ಪಟ್ಟಣದ ಕರ್ನಾಟಕ ವಾಣಿಜ್ಯ ಮತ್ತು ಕಂಪ್ಯೂಟರ್ ಶಿಕ್ಷಣ ಸಂಸ್ಥೆಗೆ (ಕೆ.ಐ.ಐ.ಟಿ.) 4ಡಿಸ್ಟಿಂಗ್‍ಷನ್ ನೊಂದಿಗೆ ಶೇಕಡ75ರಷ್ಟು ಫಲಿತಾಂಶ

ಶ್ರೀನಿವಾಸಪುರ: ಕಳೆದಆಗಸ್ಟ್‍ಮಾಹೆಯಲ್ಲಿರಾಜ್ಯಮಟ್ಟದಲ್ಲಿಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಕನ್ನಡ ಮತ್ತುಆಂಗ್ಲ ಬೆರಳಚ್ಚು ಪರೀಕ್ಷೆಗಳಲ್ಲಿ ಪಟ್ಟಣದಕರ್ನಾಟಕ ವಾಣಿಜ್ಯ ಮತ್ತುಕಂಪ್ಯೂಟರ್ ಶಿಕ್ಷಣ ಸಂಸ್ಥೆಗೆ (ಕೆ.ಐ.ಐ.ಟಿ.) 4ಡಿಸ್ಟಿಂಗ್‍ಷನ್ ನೊಂದಿಗೆ (DISTINCTIONS ಶೇಕಡ75ರಷ್ಟು ಫಲಿತಾಂಶದೊರೆತಿದೆಎಂದು ಸಂಸ್ಥೆಯ ಪ್ರಾಂಶುಪಾಲರಾದಎನ್. ಕೃಷ್ಣಮೂರ್ತಿ ತಿಳಿಸಿದ್ದಾರೆ.
ತೇರ್ಗಡೆ ಹೊಂದಿದಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ, ಶಾಲೆಗೆ ದೊರೆತಿರುವಉತ್ತಮ ಫಲಿತಾಂಶಕ್ಕೆಕಾರಣರಾದ ಬೋಧಕರನ್ನು ಪ್ರಾಂಶುಪಾಲರಾದಎನ್. ಕೃಷ್ಣಮೂರ್ತಿ ಮತ್ತುಕೇಂದ್ರ ವ್ಯವಸ್ಥಾಪಕರಾದಆರ್. ರಾದಇವರು ಅಭಿನಂದಿಸಿದ್ದಾರೆ.

ಕುಂದಾಪುರದಲ್ಲಿ ಫಾ|ನೊಯೆಲ್ ಮತ್ತು ಬ್ರದರ್ ಪ್ರಕಾಶ್ ಇವರ ಮೂರು ದಿನಗಳ ಅಧ್ಯಾತ್ಮಿಕ ಧ್ಯಾನ ಕೂಟ ಯಶಸ್ವಿಯಾಗಿ ಸಂಪನ್ನವಾಯಿತು

ಕುಂದಾಪುರ ಅ.9: ಐತಿಹಾಸಿಕ ಚರಿತ್ರೆಯುಳ್ಳ ಕುಂದಾಪುರ ರೋಜರಿ ಮಾತೆಯ ಇಗರ್ಜಿಯಲ್ಲಿ ಬಹಳ ಹೆಸರುವಾಸಿಯಾದ, ಅತ್ಯಂತ ಹೆಚ್ಚು ಹಿಂಬಾಲಿಕರಿರುವ ಫಾ|ನೊಯೆಲ್ ಮಸ್ಕರೆನ್ಹಾಸ್ ಮತ್ತು ಬ್ರದರ್ ಪ್ರಕಾಶ್ ಡಿಸೋಜಾ ಇವರ ಪಂಗಡದಿಂದ ಮೂರು ದಿನಗಳ ಅಧ್ಯಾತ್ಮಿಕ (ಇದೆ ತಿಂಗಳ ತಾರೀಕು 4,5,6 ರಂದು) ಧ್ಯಾನ ಕೂಟ ನಡೆಯಿತು. ಮೊದಲನೇ ದಿವಸವೇ ಈ ಧ್ಯಾನಕೂಟಕ್ಕೆ ಅತ್ಯಧಿಕ ಜನ ಹಾಜರಾಗಿದ್ದರು, ಮೊದಲ ದಿನ ಕೌಟುಂಬಿಕ ಜೀವನ ಮತ್ತು ಇತರ ಅನೇಕಪ್ರಾರ್ಥನ ವಿಧಿಗಳು ನಡೆದವು. ಎರಡನೇ ದಿನ ನಮ್ಮ ಜೀವನದಲ್ಲಿ ಪಾಪಗಳು ಹೇಗೆ ಹುಟ್ಟುತ್ತವೆ, ತಪ್ಪು ಮಡಿದವರನ್ನು ಕ್ಷಮಿಸುವುದರ ಬಗ್ಗೆ ತಿಳುವಳಿಕೆ ನೀಡಲಾಯಿತು, ಹಾಗೇ ಮಕ್ಕಳಿಗೆ ಹಾಗೂ ಯುವಜನರಿಗಾಗಿ ಪ್ರಾರ್ಥನೆಗಳು ನಡೆದವು, ಈ ದಿವಸದಲ್ಲಿ ಮಕ್ಕಳು ಮತ್ತು ಯುವಜನರು ಬಹಳ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿದ್ದುದು ವೀಶೆಷವಾಗಿತ್ತು. ಮೂರನೆ ದಿವಸ ಅಸ್ವಸ್ತರಿಗೆ, ಅನಾಥರಿಗೆ, ಕೆಟ್ಟ ಅಭ್ಯಾಸಗಳಿದ್ದವರಿಗೆ, ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ, ಪಾಲನ ಮಂಡಳಿಯವಿಗೆ, ಧಾರ್ಮಿಕ ಸಹೋಹದರ ಸಹೋದರಿಯರಿಗಾಗಿ ಬ್ರದರ್ ಪ್ರಕಾಶ್ ಪ್ರಾರ್ಥನೆಗಳನ್ನು ನಡೇಸಿಕೊಟ್ಟರು. ಪ್ರಾರ್ಥನೆಗಳನ್ನು ಹೇಗೆ ಮಾಡಬೇಕೆಂದು ಫಾ|ನೊಯೆಲ್ ತಿಳಿಸಿಕೊಟ್ಟು ಪ್ರಾರ್ಥನೆಯಲ್ಲಿ ಎಷ್ಟೊಂದು ಶಕ್ತಿಯಿದೆ ಎಂದು ಸಂದೇಶದ ಮೂಲಕ ತಿಳಿಸಿಕೊಟ್ಟರು.


