, ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಿ ಸರ್ಕಾರದ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಸೂಚಿಸಿದರು.
ಪೌವತಿ ಖಾತೆ ದಾರರು ಮರಣಪ್ರಮಾಣ ಪತ್ರ ಹಾಗೂ ವಂಶವೃಕ್ಷ ಇತರೆ ದಾಖಲೆಗಳನ್ನು ನೀಡಿದರೆ ಅವುಗಳನ್ನು ಪರಿಶೀಲಿಸಿ 45 ದಿನಗಳಲ್ಲಿ , ಅರ್ಹ ಫಲಾನುಭವಿಗಳಿಗೆ ದಾಖಲೆ ನೀಡಲಾಗುವುದು ಎಂದರು.
ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮು ಇಲಾಖೆಯಲ್ಲಿ ಸಿಗುವಂತಹ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಗ್ರಾ.ಪಂ.ಅಧ್ಯಕ್ಷೆ ನಿರ್ಮಲಮ್ಮ , ಬಿಇಒ ವಿ.ಉಮಾದೇವಿ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸನ್, ಪಿಡಬ್ಲೂಡಿ ಹಿರಿಯ ಅಭಯಂತರ ಎಂ.ಕೆ.ಹಸೇನ್ ಸಾಬ್, ಕಿರಿಯ ಅಭಯಂತರ ಗೋವಿಂದಪ್ಪ, ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಶಿವಕುಮಾರ್, ರೇಷ್ಮೆ ಇಲಾಖೆ ಅಧಿಕಾರಿ ಕೃಷ್ಣಪ್ಪ, ಕೃಷಿ ಇಲಾಖೆ ಅಧಿಕಾರಿ ಮಂಜುನಾಥ್, ಶಿರಸ್ತೆದಾರ್ ಬಲರಾಮೇಗೌಡ ಆರ್‍ಐಗಳಾದ ಅಂಬರೀಶ್, ಜನಾರ್ಧನ್, ಮುನಿರೆಡ್ಡಿ, ಗುರುರಾಜರಾವ್, ಗ್ರಾ.ಪಂ ಸದಸ್ಯರು ಮಮತ, ಸೋಮಶೇಖರ್, ಬೈರೆಡ್ಡಿ, ಕಾರ್ಯದರ್ಶಿ ಮಂಜುಳ, ತಹಶೀಲ್ದಾರ್ ಕಚೇರಿ ಎಫ್‍ಡಿಎ ಭಾವನ ಇದ್ದರು.