ಶೀನಿವಾಸಪುರ ತಾಲ್ಲೂಕು ಎಲ್‍ಐಸಿ ಏಜೆಂಟರು ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ

ಶೀನಿವಾಸಪುರ: ತಾಲ್ಲೂಕು ಎಲ್‍ಐಸಿ ಏಜೆಂಟರು ಶುಕ್ರವಾರ ತಮ್ಮ ಬೇಡಿಕೆ
ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
  ಎಲ್‍ಐಸಿ ಪ್ರತಿನಿಧಿ ಡಿ.ಆರ್.ಮಧ್ವೇಶ್ ಮಾತನಾಡಿ, ಭಾರತೀಯ ಜೀವವಿಮಾ ನಿಗಮ ಆನ್
ಲೈನ್ ಮೂಲಕ ಪಾಲಿಸಿ ಮರಾಟ ಮಾಡುವುದು ಮತ್ತು ರಿಯಾಯಿತಿ ನೀಡುವದನ್ನು
ನಿಲ್ಲಿಸಬೇಕು. ನೇರ ಮಾರುಕಟ್ಟೆಯಿಂದ, ನೇರವಾಗಿ ಪಾಲಿಸಿದಾರರನ್ನು
ಸಂಪರ್ಕಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
  ಗ್ರಾಚ್ಯುಟಿ ರೂ.10 ಲಕ್ಷದವರೆಗೆ ಹೆಚ್ಚಿಸಬೇಕು. ಎಲ್ಲ ಪ್ರತಿನಿಧಿಗಳು
ಹಾಗೂ ಸಂಘದ ಸದಸ್ಯರಿಗೆ ಗ್ರೂಪ್ ಇನ್ಸೂರೆನ್ಸ್ ಹೆಚ್ಚಿಸಬೇಕು.
ಪ್ರತಿನಿಧಿಗಳಿಗೆ ಶ್ರೇಣಿ ಪ್ರಕಾರ ಶಿಕ್ಷೆ ಪ್ರಮಾಣ ಪರಿಚಯಿಸಬೇಕು. ಬೋನಸ್
ಹೆಚ್ಚಿಸಬೇಕು. ವ್ಯವಹಾರ ವಿನಾಯಿತಿ ಮುಂದುವರಿಸಬೇಕು. ಕಮೀಷನ್
ಹೆಚ್ಚಿಸಬೇಕು. ವಿದೇಶಿ ಬಂಡವಾಳ ಮಿತಿ ಶೇ.74 ಹೆಚ್ಚಳ ಕೈಬಿಡಬೇಕು ಎಂದು
ಒತ್ತಾಯಿಸಿದರು.
  ಕೇಂದ್ರ ಸರ್ಕಾರ ಷೇರು ಮಾರುಕಟ್ಟೆಯಲ್ಲಿ ಎಲ್‍ಐಸಿ ಪಿಒ ಬಿಡುಗಡೆ
ಮಾಡುತ್ತಿರುವುದನ್ನು ಎಎಲ್‍ಐಸಿ ಪ್ರತಿನಿಧಿಗಳ ಸಂಘ ವಿರೋಧಿಸುತ್ತದೆ
ಎಂದು ಹೇಳಿದರು.
  ಈ ಸಂದರ್ಭದಲ್ಲಿ ತಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು
ಎಲ್‍ಐಸಿ ಉಪ ಶಾಖಾ ವ್ಯವಸ್ಥಾಪಕ ಎಸ್.ಸಿ.ಪ್ರಸಾದ್ ಅವರಿಗೆ ನೀಡಲಾಯಿತು.
  ಎಲ್‍ಐಸಿ ಪ್ರತಿನಿಧಿಗಳಾದ ಪ್ರಕಾಶ್ ರೆಡ್ಡಿ, ಪೆದ್ದನ್ನ, ಮಂಜುನಾಥ್,
ಎಸ್.ನಾರಾಯಣಸ್ವಾಮಿ, ಕೆ.ನಾರಾಯಣಸ್ವಾಮಿ, ಚೌಡಪ್ಪ, ಎಸ್.ಲಕ್ಷ್ಮಣಬಾಬು, ಸಬ್ಬೀರ್,
ಶ್ರೀನಾಥ್, ಎನ್.ವಿ.ವೆಂಕಟರಾಮರೆಡ್ಡಿ, ಕೃಷ್ಣಪ್ಪ, ಸುಮಂತು ಶ್ರೀನಿವಾಸರೆಡ್ಡಿ,
ಇದ್ದರು.

ಅರಕಲಗೋಡು ಅಕ್ಷರ ದಾಸೋಹ ನಿರ್ದೇಶಕರ ವಿರುದ್ಧ ಕ್ರಮ ಶಿಸ್ತು ಕ್ರಮಕ್ಕೆ ಆಗ್ರಹಿಸಿ ತಹಶೀಲ್ದಾರ್ ಶಿರಿನ್ ತಾಜ್ ಅವರಿಗೆ ಮನವಿ

ಶ್ರೀನಿವಾಸಪುರ: ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ ಸರ್ಕಾರಿ ನೌಕರರ ಸಮನ್ವಯ
ಸಮತಿಯ ತಾಲ್ಲೂಕು ಘಟಕದ ಪದಾಧಿಕಾರಿಗಳು, ಅರಕಲಗೋಡು ಅಕ್ಷರ
ದಾಸೋಹ ನಿರ್ದೇಶಕರ ವಿರುದ್ಧ ಕ್ರಮ ಶಿಸ್ತು ಕ್ರಮ ಕೈಗೊಳ್ಳುವಂತೆ
ಆಗ್ರಹಿಸಿ ಶುಕ್ರವಾರ ತಹಶೀಲ್ದಾರ್ ಶಿರಿನ್ ತಾಜ್ ಅವರಿಗೆ ಮನವಿ ಪತ್ರ ನೀಡಿದರು.
  ಸಮಿತಿಯ ಉಪಾಧ್ಯಕ್ಷ ಎಚ್.ವಿ.ಅಶೋಕ್ ಮಾತನಾಡಿ ಅರಕಲಗೋಡು ಅಕ್ಷರ
ದಾಸೋಹ ನಿರ್ದೇಶಕ ಶಿವಕುಮಾರ್, ಅರಕಲಗೋಡು ಬಿಇಒ ಕಚೇರಿಯಲ್ಲಿ
ಗಿರಿಜಾನಂದ ಮುಂಬಳೆ ಅವರನ್ನು ಅವಾಚ್ಯ ಶಬ್ದ ಬಳಸಿ ಜಾತಿ ನಿಂದನೆ ಮಾಡಿದ್ದಾರೆ.
ಬೂಟು ಕಾಲಿನಿಂದ ಒದ್ದು ಕೈ ಮುರಿದಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ
ಗಿರಿಜಾನಂದ ಮುಂಬಳೆ ಹಾಸನದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ
ಪಡೆಯುತ್ತಿದ್ದಾರೆ.
  ಘಟನೆಗೆ ಸಂಬಂಧಿಸಿದಂತೆ ಅರಕಲಗೋಡು ಪೊಲೀಸ್ ಠಾಣೆಯಲ್ಲಿ
ಮೊಕದ್ದಮೆ ದಾಖಲಾಗಿದೆ. ಎಫ್‍ಐಆರ್ ಮಾಡಲಾಗಿದೆ. ಆದ್ದರಿಂದ ಗಿಜಾನಂದ ಮುಂಬಳೆ
ಅವರ ಮೇಲೆ ಹಲ್ಲೆ ನಡೆಸಿರುವ ಅಕ್ಷರ ದಾಸೋಹ ನಿರ್ದೇಶಕ ಶಿವಕುಮಾರ್
ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
  ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ರಾಮಾಂಜನೇಯ, ಗೌರವಾಧ್ಯಕ್ಷ
ಕೃಷ್ಣಪ್ಪ, ಮುಖಂಡರಾದ ಎಚ್.ವಿ.ಅಶೋಕ್, ಎಂ.ಸಿ.ಕೃಷ್ಣಪ್ಪ, ಹರೀಶ್ ಬಾಬು
ಇದ್ದರು.

