ಕುಂ. ಶ್ರೀ ವೆಂಕಟರಮಣ ಪ್ರಭು ಚಾರಿಟೇಬಲ್ ಟ್ರಸ್ಟ್, ಕಾವೇರಿ ಆಸ್ಪತ್ರೆ, ರೋಟರಿ ಕ್ಲಬ್ ಕುಂದಾಪುರ ದ. ವತಿಯಿಂದ ಶ್ರೀ ಕೃಷ್ಣ ಸೇವಾ ಕೇಂದ್ರಕ್ಕೆ ಒಕ್ಸಿಜನ್ ಕಾನ್ಸಂಟ್ರೆಟರ್ ಹಸ್ತಾಂತರ

ಕುಂಭಾಶಿ ಶ್ರೀ ವೆಂಕಟರಮಣ ಪ್ರಭು ಚಾರಿಟೇಬಲ್ ಟ್ರಸ್ಟ್, ಕಾವೇರಿ ಆಸ್ಪತ್ರೆ ಹಾಗೂ ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ವತಿಯಿಂದ ಅಶಕ್ತರಿಗೆ ಆರೈಕೆ ನೀಡುವ ಹೆಬ್ರಿಯ ಶ್ರೀ ಕೃಷ್ಣ ಸೇವಾ ಕೇಂದ್ರಕ್ಕೆ ಒಕ್ಸಿಜನ್ ಕಾನ್ಸಂಟ್ರೆಟರ್ ಹಸ್ತಾಂತರಿಸಲಾಯಿತು. ರೋಟರಿ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ, ಮಾಜಿ ಅಧ್ಯಕ್ಷರಾದ ರೋ. ಶಾಂತರಾಮ ಪ್ರಭು, ಕಾರ್ಯದರ್ಶಿ ರೋ. ಸಚಿನ್ ನಕ್ಕತ್ತಾಯ, ರೋ. ಸುರೇಖಾ ಪುರಾಣಿಕ, ಹಾಗೂ ಹೆಬ್ರಿಯ ಶ್ರೀ ಕೃಷ್ಣ ಸೇವಾ ಕೇಂದ್ರದ ಡಾ. ಭಾರ್ಗವಿ ಐತಾಳ ಉಪಸ್ಥಿತರಿದ್ದರು.

ಬೈಬಲ್ ಆಟಗಳೊಂದಿಗೆ ಒಂದು ದಿನ ಮಕ್ಕಳ ದಿನಾಚರಣೆ – ವಿನೂತನ ಬೈಬಲ್ ಹೌಸಿ ಹೌಸಿ

ಮಂಗಳೂರು: ಜೆಪ್ಪುವಿನ ಸೇಂಟ್ ಜೋಸೆಫ್ ಚರ್ಚ್ ನಲ್ಲಿ ಚರ್ಚ್‌ನ ಮಕ್ಕಳು  ನವೆಂಬರ್ 11  ರಂದು ಮಕ್ಕಳ ದಿನಾಚರಣೆಯನ್ನು ಆಚರಿಸಿ ಮಕ್ಕಳೆಲ್ಲಒಗ್ಗೂಡ ಸಂತೋಷದಿಂದ ಸಮಯ ಕಳೆದರು.  6 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗಾಗಿ ಕಾರ್ಯಕ್ರಮವನ್ನು ಸೃಜನಾತ್ಮಕ ಮತ್ತು ವಿನೂತನ ರೀತಿಯಲ್ಲಿ ಆಯೋಜಿಸಲಾಗಿತ್ತು.

   ಚರ್ಚಿನ ಎಲ್ಲಾ ಮಕ್ಕಳಿಗಾಗಿ  ಬೈಬಲ್ ಆಟಗಳನ್ನು ಏರ್ಪಡಿಸಲಾಗಿತ್ತು. ಎಲ್ಲಾ ಮಕ್ಕಳು ಉತ್ಸಾಹದಿಂದ ಇದರಲ್ಲಿ ಪಾಲ್ಗೊಂಡರು. ಚಟುವಟಿಕೆಗಳು ಮತ್ತು ಆಟಗಳ ಮೂಲಕ ಮಕ್ಕಳಿಗೆ ಬೈಬಲ್ ಜ್ನಾನವನ್ನು  ಕಲಿಸಲು,  ಒಂದು ನವೀನ ಮತ್ತು ಪ್ರಾಯೋಗಿಕ ವಿಧಾನದ.

