ಕುಂದಾಪುರ:ಮಾನವ ಬಂಧುತ್ವ ವೇದಿಕೆಯಿಂದ ಮಹಾತ್ಮ ಗಾಂಧಿಜಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

ಕುಂದಾಪುರ, ಅ. 3:ಮಾನವ ಬಂಧುತ್ವ ವೇದಿಕೆ ಕರ್ನಾಟಕರಾಜ್ಯ, ಕುಂದಾಪುರ ತಾಲೂಕು ಸಮಿತಿಯಿಂದ ಕೋಸ್ತಾ ಸದನ್ ಮಹಡಿ ಸಭಾಂಗಣದಲ್ಲಿ ಮಹಾತ ್ಮಗಾಂಧಿಜಿ ಮತ್ತು ಲಾಲ್ ಬಹುದ್ದೂರ್ ಜಯಂತಿ ಆಚರಣೆಯನ್ನು ನಡೆಸಲಾಯಿತು.
ಮಹಾತ್ಮ ಗಾಂಧಿಜಿ ಮತ್ತು ಲಾಲ್ ಬಹುದ್ದೂರ್ ಇವರುಗಳಿಗೆ ನಮನ ಮಾಡಿ ಪುಷ್ಪಾಚರಣೆ ಮಾಡಲಾಯಿತು. ಮಹಾತ್ಮಾ ಗಾಂಧಿಜಿ ಬಗ್ಗೆ ಸಮಾಜ ಸೇವಕ ಸಚಿದಾನಂದ ‘ಗಾಂಧಿಜಿ ನಮ್ಮ ದೇಶದ ಅಂತರಾಷ್ಟ್ರೀಯ ರಾಯಭಾರಿ, ದೇಶ ವಿದೇಶದಲ್ಲಿ ಹೆಚ್ಚಿನ ಗೋಷ್ಠಿಗಳು ಇವರ ಬಗ್ಗೆ ನಡೆಯುತ್ತವೆ, ಶೋಷಿತರು ದಲಿತರ ಮೇಲೆ ಇವರಿಗೆ ಎಲ್ಲಿಲದ ಕಾಳಜಿ ಇದ್ದವರು ಎಲ್ಲಾ ಸಮಾಜದ ಎಲ್ಲಾ ಬಾಂಧವರನ್ನು ಪ್ರೀತಿಸುತಿದ್ದರು’ ಎಂದು ಹೇಳಿದರು. ಲಾಲ್ ಬಹುದ್ದೂರ್ ಬಗ್ಗೆ ಶಿಕ್ಷಕರಾದ ಗಣೇಶ ಹೆಬ್ಬಾರ್ ಮಾತನಾಡಿ ‘ಲಾಲ್ ಬಹುದ್ದೂರ್ ಶಾಸ್ತ್ರಿ ಒಬ್ಬ ಪ್ರಮಾಣಿಕ ಬದ್ದತೆಗೆ ಪ್ರಖ್ಯಾತಿ ಹೊಂದಿದವರು, ದಿಟ್ಟ ನಿರ್ಧಾರ ತೆಗೆದುಕೊಳ್ಳುವರಲ್ಲಿ ಹೆಸರುವಾಸಿ, ಅವರು ಸ್ವಲಕಾಲ ಪ್ರಧಾನಿಯಾಗಿದ್ದರೂ ಜನಪ್ರಿ ಪ್ರಧಾನಿಯಾಗಿದ್ದರು, ಅವರು ಇನ್ನೂ ಹೆಚ್ಚಿನ ಕಾಲ ಬದುಕಿದ್ದರೆ, ಭಾರತದ ಭವಿಶ್ಯವನ್ನೆ ಬದಲಾಯಿಸುತ್ತಿದರು’ ಎಂದು ಹೇಳಿದರು. ವಿನಯಾಡಿಕೋಸ್ತಾ ಭಾಷಣಗಾರರನ್ನು ಪರಿಚಯಿಸಿದರು.

‘ಮಾನವ ಸಂಬಂಧಗಳು ಬೇರೆಯಬೇಕು, ಜಾತಿ ಧರ್ಮ ಮರೆತು ಮಾನವ ಬಂಧುತ್ವ ಬೆಳೆಯಬೇಕು, ಜನರಿಂದ ಮೂಢ ನಂಬಿಕೆ ದೂರವಾಗಬೇಕು ಶೋಷಣೆ ನಿವಾರಿಸಬೇಕು, ವರ್ಣಬೇದ ಸಲ್ಲದು, ಶಿಕ್ಷಣಕ್ಕೆ ಮಹತ್ವ ನೀಡಬೇಕು ಎಂಬುದು ಮಾನವ ಬಂಧುತ್ವ ವೇದಿಕೆಯ ಉದ್ದೇಶಗಳು’ ಎಂದು ಈ ವೇದಿಕೆಯ ಪರಿಕಲ್ಪನೆಯನ್ನು ಸಜ್ಜನ ರಾಜಕಾರಣಿ ಸಾಹುಕಾರ್ ಸತೀಶ್ ಜಾರಕಿ ಹೋಳಿಯವರಿಗೆ ತಿಳಿಸಿದ್ದು ಅವರ ಆಪ್ತರಾದ ರಾಜಕಾರಣಿ ಕಿರಣ್ ಜಿತ್ ರವರು ಅವರ ಧರ್ಮಪತ್ನಿಯಾದ ಜೆಸ್ವಿನಾ ಡಿಕೋಸ್ತಾ ಕಾರ್ಯಕ್ರಮದಲ್ಲಿ ಮಾನವ ಬಂಧುತ್ವ ವೇದಿಕೆಯ ಉದ್ದೇಶವನ್ನುಸಭಿಕರಿಗೆ ತಿಳಿಯಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷರಾದ ಸಮಾಜ ಸೇವಕ ಯುವ ರಾಜಾಕಾರಣಿ ಮಂಜೀತ್ ನಾಗರಾಜ್ ಮಹಾತ್ಮ ಗಾಂಧಿಜಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಇವರ ಬಗ್ಗೆ ಮಾತನಾಡಿ ಇವರಿಬ್ಬರೂ ಭಾರತದ ಮೇರು ನಾಯಕರು, ಇವತ್ತಿನ ದಿನ ಅಂತರಾಷ್ಟ್ರೀಯ ಸ್ಪೀಚ್ ಡೇ ಅನ್ನುತ್ತಾರೆ’ ಎಂದು ತಿಳಿಸಿದರು.
ಮಾನವ ಬಂಧುತ್ವ ವೇದಿಕೆ, ಕುಂದಾಪುರ ಸಮಿತಿಯ ಸಂಚಾಲಕ ಪತ್ರಕರ್ತ ಸಾಹಿತಿ ಬರ್ನಾಡ್‍ ಡಿಕೋಸ್ತಾ ಸ್ವಾಗತ ಕೋರಿದರು, ಕಾರ್ಯಕ್ರಮದ ಸಂಚಾಲಕಿ ಶೊಭಾ ಸಚಿದಾನಂದ ವಂದಿಸಿದರು. ಪ್ರಾದ್ಯಪಕ ಎಲ್ಡ್ರಿನ್ ಡಿಸೋಜಾ ನಿರೂಪಿಸಿದರು.

