ಅಬ್ಬನಡ್ಕ ಶ್ರೀ ವನದುರ್ಗಾ ಸ್ವ-ಸಹಾಯ ಸಂಘದ ಅಧ್ಯಕ್ಷರಾಗಿ ವೀಣಾ ಹರೀಶ್ ಪೂಜಾರಿ, ಕಾರ್ಯದರ್ಶಿಯಾಗಿ ಪುಷ್ಪ ಕುಲಾಲ್ ಆಯ್ಕೆ


ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ನೇತೃತ್ವದಲ್ಲಿ ಸ್ಥಾಪನೆಗೊಂಡಿರುವ ಅಬ್ಬನಡ್ಕ ಶ್ರೀ ವನದುರ್ಗಾ ಸ್ವ-ಸಹಾಯ ಸಂಘದ 4ನೇ ವರ್ಷದ ಅಧ್ಯಕ್ಷರಾಗಿ ವೀಣಾ ಹರೀಶ್ ಪೂಜಾರಿ, ಕಾರ್ಯದರ್ಶಿಯಾಗಿ ಪುಷ್ಪ ಶಾಂತರಾಮ್ ಕುಲಾಲ್ ಆಯ್ಕೆಯಾಗಿದ್ದಾರೆ.
ಪದಾಧಿಕಾರಿಗಳ ವಿವರಗಳು:
ಗೌರವ ಸಲಹೆಗಾರರು : ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಸ್ಥಾಪಕಾಧ್ಯಕ್ಷ ವಿಠಲ ಮೂಲ್ಯ, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬಿರೋಟ್ಟು ದಿನೇಶ್ ಪೂಜಾರಿ, ನಿಕಟ ಪೂವಾಧ್ಯಕ್ಷ ಉದಯ ಅಂಚನ್, ಪೂರ್ವಾಧ್ಯಕ್ಷರಾದ ರಾಜೇಶ್ ಕೋಟ್ಯಾನ್, ರಘುವೀರ್ ಶೆಟ್ಟಿ, ಕಾಸ್ರಬೈಲು ಸುರೇಶ್ ಪೂಜಾರಿ, ಸತೀಶ್ ಪೂಜಾರಿ, ಆನಂದ ಪೂಜಾರಿ.
ನಿಕಟ ಪೂರ್ವಾಧ್ಯಕ್ಷರು – ಲಲಿತಾ ಆಚಾರ್ಯ
ಸದಸ್ಯರು : ಹರಿಪ್ರಸಾದ್ ಆಚಾರ್ಯ, ಲೀಲಾ ಪೂಜಾರಿ, ಹರಿಣಿ ಪೂಜಾರಿ, ಅಶ್ವಿನಿ ಪ್ರಭಾಕರ್, ಸುನಿತಾ ಪಿಂಟೋ, ಹರೀಶ್ ಪೂಜಾರಿ, ಮಂಜುನಾಥ ಆಚಾರ್ಯ, ಹರಿಣಾಕ್ಷಿ ಪೂಜಾರಿ, ಸಂಧ್ಯಾ ಶೆಟ್ಟಿ, ಬಾಲಕೃಷ್ಣ ಮಡಿವಾಳ, ಸುಲೋಚನಾ ಕೋಟ್ಯಾನ್, ದೀಪಾಶ್ರೀ ಕೋಟ್ಯಾನ್, ಧನಂಜಯ ಕುಲಾಲ್, ಆರತಿ ಕುಮಾರಿ, ಪ್ರಕಾಶ್ ಪೂಜಾರಿ, ಅಶ್ವಿನಿ ಪ್ರಶಾಂತ್.

ತಾಲ್ಲೂಕು ಮಟ್ಟದ ಪ್ರಾಥಮಿಕ , ಪ್ರೌಢಶಾಲಾ ಪ್ರತಿಭಾ ಕಾರಂಜಿ , ಕಲೋತ್ಸವ ಮಕ್ಕಳು ಪಠ್ಯದ ಜತೆ ಕ್ರೀಡೆ , ಸಾಂಸ್ಕೃತಿಕ ಚಟುವಟಿಕೆ ಅಗತ್ಯ – ಕೆ.ಶ್ರೀನಿವಾಸಗೌಡ