ಕೋಲಾರ ನಗರದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು,ಚರಂಡಿಯಲ್ಲಿ, ರಸ್ತೆಯಲ್ಲಿ ಕಸದ ರಾಶಿ ಸಮಸ್ಯೆ ಪರಿಹರಿಸಲು ರೈತ ಸಂಘ ಒತ್ತಾಯ

ಕೋಲಾರ ಸೆಪ್ಟೆಂಬರ್ 30 : ಕೋಲಾರ ನಗರದ ರಸ್ತೆಗಳು ಸಂಪೂರ್ಣ
ಹಾಳಾಗಿದ್ದು, ನಗರದಲ್ಲಿ ಕಸದ ರಾಶಿಗಳು, ಚರಂಡಿ ತುಂಬಿಕೊಂಡು
ಗಬ್ಬುನಾರುತ್ತಿದ್ದು ಶೀಘ್ರವಾಗಿ ಸಮಸೆ ಬಗೆಹರಿಸಲು ಕೋರಿ ನಗರಸಭಾ
ಪೌರಾಯುಕ್ತರಿಗೆ ಮನವಿಯನ್ನು ನಮ್ಮ ಕೋಲಾರ ರೈತ ಸಂಘವು ಮನವಿ
ನೀಡಿದರು.
ಅಮೃತ್‍ಸಿಟಿ ಯೋಜನೆಯಲ್ಲಿ ಕೋಲಾರ ನಗರದ ಎಲ್ಲಾ ರಸ್ತೆಗಳನ್ನು
ಅಗೆದು ಅದಕ್ಕೆ ತೇಪೆ ಹಾಕುವ ಕೆಲಸ ಮಾಡಿದ್ದು, ಪ್ರಮುಖ ರಸ್ತೆಗಳಾದ
ಎಂ.ಜಿ.ರಸ್ತೆ ಮತ್ತು ದೊಡ್ಡಪೇಟೆ ಪೇಟೆ ರಸ್ತೆಗಳನ್ನು ಹೊರತುಪಡಿಸಿದರೆ
ನಗರದ ಎಲ್ಲಾ ರಸ್ತೆಗಳು ಹಾಕಿರುವ ತೇಪೆ ಕಿತ್ತು ಹೋಗಿದ್ದು, ಹಳ್ಳಗಳಿಂದ
ಕೂಡಿರುತ್ತದೆ. ನಗರ ದೇವತೆ ಕೋಲಾರಮ್ಮ ದೇವಾಲಯವನ್ನು ವೀಕ್ಷಣೆ
ಮಾಡಲು ರಾಜ್ಯದ ನಾನಾ ಭಾಗಗಳಿಂದ ಬರುವ ಜನರು ರಸ್ತೆಗಳನ್ನು ನೋಡಿ
ಇದು ಹಳ್ಳಿನಾ ಇಲ್ಲಾ ನಗರನಾ ಎಂದು ಅಪಹಾಸ್ಯ ಮಾಡುತ್ತಾರೆ.
ಕೋಲಾರ ನಗರದ ಕೋಲಾರಮ್ಮ ದೇವಸ್ಥಾನದ ರಸ್ತೆ, ಗೌರಿಪೇಟೆ
ರಸ್ತೆಗಳು, ಕಠಾರಿಪಾಳ್ಯ, ಸುಣ್ಣಕಲ್ಲುಬೀದಿ, ಕಾರಂಜಿಕಟ್ಟೆ ರಸ್ತೆ,
ದೇವಾಂಗಪೇಟೆ ರಸ್ತೆಗಳು, ಅರಳೆಪೇಟೆ, ಬಂಬುಬಜಾರ್, ಪಾಲಸಂದ್ರ ಲೇಔಟ್,
ಸ್ವಾಮಿ ಲೇಔಟ್, ಗಂಗಮ್ಮನಪಾಳ್ಯ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದೆ.
ನಗರದ ಎಲ್ಲಾ ವಾರ್ಡುಗಳಲ್ಲಿ ಕಸದ ವಿಲೇವಾರಿ ಸರಿಯಾಗಿ ಆಗದೆ ಕಸರ ರಾಶಿ ಬಿದ್ದಿದೆ.
ಅದೇ ರೀತಿ ಚರಂಡಿಗಳು ತುಂಬಿಕೊಂಡು ನಗರವು ಗಬ್ಬು ನಾರುತ್ತಿದೆ.
ವಾಸನೆಗೆ ಜನರು ಮೂಗು ಮುಚ್ಚಿಕೊಂಡು ತಿರುಗಾಡಬೇಕಾಗಿದೆ ಅಲ್ಲದೆ ಇದರಿಂದ
ಸೊಳ್ಳೆಗಳು ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ
ಹೆಚ್ಚಾಗಿದೆ. ಶೀಘ್ರವಾಗಿ ನಗರದ ರಸ್ತೆಗಳಿಗೆ ಡಾಂಬರೀಕರಣ ಮಾಡಿಸಿ, ನಗರದ
ಕಸವನ್ನು ತೆರವುಗೊಳಿಸಿ ಚರಂಡಿಗಳನ್ನು ಸ್ವಚ್ಚಗೊಳಿಸಲು ಮನವಿ
ಮಾಡಿದರು.
