ಸಮಾಜ ಸೇವಕ ಧರ್ಮ ಸಹಿಷ್ಣುತೆಯ ಆದರ್ಶ ಪ್ರಿಯ”ಹರಿಕ್ರೃಪಾ – ಗಣೇಶ ಕಿಣಿ” (63) ನಿಧನ

ಕುಂದಾಪುರದ ಚರ್ಚ್ (ಸಮೀಪದ) ರಸ್ತೆ ನಿವಾಸಿ,ಹರಿಕ್ರೃಪಾ ಏಜೆನ್ಸೀಸ್ ಮಾಲಕ,ಸಮಾಜ ಸೇವಕ ಗಣೇಶ್ ಕಿಣಿ (63) ನ.15ರಂದು ಮಂಗಳವಾರ ಹ್ರೃದಯಾಘಾತದಿಂದ ನಿಧನರಾದರು.
ತಮ್ಮ ನಡೆ ನುಡಿ,ಸೇವಾ ಗುಣಗಳಿಂದ ಜನಸಾಮಾನ್ಯರಿಂದ ಉತ್ತಮ ಗೌರವ ಪಡೆಯುತ್ತಿದ್ದ ಇವರು,ತಮ್ಮ ಹರಿಕ್ರಪಾ ಏಜೆನ್ಸೀಸ್ ಮೂಲಕ ಕ್ರೃಷ್ಣ ತುಪ್ಪ ಸೇರಿದಂತೆ ಪ್ರಸಿದ್ದ ಕಂಪೆನಿಗಳ ಸಿದ್ಧ ಆಹಾರ ವಸ್ತುಗಳ ವಿತರಣೆ ನಡೆಸುತ್ತಿದ್ದರು.ವ್ಯಾಪಾರಿ ವಲಯದಲ್ಲಿ ಜನಾನುರಾಗಿಯಾಗಿದ್ದರು.
ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವರ ಅನನ್ಯ ಭಕ್ತರಾದ ಇವರು ಪ್ರತೀದಿನ ಪ್ರಾತಃಕಾಲ ದ ಪೂಜೆ ಆಗುವ ಮುನ್ನ ಉಪಸ್ಥಿತರಿದ್ದು,ಪೂಜೆಯ ನಂತರ ತನ್ನ ವ್ಯವಹಾರ,ಸೇವಾ ಕಾರ್ಯಗಳಿಗೆ ತೆರಳುತ್ತಿದ್ದರು.ದೇವಾಲಯದ ಎಲ್ಲಾ ಕಾರ್ಯಗಳಲ್ಲೂ ಸ್ವಯಂಸೇವಕರಾಗಿ ಶ್ರಮಿಸುತ್ತಿದ್ದರು. ಸಮಾಜದ ಯಾವುದೇ ಸಮಾರಂಭಗಳಿಗೆ ಆಹ್ವಾನವಿದ್ದಲ್ಲಿ ಕ್ರೀಯಾಶೀಲರಾಗಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುತ್ತಿದ್ದರು.

ತಮ್ಮ ಸಮಾಜದ ಅಲ್ಲದೆ ಇತರ ಸಮಾಜದ ಬಗ್ಗೆ ಕಳಕಳಿ, ಗೌರವ ಇದ್ದ ಅವರು ಕುಂದಾಪುರ ರೋಜರಿ ಚರ್ಚ್ ಬಗ್ಗೆ ಅಪಾರ ಅಭಿಮಾನ ಭಕ್ತಿ ಗೌರವ ಇಟ್ಟುಕೊಂಡಿದ್ದರು, ಸಂತ ಜೋಸೆಫ್ ಅನಾಥಶ್ರಮಕ್ಕೆ ಅವರು ಯಾವಾಗಲೂ ಆಹಾರ ನೀಡುವಿಕೆಯಿಂದ ಅವರು ಮನ್ನಣೆ ಗಳಿಸಿಕೊಂಡಿದ್ದರು, ಧರ್ಮ ಸಹಿಷ್ಣುತೆಯ ಆದರ್ಶ ಪ್ರಿಯ ವ್ಯಕ್ತಿಯಾಗಿದ್ದರು”

ಇವರಿಂದ ಸ್ವಲ್ಪ ಕಾಲದ ಹಿಂದೆ ಅವರ ಪತ್ನಿ ಇವರನ್ನು ಅಗಲಿದ್ದರು. ಪ್ರಸ್ತೂತ ಇವರು ಇವರು ಪುತ್ರಿ ಮೇಘನಾ ಹಾಗೂ ಅಪಾರ ಕುಟುಂಬವನ್ನು ಅಗಲಿದ್ದಾರೆ.
ಅಂತ್ಯಕ್ರೀಯೆ ನ.16ರಂದು ಬುಧವಾರ ಬೆಳಿಗ್ಗೆ 9.30ಕ್ಕೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ

ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಸಾಹಿತಿ ಪಾ.ಚಲಪತಿ ಗೌಡ ಅವಗೆ ಸನ್ಮಾನ

ಶ್ರೀನಿವಾಸಪುರ ತಾಲ್ಲೂಕಿನ ಮುತ್ತಕಪಲ್ಲಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಸಾಹಿತಿ ಪಾತಮುತ್ತಕಪಲ್ಲಿ ಚಲಪತಿ ಗೌಡ ಅವರನ್ನು ಸನ್ಮಾನಿಸಲಾಯಿತು

ಶ್ರೀನಿವಾಸಪುರ:ಸರ್ಕಾರಿ ಉನ್ನತೀಕರಿಸಿದ ಹಿ. ಪ್ರಾ. ಶಾಲೆಯಲ್ಲಿ ಮಕ್ಕಳ ದಿನಾಚರಣೆ

ಶ್ರೀನಿವಾಸಪುರದ ಕರ್ನಾಟಕ ಮಾದರಿ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಮಕ್ಕಳ ದಿನಾಚರಣೆ ಆಚರಿಸಲಾಯಿತು.

ಶ್ರೀನಿವಾಸಪುರ: ಮಕ್ಕಳು ಜವಾಹರಲಾಲ್ ನೆಹರು ಅವರ ಆದರ್ಶ ಪಾಲಿಸಬೇಕು:ಸಾದಿಕ್ ಅಹ್ಮದ್

ಶ್ರೀನಿವಾಸಪುರ: ಮಕ್ಕಳು ಜವಾಹರಲಾಲ್ ನೆಹರು ಅವರ ಆದರ್ಶ ಪಾಲಿಸಬೇಕು ಎಂದು ನವಕರ್ನಾಟಕ ಸ್ವಾಭಿಮಾನ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾದಿಕ್ ಅಹ್ಮದ್ ಹೇಳಿದರು.
ಪಟ್ಟಣದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಮಕ್ಕಳ ದಿನಾಚರಣೆ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸೌಲಭ್ಯ ವಿತರಿಸಿ ಮಾತನಾಡಿದ ಅವರು, ನೆಹರು ಅವರಿಗೆ ಮಕ್ಕಳೆಂದರೆ ಅತೀವ ಪ್ರೀತಿ ಇತ್ತು. ಹಾಗಾಗಿಯೇ ತಮ್ಮ ಹುಟ್ಟು ಹಬ್ಬವನ್ನು ಮಕ್ಕಳ ದಿನಾಚರಣೆ ಹೆಸರಲ್ಲಿ ಆಚರಿಸುವಂತೆ ಹೇಳಿದ್ದರು ಎಂದು ಹೇಳಿದರು.
ಉರ್ದು ಶಾಲೆಯಲ್ಲಿ ಓದುವ ಮಕ್ಕಳು ಭವಿಷ್ಯದ ದೃಷ್ಟಿಯಿಂದ ಕನ್ನಡ ಕಲಿಯಬೇಕು. ಈಗ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭಿಸಲಾಗಿದೆ. ಮಕ್ಕಳು ಅದರ ಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು. ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗೆ ಸೇರಬೇಕು ಎಂದು ಸಲಹೆ ಮಾಡಿದರು.
ಮುಖ್ಯ ಶಿಕ್ಷಕ ಸಾದಿಕ್, ಎಸ್‍ಡಿಎಂಸಿ ಅಧ್ಯಕ್ಷ ಇದಾಯತ್ ಉಲ್ಲಾ ಖಾನ್, ಶಿಕ್ಷಕಿಯರಾದ ನಗೀನಾ ತಾಜ್, ರಿಯಾನಾ ಖಾನಂ, ನೂರುನ್ನೀಸಾ, ಅಮ್ಮಾಜಾನ್, ವೇದಿಕೆ ಸದಸ್ಯರಾದ ಬಕಾಶ್, ಸಾಬೀರ್, ಅಬ್ದುಲ್ಲಾ ಇದ್ದರು.

ಆಲೂಗಡ್ಡೆಗೆ ಅಂಗಮಾರಿ, ಬುಡ ರೋಗಕ್ಕೆ ಉಚಿತ ಔಷಧಿ ನೀಡಿ ನಷ್ಟವಾಗಿರುವ ಪ್ರತಿ ಎಕರೆಗೆ 2 ಲಕ್ಷ ಪರಿಹಾರಕ್ಕೆ ರೈತಸಂಘ ಒತ್ತಾಯ