ಮೂರು ದಿವಸಗಳಲ್ಲಿ ಪವಿತ್ರ ಬಲಿದಾನ ನಡೆಯಿತು, ಜೊತೆಗೆ ಪರಮ ಪ್ರಸಾದದ ಆರಾಧನೆ ನಡೆಯಿತು, ಇದರಲ್ಲಿ ಮಾಲ್ಗೊಂಡ ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಎಲ್ಲರಿಗೂ ಹರ್ತಪೂರ್ವಕ ವಂದನೆಗಳನ್ನು ಸಲ್ಲಿಸಿದರು. ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಸಹಕರಿಸಿದರು. ಈ ಅಧ್ಯಾತ್ಮಿಕ ಧ್ಯಾನಕೂಟಕ್ಕೆ, ತಾಲೂಕು ಆಲ್ಲದ್ದೆ ಹೋರ ಜಿಲ್ಲೆಗಳಿಂದಲೂ ಭಕ್ತಾಧಿಗಳು ಆಗಮಿಸಿದ್ದು, ಇದುವರೆಗೆ ನಡೆದ ಅಧ್ಯಾತ್ಮಿಕ ಧ್ಯಾನಕೂಟಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನಸ್ತೋಮ ಸೇರಿ, ಈ ಧ್ಯಾನಕೂಟ ಒಂದು ದಾಖಲೆಯಾಗಿ ಮಾರ್ಪಟ್ಟಿತು.

ಚಿರಂತನ ವೃದ್ಧಾಶ್ರಮ ಸುರತ್ಕಲ್ ಇವರಿಗೆ ಒಕ್ಸಿಜನ್ ಕಾನ್ಸಂಟ್ರೆಟರ್ ಹಸ್ತಾಂತರ

ಕುಂಭಾಶಿ ಶ್ರೀ ವೆಂಕಟರಮಣ ಪ್ರಭು ಚಾರಿಟೇಬಲ್ ಟ್ರಸ್ಟ್, ಕಾವೇರಿ ಆಸ್ಪತ್ರೆ ಹಾಗೂ ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ವತಿಯಿಂದ ಚಿರಂತನ ವೃದ್ಧಾಶ್ರಮ ಸುರತ್ಕಲ್ ಇವರಿಗೆ ಒಕ್ಸಿಜನ್ ಕಾನ್ಸಂಟ್ರೆಟರ್ ಹಸ್ತಾಂತರಿಸಲಾಯಿತು.
ರೋಟರಿ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ, ಕಾರ್ಯದರ್ಶಿ ಸಚಿನ್ ನಕ್ಕತ್ತಾಯ, ರೋ. ಶೋಭಾ ಭಟ್, ಮಾಜಿ ಅಧ್ಯಕ್ಷರಾದ ರೋ. ಶಾಂತರಾಮ ಪ್ರಭು ಹಾಗೂ ಚಿರಂತನ ಟ್ರಸ್ಟಿನ ಖ್ಯಾತ ತಬಲ ವಾದಕರಾದ ಶ್ರೀ ಭಾರವಿ ದೇರಾಜೆ ಉಪಸ್ಥಿತರಿದ್ದರು.

ಸಮುದಾಯ ಪ್ರತಿಭಾ ಸಂಪನ್ನರನ್ನು ಗುರುತಿಸಿ, ಅವರಲ್ಲಿನ ಪ್ರತಿಭೆ ಅರಳಲು ನೆರವಾಗಬೇಕು-ಆರ್.ಚೌಡರೆಡ್ಡಿ