ಕುಂದಾಪುರ ಕಥೊಲಿಕ್ ಸಭಾದಿಂದ ಗಾಂಧಿಜಿ ಜಯಂತಿ ಆಚರಣೆ

ಕುಂದಾಪುರ, ಅ.3: ಕುಂದಾಪುರ ಕಥೊಲಿಕ್ ಸಭಾ ಘಟಕದಿಂದ ಗಾಂಧಿಜಿ ಜಯಂತಿಯನ್ನು ಕುಂದಾಪುರ ಚರ್ಚ್ ಸಭಾ ಭವನದಲ್ಲಿ ಆಚರಣೆ ಮಾಡಲಾಯಿತು.
ಕುಂದಾಪುರ ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಮಾತನಾಡಿ “ಗಾಂಧಿಜಿ ಅವರು ಸತ್ಯ, ಅಹಿಂಸೆ, ಸರಳತೆಗೆ ಖ್ಯಾತರಾದವರು, ಅವರು ನಮಗೆ ಅಹಿಂಸೆಯಿಂದಲೇ ಸ್ವಾತ್ರಂತ್ರ್ಯ ದೊರಕಿಸಿಕೊಟ್ಟ ಮಹಾನ ವ್ಯಕ್ತಿ. ಅವರೊಬ್ಬರು ಬಹು ಸರಳ ವ್ಯಕ್ತಿಯಾಗಿದ್ದು, ಭಾರತ ಜನರಿಗೆ ತೊಡಲು ಬಟ್ಟೆ ಇಲ್ಲದನ್ನು ತಿಳಿದು ಜೀವನ ಪರ್ಯಂತ ಮೇಲಿನ ಬಟ್ಟೆ ಧರಿಸದೆ ಜೀವಿಸಿದವರು, ಗಾಂಧಿಜಿಯ ಬಗ್ಗೆ ಇನ್ನೂ ಹಲವಾರು ವಿಶೇಷತೆಗಳಿವೆ’ ಎಂದು ತಿಳಿದು ಶುಭಾಷಯ ಕೋರಿದರು.
ಬಳಿಕ ಕುಂದಾಪುರ ಕೋಡಿ ಬೀಚ್ ನಲ್ಲಿ ಸ್ವಚತ ಕಾರ್ಯಕ್ರಮವನ್ನು ನಡೆಸಲಾಯಿತು, ಇದಕ್ಕೆ ಕುಂದಾಪುರ ಚರ್ಚಿನ ಸಿ.ವೈ.ಎಮ್, ಸಂಘಟನೇಯ ಸದಸ್ಯರು ಸಹಕರಿಸಿದರು.
ಕಥೊಲೀಕ್ ಸಭಾದ ಮಾಜಿ ಅಧ್ಯಕ್ಷ ವಿನೋದ್ ಕ್ರಾಸ್ಟೊ ಗಾಂಧಿಜಿ ಬಗ್ಗೆ ಮಾತನಾಡಿದರು ಕಥೊಲೀಕ್ ಸಭಾ ಘಟಕದ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ ಸ್ವಾಗತಿಸಿದರು, ಕಾರ್ಯದರ್ಶಿ ಎಲ್ಡ್ರಿನ್ ಡಿಸೋಜಾ, ನಿಖಟ ಪೂರ್ವ ಅಧ್ಯಕ್ಷ ಬರ್ನಾಡ್ ಡಿಕೋಸ್ತಾ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದು. ಕಾರ್ಯಕ್ರಮದ ಸಂಚಾಲಕಿ ಶಾಲೆಟ್ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು ವಂದಿಸಿದರು.

ಕುಂದಾಪುರದಲ್ಲಿ ವೈಶಂತಿಕ ಸಭೆ ಸಂತ ವಿನ್ಸೆಂಟ್ ಪಾವ್ಲರ ದಿನಾಚರಣೆಯನ್ನು ಆಚರಿಸಿತು

ಕುಂದಾಪುರ, ಅ.3: ಕುಂದಾಪುರ ರೋಜರಿ ಚರ್ಚಿನ ವೈಶಂತಿಕ ಸಭೆ ಸಂತ ವಿನ್ಸೆಂಟ್ ಪಾವ್ಲರ (ಅಕ್ಟೋಬರ್ 2 ರಂದು) ದಿನಾಚರಣೆಯನ್ನು ಆಚರಿಸಿತು.
ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಪ್ರಾರ್ಥನೆಯನ್ನು ನಡೆಸಿಕೊಟ್ಟು ‘ಸಂತ ವಿನ್ಸೆಂಟ್ ಪಾವ್ಲ್ ವೈಶಂತಿಕ ಸಭೆ ಬಡ ಬಗ್ಗರಿಗೆ ಸಹಾಯವನ್ನು ಮಾಡುತ್ತಿದೆ, ನಿಮ್ಮ ಈ ಸೇವೆ ಅಮೂಲ್ಯವಾದುದು, ನಿಮ್ಮ ಸಭೆಯ ಕೆಲಸ ಮೆಚ್ಚುಗೆ ಪಾತ್ರವಾದುದು’ ಎಂದು ಶುಭ ಕೋರಿದರು.
ಸಂತ ವಿನ್ಸೆಂಟ್ ಪಾವ್ಲ್ ಇದರ ವಲಯ ಅಧ್ಯಕ್ಷ ಅಂತೋನಿ ಡಿಸೋಜಾ ಶುಭ ಕೋರಿದರು, ಕಾರ್ಯದರ್ಶಿ ಒಸ್ವಲ್ಡ್ ಕರ್ವಾಲ್ಲೊ ವರದಿಯನ್ನು ವಾಚಿಸಿದರು. ಖಚಾಂಚಿ ಇಗ್ನೆಶಿಯಸ್ ಖರ್ಚು ವೆಚ್ಚಗಳನ್ನು ಮುಂದಿಟ್ಟರು. ವೇದಿಕೆಯಲ್ಲಿ ಕುಂದಾಪುರದವರೆ ಆದ ಪ್ರಸ್ತುತ ಇಟೆಲಿಯಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿರುವ ಫಾ| ಮನೋಜ್ ಬ್ರಗಾಂಜಾ, ಸಂತ ಜೋಸೆಫ್ ಡಿಕುನ್ಹಾ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸಂಗೀತ, ಪಾಲನ ಮಂಡಳಿ ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ ವೇದಿಕೆಯಲ್ಲಿದ್ದರು. ಕಾರ್ಯಕ್ರಮದ ಮೊದಲು ಬಲಿ ಪೂಜೆಯನ್ನು ಅರ್ಪಿಸಲಾಯಿತು. ಸಂತ ವಿನ್ಸೆಂಟ್ ಪಾವ್ಲ್ ಸಭೆಯ ಅಧ್ಯಕ್ಷೆ ಸೆರಾಫಿನ್ ಡಿಸಿಲ್ವಾ ಸ್ವಾಗತಿಸಿದರು. ವಿಕ್ಟರ್ ಡಿಸೋಜಾ ವಂದಿಸಿದರು. ಡೊಮಿನಿಕ್ ಬ್ರಗಾಂಜಾ ನಿರೂಪಿಸಿದರು.

ಕೋಲಾರ ಜಿಲ್ಲಾ ಭಾರತ ಸೇವಾದಳ ಕಚೇರಿಯಲ್ಲಿ ಗಾಂಧಿಜಿ ಮತ್ತು ಲಾಲ್‍ಬಹಾದ್ದೂರ್ ಶಾಸ್ತ್ರಿಜಿಯವರ ಜನ್ಮದಿನಾಚರಣೆ

ಕೋಲಾರ ಜಿಲ್ಲಾ ಭಾರತ ಸೇವಾದಳ ಕಚೇರಿಯಲ್ಲಿ ಭಾನುವಾರ ಮಹಾತ್ಮ ಗಾಂಧಿಜಿ ಮತ್ತು ಲಾಲ್‍ಬಹಾದ್ದೂರ್ ಶಾಸ್ತ್ರಿಜಿಯವರ ಜನ್ಮದಿನಾಚರಣೆಯನ್ನು ಅಧ್ಯಕ್ಷ ಕೆ.ಎಸ್.ಗಣೇಶ್, ಗೌರವಾಧ್ಯಕ್ಷ ಸಿಎಂಆರ್.ಶ್ರೀನಾಥ್ ನೇತೃತ್ವದಲ್ಲಿ ಆಚರಿಸಲಾಯಿತು. ಕಾರ್ಯದರ್ಶಿ ಎಸ್.ಸುಧಾಕರ್, ಚಲಪತಿ, ಸಂಘಟಿಕ ದಾನೇಶ್, ವೆಂಕಟಕೃಷ್ಣ,ಇಸಿಒ ನಂಜುಡಗೌಡ ಹಾಜರಿದ್ದರು.