ಕೋಲಾರ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಶೀಘ್ರ ಬೀದಿ
ನಾಯಿಗಳನ್ನು ಹಿಡಿದು ಸಂತಾನಹರಣ ಚಿಕಿತ್ಸೆ ಮಾಡಿಸಿ, ಸುರಕ್ಷಿತ ಪ್ರಾಣಿದಯ
ಸಂಘಕ್ಕೆ ಒಪ್ಪಿಸಬೇಕು. ಕೋಲಾರ ನಗರದಲ್ಲಿ ಬೀದಿ ದೀಪಗಳು ಸರಿಯಾಗಿ
ನಿರ್ವಹಣೆ ಮಾಡದೇ ಬಹಳಷ್ಟು ಕಡೆ ಬೀದಿ ದೀಪಗಳು ಇಲ್ಲದೆ ಕತ್ತಲೆಯಿಂದ
ಕೂಡಿರುತ್ತದೆ ಶೀಘ್ರವಾಗಿ ಕೆಟ್ಟು ನಿಂತಿರುವ ಬೀದಿ ದೀಪಗಳನ್ನು ದುರಸ್ತಿ
ಮಾಡಲು ಕೋರಿದರು. ಅದೇ ರೀತಿ ಕೋಲಾರ ನಗರದಲ್ಲಿ ಹಲವು ಶುದ್ಧ
ಕುಡಿಯುವ ನೀರಿನ ಘಟಕಗಳು ಕೆಟ್ಟು ಹೋಗಿದೆ ಉದಾಹರಣೆಗೆ ಕೋಲಾರಮ್ಮ
ಬಡಾವಣೆಯ ಸೊಪ್ಪಿನ ತೋಟದ 3ನೇ ವಾರ್ಡಿನಲ್ಲಿ ಕೆಟ್ಟುಹೋಗಿದೆ ಸುಮಾರು 10
ತಿಂಗಳಿನಿಂದ ದುರಸ್ತಿ ಮಾಡದೇ ಇರುವುದರಿಂದ ಅಲ್ಲಿನ ನಿವಾಸಿಗಳಿಗೆ ಕುಡಿಯುವ
ನೀರಿನ ಸಮಸ್ಯೆ ಎದುರಾಗಿದೆ. ತಕ್ಷಣ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿ
ಮಾಡಿ ಕುಡಿಯುವ ನೀರು ಒದಗಿಸಲು ಕೋರಿದ್ದಾರೆ.
ಈ ಸಂದರ್ಭದಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಕೋಟಿಗಾನಹಳ್ಳಿ ಗಣೇಶ್‍ಗೌಡ,
ರಾಜ್ಯ ಗೌರವಾಧ್ಯಕ್ಷ ಕೆ.ಸಿ.ಪಿ.ನಾಗರಾಜ್, ಜಿಲ್ಲಾಧ್ಯಕ್ಷ ಶಿವಕುಮಾರ್.ಕೆ.ವಿ., ಜಿಲ್ಲಾ
ಗೌರವಾಧ್ಯಕ್ಷ ಕೆಂಬೋಡಿ ಕೃμÉ್ಣೀಗೌಡ, ಸಾಮಾಜಿಕ ಕಾರ್ಯಕರ್ತ ಗೌರಿಪೇಟೆ
ಕೆ.ಎನ್.ರವೀಂದ್ರನಾಥ್, ಜಿಲ್ಲಾ ಉಪಾಧ್ಯಕ್ಷ ವಿಶ್ವನಾಥಗೌಡ, ಜಿಲ್ಲಾ ಕಾರ್ಯಾಧ್ಯಕ್ಷ
ಕಾಮಧೇನಹಳ್ಳಿ ವೆಂಕಟಾಚಲಪತಿ, ಅಬ್ಬಣಿ ಮುನೇಗೌಡ, ಮುಳಬಾಗಿಲು
ತಾಲ್ಲೂಕು ರವೀಂದ್ರರೆಡ್ಡಿ, ಮುಳಬಾಗಿಲು ತಾಲ್ಲೂಕು ಕಾಯಾಧ್ಯಕ್ಷ ಕೆ.ಎಚ್.
ಮಂಜುನಾಥ್, ಗೋಪಾಲಪ್ಪ, ಮುಳಬಾಗಿಲು ತಾಲ್ಲೂಕು ಗೌರವಾಧ್ಯಕ್ಷ
ವೆಂಕಟಮುನಿರೆಡ್ಡಿ, ಕೋಲಾರ ತಾಲ್ಲೂಕು ಅಧ್ಯಕ್ಷ ತೌಶಿಕ್ ಪಾಷ, ಕೋಲಾರ
ತಾಲ್ಲೂಕು ಗೌರವಾಧ್ಯಕ್ಷ ಹೊಳಲಿ ನಾರಾಯಣಪ್ಪ, ಬಿ.ಎ.ಚಲಪತಿ, ತಮ್ಮೇಗೌಡ,
ಮಾರ್ಜೇನಹಳ್ಳಿ ನಾರಾಯಣಸ್ವಾಮಿ, ಮುಂತಾದವರು ಹಾಜರಿದ್ದರು.

ಶ್ರೀನಿವಾಸಪುರ ಪಟ್ಟಣದ ಕರ್ನಾಟಕ ಕೆ.ಐ.ಐ.ಟಿ. ವಾಣಿಜ್ಯಮತ್ತು ಕಂಪ್ಯೂಟರ್ ಶಿಕ್ಷಣ ಸಂಸ್ಥೆಗೆ 11 ಡಿಸ್ಟಿಂಗ್‍ಷನ್ಸ್ ನೊಂದಿಗೆ ಶೇಕಡ100ರಷ್ಟು ಫಲಿತಾಂಶ