ಬೈಬಲ್ ಹೌಸಿ ಹೌಸಿ (ಫಾ| ಮ್ಯಾಕ್ಸಿಮ್ ಡಿಸೋಜಾ ಅವರ ನಾವೀನ್ಯತೆ), ಬೈಬಲ್ ರಸಪ್ರಶ್ನೆ ಮತ್ತು ಇತರ ಅನೇಕ ಬೈಬಲ್ ಆಟಗಳನ್ನು ಒಳಗೊಂಡಿದ್ದವು.. ಬ್ರದರ್ಸ್ಗಳು ನಡೆಸಿದ ಬೈಬಲ್ ಗೇಮ್ಸ್‌ನಲ್ಲಿ ಮಕ್ಕಳು ಸಕ್ರಿಯವಾಗಿ ಭಾಗವಹಿಸುವುದನ್ನು ನೋಡುವುದು ಅದ್ಭುತ ಅನುಭವ ಆಗಿದ್ದು, ಬ್ರ. ಲೋಹಿತ್ ಅಜಯ್ ಮಸ್ಕರೇನಸ್, ಬ್ರ. ಗ್ಲಾಡ್ವಿನ್ ಫೆರ್ನಾಂಡಿಸ್ ಮತ್ತು ಶ್ರೀ ರಾಬಿನ್ ವಾಸ್, ಬೈಬಲ್ ಆಟಗಳನ್ನು ಬಹಳ ಪರಿಣಾಮಕಾರಿಯಾಗಿ ನಡೆಸಿಕೊಟ್ಟರು. ಈ ಉದ್ದೇಶಕ್ಕಾಗಿ 35 ಬೈಬಲ್ನ ಆಟಗಳನ್ನು ರಚಿಸಲಾಗಿದೆ.  ಕ್ರೈಸ್ತ ಶಿಕ್ಷಣದ ಶಿಕ್ಷಕಿಯರು ರುಚಿಕರವಾದ ಊಟವನ್ನು ತಯಾರಿಸಿದ್ದರು. ಚರ್ಚಿನ ಜನತೆ ಇದಕ್ಕೆ ಸಂಪೂರ್ಣ ಸಹಕಾರ ನೀಡಿದ್ದು, ಈ ರೀತಿಯ ಮಕ್ಕಳ ದಿನಾಚರಣೆಯನ್ನು ಮಕ್ಕಳಿಗೆ ಸ್ಮರಣೀಯವನ್ನಾಗಿಸಿತು. ಈ ಸಭೆಯ ಉದ್ದೇಶವು ಮಕ್ಕಳ ದಿನಾಚರಣೆಯನ್ನು ಆಚರಿಸುವುದು ಮಾತ್ರವಲ್ಲದೆ ಮಕ್ಕಳಿಗೆ ಬೈಬಲ್‌ನೊಂದಿಗೆ ಹೆಚ್ಚು ಪರಿಚಿತರಾಗುವಂತೆ ಮಾಡುವುದು ಮತ್ತು ಸೃಜನಶೀಲ ಮತ್ತು ಪರಿಣಾಮಕಾರಿ ರೀತಿಯಲ್ಲಿ ಬೈಬಲ್‌ನ ಮೌಲ್ಯಗಳನ್ನು ಅವರಲ್ಲಿ ಅಳವಡಿಸುವುದು ಉದ್ದೇಶವಾಗಿದ್ದು, ಒಂದು ದಿನದ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಚರ್ಚಿನ ಯಾಜಕರು.  ಕ್ರೈಸ್ತ ಶಿಕ್ಷಣದ ಶಿಕ್ಷಕಿಯರು ಮತ್ತು ಪಾಲನ ಮಂಡಳಿ ಆಯೋಜಿಸಿತ್ತು.

ಸಂತ ಪಿಲಿಪ್‌ ನೇರಿ ಚರ್ಚಿನ ತೆರಾಲಿ ಪ್ರಯುಕ್ತ ಸಹೋರತ್ವ ಭಾನುವಾರ ಆಚರಣೆ

ಬಸ್ರೂರು: ನ.13:  ಸಂತ ಪಿಲಿಪ್‌ ನೇರಿ ಚರ್ಚಿನ ತೆರಾಲಿ ಪ್ರಯುಕ್ತ ಸಹೋರತ್ವ ಭಾನುವಾರವನ್ನು (ನ.13)ಸಂಭ್ರಮದಿಂದ ಆಚರಿಸಲಾಯಿತು.  ಪರಮಪ್ರಸಾದಕ್ಕೆ ಭವ್ಯ ಮೆರವಣಿಗೆಯ ಮೂಲಕ ಗೌರವವನ್ನು ಸೂಚಿಸಲಾಯಿತು. ಪ್ರಧಾನ ಧರ್ಮಗುರುಗಳಾಗಿ ವಂ.ಫಾ. ಕೆನ್ಯುಟ್‌ ಬಾರ್ಬೋಜ ದಿವ್ಯ ಬಲಿಪೂಜೆ ಅರ್ಪಿಸಿದರು, ಅತಿಥಿ ಧರ್ಮಗುರುಗಳಾಗಿ ವಂ.ಫಾ. ರೋಶನ್‌ ಮಾಬೆನ್‌ ಹಾಗು ಚರ್ಚಿನ ಗುರುಗಳಾದ ವಂ.ಫಾ . ಚಾರ್ಲ್ಸ್‌ ನೊರೊನ್ಹಾ,  ವಂ.ಫಾ. ಚಾರ್ಲ್ಸ್‌ ಲೂಯಿಸ್‌ ಉಪಸ್ಥಿತರಿದ್ದರು.

