ಬೆಳ್ಮಣ್ಣು ಜೇಸಿಐ ನ 43ನೇ ವರ್ಷದ ಅಧ್ಯಕ್ಷರಾಗಿ ಅಬ್ಬನಡ್ಕ ಸತೀಶ್ ಪೂಜಾರಿ ಆಯ್ಕೆ

ಭಾರತೀಯ ಜೇಸಿಐನ ವಲಯ 15ರ ಪ್ರತಿಷ್ಠಿತ ಘಟಕ ಜೇಸಿಐ ಬೆಳ್ಮಣ್ಣಿನ 43ನೇ ವರ್ಷದ ನೂತನ ಅಧ್ಯಕ್ಷರಾಗಿ ಅಬ್ಬನಡ್ಕ ಸತೀಶ್ ಪೂಜಾರಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇವರು ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ವಿಂಶತಿ ವರ್ಷದ ಅಧ್ಯಕ್ಷರಾಗಿ, ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ, ಇಟ್ಟಮೇರಿ ಲಿಟ್ಲ್ ಫ್ಲವರ್ ಫ್ರೆಂಡ್ಸ್‍ನ ಕಾರ್ಯದರ್ಶಿಯಾಗಿ, ಅಬ್ಬನಡ್ಕ ಕ್ರಿಕೆಟ್ ತಂಡದ ನಾಯಕರಾಗಿ, ಕನ್ನಡ ಸಾಹಿತ್ಯ ಪರಿಷತ್ತು ಬೆಳ್ಮಣ್ಣು ಹೋಬಳಿ ಘಟಕದ ಸದಸ್ಯರಾಗಿ ಪರಿಸರದ ಹಲವಾರು ಸಂಘ – ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದಾರೆ.

ಇತರೆ ಪದಾಧಿಕಾರಿಗಳು:
ನಿಕಟ ಪೂರ್ವಾಧ್ಯಕ್ಷರು – ವೀಣೇಶ್ ಅಮೀನ್
ಉಪಾಧ್ಯಕ್ಷರುಗಳು – ದೀಕ್ಷಿತ್ ದೇವಾಡಿಗ (ಘಟಕ), ಜಯಶ್ರೀ ಪ್ರಕಾಶ್ ಪೂಜಾರಿ (ತರಬೇತಿ), ಅವಿನಾಶ್ ಪೂಜಾರಿ (ಕಾರ್ಯಕ್ರಮ), ಅಶ್ವಥ್ ಶೆಟ್ಟಿ (ಸಮುದಾಯ ಅಭಿವೃದ್ಧಿ), ಅಮಿತಾ ರವಿರಾಜ್ ಶೆಟ್ಟಿ (ವ್ಯವಹಾರ)
ಕಾರ್ಯದರ್ಶಿ – ಸರಿತಾ ದಿನೇಶ್ ಸುವರ್ಣ
ಜೊತೆ ಕಾರ್ಯದರ್ಶಿ – ಹರಿಪ್ರಸಾದ್ ನಂದಳಿಕೆ
ಕೋಶಾಧಿಕಾರಿ – ಲಿತಿಶಿಯಾ
ನಿದೇರ್ಶಕರುಗಳು – ರಾಜೇಶ್ ಕುಲಾಲ್, ಸುಧೀರ್ ಕಾಮತ್, ಡೆನ್ಜಿಲ್ ಪೆರ್ನಾಂಡೀಸ್, ಜೆಸಿಂತಾ ಡಿಸೋಜಾ, ಅನ್ನಪೂರ್ಣ ಕಾಮತ್
ಯುವ ಜೇಸಿ ಅಧ್ಯಕ್ಷರು – ಕೀರ್ತನ್ ಪೂಜಾರಿ

ಯುವ ಜೇಸಿ ನಿದೇರ್ಶಕರು – ವೈಶಾಖ್ ಹೆಬ್ಬಾರ್
ಲೇಡಿ ಜೇಸಿ ನಿದೇರ್ಶಕರು – ಸೌಜನ್ಯ ಸತೀಶ್ ಕೋಟ್ಯಾನ್
ವಿಕಾಸ ಗೃಹ ಪತ್ರಿಕೆ ಸಂಪಾದಕರು – ಸತ್ಯನಾರಾಯಣ ಭಟ್

ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಟೋಟಲ್ ಟಿ.ಎಂ.ಜೆ ರೀಪ್ಲೇಸ್ಮೆಂಟ್ ಶಸ್ತ್ರ ಚಿಕಿತ್ಸೆ ಯಶಸ್ವಿ

