

ಶ್ರೀನಿವಾಸಪುರ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಶ್ರೀನಿವಾಸಪುರ ತಾಲೂಕು ಘಟಕದ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳ ಪದಗ್ರಹಣ ಹಾಗೂ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ಶನಿವಾರ ಪಟ್ಟಣದಲ್ಲಿ ಆತ್ಮೀಯವಾಗಿ ನಡೆಯಿತು.
ಚುನಾವಣಾಧಿಕಾರಿ ಗೋಪಿನಾಥ್ ಜೆ. ಅವರು ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ ಪದಗ್ರಹಣ ನೆರವೇರಿಸಿದರು. ಬಳಿಕ ಮಾತನಾಡಿದ ಪದಾಧಿಕಾರಿಗಳು, ಶಿಕ್ಷಕರ ಹಿತಾಸಕ್ತಿ ಕಾಪಾಡುವುದರ ಜೊತೆಗೆ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ದಿಸೆಯಲ್ಲಿ ಸಮರ್ಪಿತವಾಗಿ ಕಾರ್ಯನಿರ್ವಹಿಸುವುದಾಗಿ ಸಂಕಲ್ಪ ವ್ಯಕ್ತಪಡಿಸಿದರು.
ತಾಲೂಕು ಘಟಕದ ಅಧ್ಯಕ್ಷರಾಗಿ ಸಿ.ವಿ. ಶಿವಣ್ಣ, ಪ್ರಧಾನ ಕಾರ್ಯದರ್ಶಿಯಾಗಿ ಎನ್. ವೇಣುಗೋಪಾಲ್, ಉಪಾಧ್ಯಕ್ಷರಾಗಿ ಸಿ. ನಾಗರತ್ನಮ್ಮ ಹಾಗೂ ಅನಿತಾ ಟಿ.ಎಸ್, ಸಹ ಕಾರ್ಯದರ್ಶಿಯಾಗಿ ವೇಣುಗೋಪಾಲ್ ರೆಡ್ಡಿ ಎನ್. ಸಂಘಟನಾ ಕಾರ್ಯದರ್ಶಿಗಳಾಗಿ ಅನುರಾಧ ಆರ್.ಕೆ. ಮತ್ತು ವೆಂಕಟರಾಮ್ ರೆಡ್ಡಿ ಡಿ.ವಿ., ಖಜಾಂಚಿಯಾಗಿ ತನುಜ ಹಾಗೂ ಕಾರ್ಯ ಸಮಿತಿ ಸದಸ್ಯರಾಗಿ ಮೂರ್ತಿ ಎಂ. ಮತ್ತು ಬೈರಾರೆಡ್ಡಿ ಪದಗ್ರಹಣ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ರೆಡ್ಡಪ್ಪ, ಜಿಲ್ಲಾ ಉಪಾಧ್ಯಕ್ಷ ರಘುನಾಥ್ ರೆಡ್ಡಿ ಹಾಗೂ ಶಿಕ್ಷಕರ ಸಂಘದ ಸದಸ್ಯರು ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