ಶ್ರೀನಿವಾಸಪುರ: ಆಗಸ್ಟ್ ಮಾಹೆಯಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಕಂಪ್ಯೂಟರ್‍ OFFICE AUTOMATION ಪರೀಕ್ಷೆಗಳಲ್ಲಿ ಪಟ್ಟಣದ ಕರ್ನಾಟಕ ವಾಣಿಜ್ಯಮತ್ತು ಕಂಪ್ಯೂಟರ್ ಶಿಕ್ಷಣ ಸಂಸ್ಥೆಗೆ(ಕೆ.ಐ.ಐ.ಟಿ.) 11 ಡಿಸ್ಟಿಂಗ್‍ಷನ್ಸ್ ನೊಂದಿಗೆ (PÉ.L.L.n.) ಶೇಕಡ100ರಷ್ಟು ಫಲಿತಾಂಶ ದೊರೆತಿದೆಎಂದುಸಂಸ್ಥೆಯ ಪ್ರಾಂಶುಪಾಲರಾದಎನ್. ಕೃಷ್ಣಮೂರ್ತಿ ತಿಳಿಸಿದ್ದಾರೆ.
ಪಟ್ಟಣದಎಂ.ಜಿ.ರಸ್ತೆಯಲ್ಲಿರುವಕರ್ನಾಟಕ ವಾಣಿಜ್ಯ ಮತ್ತುಕಂಪ್ಯೂಟರ್ ಶಿಕ್ಷಣ ಸಂಸ್ಥೆಗೆ (ಕೆ.ಐ.ಐ.ಟಿ.) ಕಳೆದಆಗಸ್ಟ್‍ಮಾಹೆಯಲ್ಲಿರಾಜ್ಯಮಟ್ಟದಲ್ಲಿಕರ್ನಾಟಕ ಪ್ರೌಡಶಿಕ್ಷಣ ಪರೀಕ್ಷ ಮಂಡಳಿಯು ನಡೆಸಿದ ಕಂಪ್ಯೂಟರ್‍ OFFICE AUTOMATION ಪರೀಕ್ಷೆಗೆ ಶಾಲೆಯಿಂದಒಟ್ಟು50 ಅಭ್ಯರ್ಥಿಗಳು ಹಾಜರಾಗಿದ್ದು, ಇವರಲ್ಲಿ11 ಡಿಸ್ಟಿಂಗ್‍ಷನ್ಸ್, ಪ್ರಥಮ ದರ್ಜೆಯಲ್ಲಿ-27, ದ್ವಿತೀಯದರ್ಜೆಯಲ್ಲಿ11, ತೃತೀಯದರ್ಜೆಯಲ್ಲಿ01ಅಭ್ಯರ್ಥಿ ತೇರ್ಗಡೆಹೊಂದಿದ್ದು, ಒಟ್ಟಾರೆ ಫಲಿತಾಂಶದಲ್ಲಿಬಾಲಕಿಯರೆ ಮೇಲ್ಗೈ ಸಾಧಿಸಿದ್ದು, ಶಾಲೆಗೆ ಶೇಕಡ100ರಷ್ಟು ಫಲಿತಾಂಶದೊರೆತಿದೆ.
ತೇರ್ಗಡೆ ಹೊಂದಿದಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ, ಶಾಲೆಗೆ ದೊರೆತಿರುವಉತ್ತಮ ಫಲಿತಾಂಶಕ್ಕೆಕಾರಣರಾದ ಬೋಧಕರನ್ನುಪ್ರಾಂಶುಪಾಲರಾದಎನ್. ಕೃಷ್ಣಮೂರ್ತಿ ಮತ್ತುಕೇಂದ್ರ ವ್ಯವಸ್ಥಾಪಕರಾದಆರ್. ರಾದಇವರುಅಭಿನಂದಿಸಿದ್ದಾರೆ.