ಕೋಲಾರ: ಆಲೂಗಡ್ಡೆಗೆ ಬಾಧಿಸುತ್ತಿರುವ ಅಂಗಮಾರಿ ಹಾಗೂ ಬುಡ ರೋಗ ನಿಯಂತ್ರಣಕ್ಕೆ ಉಚಿತ ಔಷಧಿ ವಿತರಣೆ ಮಾಡಿ ನಷ್ಟವಾಗಿರುವ ಪ್ರತಿ ಎಕರೆಗೆ 2 ಲಕ್ಷ ಪರಿಹಾರ ನೀಡಬೇಕೆಂದು ರೈತಸಂಘದಿಂದ ರೋಗ ಬೆಳೆ ಸಮೇತ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಲಕ್ಷಾಂತರ ರೂಪಾಯಿ ಸಾಲದ ಜೊತೆಗೆ ಮನೆಯ ಹೆಂಡತಿ ಒಡವೆಯನ್ನು ಅಡ ಇಟ್ಟು ಬೆಳೆದಿರುವ 2 ಎಕರೆ ಆಲೂಗಡ್ಡೆ ಬೆಳೆ ಸಂಪೂರ್ಣವಾಗಿ ರೋಗಕ್ಕೆ ಬಲಿಯಾಗಿದೆ. ಲಕ್ಷ ಲಕ್ಷ ಹಣ ನೀಡಿ ಖರೀದಿ ಮಾಡಿ ಔಷಧಿಯಿಂದ ಕನಿಷ್ಠಪಕ್ಷ ಶೇ.10ರಷ್ಟೂ ಸಹ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಅಷ್ಟರ ಮಟ್ಟಿಗೆ ಔಷಧಿಗಳ ಗುಣಮಟ್ಟ ಕುಸಿದಿದ್ದರೂ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ನಕಲಿ ಕಂಪನಿಗಳೊಂದಿಗೆ ಕೈಜೋಡಿಸಿ ರೈತರ ಮರಣ ಶಾಸನ ಬರೆಯುತ್ತಿದ್ದಾರೆಂದು ರೈತಸಂಘದ ಮಾಲೂರು ಅಧ್ಯಕ್ಷ ಪೆಮ್ಮದೊಡ್ಡಿ ಯಲ್ಲಣ್ಣ ಕೃಷಿ ಕ್ಷೇತ್ರದ ಅವ್ಯವಸ್ಥೆ, ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರು.
ವ್ಯವಸಾಯವೆಂಬ ಜೂಜಾಟದಲ್ಲಿ ದಿನೇದಿನೇ ರೈತ ಖಾಸಗಿ ಸಾಲಕ್ಕೆ ಸಿಲುಕುತ್ತಿದ್ದಾನೆ. 2 ವರ್ಷ ಕೊರೊನಾ ಕಾಟ 3 ವರ್ಷದಿಂದ ಬೆಳೆದ ಟೊಮೇಟೊ, ಕ್ಯಾಪ್ಸಿಕಂಗಳಿಗೆ ನುಸಿ, ರೋಸ್, ಜಾಂಡೀಸ್, ಊಜಿ ರೋಗ ನಿಯಂತ್ರಣಕ್ಕೆ ಬಾರದೆ ಮಾರುಕಟ್ಟೆಯಲ್ಲಿ ಉತ್ತಮ ಬೆಳೆಯಿದ್ದರೂ ತೋಟದಲ್ಲಿ ಬೆಳೆ ಇಲ್ಲದೆ ಹಾಕಿದ ಬಂಡವಾಳವು ಕೈಗೆ ಸಿಗದೆ ಕಟ್ಟಿದ ಬೆಳೆ ವಿಮೆ ಹಾಗೂ ಸರ್ಕಾರದ ಪರಿಹಾರ ಹಣಕ್ಕೆ ಜಾತಕ ಪಕ್ಷಿಗಳಂತೆ ರೈತರು ಕಾಯಬೇಕಾದ ಪರಿಸ್ಥಿತಿ ಇದ್ದರೂ ಸ್ಪಂದಿಸಬೇಕಾದ ಉಸ್ತುವಾರಿ ಸಚಿವರು ನಾಪತ್ತೆಯಾಗಿರುವ ಜೊತೆಗೆ ಅಧಿಕಾರಿಗಳು ಕಚೇರಿ ಬಿಟ್ಟು ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಉತ್ತಮ ಮುಂಗಾರು ಮಳೆಯಿಂದ ಹರ್ಷವಾಗಿರುವ ರೈತ 5 ವರ್ಷಗಳಿಂದ ನಷ್ಟವಾಗಿದ್ದರೂ ಛಲ ಬಿಡದೆ ಈ ವರ್ಷ ಆಲೂಗಡ್ಡೆ ಬಿತ್ತನೆ ಮಾಡಲು ಮುಂದಾಗಿ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ ರೈತರು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಕೈಸುಟ್ಟುಕೊಳ್ಳುವ ಪರಿಸ್ಥಿತಿ ಬಂದೊದಗಿರುವುದು ವಿಪರ್ಯಾಸ.
100 ರಿಂದ 120 ಮೂಟೆ ಫಸಲು ಬರುವ ನಿರೀಕ್ಷೆಯಲ್ಲಿದ್ದ ರೈತರಿಗೆ ಕೇವಲ 20 ಮೂಟೆ ಫಸಲು ಬಂದು ಹಾಕಿದ ಬಂಡವಾಳ ಕೈಸುಟ್ಟುಕೊಳ್ಳಬೇಕಾದ ಪರಿಸ್ಥಿತಿ ಇದೆ ಎಂದು ವಿವರಿಸಿದರು.
ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ, ಇತ್ತೀಚೆಗೆ ಸುರಿಯುತ್ತಿರುವ ಜಡಿ ಮಳೆಗೆ ಆಲೂಗಡ್ಡೆ ಬೆಳೆಗೆ ಅಂಗಮಾರಿ ರೋಗ ಒಂದು ಕಡೆಯಾದರೆ ಮತ್ತೊಂದು ಕಡೆ ಬೆಳೆಯನ್ನು ಬುಡದಲ್ಲಿ ಕಾಂಡ ತಿನ್ನುವ ಹುಳುಗಳ ಕಾಟದಿಂದ ಲಕ್ಷಾಂತರ ರೂಪಾಯಿ ಹಣ ನೀಡಿ ಔಷಧಿ ಸಿಂಪಡಣೆ ಮಾಡಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಕಣ್ಣ ಮುಂದೆಯೇ ಬೆಳೆ ನಾಶವಾಗುತ್ತಿರುವುದಕ್ಕೆ ದಿಕ್ಕು ತೋಚದೆ ಹಾಕಿದ ಬಂಡವಾಳ ಕೈಗೆ ಸಿಗದೆ ಖಾಸಗಿ ಸಾಲದ ಶೂಲಕ್ಕೆ ಸಿಲುಕಿ ಸಾಲ ತೀರಿಸಲಾಗದೆ ಸ್ವಾಭಿಮಾನಕ್ಕೆ ಅಂಜಿ ಪ್ರಾಣ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಒಂದು ಎಕರೆ ಆಲೂಗಡ್ಡೆ ಬೆಳೆಯಬೇಕಾದರೆ ಗೊಬ್ಬರ, ಔಷಧಿ, ಬಿತ್ತನೆಗಡ್ಡೆ ಕೂಲಿ ಸೇರಿ 2 ಲಕ್ಷ ಖರ್ಚು ಬರುತ್ತದೆ. ರೋಗದಿಂದ ಕನಿಷ್ಠ ಕೂಲಿ ಸಹ ಸಿಗುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿದರೆ ಕಚೇರಿಯಲ್ಲೇ ಕುಳಿತು ಪತ್ರಿಕಾ ಹೇಳಿಕೆ ನೀಡಿ ಜಡಿ ಮಳೆಯಿಂದ ಬೆಳೆಯನ್ನು ಔಷಧಿ ಸಿಂಪಡಣೆ ಮಾಡಿ ಬೆಚ್ಚಗಿಡಿ ಎಂದು ಕೈತೊಳೆದುಕೊಳ್ಳುತ್ತಾರೆ. ಕನಿಷ್ಠ ಪಕ್ಷ ತೋಟಕ್ಕೂ ಸಹ ಭೇಟಿ ನೀಡುವುದಿಲ್ಲ.
ಇನ್ನು ವಿಮಾ ಕಂಪನಿಗಳಿಗೆ ಅನುಕೂಲವಾಗಲೆಂದು ಕಡ್ಡಾಯವಾಗಿ ರೈತರು ವಿಮೆ ಮಾಡಿಸಿ ವಿಮಾ ಕಂಪನಿಗಳನ್ನು ಉದ್ಧಾರ ಮಾಡಿ ಎಂದು ಹೇಳುತ್ತಾರೆ ಹೊರತು ಕಷ್ಟ ಕಾಲದಲ್ಲಿ ಕೈ ಹಿಡಿಯಬೇಕಾದ ವಿಮಾ ಕಂಪನಿಗಳು ನಾಪತ್ತೆಯಾಗಿದ್ದಾವೆ ಎಂದು ಆರೋಪಿಸಿದರು.
ಆಲೂಗಡ್ಡೆಗೆ ಬಾಧಿಸುತ್ತಿರುವ ಅಂಗಮಾರಿ ಕಾಂಡ ರೋಗಕ್ಕೆ ಉಚಿತ ಔಷಧಿಯನ್ನು ವಿತರಣೆ ಮಾಡಿ ನಷ್ಟವಾಗಿರುವ ಪ್ರತಿ ಎಕರೆಗೆ 2 ಲಕ್ಷ ಪರಿಹಾರ ನೀಡಿ ಸಂಕಷ್ಟದಲ್ಲಿರುವ ರೈತರ ರಕ್ಷಣೆಗೆ ನಿಲ್ಲಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ರೈತರಿಗೆ ಸ್ಪಂದಿಸುವಂತೆ ಆದೇಶ ಮಾಡುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಜಿ.ಪ್ರ.ಕಾ. ಕೋಟೆ ಶ್ರೀನಿವಾಸ್, ಶ್ರೀನಿವಾಸಪುರ ತಾ.ಅ. ತೆರ್ನಹಳ್ಳಿ ಆಂಜಿನಪ್ಪ, ರಾ.ಪ್ರ.ಕಾ. ಫಾರೂಖ್ ಪಾಷ, ಹರೀಶ್, ಪುತ್ತೇರಿ ರಾಜು, ಯಾರಂಘಟ್ಟ ಗಿರೀಶ್, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಮಂಜುಳಾ ಮುಂತಾದವರಿದ್ದರು.