ಶ್ರೀನಿವಾಸಪುರ: ಸಮುದಾಯ ಪ್ರತಿಭಾ ಸಂಪನ್ನರನ್ನು ಗುರುತಿಸಿ, ಅವರಲ್ಲಿನ ಪ್ರತಿಭೆ ಅರಳಲು ನೆರವಾಗಬೇಕು. ಅರಳು ಪ್ರತಿಭೆಗಳು ಕಂಡ ಕನಸನ್ನು ನನಸಾಗಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಾಹಿತಿ ಪನಸಮಾಕನಹಳ್ಳಿ ಆರ್.ಚೌಡರೆಡ್ಡಿ ಹೇಳಿದರು.
ಪಟ್ಟಣದ ಉನಿಕಿಲಿ ಬಡಾವಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಸಂಗೀತ ಕಲಾವಿದೆ ಲೇಖಾ ಅವರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಎನ್.ಲೇಖಾ ಅಭಿಜಾತ ಕಲಾವಿದೆ. ಚಿಕ್ಕ ವಯಸ್ಸಿನಿಂದಲೇ ಸಂಗೀತ ಹಾಗೂ ಭರತನಾಟ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಪೋಷಕರ ಪ್ರೋತ್ಸಾಹ, ಗುರುಗಳ ಆಶೀರ್ವಾದ ಹಾಗೂ ಸತತ ಪರಿಶ್ರಮದ ಪರಿಣಾಮವಾಗಿ ಸಾಧನೆಯ ಹಾದಿಯಲ್ಲಿ ಸಾಗಿದ್ದಾರೆ ಎಂದು ಹೇಳಿದರು.
ಲೇಖಾ ರಾಜ್ಯ ಮಟ್ಟದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ತಮ್ಮ ಮಧುರವಾದ ಧ್ವನಿ ಹಾಗೂ ಸುಶ್ರ್ಯಾವ್ಯ ಗಾಯನದ ಮೂಲಕ ಸಂಗೀತ ಪ್ರಿಯರ ಪ್ರೀತಿಗೆ ಪಾತ್ರರಾಗಿದ್ದಾರೆ. ದಾನಿ ಧರ್ಮೇಶ್ ಅವರು ಲೇಖಾ ಅವರ ಪ್ರತಿಭೆಯನ್ನು ಗುರುತಿಸಿ ವಿಶೇಷವಾಗಿ ಸನ್ಮಾನಿಸುತ್ತಿದ್ದಾರೆ. ಇಂಥ ದಾನಿಗಳ ಸಂಖ್ಯೆ ಹೆಚ್ಚಬೇಕು. ಪ್ರತಿಭೆಗೆ ಪುರಸ್ಕಾರ ಸಿಗಬೇಕು. ಆದರೆ ಪ್ರೋತ್ಸಾಹದ ಕೊರತೆಯಿಂದಾಗಿ ಅದು ಎಲ್ಲರಿಗೂ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಶಿಕ್ಷಣ ಸಂಯೋಜಕ ಅಮರನಾಥ್ ಮಾತನಾಡಿ, ವಿಶ್ವ ಭಾಷೆಯಾದ ಸಂಗೀತ ಹಾಗೂ ಕಲಾವಿದರಿಗೆ ದೇಶ ಭಾಷೆಗಳ ಎಲ್ಲೆಯಿಲ್ಲ. ಕಲೆ ಮತ್ತು ಕಲಾವಿದರನ್ನು ಗೌರವಿಸುವ ಸಾಂಸ್ಕøತಿಕ ಪರಂಪರೆ ಮುಂದುವರಿಯಬೇಕು. ಲೇಖಾ, ಸಂಗೀತ ಹಾಗೂ ಭರತ ನಾಟ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಬಹುಮಾನ ಹಾಗೂ ಪಾರಿತೋಷಕ ಪಡೆದುಕೊಂಡಿದ್ದಾರೆ ಎಂದು ಹೇಳಿದರು.
ದಾನಿ ಧರ್ಮೇಶ್ ಲೇಖಾ ಅವರನ್ನು ಸನ್ಮಾನಿಸಿ ಮಾತನಾಡಿ, ಸಾಧನೆಯ ಹಾದಿಯಲ್ಲಿ ಸಾಗುವ ವ್ಯಕ್ತಿಗಳಿಗೆ ಸನ್ಮಾನ, ಗೌರವ ತಾನಾಗಿಯೇ ಸಿಗುತ್ತದೆ. ಲೇಖಾ ಬಾಲ್ಯದಿಂದಲೇ ಸಾಧಕರ ಹಾದಿಯಲ್ಲಿ ಸಾಗಿದ ಪರಿಣಾಮವಾಗಿ, ಉತ್ತಮ ಕಲಾವಿದೆಯಾಗಿ ರೂಪಗೊಳ್ಳಲು ಸಾಧ್ಯವಾಯಿತು. ಅವರು ಸಂಗೀತಾ ಹಾಗೂ ನೃತ್ಯ ಕ್ಷೇತ್ರದಲ್ಲಿ ಮುನ್ನಡೆಯಲು ಅಗತ್ಯವಾದ ಎಲ್ಲ ಪ್ರೋತ್ಸಾಹ ನೆರವು ನೀಡಲಾಗುವುದು ಎಂದು ಹೇಳಿದರು.
ಪುರಸಭಾ ಸದಸ್ಯ ನಾಗರಾಜ್, ಇಸಿಒ ಆಂಜಿನಪ್ಪ, ಶಿಕ್ಷಕರಾದ ಚಂದ್ರಶೇಖರ್, ನಾಗರಾಜ್, ಲೇಕಾ ಅವರು ಸಂಗೀತ ಹಾಗೂ ನೃತ್ಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಸಂಗೀತ ಕಲಾವಿದೆ ಲೇಖಾ, ತಂದೆ ನಾಗರಾಜ್ ಹಾಗೂ ತಾಯಿ ಪುಷ್ಪ ಅವರನ್ನು ಸನ್ಮಾನಿಸಲಾಯಿತು. ನೆನಪಿನ ಕಾಣಿಕೆ ನೀಡಿ ಸತ್ಕರಿಸಲಾಯಿತು.
ಅಂತರ ರಾಷ್ಟ್ರೀಯ ಕ್ರೀಡಾಪಟು ವಿ.ನಿಶಾಂತ್ ಕುಮಾರ್ ಸಾಹಿತಿ ಆರ್.ಚೌಡರೆಡ್ಡಿ ಅವರು ಬರೆದ ಹಾಗೂ ಯುವ ಗಾಯಕ ತುಷಾರ್ ನಾಗ್ ಹಾಡಿದ ‘ಕೊಟ್ಟರೆ ಕೊಡಬೇಕು’ ಎಂಬ ಗೀತೆಯ ಆಡಿಯೋ ಬಿಡುಗಡೆ ಮಾಡಿದರು. ದಾನಿ ದರ್ಮೇಶ್ ಅವರಿಂದ ಶಾಲಾ ಮಕ್ಕಳಿಗೆ ಇಷ್ಟದ ಬಟ್ಟೆ ವಿತರಿಸಲಾಯಿತು. ದಾನಿ ಮದುಸೂಧನ್ ಮಕ್ಕಳಿಗೆ ನೋಟ್ ಪುಸ್ತಕ ನೀಡಿದರು.
ಸಿಆರ್‍ಪಿಗಳಾದ ಗಂಗಾಧರ್, ಮಮತ, ಮುಖ್ಯ ಶಿಕ್ಷಕ ನರಸಿಂಹರೆಡ್ಡಿ ಶಿಕ್ಷಕಿ ಲಕ್ಷ್ಮಿದೇವಮ್ಮ, ಶಿಕ್ಷಕರಾದ ವಿಶ್ವನಾಥ್, ಚಂದ್ರಶೇಖರ್, ಎಸ್‍ಡಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಪ್ರಶಾಂತ್ ಇದ್ದರು.

ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಂಸ್ಕಾರವಂತ ಜೀವನ ನಡೆಸಲು ಹಾಗೂ ಆರೋಗ್ಯಕರ ಸಮಾಜ ಕಟ್ಟಲು ರಾ. ಸೇ. ಯೋಜನೆ ಪೂರಕ ವೇದಿಕೆ -ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ: ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಂಸ್ಕಾರವಂತ ಜೀವನ ನಡೆಸಲು ಹಾಗೂ ಆರೋಗ್ಯಕರ ಸಮಾಜ ಕಟ್ಟಲು ರಾಷ್ಟ್ರೀಯ ಸೇವಾ ಯೋಜನೆ ಪೂರಕ ವೇದಿಕೆ ಎಂದು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಅಭಿಪ್ರಾಯಪಟ್ಟರು .
ಗೂರವಿಮಾಕಲಪಲ್ಲಿಯ ಸಪ್ಲಮ್ಮ ದೇವಸ್ಥಾನದಲ್ಲಿ ಶ್ರೀನಿವಾಸಪುರದ ಸರ್ಕಾರಿ ಪದವಿಪೂರ್ವ ಕಾಲೇಜುವತಿಯಿಂದ ನಡೆದ ಎನ್‍ಎಸ್‍ಎಸ್ ಶಿಬಿರದಲ್ಲಿ ಮಂಗಳವಾರ ಭಾಗವಹಿಸಿ ಮಾತನಾಡಿದರು.
ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶಗಳನ್ನು ಜೀವನದ ಉದ್ದಕ್ಕೂ ಪಾಲಿಸಬೇಕು. ಶಿಬಿರದಲ್ಲಿ ಕಲಿತುಕೊಂಡ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು. ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳು ಸಂಸ್ಕಾರ ಹೆಚ್ಚಿಸುವಂತ ಮಾನವಿಯ ಮೌಲ್ಯಗಳನ್ನು ಅಳವಡಿಸಿಕಂಡಲ್ಲಿ ಭವಿಷ್ಯದಲ್ಲಿ ಉಪಯೋಗಕ್ಕೆ ಬರುತ್ತದೆ ಎಂದರು.
ವಿದ್ಯಾರ್ಥಿಗಳು ಸೇವಾಮನೋಬಾವನೆಯನ್ನು ಇಂತಹ ಶಿಬಿರಗಳಿಂದ ಬೆಳಸಿಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸೇವಾ ಮನೋಬಾವನೆಯೊಂದಿಗೆ ಗ್ರಾಮಕ್ಕೆ,ದೇಶಕ್ಕೆ ದಾರಿದೀಪವಾಗುವಂತೆ ನಡೆದುಕೊಳ್ಳಬೇಕು ಎಂದರು. ಹಾಗು ಶಿಬಿರಾರ್ಥಿಗಳು ಗ್ರಾಮದ ಜನರ ಮನಸಿನಲ್ಲಿ ಉಳಿಯುವತಂಹ ಕಾರ್ಯ ಮಾಡಬೇಕಾಗಿದೆ ಎಂದು ಸಲಹೆ ನೀಡಿದರು.
ನಾನು 40ವರ್ಷಗಳಿಂದ ನಾನು ಪ್ರತಿದಿನ ಯೋಗ ಮಾಡುತ್ತೇನೆ ನೀವು ಸಹ ಪ್ರತಿದಿನ ಯೋಗವನ್ನು ಮಾಡಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಮನವಿ ಮಾಡಿದರು.
ಜಿ.ಪಂ. ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಮುಖಂಡರಾದ ಬಿ.ವಿ.ಶಿವಾರೆಡ್ಡಿ, ಉಪ್ಪರಪಲ್ಲಿ ನಾರಾಯಣಸ್ವಾಮಿ, ಗೂರವಿಮಾಕಲಪಲ್ಲಿ ಶ್ರೀನಿವಾಸ್, ಬಾರ್ ನಾರಾಯಣಸ್ವಾಮಿ, ತೂಪಲ್ಲಿ ಮಧುಸೂದನರೆಡ್ಡಿ, ನಂಬುವಾರಿಪಲ್ಲಿ ಶಂಕರರೆಡ್ಡಿ, ಲಕ್ಷ್ಮೀಪುರ ಜಗದೀಶ್, ಪೂಲ್‍ಶಿವಾರೆಡ್ಡಿ, ಉಪನ್ಯಾಸಕರಾದ ಮಂಜುನಾಥರೆಡ್ಡಿ, ಶಿಕ್ಷಕರಾದ ಗೋಪಾಲ್, ಕಳಾಚಾರಿ ಇದ್ದರು.
ಪೋಟು 1 : ಗೂರವಿಮಾಕಲಪಲ್ಲಿಯ ಸಪ್ಲಮ್ಮ ದೇವಸ್ಥಾನದಲ್ಲಿ ಶ್ರೀನಿವಾಸಪುರದ ಸರ್ಕಾರಿ ಪದವಿಪೂರ್ವ ಕಾಲೇಜುವತಿಯಿಂದ ನಡೆದ ಎನ್‍ಎಸ್‍ಎಸ್ ಶಿಬಿರದಲ್ಲಿ ಭಾಗವಹಿಸಿ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿದರು.

ಆಕ್ರಮವಾಗಿ ಕಾಂಪೌಂಡ್ ನಿರ್ಮಿಸಿರುವ ದಂದೆ ಕೋರರ ವಿರುದ್ದ ಗೂಂಡಾ ಕಾಯ್ದೆಯಲ್ಲಿ ಕೇಸು ದಾಖಲಿಸಿ ಒತ್ತುವರಿ ತೆರೆವುಗೊಳಿಸಿ- ರೈತ ಸಂಘ