ಕೋಲಾರ,ನ.11: ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಟೋಟಲ್ ಟಿ.ಎಂ.ಜೆ ರೀಪ್ಲೇಸ್ಮೆಂಟ್ ಮುಖದಲ್ಲಿ ಚಲಿಸುವ ಏಕೈಕ ಮೂಳೆ ಕೆಳದವಡೆ. ಕೆಳದವಡೆ ಮತ್ತು ತಲೆ ಬುರುಡೆಯ ಜಂಟಿ Temporomandibular joint(TMJ), ತಲೆ ಬುರುಡೆಯ ಫೋಸಾದಲ್ಲಿ ಸರಿಯುವುದರಿಂದ ಕೆಳದವಡೆಯ ಚಲನೆ ಸಾಧ್ಯವಾಗುತ್ತದೆ. ಕೆಳದವಡೆಗೆ ಪೆಟ್ಟುಬಿದ್ದು, ಜಂಟಿ ಸುತ್ತ ರಕ್ತಸ್ರಾವವಾಗಿ ಕ್ರಮೇಣ ತಲೆ ಬುರುಡೆ ಜೊತೆ ಸೇರಿ ಒಂದೇ ಮೂಳೆಯಾಗಿ ದವಡೆಯ ಚಲನೆಯನ್ನು ನಿಬರ್ಂಧಿಸುವುದನ್ನು TMJ Ankylosis ಎಂದು ಕೆರಯಲಾಗುತ್ತದೆ. ಇಂತಹ ಸಂದರ್ಭದಲ್ಲಿ ಬಾಯಿ ತೆಗೆಯುವುದು ಮತ್ತು ಆಹಾರ ಸೇವನೆಯಲ್ಲಿ ತೊಡುಕು ಕಂಡುಬರುತ್ತದೆ.
ಆರ್.ಎಲ್.ಜಾಲಪ್ಪ ಆಸ್ಪತ್ರೆಯದಂತ ವೈದ್ಯಕೀಯ ವಿಭಾಗದಲ್ಲಿ ಇಂತಹ ತೊಂದರೆಯಿಂದ ಬಳಲುತ್ತಿದ್ದ 14 ವರ್ಷದ ಬಾಲಕಿ ಅಖಿಲಳಿಗೆ (ಹೆಸರು ಬದಲಾಯಿಸಲಾಗಿದೆ) ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ. ಅಖಿಲ 3 ವರ್ಷದ ವಯಸ್ಸಿನಲ್ಲಿ ರಸ್ತೆ ಅಪಘಾತದಲ್ಲಿ ಕೆಳದವಡೆ ಮತ್ತು ಕಾಲಿಗೆ ಪೆಟ್ಟುತಗುಲಿತ್ತು. ಅಪಘಾತದಲ್ಲಿ ಒಂದು ಕಾಲನ್ನು ಕಳೆದುಕೊಂಡಿದ್ದ ಹುಡುಗಿಯ ಕೆಳದವಡೆಯ ಪೆಟ್ಟನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಬಾಯಿ ತೆಗೆಯುವುದು ದಿನದಿಂದ ದಿನಕ್ಕೆ ಕಡಿಮೆಯಾಗಿ ಕೆಲ ವರ್ಷಗಳಿಂದ ಸಂಪೂರ್ಣವಾಗಿ ಬಂದ್ ಆಗಿತ್ತು.
ದಂತ ವಿಭಾಗದ ಮುಖ್ಯಸ್ಥೆ ಡಾ.ದೀಪಿಕ ಕೆಂಕೆರೆ ಮತ್ತು ಅವರ ತಂಡದ ಡಾ.ಮಲ್ಲಿಕಾ .ಪಿ ರೆಡ್ಡಿ ಹಾಗೂ ಡಾ.ಹರ್ಷಿತ ಕೆ.ಆರ್, ತಲೆ ಬುರುಡೆಯ ಜೊತೆ ಕೂಡಿಕೊಂಡಿದ್ದ ಕೆಳದವಡೆಯ ಜಂಟಿಯನ್ನು ಬಿಡಿಸಿ ದವಡೆಯ ಚಲನೆಗೆ ಪೂರಕವಾಗಲು, ಭೋಪಾಲ್ ಮಧ್ಯ ಪ್ರದೇಶದಲ್ಲಿ ತಯಾರಿಸಿದ ಕೃತಕ ಜಂಟಿಯನ್ನು ಅಳವಡಿಸಲಾಗಿದೆ. ಅರವಳಿಕೆ ವಿಭಾಗದ ಮುಖ್ಯಸ್ಥ ಡಾ.ರವಿ.ಎಂ ಮತ್ತುಅವರ ತಂಡದ ಡಾ.ಸುಜಾತ ಎಂ.ಪಿ ಯಶಸ್ವಿಯಾಗಿ ಅರವಳಿಕೆಯನ್ನು ನೀಡಿದ್ದಾರೆ.
ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ಕೆಳದವಡೆಯ ಚಲನೆ ಪುನ: ಸ್ಥಾಪನೆಯಾಗಿದೆ. ಹಲವಾರು ವರ್ಷಗಳ ನಂತರ ಅಖಿಲಳಿಗೆ ಸಾಮಾನ್ಯ ಆಹಾರವನ್ನು ಸೇವಿಸಲು ಸಾಧ್ಯವಾಗಿದೆ. ಶಸ್ತ್ರಚಿಕಿತ್ಸೆಯ 6 ತಿಂಗಳುವರೆಗೂ ಬಿಡಿಸಿದ ಮೂಳೆ ಜಂಟಿತಲೆ ಬುರುಡೆಯ ಜೊತೆ ಮರುಜೋಡಣೆಯ ಅತಂಕವಿರುವುದರಿಂದ ಬಾಯಿ ತೆಗೆಯುವ ವ್ಯಾಯಾಮ ಪ್ರಮುಖ ಪಾತ್ರವಹಿಸುತ್ತದೆ.
ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಪ್ರಪ್ರಥಮ ಬಾರಿಟೋಟಲ್ ಜಾಯಿಂಟ್ ರೀಪ್ಲೇಸ್ಮೆಂಟ್(TJR))ಮಾಡಲಾಗಿದೆ. ಈ ಶಸ್ತ್ರಚಿಕಿತ್ಸೆ ಸಾಮಾನ್ಯವಾಗಿ ನಡೆಯದಿರಲು ಕಾರಣ, ಪರಿಣಿತ ಶಸ್ತ್ರಚಿಕಿತ್ಸಕರ ಅಲಭ್ಯತೆ ಮತ್ತು ಕೃತಕ ಜಂಟಿಗೆ ತಗಲುವ ವೆಚ್ಚ.
ಅಖಿಲಳ ಶಸ್ತ್ರಚಿಕಿತ್ಸೆಗೆ ಪೂರಕವಾದ ಎಲ್ಲಾ ವಿಧಿಗಳನ್ನು ಪೂರೈಸುವುದರಲ್ಲಿ ಸಾಮಾನ್ಯ ಶಸ್ತ್ರಚಿಕಿತ್ಸೆ ಮತ್ತು ಮಕ್ಕಳ ವಿಭಾಗದ ಕೊಡುಗೆ ಅಪಾರ.