ಕೋಲಾರ : – ಮಕ್ಕಳಿಗೆ ಪಠ್ಯದ ಜತೆಗೆ ಕ್ರೀಡೆ , ಸಾಂಸ್ಕೃತಿಕ ಚಟುವಟಿಕೆಗಳ ಅಗತ್ಯ ಇದ್ದು , ಎಲ್ಲವೂ ಸೇರಿದಾಗಲೇ ಸಮಗ್ರ ಶಿಕ್ಷಣವಾಗಲು ಸಾಧ್ಯ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಪ್ರತಿಭಾಕಾರಂಜಿ ಉತ್ತಮ ವೇದಿಕೆ ಎಂದು ಶಾಸಕ ಕೆ.ಶ್ರೀನಿವಾಸಗೌಡ ಅಭಿಪ್ರಾಯಪಟ್ಟರು . ಬುಧವಾರ ನಗರದ ಅಂಜುಮಾನ್ ಅಲಮಿನ್ ಶಾಲಾ ಆವರಣದಲ್ಲಿ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು . ಆಧುನಿಕತೆ ಬೆಳೆದಂತೆ ಮೊಬೈಲ್ , ದೂರದರ್ಶನದ ದಾಳಿಯಿಂದ ನಶಿಸಿ ಹೋಗುತ್ತಿರುವ ಗ್ರಾಮೀಣ ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸ ಶಾಲಾ ಮಕ್ಕಳಿಂದಲೇ ಆಗಬೇಕು , ಗ್ರಾಮೀಣರಲ್ಲಿ ಅಡಗಿರುವ ಕಲೆ ಹೊರ ಬರಲು ಇಂತಹ ವೇದಿಕೆ ಸೃಷ್ಟಿಸಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಅಭಿನಂದನೆ ಎಂದು ತಿಳಿಸಿದರು . ಕೋಲಾರ ಜಿಲ್ಲೆ ಕಲೆಗಳ ತವರಾಗಿದ್ದು , ಇಲ್ಲಿ ಕೋಲಾಟ , ಕೇಳಿಕೆ , ಪೌರಾಣಿಕ ನಾಟಕ , ಬುರಕಥೆ ಹೀಗೆ ಅನೇಕ ಕಲೆಗಳ ಸಾಧಕರು ಇಲ್ಲಿಂದಲೇ ಸಮಾಜದಲ್ಲಿ ಗುರ್ತಿಸಿಕೊಳ್ಳುತ್ತಾರೆ , ಮಕ್ಕಳಲ್ಲಿ ಗ್ರಾಮೀಣ ಕಲೆಯ ಮಹತ್ವ ತಿಳಿಸಿಕೊಡಿ , ಮಕ್ಕಳಿಗೆ ಪಠ್ಯದಷ್ಟೇ ಕೀಡೆ , ಸಾಂಸ್ಕೃತಿಕ ಚಟುವಟಿಕೆಗಳ ಕಲಿಕೆ ಅಗತ್ಯ ಎಂಬುದನ್ನು ಅರಿತುಕೊಳ್ಳಿ ಎಂದರು . ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು , ಸರ್ಕಾರಿ ಶಾಲೆಗಳು ಇಂದು ಖಾಸಗಿ ಶಾಲೆಗಳನ್ನು ಮೀರಿ ಬೆಳೆಯುತ್ತಿವೆ , ಫಲಿತಾಂಶದಲ್ಲೂ ಹಿಂದೆ ಬಿದ್ದಿಲ್ಲ ಎಂದರು .
ಪೋಷಕರಲ್ಲಿನ ಖಾಸಗಿ ಶಾಲೆಗಳ ವ್ಯಾಮೋಹ ಇಂದು ಸರ್ಕಾರಿ ಶಾಲೆಗಳಿಗೆ ಕುತ್ತು ತಂದಿದೆ , ಈ ಮಕ್ಕಳಲ್ಲಿ ಕಂಡು ಬರುತ್ತಿರುವ ಗ್ರಾಮೀಣ ಸಂಸ್ಕೃತಿಯ ಸೊಗಡು ಖಾಸಗಿ ಶಾಲಾ ಮಕ್ಕಳಲ್ಲಿ ಕಾಣಲು ಸಾಧ್ಯವೇ ಎಂದು ಪ್ರಶ್ನಿಸಿದರು . ಮಕ್ಕಳಲ್ಲಿನ ಪ್ರತಿಭೆ ಗುರುತಿಸುವ ಶಕ್ತಿ ಶಿಕ್ಷಕರಿಗೆ ಮಾತ್ರವಿದೆ , ಶಿಕ್ಷಕರು ಇಂತಹ ಪ್ರತಿಭೆಗಳನ್ನು ಸಮಾಜಕ್ಕೆ ಗುರುತಿಸುವ ಅತಿ ಮುಖ್ಯ ಜವಾಬ್ದಾರಿ ಹೊಂದಿದ್ದಾರೆ ಎಂದರು . ಹೆಸರೇ ಸೂಚಿಸುವಂತೆ ಪ್ರತಿಭೆ ಚಿಮ್ಮಿಸುವ ಕಾರ್ಯಕ್ರಮ ಇದಾಗಿದ್ದು , ಪ್ರತಿ ಮಗುವಿನಲ್ಲೂ ಅಡಗಿರುವ ವಿಶಿಷ್ಟ ಚೈತನ್ಯವನ್ನು ಹೊರಗೆ ತರುವ ಕೆಲಸ ಶಿಕ್ಷಕರು ಮಾಡಬೇಕು , ಮಕ್ಕಳ ಈ ಚಟುವಟಿಕೆಗಳಲ್ಲಿ ನೈತಿಕ ಮೌಲ್ಯಗಳು ಅಡಗಿರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು . ಡಯಟ್ ಉಪನ್ಯಾಸಕ ಬಾಲಾಜಿ ಮಾತನಾಡಿ , ಸರ್ಕಾರಿ ಶಾಲೆಗಳಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ , ಶಿಕ್ಷಕರು ಅನೇಕ ಪ್ರತಿಭೆಗಳನ್ನು ಬೆಳೆಕಿಗೆ ತಂದಿದ್ದಾರೆ , ಇಲ್ಲಿ ಸಿಕ್ಕಿರುವ ವೇದಿಕೆ ಬಳಸಿಕೊಂಡು ರಾಜ್ಯಮಟ್ಟಕ್ಕೂ ಹೋಗಿ ಜಿಲ್ಲೆಯ ಕೀರ್ತಿ ಹೆಚ್ಚಿಸಿ ಎಂದರು . ತಾಲ್ಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಅಶ್ವಥನಾರಾಯಣ ಪ್ರತಿಭಾ ಕಾರಂಜಿಯಲ್ಲಿ ಪಾಲ್ಗೊಂಡಿರುವ ಮಕ್ಕಳ ಸಂತಸಕ್ಕೆ ಎಲ್ಲೆ ಇಲ್ಲ ಎಂದ ಅವರು , ಕೆಲವು ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದರೂ ಅವರಿಗೆ ಮತ್ತಿನ್ಯಾವುದೋ ಕಲೆ , ಕ್ರೀಡೆಯ ಸಾಧನೆ ಸಾಧ್ಯವಾಗುತ್ತದೆ , ಅದನ್ನು ಗಮನಿಸಿ ಅವರನ್ನು ಸಮಗ್ರ ಶಿಕ್ಷಣದತ್ತ ಕರೆದೊಯ್ದಿರಿ , ತೀರ್ಪುಗಾರರು ನಿಷ್ಪಕ್ಷಪಾತ ತೀರ್ಪು ಬರುವಂತೆ ಎಚ್ಚರವಹಿಸಬೇಕು ಎಂದರು .
ಕಾರ್ಯಕ್ರಮವನ್ನು ಇಸಿಒಗಳಾದ ಎನ್.ಮುನಿರತ್ನಯ್ಯಶೆಟ್ಟಿ , ಕೆ.ಶ್ರೀನಿವಾಸ್‌ ಆಯೋಜಿಸಿದ್ದು , ಚಿನ್ಮಯ ಶಾಲೆ ಮಕ್ಕಳು ನಿರೂಪಿಸಿದ್ದು , ಸುವರ್ಣ ಸೆಂಟ್ರಲ್ ಶಾಲೆ ಮಕ್ಕಳು ನಾಡಗೀತೆ , ರೈತಗೀತೆ ಪ್ರಾರ್ಥನೆ ನಡೆಸಿಕೊಟ್ಟರು . ಸಾಧಕ ಮಕ್ಕಳಿಗೆ ಶಾಸಕರ ಬಹುಮಾನ ಕ್ಯಾಲನೂರಿನ ಕೆಪಿಎಸ್‌ ಶಾಲೆಯ ೧ ಮತ್ತು ೨ ನೇ ತರಗತಿ ಮಕ್ಕಳು ಕೀಬೋರ್ಡ್ ನುಡಿಸಿ ಗಮನ ಸೆಳೆದಿದ್ದು , ಮಕ್ಕಳ ಪ್ರತಿಭೆ ಗಮನಿಸಿ ಶಾಸಕ ಕೆ.ಶ್ರೀನಿವಾಸಗೌಡ ಸ್ಥಳದಲ್ಲೇ ಆ ಮಕ್ಕಳಿಗೆ ೨ ಸಾವಿರ ರೂ ಬಹುಮಾನ ನೀಡಿದರು . ಕಾರ್ಯಕ್ರಮದಲ್ಲಿ ಬಿಆರ್‌ಸಿ ಪ್ರವೀಣ್ , ರಾಜ್ಯ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಚೌಡಪ್ಪ , ಸರ್ಕಾರಿ , ಖಾಸಗಿ ಶಿಕ್ಷಕರು , ಶಾಲೆಗಳ ಸಂಘಟನೆಗಳ ಮುಖಂಡರಾದ ಎಸ್.ಮುನಿಯಪ್ಪ , ಬಿ.ಎಂ.ಚಂದ್ರಪ್ಪ , ಶಿವಕುಮಾರ್ , ಗಂಗಾಧರಮೂರ್ತಿ , ಕೆ.ಟಿ.ನಾಗರಾಜ್ , ಮುನಿಯಪ್ಪ , ಎಸ್.ನಾರಾಯಣಸ್ವಾಮಿ , ಇಸಿಒಗಳಾದ ಬೈರೆಡ್ಡಿ , ವೆಂಕಟಾಚಲಪತಿ , ರಾಘವೇಂದ್ರ , ವಿ.ಮುರಳಿಮೋಹನ್ , ಜಿ.ಶ್ರೀನಿವಾಸ್ , ಆರ್.ನಾಗರಾಜ್ , ವೃತ್ತಿಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜ್‌ , ಎಂ.ಎನ್.ಶ್ರೀನಿವಾಸಮೂರ್ತಿ , ಅಕಲ್‌ ಸಾಬ್‌ , ಗಂಗಾಧರಮೂರ್ತಿ , ಮುಕುಂದ , ಮೋಹಾನಾಚಾರಿ , ಸೋಮಶೇಖರ್ , ಫಲ್ಗುಣ , ಮತ್ತಿತರರು ಉಪಸ್ಥಿತರಿದ್ದರು
.