ಬಂಗಾರಪೇಟೆ, ಅ.06: ಕಸಬಾ ಹೊಬಳಿ ಕಾರಹಳ್ಳಿ ಕಂದಾಯ ವೃತ್ತದ ಸರ್ವೇ ನಂ.197 ರಲ್ಲಿ ಆಕ್ರಮವಾಗಿ ಕಾಂಪೌಂಡ್ ನಿರ್ಮಿಸಿರುವ ದಂದೆ ಕೋರರ ವಿರುದ್ದ ಗೂಂಡಾ ಕಾಯ್ದೆಯಲ್ಲಿ ಕೇಸು ದಾಖಲಿಸಿ ಒತ್ತುವರಿ ತೆರೆವುಗೊಳಿಸಬೇಕೆಂದು ರೈತ ಸಂಘದಿಂದ ತಹಶೀಲ್ದಾರ್ ದಯಾನಂದ್‍ರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಜನರ ತೆರಿಗೆ ಹಣದಲ್ಲಿ ಲಕ್ಷ ಲಕ್ಷ ಸಂಬಳ ಪಡೆದು ಸರ್ಕಾರಿ ಆಸ್ತಿಗಳನ್ನು ಉಳಿಸಬೇಕಾದ ಕಂದಾಯ ಅಧಿಕಾರಿಗಳು ಆಕ್ರಮ ದಾಖಲೆಗಳನ್ನು ಸೃಷ್ಟಿ ಮಾಡಿ ಭೂ ಮಾಪೀಯರವರಿಗೆ ಕೆರೆ, ರಾಜಕಾಲುವೆ, ಗುಂಡುತೋಪು ಗೋಮಾಳವನ್ನು ಮಾರಾಟ ಮಾಡುತ್ತಿರುವುದು ತನ್ನ ವೃತ್ತಿಗೆ ದ್ರೋಹ ಬಗೆದಂತೆ ಎಂದು ರೈತ ಸಂಘದ ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್ ಕಂದಾಯ ಇಲಾಖೆಯ ಅವ್ಯಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಭೂಮಿಗೆ ಬಂಗಾರದ ಬೆಲೆ ಬಂದಿದ್ದೇ ತಡ ರಾತ್ರೋ ರಾತ್ರಿ ಆಕ್ರಮವಾಗಿ ಕಾಂಪೌಂಡ್ ನಿರ್ಮಿಸುತ್ತಿರುವ ದಂದೆಕೋರರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಉದಾಹರಣೆ ತಾಲ್ಲೂಕು ಆಡಳಿತಕ್ಕೆ ಕೂಗಳತೆ ದೂರದಲ್ಲಿರುವ ಕಾರಹಳ್ಳಿ ಗ್ರಾಮದ ಸರ್ಕಾರಿ ಗೋಮಾಳ ಸರ್ವೇ ನಂ.197 ರಲ್ಲಿ 4 ಎಕರೆಗೆ ಆಕ್ರಮವಾಗಿ ಸುಬ್ಬಣ್ಣ ಎಂಬುವವರು ಕಾಂಪೌಂಡ್ ನಿರ್ಮಿಸಿದ್ದರೂ ಆ ವ್ಯಾಪ್ತಿಗೆ ಬರುವ ಕಂದಾಯ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಅಭಿವೃದ್ದಿ ಹಾಗೂ ಬಡವರಿಗೆ ನೀವೇಶನ ಮತ್ತು ಗ್ರಾಮಗಳಲ್ಲಿ ಜಾನುವಾರುಗಳಿಗೆ ಮೀಸಲಿಡಲು ತಿಂಗಳಾನುಗಟ್ಟಲೆ ಅಲೆದಾಡಿದರು ಕಂದಾಯ ಅಧಿಕಾರಿಗಳಿಗೆ ಅಂಗೈ ಅಗಲ ಸರ್ಕಾರಿ ಭೂಮಿ ಸಿಗುವುದಿಲ್ಲ, ಮೇಲಾಧಿಕಾರಿಗಳೇ ಸರ್ಕಾರಿ ಭೂಮಿಯೇ ಇಲ್ಲ ಎಂದು ವರದಿ ನೀಡಿ ಕೈ ತೊಳೆದುಕೊಳ್ಳುತ್ತಿರುವ ಕಂದಾಯ ಅದಿಕಾರಿಗಳೇ ಆಕ್ರಮ ಕಾಂಪೌಂಡ್ ನಿರ್ಮಿಸುತ್ತಿರುವ ನಿಮ್ಮ ಭೂಮಿ ಅಲ್ಲವೇ ಎಲ್ಲಿಯೋ ಹುಟ್ಟಿ ರಾತ್ರೋ ರಾತ್ರಿ ಕಾರಹಳ್ಳಿ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಭೂಮಿ ಕಾಂಪೌಂಡ್ ನಿರ್ಮಿಸಲು ಆಕಾಶದಿಂದ ಉದುರಿಬಿಳುತ್ತಿದೆಯೇ ಎಂದು ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು.
24 ಗಂಟೆಯಲ್ಲಿ ಆಕ್ರಮ ಕಾಂಪೌಂಡ್ ತೆರೆವುಗೊಳಿಸಿ ಒತ್ತುವರಿದಾರರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಸರ್ಕಾರಿ ಭೂಮಿಯನ್ನು ವಶಕ್ಕೆ ಪಡೆದು ನಿವೇಶನ ರಹಿತ ಬಡ ಕೂಲಿಕಾರ್ಮಿಕರಿಗೆ ಮಂಜೂರು ಮಾಡಿ ಇಲ್ಲವೇ ಕಾರಹಳ್ಳಿ ಸುತ್ತಮುತ್ತಲ ಗ್ರಾಮಗಳ ಜಾನುವಾರುಗಳಿಗೆ ಮೀಸಲಿಡಬೇಕು ಇಲ್ಲವಾದರೆ ಗುಡಿಸಲುಗಳನ್ನು ಹಾಕುವ ಮುಖಾಂತರ ನಿರಂತರ ಹೋರಾಟ ಮಾಡಿ ನ್ಯಾಯ ಪಡೆದುಕೊಳ್ಳುವ ಎಚ್ಚರಿಕೆಯೊಂದಿಗೆ ಮನವಿ ನೀಡಿ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ದಯಾನಂದ್‍ರವರು ಸರ್ವೇ ನಂ.197 ರಲ್ಲಿ ಆಕ್ರಮ ಕಾಂಪೌಂಡ್ ತೆರೆವುಗೊಳಿಸಿ ತಾಲ್ಲೂಕು ಆಡಳಿತದ ವಶಕ್ಕೆ ಪಡೆಯುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ಹಸಿರುಸೇನೆ ಜಿಲ್ಲಾದ್ಯಕ್ಷ ಪುತ್ತೇರಿ ರಾಜು, ಜಿಲ್ಲಾ ಉಪಾದ್ಯಕ್ಷ ಚಾಂದ್‍ಪಾಷ, ತಾಲ್ಲೂಕಾದ್ಯಕ್ಷ ಐತಾಂಡಹಳ್ಳಿ ಮುನ್ನಾ, ಬಾಬಜಾನ್, ಮೊಹಮದ್ ಷೊಹಿಬ್, ಆರೀಪ್, ಜಾವೇದ್, ಗೌಸ್, ಮುನಿಕೃಷ್ಣ, ವಕ್ರಕುಂಟೆ ಆಂಜಿನಪ್ಪ, ಹರೀಶ್, ನಾಗಯ್ಯ, ಮುನಿರಾಜು, ವಿಶ್ವ, ಯಾರಂಘಟ್ಟ ಗೀರೀಶ್, ಮಂಗಸಂದ್ರ ತಿಮ್ಮಣ್ಣ, ಮುಂತಾದವರಿದ್ದರು,

ಪ್ರಾಥಮಿಕ ಶಿಕ್ಷಕರ ಆಯ್ಕೆಪಟ್ಟಿಯಲ್ಲಿನ 1:2 ಸಂಖ್ಯೆಯಡಿ 320 ಅಭ್ಯರ್ಥಿಗಳ
ಮೂಲದಾಖಲೆ ಪರಿಶೀಲನೆಗೆ ಬಿ ದರ್ಜೆ ಅಧಿಕಾರಿಗಳ 5 ತಂಡ-ಕೃಷ್ಣಮೂರ್ತಿ