ಕನಕದಾಸರು ಮಹಾನ್ ಚೇತನ : ಕೆಜಿಎಫ್ ಎಸ್ಪಿ ಡಾ|| ಕೆ.ಧರಣೀದೇವಿ

ಕೆಜಿಎಫ್ :ದಾಸ ಶ್ರೇಷ್ಠ ಕವಿ ಕನಕದಾಸರು ನಿತ್ಯ ಸ್ಮರಣೀಯರೆಂದು, ಭಾರತೀಯ ದಾಸ ಸಾಹಿತ್ಯದ ಸಂಸ್ಕøತಿಯನ್ನು ಇಂದಿಗೂ ಉಳಿಸಿ ವಿಶ್ವಕ್ಕೆ ಮಾನವೀಯ ಮೌಲ್ಯಗಳನ್ನು ಸಾರಿದ ಮಹಾನ್‍ಚೇತನ ಕನಕದಾಸರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೆ.ಧರಣೀದೇವಿ ಅವರು ನುಡಿದರು.
ಅವರು ಕೆಜಿಎಫ್‍ನ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಏರ್ಪಡಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಶ್ರದ್ದಾಭಕ್ತಿಯಿಂದ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಭಾವಪೂರ್ವ ಗೌರವವನ್ನು ಸಲ್ಲಿಸಿದ ಬಳಿಕ ಮಾತನಾಡಿ, ಕನಕದಾಸರು ನಮ್ಮ ನಡುವಿನ ಶಿಕ್ಷಾಗುರು ಮಾತ್ರವಲ್ಲ ಮೋಕ್ಷಾಗುರುವೂ ಹೌದು, ಮೋಕ್ಷವು ಸತ್ತಮೇಲೆ ಸಿಗುವಂತದ್ದಲ್ಲ, ಅದು ಬದುಕಿರುವಾಗಲೇ ಪಡೆಯುವ ಬಿಡುಗಡೆಯ ಉಪಾದಿ, ನಾನು ನೀನು ಎಂದು ಅಹಂ ತೋರದಿದ್ದರೆ ಅದೇ ಮೋಕ್ಷವೆಂದರು. ಕನಕದಾಸರ ಕನ್ನಡ ಪ್ರಜ್ಞೆ ಅಪಾರವಾದದ್ದು, ಅವರ ಕಾವ್ಯ ಸೂಕ್ಷ್ಮತೆಯನ್ನು ಅರ್ಥೈಸಿಕೊಳ್ಳಲು ಅವರ ಪದ ಪ್ರಯೋಗಗಳ ಜಾಡು ಕಂಡು ಹಿಡಿಯುವುದು ಅಷ್ಟು ಸುಲಭದ ಮಾತಲ್ಲವೆಂದು, ಕನ್ನಡ ಕೀರ್ತನಾ ಪರಂಪರೆಯನ್ನು ಬೆಳಗಿದ ಕನಕದಾಸರು ಆಧ್ಯಾತ್ಮ ಯಾತ್ರೆಯ ಮೂಲಕ ಈ ಜಗತ್ತಿನಲ್ಲಿ ನಿತ್ಯಸ್ಮರಣೀಯರಾಗಿದ್ದಾರೆಂದು ಜಿಲ್ಲಾ ರಕ್ಷಣಾಧಿಕಾರಿ ಡಾ|| ಕೆ.ಧರಣೀದೇವಿ ಅವರು ವಿವರಿಸಿದರು.
ಕನಕದಾಸರು ಈ ನಾಡು ಕಂಡ ಶ್ರೇಷ್ಠ ದಾಸರಲ್ಲಿ ಒಬ್ಬರಾಗಿದ್ದು, ಜೀವನಾನುಭವ, ಲೋಕಾನುಭವದ ಸತ್ಯಾಸತ್ಯತೆಗಳನ್ನು ಕಾವ್ಯದ ಮೂಲಕ ಜನಸಾಮಾನ್ಯರಿಗೆ ಸಮರ್ಪಿಸಿ, ಯಾರೂ ಜಾತಿಯ ಹೆಸರಲ್ಲಿ ಹೊಡೆದಾಡದಂತೆ ನೂರಾರು ವರ್ಷಗಳ ಹಿಂದೆಯೇ ಜಾತ್ಯ್ಯತೀತ ಸಮಾಜದ ನಿರ್ಮಾಣಕ್ಕಾಗಿ ಜನಜಾಗೃತಿ ಮೂಡಿಸಿದ ಮಹಾನ್ ವ್ಯಕ್ತಿಯೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕನಕದಾಸರ ಮೌಲ್ಯಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕೆಂದು ಎಸ್ಪಿ ಡಾ|| ಕೆ.ಧರಣೀದೇವಿ ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸರ್ಕಲ್ ಇನ್ಸ್‍ಪೆಕ್ಟರ್ ಕುಮಾರಸ್ವಾಮಿ, ನಿಸ್ತಂತು ಪಿಐ ನವೀನ್‍ಕುಮಾರ್, ಸಶಸ್ತ್ರ ಮೀಸಲು ಪಡೆಯ ಇನ್ಸ್‍ಪೆಕ್ಟರ್ ವಿ.ಸೋಮಶೇಖರ್, ಜಿಲ್ಲಾ ಪೊಲೀಸ್ ಕಛೇರಿಯ ಸಹಾಯಕ ಆಡಳಿತಾಧಿಕಾರಿ ಜಿ.ವಿಶ್ವನಾಥ, ಪಿ.ಎಸ್.ಐ. ಗಾಯತ್ರಿ, ಪ್ರಶಾಂತ್, ಆಪ್ತ ಸಹಾಯಕಿ ಜಿ.ಮಮತಾ, ಎಎಸ್‍ಐ ಸುಬ್ರಮಣಿ, ಕೃಷ್ಣಮೂರ್ತಿ, ಪಾರ್ಥಸಾರಥಿ, ರಾಮಚಂದ್ರರಾವ್ ಸೇರಿದಂತೆ ಜಿಲ್ಲಾ ಪೊಲೀಸ್ ಕಛೇರಿಯ ಅಧಿಕಾರಿ, ಲಿಪಿಕ ಸಿಬ್ಬಂದಿಗಳು ಹಾಜರಿದ್ದರು.