ಬಸ್ರೂರು: ನ.13:  ಸಂತ ಪಿಲಿಪ್‌ ನೇರಿ ಚರ್ಚಿನ ತೆರಾಲಿ ಪ್ರಯುಕ್ತ ಸಹೋರತ್ವ ಭಾನುವಾರವನ್ನು (ನ.13)ಸಂಭ್ರಮದಿಂದ ಆಚರಿಸಲಾಯಿತು. ಪರಮಪ್ರಸಾದಕ್ಕೆ ಭವ್ಯ ಮೆರವಣಿಗೆಯ ಮೂಲಕ ಗೌರವವನ್ನು ಸೂಚಿಸಲಾಯಿತು. ಪ್ರಧಾನ ಧರ್ಮಗುರುಗಳಾಗಿ ವಂ.ಫಾ. ಕೆನ್ಯುಟ್‌ ಬಾರ್ಬೋಜ ದಿವ್ಯ ಬಲಿಪೂಜೆ ಅರ್ಪಿಸಿದರು, ಅತಿಥಿ ಧರ್ಮಗುರುಗಳಾಗಿ ವಂ.ಫಾ. ರೋಶನ್‌ ಮಾಬೆನ್‌ ಹಾಗು ಚರ್ಚಿನ ಗುರುಗಳಾದ ವಂ.ಫಾ . ಚಾರ್ಲ್ಸ್‌ ನೊರೊನ್ಹಾ,  ವಂ.ಫಾ. ಚಾರ್ಲ್ಸ್‌ ಲೂಯಿಸ್‌ ಉಪಸ್ಥಿತರಿದ್ದರು.

ಕಥೊಲಿಕ್ ಸಭಾ ಕುಂದಾಪುರ ಘಟಕದಿಂದ ಸರಕಾರಿ ಅರೋಗ್ಯ ಕಾರ್ಡುಗಳ ವಿತರಣ ಕಾರ್ಯಕ್ರಮ

ಕುಂದಾಪುರ, ನ.13: ಕಥೊಲಿಕ್ ಸಭಾ ಕುಂದಾಪುರ ಘಟಕದಿಂದ ಅರೋಗ್ಯ ಕಾರ್ಡ್ ನೋಂದಾವಣೆ ಮಾಡಿದ ಆರೋಗ್ಯ ಕಾರ್ಡುಗಳ ವಿತರಣ ಕಾರ್ಯಕ್ರಮ ನ.13 ರಂದು  ಕುಂದಾಪುರ ಚರ್ಚ್ ಆವರಣದಲ್ಲಿ ನಡೆಯಿತು. ಕಥೊಲಿಕ್ ಸಭಾ ಕುಂದಾಪುರ ಘಟಕದ ಕಾರ್ಯಕರ್ತರು ಸ್ಥಳದಲ್ಲೆ ಒನ್ ಲೈನಿನ ಮೂಲಕ, ಅಭಾ ಕಾರ್ಡ್, ಇ ಶ್ರಮ ಕಾರ್ಡಗಳ ನೋಂದಣಿಯ ಸೇವೆಯನ್ನು ಮಾಡಿದ್ದರು. ಕುಂದಾಪುರ ಕಥೊಲಿಕ್ ಸಭಾ ಘಟಕದ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ ಕಥೊಲಿಕ್ ಸಭಾ ಕುಂದಾಪುರ ಘಟಕದ ಅಧ್ಯಾತ್ಮಿಕ ನಿರ್ದೇಶಕರಾದ ಅ|ವಂ|ಸ್ಟ್ಯಾನಿ ತಾವ್ರೊಇವರಿಗೆಆರೋಗ್ಯ ಕಾರ್ಡನ್ನು ಹಸ್ತಾಂತರಿಸುವ ಮೂಲಕ ಕಾರ್ಡ್ ವಿತರಣಯನ್ನು ಮಾಡಿದರು. ಸುಮಾರು ಇನ್ನೂರು ಜನರಿಗೆ  ಆಯುಶ್ಮಾನ್ ,ಅಭಾ ಕಾರ್ಡ್ ಮತ್ತು ಇ ಶ್ರಮ ಕಾರ್ಡ್ ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ, ನಿಕಟಪೂರ್ವ ಅಧ್ಯಕ್ಷ ಬರ್ನಾಡ್ ಡಿಕೋಸ್ತಾ, ಕಾರ್ಯದರ್ಶಿ ಆಲ್ಡ್ರಿನ್ ಡಿಸೋಜಾ,ಖಚಾಂಚಿ ಪ್ರೇಮಾ ಡಿಕುನ್ಹಾ ಮುಂತಾದ ಪದಾಧಿಕಾರಿಗಳು, ಸದಸ್ಯರುಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷರು, ಕಾರ್ಯದರ್ಶಿ, ಉಪಸ್ಥಿತರಿದ್ದರು.ಒನ್ ಲೈನಿನ ಮೂಲಕಕಾರ್ಡುಗಳನ್ನು ನೊಂದಾಯಿಸಲು ಸಹಕರಿಸಿದವರನ್ನು ಗೌರವಿಸಲಾಯಿತು. ವಿನೋದ್ ಕ್ರಾಸ್ಟೊ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಬೆಳ್ಮಣ್ಣು ಜೇಸಿಐಗೆ ವಲಯ ಮಟ್ಟದ ಅತ್ಯುತ್ತಮ ಪಬ್ಲಿಕ್ ರಿಲೇಷನ್ ಶಿಪ್ ಪ್ರಶಸ್ತಿ ಸೇರಿದಂತೆ ಹಲವಾರು ವಿಶೇಷ ಮನ್ನಣೆಗಳು

