ಕುಂದಾಪುರ ಐ.ಸಿ,ವೈ.ಎಮ್. ಸಂಘಟನೆಯಿಂದ “ರೊಜಾರಿಯಾ 22” ಕಿರು ನಾಟಕಗಳ ಸ್ಪರ್ಧೆ


ಕುಂದಾಪುರ, ಅ.4: ಕುಂದಾಪುರ ರೋಜರಿ ಚರ್ಚಿನ ಭಾರತೀಯ ಕ್ರೈಸ್ತ ಯುವ ಸಂಘಟನೆಯಿಂದ “ರೊಜಾರಿಯಾ 22” ಕೊಂಕಣಿ ಕಿರು ನಾಟಕಗಳ ಸ್ಪರ್ಧೆ ಚರ್ಚ್ ಮಟ್ಟದಲ್ಲಿ ವಾಳೆಯವರಿಗಾಗಿ ನಡೆಸಲಾಯಿತು.
ಕಾರ್ಯಕ್ರಮವನ್ನು ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಮತ್ತು ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಪರದೆ ಸರಿಸಿ ಉದ್ಘಾಟಿಸಿದರು.
‘ಇಂತಹ ಒಂದು ಸ್ಪರ್ಧೆಗಳಿಂದ ನಮ್ಮಲ್ಲಿ ಒಗಟ್ಟು ಉಂಟಾಗುತ್ತದೆ, ವಾಳೆಯವರಲ್ಲಿ ಸಮ್ಮಿಲನವಾಗುತ್ತದೆ, ನಮ್ಮೊಳಗಿನ ಪ್ರತಿಭೆ ಹೊರಹೊಮ್ಮಲು ಸಹಾಯಕವಾಗುತ್ತದೆ’ ಎಂದು ಸಂಘಟಿಸಿದವರಿಗೆ ಅಭಿನಂದನೆ ಸಲ್ಲಿಸಿ’ ಅ|ವಂ|ಸ್ಟ್ಯಾನಿ ತಾವ್ರೊ ಸ್ಪರ್ಧಿಗಳಿಗೆ ಶುಭ ಹಾರೈಸಿದರು.
ಸಂಘಟನೆಯೆ ಸಿದ್ದ ಪಡಿಸಿದ ವಿಷಯಗಳನ್ನು ಚೀಟಿ ಎತ್ತುವ ಮೂಲಕ ತಮಗೆ ಬಂದ ವಿಷಯಗಳ ಮೇಲೆ 10 ನಿಮಿಷಗಳ ಕಿರು ನಾಟಕಗಳನ್ನು ಪ್ರದರ್ಶಿಸಲಿಕ್ಕೆ ಇದ್ದು, ಸೈಂಟ್ ಲೂರ್ದ್ ವಾಳೆ ಪ್ರಥಮ ಸ್ಥಾನ, ದ್ವೀತಿಯ ಸ್ಥಾನ ರೋಜರಿ ವಾಳೆ ಪಡೆದರೆ ಫಾತಿಮಾ ವಾಳೆ ತ್ರತೀಯ ಸ್ಥಾನ ಪಡೆಯಿತು.
ತಿರ್ಪುಗಾರರಾಗಿ ವಂ|ರೊಲ್ವಿನ್, ಸಿಸ್ಟರ್ ಸುನೀತಾ ಮತ್ತು ಲವೀಟಾ ಪಿಂಟೊ ಸಹಕರಿಸಿದರು.
ಕಾರ್ಯಕ್ರಮದ ವೆದೀಕೆಯಲ್ಲಿ ಉಡುಪಿ ಧರ್ಮಪ್ರಾಂತ್ಯದ ಐ.ಸಿ.ವೈ.ಎಮ್. ಸಂಘಟನೇಯ ಅಧ್ಯಕ್ಷ ಲೈನಿಶ್ ಮಿರಾಂಡ, ಕಾರ್ಯದರ್ಶಿ ಆ್ಯಸ್ಲಿ ಡಿಸೋಜಾ ಶುಭ ಕೋರಿದರು. ವಲಯದ ಅಧ್ಯಕ್ಷ ರೆನ್ಸನ್ ಡಿಸೋಜಾ, ವಲಯದ ಕಾರ್ಯದರ್ಶಿ ಅಂಕಿತಾ ಬುತೆಲ್ಲೊ, ಐ.ಸಿ.ವೈ.ಎಮ್. ಸಚೇತಕರಾದ ಶಾಂತಿ ಬರೆಟ್ಟೊ, ಜೆಸನ್ ಪಾಯ್ಸ್, ಕುಂದಾಪುರ ಚರ್ಚಿನ ಪಾಲನ ಮಂಡಳಿ ಕಾರ್ಯದರ್ಶಿ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನಾ, ಉಪಸ್ಥಿತರಿದ್ದರು. ಐ.ಸಿ.ವೈ.ಎಮ್. ಸಂಘಟನೇಯ ಸಾಂಸ್ಕ್ರತಿಕ ಕಾರ್ಯದರ್ಶಿ ರೀಯಾ ಕ್ರಾಸ್ತಾ ಸ್ವಾಗತಿಸಿದರು, ಪ್ರಿಯೆಲ್ ಡಿಸೋಜಾ, ಕಾರ್ಯದರ್ಶಿ ಜಾಸ್ನಿ ಡಿಆಲ್ಮೇಡಾ ಕಾರ್ಯಕ್ರಮಗಳನ್ನು ನಿರೂಪಿಸಿದರು. ಅಧ್ಯಕ್ಷ ಕೆಲ್ವಿನ್ ರೋಚ್ ವಂದಿಸಿದರು
.