‘ಮುಲ್ಲರ್‍ರನ್ನ್’ – ಮ್ಯಾರಥಾನ್ ಓಟ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಿಂದ

ವಿಶ್ವ ಮಧುಮೇಹ ದಿನದ ಅಂಗವಾಗಿ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯು ಫಾದರ್ ಮುಲ್ಲರ್ ಹೋಮಿಯೋಪಥಿ ಫಾರ್ಮಸ್ಯೂಟಿಕಲ್ ವಿಭಾಗ ಮತ್ತು ಕಾಲೇಜಿನ ರಾಘ್ಟ್ರೀಯ ಸೇವಾ ಯೋಜನೆಯ ಸಹಯೋಗದೊಂದಿಗೆ ದಿನಾಂಕ 13.11.2022 ರಂದು ‘ಮುಲ್ಲರ್‍ರನ್ನ್’ ಮ್ಯಾರಥಾನ್ ಓಟವನ್ನು ಆಯೋಜಿಸಲಾಯಿತು.
ಮಂಗಳೂರಿನ ಸಂಚಾರಿ ಸಹಾಯಕ ಪೊಲೀಸ್ ಆಯುಕ್ತರಾದ ಗೀತಾ ಕುಲಕರ್ಣಿಯವರು ಮ್ಯಾರಥನ್‍ನ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿದರು. ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ರಿಚರ್ಡ್ ಅಲೋಶಿಯಸ್ ಕುವೆಲ್ಲೊರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳು ತಮ್ಮ ಉದ್ಘಾಟನಾ ಭಾಷಣದಲ್ಲಿ ಭಾಗವಹಿಸುವವರಿಗೆ ‘ನಡೆಯಿರಿ, ಆರೋಗ್ಯಕರವಾಗಿ ತಿನ್ನಿರಿ, ಅರೋಗ್ಯಕರವಾಗಿ ಯೋಚಿಸಿರಿ ಮತ್ತು ಉತ್ತಮ ಆರೋಗ್ಯಕ್ಕಾಗಿ ಓಡಿರಿ’ ಎಂಬ ನಾಲ್ಕು ತಂತ್ರಗಳನ್ನು ಅನುಸರಿಸಲು ಪೆÇ್ರೀತ್ಸಾಹಿಸಿದರು. ಅಧ್ಯಕ್ಷರಾದ ವಂದನೀಯ ರಿಚರ್ಡ್ ಅಲೋಶಿಯಸ್ ಕುವೆಲ್ಲೊರವರು ಮಧುಮೇಹದ ಬಗ್ಗೆ ಜಾಗರೂಕರಾಗಬೇಕಾದ ಪ್ರಸ್ತುತ ಯುಗದಲ್ಲಿ ಈ ಮ್ಯಾರಥಾನ್ ಓಟವನ್ನು ಅಯೋಜಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮುಂದೆ ಬಂದ ಕಾಲೇಜಿನ ಆಯೋಜನಾ ತಂಡವನ್ನು ಶ್ಲಾಘಿಸಿದರು. ಇದರೊಂದಿಗೆ ಬೆಳಿಗ್ಗೆ 6.30 ಗಂಟೆಗೆ ಮುಖ್ಯ ಅತಿಥಿಗಳು 15 ಕಿ.ಮೀ ಓಟಕ್ಕೆ ಹಾಗೂ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿಗಳಾದ ವಂದನೀಯ ಅಜಿತ್ ಮಿನೇಜಸ್ ರವರು 7.15 ಗಂಟೆಗೆ 5 ಕಿ.ಮೀ ಓಟಕ್ಕೆ ಚಾಲನೆ ನೀಡಿದರು.