ಯಲ್ದೂರು ಸುತ್ತಮುತ್ತಲಿನ ಶ್ರೀಗಂಧದ ಮರಗಳನ್ನು ಕಳವು ಮಾಡಿದ್ದರೆಂದು ಹೇಳಲಾದ ನಾಲ್ಕು ಮಂದಿ ಆಪಾದಿತರ ಬಂಧನ

ಶ್ರೀನಿವಾಸಪುರ: ಯಲ್ದೂರು ಸುತ್ತಮುತ್ತಲಿನ ಗ್ರಾಮಗಳ ಸಮೀಪ ಬೆಳೆಯಲಾಗಿದ್ದ ಶ್ರೀಗಂಧದ ಮರಗಳನ್ನು ಕಳವು ಮಾಡಿದ್ದರೆಂದು ಹೇಳಲಾದ ನಾಲ್ಕು ಮಂದಿ ಆಪಾದಿತರನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.
ಚಾಂಪಲ್ಲಿ ನಾರಾಯಣಸ್ವಾಮಿ, ಕಿರುಮಣಿ ವೆಂಕಟರಾಮಪ್ಪ, ಕಿರುಮಣಿ ನಾಗರಾಜ, ಕಟ್ಟಿಗೇನಹಳ್ಳಿ ಅಬ್ದುಲ್ ಮೆಹಬೂಬ್ ಪಾಷ ಬಂಧಿತರು.
ಪಟ್ಟಣದ ಹೊರವಲಯದ ಶಿವಪುರ ಕ್ರಾಸ್‍ನಲ್ಲಿ ಮೊದಲ ಮೂವರು ಆರೋಪಿಗಳು ಸುಮಾರು ರೂ.2,26,400 ಮೌಲ್ಯದ 11 ಕೆಜಿ 320 ಗ್ರಾಂ ತೂಕದ 23 ಶ್ರೀಗಂಧದ ತುಂಡುಗಳನ್ನು ಅಬ್ದುಲ್ ಮೆಹಬೂಬ್ ಪಾಷಗೆ ಮಾರುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಆಪಾದಿತರನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್, ಹೆಚ್ಚುವರಿ ರಕ್ಷಣಾಧಿಕಾರಿ ಸಚಿನ್ ಘೋರ್ಪಡೆ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್‍ಪಿ ಜಯಶಂಕರ್ ನೇತೃತ್ವದಲ್ಲಿ ಪೊಲೀಸ್ ಇನ್ಸ್‍ಪೆಕ್ಟರ್ ಜಿ.ಸಿ.ನಾರಾಯಣಸ್ವಾಮಿ, ಸಹಾಯಕ ಪೊಲೀಸ್ ಇನ್ಸ್‍ಪೆಕ್ಟರ್ ಹಮೀದ್ ಖಾನ್, ಶಫಿವುಲ್ಲಾ, ಸಿಬ್ಬಂದಿ ಮಂಜುನಾಥ್, ಸುರೇಶ್, ವೆಂಕಟಾಚಲಪತಿ, ಎಂ.ರಾಮಚಂದ್ರ, ನಾಗರಾಜ್, ವಿ.ರಾಮಪ್ಪ, ಶ್ರೀನಾಥ್, ಸುಬಾನ್, ರವಿ, ರಿಜ್ವಾನ್, ಚಂದ್ರಶೇಖರ್ ಆರೋಪಿಗಳನ್ನು ಬಂಧಿಸಿದರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕನಕದಾಸರು ನಾಡು ಕಂಡ ಶ್ರೇಷ್ಠ ದಾರ್ಶನಿಕರು,ಓಬವ್ವನ ಶೌರ್ಯ ಮೆಚ್ಚುವಂಥದ್ದು:ತಹಶೀಲ್ದಾರ್ ಶಿರಿನ್ ತಾಜ್