ಶ್ರೀನಿವಾಸಪುರ ತಾಲ್ಲೂಕಿನ ಗೌಡತಾತನಗಡ್ಡ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಸದಸ್ಯರು

ಶ್ರೀನಿವಾಸಪುರ : ತಾಲ್ಲೂಕಿನ ಗೌಡತಾತನಗಡ್ಡ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಾಗಿ ಚಲಪತಿ , ಜಯಮ್ಮ , ಭಾರತಮ್ಮ , ಮುನಿಶಾಮಿ , ರವಣಪ್ಪ , ವೆಂಕಟಕೃಷ್ಣಪ್ಪ , ಜಿ.ಎನ್.ಶ್ರೀನಿವಾಸ್ , ವೆಂಕಟಮ್ಮ , ನಾರಾಯಣಸ್ವಾಮಿ , ಶ್ರೀರಾಮ್ , ಲಕ್ಷ್ಮೀದೇವಿ , ಪದ್ಮಾವತಿ ಅವಿರೋಧ ಆಯ್ಕೆಯಾಗಿದ್ದಾರೆ . ಪರಿಶಿಷ್ಟ ಪಂಗಡದ ಮಹಿಳಾ ಅಭ್ಯರ್ಥಿ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ವೆಂಕಟಮ್ಮ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎನ್.ಶಿವಲಿಂಗಪ್ಪ ತಿಳಿಸಿದ್ದಾರೆ . ಆಯ್ಕೆ ಬಳಿಕ ಸದಸ್ಯರು ವಿಜಯೋತ್ಸವ ಆಚರಿಸಿದರು . ಮುಖಂಡರಾದ ಜಿ.ಎನ್.ಶ್ರೀನಿವಾಸರೆಡ್ಡಿ , ಮುನಿರೆಡ್ಡಿ , ಬಾಲಾವತಿ ಜಯರಾಂ , ಜಿ.ವಿ.ಜಯರಾಮರೆಡ್ಡಿ , ಚಿನ್ನಪರೆಡ್ಡಿ , ಮುನಿಸ್ವಾಮಿ ಇದ್ದರು