ಭಾರತೀಯ ಜೇಸಿಐನ ವಲಯ ಹದಿನೈದರ ನೇತೃತ್ವದಲ್ಲಿ ನಿಟ್ಟೆಯಲ್ಲಿ ಜರಗಿದ ವಲಯ ಸಮ್ಮೇಳನದಲ್ಲಿ ಸಾಂತೂರು ವೀಣೇಶ್ ಅಮೀನ್ ಸಾರಥ್ಯದ ಜೇಸಿಐ ಬೆಳ್ಮಣ್ಣು ಘಟಕಕ್ಕೆ ವಲಯದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಅತ್ಯುತ್ತಮ ಪಬ್ಲಿಕ್ ರಿಲೇಷನ್ ಶಿಪ್, ಅತ್ಯುತ್ತಮ ಜೂನಿಯರ್ ಜೇಸಿ ಅಧ್ಯಕ್ಷ ಪ್ರಶಸ್ತಿ ಸೇರಿದಂತೆ ಸಿಲ್ವರ್ ಲೋಮ್, ರಕ್ತದಾನ ಶಿಬಿರದ ವಿಶೇಷ ಮನ್ನಣೆ, ತರಬೇತಿ ವಿಭಾಗದ ವಿಶೇಷ ಮನ್ನಣೆ, ಕಾರ್ಯಕ್ರಮ ವಿಭಾಗದ ವಿಶೇಷ ಮನ್ನಣೆ, ವಲಯಾಧ್ಯಕ್ಷರ ಭೇಟಿ ಕಾರ್ಯಕ್ರಮದ ವಿಭಾಗದಲ್ಲಿ ಹಲವಾರು ವಿಶೇಷ ಮನ್ನಣೆಗಳನ್ನು ವಲಯಾಧ್ಯಕ್ಷರಾದ ರೋಯನ್ ಉದಯ್ ಕ್ರಾಸ್ತ ಅವರು ಬೆಳ್ಮಣ್ಣು ಜೇಸಿಐಗೆ ನೀಡಿ ಗೌರವಿಸಿದರು.
ಈ ಸಂಧರ್ಭದಲ್ಲಿ ಬೆಳ್ಮಣ್ಣು ಜೇಸಿಐ ಘಟಕದ ಪೂರ್ವಾಧ್ಯಕ್ಷರಾದ ಸತೀಶ್ ಕೋಟ್ಯಾನ್, ಸರ್ವಜ್ಞ ತಂತ್ರಿ, ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ರವಿರಾಜ್ ಶೆಟ್ಟಿ, ಸತ್ಯನಾರಾಯಣ ಭಟ್, ನಿಯೋಜಿತ ಅಧ್ಯಕ್ಷರಾದ ಅಬ್ಬಡ್ಕ ಸತೀಶ್ ಪೂಜಾರಿ, ಕಾರ್ಯದರ್ಶಿ ದೀಕ್ಷಿತ್ ದೇವಾಡಿಗ, ಸದಸ್ಯರಾದ ರಾಜೇಶ್ ಕುಲಾಲ್, ಹರಿಪ್ರಸಾದ್ ನಂದಳಿಕೆ, ಗಣೇಶ್ ಆಚಾರ್ಯ, ಯುವ ಜೇಸಿ ಅಧ್ಯಕ್ಷ ವೈಶಾಖ್ ಹೆಬ್ಬಾರ್

ಕುಂದಾಪುರ: ಪಠ್ಯದ ಜೊತೆಗೆ ವ್ಯವಹಾರ ಜ್ಞಾನ ಅಗತ್ಯದ ಉದ್ದೇಶದಿಂದ ವೆಂಕಟರಮಣ ಪ.ಪೂ. ಕಾಲೇಜು ಸಂಘಟಿಸಿದ ವ್ಯಾಪರ ಮೇಳದಲ್ಲಿ ಸಂತ ಮೇರಿಸ್ ವಿದ್ಯಾರ್ಥಿಗಳ ಭರ್ಜರಿ ವ್ಯಾಪರ