ಕುಂದಾಪುರಾಂತ್ ಫಾ|ನೊಯೆಲ್ ಆನಿ ಬ್ರದರ್ ಪ್ರಕಾಶ್ ಪಂಗ್ಡಾಚಿ ರೆತಿರ್ – ಭಕ್ತಿಕಾಂಚಿಂ ಖೇಟ್


ಕುಂದಾಪುರ್, ಅ.4: ಕುಂದಾಪುರ್ ರೋಜಾರ್ ಮಾಯೆಚ್ಯಾ ಇಗರ್ಜೆ ಫಾ|ನೊಯೆಲ್ ಮಸ್ಕರೆನ್ಹಾಸ್ ಆನಿ ಬ್ರದರ್ ಪ್ರಕಾಶ್ ಡಿಸೋಜಾ ಹಾಂಚ್ಯಾ ಪಂಗ್ಡಾಚಿ ರೆತಿರ್ ಆಜ್ ಥಾವ್ನ್ ಆರಂಭ್ ಜಾಲಿ. ಸುರ್ವೆಚ್ಯಾ ದಿಸಾಚ್ ಭಕ್ತಿಕಾಂಚಿಂ ಖೇಟ್ ದಿಸೊನ್ ಆಯ್ಲಿ.
ಆಯ್ಚ್ಯಾ ದಿಸಾ ಕುಟ್ಮಾ ಜಿವಿತಾ ವಿಶಿಂ ಶಿಕೊಣ್ ಆಸೊನ್ ಅನೇಕ್ ಪ್ರಾರ್ಥನಾ ಚಲವ್ನ್ ವೆಲಿ. ಫಾಲ್ಯಾಂಚ್ಯಾ ದಿಸಾ. ರೆತಿರ್ 3 ಥಾವ್ನ್ 7 ವೊರಾ ಮ್ಹಣಾಸರ್ ಆಸ್ತೆಲಿ. ವಿಶೇಷ್ ಜಾವ್ನ್ ಯುವಜಣಾಂಕ್ ಭುಗ್ರ್ಯಾಂಕ್ 5 ಥಾವ್ನ್ 7 ವೊರಾ ಮ್ಹಣಾಸರ್ ರೆತಿರ್ ಆಸ್ತೆಲಿ.
ಫಿರ್ಗಜೆಚೊ ವಿಗಾರ್ ಭೋವ್ ಮಾ|ಬಾಪ್ ಸ್ಟ್ಯಾನಿ ತಾವ್ರೊನ್ ಆನಿ ಸಹಾಯಕ್ ಯಾಜಕ್ ಅಶ್ವಿನ್ ಆರಾನ್ಹಾನ್ ಭಕ್ತಿಂಕಾಂಕ್ ಯೆವ್ಕಾರ್ ಮಾಗ್ಲಾ.

ಬಸ್ರೂರು- ಕಥೊಲಿಕ್ ಸಭಾ, ಐ.ಸಿ.ವೈ.ಮ್, ವೈ.ಸಿ.ಎಸ್. ಸಂಘಟನೇಗಳ ಸಹಯೋಗದಲ್ಲಿ ಕುಂದಾಪುರ ರೈಲ್ವೆ ಸ್ಟೇಷನಲ್ಲಿ “ನಿರ್ಮಲ ಪರಿಸರ ಅಭಿಯಾನ”