ಶ್ರೀನಿವಾಸಪುರ: ಕನಕದಾಸರು ನಾಡು ಕಂಡ ಶ್ರೇಷ್ಠ ದಾರ್ಶನಿಕರು. ಓಬವ್ವನ ಶೌರ್ಯ ಮೆಚ್ಚುವಂಥದ್ದು ಎಂದು ತಹಶೀಲ್ದಾರ್ ಶಿರಿನ್ ತಾಜ್ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಕುರುಬರ ಸಂಘದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಕನಕದಾಸ ಹಾಗೂ ಒನಕೆ ಓಬವ್ವ ಅವರ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕನಕದಾಸರು ತಮ್ಮ ಕೀರ್ತನೆಗಳು ಹಾಗೂ ಕೃತಿಗಳ ಮೂಲಕ ಸಮಾಜ ಸುಧಾರಣೆಗೆ ಪ್ರಯತ್ನಿಸಿದರು. ಸಂತ ಕವಿ ಕನಕದಾಸರ ಜೀವನ ಮಾನವ ಕುಲಕ್ಕೆ ದಾರಿದೀಪವಾಗಿದೆ. ಅವರ ಸಾಹಿತ್ಯ ಕೃತಿಗಳ ಓದು ಸಾಮಾಜಿಕ ಬದಲಾವಣೆಗೆ ದಾರಿಮಾಡಿಕೊಡುತ್ತದೆ. ಸಮಾಜದಲ್ಲಿ ಮೇಲು ಕೀಳು ಭಾವನೆ ಅಳಿಯಬೇಕು ಎಂಬ ಕನಕದಾಸರ ಆಶಯ ಸ್ವಾಗತಾರ್ಹ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ, ವ್ಯವಸ್ಥಾಪಕ ಡಿ.ಆರ್.ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ, ಗ್ರೇಡ್ 2 ತಹಶೀಲ್ದಾರ್ ಕೆ.ಎಂ.ಜಯರಾಂ, ಶಿರಸ್ತೇದಾರ್ ಬಲರಾಮಚಂದ್ರೇಗೌಡ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ಎಂ.ಜಯರಾಂ, ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಸಿ.ಎಂ.ವೆಂಕಟರವಣ, ಎಪಿಎಂಸಿ ಕಾರ್ಯದರ್ಶಿ ಉಮಾ, ಅಧಿಕಾರಿಗಳಾದ ಜನಾರ್ಧನ್, ವಿನೋದ್, ಮೂರ್ತಿ, ತಾಲ್ಲೂಕು ಕುರುಬರ ಸಂಘದ ಕಾರ್ಯದರ್ಶಿ ಎಂವೇಮಣ್ಣ, ಮುಖಂಡರಾದ ಶಿವರಾಮೇಗೌಡ, ಎಂ.ಮೂರ್ತಿ, ಕೆ.ವಿ.ಮಂಜುನಾಥ್, ಜಯರಾಮಪ್ಪ, ಗೋವಿಂದಗೌಡ, ಎಸ್.ಎಂ.ನಾರಾಯಣಸ್ವಾಮಿ, ಸುಜಾತಮ್ಮ, ಮೂರ್ತಿ ಇದ್ದರು.
ಮೆರವಣಿಗೆ: ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಕನಕದಾಸರು ಹಾಗೂ ಒನಕೆ ಓಬವ್ವ ಅವರ ಭಾವ ಚಿತ್ರಗಳ ಮೆರವಣಿಗೆ ಏರ್ಪಡಿಸಲಾಗಿತ್ತು. ತಾಲ್ಲೂಕಿನ ಬೇರೆ ಬೇರೆ ಕಡೆಗಳಿಂದ ಭಾವ ಚಿತ್ರಗಳೊಂದಿಗೆ ಬಂದಿದ್ದ 50ಕ್ಕೂ ಹೆಚ್ಚು ಬೆಳ್ಳಿ ರಥಗಳು, ಪಲ್ಲಕಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.

ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ವಿಶ್ವ ಮಧುಮೇಹ ದಿನದ ಅಂಗವಾಗಿ ಮ್ಯಾರಥಾನ್ ಓಟ

ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಗೂ ಕಾಲೇಜಿನ ರಾಘ್ಟ್ರೀಯ ಸೇವಾ ಯೋಜನೆಯ ಸಹಭಾಗಿತ್ವದಲ್ಲಿ ವಿಶ್ವ ಮಧುಮೇಹ ದಿನದ ಅಂಗವಾಗಿ ದಿನಾಂಕ 13.11.2022 ರಂದು ಮ್ಯಾರಥಾನ್ – ‘ಮುಲ್ಲರ್‍ರನ್’ ಆಯೋಜಿಸಿದೆ.

    ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಘಟಕವಾಗಿರುವ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯು 1985 ರಿಂದ ರೋಗಿಗಳಿಗೆ ಉತ್ತಮ ಹೋಮಿಯೋಪಥಿ ಚಿಕಿತ್ಸೆಯನ್ನು ನೀಡುತ್ತಾ ಬಂದಿದೆ. ಆಸ್ಪತ್ರೆಯು ವಿವಿಧ ವಿಶೇಷತೆಗಳಲ್ಲಿ ಹೊರೊರೋಗಿ ವಿಭಾಗಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು, 24×7 ಒಳರೋಗಿ ವಿಭಾಗ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಸಮಾಲೋಚನೆ, ಫಿಸಿಯೋಥೆರಪಿ, ಎಕ್ಸ್-ರೇ ಮತ್ತು ಪ್ರಯೋಗಾಲಯ ಸೌಲಭ್ಯದೊಂದಿಗೆ ಆರೋಗ್ಯ ಸೇವೆಯನ್ನು ಒದಗಿಸುತ್ತಾ ಇದೆ.