ಕೋಲಾರ:- ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ 2022ನೇ ಸಾಲಿನ 6 ರಿಂದ 8ನೇ ತರಗತಿಗಳಿಗೆ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ವೃಂದ ನೇರ ನೇಮಕಾತಿಯಡಿ ಜಿಲ್ಲಾಮಟ್ಟದ ಸಂಯುಕ್ತ ಸ್ವರ್ಧಾತ್ಮಕ ಪರೀಕ್ಷೆಯಲ್ಲಿ ಆಯ್ಕೆಗೊಂಡಿರುವ ಅಭ್ಯರ್ಥಿಗಳ ಮೂಲ ದಾಖಲೆಗಳ ಪರೀಶೀಲನೆಗೆ ಬಿ ದರ್ಜೆಯ ಅಧಿಕಾರಿಗಳ 5 ತಂಡಗಳನ್ನು ರಚಿಸಲಾಗಿದೆ ಎಂದು ಇಲಾಖೆಯ ಉಪನಿರ್ದೇಶಕರಾದ ಕೃಷ್ಣಮೂರ್ತಿ ತಿಳಿಸಿದರು.
ನಗರದ ಡಿಡಿಪಿಐ ಕಚೇರಿಯಲ್ಲಿ ಗುರುವಾರ ಬೆಳಗ್ಗೆ 10 ಗಂಟೆಯಿಂದ ನಡೆಯುತ್ತಿರುವ ದಾಖಲೆಗಳ ಪರಿಶೀಲನೆ ವೀಕ್ಷಿಸಿ ಮಾತನಾಡಿದ ಅವರು, ಯಾವುದೇ ಗೊಂದಲ ಎದುರಾಗದಂತೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿದೆ, ಪರಿಶೀಲನೆಗಾಗಿ 5 ತಂಡಗಳನ್ನು ರಚಿಸಲಾಗಿದ್ದು, ಪ್ರತಿ ತಂಡದಲ್ಲಿ ಮೂವರು ಬಿ ದರ್ಜೆ ಅಧಿಕಾರಿಗಳು ಹಾಗೂ ಓರ್ವ ತಾಂತ್ರಿಕ ಸಹಾಯಕರು ಇದ್ದಾರೆ ಎಂದರು.
ಇದು ಆನ್‍ಲೈನ್ ಪರಿಶೀಲನೆಯಾಗಿದ್ದು, ಜಿಲ್ಲಾಮಟ್ಟದ ಸಂಯುಕ್ತ ಸ್ವರ್ಧಾತ್ಮಕ ಪರೀಕ್ಷೆಯಲ್ಲಿ ಆಯ್ಕೆಗೊಂಡಿರುವ ಅಭ್ಯರ್ಥಿಗಳನ್ನು ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ 1:2 ಅನುಪಾತದಲ್ಲಿ ಮೂಲ ದಾಖಲೆಗಳ ಪರಿಶೀಲನೆಗೆ ಕರೆಯಲಾಗಿದೆ, ಹುದ್ದೆಗೆ ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ಸಲ್ಲಿಸಿರುವ ಜೆರಾಕ್ಸ್ ಪ್ರತಿಗಳಿಗೆ ಸಂಬಂಧಿಸಿದ ಎಲ್ಲಾ ಮೂಲ ದಾಖಲೆಗಳನ್ನು ಪರಿಶೀಲನೆ ಸಂದರ್ಭದಲ್ಲಿ ಹಾಜರುಪಡಿಸಬೇಕಾಗಿದೆ ಎಂದರು.

195 ಹುದ್ದೆಗಳು 320 ಅಭ್ಯರ್ಥಿಗಳು


ಒಟ್ಟು 195 ಹುದ್ದೆಗಳನ್ನು ಭರ್ತಿ ಮಾಡಲು ಜಿಲ್ಲಾಮಟ್ಟದ ಸಂಯುಕ್ತ ಸ್ವರ್ಧಾತ್ಮಕ ಪರೀಕ್ಷೆ ನಡೆಸಲಾಗಿದ್ದು, ಪರೀಕ್ಷೆಯಲ್ಲಿ ಆಯ್ಕೆಗೊಂಡಿರುವ ಒಟ್ಟು 320 ಮಂದಿಯ ಮೂಲ ದಾಖಲೆಗಳ ಪರಿಶೀಲನೆಗೆ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
6 ರಿಂದ 8ನೇ ತರಗತಿ ಬೋಧನೆಗಾಗಿ ಈ ನೇಮಕಾತಿ ಪ್ರಕ್ರಿಯೆ ನಡೆದಿದ್ದು, ಗಣಿತ, ವಿಜ್ಞಾನ, ಸಮಾಜವಿಜ್ಞಾನ, ಆಂಗ್ಲ ಭಾಷೆ ಶಿಕ್ಷಕರನ್ನು ನೇಮಿಸಿಕೊಳ್ಳಲು ಸರ್ಕಾರ ಹಾಗೂ ಶಾಲಾ ಶಿಕ್ಷಣಮತ್ತು ಸಾಕ್ಷರತಾ ಇಲಾಖೆ ನಿರ್ದೇಶನದಂತೆ ಈ ದಾಖಲಾತಿಗಳ ಪರಿಶೀಲನೆ ನಡೆದಿದೆ ಎಂದು ತಿಳಿಸಿದರು.
ಗುರುವಾರ ಜಿಲ್ಲಾಮಟ್ಟದ ಸಂಯುಕ್ತ ಸ್ವರ್ಧಾತ್ಮಕ ಪರೀಕ್ಷೆಯಲ್ಲಿ ಆಯ್ಕೆಗೊಂಡಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿನ ಕ್ರಮ ಸಂಖ್ಯೆ 1 ರಿಂದ 100 ರವರೆಗೂ ಮೂಲದಾಖಲೆಗಳ ಪರಿಶೀಲನೆಗೆ ಆಹ್ವಾನಿಸಿದ್ದು, ಬೆಳಗ್ಗೆ ಸರ್ವರ್ ಸಮಸ್ಯೆಯಿಂದಾಗಿ ಸ್ವಲ್ಪ ನಿಧಾನಗತಿಯಲ್ಲಿ ನಡೆದ ಪರಿಶೀಲನೆ ಮಧ್ಯಾಹ್ನದ ನಂತರ ಚುರುಕುಗೊಂಡಿದೆ ಎಂದು ತಿಳಿಸಿದರು.
ದಾಖಲೆಗಳ ಪರಿಶೀಲನೆಯ ಉಸ್ತುವಾರಿಯನ್ನು ತಮ್ಮೊಂದಿಗೆ ಶಿಕ್ಷಣಾಧಿಕಾರಿಗಳಾದ ಎ.ಎನ್.ನಾಗೇಂದ್ರಪ್ರಸಾದ್, ಸಿ.ಆರ್.ಅಶೋಕ್ ವಹಿಸಿಕೊಂಡಿದ್ದಾರೆ, ಬಿ ದರ್ಜೆ ಅಧಿಕಾರಿಗಳು ನಡೆಸುತ್ತಿರುವ ಪರಿಶೀಲನೆಯ ಮೇಲುಸ್ತುವಾರಿ ಮಾಡುತ್ತಿದ್ದಾರೆ ಎಂದರು.