ಬಸ್ರೂರು; ಕಥೊಲಿಕ್ ಸಭಾ ಉಡುಪಿ ಪ್ರದೇಶ(ರಿ) ಬಸ್ರೂರು ಘಟಕ , ಐ.ಸಿ.ವೈ.ಮ್ ಮತ್ತು ವೈ.ಸಿ.ಎಸ್ ಬಸ್ರೂರ್ ಇವರ ಸಹಯೋಗದಲ್ಲಿ ಮತ್ತು ಕಥೊಲಿಕ್ ಸಭಾ ಕುಂದಾಪುರ ವಲಯ ಇವರ ಮಾರ್ಗದರ್ಶನದೊಂದಿಗೆ ಕುಂದಾಪುರ ರೈಲ್ವೆ ಸ್ಟೇಷನಲ್ಲಿ “ ನಿರ್ಮಲ ಪರಿಸರ ಅಭಿಯಾನ” ಕಾರ್ಯಕ್ರಮ ದಿನಾಂಕ 02/10/2022 ರಂದು ಹಮ್ಮಿಕೊಳ್ಳಲಾಗಿತ್ತು. ಗಿರೀಶ್ ರಾಹ್ಹಳ್ಕರ್( ಎಸಿಸ್ಟಂಟ್ ಸೆಫ್ಟೀ ಒಫೀಸರ್ ಮತ್ತು ಟೆಲಿಕಮ್ಯೂನಿಕೆಷನ್ ಹೆಡ್ ಕ್ವಾರ್ಟರ್ ಮಡ್ಗಾಂವ್) ಇವರು ಎಲ್ಲಾ ಸಂಘಟನೆಯ ಅಧ್ಯಕ್ಷರಿಗೆ ಹ್ಯಾಂಡ್ ಗ್ಲೌಸ್ ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
“ ಇಂತಹ ಕಾರ್ಯಕ್ರಮಗಳಿಂದ ಸ್ವಚತೆ ಬಗ್ಗೆ ಜಾಗೃತಿ ಮೂಡಿಸಲು ಸಹಕಾರಿಯಾಗುತ್ತದೆ “ ಎಂದು ಹೇಳಿ ಚಾಲನೆ ನೀಡಿದರು. ಕಥೊಲಿಕ್ ಸಭಾ ಕುಂದಾಪುರ ವಲಯದ ಅಧ್ಯಕ್ಷರಾದ ಶ್ರೀಮತಿ ಶಾಂತಿ ಪಿರೇರಾ ಸ್ವಚತೆ ಬಗ್ಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ 50 ಕ್ಕೂ ಅಧಿಕ ಮಂದಿ ಹಾಜರಿದ್ದರು. ಕಾರ್ಯಕ್ರಮದಲ್ಲಿ ಕಥೊಲಿಕ್ ಸಭಾ ಬಸ್ರೂರು ಘಟಕದ ಅಧ್ಯಕ್ಷರಾದ ವಿಕ್ರಮ್ ಡಿ’ ಸೋಜ, ಕಾರ್ಯದರ್ಶಿ ಮರಿಯ ಡಿ’ ಸಿಲ್ವಾ ಐ.ಸಿ.ವೈ.ಮ್ ಅಧ್ಯಕ್ಷರಾದ ಪ್ರಿನ್ಸನ್ ಬಸ್ರೂರ್ , ವೈ.ಸಿ.ಎಸ್ ಅಧ್ಯಕ್ಷರಾದ ಗ್ಲೆನಿಟಾ , ಐ.ಸಿ.ವೈ.ಮ್ ಮತ್ತು ವೈ.ಸಿ.ಎಸ್ ನ ಎನಿಮೇಟರ್ ಅನುಷಾ ಡಿ’ ಕೋಸ್ಟಾ, ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮೇಬಲ್ ಡಿ’ಸೋಜಾ ನಿರೂಪಿಸಿದರು. ಹ್ಯಾನ್ಸಿ ಡಿ’ ಮೆಲ್ಲೊ ವಂದಿಸಿದರು.

ಶಿರ್ವ ಸಂತ ಮೇರಿ ಕಾಲೇಜು “ಸಿ ಪ್ರೋಗ್ರಾಮ್ ಮೇಡ್ ಈಜಿ” – ಪ್ರಶ್ನೋತ್ತರ ಮಾಲಿಕೆ ಪುಸ್ತಕ ಬಿಡುಗಡೆ