    ಫಾದರ್ ಮುಲ್ಲರ್ ಹೋಮಿಯೋಪಥಿ ಆಸ್ಪತ್ರೆಯು ವಿವಿಧ ಆರೋಗ್ಯ ಶಿಬಿರ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು ಇದಕ್ಕೆ ಪೂರಕವಾಗುವಂತೆ ವಿಶ್ವ ಮಧುಮೇಹ ದಿನದ ಅಂಗವಾಗಿ ‘ಮುಲ್ಲರ್-ರನ್ನ್’ ಮ್ಯಾರಥಾನ್ ಓಟವನ್ನು ಆಯೋಜಿಸಿದೆ.  ಇದರಲ್ಲಿ 5 ಕಿ.ಮೀ ಹಾಗೂ 15 ಕಿ.ಮೀಗಳ ಎರಡು ವಿಭಾಗವಿದ್ದು, 5 ಕಿ.ಮೀಟರ್ ಓಟವು ಫಾದರ್ ಮುಲ್ಲರ್ ಹೋಮಿಯೋಪಥಿ ಕ್ಯಾಂಪಸ್‍ನಿಂದ ಬೆಳಿಗ್ಗೆ 7.15 ಗಂಟೆಗೆ ಪ್ರಾರಂಭಗೊಂಡು ಕುತ್ತಾರ್ ಮಾರ್ಗವಾಗಿ ಹಿಂತಿರುಗಿ ಫಾದರ್ ಮುಲ್ಲರ್ ಹೋಮಿಯೋಪಥಿ ಕ್ಯಾಂಪಸ್‍ನಲ್ಲಿ ಮುಕ್ತಾಯಗೊಳ್ಳುವುದು. 15 ಕಿ.ಮೀ ಓಟವು ಬೆಳಿಗ್ಗೆ 6.30 ಗಂಟೆಗೆ ಫಾದರ್ ಮುಲ್ಲರ್ ಹೋಮಿಯೋಪಥಿ ದೇರಳಕಟ್ಟೆ ಕ್ಯಾಂಪಸ್‍ನಿಂದ ಪ್ರಾರಂಭಗೊಂಡು ಕುತ್ತಾರ್, ತೊಕ್ಕೊಟ್ಟು, ಬೀರಿ, ಮಡ್ಯಾರ್ ಮಾರ್ಗವಾಗಿ ಕ್ಯಾಂಪಸ್‍ನಲ್ಲಿ ಮುಕ್ತಾಯಗೊಳ್ಳುವುದು.

    ಮಂಗಳೂರಿನ ಸಂಚಾರಿ ಸಹಾಯಕ ಪೊಲೀಸ್ ಆಯುಕ್ತರಾದ ಗೀತಾ ಕುಲಕರ್ಣಿಯವರು ಈ ಮ್ಯಾರಥಾನ್‍ಅನ್ನು ಉದ್ಘಾಟಿಸಲಿರುವರು.  ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ರಿಚರ್ಡ್ ಅಲೋಶಿಯಸ್ ಕುವೆಲ್ಲೊರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು.

    ಈ ಮ್ಯಾರಥಾನ್ ರನ್ನ್‍ಗೆ 800 ಕ್ಕೂ ಹೆಚ್ಚು ಮ್ಯಾರಥಾನ್ ಓಟಗಾರರು ನೋಂದಾಯಿಸಿಕೊಂಡಿರುವರು. ಈ ಎರಡು ವಿಭಾಗಗಳ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನದ  ವಿಜೇತರಿಗೆ ನಗದು ಬಹುಮಾನ, ಆರೋಗ್ಯ ತಪಾಸಣೆ ವೌಚರ್ ಹಾಗೂ ಗಿಫ್ಟ್ ಹ್ಯಾಂಪರ್‍ಗಳನ್ನೊಳಗೊಂಡ ಒಟ್ಟು ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ಬಹುಮಾನಗಳನ್ನು ನೀಡಲಾಗುವುದು.  ಹಾಗೂ ಎಲ್ಲಾ ಮ್ಯಾರಥಾನ್ ಫಿನಿಶರ್‍ಗಳಿಗೆ ಅವರ ಭಾಗವಹಿಸುವಿಕೆಗಾಗಿ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು.

    ಮ್ಯಾರಥಾನ್ ಓಟದ ಜೊತೆಗೆ ವಿಶ್ವ ಮಧುಮೇಹ ದಿನದ ಅಂಗವಾಗಿ ಫಾದರ್ ಮುಲ್ಲರ್ ಹೋಮಿಯೋಫಥಿ ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ಮಧುಮೇಹ ಮತ್ತು ಆಹಾರ ಪದ್ಧತಿಯ ಬಗ್ಗೆ ನವಂಬರ್  14ರಿಂದ 19 ರ ವರೆಗೆ ಬೆಳಿಗ್ಗೆ 9.00ರಿಂದ  ಸಾಯಂಕಾಲ 4ರವರೆಗೆ ಒಂದು ವಾರದ ಆರೋಗ್ಯ ಶಿಬಿರ ಮತ್ತು ಮಾಹಿತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಹಾಗೂ ಈ ಶಿಬಿರದಲ್ಲಿ ಉಚಿತ ಶುಗರ್ ಪರೀಕ್ಷೆ ಹಾಗೂ ಮಧುಮೇಹಕ್ಕೆ ಸಂಬಂಧಿಸಿದ ಪರೀಕ್ಷೆಗಳನ್ನು 50% ರಿಯಾಯಿತಿ ದರದಲ್ಲಿ ಮಾಡಲಾಗುವುದು.