15 ಕಿ.ಮೀ ಪುರುಷರ ವಿಭಾಗದಲ್ಲಿ ಶ್ರೀ ಅನಿಲ್ ಕುಮಾರ್‍ರವರು 43ನಿಮಿಷ 28ಸೆಕೆಂಡ್ ಗಳಲ್ಲಿ ಹಾಗೂ ಮಹಿಳೆಯರ ವಿಭಾಗದಲ್ಲಿ ಕುಮಾರಿ ಚೈತ್ರಾ ದೇವಾಡಿಗ 58 ನಿಮಿಷ 30ಸೆಕೆಂಡ್‍ಗಳಲ್ಲಿ ಪೂರೈಸುವ ಮೂಲಕ ಮೊದಲನೆ ಸ್ಥಾನವನ್ನು ಗಳಿಸಿದರು. ಪುರುಷರ 5 ಕಿ.ಮೀ ವಿಭಾಗದಲ್ಲಿ ಶೀ ಗೋವಿಂದರಾಜ್ ಹಾಗೂ ಮಹಿಳೆಯರ ವಿಭಾಗದಲ್ಲಿ ಕುಮಾರಿ ಧನುಷಾ ಶೆಟ್ಟಿ ಪ್ರಥಮ ಸ್ಥಾನ ಗಳಿಸಿದರು.
15 ಕಿ.ಮೀ ವಿಭಾಗದಲ್ಲಿ 71 ವರ್ಷದ ಶ್ರೀಮತಿ ಸುಲತಾ ಕಾಮತ್ ಹಾಗೂ 64 ವರ್ಷದ ಶ್ರೀ ವಿಠ್ಟಲ್ ಶೆಟ್ಟಿಗಾರ್ ಮತ್ತು ಅತೀ ಕಿರಿಯ ವಯಸ್ಸಿನ ಮಾಸ್ಟರ್ ಸ್ವಯಂ ರವರ ಭಾಗವಹಿಸುವಿಕೆಯು ಈ ಮ್ಯಾರಥಾನ್‍ನ ವಿಶೇಷತೆಯಾಗಿದ್ದು ಅವರನ್ನು ವಿಶೇಷ ಬಹುಮಾನಗಳೊಂದಿಗೆ ಗೌರವಿಸಲಾಯಿತು.
ಒಟ್ಟಾಗಿ ವಿಜೇತರಿಗೆ ನಗದು ಬಹುಮಾನ, ಆರೋಗ್ಯ ತಪಾಸಣೆ ವೌಚರ್ ಹಾಗೂ ಗಿಫ್ಟ್ ಹ್ಯಾಂಪರ್‍ಗಳನ್ನೊಳಗೊಂಡ ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ಬಹುಮಾನಗಳನ್ನು ನೀಡಲಾಯಿತು. ಹಾಗೂ ಎಲ್ಲಾ ಮ್ಯಾರಥಾನ್ ಫಿನಿಶರ್‍ಗಳಿಗೆ ಅವರ ಭಾಗವಹಿಸುವಿಕೆಗಾಗಿ ಪದಕ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ವಂದನೀಯ ರೋಶನ್ ಕ್ರಾಸ್ತ, ಕಾಲೇಜಿನ ಪ್ರಾಂಶುಪಾಲರಾದ ಡಾ. ಇ.ಎಸ್.ಜೆ. ಪ್ರಭು ಕಿರಣ್, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಗಿರೀಶ್ ನಾವಡ ಯು.ಕೆ., ಉಪ ವೈದ್ಯಕೀಯ ಅಧೀಕ್ಷಕರಾದ ಡಾ. ದೀಪಾ ರೆಬೆಲ್ಲೊ, ಕಾರ್ಯಕ್ರಮ ಸಂಯೋಜಕರಾದ ಡಾ. ಸೂರಜ್ ಕೆ.ವಿ., ರಾಘ್ಟ್ರೀಯ ಸೇವಾ ಯೋಜನೆಯ ಸಂಯೋಜಕರಾದ ಡಾ. ದೀರಜ್ ಫೆರ್ನಾಂಡಿಸ್, ಮಾದ್ಯಮ ಸಂಯೋಜಕರಾದ ಡಾ. ಅನುಷಾ ಜಿ., ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಚೆನ್ನಕೇಶವ ಎಮ್.ಜಿ. ಯವರು ಉಪಸ್ಥಿತರಿದ್ದರು.