ಶಿವ೯: ಇಲ್ಲಿನ ಶಿರ್ವ ಸಂತಮೇರಿ ಮಹಾವಿದ್ಯಾಲಯದ ಗಣಕ ವಿಜ್ಞಾನ ವಿಭಾಗದ ವತಿಯಿಂದ ಏರ್ಪಡಿಸಿದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕಾಲೇಜಿನ ಕಚೇರಿ ಅಧೀಕ್ಷಕ್ಕಿ ಶ್ರೀಮತಿ ಡೋರಿನ್ ಡೀಸಿಲ್ವ ಅವರು ಉಪನ್ಯಾಸಕ ಕೆ.ಪ್ರವೀಣ್ ಕುಮಾರ್‍ರವರ “ಸಿ ಪ್ರೋಗ್ರಾಮ್ ಮೇಡ್ ಈಜಿ” – ಪ್ರಶ್ನೋತ್ತರ ಮಾಲಿಕೆ ಪುಸ್ತಕ ಬಿಡುಗಡೆಗೊಳಿಸಿದರು. ಪ್ರತಿಯೊಂದು ಪುಸ್ತಕ ಒಂದು ಒಳ್ಳೆಯ ಸ್ನೇಹಿತ, ಪುಸ್ತಕಗಳ ಓದುವ ಮೂಲಕ ಅನೇಕ ವಿಷಯಗಳನ್ನು ಸಂಗ್ರಹಿಸಬಹುದು ಮತ್ತು ವಿವಿಧ ಜ್ಞಾನಾರ್ಜನೆಗಳನ್ನು ವಿದ್ಯಾರ್ಥಿಗಳು ವೃದ್ಧಿಸಿಕೊಳ್ಳಬಹುದು.
ಪರೀಕ್ಷಾ ತಯಾರಿಕೆಯಲ್ಲಿ ಇಂದಿನ ವಿದ್ಯಾರ್ಥಿಗಳಿಗೆ ಹೊಸ ಹೊಸ ಸವಾಲುಗಳು ಎದುರಾಗುವುದು ಸಹಜ. ಈ ನಿಟ್ಟಿನಲ್ಲಿ ಪರೀಕ್ಷಾ ಪೂವ೯ ತಯಾರಿಯಾಗಿ ಇಂತಹ ಪ್ರಶ್ನೋತ್ತರ ಮಾಲಿಕೆ ಪುಸ್ತಕಗಳು ವಿದ್ಯಾರ್ಥಿಯ ಪರೀಕ್ಷಾ ಒತ್ತಡವನ್ನು ಕಡಿಮೆಗೊಳಿಸಲು ಸಹಕಾರಿಯೆಂದು ಪ್ರಾಂಶುಪಾಲರಾದ ಡಾ.ಹೆರಾಲ್ಡ್ ಐವನ್ ಮೊನಿಸ್ ರವರು ಪುಸ್ತಕದ ಬಗ್ಗೆ ಲೇಖಕರನ್ನು ಪ್ರಶಂಸೆಯ ಮಾತುಗಳೊಂದಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಬಿ.ಸಿ.ಎ. ವಿಭಾಗದ ಮುಖ್ಯಸ್ಥ ಹಾಗೂ ಮಾಹಿತಿ ತಂತ್ರಜ್ಞಾನದ ಸಂಯೋಜಕರಾದ ಲೆಫ್ಟಿನೆಂಟ್ ಕೆ.ಪವೀಣ್ ಕುಮಾರ್ ರವರು ಇಂತಹ ಪುಸ್ತಕಗಳನ್ನು ತಯಾರು ಮಾಡಲು ನನ್ನ ಗಣಕ ವಿಜ್ಞಾನದ ವಿದ್ಯಾರ್ಥಿಗಳೆ ಪ್ರೇರಕ ಶಕ್ತಿ, ಅವರಿಗೆ ನಾನು ಅಭಾರಿಯಾಗಿದ್ದೇನೆ. ಪುಸ್ತಕದ ಬಗ್ಗೆ ಮಾತನಾಡುತ್ತಾ ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ವಯ ಪ್ರಥಮ ಬಿ.ಸಿ.ಎ. ಒಂದನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪರೀಕ್ಷಾ ದೃಷ್ಟಿ ಯಿಂದ ಈ ಪುಸ್ತಕ ಹೆಚ್ವು ಸಹಕಾರಿ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಬಿಸಿಎ ವಿಭಾಗದ ಅಧ್ಯಾಪಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಮಹಮ್ಮದ್ ಆಶಿಕ್, ಮಹಮ್ಮದ್ ಜಿಯಾನ್ ಸಹಕರಿಸಿದ್ದರು.ಕು. ರಕ್ಷ ಮತ್ತು ಬಳಗ ಪ್ರಾರ್ಥಿಸಿ,ಕು. ಜಿಯಾ ಸಿ ಪೂಜಾರಿ ವಂದಿಸಿದರು., ಕು. ಸನಿಯಾ ಶೇಕ್ ಸ್ವಾಗತಿಸಿ, ಕು.ತರನಂ ಕಾರ್ಯಕ್ರಮ ನಿರೂಪಿಸಿದರು.

ನಡೆಯಬೇಕಾಗಿದ್ದ ವಾಲ್ಮೀಕಿ ಜಯಂತಿ ಪೂರ್ವ ಬಾವಿ ಸಭೆಯನ್ನು, ಸಮುದಾಯದ ಮುಖಂಡರು ಬಹಿಷ್ಕರಿಸಿ ಮನವಿ ಪತ್ರ ಸಲ್ಲಿಕೆ