ಅ.7 ಮತ್ತು 10 ದಾಖಲೆ ಪರಿಶೀಲನೆ


ಅ.7 ರಂದು ಬೆಳಗ್ಗೆ 10 ಗಂಟೆಗೆ ಕ್ರಮಸಂಖ್ಯೆ 101 ರಿಂದ 144 ರವರೆಗಿನ ಗಣಿತ,ವಿಜ್ಞಾನ ವಿಷಯದ ಅಭ್ಯರ್ಥಿಗಳು ದಾಖಲೆಗಳ ಪರಿಶೀಲನೆಗೆ ಹಾಜರಾಗತಕ್ಕದ್ದು. ಇದೇ ದಿನ ಬೆಳಗ್ಗೆ 10 ಗಂಟೆಗೆ ಕ್ರಮ ಸಂಖ್ಯೆ 1 ರಿಂದ 10 ರವರೆಗಿನ 10 ಮಂದಿ ಸಮಾಜ ವಿಷಯದ ಅಭ್ಯರ್ಥಿಗಳೂ ದಾಖಲೆಗಳ ಪರಿಶೀಲನೆಗೆ ಹಾಜರಿರತಕ್ಕದ್ದು.
ಅ.7 ಮಧ್ಯಾಹ್ನ 2 ಗಂಟೆಗೆ ಆಯ್ಕೆ ಪಟ್ಟಿಯಲ್ಲಿನ ಕ್ರಮಸಂಖ್ಯೆ 11ರಿಂದ 60 ರವರೆಗಿನ ಸಮಾಜ ವಿಷಯದ ಅಭ್ಯರ್ಥಿಗಳು ದಾಖಲಾತಿಗಳ ಪರಿಶೀಲನೆಗೆ ಹಾಜರಾಗಲು ಸೂಚಿಸಲಾಗಿದೆ ಎಂದರು.
ಅ.10 ರಂದು ಬೆಳಗ್ಗೆ 10 ಗಂಟೆಗೆ ಕ್ರಮಸಂಖ್ಯೆ 61ರಿಂದ 97 ರವರೆಗಿನ ಆಂಗ್ಲಭಾಷಾ ಅಭ್ಯರ್ಥಿಗಳು ಹಾಗೂ ಮಧ್ಯಾಹ್ನ 2 ಗಂಟೆಗೆ ಕ್ರಮಸಂಖ್ಯೆ 25 ರಿಂದ 50 ರವರೆಗಿನ ಆಂಗ್ಲಭಾಷಾ ಅಭ್ಯರ್ಥಿಗಳು ಮತ್ತು 1 ರಿಂದ 31 ರವರೆಗೆ ಜೀವ ವಿಜ್ಞಾನ ಅಭ್ಯರ್ಥಿಗಳು ಹಾಜರಿರಬೇಕು ಎಂದು ಡಿಡಿಪಿಐ ತಿಳಿಸಿದರು.
ದಾಖಲಾತಿಗಳ ಪರಿಶೀಲನೆ ಶಿಕ್ಷಣಾಧಿಕಾರಿಗಳಾದ ಎ.ಎನ್.ನಾಗೇಂದ್ರಪ್ರಸಾದ್,ಸಿ.ಆರ್.ಅಶೋಕ್ ನೇತೃತ್ವದಲ್ಲಿ ಉಪಪ್ರಾಂಶುಪಾಲ ರಾಮಕೃಷ್ಣಪ್ಪ, ಎವೈಪಿಸಿ ಮೋಹನ್‍ಬಾಬು, ಕ್ಷೇತ್ರ ಸಮನ್ವಯಾಧಿಕಾರಿಗಳಾದ ರಾಧಮ್ಮ,ವಸಂತ, ಅಕ್ಷರದಾಸೋಹ ಸಹಾಯಕ ನಿರ್ದೇಶಕಿ ಸುಲೋಚನಾ, ಮುಖ್ಯಶಿಕ್ಷಕರುಗಳಾದ ಸಿದ್ದೇಶ್, ಸಿ.ಎನ್.ಪ್ರದೀಪ್‍ಕುಮಾರ್, ನಾಗರಾಜ್,ಬೈರೆಡ್ಡಿ, ಭಾಗ್ಯಲಕ್ಷ್ಮಿ, ಶ್ರೀಧರ್, ಗಾಯಿತ್ರಿ, ಇಲಾಖೆ ವ್ಯವಸ್ಥಾಪಕ ಗೋವಿಂದಗೌಡ, ಅಧೀಕ್ಷಕ ಮಂಜುನಾಥರೆಡ್ಡಿ, ಚಿರಂಜೀವಿ, ಲಕ್ಷ್ಮಣ್,ಬೂದಿಕೋಟೆ ಮಂಜುನಾಥ್ ಮತ್ತಿತರರು ಕಾರ್ಯ ನಿರ್ವಹಿಸುತ್ತಿದ್ದರು.