ಮಕ್ಕಳಿಗೆ ಕರಕುಶಲ ವಸ್ತು ಪ್ರಾತ್ಯಕ್ಷಿತೆ ಮತ್ತು ಮಾಹಿತಿ ಶಿಬಿರ


ಜಾಗತೀಕರಣದಿಂದ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ಉಂಟಾಗಿ ನಮ್ಮ ಕುಟುಂಬ ವ್ಯವಸ್ಥೆಯಲ್ಲಿ ಅತೀವ ಬದಲಾವಣೆ ಕಾಣುತ್ತಿದ್ದು, ಅನೇಕ ಪದ್ಧತಿ, ಸಂಪ್ರಾದಾಯ, ರೀತಿ-ನೀತಿ, ಹಬ್ಬ-ಹರಿದಿನದ ಔಚಿತ್ಯ ಸಂಪೂರ್ಣ ಅವಸಾನಗೊಂಡಿದೆ. ಅದರೊಂದಿಗೆ ನಮಗೆ ಸಮಯ ಸದ್ವಿನಿಯೋಗ ಮಾಡುವ ಯಾವುದೇ ಪರಿಪಾಠ ಶಾಲೆಯಲ್ಲಿ ಸಿಗುತ್ತಿಲ್ಲ. ಇಂತಹ ಪ್ರವೃತ್ತಿಯನ್ನು ಬೆಳೆಸುವ ಪ್ರಯತ್ನವೇ ಮಕ್ಕಳಿಗೆ ಕರಕುಶಲ ವಸ್ತು ಪ್ರಾತ್ಯಕ್ಷಿತೆ ಮತ್ತು ಮಾಹಿತಿ ಶಿಬಿರ ಆಗಿರುತ್ತದೆ. ಇದರಿಂದ ಮಕ್ಕಳಲ್ಲಿ ಏಕಾಗ್ರತೆ ಮತ್ತು ಹೊಂದಾಣಿಕೆ ಮನೋಭಾವನೆ ಬೆಳೆದು ಸೌಹಾರ್ದತೆ ಬೆಳೆಯುತ್ತದೆ ಎಂದು ಲಯನ್ ಶ್ರೀ ವಸಂತ್ ಶೆಟ್ಟಿ, ಅಧ್ಯಕ್ಷರು ಲಯನ್ಸ್ ಕ್ಲಬ್ ಆರ್ಡಿ ಬೆಳ್ವೆ ಗೋಳಿಯಂಗಡಿ ಇವರು ಹೇಳಿದರು.
ಅವರು ಇತ್ತೀಚೆಗೆ ಅಭಿವೃದ್ಧಿ ಸಂಸ್ಥೆ ಬಾಳ್ಕುದ್ರು ಹಂಗಾರಕಟ್ಟೆ ಲಯನ್ಸ್ ಕ್ಲಬ್ ಆರ್ಡಿ ಬೆಳ್ವೆ ಗೋಳಿಯಂಗಡಿ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಬೆಳ್ವೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ಮಕ್ಕಳಿಗೆ ಕರಕುಶಲ ವಸ್ತು ಪ್ರಾತ್ಯಕ್ಷಿತೆ ಮತ್ತು ಮಾಹಿತಿ ಶಿಬಿರ 2022 ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಲಯನ್ ಶ್ರೀ ರಾಜೇಂದ್ರ ಕಿಣಿ, ಸ್ಥಾಪಕಾಧ್ಯಕ್ಷರು, ಲಯನ್ಸ್ ಕ್ಲಬ್ ಆರ್ಡಿ ಬೆಳ್ವೆ ಗೋಳಿಯಂಗಡಿ ಮಾತಾಡಿ ಮಕ್ಕಳಲ್ಲಿ ಸೃಜನಶೀಲತೆಯನ್ನು ಶಾಲಾ ಹಂತದಲ್ಲೇ ಬೆಳೆಸುವುದು. ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ಒಂದು ದಿನದಲ್ಲಿ ಕಲಿಸುವ ಕರಕುಶಲ ವಸ್ತು ತಯಾರಿಕೆ ಮುಂದೆ ಜೀವನೋಪಾಯಕ್ಕೆ ಪೂರಕವಾಗಲಿದೆ. ಅದರಲ್ಲೂ ಮುಖ್ಯವಾಗಿ ಉಬ್ಬು ಶಿಲ್ಪ, ಸ್ಪಂಜಿನಿಂದ ಕಲಾಕೃತಿ, ಪೇಪರ್ ಬ್ಯಾಗ್ ಇನ್ನಿತರ ಕಲಾಕೃತಿ ತಯಾರಿಕೆಯಲ್ಲಿ ಅಭೂತಪೂರ್ವ ಗಮನ ಕೇಂದ್ರಿಕೃತವಾಗಿ ಸಹನಾಶೀಲತೆ, ಏಕಾಗ್ರತೆ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು.
ಸಭಾಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಶ್ರೀ ಗಣಪು ನಾಯ್ಕ್ ನಿರ್ವಹಿಸಿ ಇಂತಹ ಮಾಹಿತಿ ಶಿಬಿರಗಳಿಂದ ನಮ್ಮಲ್ಲಿರುವ ಕಲಾತ್ಮಕತೆ ಅನಾವರಣಗೊಳ್ಳುತ್ತದೆ. ಮಕ್ಕಳ ಪ್ರತಿಭೆ ಹಾಗೂ ಕೌಶಲ್ಯ ಸಾಕಾರಗೊಳಿಸಲು ಇದು ತುಂಬಾ ಸಹಕಾರಿ ಎಂದು ಅಭಿಪ್ರಾಯಪಟ್ಟರು. ಸಭೆಯಲ್ಲಿ ಶ್ರೀ ಜಯರಾಮ್ ಶೆಟ್ಟಿ, ಅಧ್ಯಕ್ಷರು ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ಬೆಳ್ವೆ, ಲಯನ್ ಶ್ರೀ ಅಣ್ಣಯ್ಯ ಶೆಟ್ಟಿ, ಕಾರ್ಯದರ್ಶಿ, ಲಯನ್ಸ್ ಕ್ಲಬ್ ಆರ್ಡಿ ಬೆಳ್ವೆ ಗೋಳಿಯಂಗಡಿ, ಲಯನ್ ಶ್ರೀ ಬಾಬು ಶೆಟ್ಟಿ, ಕೋಶಾಧಿಕಾರಿ, ಲಯನ್ಸ್ ಕ್ಲಬ್ ಆರ್ಡಿ ಬೆಳ್ವೆ ಗೋಳಿಯಂಗಡಿ, ಶ್ರೀಮತಿ ಜಯಶ್ರೀ ಮುಖ್ಯ ಶಿಕ್ಷಕರು ಸರಕಾರಿ ಮಾ.ಹಿ.ಪ್ರಾ ಶಾಲೆ, ಬೆಳ್ವೆ, ಶ್ರೀಮತಿ ಚಂದ್ರಕಲಾ, ಶ್ರೀಮತಿ ತೀರ್ಥಕಲಾ, ಶ್ರೀ ರಮೇಶ್ ವಕ್ವಾಡಿ ಕಾರ್ಯದರ್ಶಿ ಅಭಿವೃದ್ಧಿ ಸಂಸ್ಥೆ (ರಿ), ಹಂಗಾರಕಟ್ಟೆ, ಬೆಳ್ವೆಯ ಖ್ಯಾತ ಉದ್ಯಮಿ ಮಹಮ್ಮದ್ ಮುಸ್ತಾಕ್ ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಕು| ಅನಿಶಾ ಪೇತ್ರಿ ಉದ್ಘಾಟಿಸಿ, ರಮೇಶ್ ವಕ್ವಾಡಿ ಪ್ರಾಸ್ತಾವನೆ ಮಾಡಿ, ಶ್ರೀಮತಿ ಜಯಶ್ರೀ ಮುಖ್ಯ ಶಿಕ್ಷಕರು ಸ್ವಾಗತಿಸಿದರು. ಸುಮಾರು 68 ವಿದ್ಯಾರ್ಥಿಗಳು ಈ ಶಿಬಿರದಿಂದ ಪ್ರಯೋಜನ ಪಡೆದರು.

ಶುಕ್ರವಾರ ಕೋಲಾರಕ್ಕೆ ಕೇಂದ್ರ ಸಚಿವೆ ನಿರ್ಮಾಲ ಸೀತಾರಾಮನ್
ಜಿಲ್ಲೆಯ ಕೆರೆ ಅಭಿವೃದ್ದಿ ಕಾಮಗಾರಿಗಳ ವೀಕ್ಷಣೆ-ಸಂಸದ ಮುನಿಸ್ವಾಮಿ