ಕುಂದಾಪುರ, ನ.:12 ವಿದ್ಯಾರ್ಥಿಗಳು ಕ್ರಿಯಾಶೀಲರಾಗಿ ಪಠ್ಯದ ಜೊತೆಗೆ ವ್ಯವಹಾರ ಜ್ಞಾನ ಅಗತ್ಯವಿದೆ, ಅದಕ್ಕೆ ನೆರವಾಗುವ ಉದ್ದೇಶದಿಂದ ಕುಂದಾಪುರ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಸಂಘಟಿಸಿದ  ವ್ಯವಹಾರ ದಿನ (Buissiness day) ವ್ಯಾಪರ ಮೇಳದಲ್ಲಿ ಕುಂದಾಪುರ ಪ್ರತಿಷ್ಟಿತ ಸಂತ ಮೇರಿಸ್ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ವಿಜಯಲಕ್ಷ್ಮಿ, ಲಿನೇಟ್, ರಕ್ಷಿತಾ, ದೀಪಿಕಾ ಪೈ, ಮಂಜುನಾಥ, ಭಾಗವಹಿಸಿ ವಿದ್ಯೆಯ ಜತೆಗೆ ವ್ಯವಹಾರ ಜ್ಞಾನ ವೃದ್ಧಿಸಿಕೊಂಡು ಹೆಮ್ಮೆಗೆ ಪಾತ್ರರಾಗಿದ್ದಾರೆ.

        ವ್ಯಾಪರ ಮೇಳದ ಮಳಿಗೆಯಲ್ಲಿ ಜೋನಿ ಬೆಲ್ಲ, ತೆಂಗಿನ ಎಣ್ಣೆ, ಹಪ್ಪಳ, ಪಿಸ್ತಾ, ಖರ್ಜೂರ, ಗೋಡಂಬಿ ಮತ್ತು ಮಕ್ಕಳು ತಿನ್ನುವ ವಿವಿಧ ವಸ್ತುಗಳು ಸೇರಿದಂತೆ ಬಗೆಬಗೆಯ ಪದಾರ್ಥಗಳನ್ನು ಮಾರಾಟ ಮಾಡಿ ಸಂತ ಮೇರಿಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು  5515  ರೂಪಾಯಿಯನ್ನು ಸಂಗ್ರಹಿಸಿದರು. ಮೇಳದಲ್ಲಿ ಸೇರಿದ ವಿದ್ಯಾರ್ಥಿಗಳು,ಅವರ ಪೋಷಕರು  ಅವುಗಳನ್ನು ಖರೀದಿಸಿ ರುಚಿ ಸವಿದರು. ವಿದ್ಯಾರ್ಥಿಗಳು ಒಂದಷ್ಟು ಖುಷಿ ಪಟ್ಟರು.

        “ಇಲ್ಲಿ ತಮ್ಮ ವಸ್ತುಗಳನ್ನು ಮಾರಾಟ ಮಾಡಲು ಅದರಲ್ಲೂ ಇತರರೊಂದಿಗೆ ಸ್ಪರ್ಧೆಗಿಳಿದು ಮಾರಾಟ ಮಾಡುವುದು ನಿಜಕ್ಕೂ ಕಷ್ಟಕರ. ಆದರೆ ಈ ವ್ಯವಹಾರ ದಿನ (ವ್ಯಾಪರ ಮೇಳ) ಉತ್ತಮ ಅನುಭವವನ್ನು ನೀಡಿದೆ” ಎನ್ನುತ್ತಾಳೆ ಸಂತ ಮೇರಿಸ್ ಪ್ರೌಢಶಾಲೆಯ ವಿದ್ಯಾರ್ಥಿನಿ ವಿಜಯಲಕ್ಷಿ..

ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿಯಾಗಿದ್ದೇನೆ:ಎಲ್.ಗೋಪಾಲಕೃಷ್ಣ

ಶ್ರೀನಿವಾಸಪುರ: ಬರಲಿರುವ ವಿಧಾನ ಸಭಾ ಚುನಾವಣೆಯಲ್ಲಿ ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ರಾಜ್ಯ ಮಾವು ಅಭಿವೃದ್ಧಿ ಹಾಗೂ ಮಾರುಕಟ್ಟೆ ನಿಗಮದ ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಲ್.ಗೋಪಾಲಕೃಷ್ಣ ಹೇಳಿದರು.
ಪಟ್ಟಣದ ವೆಂಕಟೇಶಗೌಡ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ನಾನು ವಿಧಾನಸಭೆಗೆ, ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಆಭ್ಯರ್ಥಿಯಾಗಿ ಸ್ಪರ್ಧಿಸಲು ನ.15 ರಂದು ಟಿಕೆಟ್‍ಗಾಗಿ ಅರ್ಜಿ ಸಲ್ಲಿಸುತ್ತಿದ್ದೇನೆ’ ಎಂದು ಹೇಳಿದರು.
40 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಈ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶಕ್ತಿ ಮೀರಿ ಶ್ರಮಿಸಿದ್ದೇನೆ. ಶಾಸಕ ಕೆ.ಆರ್.ರಮೇಶ್ ಕುಮಾರ್ ಜನತಾ ಪರಿವಾರ ಬಿಟ್ಟಾಗ, ಅವರಿಗೆ ನನ್ನ ವರ್ಚಸ್ಸಿನಿಂದ ಕಾಂಗ್ರೆಸ್ ಟಿಕೆಟ್ ದೊರೆಯುವಂತೆ ಮಾಡಿದ್ದೇನೆ. ಆದರೆ ಅವರು ನನ್ನನ್ನು ರಾಜಕೀಯವಾಗಿ ಕಡೆಗಣಿಸಿದರು. ಆದರೂ ಚುನಾವಣೆಯಲ್ಲಿ ಅವರ ಗೆಲುವಿಗೆ ಶ್ರಮಿಸಿದ್ದೇನೆ ಎಂದರು.
ಕಳೆದ ವಿಧಾನಸಭಾ ಚುನಾವಣೆ ಪ್ರಚಾರ ಸಭೆಗಳಲ್ಲಿ ಕೆ.ಆರ್.ರಮೇಶ್ ಕುಮಾರ್ ಆ ಚುನಾವಣೆ ಬಳಿಕ ರಾಜಕೀಯ ನಿವೃತ್ತಿ ಹೊಂದುವುದಾಗಿ ಹೇಳಿದ್ದರು. ಹಾಗಾಗಿ ನಾನು ಟಿಕೆಟ್ ಆಕಾಂಕ್ಷಿಯಾಗಿದ್ದು ಅರ್ಜಿ ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಶೇಷಾಪುರ ಗೋಪಾಲ್ ಮಾತನಾಡಿ, ಕ್ರಿಯಾಶೀಲ ಕಾಂಗ್ರೆಸ್ ಮುಖಂಡರಾದ ಎಲ್.ಗೋಪಾಲಕೃಷ್ಣ ಎಂದೋ ಶಾಸಕರಾಗಬೇಕಾಗಿತ್ತು. ಆದರೆ ಕೆ.ಆರ್.ರಮೇಶ್ ಕುಮಾರ್ ಅದಕ್ಕೆ ಅವಕಾಶ ನೀಡಲಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಲ್ಲಿ ಕೆ.ಎಚ್.ಮುನಿಯಪ್ಪ ಅವರ ಸೋಲಿಗೆ ಕಾರಣ ಯಾರೆಂಬುದು ಜನರಿಗೆ ಗೊತ್ತಿದೆ ಎಂದು ಹೇಳಿದರು..
ಕಾಂಗ್ರೆಸ್‍ನಿಂದ ಸ್ಪರ್ಧಿಸಲು ಯಾರಿಗೇ ಟಿಕೆಟ್ ನೀಡಿದರೂ ಅವರ ಗೆಲುವಿಗೆ ಶ್ರಮಿಸುವ ವಿಷಯ ಇಲ್ಲಿ ಮುಖ್ಯವಲ್ಲ. ಎಲ್.ಗೋಪಾಲಕೃಷ್ಣ ಅವರ ಹೆಸರನ್ನು ದೆಹಲಿಗೆ ಕಳುಹಿಸುತ್ತೇವೆ. ಹೈಕಮಾಂಡ್ ಅವರಿಗೇ ಟಿಕೆಟ್ ನೀಡುವಂತೆ ಒತ್ತಡ ಹೇರಲಾಗುವುದು ಎಂದು ಹೇಳಿದರು.
ಕೋಚಿಮುಲ್ ಮಾಜಿ ಅಧ್ಯಕ್ಷ ಎನ್.ಜಿ.ಬ್ಯಾಟಪ್ಪ ಮಾತನಾಡಿ, ಎಲ್.ಗೋಪಾಲಕೃಷ್ಣ ಸ್ವಪಕ್ಷೀಯಯಿಂದಲೇ ಕಿರುಕುಳ ಅನುಭವಿಸಿದ್ದಾರೆ. ಅದು ಖಂಡನಾರ್ಹ. ಆದರೆ ಇಬ್ಬರ ಜಗಳ ಮೂರನೆಯವನಿಗೆ ಲಾಭ ಎನ್ನುವಂತೆ ಆಗಬಾರದು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ಗೋಪಾಲರೆಡ್ಡಿ, ಆದಿನಾರಾಯಣಶೆಟ್ಟಿ, ಶ್ರೀನಿವಾಸ್, ಬಾಬು, ಪ್ರಸಾದ್, ವೆಂಕಟೇಶ್, ವೀರಭದ್ರೇಗೌಡ, ವೀರಭದ್ರಸ್ವಾಮಿ ಎಲ್.ಗೋಪಾಲಕೃಷ್ಣ ಅವರನ್ನು ಬೆಂಬಲಿಸಿ ಮಾತನಾಡಿದರು.
ಮುಖಂಡರಾದ ಕೃಷ್ಣೇಗೌಡ, ವೆಂಕಟಾಚಲಪತಿ, ರವಿಕುಮಾರ್, ಬಿ.ಶ್ರೀನಿವಾಸಗೌಡ, ಶಶಿಕುಮಾರ್, ನಾರಾಯಣಗೌಡ, ಬಚ್ಚೇಗೌಡ, ಪ್ರಭಾಕರಗೌಡ, ಸುರೇಶ್ ಬಾಬು, ಪ್ರಸಾದ್, ರಮೇಶ್, ಕೆಂಪೇಗೌಡ, ಹರೀಶ್, ಕೆ.ಎಚ್.ಸಂಪತ್ ಕುಮಾರ್, ಸರಸ್ವತಮ್ಮ, ದೇವರಾಜ್, ಚಂದ್ರೇಗೌಡ ಇದ್ದರು.