ಸಂಸದ ಮುನಿಸ್ವಾಮಿ ನೇತೃತ್ವದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರಕ್ಕೆ ಚಾಲನೆ ಭಾರತ ವಿಶ್ವಗುರುವಾಗಿಸುವ ಮೋದಿ ಕನಸು ನನಸಾಗಿಸೋಣ-ಅಶ್ವಥ್ಥನಾರಾಯಣ

ಕೋಲಾರ:- ದೇಶವನ್ನು ಆತ್ಮನಿರ್ಭರ, ಸ್ವಾವಲಂಬಿ ಭಾರತ ಹಾಗೂ ವಿಶ್ವಗುರುವಾಗಿಸುವ ಪ್ರಧಾನಿ ನರೇಂದ್ರ ಮೋದಿ ಕನಸನ್ನು ನನಸಾಗಿಸಲು ಅವರ ಪ್ರಾಮಾಣಿಕ ಪ್ರಯತ್ನಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಎ.ಎನ್.ಅಶ್ವಥ್ಥನಾರಾಯಣ ಕರೆ ನೀಡಿದರು.
ಭಾನುವಾರ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ವತಿಯಿಂದ ಸಂಸದ ಎಸ್.ಮುನಿಸ್ವಾಮಿ ನೇತೃತ್ವದಲ್ಲಿ ಮೋದಿ @2022ರಡಿ ಕೋಲಾರ ಜಿಲ್ಲೆಯ ಇತಿಹಾಸದಲ್ಲೇ ದಾಖಲೆಯೆನ್ನುವಂತೆ ಇದೇ ಮೊದಲಬಾರಿಗೆ ನಡೆದ ಬೃಹತ್ ರಕ್ತದಾನ ಶಿಬಿರ ಹಾಗೂ ಅಂಗಾಂಗದಾನಿಗಳ ನೋಂದಣಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಭಾರತವು ಸ್ವಾವಲಂಬಿ ದೇಶವಾಗಲು ದೇಸಿಯ ಉತ್ಪನ್ನಗಳಿಗೆ ಹೆಚ್ಚು ಅದ್ಯತೆ ನೀಡಬೇಕು, ಆಮದಿಗೆ ಕಡಿವಾಣ ಹಾಕಿ ಪ್ರತಿಯೊಂದು ಉತ್ಪನ್ನವೂ ಭಾರತದಲ್ಲೇ ತಯಾರಾಗಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿಯವರು ಆತ್ಮನಿರ್ಭರ್ ಯೋಜನೆಯ ಉದ್ದೇಶವಾಗಿದೆ ಎಂದರು.
ಮಹಾತ್ಮಗಾಂಧಿ ಕನಸಿನಂತೆ ಖಾದಿ ಉತ್ಪನ್ನಗಳನ್ನು ಬಳಿಸುವ ಮೂಲಕ ಸ್ವದೇಶಿ ವಸ್ತುಗಳಿಗೆ ಪ್ರಥಮ ಅದ್ಯತೆ ನೀಡೋಣ, ಅವರ ಅದರ್ಶದಂತೆ ಶಾಂತಿ, ಸೌಹಾರ್ದತೆಗೆ ಹಾಗೂ ಸಾಮರಸ್ಯತೆಗೆ ಹೆಚ್ಚು ಒತ್ತು ನೀಡಿ ಜೀವನದಲ್ಲೂ ಅಳವಡಿಸಿಕೊಳ್ಳೋಣ ಎಂದರು.
ಸಂಸದರ ಪ್ರಯತ್ನ
ಶ್ಲಾಘನೀಯ ಕಾರ್ಯ
ಮಹಾತ್ಮ ಗಾಂಧೀಜಿ, ಲಾಲ್ ಬಹುದ್ದೂರ್ ಶಾಸ್ತ್ರೀಜಿ ಅವರ ಜನ್ಮ ದಿನಾಚರಣೆ ಅಂಗವಾಗಿ ಇಷ್ಟೊಂದು ದಾಖಲೆ ಪ್ರಮಾಣದ ರಕ್ತದಾನ, ಅಂಗಾಂಗಗಳ ದಾನ ನೋಂದಣಿ ಶಿಬಿರ ನಡೆಸುತ್ತಿರುವ ಸಂಸದ ಎಸ್.ಮುನಿಸ್ವಾಮಿ ಅವರ ಕಾರ್ಯ ಶ್ಲಾಘನೀಯವಾಗಿದ್ದು, ಸಾವಿರಾರು ಮಂದಿ ರಕ್ತದಾನಕ್ಕೆ ಮುಂದಾಗಿರುವುದು ದಾಖಲೆಯಾಗಿದೆ, ಇದು ಇಡೀ ದೇಶಕ್ಕೆ ಉತ್ತಮ ಸಂದೇಶವನ್ನು ರವಾನಿಸುತ್ತಿದೆ ಎಂದರು.
ಮೋದಿ ಗಮನಸೆಳೆದ
ರಕ್ತದಾನ ಶಿಬಿರ-ತೇಜಸ್ವಿ
ಸಂಸದ ತೇಜೇಸ್ವಿ ಸೂರ್ಯ ಮಾತನಾಡಿ, ಕೋಲಾರದಲ್ಲಿ ಸಂಸದ ಎಸ್.ಮುನಿಸ್ವಾಮಿಯವರ ನೇತ್ರತ್ವದಲ್ಲಿ ನಡೆಸುತ್ತಿರುವ ಬೃಹತ್ ರಕ್ತದಾನ ಶಿಬಿರ ಪ್ರಧಾನ ಮಂತ್ರಿ ಮೋದಿಜೀಯವರ ಗಮನ ಸೆಳೆಯುವಂತೆ ಆಯೋಜಿಸಲಾಗಿದೆ, ಮುನಿಸ್ವಾಮಿಯವರು ಪ್ರತಿಯೊಂದು ಕಾರ್ಯಕ್ರಮವನ್ನು ಇಡೀ ದೇಶವೇ ಕೋಲಾರದತ್ತ ತಿರುಗಿ ನೋಡುವಂತೆ ನಡೆಸುತ್ತಿದ್ದಾರೆ, 25 ಸಾವಿರ ಮಂದಿ ಯೋಗಪ್ರದರ್ಶನ ನೀಡಿದ್ದು, ಬೃಹತ್ ರಾಷ್ಟ್ರಧ್ವಜಾರೋಹಣ ಲಿಮ್ಕಾ ದಾಖಲೆ ಮಾತ್ರವಲ್ಲ ಮೋದೀಜಿಯವರ ಮೆಚ್ಚುಗೆಗೂ ಪಾತ್ರವಾಯಿತು ಎಂದರು.
ನರೇಂದ್ರ ಮೋದಿಜಿಯವರ ಹುಟ್ಟು ಹಬ್ಬದ ಪ್ರಯುಕ್ತ ಹಲವಾರು ಸಮುದಾಯಗಳ,ಸಂಘಟನೆಗಳಿಂದ 1.46 ಲಕ್ಷ ಯೂನಿಟ್ ರಕ್ತದಾನ ಮಾಡಲಾಗಿದೆ ಎಂದ ಅವರು, ರಕ್ತದ ದಾಸ್ತನು ಮಾಡುವುದು ಸಮಸ್ಯೆಯಾಗಿತ್ತು ರಾಷ್ಟ್ರದಲ್ಲಿಯೇ ಅಲ್ಲ ವಿಶ್ವದಲ್ಲಿಯೇ ಏಕ ಕಾಲದಲ್ಲಿ ರಕ್ತದಾನ ಮಾಡಿರುವುದು ದಾಖಲೆಯಾಗಿತ್ತು ಎಂದು ಸ್ಮರಿಸಿದರು.
ದಾಸ್ತಾನು ಸಮಸ್ಯೆ
2500 ಯುನಿಟ್
ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ರಕ್ತದಾನ ಶಿಬಿರಗಳು ಆಯೋಜಿಸಲಾಗಿತ್ತು. ವಿಶ್ವದಾಖಲೆಯೊಂದಿಗೆ 15 ಸಾವಿರ ಯೂನಿಟ್ ರಕ್ತ ಸಂಗ್ರಹಣೆ ನಮ್ಮ ಗುರಿಯಾಗಿತ್ತು, ಅದಕ್ಕಾಗಿ ನೋಂದಣಿಯೂ ನಡೆದಿತ್ತು, ಆದರೆ ಜಿಲ್ಲೆಯಲ್ಲಿರುವ ರಕ್ತನಿಧಿಗಳಲ್ಲಿ ದಾಸ್ತನು ಮಾಡುವುದು ಸಮಸ್ಯೆಯಾಗಿರುವುದರಿಂದ ಎರಡೂವರೆ ಸಾವಿರ ಯೂನಿಟ್ ಮಾತ್ರ ರಕ್ತ ಸಂಗ್ರಹಿಸಲಾಗಿದೆ ಎಂದರು.