ವಂದನೀಯ ರಿಚರ್ಡ್ ಅಲೋಶಿಯಸ್ ಕುವೆಲ್ಲೊ, ನಿರ್ದೇಶಕರು ಫಾದರ್ ಮುಲ್ಲರ್ ಸೇವಾ ಸಂಸ್ಥೆ.,ವಂದನೀಯ ರೋಶನ್ ಕ್ರಾಸ್ತ, ಆಡಳಿತಾಧಿಕಾರಿ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ. ಡಾ.  ಇ.ಎಸ್.ಜೆ. ಪ್ರಭು ಕಿರಣ್, ಪ್ರಾಂಶುಪಾಲರು ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ, ಡಾ. ವಿಲ್ಮಾ ಮೀರಾ ಡಿ’ಸೋಜ, ಉಪಪ್ರಾಂಶುಪಾಲರು, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ, ಡಾ. ಗಿರೀಶ್ ನಾವಡ ಯು. ಕೆ., ವೈದ್ಯಕೀಯ ಅಧೀಕ್ಷಕರು, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ. ಡಾ. ಸೂರಜ್ ಕೆ.ವಿ., ಕಾರ್ಯಕ್ರಮ ಸಂಯೋಜಕರು, ಡಾ. ದೀರಜ್ ಫೆರ್ನಾಂಡಿಸಿ, ಫಾದರ್ ಮುಲ್ಲರ್ ಹೋಮಿಯೋಪಥಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕರು. ಡಾ. ಅನುಷ  ಜಿ. ಎಸ್.,  ಸಂಯೋಜಕರು, ಮಾಧ್ಯಮ ಸಮಿತಿ. ಇವರುಗಳು ಪತ್ರಿಕಾ ಗೋಷ್ಟಿಯಲ್ಲಿ ಹಾಜರಿದ್ದರು.

ನವೆಂಬರ್ 13ರಂದು ಫ್ಲೊಯ್ಡ್ ಡಿ’ಮೆಲ್ಲೊ ಕಾಸ್ಸಿಯಾ ಇವರ ಕೊಂಕಣಿಯ ಸಂಗೀತ ರಸಸಂಜೆ ‘ಕಾಳ್ಜಾ ಉಮಾಳೆ’



ಮಂಗಳೂರು: ಫ್ಲೊಯ್ಡ್ ಡಿ’ಮೆಲ್ಲೊ ಕಾಸ್ಸಿಯಾ ಇವರು ಅರ್ಪಿಸುವ ಕೊಂಕಣಿಯ ಸಂಗೀತ ರಸಸಂಜೆ ಕಾರ್ಯಕ್ರಮ ಕಾಳ್ಜಾ ಉಮಾಳೆ  ಇದೇ  ನವೆಂಬರ್ 13ರಂದು, ಸಂಜೆ 5 ಗಂಟೆಗೆ, ಮಂಗಳೂರಿನ ಡಾನ್ ಬೋಸ್ಕೊ ಸಭಾಂಗಣದಲ್ಲಿ ನಡೆಯಲಿದೆ.
      ಇದು ಕೊಂಕಣಿ ಭಾಷೆಯ ಸಂಗೀತ ಕಾರ್ಯಕ್ರಮದಲ್ಲಿ ಹೊಸ ಪ್ರಯೋಗವಾಗಿದ್ದು, ಮಂಗಳೂರಿನ ಹಲವಾರು ಜನಪ್ರಿಯ ಹಾಗೂ ಪ್ರತಿಭಾನ್ವಿತ ಗಾಯಕರು, ಕಲಾವಿದರು, ಸಂಗೀತಗಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ತಾವೆಲ್ಲರೂ ಬಂದು ಕಾರ್ಯಕ್ರಮವನ್ನು ಚಂದಗಾಣಿಸಿ ಕೊಡಬೇಕಾಗಿ ಆಯೋಜಕರ ವಿನಂತಿಸಿದ್ದಾರೆ.
        ಫ್ಲೊಯ್ಡ್ ಇವರು, ಈ ಹಿಂದೆಯೂ ಹಲವಾರು ಕೊಂಕಣಿ ಕಾರ್ಯಕ್ರಮಗಳನ್ನು, ಆಯೋಜಿಸಿ ಅನುಭವ ಉಳ್ಳವರು. ಒಬ್ಬ ನಟನಾಗಿ, ಕಾರ್ಯಕ್ರಮ ನಿರೂಪಕನಾಗಿ, ಸಂಘಟಕನಾಗಿ, ಅನುಭವವನ್ನು ಹೊಂದಿದ್ದು, ಪ್ರಸ್ತುತ ಡಾನ್ ಬೋಸ್ಕೊ ನಾಟಕ ಸಭೆಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಕೊಂಕಣಿಯ ಖ್ಯಾತ ಗಾಯಕಿ ಜೋಶಲ್ ಡಿಸೋಜಾ, ಎಂಟಿಜಿ ಖ್ಯಾತಿಯ ವೆಲಿಟಾ ಲೋಬೊ, ಎಸ್‌ಒಎಡಿ ಖ್ಯಾತಿಯ ಸೋನಾಲ್ ಮೊಂತೇರೊ, ಸುನಿಲ್ ಮೊಂತೇರೊ, ಜೇಸನ್ ಲೋಬೊ, ರೋಲ್ಸ್‌ಟನ್ ಪಿಂಟೊ ಮತ್ತು ದಿತೇಶ್ ಡಿಸೋಜಾ ಪ್ರೇಕ್ಷಕರನ್ನು ಆಕರ್ಷಿಸಲಿದ್ದಾರೆ.