ಮಿಲಾಗ್ರೆಸ್ ಸೆಂಟ್ರಲ್ ಸ್ಕೂಲ್‌ನಲ್ಲಿ ಮಕ್ಕಳ ದಿನ ಜೀವನದ “ಜೀವನದ ಎಲ್ಲಾ ಋತುಗಳಲ್ಲಿ ಬಾಲ್ಯದ ಜೀವನವು ಅತ್ಯಂತ ಸುಂದರವಾಗಿದೆ”

ಮಂಗಳೂರು: 14ನೇ ನವೆಂಬರ್ 2022 ರಂದು ಮಿಲಾಗ್ರೆಸ್ ಸೆಂಟ್ರಲ್ ಸ್ಕೂಲ್‌ನಲ್ಲಿ ಮಕ್ಕಳ ದಿನವನ್ನು ಉತ್ಸಾಹ ಮತ್ತು ಹುರುಪಿನಿಂದ ಆಚರಿಸಲಾಯಿತು. ಇದು ವಿದ್ಯಾರ್ಥಿಗಳಿಗೆ ಮೋಜಿನ ದಿನವಾಗಿತ್ತು. ವರ್ಣರಂಜಿತ ಉಡುಗೆಯಲ್ಲಿ ಶಾಲೆಗೆ ಹಾಜರಾಗಿದ್ದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಆನಂದ ಅನುಭವಿಸಲು ಹಾಗೆ ಮಕ್ಕಳಲ್ಲಿ ವಿಶೇಷ ಭಾವನೆ ಮೂಡಿಸಲು ಶಿಕ್ಷಕರಿಂದ ವಿಶೇಷ ಸಭೆ ಆಯೋಜಿಸಲಾಗಿತ್ತು. ಶಿಕ್ಷಕರಿಂದ ದೇವರ ಆಶೀರ್ವಾದ ಪಡೆದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರಾಂಶುಪಾಲರಾದ ಫಾದರ್ ಜೋಸೆಫ್ ಉದಯ್ ಫೆರ್ನಾಂಡಿಸ್ ಮಕ್ಕಳ ದಿನಾಚರಣೆಯ ಮಹತ್ವವನ್ನು ಕೇಂದ್ರೀಕರಿಸಿ ಭಾಷಣ ಮಾಡಿ “ಜೀವನದ ಎಲ್ಲಾ ಋತುಗಳಲ್ಲಿ ಬಾಲ್ಯದ ಜೀವನವು ಅತ್ಯಂತ ಸುಂದರವಾಗಿದೆ” ಎಂದು ತಿಳಿಸಿದರು. ಶಿಕ್ಷಕರು ಮಕ್ಕಳಿಗೆ ಸುಂದರವಾದ ಶುಭಾಶಯ ಗೀತೆಯನ್ನು ಅರ್ಪಿಸಿದರು. ಮಕ್ಕಳು ಅಸೆಂಬ್ಲಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು ಮತ್ತು ದಿನವನ್ನು ಸ್ಮರಣೀಯವಾಗಿಸಿಕೊಂಡರು. ವರ್ಗವಾರು ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ವಿವಿಧ ಬಹುಮಾನಗಳನ್ನು ನೀಡಲಾಯಿತು. ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.

ಹೋಲಿ ರೆಡೀಮರ್ ಶಾಲೆಯು ರಾಜ್ಯ ಮಟ್ಟದ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಅನೇಕ ಪದಕಗಳನ್ನು ತನ್ನದಾಗಿಸಿಕೊಂಡಿದೆ





ಬೆಳ್ತಂಗಡಿ: ಹೋಲಿ ರೆಡೀಮರ್ ಶಾಲೆ, ಬೆಳ್ತಂಗಡಿಯು ವೈಟ್ ಬೆಲ್ಟ್ ವಿಭಾಗದಲ್ಲಿ, ಬಂಟ್ವಾಳದ ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನವೆಂಬರ್ 12 ರಂದು ಯೊಮೊಟೊ ಶೋಟೊಕಾನ್ ಕರಾಟೆ ಅಸೋಸಿಯೇಶನ್ ಟ್ರಸ್ಟ್ (ಆರ್) ಆಯೋಜಿಸಿದ ರಾಜ್ಯ ಮಟ್ಟದ 2022 ರ ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್ ನಲ್ಲಿ ಅನೇಕ ಬಹುಮಾನಗಳನ್ನು ಗೆದ್ದುಕೊಂಡಿದೆ