ಕುಂದಾಪುರ ಹೋಲಿ ರೊಜರಿ ಮಾತೆಯ 452 ನೇ ವಾರ್ಷಿಕ ಹಬ್ಬ


ಕುಂದಾಪುರ,ಅ.7: ಉಡುಪಿ ಧರ್ಮ ಪ್ರಾಂತ್ಯದ,ಹಾಗೂ ಕಾರವಾರದ ತನಕದ ಅತ್ಯಂತ ಹಿರಿಯ ಚರ್ಚ್, ಎಂದು ಐತಿಹಾಸಿಕ ಚರಿತ್ರೆಯುಳ್ಳ ಕುಂದಾಪುರದ ಹೋಲಿ ರೊಜರಿ ಮಾತಾ ಚರ್ಚ್ ಒಕ್ಟೋಬರ್ 7 ರಂದು 452 ನೇ ವಾರ್ಷಿಕ ಹಬ್ಬದ ಸಂಭ್ರಮಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಇಂದು ನಡೆದ ರೊಜರಿ ಅಮ್ಮನವರ ತಾರೀಕಿನ ಹಬ್ಬಕ್ಕೆ ಕಂಡ್ಲುರೂ ಇಗರ್ಜಿಯ ವಂ|ಫಾ| ಧರ್ಮಗುರು ವಂ|ಕೆನ್ಯೂಟ್ ಬರ್ಬೊಜಾ ಪವಿತ್ರ ಬಲಿದಾನವನ್ನು ಅರ್ಪಿಸಿ ‘ನೀವು ಭಾಗ್ಯಶಾಲಿಗಳು, ಯಾಕೆಂದರೆ ನಿಮಗೆ ಪಾಲಕಿಯಾಗಿ ರೋಜರಿ ಮಾತೆ ಸಿಕ್ಕಿದ್ದಾಳೆ, ಇಡೀ ಪ್ರಪಂಚ ರೋಜರಿ ಮಾತೆಯ ಜಪಮಾಲೆಯನ್ನು ಮಾಡುತಿದೆ, ದಿನ ನಿತ್ಯವು ಅವಳನ್ನು ಧ್ಯಾನಿಸುತ್ತಾರೆ, ರೋಜರಿ ಜಪಮಾಲೆಯಲ್ಲಿರುವ ಉದ್ದೇಶಿತ ಉದ್ದೇಶಗಳಿಗಾಗಿ ಜಪಿಸುಸುವುದು ಮಾತ್ರವಲ್ಲ ಅದರಂತೆ ನಾವು ನಡೆಯಬೇಕು, ಪರರರ ಕಷ್ಟಗಳಲ್ಲಿ ನಾವು ನೆರವಾಗಬೇಕು, ಆಗ ರೋಜರಿ ಮಾತೆ ನಮ್ಮ ಜೊತೆಗಿರುತ್ತಾಳೆ, ಯಾರೂ ನಮಗೆ ವಿರೋಧಿ, ವೈರಿಗಳಲ್ಲ, ನಾವು ಪರರಲ್ಲಿ ದೇವರನ್ನು ಕಾಣುವುದಿಲ್ಲ, ಹಾಗಾಗಿ ತನ್ನಿಂದ ತಾನೇ ವೈರಿಗಳಾಗಿ ಪರಿವರ್ತನೆ ಹೊಂದುತ್ತಾರೆ. ರೋಜರಿ ಮಾತೆಯಲ್ಲಿ ಅಸಾಧರಣ ಶಕ್ತಿಯಿದೆ, ರೋಜರಿಯಿಂದ ದೇವರ ಆಶಿರ್ವಾದ, ಕ್ರಪೆ ನಮಗೆ ದೊರಕುವುದು, ರೋಜರಿ ಮಾತೆಯಿಂದ ಆಶಿರ್ವಾದ ಹೊಂದಿದ ನೀವು ಈ ಇಗರ್ಜಿಯ ಜನರು ವೀಶೆಷ ಆಶಿರ್ವಾದಕ್ಕೆ ಪಾತ್ರರಾದವರು, ಅದಕ್ಕಾಗಿ ನೀವು ಸಂತಸ ಪಡಬೇಕು, ಎಂದು ಸಂದೇಶ ನೀಡಿದರು.
ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಫಾ|ಸ್ಟ್ಯಾನಿ ತಾವ್ರೊ ಸ್ವಾಗತಿಸಿ, ಹಬ್ಬದ ಶುಭಾಷಯಗಳನ್ನು ನೀಡಿ, ನೀವೆಲ್ಲ ದೊಡ್ಡ ಸಂಖ್ಯೆಯಲ್ಲಿ ಹಬ್ಬದ ಬಲಿಪೂಜೆಯಲ್ಲಿ ಭಾಗಿಯಾಗಿದ್ದಿರಿ, ನಮ್ಮ ಪಾಲಕಿ ರೋಜರಿ ಮಾತೆ ನಮ್ಮನ್ನು 452 ವರ್ಷಗಳಿಂದ ಆಶಿರ್ವದಿಸುತ್ತಲೆ ಬಂದಿದ್ದಾಳೆ, ರೋಜರಿ ಮಾತೆ ಎಲ್ಲರನ್ನು ಹರಸಲಿ ಎಂದು ಧನ್ಯವಾದಗಳನ್ನು ಅರ್ಪಿಸಿದರು. ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಬಲಿ ಪೂಜೆಯಲ್ಲಿ ಪಾಲ್ಗೊಂಡರು. ಉಪಾಧ್ಯಕ್ಷ ಲುವಿಸ್ ಜೆ.ಫೆರ್ನಾಂಡಿಸ್,ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ, ವಾಳೆಯ ಗುರಿಕಾರರು, ಪಾಲನ ಮಂಡಳಿ ಸದಸ್ಯರು, ಧರ್ಮ ಭಗಿನಿಯರು ಇನ್ನಿತರರು ಹಾಜರಿದ್ದರು.

ಕುಂದಾಪುರ್ ರೋಜಾರ್ ಮಾಯೆಚ್ಯಾ ಇಗರ್ಜೆ ಫಾ|ನೊಯೆಲ್ ಮಸ್ಕರೆನ್ಹಾಸ್ ಆನಿ ಬ್ರದರ್ ಪ್ರಕಾಶ್ ಡಿಸೋಜಾ ಹಾಂಚ್ಯಾ ಪಂಗ್ಡಾಚಿಂ ತೀನ್ ದಿಸಾಂಚಿಂ ರೆತಿರ್ ಭೋವ್ ಯಶಸ್ವೆನ್ ಸಂಪನ್ನ್ ಜಾಲಿ.

ಕುಂದಾಪುರ್, ಅ.7: ಕುಂದಾಪುರ್ ರೋಜಾರ್ ಮಾಯೆಚ್ಯಾ ಇಗರ್ಜೆ ಫಾ|ನೊಯೆಲ್ ಮಸ್ಕರೆನ್ಹಾಸ್ ಆನಿ ಬ್ರದರ್ ಪ್ರಕಾಶ್ ಡಿಸೋಜಾ ಹಾಂಚ್ಯಾ ಪಂಗ್ಡಾಚಿಂ ತೀನ್ ದಿಸಾಂಚಿಂ ರೆತಿರ್ ಭೋವ್ ಯಶಸ್ವೆನ್ ಸಂಪನ್ನ್ ಜಾಲಿ.

ತಿಸ್ರ್ಯಾ ದಿಸಾಚಿಂ ಲ್ಹಾನ್ ವೀಡಿಯೊ ಚಿತ್ರಣ್