ಖ್ಯಾತ ಸಂಗೀತಗಾರರಾದ ರಾಜೇಶ್ ಮೊಯ್ಲಿ, ರಾಜೇಂದ್ರ ಬಬ್ಲಿ, ರಾಲ್ಫ್ ರೋಷನ್, ವಿಜಯ್ ನೊರೊನ್ಹಾ ಮತ್ತು ಪ್ರಜ್ವಲ್ ಫ್ರಾಂಟೆರಿಯೊ ಸಂಗೀತವನ್ನು ನಿಭಾಯಿಸಲಿದ್ದಾರೆ. ‘ಶೋ ಸ್ಟಾಪರ್ಸ್’ ತಂಡವು ತಮ್ಮ ಪಾದರಸದ ಹೆಜ್ಜೆಗಳಿಂದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಕ್ಲೀಟಸ್ ಮತ್ತು ತಂಡದವರು ತಮ್ಮ ಹಾಸ್ಯ ಪ್ರದರ್ಶನದ ಮೂಲಕ ನಗೆ-ಗಲಭೆ ಸೃಷ್ಟಿಸಲಿದ್ದಾರೆ. ಮನು ಬಂಟ್ವಾಳ್ ಉದ್ಘಾಟನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರೆ, ಫ್ಲಾಯ್ಡ್ ಸ್ವತಃ ಸಂಗೀತವನ್ನು ಸಂಯೋಜಿಸಲಿದ್ದಾರೆ. ಡೆಲಿಯಾ ಐವಿನ್ ಕ್ರಾಸ್ತಾ ಮತ್ತು ಪ್ರೀತಮ್ ನೊರೊನ್ಹಾ ಕಾರ್ಯಕ್ರಮದ ಸಂಯೋಜಕರಾಗಿದ್ದು, ಪ್ರವೇಶ ಉಚಿತ ಮತ್ತು ಎಲ್ಲರಿಗೂ ಮುಕ್ತವಾಗಿದೆಯೆಂದು ತಿಳಿಸಿದ್ದಾರೆ

ಕುಂದಾಪುರ:ಎಚ್.ಶಾಂತಾರಾಮ ಪೈ ನಿಧನ

ಕುಂದಾಪುರದ ಪ್ರಸಿದ್ದ ಮೆ. ಜಿ.ಎಸ್.ನಾಯಕ್ ಎಂಡ್ ಕೊ.ಸಂಸ್ಥೆಯ ಪಾಲುದಾರ ,ಸಮಾಜ ಸೇವಕ ,ಎಚ್.ಶಾಂತಾರಾಮ ಪೈ(62) ದಿ.10ರಂದು ರಾತ್ರಿ ನಿಧನರಾದರು.
ಧಾರ್ಮಿಕ,ಸೇವಾ ಕ್ಷೇತ್ರಗಳಲ್ಲಿ ಕ್ರಿಯಾಶೀಲರಾಗಿದ್ದ ಇವರು ಉತ್ತಮ ಸಂಘಟಕರಾಗಿದ್ದರು.
ಇವರು ಸಹೋದರ, ಸಹೋದರಿ ಅಪಾರ ಬಂಧುಗಳನ್ನು ಅಗಲಿದ್ದಾರೆ

ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ಆದಿತ್ಯ ವಾಲಿಬಾಲ್ ನಲ್ಲಿ ಮೈಸೂರು ವಿಭಾಗ ಮಟ್ಟದ ಪಂದ್ಯಾಟಕ್ಕೆ ಆಯ್ಕೆ

ಕುಂದಾಪುರ: ಉಡುಪಿ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೆಶಕರ ಕಛೇರಿ, ಉಡುಪಿ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಬೈಂದೂರು ಇವರ ಸಹ ಪ್ರಾಯೋಜಕತ್ವದಲ್ಲಿ ಬೈಂದೂರಿನಲ್ಲಿ ನಡೆದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಆದಿತ್ಯ ಇವರು 14ರ ವಯೋಮಾನದ ಒಳಗಿನ ಪ್ರಾಥಮಿಕ ವಿಭಾಗದಲ್ಲಿ ಪ್ರಥಮ ಸ್ಥಾನಗಳಿಸಿ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.


ಇತ ತಲ್ಲೂರಿನ ವಿಷ್ಣು ದೇವಾಡಿಗ ಹಾಗೂ ನಿರ್ಮಲ ದಂಪತಿಯ ಪುತ್ರನಾಗಿದ್ದಾನೆ. ಇತನ ಈ ಸಾಧನೆಗೆ ಶಾಲಾ ಸಂಚಾಲಕರಾದ ಅತೀ ವಂದನೀಯ ಗುರು ಸ್ಟ್ಯಾನಿ ತಾವ್ರೊ, ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೇಜ್ ಶಾಂತಿ ಎ.ಸಿ, ಅಧ್ಯಾಪಕ ವೃಂದ ಹಾಗೂ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದ್ದಾರೆ.