ಶಿರ್ವ:ಸಂತ ಮೇರಿ ಮಹಾವಿದ್ಯಾಲಯ ಪ್ಲೇಸ್‌ಮೆಂಟ್ ಸ್ಕಿಲ್ ಮತ್ತು ಟ್ರೈನಿಂಗ್ ಕಾರ್ಯಗಾರ

ಶಿರ್ವ: ವಿದ್ಯಾರ್ಥಿಗಳ ವೃತ್ತಿಜೀವನದ ಗುರಿಗಳನ್ನು ರೂಪಿಸುವಲ್ಲಿ ಉದ್ಯೋಗ ತರಬೇತಿ ಪ್ರಮುಖ ಪಾತ್ರ ವಹಿಸುತ್ತದೆ. ನೇಮಕಾತಿಗಾಗಿ ತಮ್ಮ ಕ್ಯಾಂಪಸ್‌ಗೆ ಭೇಟಿ ನೀಡುವ ಉನ್ನತ ಸಂಸ್ಥೆಯಲ್ಲಿ ಸ್ಥಾನ ಪಡೆಯುವುದು ಪ್ರತಿಯೊಬ್ಬ ಕಂಪ್ಯೂಟರ್ ಪದವಿ ವಿದ್ಯಾರ್ಥಿಯ ಕನಸಾಗಿದೆ. ಈ ಪ್ರಮುಖ ಅಂಶವನ್ನು ಪರಿಗಣನೆಗೆ ಇಟ್ಟುಕೊಂಡು, ಪದವಿ ವಿದ್ಯಾರ್ಥಿಗಳಿಗೆ ತಮ್ಮ ಉದ್ಯೋಗ ಕೌಶಲ್ಯಗಳನ್ನು ಹೆಚ್ಚಿಸಲು ಮತ್ತು ವಿವಿಧ ಉದ್ಯಮಗಳಲ್ಲಿ ಉತ್ತಮ ಉದ್ಯೋಗವನ್ನು ಸಾಧಿಸಲು ತರಬೇತಿ ಮುಖ್ಯವಾಗಿದೆ ಎಂದು ಸಂತ ಮೇರಿ ಮಹಾ ವಿದ್ಯಾಲಯ,ಶಿರ್ವ ಮತ್ತು ಮೈಟ್ ಕಾಲೇಜು, ಮಿಜಾರು ನಡುವೆ ಒಡಂಬಡಿಕೆಯ ಅನುಸರಿಸಿ ಗಣಕ ವಿಜ್ಞಾನ ವಿಭಾಗ ಏರ್ಪಡಿಸಿದ ಪ್ಲೇಸ್‌ಮೆಂಟ್ ಸ್ಕಿಲ್ ಮತ್ತು ಟ್ರೈನಿಂಗ್ ಕಾರ್ಯಗಾರದಲ್ಲಿ ಮುಖ್ಯ ಅತಿಥಿ ಮಿಜಾರ್ ಮೈಟ್ ಕಾಲೇಜು ಸಹಾಯಕ ಪ್ರಾಧ್ಯಾಪಕ ಅಕ್ಷತ್ರಾಜ್ ಜೈನ್ ಹೇಳಿದರು.

ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು, ತಾಂತ್ರಿಕ ಪರಿಣತಿಯೊಂದಿಗೆ ಸಮಗ್ರ ವ್ಯಕ್ತಿತ್ವದ ಬೆಳವಣಿಗೆಯೂ ಅಗತ್ಯ. ಈ ಅವಶ್ಯಕತೆಗಳನ್ನು ಪೂರೈಸಲು, ಉದ್ಯಮದ ಗುಣಮಟ್ಟಕ್ಕೆ ಸಮಾನವಾಗಿ ಕಂಪ್ಯೂಟರ್ ಪದವೀಧರರ ಸಾಮರ್ಥ್ಯವನ್ನು ಹೆಚ್ಚಿಸಲು ವೃತ್ತಿ ಮತ್ತು ಉದ್ಯೋಗ ಸಂಬಂಧಿತ ಚಟುವಟಿಕೆಗಳ ಬಗ್ಗೆ ಸಂಪೂರ್ಣ ತರಬೇತಿಯನ್ನು ಪಡೆದು ಅವರ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಕಾಲೇಜಿನ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಅಧ್ಯಕ್ಷ ನೆಲೆಯಲ್ಲಿ ಮಾತನಾಡಿದರು