ಶ್ರೀನಿವಾಸಪುರ : ಸೋಮವಾರ ತಹಶೀಲ್ದಾರ್ ನೇತೃತ್ವದಲ್ಲಿ ನೌಕರರ ಭವನದಲ್ಲಿ ನಡೆಯಬೇಕಾಗಿದ್ದು, ವಾಲ್ಮೀಕಿ ಜಯಂತಿ ಪೂರ್ವ ಬಾವಿ ಸಭೆಯನ್ನು, ಸಮುದಾಯದ ಮುಖಂಡರು ಬಹಿಷ್ಕರಿಸಿ, ತಾಲೂಕು ಕಚೇರಿಯ ಮುಂಬಾಗದಲ್ಲಿ ಸರ್ಕಾರಕ್ಕೆ ಬೇಡಿಕೆಗಳ ಮನವಿ ಪತ್ರವನ್ನು ಶಿರಸ್ತೆದಾರ್ ಮನೋಹರ್ ಮಾನೆರವರಿಗೆ ಸಲ್ಲಿಸಿದರು.
ವಾಲ್ಮೀಕಿ ಸಂಘದ ತಾಲೂಕು ಅಧ್ಯಕ್ಷ ಆಂಜನೇಯಪ್ಪ ಮಾತನಾಡಿ ನಮ್ಮ ಸಮುದಾಯದ ಸ್ವಾಮಿಗಳಾದ ಪ್ರಸನ್ನಾನಂದ ಸ್ವಾಮಿಜಿಗಳ ನೇತೃತ್ವದಲ್ಲಿ ಬೆಂಗಳೂರಿನ ಪ್ರೀಡಂಪಾರ್ಕ್‍ನಲ್ಲಿ ಮೀಸಲಾತಿಗಾಗಿ ಹಲವು ದಿನಗಳಿಂದ ಸತ್ಯಾಗ್ರಹ ಮಾಡುತ್ತಿದ್ದಾರೆ. ಸರ್ಕಾರ ಇದುವರೆಗೂ ಸ್ಪಂದನೆ ಮಾಡಿಲ್ಲ. 9 ನೇ ತಾರೀಖು ಒಳಗೆ, ಮೀಸಲಾತಿ ಜಾರಿಮಾಡಿದಿದ್ದಲ್ಲಿ ನಾವು ಜಯಂತಿ ಬಹಿಷ್ಕಾರ ಮಾಡುತ್ತೇವೆ.ನೀವು ಸರ್ಕಾರದ ನಿಯಮಗಳಂತೆ, ಆಯಚರಣೆ ಮಾಡಿಕೊಳ್ಳಿ ಎಂದರು.
ಸರ್ಕಾರದಿಂದ ಮೀಸಲಾತಿ ಜಾರಿಮಾಡಿದ್ದಲ್ಲಿ ನಾವು ನಮ್ಮ ಸಂಘದ ವತಿಯಿಂದ ಜಯಂತಿಯನ್ನು ಅದ್ದೂರಿಯಾಗಿ ಮಾಡಲಾಗುವುದು. ನಮ್ಮ ಉದ್ದೇಶ ಎಸ್‍ಟಿ ಸಮುದಾಯಕ್ಕೆ 7.5% ಮೀಸಲಾತಿ, ಎಸ್‍ಸಿ ಜನಾಂಗಕ್ಕೆ 18% ಹೆಚ್ಚಳ ಆಗುವವರೆಗೂ ನಮ್ಮ ರಾಜ್ಯದ ವಾಲ್ಮೀಕಿ ಸಮುದಾಯ ಸಂಘಟನೆಗಳ ಆದೇಶದ ಮೇರೆಗೆ ಹಾಗೂ ಸರ್ಕಾರದ ಆದೇಶ ಹೊರಬರುವವೆರಗೂ ವಾಲ್ಮೀಕಿ ಜಯಂತಿ ಪೂರ್ವ ಬಾವಿ ಸಭೆಗಳನ್ನು , ಸಂಘದ ಕಾರ್ಯಕ್ರಮಗಳನ್ನು ಬಹಿಷ್ಕರಿಸುತ್ತೇವೆ ಎಂದು ಸಂಘಟನೆ ಮುಖಂಡರು ಎಚ್ಚರಿಕೆ ನೀಡಿದರು.
ಹಾಗೂ ಕೋಲಾರದಲ್ಲಿ ಇದೇ ತಿಂಗಳು 7ರಂದು ನಮ್ಮ ತಾಲ್ಲೂಕಿನಿಂದ 500 ಜನ ವಾಲ್ಮೀಕಿ ಸಮುದಾಯದ ಮುಖಂಡರೊಂದಿಗೆ, ಮೀಸಲಾತಿ ಜಾರಿಗಾಗಿ ಆಗ್ರಹಿಸಿ, ಜಿಲ್ಲಾಧಿಕಾರಿಗಳ ಕಚೇರಿಗೆ ಕಾಲ್ನಡಿಗೆ ಮುಖಾಂತರ ತೆರಳಿ ಮನವಿ ಸಲ್ಲಿಸಲಾಗುವುದು. ನಮ್ಮ ಎಸ್‍ಸಿ, ಎಸ್‍ಟಿ ಕುಲಬಾಂದವರು, ಹೆಚ್ಚಿನ ಸಂಖ್ಯೆಯಲ್ಲಿ ಭಾಘವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಸಿ ಎಂದು ಮನವಿ ಮಾಡಿದರು.
ಹೊಸಹಳ್ಳಿ ಗ್ರಾ.ಪಂ. ಸದಸ್ಯ ಮೋಹನ್‍ಬಾಬು ಎಪಿಎಂಸಿ ಮಾಜಿ ಉಪಾಧ್ಯಕ್ಷ ಕೃಷ್ಣಪ್ಪ, ಮುಖಂಡರಾದ ಗುಮ್ಮರೆಡ್ಡಿಪುರ ವೆಂಕಟೇಶ್‍ನಾಯಕ್, ಹರೀಶ್‍ನಾಯಕ್, ನರೇಶ್, ನರಸಿಂಹ , ಮಂಜುನಾಥ್, ಎಂ. ರಾಮಚಂದ್ರ ಇದ್ದರು.