    ಕುಮಿಟೆ ಶೈಲಿಯಲ್ಲಿ 8ನೇ ತರಗತಿಯ ಸುಮಿತ್ ಸೆರಾವೊ ದ್ವಿತೀಯ ಸ್ಥಾನ ಪಡೆದರು.7ನೇ ತರಗತಿಯ ಕುಶಿ ಕಟಾದಲ್ಲಿ ದ್ವಿತೀಯ ಹಾಗೂ ಕುಮಿಟೆಯಲ್ಲಿ ದ್ವಿತೀಯ ಸ್ಥಾನ ಪಡೆದರು.6ನೇ ತರಗತಿಯ ಮಾನ್ವಿ ಕುಮಿಟೆಯಲ್ಲಿ ಪ್ರಥಮ ಹಾಗೂ ಕಾಟಾ ಶೈಲಿಯಲ್ಲಿ ಪ್ರಥಮ ಸ್ಥಾನ ಪಡೆದರು. 6ನೇ ತರಗತಿಯ ಆನ್ ಮರಿಯಾ ಕುಮಿಟೆ ಶೈಲಿಯಲ್ಲಿ ತೃತೀಯ ಹಾಗೂ ಕಾಟಾದಲ್ಲಿ ಪ್ರಥಮ ಸ್ಥಾನ ಪಡೆದರು. 6ನೇ ತರಗತಿಯ ಭುವಿ ಕಟಾದಲ್ಲಿ ತೃತೀಯ ಸ್ಥಾನ ಪಡೆದರು. 6ನೇ ತರಗತಿಯ ಶಮಂತ್ ಕುಮಿಟೆಯಲ್ಲಿ ಪ್ರಥಮ ಹಾಗೂ ಕಾಟಾದಲ್ಲಿ ದ್ವಿತೀಯ ಸ್ಥಾನ ಪಡೆದರು. 5ನೇ ತರಗತಿಯ ಅಂಜು ಮರಿಯಾ ಕುಮಿಟೆಯಲ್ಲಿ ಪ್ರಥಮ ಹಾಗೂ ಕಾಟಾದಲ್ಲಿ ದ್ವಿತೀಯ ಸ್ಥಾನ ಪಡೆದರು.5ನೇ ತರಗತಿಯ ಅಯಾನ್ ಕುಮಿಟೆಯಲ್ಲಿ ತೃತೀಯ ಹಾಗೂ ಕಾಟಾದಲ್ಲಿ ಪ್ರಥಮ ಸ್ಥಾನ ಪಡೆದರು. 5ನೇ ತರಗತಿಯ ಸೋನಲ್ ಕಟಾದಲ್ಲಿ ತೃತೀಯ ಸ್ಥಾನ ಪಡೆದರು. 4ನೇ ತರಗತಿಯ ಪ್ರಗತಿ ಕುಮಿಟೆಯಲ್ಲಿ ಪ್ರಥಮ ಹಾಗೂ ಕಟಾದಲ್ಲಿ ತೃತೀಯ ಸ್ಥಾನ ಪಡೆದರು. ಕಟಾದಲ್ಲಿ 4ನೇ ತರಗತಿಯ ಪ್ರಜ್ವಲ್ ತೃತೀಯ ಸ್ಥಾನ ಪಡೆದರು. 4ನೇ ತರಗತಿಯ ಮಾನ್ವಿಕ್ ಕುಮಿಟೆಯಲ್ಲಿ ಪ್ರಥಮ ಹಾಗೂ ಕಾಟಾದಲ್ಲಿ ದ್ವಿತೀಯ ಸ್ಥಾನ ಪಡೆದರು. 3ನೇ ತರಗತಿಯ ವಿಹಾನ್ ಕಟಾದಲ್ಲಿ ತೃತೀಯ ಸ್ಥಾನ ಪಡೆದರು.

    ಈ ವಿದ್ಯಾರ್ಥಿಗಳಿಗೆ ಕರಾಟೆ ತರಬೇತುದಾರ ಶ್ರೀ ಅಶೋಕ್ ಆಚಾರ್ಯ  ತರಬೇತಿ ನೀಡಿದ್ದರು.

ಭಂಡಾರ್ಕಾರ್ಸ್: “ಶಿಕ್ಷಣ ಸಂಸ್ಥೆಗಳ ಭವಿಷ್ಯ ನಿರ್ಧಾರ” ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ

ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಇನ್ಸ್ಟಿಟ್ಯೂಷನ್ ಇನ್ನೋವೇಶನ್ ಕೌನ್ಸಿಲ್ ಇದರ ಸಹಯೋಗದಲ್ಲಿ ಆವಿಷ್ಕಾರ: “ಶಿಕ್ಷಣ ಸಂಸ್ಥೆಗಳ ಭವಿಷ್ಯ ನಿರ್ಧಾರ” ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಣಿಪಾಲ ಹೈಯರ್ ಎಜುಕೇಷನ್ ನ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಎಂಜಿನೀಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ.ಸೋಮಶೇಖರ್ ಭಟ್ ಮಾತನಾಡಿ ನಾವು ಸಂಸ್ಥೆಗೆ ಋಣಿಯಾಗಿರಬೇಕು. ಸಂಸ್ಥೆ ನಮ್ಮ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ದಾರಿ ಮೂಲಕ ನಮ್ಮನ್ನು ಬೆಳೆಸುತ್ತದೆ. ಹಾಗೆ ದೊರಕುವ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಮಣಿಪಾಲ ಹೈಯರ್ ಎಜುಕೇಷನ್ ನಾ ಎರೊನಾಟಿಕಲ್ ಮತ್ತು ಆಟೊಮೊಬೈಲ್ ಎಂಜಿನೀಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ. ಮಹಮ್ಮದ್ ಜುಬೇರ್ ಮಾತನಾಡಿ ಸೃಜನಶೀಲ ಆವಿಷ್ಕಾರ ಗಳ ಮೂಲಕ ದೇಶವನ್ನು ಕಟ್ಟೋಣ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ. ನಾರಾಯಣ ಶೆಟ್ಟಿ ವಹಿಸಿದ್ದರು.
ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಇನ್ಸ್ಟಿಟ್ಯೂಷನ್ ಇನ್ನೋವೇಶನ್ ಕೌನ್ಸಿಲ್ ನ ಸಂಯೋಜಕರಾದ ಡಾ. ಲಲಿತಾದೇವಿ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಯಜುಷಾ ಸ್ವಾಗತಿಸಿ, ಅಂಜನಾದೇವಿ ಪರಿಚಯಿಸಿ, ಅನಾಜ್ ವಂದಿಸಿದರು.