ಸ್ವಾತಂತ್ರ್ಯ ಹೋರಾಟದ ಪರಿಚಯ ಮಾಡಿಕೊಡಬೇಕಾದ ಅಗತ್ಯವಿದೆ-ಡಾ . ಪಿ.ಎಸ್.ಅಂಜನ್‌ ಕುಮಾರ್‌

ಶ್ರೀನಿವಾಸಪುರ : ಸ್ವಾತಂತ್ರ್ಯ ಹೋರಾಟದ ಪರಿಚಯ ಮಾಡಿಕೊಡಬೇಕಾದ ಅಗತ್ಯವಿದೆ . ಸ್ವಾತಂತ್ರ್ಯ ರಕ್ಷಣೆಗೆ ಪ್ರೇರಣೆ ನೀಡಬೇಕಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಡಾ . ಪಿ.ಎಸ್.ಅಂಜನ್‌ ಕುಮಾರ್‌ ಹೇಳಿದರು . ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ಸಾರ್ವಜನಿಕರ ಸಭೆಯಲ್ಲಿ ಮಾತನಾಡಿದ ಅವರು , ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಅ .೨ ರಂದು ಬೆಳಿಗ್ಗೆ ೮ ಗಂಟೆಗೆ ಗೌರಿಬಿದನೂರಿನ ನ್ಯಾಷನಲ್ ಕಾಲೇಜು ಮೈದಾನದಿಂದ ವಿದುರಾಶ್ವತ್ಥಕ್ಕೆ ಸದ್ಭಾವನಾ wwww ಯಾತ್ರೆ ಏರ್ಪಡಿಸಲಾಗಿದೆ ಎಂದು ಹೇಳಿದರು . ಜಾತಿ , ಧರ್ಮ ಹಾಗೂ ಪಕ್ಷ ಭೇದವಿಲ್ಲದೆ ಭಾವೈಕ್ಯದೆಡೆಗೆ ಸದ್ಭಾವನಾ ನಡಿಗೆ ಏರ್ಪಡಿಸಲಾಗಿದೆ . ದೇಶದ ಸ್ವಾತಂತ್ರ್ಯಕ್ಕಾಗಿ ಹಲವರು ತ್ಯಾಗ ಬಲಿದಾನ ಮಾಡಿದ್ದಾರೆ . ಜಾತಿ ಏತ ಭೇದವಿಲ್ಲದೆ ಹೋರಾಡಿದ್ದಾರೆ . ಆದ್ದರಂದಲೇ ಇಂದಿನ ಐತಿಹಾಸಿಕ ಪಾದಯಾತ್ರೆಯೂ ಜಾತ್ಯಾತೀತವಾಗಿರುತ್ತದೆ ಎಂದು ಹೇಳಿದರು . ಪಾದಯಾತ್ರೆ ಮಾರ್ಗದಲ್ಲಿ ಪಾದಯಾತಿಗಳಿಗೆ ತಿಂಡಿ ತೀರ್ಥದ ವ್ಯವಸ್ಥೆ ಇರುತ್ತದೆ . ವಿದುರಾಶ್ವತ್ವದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ . ಜನರು ಈ ಕಾರ್ಯಕ್ರಮದಲ್ಲಿ ಜಾತ್ಯಾತೀತವಾಗಿ ಭಾಗವಹಿಸಬೇಕು ಎಂದು ಮನವಿ ಮಾಡಿದರು . ತಾಲ್ಲೂಕು ಬ್ರಾಹ್ಮಣರ ಸಂಘದ ಅಧ್ಯಕ್ಷ ಕೆ.ದಿವಾಕರ್ , ಪದಾಧಿಕಾರಿಗಳಾದ ಎನ್.ಗೋಪಿನಾಥರಾವ್ , ಎಸ್.ಸುಬ್ರಮಣಿ , ಸಿ.ಎಸ್.ರಮೇಶ್ , ಕೆ.ಎನ್.ಅರುಣ್ ಕುಮಾರ್ ಇದ್ದರು

ಕೋಲಾರ ಜಿಲ್ಲೆಯಾದ್ಯಂತ ಶಾಲೆಗಳಿಗೆ ಅಗತ್ಯವಿರುವ ಮೂಲ ಸೌಕರ್ಯ ಕಲ್ಪಿಸಲಾಗುವುದು : ಎಸ್.ಮುನಿಸ್ವಾಮಿ