ತಾಲ್ಲೂಕಿನಾದ್ಯಂತ ಹಸುಗಳಿಗೆ ಚರ್ಮಗಂಟು ರೋಗ ಕಾಯಿಲೆ ಹರಡುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ: ನಿರ್ದೇಶಕ ಎನ್.ಹನುಮೇಶ್

ಶ್ರೀನಿವಾಸಪುರ 2 : ಪ್ರಸ್ತುತ ತಾಲ್ಲೂಕಿನಾದ್ಯಂತ ಹಸುಗಳಿಗೆ ಚರ್ಮಗಂಟು ರೋಗ ಕಾಯಿಲೆ ಹರಡುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಒಕ್ಕೂಟದ ನಿರ್ದೇಶಕ ಎನ್.ಹನುಮೇಶ್ ಹೇಳಿದರು.
ಪಟ್ಟಣದ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮದಿಂದ ತಾಲೂಕು ಶಿಬಿರ ಕಚೇರಿಯಲ್ಲಿ ಇತ್ತೀಚಿಗೆ ರಾಸು ವಿಮಾ ಪರಿಹಾರ ಚೆಕ್ ವಿತರಿಸಿ ಮಾತನಾಡಿದರು.
ಪಶು ಸಂಗೋಪನೆ ಇಲಾಖೆವತಿಯಿಂದ ಪಶುವೈದ್ಯರು ಲಸಿಕೆಯನ್ನು ನೀಡಲಾಗುತ್ತಿದೆ. ಆದ್ದರಿಂದ ಹಾಲು ಉತ್ಪಾದಕರು ಹಸುಗಳಿಗೆ ಚರ್ಮಗಂಟು ರೋಗ ಕಾಯಿಲೆ ಕಂಡುಬಂದಲ್ಲಿ ತುರ್ತಾಗಿ ಶಿಬಿರದ ಪಶು ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆಯನ್ನು ಪಡೆದು ನಿಯಂತ್ರಣ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಎಲ್ಲಾ ಹಾಲು ಉತ್ಪಾದಕರು ಕಡ್ಡಾಯವಾಗಿ ರಾಸುಗಳ ವಿಮೆ ಮಾಡಿಸಬೇಕು. ರಾಸು ವಿಮಾ ಪರಿಹಾರ ಚೆಕ್ ಪಡೆದಿರುವ ಫಲಾನುಭವಿಗಳು ಕಡ್ಡಾಯವಾಗಿ ರಾಸುಗಳನ್ನು ಖರೀದಿಸಿ , ತಮ್ಮ ಸಂಘಗಳಿಗೆ ಉತ್ತಮ ಗುಣಮಟ್ಟದ ಹಾಲನ್ನು ಪೂರೈಸಬೇಕೆಂದು ಮತ್ತು ಒಕ್ಕೂಟದಿಂದ ನೀಡುತ್ತಿರುವ ಸೌಲಭ್ಯಗಳನ್ನು ಸದುಪಯೋಗಿಸಿಕೊಳ್ಳಲು ತಿಳಿಸುತ್ತಾ, ಮೃತಪಟ್ಟ ರಾಸುಗಳ ವಿಮಾ ಪರಿಹಾರ 11 ಚೆಕ್‍ಗಳ 6.10 ಲಕ್ಷ ರೂಗಳ ಚೆಕ್‍ಗಳನ್ನು ವಿತರಿಸಿದರು.
ಉಪ ವ್ಯವಸ್ಥಾಪಕ ಕೆ.ಎಂ.ಮುನಿರಾಜು ಮಾತನಾಡಿದರು. ಉಪ ಕಛೇರಿಯ ವಿಸ್ತರಣಾಧಿಕಾರಿಗಳಾದ ಎಂ.ಜಿ.ಶ್ರೀನಿವಾಸ್ , ಎನ್.ಶಂಕರ್, ಪಿ.ಕೆ.ನರಸಿಂಹರಾಜು, ಎಸ್.ವಿನಾಯಕ, ಕೆ.ಪಿ.ಶ್ವೇತ, ಜಿ.ಎನ್.ಗೋಪಾಲಕೃಷ್ಣಾರೆಡ್ಡಿ ಹಾಗು ಶಿಬಿರದ ಸಿಬ್ಬಂದಿಗಳು, ಅಧ್ಯಕ್ಷರು , ಕಾರ್ಯನಿರ್ವಾಹಕರು, ಫಲಾನುಭವಿಗಳು ಇದ್ದರು.