ರಕ್ತದಾನದ ಜತೆಗೆ ನೇತ್ರದಾನ ಮತ್ತು ಅಂಗಾಂಗಗಳ ದಾನದ ನೊಂದಣಿ ಕಾರ್ಯ ನಡೆಯುತ್ತಿದೆ. ಚರಿತ್ರೆಯಲ್ಲಿ ಇದೊಂದು ದಾಖಲಾರ್ಹ ದಿನವಾಗಿದ್ದು, ಕೋಲಾರ ಜಿಲ್ಲೆ ವಿಶ್ವದಲ್ಲೇ ಅತಿ ಹೆಚ್ಚು ಅಂಗಾಂಗದಾನಿಗಳ ನೋಂದಣಿ ನಡೆಸಿದ ಮಾದರಿ ಜಿಲ್ಲೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ ಅವರು, ನಮ್ಮ ನಿರೀಕ್ಷೆಗೂ ಮೀರಿ ದಾನಿಗಳು ಸಾಗರೋಪಾದಿಯಲ್ಲಿ ಸಾಗಿ ಬರುತ್ತಿರುವುದು ಹೆಮ್ಮೆಎನಿಸುತ್ತಿದೆ ಎಂದರು.
ಜ.12ರ ರಕ್ತದಾನ
ವಿಶ್ವದಾಖಲೆಗೆ ಸಿದ್ದತೆ
ಕೋಲಾರ ಜಿಲ್ಲೆಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ 2023 ಜನವರಿ 12 ರಂದು ವಿಶ್ವದಾಖಲೆಯ ರಕ್ತದಾನ ಶಿಬಿರ ನಡೆಸಲು ಗುರಿ ಹೊಂದಲಾಗಿದೆ, ಕೋಲಾರ ಜಿಲ್ಲೆ ಸಾವಿರಾರು ಜೀವಗಳನ್ನು ಉಳಿಸುವ ಜೀವದ್ರವ್ಯವನ್ನು ಅತಿ ಹೆಚ್ಚು ದಾನ ನೀಡಿದ ಹೆಗ್ಗಳಿಕೆಗೆ ಅಂದು ಪಾತ್ರವಾಗಲಿದೆ ಎಂದ ಅವರು, ಈ ಶಿಬಿರಕ್ಕೆ ಜಾತ್ಯಾತೀತ,ಪಕ್ಷಾತೀತವಾಗಿ ಸಹಕಾರ ನೀಡಲು ಯುವಕರಿಗೆ,ನಾಗರೀಕರಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವೆಂಕಟ್‍ರಾಜಾ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಿ.ದೇವರಾಜ್, ಜಿಪಂ ಸಿಇಒ ಯುಕೇಶ್ ಕುಮಾರ್,ಮಾಜಿ ಶಾಸಕರಾದ ವರ್ತೂರು ಪ್ರಕಾಶ್, ವೈ ಸಂಪಗಿ, ಬಿ.ಪಿ.ವೆಂಕಟಮುನಿಯಪ್ಪ, ಮಂಜುನಾಥ್‍ಗೌಡ,ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು, ಡಿಹೆಚ್‍ಒ ಡಾ.ಜಗದೀಶ್,ಡಿಎಸ್ ವಿಜಯಕುಮಾರ್,ರಕ್ತನಿಧಿ ಅಧಿಕಾರಿ ಎಂಡಿ ಡಾ.ರೇವತಿ ಮತ್ತಿತರರು ಉಪಸ್ಥಿತರಿದ್ದರು.
ರಕ್ತದಾನ, ಅಂಗಾಂಗದಾನ ನೋಂದಣಿ ಕಾರ್ಯದಲ್ಲಿ ಕೋಲಾರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ವಿಜಯಕುಮಾರ್, ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ,ದಿಶಾ ಸಮಿತಿ ಸದಸ್ಯ ಅಪ್ಪಿನಾರಾಯಣಸ್ವಾಮಿ,ಮಾವುಮಂಡಳಿ ಅಧ್ಯಕ್ಷ ವಾಸುದೇವ್, ಮಾಲೂರು ನಗರಾಭಿವೃದ್ದಿ ಅಧ್ಯಕ್ಷ ಸತೀಶ್ ಆರಾಧ್ಯ, ಜಿಲ್ಲಾ ವಕ್ತಾರ ಎಸ್.ಬಿ.ಮುನಿವೆಂಕಟಪ್ಪ, ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಬಾಲಾಜಿ, ಎಸ್.ಸಿ. ಘಟಕದ ಹನುಮಂತು, ಜಿಲ್ಲಾ ಮಾಧ್ಯಮ ವಕ್ತಾರ ಕೆಂಬೋಡಿ ನಾರಾಯಣಸ್ವಾಮಿ, ನಗರಘಟಕ ಅಧ್ಯಕ್ಷ ತಿಮ್ಮರಾಯಪ್ಪ, ಒಬಿಸಿ ಮುಖಂಡ ರಾಜೇಶ್ ಸಿಂಗ್,ಜಿ.ಪಂ.ಮಾಜಿ ಸದಸ್ಯ ಮಹೇಶ್, ಬಂಗಾರಪೇಟೆ ಚಂದ್ರಾರೆಡ್ಡಿ, ಮಮತಮ್ಮ, ಸಾಮಾ.ಬಾಬು, ಸೂರ್ಯನಾರಾಯಣಸ್ವಾಮಿ ಮುಂತಾದವರು ನೆರವಾದರು.
ಬೆಳಿಗ್ಗೆ 8 ಗಂಟೆಗೆ ರಕ್ತಾದಾನ ಶಿಬಿರವು ಪ್ರಾರಂಭವಾಗಿದ್ದು ಸರ್ಕಾರಿ ಪದವಿ ಪೂರ್ವ ಕಾಲೇಜು 10 ಕೊಠಡಿಗಳು ಹಾಗೂ ಒಳ ಕ್ರೀಡಾಂಗಣದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ಜಿಲ್ಲೆಯ ಬಂಗಾರಪೇಟೆ, ಕೆ.ಜಿ.ಎಫ್,ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ ಮತ್ತು ಕೋಲಾರ ಸೇರಿದಂತೆ ಸರ್ಕಾರಿ ನೌಕರರು, ವಿವಿಧ ಸಂಘಟನೆಗಳು ಸೇರಿದಂತೆ ಸಾವಿರಾರು ಮಂದಿ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಹಾಗೂ ಅಂಗಾಂಗ ದಾನ ಮಾಡುವುದಾಗಿ ನೋಂದಣಿ ಮಾಡಿಸಿದರು.