ಕೋಲಾರ:- ಕೇಂದ್ರ ಸಚಿವರಾದ ನಿರ್ಮಾಲ ಸೀತಾರಾಮನ್ ಅವರು ಶುಕ್ರವಾರ ಕೋಲಾರ ಜಿಲ್ಲೆಗೆ ಭೇಟಿ ನೀಡಿ ಕೇಂದ್ರ ಸರ್ಕಾರದ ಅಮೃತಯೋಜನಾ ಅಡಿಯಲ್ಲಿ 75 ಕೆರೆಗಳ ಅಭಿವೃದ್ದಿ ಕಾಮಗಾರಿಗಳನ್ನು ವೀಕ್ಷಿಸಲಿದ್ದಾರೆ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.
ನಗರದ ಒಳಕ್ರೀಡಾಂಗಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಂ.ಪಿ.ಆರ್.ಎಲ್.ಡಿ. ಅನುಧಾನದಲ್ಲಿ 1.83 ಕೋಟಿ ರೂ, ಸಿ.ಎಸ್.ಆರ್. ಅನುದಾನದಲ್ಲಿ 9.40 ಕೋಟಿ ರೂ ಸೇರಿದಂತೆ 11.23 ಕೋಟಿ ರೂಗಳ ವೆಚ್ಚದಲ್ಲಿ ಜಿಲ್ಲೆಯ 6 ವಿಧಾನ ಸಭಾ ಕ್ಷೇತ್ರಗಳಲ್ಲಿ ಕೆರೆಗಳ ಅಭಿವೃದ್ದಿ ಪಡೆಸಿರುವುದನ್ನು ವೀಕ್ಷಿಸಲು ಆಗಮಿಸಿತ್ತಿರುವರು ಎಂದು ಹೇಳಿದರು.
ಬಂಗಾರಪೇಟೆ, ಬೇತಮಂಗಲ ಹಾಗೂ ಕೋಲಾರ ವ್ಯಾಪ್ತಿಯಲ್ಲಿನ ಪ್ರಮುಖ ಕೆರೆಗಳನ್ನು ವೀಕ್ಷಿಸಲಿದ್ದಾರೆ. ರಾಮಸಂದ್ರ, ಬಂಗಾರಪೇಟೆ, ಕಮ್ಮಸಂದ್ರ, ಸೋಲಿಕೋಟೆ, ಪಾರ್ಶಗಾನಹಳ್ಳಿ,ಕೋಲಾರದ ಎ.ಪಿ.ಎಂ.ಸಿ. ಮೂಲಕ ಪ್ರವಾಸಿ ಮಂದಿರಕ್ಕೆ ಅಗಮಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಎ.ಪಿ.ಎಂ.ಸಿ ಮಾರ್ಗದ ಮೂಲಕ ಸ್ಯಾನಿಟೋರಿಯಮ್‍ವರೆಗೆ ರಸ್ತೆ ಮಾರ್ಗದಲ್ಲಿ ವಾಹನಗಳ ಅಡಚಣೆ ಇರದಂತೆ ಸ್ವಚ್ಚತೆ ಕಾಪಾಡಲು ಸಂಬಂಧ ಪಟ್ಟ ಅಧಿಕಾರಿಗಳಾದ ಎ.ಪಿ.ಎಂ.ಸಿ. ನಗರಸಭೆ ಪೌರಾಯುಕ್ತರಿಗೆ ಹಾಗೂ ನಗರ ಪೊಲೀಸ್ ಠಾಣೆಯ ಸಿ.ಪಿ.ಐ. ಸುರೇಶ್ ಅವರಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಯಾವ,ಯಾವ ಕೆರೆ ವೀಕ್ಷಿಸಲಿದ್ದಾರೋ ಆ ಭಾಗದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಜರಿದ್ದು ವಿವರಗಳನ್ನು ನೀಡಲು ಜಿಲ್ಲಾ ಪಂಚಾಯತ್ ಸಿ.ಇ.ಓ ಯುಕೇಶ್ ಕುಮಾರ್ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿ.ಪಿ.ಐ. ಹರೀಶ್, ಪೌರಾಯುಕ್ತೆ ಸುಮ, ಡಿ.ಹೆಚ್.ಓ. ಡಾ. ಜಗಧೀಶ್, ಪಿ.ಯು. ಉಪನಿರ್ದೇಶಕ ರಾಮಚಂದ್ರ, ಎ.ಪಿ.ಎಂ.ಸಿ. ಅಧಿಕಾರಿ ವಿಶ್ವನಾಥ್, ಮುಖಂಡರಾದ ಅಪ್ಪಿನಾರಾಯಣಸ್ವಾಮಿ, ಮು.ರಾಘುವೇಂದ್ರ, ಮಂಜುನಾಥ್, ಮಮತಮ್ಮ, ರೈತ ಸಂಘದ ಕಲ್ಮಂಜಲಿ ಶಿವಕುಮಾರ್ ಮುಂತಾದವರು ಹಾಜರಿದ್ದರು.

ಅರಸು ನರ್ಸಿಂಗ್ ಕಾಲೇಜಿನಲ್ಲಿ ಹೃದಯ ದಿನಾಚರಣೆ

ಕೋಲಾರ:- ನಗರದ ಶ್ರೀ ದೇವರಾಜ್ ಅರಸ್ ನರ್ಸಿಂಗ್ ಕಾಲೇಜಿನ ವೈದ್ಯಕೀಯ ಶಾಸ ಚಿಕಿತ್ಸೆ ಶುಶ್ರೂóóಷ ವಿಭಾಗದವರಿಂದ ಸೆ.29 ಗುರುವಾರ ವಿಶ್ವ ಹೃದಯ ದಿನಚರಣೆಯನ್ನು ಶ್ರೀ ದೇವರಾಜ್ ಅರಸ್ ವಿಶ್ವ ವಿದ್ಯಾಲಯದ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ವೈದ್ಯಕೀಯ ವಿಭಾಗ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ, ಡಾ. ರವೀಶ್ ಭಾಗವಹಿಸಿ ಮಾತನಾಡಿ, ಪ್ರತಿ ಹೃದಯಕ್ಕಾಗಿ ಹೃದಯವನ್ನು ಬಳಸಿ ಎಂಬ ವಿಷಯ ಕುರಿತು ಮಾತನಾಡುತ್ತಾ ಶೇ.80 ಹೃದಯ ರೋಗಗಳನ್ನು ನಮ್ಮ ಜೀವನ ಶೈಲಿ ಬದಲಾಯಿಸುವುದರ ಮೂಲಕ ತಡೆಗಟ್ಟಬಹುದು ಎಂದರು.
ಜೀವನ ಶೈಲಿಯನ್ನು ಈ ದಿನಗಳಲ್ಲಿ ನಾವು ಬದಲಾವಣೆಯನ್ನು ಮಾಡಬೇಕಾಗಿದೆ ಅನಾರೋಗ್ಯಕರ ಆಹಾರ ಸೇವನೆ, ಕಂಪ್ಯೂಟರ್, ಮೋಬೈಲ್ ಬಳಕೆಯಿಂದ ದೈಹಿಕ ನಿಷ್ಕ್ರಯತೆ, ಹಾನಿಕಾರಕ ಮದ್ಯದ ಬಳಕೆಗಳಲ್ಲಿ ಹೆಚ್ಚು ಆಸಕ್ತಿತಿ ಹೊಂದಿದ್ದೇವೆ ಇದನ್ನು ಬಿಟ್ಟು ರಾಗಿ ಮುದ್ದೆ, ಹಣ್ಣುಗಳು, ಹಸಿರು ತರಕಾರಿ ಬಳಸಿ ಹಾಗೂ ದಿನ ನಿತ್ಯ ವ್ಯಾಯಾಮ ಮಾಡುವುದರಿಂದ ನಮ್ಮ ಹೃದಯವನ್ನು ರಕ್ಷಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.
ಆರ್‍ಎಲ್‍ಜೆ ನರ್ಸಿಂಗ್ ಆಸ್ಪತ್ರೆಯ ನರ್ಸಿಂಗ್ ಅಧಿಕಾರಿ ಡಾ.ಜೀನತ್ ವರದಿ ಮಂಡಿಸಿದರು.
ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ. ವಿಜಯಲಕ್ಮಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ಗೀತಾ ನಿರೂಪಿಸಿ, ರಷ್ಮಿ ವಂದಿಸಿದರು.