ಶ್ರೀನಿವಾಸಪುರ : ಜಿಲ್ಲೆಯಾದ್ಯಂತ ಶಾಲೆಗಳಿಗೆ ಅಗತ್ಯವಿರುವ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದು ಲೋಕಸಸಭಾ ಸದಸ್ಯ ಎಸ್.ಮುನಿಸ್ವಾಮಿ ಹೇಳಿದರು . ಶ್ರೀನಿವಾಸಪುರದ ಸೀತಾರಾಮ ಕಲ್ಯಾಣ ಮಂಟಪದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶಿಕ್ಷಕರ ಸಂಘಗಳ ವತಿಯಿಂದ ಬುಧವಾರ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು , ಸೋರುವ ಶಾಲಾ ಕಟ್ಟಡಗಳ ಪಟ್ಟಿ ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಕೇಳಲಾಗಿತ್ತು . ಅವರು ಒದಗಿಸಿರುವ ಪಟ್ಟಿಯಂತೆ ಜಿಲ್ಲೆಯಲ್ಲಿ ೫೦೦ ಸೋರುವ ಶಾಲಾ ಕಟ್ಟಡಗಳಿವೆ ಎಂದು ಹೇಳಿದರು . ತಾಲ್ಲೂಕು ಕೇಂದ್ರದಲ್ಲಿ ಗುರು ಭವನ ನಿರ್ಮಿಸಲು ಜಮೀನು ಮಂಜೂರು ಮಾಡುವಂತೆ ತಹಶೀಲ್ದಾರ್‌ಗೆ ಸೂಚಿಸಲಾಗಿತ್ತು ಎಪಿಎಂಸಿ ಮಾರುಕಟ್ಟೆ ಸಮೀಪ ಎರಡು ಎಕರೆ ಸರ್ಕಾರಿ ಜಮೀನಿದ್ದು , ಆ ಪೈಕಿ ಗುರುಭವನ ನಿರ್ಮಾಣಕ್ಕೆ ೧ ಎಕರೆ ಬಳಸಿಕೊಳ್ಳಬಹುದಾಗಿದೆ . ಜಮೀನು ಮಂಜೂರಾದ ತಕ್ಷಣ ಭವನ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು . ವಿಧಾನ ಪರಿಷತ್ತಿನ ಮುಖ್ಯ ಸಚೇತಕ ವೈ.ಎ.ನಾರಾಯಣಸ್ವಾಮಿ ಮಾತನಾಡಿ , ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಹಿರಿದು , ಪ್ರತಿ ವ್ಯಕ್ತಿಯ ಜೀವನದಲ್ಲೂ ಗುರುಗಳ ಪ್ರಭಾವ ಇದ್ದೇ ಇರುತ್ತದೆ . ಆದ್ದರಿಂದಲೇ ಯಾರಿಗೂ ದೊರೆಯದಷ್ಟು ಗೌರವ ಶಿಕ್ಷಕ ಸಮುದಾಯಕ್ಕೆ ದೊರೆಯುತ್ತಿದೆ ಎಂದು ಹೇಳಿದರು .
ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ , ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಸಂಪನ್ಮೂಲ ವ್ಯಕ್ತಿ ಎ.ವೆಂಕಟರೆಡ್ಡಿ ಶಿಕ್ಷಕರ ದಿನಾಚರಣೆ ಮಹತ್ವ ಕುರಿತು ಮಾತನಾಡಿದರು . ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರು ಹಾಗೂ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆದ ಶಿಕ್ಷಕರನ್ನು ಸನ್ಮಾನಿಸಲಾಯಿತು . ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಡಾ . ಕೆ.ಎನ್.ವೇಣುಗೋಪಾಲ್ , ಮುಖಂಡ ರೋಣೂರು ಚಂದ್ರಶೇಖರ್‌ , ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ , ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ಬಿ.ಆರ್.ಮಂಜುನಾಥ್ , ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬೈರಾರೆಡ್ಡಿ , ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುಬ್ರಮಣಿ , ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಬಿ.ಗೋಪಾಲಗೌಡ , ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ನಾಗರಾಜ್‌ , ಅಧಿಕಾರಿಗಳಾದ ಸುಲೋಚನ , ಕೆ.ಸಿ.ವಸಂತ , ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್‌ ಜೆ.ಸಿ.ನಾರಾಯಣಸ್ವಾಮಿ ಇದ್ದರು .

ಮಂಗಳೂರಿನ ಖಾಸಗಿ ಮೆಡಿಕಲ್ ಕಾಲೇಜಿನ ಡೀನ್ ನಾಪತ್ತೆ, ನಾಲ್ಕು ದಿನ ಕಳೆದರೂ ಸುಳಿವಿಲ್ಲ

ಮಂಗಳೂರು ಸೆ.28: ನಗರದಲ್ಲಿ ಸೆ.25 ರಂದು ನಾಪತ್ತೆಯಾಗಿದ್ದ ಖಾಸಗಿ ಮೆಡಿಕಲ್‌ ಕಾಲೇಜಿನ ಡೀನ್‌ ಡಾ.ಅರ್ಬನ್‌ ಜೆ. ಅರ್ನಾಲ್ಡ್‌ ಡಿಸೋಜಾ ಅವರ ಸುಳಿವು ಇನ್ನೂ ಪತ್ತೆಯಾಗಿಲ್ಲ.

ಸೆ.25 ರರಾತ್ರಿ 7 ಗಂಟೆ ಸುಮಾರಿಗೆ ಡಾ ಡಿಸೋಜಾ ಅವರು ತಮ್ಮ ವೆಲೆನ್ಸಿಯಾದಲ್ಲಿನ ಅವರ ಮನೆಯಿಂದ ದ್ವಿಚಕ್ರ ವಾಹನದಲ್ಲಿ ಸಮೀಪದ ಅಂಗಡಿಗೆ ಹೋಗುವುದಾಗಿ ಪತ್ನಿಗೆ ತಿಳಿಸಿ ಮನೆಯಿಂದ ಹೊರಟಿದ್ದರು. ಆದರೆ, ರಾತ್ರಿಯಾದರೂ ಹಿಂತಿರುಗದ ಕಾರಣ ಪತ್ನಿ ಪೊಲೀಸರಿಗೆ ದೂರು ನೀಡಿದ್ದರು. ಆರಂಭದಲ್ಲಿ ಡಿಸೋಜಾ ಅವರ ಮೊಬೈಲ್‌ ಫೋನ್‌ ಸ್ವಿಜ್‌ ಆಫ್‌ ಆಗಿದ್ದು, ಬಳಿಕ ಉಳ್ಳಾಲ ಬೀಚ್‌ ಬಳಿ ಅವರ ಮೊಬೈಲ್‌ ಫೋನ್‌ ಸಿಗ್ನಲ್‌ ಅನ್ನು ಸ್ವಲ್ಪ ಸಮಯದಲ್ಲೇ ಪತ್ತೆಹಚ್ಚಿದ್ದರು. ನಂತರ