ಸಂಸದ ಮುನಿಸ್ವಾಮಿ ನೇತೃತ್ವದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರಕ್ಕೆ ಚಾಲನೆ

ಕೋಲಾರ:- ದೇಶವನ್ನು ಆತ್ಮನಿರ್ಭರ, ಸ್ವಾವಲಂಬಿ ಭಾರತ ಹಾಗೂ ವಿಶ್ವಗುರುವಾಗಿಸುವ ಪ್ರಧಾನಿ ನರೇಂದ್ರ ಮೋದಿ ಕನಸನ್ನು ನನಸಾಗಿಸಲು ಅವರ ಪ್ರಾಮಾಣಿಕ ಪ್ರಯತ್ನಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಎ.ಎನ್.ಅಶ್ವಥ್ಥನಾರಾಯಣ ಕರೆ ನೀಡಿದರು.
ಭಾನುವಾರ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ವತಿಯಿಂದ ಸಂಸದ ಎಸ್.ಮುನಿಸ್ವಾಮಿ ನೇತೃತ್ವದಲ್ಲಿ ಮೋದಿ @2022ರಡಿ ಕೋಲಾರ ಜಿಲ್ಲೆಯ ಇತಿಹಾಸದಲ್ಲೇ ದಾಖಲೆಯೆನ್ನುವಂತೆ ಇದೇ ಮೊದಲಬಾರಿಗೆ ನಡೆದ ಬೃಹತ್ ರಕ್ತದಾನ ಶಿಬಿರ ಹಾಗೂ ಅಂಗಾಂಗದಾನಿಗಳ ನೋಂದಣಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಭಾರತವು ಸ್ವಾವಲಂಬಿ ದೇಶವಾಗಲು ದೇಸಿಯ ಉತ್ಪನ್ನಗಳಿಗೆ ಹೆಚ್ಚು ಅದ್ಯತೆ ನೀಡಬೇಕು, ಆಮದಿಗೆ ಕಡಿವಾಣ ಹಾಕಿ ಪ್ರತಿಯೊಂದು ಉತ್ಪನ್ನವೂ ಭಾರತದಲ್ಲೇ ತಯಾರಾಗಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿಯವರು ಆತ್ಮನಿರ್ಭರ್ ಯೋಜನೆಯ ಉದ್ದೇಶವಾಗಿದೆ ಎಂದರು.
ಮಹಾತ್ಮಗಾಂಧಿ ಕನಸಿನಂತೆ ಖಾದಿ ಉತ್ಪನ್ನಗಳನ್ನು ಬಳಿಸುವ ಮೂಲಕ ಸ್ವದೇಶಿ ವಸ್ತುಗಳಿಗೆ ಪ್ರಥಮ ಅದ್ಯತೆ ನೀಡೋಣ, ಅವರ ಅದರ್ಶದಂತೆ ಶಾಂತಿ, ಸೌಹಾರ್ದತೆಗೆ ಹಾಗೂ ಸಾಮರಸ್ಯತೆಗೆ ಹೆಚ್ಚು ಒತ್ತು ನೀಡಿ ಜೀವನದಲ್ಲೂ ಅಳವಡಿಸಿಕೊಳ್ಳೋಣ ಎಂದರು.

ಸಂಸದರ ಪ್ರಯತ್ನ ಶ್ಲಾಘನೀಯ ಕಾರ್ಯ

ಮಹಾತ್ಮ ಗಾಂಧೀಜಿ, ಲಾಲ್ ಬಹುದ್ದೂರ್ ಶಾಸ್ತ್ರೀಜಿ ಅವರ ಜನ್ಮ ದಿನಾಚರಣೆ ಅಂಗವಾಗಿ ಇಷ್ಟೊಂದು ದಾಖಲೆ ಪ್ರಮಾಣದ ರಕ್ತದಾನ, ಅಂಗಾಂಗಗಳ ದಾನ ನೋಂದಣಿ ಶಿಬಿರ ನಡೆಸುತ್ತಿರುವ ಸಂಸದ ಎಸ್.ಮುನಿಸ್ವಾಮಿ ಅವರ ಕಾರ್ಯ ಶ್ಲಾಘನೀಯವಾಗಿದ್ದು, ಸಾವಿರಾರು ಮಂದಿ ರಕ್ತದಾನಕ್ಕೆ ಮುಂದಾಗಿರುವುದು ದಾಖಲೆಯಾಗಿದೆ, ಇದು ಇಡೀ ದೇಶಕ್ಕೆ ಉತ್ತಮ ಸಂದೇಶವನ್ನು ರವಾನಿಸುತ್ತಿದೆ ಎಂದರು.
ಮೋದಿ ಗಮನಸೆಳೆದ ರಕ್ತದಾನ ಶಿಬಿರ-ತೇಜಸ್ವಿ
ಸಂಸದ ತೇಜೇಸ್ವಿ ಸೂರ್ಯ ಮಾತನಾಡಿ, ಕೋಲಾರದಲ್ಲಿ ಸಂಸದ ಎಸ್.ಮುನಿಸ್ವಾಮಿಯವರ ನೇತ್ರತ್ವದಲ್ಲಿ ನಡೆಸುತ್ತಿರುವ ಬೃಹತ್ ರಕ್ತದಾನ ಶಿಬಿರ ಪ್ರಧಾನ ಮಂತ್ರಿ ಮೋದಿಜೀಯವರ ಗಮನ ಸೆಳೆಯುವಂತೆ ಆಯೋಜಿಸಲಾಗಿದೆ, ಮುನಿಸ್ವಾಮಿಯವರು ಪ್ರತಿಯೊಂದು ಕಾರ್ಯಕ್ರಮವನ್ನು ಇಡೀ ದೇಶವೇ ಕೋಲಾರದತ್ತ ತಿರುಗಿ ನೋಡುವಂತೆ ನಡೆಸುತ್ತಿದ್ದಾರೆ, 25 ಸಾವಿರ ಮಂದಿ ಯೋಗಪ್ರದರ್ಶನ ನೀಡಿದ್ದು, ಬೃಹತ್ ರಾಷ್ಟ್ರಧ್ವಜಾರೋಹಣ ಲಿಮ್ಕಾ ದಾಖಲೆ ಮಾತ್ರವಲ್ಲ ಮೋದೀಜಿಯವರ ಮೆಚ್ಚುಗೆಗೂ ಪಾತ್ರವಾಯಿತು ಎಂದರು.
ನರೇಂದ್ರ ಮೋದಿಜಿಯವರ ಹುಟ್ಟು ಹಬ್ಬದ ಪ್ರಯುಕ್ತ ಹಲವಾರು ಸಮುದಾಯಗಳ,ಸಂಘಟನೆಗಳಿಂದ 1.46 ಲಕ್ಷ ಯೂನಿಟ್ ರಕ್ತದಾನ ಮಾಡಲಾಗಿದೆ ಎಂದ ಅವರು, ರಕ್ತದ ದಾಸ್ತನು ಮಾಡುವುದು ಸಮಸ್ಯೆಯಾಗಿತ್ತು ರಾಷ್ಟ್ರದಲ್ಲಿಯೇ ಅಲ್ಲ ವಿಶ್ವದಲ್ಲಿಯೇ ಏಕ ಕಾಲದಲ್ಲಿ ರಕ್ತದಾನ ಮಾಡಿರುವುದು ದಾಖಲೆಯಾಗಿತ್ತು ಎಂದು ಸ್ಮರಿಸಿದರು.

ದಾಸ್ತಾನು ಸಮಸ್ಯೆ 2500 ಯುನಿಟ್

ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ರಕ್ತದಾನ ಶಿಬಿರಗಳು ಆಯೋಜಿಸಲಾಗಿತ್ತು. ವಿಶ್ವದಾಖಲೆಯೊಂದಿಗೆ 15 ಸಾವಿರ ಯೂನಿಟ್ ರಕ್ತ ಸಂಗ್ರಹಣೆ ನಮ್ಮ ಗುರಿಯಾಗಿತ್ತು, ಅದಕ್ಕಾಗಿ ನೋಂದಣಿಯೂ ನಡೆದಿತ್ತು, ಆದರೆ ಜಿಲ್ಲೆಯಲ್ಲಿರುವ ರಕ್ತನಿಧಿಗಳಲ್ಲಿ ದಾಸ್ತನು ಮಾಡುವುದು ಸಮಸ್ಯೆಯಾಗಿರುವುದರಿಂದ ಎರಡೂವರೆ ಸಾವಿರ ಯೂನಿಟ್ ಮಾತ್ರ ರಕ್ತ ಸಂಗ್ರಹಿಸಲಾಗಿದೆ ಎಂದರು.
ರಕ್ತದಾನದ ಜತೆಗೆ ನೇತ್ರದಾನ ಮತ್ತು ಅಂಗಾಂಗಗಳ ದಾನದ ನೊಂದಣಿ ಕಾರ್ಯ ನಡೆಯುತ್ತಿದೆ. ಚರಿತ್ರೆಯಲ್ಲಿ ಇದೊಂದು ದಾಖಲಾರ್ಹ ದಿನವಾಗಿದ್ದು, ಕೋಲಾರ ಜಿಲ್ಲೆ ವಿಶ್ವದಲ್ಲೇ ಅತಿ ಹೆಚ್ಚು ಅಂಗಾಂಗದಾನಿಗಳ ನೋಂದಣಿ ನಡೆಸಿದ ಮಾದರಿ ಜಿಲ್ಲೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ ಅವರು, ನಮ್ಮ ನಿರೀಕ್ಷೆಗೂ ಮೀರಿ ದಾನಿಗಳು ಸಾಗರೋಪಾದಿಯಲ್ಲಿ ಸಾಗಿ ಬರುತ್ತಿರುವುದು ಹೆಮ್ಮೆಎನಿಸುತ್ತಿದೆ ಎಂದರು.

ಜ.12ರ ರಕ್ತದಾನ ವಿಶ್ವದಾಖಲೆಗೆ ಸಿದ್ದತೆ

ಕೋಲಾರ ಜಿಲ್ಲೆಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ 2023 ಜನವರಿ 12 ರಂದು ವಿಶ್ವದಾಖಲೆಯ ರಕ್ತದಾನ ಶಿಬಿರ ನಡೆಸಲು ಗುರಿ ಹೊಂದಲಾಗಿದೆ, ಕೋಲಾರ ಜಿಲ್ಲೆ ಸಾವಿರಾರು ಜೀವಗಳನ್ನು ಉಳಿಸುವ ಜೀವದ್ರವ್ಯವನ್ನು ಅತಿ ಹೆಚ್ಚು ದಾನ ನೀಡಿದ ಹೆಗ್ಗಳಿಕೆಗೆ ಅಂದು ಪಾತ್ರವಾಗಲಿದೆ ಎಂದ ಅವರು, ಈ ಶಿಬಿರಕ್ಕೆ ಜಾತ್ಯಾತೀತ,ಪಕ್ಷಾತೀತವಾಗಿ ಸಹಕಾರ ನೀಡಲು ಯುವಕರಿಗೆ,ನಾಗರೀಕರಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವೆಂಕಟ್‍ರಾಜಾ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಿ.ದೇವರಾಜ್, ಜಿಪಂ ಸಿಇಒ ಯುಕೇಶ್ ಕುಮಾರ್,ಮಾಜಿ ಶಾಸಕರಾದ ವರ್ತೂರು ಪ್ರಕಾಶ್, ವೈ ಸಂಪಗಿ, ಬಿ.ಪಿ.ವೆಂಕಟಮುನಿಯಪ್ಪ, ಮಂಜುನಾಥ್‍ಗೌಡ,ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು, ಡಿಹೆಚ್‍ಒ ಡಾ.ಜಗದೀಶ್,ಡಿಎಸ್ ವಿಜಯಕುಮಾರ್,ರಕ್ತನಿಧಿ ಅಧಿಕಾರಿ ಎಂಡಿ ಡಾ.ರೇವತಿ ಮತ್ತಿತರರು ಉಪಸ್ಥಿತರಿದ್ದರು.
ರಕ್ತದಾನ, ಅಂಗಾಂಗದಾನ ನೋಂದಣಿ ಕಾರ್ಯದಲ್ಲಿ ಕೋಲಾರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ವಿಜಯಕುಮಾರ್, ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ,ದಿಶಾ ಸಮಿತಿ ಸದಸ್ಯ ಅಪ್ಪಿನಾರಾಯಣಸ್ವಾಮಿ,ಮಾವುಮಂಡಳಿ ಅಧ್ಯಕ್ಷ ವಾಸುದೇವ್, ಮಾಲೂರು ನಗರಾಭಿವೃದ್ದಿ ಅಧ್ಯಕ್ಷ ಸತೀಶ್ ಆರಾಧ್ಯ, ಜಿಲ್ಲಾ ವಕ್ತಾರ ಎಸ್.ಬಿ.ಮುನಿವೆಂಕಟಪ್ಪ, ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಬಾಲಾಜಿ, ಎಸ್.ಸಿ. ಘಟಕದ ಹನುಮಂತು, ಜಿಲ್ಲಾ ಮಾಧ್ಯಮ ವಕ್ತಾರ ಕೆಂಬೋಡಿ ನಾರಾಯಣಸ್ವಾಮಿ, ನಗರಘಟಕ ಅಧ್ಯಕ್ಷ ತಿಮ್ಮರಾಯಪ್ಪ, ಒಬಿಸಿ ಮುಖಂಡ ರಾಜೇಶ್ ಸಿಂಗ್,ಜಿ.ಪಂ.ಮಾಜಿ ಸದಸ್ಯ ಮಹೇಶ್, ಬಂಗಾರಪೇಟೆ ಚಂದ್ರಾರೆಡ್ಡಿ, ಮಮತಮ್ಮ, ಸಾಮಾ.ಬಾಬು, ಸೂರ್ಯನಾರಾಯಣಸ್ವಾಮಿ ಮುಂತಾದವರು ನೆರವಾದರು.
ಬೆಳಿಗ್ಗೆ 8 ಗಂಟೆಗೆ ರಕ್ತಾದಾನ ಶಿಬಿರವು ಪ್ರಾರಂಭವಾಗಿದ್ದು ಸರ್ಕಾರಿ ಪದವಿ ಪೂರ್ವ ಕಾಲೇಜು 10 ಕೊಠಡಿಗಳು ಹಾಗೂ ಒಳ ಕ್ರೀಡಾಂಗಣದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ಜಿಲ್ಲೆಯ ಬಂಗಾರಪೇಟೆ, ಕೆ.ಜಿ.ಎಫ್,ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ ಮತ್ತು ಕೋಲಾರ ಸೇರಿದಂತೆ ಸರ್ಕಾರಿ ನೌಕರರು, ವಿವಿಧ ಸಂಘಟನೆಗಳು ಸೇರಿದಂತೆ ಸಾವಿರಾರು ಮಂದಿ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಹಾಗೂ ಅಂಗಾಂಗ ದಾನ ಮಾಡುವುದಾಗಿ ನೋಂದಣಿ ಮಾಡಿಸಿದರು.