ವಿದ್ಯಾರ್ಥಿಗಳಿಗೆ ಸರಿಯಾದ ಮಾಹಿತಿ ಮತ್ತು ಮಾರ್ಗದರ್ಶನದೊಂದಿಗೆ ವಿವಿಧ ಕೌಶಲಗಳೊಂದಿಗೆ ತರಬೇತಿ ನೀಡುವುದು ಸಂಸ್ಥೆ ಹಾಗೂ ಪೋಷಕರ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ಐಟಿ ಕ್ಲಬ್ ಡೈರೆಕ್ಟರ್ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ರವರು ಪ್ರಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಮುಖ್ಯ ಉದ್ದೇಶವನ್ನು ತಿಳಿಸಿದರು.

ಮೈಟ್ ಕಾಲೇಜಿನ ಹಿರಿಯ ಸಹಾಯಕ ಪ್ರಾಧ್ಯಾಪಕರಾದ ಶ್ರೀ ವರುಣ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ವಿದ್ಯಾರ್ಥಿಗಳಿಗೆ ಬಯೋಡೇಟಾ ಬರವಣಿಗೆ, ಆಪ್ಟಿಟ್ಯೂಡ್ ಟೆಸ್ಟ್, ಗುಂಪು ಚರ್ಚೆ, ಸಂದರ್ಶನವನ್ನು ಹೇಗೆ ಎದುರಿಸುವುದು ಸೇರಿದಂತೆ ಉದ್ಯೋಗ ಕೌಶಲ್ಯಗಳು. ಒಂದು ಅವಲೋಕನ
ಮುಂದುವರಿಕೆಯಲ್ಲಿ ಪ್ರಸ್ತುತಿ ಕೌಶಲ್ಯಗಳು, ನಾಯಕತ್ವ ಕೌಶಲ್ಯಗಳು ಮತ್ತು ಸ್ವಯಂ ಪ್ರೇರಣೆ ಸಂಬಂಧಿತ ಚಟುವಟಿಕೆಗಳಿಗೆ ಸಂಬಂಧಿಸಿದ ಕೆಲವು ಚಟುವಟಿಕೆಗಳು ಬಗ್ಗೆ ತರಬೇತಿ ನೀಡುತ್ತಾರೆ.

ಈ ಕಾರ್ಯಕ್ರಮದಲ್ಲಿ ಉಪನ್ಯಾಸಕ ಪ್ರಕಾಶ್, ದಿವ್ಯಶ್ರೀ, ಸುಷ್ಮಾ,ಬಿಸಿಎ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಕಾಲೇಜು ವಿದ್ಯಾರ್ಥಿಗಳಾದ ಅನುಪ್ ನಾಯಕ್ ಮತ್ತು ಅಲಿಸ್ಟರ್ ಕಾರ್ಯಾಗಾರದಲ್ಲಿ ಸಹಕರಿಸಿದರು. ಶ್ರಾವ್ಯ ಮತ್ತು ತಂಡದವರು ಪ್ರಾರ್ಥನೆ ಸಲ್ಲಿಸಿದರು. ದೀಪ್ತಿ ವಂದಿಸಿದರು, ಛಾಯಾ ಕರ್ಕೇರ ಸ್ವಾಗತಿಸಿ, ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು.

ಭಂಡಾರ್ಕಾರ್ಸ್:ಯುಥ್ ರೆಡ್ ಕ್ರಾಸ್ ಘಟಕದ ಸಹಯೋಗದಲ್ಲಿ “ಸಂವಹನ ಕಲೆ” ಕುರಿತು ಉಪನ್ಯಾಸ

ಕುಂದಾಪುರ: ನವೆಂಬರ್ 9ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಯುಥ್ ರೆಡ್ ಕ್ರಾಸ್ ಘಟಕದ ಸಹಯೋಗದಲ್ಲಿ “ಸಂವಹನ ಕಲೆ” ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.
ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ ಡಾ. ಹಯವದನ ಉಪಾಧ್ಯಾಯ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಸಂವಹನ ಕಲೆ ಕರಗತ ಮಾಡಿಕೊಳ್ಳಲು ಬೇಕಾದ ವಿಧಾನಗಳ ಕುರಿತು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಶುಭಕರಾಚಾರಿ, ಯುಥ್ ರೆಡ್ ಕ್ರಾಸ್ ಘಟಕದ ಸಂಯೋಜಕರಾದ ಸತ್ಯನಾರಾಯಣ, ಉಪನ್ಯಾಸಕಿ ಶ್ವೇತಾ ಮತ್ತು ಉಪನ್ಯಾಸಕ ವಿದ್ಯಾಧರ ಉಪಸ್ಥಿತರಿದ್ದರು.
ಯುಥ್ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮಾಧಿಕಾರಿಣಿ ವಿದ್ಯಾರಾಣಿ ಕಾರ್ಯಕ್ರಮ ನಿರೂಪಿಸಿದರು.