ಮಳೆ ಮುನ್ಸೂಚನೆ ಹಿನ್ನಲೆ ಅ.2 ರ ರಕ್ತದಾನ, ಅಂಗಾಂಗದಾನ ಶಿಬಿರ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಸಲು ಸಿದ್ದತೆ-ಸಂಸದ ಮುನಿಸ್ವಾಮಿ ಪರಿಶೀಲನೆ

ಕೋಲಾರ:- ಹವಾಮಾನ ಇಲಾಖೆ ಅ.2 ರಂದು ಮಳೆಯ ಮುನ್ಸೂಚನೆ ನೀಡಿರುವ ಹಿನ್ನಲೆಯಲ್ಲಿ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸಲು ಉದ್ದೇಶಿಸಿದ್ದ ಬೃಹತ್ ರಕ್ತದಾನ ಹಾಗೂ ಅಂಗಾಂಗ ದಾನ ನೋಂದಣಿ ಶಿಬಿರವನ್ನು ಒಳಂಗಾಣ ಕ್ರೀಡಾಂಗಣ ಹಾಗೂ ಜೂನಿಯರ್ ಕಾಲೇಜಿನ ಹೊಸ ಕಟ್ಟಡದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.
ಈ ಸಂಬಂಧ ಒಳಾಂಗಣ ಕ್ರೀಡಾಂಗಣ ಹಾಗೂ ಜೂನಿಯರ್ ಕಾಲೇಜು ಆವರಣದಲ್ಲಿನ ಕೊಠಡಿಗಳ ಲಭ್ಯತೆ ಕುರಿತು ಪರಿಶೀಲಿಸಿದ ನಂತರ ಅಧಿಕಾರಿಗಳೊಂದಿಗೆ ಅವರು ಮಾತನಾಡುತ್ತಿದ್ದರು.
ರಕ್ತದ ಕೊರತೆಯಿಂದ ಇಂದು ಅನೇಕರು ಜೀವ ಕಳೆದುಕೊಳ್ಳುತ್ತಿದ್ದಾರೆ, ಆರೋಗ್ಯ ಇಲಾಖೆಯ ವರದಿ ಪ್ರಕಾರ ಜಿಲ್ಲೆಗೆ ಪ್ರತಿ ತಿಂಗಳು 1200 ಯುನಿಟ್ ರಕ್ತದ ಅಗತ್ಯವಿದೆ, ಇದರ ಜತೆಗೆ ರಕ್ಷಣಾ ಇಲಾಖೆ ರಕ್ತನಿಧಿ, ರಾಷ್ಟ್ರೋತ್ಥಾನ ಪರಿಷತ್ ರಕ್ತನಿಧಿ, ಜಾಲಪ್ಪ ಆಸ್ಪತ್ರೆಯ ರಕ್ತನಿಧಿ, ಜಿಲ್ಲಾಸ್ಪತ್ರೆಯ ರಕ್ತನಿಧಿ ಮತ್ತಿತರ ಸಂಸ್ಥೆಗಳಿಗೆ ರಕ್ತದ ಅಗತ್ಯತೆಗೆ ಅನುಗುಣವಾಗಿ ರಕ್ತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಒಳಾಂಗಣ ಕ್ರೀಡಾಂಗಣದಲ್ಲಿ 200 ಬೆಡ್‍ಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ ಎಂದ ಅವರು, ಇದರ ಜತೆಗೆ ಜೂನಿಯರ್ ಕಾಲೇಜಿನ ನೂತನ ಕಟ್ಟಡದ ಕೊಠಡಿಗಳಲ್ಲಿ 100 ಹಾಸಿಗೆಗಳಿಗೆ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.
ರಕ್ತದಾನಿಗಳಿಗೆ ರಕ್ತ ಕೊಟ್ಟ ನಂತರ ಹಣ್ಣು,ಜ್ಯೂಸ್ ವಿತರಿಸಲು ಕ್ರಮವಹಿಸಲಾಗಿದೆ, ದಾನಿಗಳ ಸಂಖ್ಯೆಗೆ ಅನುಗುಣವಾಗಿ ಗ್ರೂಪ್ ಫೋಟೋ ತೆಗೆಸಿಕೊಳ್ಳಲು ಒಳಾಂಗಣ ಕ್ರೀಡಾಂಗಣದಲ್ಲಿನ ವೀಕ್ಷಕರ ಆಸನಗಳ ಸಮೀಪ ವ್ಯವಸ್ಥೆ ಮಾಡಲಾಗಿದೆ.

ಅಂಗಾಂಗ ದಾನಕ್ಕೆ ನೋಂದಣಿ ಕಾರ್ಯ


ಒಳಾಂಗಣ ಕ್ರೀಡಾಂಗಣದ ಮುಂಭಾಗ ಮಳೆಗೆ ರಕ್ಷಣೆ ನೀಡುವಂತಹ ಜರ್ಮನ್ ಶೆಡ್ ನಿರ್ಮಿಸಿ ಅಂಗಾಂಗ ದಾನಕ್ಕೆ ನೋಂದಣಿ ಮಾಡಿಸಲು ಬರುವವರಿಗೆ ಅಗತ್ಯ ಕೌಂಟರ್ ಸ್ಥಾಪಿಸಲು ಸೂಚಿಸಿದ ಅವರು, ಯಾವುದೇ ಗೊಂದಲಕ್ಕೆ ಅವಕಾಶ ನೀಡುವುದಿಲ್ಲ ಎಂದರು.
ಅಂಗಾಂಗ ದಾನಕ್ಕೆ ಕನಿಷ್ಟ 10 ಸಾವಿರಕ್ಕೂ ಹೆಚ್ಚು ಮಂದಿ ಹೆಸರು ನೋಂದಾಯಿಸುವ ನಿರೀಕ್ಷೆ ಇದ್ದು, ಇದೊಂದು ಅತ್ಯಂತ ಉಪಯುಕ್ತ ಕಾರ್ಯವಾಗಿದೆ, ಅಂಗಾಂಗ ದಾನದ ಜತೆಗೆ ವೈದ್ಯಕೀಯ ವಿದ್ಯಾರ್ಥಿಗಳ ಕಲಿಕೆಗೆ ನೆರವಾಗಲು ದೇಹದಾನ ನೀಡುವವರೂ ಸಹಾ ಹೆಸರು ನೋಂದಾಯಿಸಬಹುದಾಗಿದೆ ಎಂದರು.
ಅಂಗಾಂಗಗಳ ವೈಪಲ್ಯದಿಂದ ಅನೇಕರು ದೇಶದಲ್ಲಿ ಜೀವನ್ಮರಣದ ಸ್ಥಿತಿಯಲ್ಲಿದ್ದಾರೆ, ಅಂತಹ ಅನೇಕರಿಗೆ ನೆರವಾಗುವ ಆಶಯವಿದೆ ಜತೆಗೆ ಅಂಗಾಂಗ ದಾನವನ್ನು ವ್ಯಾಪಾರವಾಗಿಸುವುದನ್ನು ತಪ್ಪಿಸಲು ಇದೊಂದು ಉತ್ತಮ ಪ್ರಕ್ರಿಯೆ ಎಂದು ಭಾವಿಸಿರುವುದಾಗಿ ತಿಳಿಸಿದರು.