ಜಿಲ್ಲೆಯಲ್ಲಿ 75 ಕೆರೆಗಳ ಅಭಿವೃದ್ಧಿ ಕಾಮಗಾರಿ ತ್ವರಿತಗೊಳಿಸಿ: ಸಚಿವೆ ನಿರ್ಮಲಾ ಸೀತಾರಾಮನ್

ಕೋಲಾರ : ಜಿಲ್ಲೆಯಲ್ಲಿ 75 ಕೆರೆಗಳ ಅಭಿವೃದ್ಧಿ ಕಾಮಗಾರಿ ತ್ವರಿತಗೊಳಿಸಿ , ಅಧಿಕಾರಿಗಳು ಕೆರೆ ಕಾಮಗಾರಿಗಳ ಕುರಿತು ನಿರ್ಲಕ್ಷ್ಯ ತೊರದಿರಿ , ಕೆರೆಗೆ ನೀರು ಸುಗಮವಾಗಿ ಹರಿದು ಬರಬೇಕು , ಕೆರೆಗೆ ನೀರು ಹರಿದು ಬರದಿದ್ದರೆ ಕೆರೆ ಹೇಗೆ ತುಂಬುತ್ತದೆ , ಮುಂದಿನ ಕೆರೆಗಳಿಗೆ ಯಾವ ರೀತಿ ನೀರು ಹರಿದು ಹೋಗಲು ಸಾಧ್ಯ ಎಂದು ಪ್ರಶ್ನಿಸಿದರು . ಅಜಾದಿ ಕಾ ಅಮೃತ ಸರೋವರ ಯೋಜನೆ ಯಡಿ ಕೆರೆಗಳ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಮಾಡಲು ಕೋಲಾರ ಜಿಲ್ಲೆಗೆ ಆಗಮಿಸಿದ್ದ ಸಚಿವರು , ಬಂಗಾರಪೇಟೆ ತಾಲ್ಲೂಕಿನ ಚಿಕ್ಕಅಂಕಂಡಹಳ್ಳಿ ಕೆರೆ , ಘಟ್ಟಕಾಮಧೇನುಹಳ್ಳಿ ಕೆರೆ , ಕೋಲಾರ ತಾಲ್ಲೂಕಿನ ಶೆಟ್ಟಿಕೊತ್ತನೂರು ಕೆರೆ ವೀಕ್ಷಿಸಿ , ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿರುವ ಕುರಿತು ತೃಪ್ತಿ ವ್ಯಕ್ತಪಡಿಸಿದರು . ಕೋಲಾರ ಜಿಲ್ಲೆಯಾದ್ಯಂತ ಅಜಾದಿ ಕಾ ಅಮೃತ ಸರೋವರ ಯೋಜನೆಯಡಿ 75 ಕೆರೆಗಳನ್ನ ಆಯ್ಕೆ ಮಾಡಿಕೊಂಡು ಕಾಮಗಾರಿ ಪ್ರಾರಂಭಿಸಲಾಗಿದೆ , ಅನುಧಾನ ಬೇಕಾದರೆ ಮತ್ತಷ್ಟು ನೀಡುವೆ ಕಾಮಗಾರಿಗಳು ಸಮಪರ್ಕ ವಾಗಿ ಆಗಬೇಕು ಎಂದು ಜಿಪಂ ಸಿಇಒ ಮತ್ತು ಜಿಲ್ಲಾಧಿಕಾರಿ ಮುಂದೆ ಬೇಸರ ವ್ಯಕ್ತಪಡಿಸಿದರು . ಕೆರೆ ಅಚ್ಚುಕಟ್ಟು ನಿರ್ವಹಣೆ , ಒತ್ತುವರಿ ಕುರಿತು ಬೇಸರ ವ್ಯಕ್ತಪಡಿಸಿದ ಅವರು , ಕೆರೆಗೆ ನೀರು ಸುಗಮವಾಗಿ ಹರಿದು ಬರಬೇಕು , ಕೆರೆಗೆ ನೀರು ಹರಿದು ಬರಲು ರಸ್ತೆ ಮಾಡಬೇಕಾಗಿಲ್ಲ ಪ್ರಕೃತಿದತ್ತವಾಗಿರುವ ರಾಜಕಾಲುವೆಯ ಒತ್ತುವರಿ ತಡೆದು ನೀರು ಸರಾಗವಾಗಿ ಹರಿದು ಹೋಗಲು ಕ್ರಮ ಕೈಗೊಳ್ಳಬೇಕು ಎಂದರು . ಒಂದು ಕಡೆ ಕೊಳಚೆ ನೀರು ಹರಿಯುತ್ತಿರು ವುದನ್ನು ಗಮನಿಸಿದ ಸಚಿವರು ನೀರು ಸಂಸ್ಕರಿಸಿ ಕೆರೆಗೆ ಹರಿಸಬೇಕು , ಕೆರೆಯ ಸುತ್ತಲಿನ ರೈತರಿಗೆ ಬೆಳೆ ಬೆಳೆಯಲು ಅನುಕೂಲ ಮಾಡಿಕೊಡುವಂತೆ ಸಲಹೆ ನೀಡಿದರು . ನರೇಗಾದಡಿ ಜಾನುವಾರು ಶೆಡ್ ನಿರ್ಮಿಸಿ ಕೊಡುವಂತೆ ಹಾಗೂ ಕಿಸಾನ್ ಕಾರ್ಡ್ ವಿತರಿಸುವಂತೆಯೂ ಸಚಿವೆ ನಿರ್ಮಾಲಾ ಸೀತಾರಾಮನ್ ಅಧಿಕಾರಿಗಳಿಗೆ ಸೂಚಿಸಿದರು . ರಾಜ್ಯದಲ್ಲಿ 2375 ಕೆರೆಗಳ ಅಭಿವೃದ್ಧಿ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾ ಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಮಾಧ್ಯಮದ ಜತೆ ಮಾತನಾಡಿ , ರಾಜ್ಯಾದ್ಯಂತ 2,375 ಕೆರೆ ಅಭಿವೃದ್ಧಿ ಮಾಡಲಾ ಗುತ್ತಿದ್ದು , ಕೋಲಾರ ಜಿಲ್ಲೆಯಲ್ಲಿ ಒಟ್ಟು 75 ಕೆರೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ . ಕಾಮಗಾರಿ ತ್ವರಿತಗತಿಯಲ್ಲಿ ನಡೆ ಯುತ್ತಿದ್ದು , ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತೃಪ್ತಿ ವ್ಯಕ್ತಪಡಿಸಿದರು ಎಂದು ತಿಳಿಸಿದರು . ಜಿಲ್ಲೆಯಲ್ಲಿ ಕೆಲವು ಕೆರೆಗಳ ಬೌಂಡರಿ ಸರಿಯಾಗಿ ಗುರುತಿಸಿಲ್ಲ ಕೆರೆಯ ಪಕ್ಕದಲ್ಲೇ ರೈತರ ಜಮೀನು ಇದೆ ಗಿಡಗಳನ್ನು ಕೆರೆಯೊಳಗೆ ನೆಡಲಾಗಿದೆ ಎಂಬ ಕೆಲ ತಪ್ಪುಗಳನ್ನು ಸಚಿವರು ಗುರುತಿಸಿದರು . ಒತ್ತುವರಿ ತೆರವುಗೊಳಿಸಿ ಕೆರೆಯ ಬೌಂಡರಿಯನ್ನು ಸರಿಯಾಗಿ ಗುರುತಿಸುವಂತೆ , ಹೂಳು ತೆಗೆಯುವಂತೆ ಸೂಚನೆ ನೀಡಿದ್ದಾರೆ ಎಂದರು . ಈ ಸಂದರ್ಭದಲ್ಲಿ ಸಂಸದ ಎಸ್.ಮುನಿ ಸ್ವಾಮಿ , ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ , ಮಾಜಿ ಸಚಿವ ವರ್ತೂರು ಪ್ರಕಾಶ್ , ಜಿಲ್ಲಾಧಿಕಾರಿ ವೆಂಕಟರಾಜಾ , ಎಸ್ಪಿ ಡಿ.ದೇವರಾಜ್ , ಜಿಪಂ ಸಿಇಒ ಯುಕೇಶ್‌ಕುಮಾರ್ , ಮಾಜಿ ಶಾಸಕರಾದ ಎಂ . ನಾರಾಯಣ ಸ್ವಾಮಿ , ಬಿ.ಪಿ. ವೆಂಕಟ ಮುನಿಯಪ್ಪ.ವೈ.ಸಂಪಂಗಿ , ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ ಮತ್ತಿತರರಿದ್ದರು .

ಕೋಲಾರ ಜಿಲ್ಲೆಯ ಅದೃಷ್ಟವಾಗಿರುವ 75 ಕೆರೆಗಳ ಅಭಿವೃದ್ಧಿಗೆ ಹಣ ನೀಡಿದ್ದೇನೆ ; ನಿರ್ಮಲಾ ಸೀತಾರಾಮನ್