ಪೊಲೀಸರ ತಂಡ ಸ್ಥಳಕ್ಕೆ ದೌಡಾಯಿಸಿದರೂ ಪತ್ತೆಯಾಗಿರಲಿಲ್ಲ. ಡಾ ಡಿಸೋಜಾ ಪತ್ತೆಗೆ ಪ್ರಯತ್ನ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಾ ಅರ್ಬನ್‌ ಡಿಸೋಜಾ, ಉದ್ಯಾವರ ಮೂಲದವರಾಗಿದ್ದು, ಅವರು ಮಂಗಳೂರಿನಲ್ಲಿ ಖಾಸಗಿ ಮೆಡಿಕಲ್‌ ಕಾಲೇಜಿನ ಡೀನ್‌ ಆಗಿ ಸೇವೆ ಸಲ್ಲಿಸುತಿದ್ದರು. ಅವರು ನಾಪತ್ತೆಯಾಗಿ 4 ದಿನ ಕಳೆದರೂ ಇನ್ನೂ ಅವರ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ ಆದ್ದರಿಂದ ಅವರ ಬಗ್ಗೆ ಮಾಹಿತಿ ಇರುವವರು ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆ, 0824 222 0518 ಅನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ 13 ನೇ ವಾರ್ಷಿಕ ಮಹಾ ಸಭೆ ಉಪಾಧ್ಯಕ್ಷ ರಾದ ಕಿರಣ್ ಜಿ. ಗೌರಯ್ಯ ಅಧ್ಯಕ್ಷತೆ ಯಲ್ಲಿ ಜರುಗಿತು

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ 13 ನೇ ವಾರ್ಷಿಕ ಮಹಾ ಸಭೆಯು ತಾರೀಖು 27-09-2022 ರಂದು 4-30ಕ್ಕೆ ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ ಇಲ್ಲಿ ಉಪಾಧ್ಯಕ್ಷ ರಾದ ಕಿರಣ್ ಜಿ. ಗೌರಯ್ಯ ಇವರ ಅಧ್ಯಕ್ಷತೆ ಯಲ್ಲಿ ಜರುಗಿತು. ಸಭೆಯಲ್ಲಿ70 ಜನ ಸದಸ್ಯರು ಹಾಜರಿದ್ದರು. ರಕ್ತ ಕೇಂದ್ರದ ಸಿಭಂದಿಗಳಿಂದ ಪ್ರಾರ್ಥನೆ ಯೊಂದಿಗೆ ಆರಂಭವಾಯಿತು. ಉಪಸಭಾಪತಿ ಡಾ. ಉಮೇಶ್ ಪುತ್ರನ್ ಇವರು ಸ್ವಾಗತಿಸಿದರು. ಸಭಾಪತಿ ಎಸ್. ಜಯಕರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ ವಾರ್ಷಿಕ ವರದಿ ಮಂಡಿಸಿದರು. ಖಜಾಂಚಿ ಶಿವರಾಮ ಶೆಟ್ಟಿ ವಾರ್ಷಿಕ ಲೆಕ್ಕ ಪತ್ರ ಮತ್ತು ಮುಂದಿನ ವರ್ಷದ ಅಂದಾಜು ಆಯವ್ಯಯ ಪತ್ರ ಮಂಡಿಸಿದರು. ಮುಂದಿನ ಮೂರು ವರ್ಷದ ಅವದಿಗೆ CA ಶಾಂತಾರಾಮ್ ನಾಯಕ್ ಇವರನ್ನು ಲೆಕ್ಕ ಪರಿಶೋಧಕರಾಗಿ ಸಭೆಯು ಸರ್ವಾನುಮತದಿಂದ ಆಯ್ಕೆ ಮಾಡಿತು. ಕೆಳಗಿನ ಹತ್ತು ಮಂದಿ ಕಾರ್ಯಕಾರಿ ಸದಸ್ಯರು ಗಳು ಸರ್ವಾನುಮತದಿಂದ ಆಯ್ಕೆ ಆದರು.
ಎಸ್. ಜಯಕರ ಶೆಟ್ಟಿ
ಡಾ. ಉಮೇಶ್ ಪುತ್ರನ್
ಶಿವರಾಮ ಶೆಟ್ಟಿ
ವೈ. ಸೀತಾರಾಮ ಶೆಟ್ಟಿ
ಗಣೇಶ್ ಆಚಾರ್ಯ
ಡಾ. ಸೋನಿ ಡಿಕೋಸ್ಟಾ
ಶಾಂತಾರಾಮ್ ಪ್ರಭು
ಸೀತಾರಾಮ ನಕ್ಕತ್ತಾಯ
ಎ. ಮುತ್ತಯ್ಯ ಶೆಟ್ಟಿ
ಸತ್ಯನಾರಾಯಣ ಪುರಾಣಿಕ್.
ಕಾರ್ಯದರ್ಷಿ ಯವರ ಧನ್ಯವಾದ ಸಮರ್ಪಣೆ ಮತ್ತು ಲಘು ಉಪಹಾರ ದೊಂದಿಗೆ ಮಹಾ ಸಭೆ ಮುಕ್ತಾಯ ಗೊಂಡಿತು.

ಅಂತರಾಷ್ಟ್ರೀಯ ಬುಕ್ ಆಫ್ ರೆಕಾರ್ಡ್ 2022ರಲ್ಲಿ ದಾಖಲೆ ಬರೆದ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಸದಸ್ಯ ಬೋಳ ಕೀರ್ತನ್ ಪೂಜಾರಿ

ಬೋಳ ಶೇಖರ ಪೂಜಾರಿ ಹಾಗೂ ಭವಾನಿ ಪೂಜಾರಿ ದಂಪತಿಗಳ ಪುತ್ರ 24 ವರ್ಷ ವಯಸ್ಸಿನ ಯುವಕ 2022ರ ಆಗಸ್ಟ್ 15ರಂದು ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ 1854 ಕಬ್ಬಿಣದ ಮೊಳೆ ಹಾಗೂ ನೂಲಿನಿಂದ ತಯಾರಿಸಿದ ಭಾರತದ ನಕ್ಷೆ ಅಂತರರಾಷ್ಟ್ರೀಯ ಬುಕ್ ಆಫ್ ರೆಕಾರ್ಡ್ 2022ರಲ್ಲಿ ದಾಖಲೆ ಬರೆದಿದೆ.

    ಇವರು ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಕ್ರಿಯಾಶೀಲ ಸದಸ್ಯರು ಹಾಗೂ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿಯ ಕಾರ್ಯದರ್ಶಿಯಾಗಿ ಹಲವಾರು ಸೇವಾ ಸಂಸ್ಥೆಗಳ ಮೂಲಕ ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ನಡೆಸುತ್ತಿರುವ ಕ್ರಿಯಾಶೀಲ ಸದಸ್ಯರಿವರು.


ಕೆಜಿಎಫ್ ಎಪಿಎಂಸಿಗಾಗಿ ಜಮೀನು ಹಸ್ತಂತರಕ್ಕೆ ಹಣ ಪಾವತಿಗೆ ಸೂಚನೆ – ನಿರಾಶ್ರಿತರ ನಿವೇಶನಕ್ಕೆ ಜಮೀನು-ಶಾಸಕಿ ರೂಪಕಲಾ ಮನವಿಗೆ ಡಿಸಿ ಸ್ಪಂದನೆ

ಕೋಲಾರ:- ಶಾಸಕಿ ರೂಪಕಲಾ ಮನವಿ ಹಿನ್ನಲೆಯಲ್ಲಿ ಜಿಲ್ಲೆಯ ಕೆಜಿಎಫ್ ಎಪಿಎಂಸಿ ಮಾರುಕಟ್ಟೆಗೆ ಮಂಜೂರಾಗಿರುವ 25 ಎಕರೆ ಜಾಗ ಎಪಿಎಂಸಿ ವಶಕ್ಕೆ ಪಡೆಯುವುದು, ನಗರ ನಿರಾಶ್ರಿತರಿಗೆ ನಿವೇಶನ ನೀಡಲು 16 ಎಕರೆ ಜಮೀನು ಗುರುತಿಸುವ ಕಾರ್ಯವನ್ನು ಶೀಘ್ರ ಮುಗಿಸಿ ಎಂದು ಜಿಲ್ಲಾಧಿಕಾರಿ ವೆಂಕಟ್‍ರಾಜಾ ಸೂಚನೆ ನೀಡಿದರು.
ಮಂಗಳವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶಾಸಕಿ ರೂಪಕಲಾ ಡಿಸಿಯವರಿಗೆ ಮನವಿ ಮಾಡಿ, ಕೆಜಿಎಫ್ ತಾಲ್ಲೂಕು ವಿಭಜನೆಯಾದ ನಂತರ ಪ್ರತ್ಯೇಕ ಎಪಿಎಂಸಿ ಮಾಡಲು ಸಿದ್ದತೆ ನಡೆದಿದ್ದು, 25 ಎಕರೆ ಜಾಗ ಗುರುತಿಸಲಾಗಿದೆ ಅದಕ್ಕೆ ಮಾರುಕಟ್ಟೆ ಮೌಲ್ಯದ ಅರ್ಧದಷ್ಟು 72 ಲಕ್ಷರೂ ಹಣ ಕಟ್ಟಲು ಈಗಾಗಲೇ ಎಪಿಎಂಸಿ ರಾಜ್ಯ ನಿರ್ದೇಶಕರು ಸೂಚನೆ ನೀಡಿದ್ದು, ಅದರಂತೆ ಹಣ ಕಟ್ಟಲು ಸೂಚಿಸುವಂತೆ ಕೋರಿದರು.
ಅದರಂತೆ ಎಪಿಎಂಸಿ ಆಡಳಿತಾಧಿಕಾರಿಯೂ ಆಗಿರುವ ಬಂಗಾರಪೇಟೆ ತಹಸೀಲ್ದಾರ್ ದಯಾನಂದ್ ಹಾಗೂ ಎಪಿಎಂಸಿಕಾರ್ಯದರ್ಶಿಗೆ ನಿರ್ದೇಶನ ನೀಡಿದ ಡಿಸಿಯವರು ಕೂಡಲೇ ಸಂಬಂಧಿಸಿದ 72 ಲಕ್ಷ ಬಿಡುಗಡೆಗೆ ಸೂಚಿಸಿದರು.