ವಾಹನ ನಿಲುಗಡೆಗೆ ಅಗತ್ಯ ವ್ಯವಸ್ಥೆ


ರಕ್ತದಾನ ನೀಡಲು ವಿದ್ಯಾರ್ಥಿಗಳು, ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಹೆಸರು ನೀಡಿದ್ದಾರೆ, ಇದರ ಜತೆಗೆ ನರಸಾಪುರ,ವೇಮಗಲ್,ಮಾಲೂರು ಕೈಗಾರಿಕಾ ಪ್ರದೇಶಗಳ ವಿವಿಧ ಕಂಪನಿಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು, ಅಧಿಕಾರಿಗಳು ರಕ್ತದಾನ ನೀಡಲು ಆಗಮಿಸಲಿದ್ದು, ಅವರು ಬರುವ ವಾಹನಗಳ ನಿಲುಗಡೆಗೆ ಜೂನಿಯರ್ ಕಾಲೇಜು ಮೈದಾನದಲ್ಲಿ ಅಗತ್ಯ ವ್ಯವಸ್ಥೆ ಮಾಡಲು ಪೊಲೀಸರಿಗೆ ಸೂಚಿಸಿದರು.
ಅ.2 ರಂದು ನಡೆಯುವ ಬೃಹತ್ ರಕ್ತದಾನ ಶಿಬಿರದ ಯಶಸ್ಸಿಗೆ ಜಿಲ್ಲಾಡಳಿತದ ಅಧಿಕಾರಿಗಳು ನೌಕರರು ಸಹಕಾರ ನೀಡುವಂತೆ ಕೋರಿದ ಅವರು, ಇದರೊಂದಿಗೆ ಸ್ವಯಂಪ್ರೇರಿತರಾಗಿ ರಕ್ತದಾನ ಮತ್ತು ಅಂಗಾಂಗದಾನದ ನೋಂದಣಿಗೆ ಬರುವವರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ಯುಕೇಶ್‍ಕುಮಾರ್, ದಿಶಾ ಸಮಿತಿ ಸದಸ್ಯ ಅಪ್ಪಿನಾರಾಯಣಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್, ಪಿಯು ಡಿಸಿ ರಾಮಚಂದ್ರಪ್ಪ, ನಗರಸಭೆ ಆಯುಕ್ತೆ ಸುಮಾ, ಜೂನಿಯರ್ ಕಾಲೇಜು ಪ್ರಾಂಶುಪಾಲ ನರಸಾಪುರ ಮಂಜುನಾಥ್, ವೃತ್ತ ನಿರೀಕ್ಷಕರಾದ ಹರೀಶ್‍ಕುಮಾರ್, ವೆಂಕಟರಮಣಪ್ಪ,ಬಿಜೆಪಿ ಮುಖಂಡರಾದ ಮು.ರಾಘವೇಂದ್ರ, ನಗರಸಭೆ ಆರೋಗ್ಯ ನಿರೀಕ್ಷಕರು ಸೇರಿದಂತೆ ಹಲವಾರು ಮಂದಿ ಅಧಿಕಾರಿಗಳು ಹಾಜರಿದ್ದರು.

ತಲ್ಲೂರಿನ ಸರಕಾರಿ ಪ್ರೌಢ ಶಾಲೆಯಲ್ಲಿ ನೂತನವಾಗಿ ಇಂಟರ್ಯಾಕ್ಟ ಕ್ಲಬ್ ಉದ್ಘಾಟನೆ.

ರೋಟರಿ ಕ್ಲಬ್ ಕುಂದಾಪುರ ದಕ್ಷಿಣವು ಮಾತೃ ಸಂಸ್ಥೆಯಾಗಿ ತಲ್ಲೂರಿನ ಸರಕಾರಿ ಪ್ರೌಢ ಶಾಲೆಯಲ್ಲಿ ಹೊಸದಾಗಿ ಇಂಟರ್ಯಾಕ್ಟ ಕ್ಲಬ್ ಪ್ರಾರಂಭಿಸಿದರು. ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ರೋ. ಸತ್ಯನಾರಾಯಣ ಪುರಾಣಿಕ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿದರು.
ಇಂಟರ್ಯಾಕ್ಟ ಸಂಯೋಜಕಿ ರೋ. ಜುಡಿತ್ ಮೆಂಡೋನ್ಸಾ ಇಂಟರ್ಯಾಕ್ಟ ಕ್ಲಬ್ ನ ಧ್ಯೇಯ ಉದ್ದೇಶಗಳ ಬಗ್ಗೆ ತಿಳಿಸಿದರು.ಕಾರ್ಯದರ್ಶಿ ಸಚಿನ್ ನಕ್ಕತ್ತಾಯ, ಶಾಲಾ ಮುಖ್ಯೋಪಾಧ್ಯಾಯ ಶ್ರೀಮತಿ ಬೀರಮ್ಮ ಹಾಗೂ ಶಿಕ್ಷಕರಾದ ಶ್ರೀ ಚೆನ್ನಯ್ಯ ಪಾಲ್ಗೊಂಡಿದ್ದರು.

ರೋಟರಿ ಕುಂದಾಪುರ ದಕ್ಷಿಣದ ಸದಸ್ಯರಾದ ರೋ. ಶೋಭಾ ಪಿ ಭಟ್ ತಮ್ಮ ಹುಟ್ಟು ಹಬ್ಬವನ್ನು ವಿಶೇಷ ಮಕ್ಕಳ ವಸತಿ ಶಾಲೆ ಮಾನಸ ಜ್ಯೋತಿಯಲ್ಲಿ ಹಣ್ಣು ಹಂಪಲು ಹಂಚಿ, ದೇಣಿಗೆಯನ್ನು ನೀಡಿ, ಮಕ್ಕಳೊಂದಿಗೆ ಆಚರಿಸಿಕೊಂಡರು.
ರೋಟರಿ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ, ಮಾಜಿ ಅಧ್ಯಕ್ಷರಾದ ರೋ. ಕೆ.ಪಿ.ಭಟ್ , ಕಾರ್ಯದರ್ಶಿ ರೋ. ಸಚಿನ್ ನಕ್ಕತ್ತಾಯ ಹಾಗೂ ಶೋಭಾ ಭಟ್ ರ ಮಕ್ಕಳು ಮತ್ತು ಮೊಮ್ಮಕ್ಕಳು ಪಾಲ್ಗೊಂಡಿದ್ದರು.