ಕೋಲಾರ : ಕೋಲಾರ ಜಿಲ್ಲೆಯ ಅದೃಷ್ಟವಾಗಿರುವ 75 ಕೆರೆಗಳ ಅಭಿವೃದ್ಧಿಗೆ ಹಣ ನೀಡಿದ್ದೇನೆ , ಪ್ರತಿ ಬಜೆಟ್‌ನಲ್ಲೂ ಈ ಜೀವ ಜಲ ಉಳಿಸುವ ಕಾರ್ಯಕ್ಕೆ ಅನುದಾನ ನಿಗಧಿ ಮಾಡುತ್ತೇನೆ , ‘ ನಮ್ಮ ಊರು ನಮ್ಮ ಕೆರೆ ‘ ಎಂಬ ಸಂಕಲ್ಪ ಮಾಡಿ ಅಭಿವೃದ್ಧಿಗೊಳಿಸಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಾಕೀತು ಮಾಡಿದರು . ಕೆಜಿಎಫ್ ತಾಲ್ಲೂಕಿನ ಪೆದ್ದಪಲ್ಲಿ ಗ್ರಾಮದಲ್ಲಿ ಘಟ್ಟಕಾಮಧೇನಹಳ್ಳಿ ಕೆರೆ ವೀಕ್ಷಣೆ ನಂತರ ಮಹಿಳೆಯರನ್ನುದ್ದೇಶಿಸಿ ತೆಲುಗಿನಲ್ಲಿ ಮಾತನಾಡಿದ ಅವರು , ದೇಶದಲ್ಲೇ ಅತಿ ಹೆಚ್ಚು ಕೆರೆಗಳಿರುವುದು ಈ ಜಿಲ್ಲೆಯ ಅದೃಷ್ಟ ಆದರೆ ಕೆರೆಗಳ ಅಭಿವೃದ್ಧಿಯಲ್ಲಿ ಹಿನ್ನಡೆ ಕುರಿತು ಬೇಸರವಿದೆ ಎಂದರು . ಈ ಕೆರೆಗಳನ್ನು ನಮ್ಮ ಪೂರ್ವಜರು ಅತ್ಯಂತ ದೂರದೃಷ್ಟಿಯಿಂದ ಕಟ್ಟಿದ್ದಾರೆ , ಒಂದು ಕರೆ ತುಂಬಿ ಮತ್ತೊಂದು ಕೆರೆಗೆ ನೀರು ಹರಿದು ಹೋಗುತ್ತದೆ , ಆ ನೀರು ಹರಿಯುವ ಮಾರ್ಗಕ್ಕೆ ರಸ್ತೆ ಮಾಡಬೇಕಾಗಿಲ್ಲ . ಪ್ರಕೃತಿ ಸಹಜವಾಗಿಯೇ ಇರುವ ರಾಜಕಾಲುವೆ ಸ್ವಚ್ಚವಾಗಿದ್ದರೆ ಸಾಕು ಎಂದರು . ರಾಜಕಾಲುವೆಗೆ ಪ್ಲಾಸ್ಟಿಕ್ ತ್ಯಾಜ್ಯ ತುಂಬಿದರೆ ನೀರು ಮನೆಗಳು , ಬೆಳೆಗಳಿಗೆ ನುಗ್ಗಿ ನಮ್ಮ ರೈತರಿಗೆ ಹಾನಿಯಾಗುತ್ತದೆ ಆದ್ದರಿಂದ ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಇಚ್ಛೆಯಂತೆ ಕೆರೆಗಳನ್ನು ಉಳಿಸಿಬೇಕು ಆಗ ಮಾತ್ರ ಅಂತರ್ಜ ಲ ವೃದ್ಧಿಯಾಗಿ ನಿಮಗೆ ಕುಡಿಯಲು , ಕೃಷಿಗೆ ಶುದ್ದ ಜಲ ಸಿಗುತ್ತದೆ ಎಂದರು . ನಾನು ಈಗಾಗಲೇ ಕೋಲಾರ ಜಿಲ್ಲೆಯ ಕೆರೆಗಳ ಅಭಿವೃದ್ಧಿಗೆ ಹಣ ನೀಡಿದ್ದೇನೆ , ನಿಮ್ಮ ಸಂಸದರನ್ನು ಬಿಡಬೇಡಿ , ಮತ್ತಷ್ಟು ಹಣ ತನ್ನಿ ಎಂದು ಒತ್ತಡ ಹಾಕಿ , ಅವರು ನಮ್ಮ ಬಿಜೆಪಿಯವರೇ ಎಂದರು . ಕೆರೆಗಳು ತುಂಬಿದರೆ ಕೊಳವೆ ಬಾವಿ ಆಳಕ್ಕೆ ಹಾಕುವ ಅಗತ್ಯವಿಲ್ಲ , ನರೇಗಾದಡಿ ನಿಮಗೆ 309 ರೂ ಕೂಲಿ ನೀಡಲಾಗುತ್ತದೆ , ಜನರ ಸಹ ಭಾಗಿತ್ವದಲ್ಲೇ ಕೆರೆಗಳ ಅಭಿವೃದ್ಧಿ ಮಾಡ ಬೇಕು , ಮಹಿಳೆಯರು ಗುಂಪುಕಟ್ಟಿಕೊಂಡು ಕೆರೆ ಅಭಿವೃದ್ಧಿಗೆ ನೋಂದಣಿ ಮಾಡಿಸಿ ಡಿಸಿಯ ವರನ್ನು ಸಂಪರ್ಕಿಸಿ ಎಂದರು . ಕೆರೆಗಳು ಕೋಲಾರ ಜಿಲ್ಲೆಗೆ ಉತ್ತಮ ಕೊಡುಗೆ ಇದ್ದಂತೆ , ಕೆರೆಗಳು ಪ್ರಕೃತಿ ಸಹಜವಾಗಿ ಸಿಕ್ಕ ವರ ವಾಗಿದೆ , ಆ ಕೆರೆಗಳಿಗೆ ನೀರು ಹರಿಯುವ ಮಾರ್ಗ ಒತ್ತುವರಿ ಮಾಡಿಕೊಂಡು ದುರ್ಬಳಕೆ ಮಾಡಿಕೊಂಡರೆ ಮನೆಗಳು , ಬೆಳೆಗಳಿಗೆ ನೀರು ನುಗ್ಗಿ ಹಾನಿಯಾಗುತ್ತದೆ ಇದನ್ನು ಅರಿತು ನಿಮ್ಮ ಊರಿನ ಕೆರೆಯನ್ನು ನೀವೇ ಅಭಿ ವೃದ್ಧಿ ಮಾಡಿಕೊಳ್ಳಬೇಕು , ಸರ್ಕಾರ ಅನುದಾನ ನೀಡುತ್ತದೆ ಎಂದು ತಿಳಿಸಿದರು . ನರೇಗಾ ಕೂಲಿ ದಿನಗಳ ಹೆಚ್ಚಳ ಮಾಡಿದರೆ ಕೃಷಿಕೆಲಸಕ್ಕೆ ಜನ ಸಿಗೊಲ್ಲ . ಆಹಾರಧಾನ್ಯ ಬೆಳೆಯುವುದು ಅಷ್ಟೇ ಮುಖ್ಯವಲ್ಲವೇ ಎಂದು ಪ್ರಶ್ನಿಸಿ , ಮಹಿಳೆಯರೊಂದಿಗೆ ತೆಲುಗಿನಲ್ಲಿ , ಕೆಲವು ಮಾತುಗಳನ್ನು ತಮಿಳಿನಲ್ಲೂ ಮಾತನಾಡಿ ಗಮನ ಸೆಳೆದರು . ಗ್ರಾ.ಪಂ ಅಧ್ಯಕ್ಷರನ್ನು ಕರೆದು ನೀವು ಅಧಿಕಾರಿಗಳನ್ನು ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಿ , ನೀವು ಸುಮ್ಮನಿದ್ದರೆ ಕಾಮಗಾರಿ ಚೆನ್ನಾಗಿ ನಡೆ ಯೋದಿಲ್ಲ . ನೀವು ಜನರಿಂದ ಆಯ್ಕೆ ಯಾಗಿದ್ದೀರಿ , ಪ್ರಶ್ನಿಸಿ ಎಂದು ಸಲಹೆ ನೀಡಿದರು . ಈ ಸಂದರ್ಭದಲ್ಲಿ ಸಂಸದ ಎಸ್.ಮುನಿ ಸ್ವಾಮಿ , ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ , ಮಾಜಿ ಸಚಿವ ವರ್ತೂರು ಪ್ರಕಾಶ್ , ಜಿಲ್ಲಾಧಿಕಾರಿ ವೆಂಕಟ್‌ರಾಜಾ , ಜಿಪಂ ಸಿಇಒ ಯುಕೇಶ್ ಕುಮಾರ್.ಮಾಜಿ ಶಾಸಕರಾದ ಎಂ . ನಾರಾ ಯಣ ಸ್ವಾಮಿ , ಬಿ.ಪಿ.ವೆಂಕಟ ಮುನಿ ಯಪ್ಪ.ವೈ.ಸಂಪಂಗಿ , ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ ಮತ್ತಿತರರಿದ್ದರು .

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ ಅಬ್ಬನಡ್ಕ ಪದ್ಮಶ್ರೀ ಸತೀಶ್ ಪೂಜಾರಿ ಆಯ್ಕೆ

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : 23ನೇ ವರ್ಷದ ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ ಅಬ್ಬನಡ್ಕ ಪದ್ಮಶ್ರೀ ಸತೀಶ್ ಪೂಜಾರಿ ಆಯ್ಕೆ
ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ 23ನೇ ವರ್ಷದ ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ ಅಬ್ಬನಡ್ಕ ಪದ್ಮಶ್ರೀ ಸತೀಶ್ ಪೂಜಾರಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇವರು ಪ್ರಸುತ್ತ ನಂದಳಿಕೆ ಗ್ರಾಮ ಪಂಚಾಯತ್ ಸದಸ್ಯರಾಗಿ, ನಂದಳಿಕೆ ಸಂಜೀವಿನಿ ಒಕ್ಕೂಟದ ಸದಸ್ಯರಾಗಿ, ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮತಿಯ ಮಾಜಿ ಕಾರ್ಯದರ್ಶಿಯಾಗಿ, ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿಯ ಕ್ರಿಯಾಶೀಲರಾಗಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.