ಸೂರಹಳ್ಳಿ ಬಳಿ 16 ಎಕರೆ ಜಾಗ

ನಗರ ನಿರಾಶ್ರಿತರಿಗೆ ಮನೆ ನಿರ್ಮಿಸಿಕೊಳ್ಳಲು ಆಶ್ರಯ ಯೋಜನೆಯಡಿ ಸೂರಹಳ್ಳಿ ಸಮೀಪ 16 ಎಕರೆ ಜಾಗ ಗುರುತಿಸಿಕೊಡಲು ಶಾಸಕಿ ರೂಪಕಲಾ ಮಾಡಿದ ಮನವಿಗೆ ಸ್ಪಂದಿಸಿದ ಡಿಸಿಯವರು ಅಗತ್ಯ ಕ್ರಮವಹಿಸಲು ಸೂಚಿಸಿ, ಫಲಾನುಭವಿಗಳ ಆಯ್ಕೆ,ನಿವೇಶನ ವಿಂಗಡಿಸುವ ಪ್ರಕ್ರಿಯೆಗಳನ್ನು ಶೀಘ್ರ ಆರಂಭಿಸಲು ನಗರ ಯೋಜನಾ ನಿದೇಶಕರು ಹಾಗೂ ನಗರಸಭೆಗೆ ಸೂಚನೆ ನೀಡಿದರು.
ಈ ಕಾರ್ಯದಲ್ಲಿ ವಿಳಂಬ ಮಾಡದೇ ಶೀಘ್ರ ಜಮೀನು ಗುರುತಿಸಿ ಫಲಾನುಭವಿಗಳಿಂದ ಅಗತ್ಯ ದಾಖಲೆಗಳನ್ನು ಪಡೆದು ಆಯ್ಕೆ ಪ್ರಕ್ರಿಯೆ ನಡೆಸಿ ಅರ್ಹರಿಗೆ ನಿವೇಶನ ಹಂಚಲು ಕ್ರಮವಹಿಸಿ ಎಂದರು.

ಟ್ರಕ್ ಟರ್ಮಿನಲ್ ಜಾಗಕ್ಕೆ ಮನವಿ

ಇದೇ ಸಂದರ್ಭದಲ್ಲಿ ಕೆಜಿಎಫ್ ನಗರಕ್ಕೆ ಟ್ರಕ್ ಟರ್ಮಿನಲ್ ಅಗತ್ಯವಿದ್ದು, ಅದಕ್ಕೆ ಜಾಗ ಗುರುತಿಸಿಕೊಡಲು ಡಿಸಿಯವರಿಗೆ ಶಾಸಕಿ ರೂಪಕಲಾ ಮನವಿ ಮಾಡಿದರು.ಇದಕ್ಕೆ ಸ್ಪಂದಿಸಿದ ಡಿಸಿ ವೆಂಕಟ್ ರಾಜಾ, ಹೊಸ ತಾಲ್ಲೂಕು ಹಾಗೂ ಅಲ್ಲೇ ಆರ್‍ಟಿಒ ಕಚೇರಿಯೂ ಇದೆ, ಅಗತ್ಯ ಜಾಗ ಗುರುತಿಸಿಕೊಡಿ ಎಂದು ಕೆಜಿಎಫ್ ತಹಸಿಲ್ದಾರ್ ಸುಜಾತಾ ಅವರಿಗೆ ಸೂಚಿಸಿದರು.
ಕೆಜಿಎಫ್ ಮಿನಿ ವಿಧಾನಸೌಧ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಕಂದಾಯ ಸಚಿವರು ಉದ್ಘಾಟನೆಗೆ ಶೀಘ್ರವೇ ದಿನಾಂಕ ನೀಡಲಿದ್ದಾರೆ ಈ ಹಿನ್ನಲೆಯಲ್ಲಿ ಉಳಿಕೆ ಕಾಮಗಾರಿಗಳನ್ನು ಆದಷ್ಟು ಶೀಘ್ರ ಮುಗಿಸಿಕೊಡಲು ಶಾಸಕರು ಕೋರಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ಕಟ್ಟಡಕ್ಕೆ ಶೀಘ್ರ ಅಗತ್ಯ ಕಾಂಪೌಂಡ್ ನಿರ್ಮಿಸಿಕೊಡಿ, ಸುರಕ್ಷತೆಗೆ ತಂತಿ ಬೇಲಿ ನಿರ್ಮಾಣ ಮಾಡಿಕೊಟ್ಟು, ವಿದ್ಯುತ್ ಸಂಪರ್ಕ ಮತ್ತಿತರ ಕೆಲಸ ಮುಗಿಸಿಕೊಡಿ ಎಂದು ಲೋಕೋಪಯೋಗಿ ಎಇಇ ಸರಸ್ವತಿ ಅವರಿಗೆ ಸೂಚಿಸಿದರು.
ಸಭೆಯಲ್ಲಿ ವಿಭಾಗಾಧಿಕಾರಿ ವೆಂಕಟಲಕ್ಷ್ಮಮ್ಮ, ಕೆಜಿಎಫ್ ನಗರಸಭೆ ಅಧ್ಯಕ್ಷ ವಿ.ಮುನಿಸ್ವಾಮಿ, ಪೌರಾಯುಕ್ತ ಡಾ.ಮಾಧವಿ, ಕೆಜಿಎಫ್ ತಹಸೀಲ್ದಾರ್ ಸುಜಾತಾ, ಬಂಗಾರಪೇಟೆ ತಹಸೀಲ್ದಾರ್ ದಯಾನಂದ್, ಕೆಜಿಎಫ್ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ಜಹೀರ್ ಅಬ್ಬಾಸ್, ಎಪಿಎಂಸಿ ಸಹಾಯಕ ನಿರ್ದೇಶಕ ಕಿರಣ್, ನಗರಸಭೆ ಎಇಗಳಾ ಮಂಜುನಾಥ್, ಶಶಿಕುಮಾರ್,ಲೋಕೋಪಯೋಗಿ ಇಲಾಖೆ ಎಇಇ ಸರಸ್ವತಿ, ಇಂಜಿನಿಯರ್ ರಾಜಶೇಖರ್ ಮತ್ತಿತರರಿದ್ದರು.