ಸುಮಿತ್ರಾ ಐತಾಳರಿಗೆ “ಹಿಂದಿ ಶಿಕ್ಷಕ ರತ್ನ ರಾಜ್ಯ ಪ್ರಶಸ್ತಿ”


ಕರ್ನಾಟಕ ರಾಜ್ಯ ಪ್ರೌಢಶಾಲಾ ಹಿಂದಿ ಶಿಕ್ಷಕರ ಸಂಘ ಬೆಂಗಳೂರು ದಾವಣಗೆರೆಯಲ್ಲಿ ಏರ್ಪಡಿಸಿದ ರಾಜ್ಯ ಮಟ್ಟದ ಸಮಾರಂಭದಲ್ಲಿ ಉಡುಪಿ ಜಿಲ್ಲೆಯ ಕುಂದಾಪುರದ ಸುಮಿತ್ರಾ ಐತಾಳರಿಗೆ ಹಿಂದಿ ಶಿಕ್ಷಕ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸರಕಾರಿ ಪ್ರೌಢಶಾಲೆ ಕಿರಿಮಂಜೇಶ್ವರದಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಸಾಹಿತಿ ಸುಮಿತ್ರಾ ಐತಾಳ ಅವರಿಗೆ ರಾಜ್ಯದ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕುಂದಾಪುರದ ಆರ್.ಎನ್.‌ಶೆಟ್ಟಿ‌ ಪದವಿ‌ ಪೂರ್ವ ಕಾಲೇಜಿನಲ್ಲಿ ಗಾಂಧಿ ಮತ್ತು‌ ಶಾಸ್ತ್ರೀ‌ ಜಯಂತಿ‌ ಆಚರಣೆ

” ಇಬ್ಬರು ರಾಷ್ಟ್ರ ನಾಯಕರ ನಾಯಕತ್ವದ ಗುಣ‌ಗಳು ಮತ್ತು ದೇಶದ ಬಗೆಗಿನ ಕಾಳಜಿ ಅವರ ಬಗ್ಗೆ ನಮ್ಮ ವೈಯುಕ್ತಿಕ ಒಲವು-ನಿಲುವುಗಳನ್ನು‌ ಮೀರಿ ನಿಲ್ಲುತ್ತವೆ. ಈ ನಿಟ್ಟಿನಲ್ಲಿ ಮಹಾತ್ಮಾ ಗಾಂಧೀ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಯವರನ್ನು ನಾವೆಲ್ಲರೂ ಸದಾ ನೆನಪಿಸಿಕೊಳ್ಳಬೇಕು” ಎಂದು ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ ಶೆಟ್ಟಿಯವರು ತಿಳಿಸಿದರು. ಗಾಂಧೀಜಿ- ಶಾಸ್ತ್ರೀಜಿ ಜಯಂತಿಯ ಅಂಗವಾಗಿ ಇಬ್ಬರೂ ಮಹಾನ್ ನಾಯಕರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಗೌರವಾರ್ಪಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು. 

ಕುಂದಾಪುರದಲ್ಲಿ ಜೀವನ ಜ್ಯೋತಿ ಶಿಬಿರ- ಜೀವನ ಎಂಬ ಸಮುದ್ರದಲ್ಲಿ ನೀವು ಇಜಲು ಕಲಿಯಬೇಕು:ಫಾ|ಸ್ಟ್ಯಾನಿ ತಾವ್ರೊ

ಕುಂದಾಪುರ, ಅ.3: ಕುಂದಾಪುರ ವಲಯ ಮಟ್ಟದಲ್ಲಿ ರೋಜರಿ ಚರ್ಚಿನ ಮುಂದಾಳತ್ವದಲ್ಲಿ ಕ್ರೈಸ್ತ ಮಕ್ಕಳಿಗೆ 3 ರೀತಿಯ ಶಿಬಿರಗಳು ನಡೆದವು, 10 ನೆ ತರಗತಿಯವರಿಗೆ ಜೀವನ ಜ್ಯೋತಿ, 9 ನೇ ತರಗತಿಯವರಿಗೆ ಜೀವನ ಅಮ್ರತ ಮತ್ತು 8 ನೇ ತರಗತಿಯವರಿಗೆ ಜೀವನ ದಿಶಾ ಎಂಬ ಶಿಬಿರಗಳ ಉದ್ಘಾಟನ ಕಾರ್ಯಕ್ರಮವು ಸಂತ ಜೋಸೆಫ್ ಶಾಲೆಯ ಸಭಾಭವನದಲ್ಲಿ ನಡೆಯಿತು.

     ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ವಲಯ ಪ್ರಧಾನ ಮತ್ತು ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ “ ನೀವು ಜೀವನದಲ್ಲಿ ಕನಸು ಕಾಣಬೇಕು, ನೀವು ಎನಾಗಬೇಕೆಂದು ಬಯಸುತ್ತಿರೊ ಅದನ್ನು ಸಾಧಿಸಿ ತೋರಿಸಲು ಈ ಶಿಬಿರಗಳು ನಿಮಗೆ ಉಪಯೋಗವಾಗುತ್ತವೆ. ನೀವು ಜೀವನ ಎಂಬ ಸಮುದ್ರದಲ್ಲಿ ಇಜಲು ಕಲಿತು ನೀವು ತಲುಪಬೇಕಾದ ಬಂದರಿಗೆ ಸುರಕ್ಷಿತವಾಗಿ ತಲುಪಬೇಕು. ನೀವು ಉತ್ತಮ ಮನುಷ್ಯರಾಗಬೇಕು, ಉತ್ತಮ ಕೆಲಸಗಳನ್ನು ಮಾಡಿದಲ್ಲಿ ನಿಮಗೆ ಬಹುಮಾನ ದೊರಕುವುದು, ಕೆಟ್ಟ ಕೆಲಸಗಳನ್ನು ಮಾಡಿದಲ್ಲಿ ನಿಮಗೆ ಶಿಕ್ಷೆ ಪ್ರಾಪ್ತಿಯಾಗುವುದು, ಈ ಶಿಬಿರಗಳಲ್ಲಿ ಕಲಿಯಲು ತುಂಬಾ ವಿಷಗಳಿರುತ್ತವೆ, ಆದರಿಂದ ಈ ಶಿಬಿರದ ಉಪಯೋಗವನ್ನು ನೀವು ಚೆನ್ನಾಗಿ ಬಳಸಿಕೊಳ್ಳಬೇಕು’ ಎಂದು ಸಂದೇಶ ನೀಡಿದರು.

   ಈ ಶಿಬಿರದ ಜವಾಬ್ದಾರಿ ವಹಿಸಿಕೊಂಡ ತಲ್ಲೂರು ಚರ್ಚಿನ ಫಾ| ಎಡ್ವಿನ್ ಡಿಸೋಜಾ, ಶಿಬಿರದ ಎರ್ಪಾಡನ್ನು ಮಾಡಿದ  ಕುಂದಾಪುರ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ನೊರೊನ್ಹಾ ಮತ್ತು ಈ ಶಿಬಿರಕ್ಕೆ ಸೇವೆ ನೀಡಲಿಕ್ಕಾಗಿ ಆಗಮಿಸಿದ ಧರ್ಮಗುರುಗಳಾದ ಪಿಯುಸ್ ನಗರ್ ಚರ್ಚಿನ ಆಲ್ಬರ್ಟ್ ಕ್ರಾಸ್ತಾ, ಪಡುಕೋಣೆ ಚರ್ಚಿನ ಫ್ರಾನ್ಸಿಸ್ ಕರ್ನೆಲೀಯೊ, ಗಂಗೊಳ್ಳಿ ಚರ್ಚಿನ ತೊಮಸ್ ರೋಶನ್ ಡಿಸೋಜಾ ಮತ್ತು ಇನ್ನಿತರ ಧರ್ಮಗುರುಗಳು ಹಾಗೂ ಧರ್ಮಭಗಿನಿಯರು, ಹಲವಾರು ಸಚೇತಕಿಯರು ಉಪಸ್ಥಿತರಿದ್ದರು.

 ಈ ಶಿಬಿರದಲ್ಲಿ ಸುಮಾರು 280 ಶಿಬಿರಾರ್ಥಿಗಳಿದ್ದವರಿಗೆ ಉಪಹಾರ ಮತ್ತು ಊಟದ ಸಿದ್ದ ಪಡಿಸಲು ರೋಜರಿ ಚರ್ಚಿನ ಸ್ತ್ರೀ ಸಂಘಟನೇಯ ಸದಸ್ಯರು ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.

ಕಾರ್ಯಕ್ರಮದ ವೇದಿಕೆಯಲ್ಲಿ ಕುಂದಾಪುರ ಚರ್ಚಿನ ಪಾಲನ ಮಂಡಳಿ ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ ಉಪಸ್ಥಿತರಿದ್ದು, ಶಿಬಿರದ ವಿದ್ಯಾರ್ಥಿಗಳೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು.