ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಅಂತರ್ ಕಾಲೇಜು ಸಂಗೀತ ಸ್ಪರ್ಧೆಗಳು ಜರಗಿದವು

ಕುಂದಾಪುರ: ಡಿಸೆಂಬರ್ 2ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಅಂತರ್ ಕಾಲೇಜು ಸಂಗೀತ ಸ್ಪರ್ಧೆಗಳು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸ್ತ್ರೀಯ ಸಂಗೀತ ಕಲಾವಿದ ವಿದ್ವಾನ್ ರವಿಕಿರಣ್ ಮಣಿಪಾಲ ಅವರು ಜೀವನದ ಸಂತೋಷಕ್ಕೆ ಕಲೆ ಸಾಹಿತ್ಯ ಸಂಗೀತ ಬೇಕು. ಕಲೆಯ ಆರಾಧನೆಯಲ್ಲಿ ಸೌಂದರ್ಯದ ಅನುಭವ ಆಗುತ್ತದೆ. ಕಲೆಯಲ್ಲಿ ಬದುಕಿನ ಎಲ್ಲಾ ಸಂಘರ್ಷ ಮತ್ತು ಸಮಾಧಾನವನ್ನು ತಂದುಕೊಳ್ಳಬಹುದು ಮತ್ತು ಕಾಣಬಹುದಾಗಿದೆ. ಕಲೆ ಅಂದರೆ ಸಂಗೀತ ಸಾಹಿತ್ಯ, ನಾಟಕ, ಚಿತ್ರಕಲೆ, ಕರಕುಶಲ ಕಲೆಗಳು ಹೀಗೆ ಹಲವು ಇವೆ. ಮಾನವೀಯತೆಯನ್ನು ಕಲೆಯ ಮೂಲಕ ಪ್ರಸ್ತುತಪಡಿಸಬಹುದು. ಬದುಕಿನ ನೋವು ನಲಿವುಗಳನ್ನು, ಹತಾಶೆ ಆತಂಕದ ಸಂಗತಿಗಳನ್ನು ಕಲೆಯ ಮೂಲಕ ಪ್ರಸ್ತುತಪಡಿಸಬಹುದು. ಇದರಿಂದ ಮೌಲ್ಯ, ಸಂದೇಶ, ಸಮಾನತೆ ಸಾಮಾಜಿಕ ತುಮುಲಗಳನ್ನು ತೋರಿಸಲು ಸಾಧ್ಯವಾಗುತ್ತದೆ. ಕಲೆಯಲ್ಲಿ ಕ್ರಾಂತಿ ಮಾಡಬಹುದು. 12ನೇ ಶತಮಾನದ ವಚನಸಾಹಿತ್ಯ ಅದಕ್ಕೆ ಉತ್ತಮ ಉದಾಹರಣೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥರಾದ ಶಾಂತಾರಾಮ್ ಅವರು ಆಗಮಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಶುಭಕರಾಚಾರಿ, ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಜಿ.ಎಂ.ಗೊಂಡ, ಕಾರ್ಯಕ್ರಮ ಸಂಯೋಜಕ ಶಶಾಂಕ್ ಪಟೇಲ್ ಉಪಸ್ಥಿತರಿದ್ದರು.
ಸುಮಾರು 7 ಸಂಗೀತ ವಿಭಾಗದಲ್ಲಿ ಸಂಗೀತ ಸ್ಪರ್ಧೆಗಳು ನಡೆದವು.
ಸಂಗೀತ ಸ್ಪರ್ಧೆಗಳ ಫಲಿತಾಂಶ: 1.ಶಾಸ್ತ್ರೀಯ ಹಾಡುಗಾರಿಕೆ: ಪ್ರಥಮ- ಮಂಗಳೂರಿನ ಸೇಂಟ್ ಅಲೋಶಿಯಸ್ ಪದವಿ ಪೂರ್ವ ಕಾಲೇಜು,
ದ್ವಿತೀಯ- ಉಡುಪಿಯ ಮಹಾತ್ಮ ಗಾಂಧಿ ಕಾಲೇಜು
ತೃತೀಯ- ಗಂಗೊಳ್ಳಿಯ ಎಸ್.ವಿ ಪದವಿ ಪೂರ್ವ ಕಾಲೇಜು
2.ಶಾಸ್ತ್ರೀಯ ವಾದ್ಯ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ: ಕಾರ್ಕಳದ ಶ್ರೀ ಭುವನೇಂದ್ರ ಪದವಿ ಪೂರ್ವ ಕಾಲೇಜು
ದ್ವಿತೀಯ : ಕುಂದಾಪುರದ ಬಿ.ಬಿ.ಹೆಗ್ಡೆ ಕಾಲೇಜು, ತೃತೀಯ: ಉಡುಪಿಯ ಮಹಾತ್ಮ ಗಾಂಧಿ ಕಾಲೇಜು
ದಾಸ ಕೀರ್ತನೆ ಸ್ಪರ್ಧೆಯಲ್ಲಿ ಪ್ರಥಮ: ವಾಮಂಜೂರಿನ ಸೇಂಟ್ ಜೋಸೆಫ್ ಎಂಜಿನೀಯರಿಂಗ್ ಕಾಲೇಜು
ದ್ವಿತೀಯ: ಮಂಗಳೂರಿನ ಸೇಂಟ್ ಅಲೋಶಿಯಸ್ ಪದವಿ ಪೂರ್ವ ಕಾಲೇಜು,
ತೃತೀಯ: ಗಂಗೊಳ್ಳಿಯ ಎಸ್.ವಿ ಪದವಿ ಪೂರ್ವ ಕಾಲೇಜು
ಸಮೂಹ ಗಾಯನ ಸ್ಪರ್ಧೆಯಲ್ಲಿ ಪ್ರಥಮ: ಕಾರ್ಕಳದ ಶ್ರೀ ಭುವನೇಂದ್ರ ಪದವಿ ಪೂರ್ವ ಕಾಲೇಜು
ದ್ವಿತೀಯ: ಕುಂದಾಪುರದ ಭಂಡಾರ್ಕಾರ್ಸ್ ಪದವಿ ಕಾಲೇಜು, ತೃತೀಯ: ಉಡುಪಿಯ ಪೂರ್ಣಪ್ರಜ್ಞ ಪದವಿ ಕಾಲೇಜು.
ಕನ್ನಡ ಭಾವಗೀತೆ ಸ್ಪರ್ಧೆಯಲ್ಲಿ ಪ್ರಥಮ: ಉಡುಪಿಯ ಮಹಾತ್ಮ ಗಾಂಧಿ ಕಾಲೇಜು, ದ್ವಿತೀಯ: ಕುಂದಾಪುರದ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು, ತೃತೀಯ: ಕಾರ್ಕಳದ ಶ್ರೀ ಭುವನೇಂದ್ರ ಪದವಿ ಕಾಲೇಜು.
ಕನ್ನಡ ಜಾನಪದ ಗೀತೆ ಸ್ಪರ್ಧೆಯಲ್ಲಿ ಪ್ರಥಮ: ಉಡುಪಿಯ ಪೂರ್ಣಪ್ರಜ್ಞ ಪದವಿ ಕಾಲೇಜು. ದ್ವಿತೀಯ: ಉಡುಪಿಯ ಮಹಾತ್ಮ ಗಾಂಧಿ ಕಾಲೇಜು, ತೃತೀಯ:ಕುಂದಾಪುರದ ಭಂಡಾರ್ಕಾರ್ಸ್ ಪದವಿ ಕಾಲೇಜು,
ಚಿತ್ರಗೀತೆ ಸ್ಪರ್ಧೆಯಲ್ಲಿ ಪ್ರಥಮ :ಕುಂದಾಪುರದ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು,
ದ್ವಿತೀಯ: ಕುಂದಾಪುರದ ಬಿ.ಬಿ.ಹೆಗ್ಡೆ ಪದವಿ ಕಾಲೇಜು, ತೃತೀಯ: ಉಡುಪಿಯ ಮಹಾತ್ಮ ಗಾಂಧಿ ಕಾಲೇಜು,
ಸಮಗ್ರ ಪ್ರಶಸ್ತಿಯನ್ನು ಉಡುಪಿಯ ಮಹಾತ್ಮ ಗಾಂಧಿ ಕಾಲೇಜು ಪಡೆಯಿತು.
ಸಂಗೀತ ಸ್ಪರ್ಧೆಗಳ ತೀರ್ಪುಗಾರರಾಗಿ ಗಣೇಶ್ ಗಂಗೊಳ್ಳಿ, ಅಶ್ವಿನಿ, ಶೃತಿ ಕಾಶಿ, ಶಾರದಾ ಹೊಳ್ಳ, ಪಾಳಿಗಾರು ಲಕ್ಷ್ಮಿನಾರಾಯಣ ಉಪಾಧ್ಯಾಯ ಮತ್ತು ಶೃದ್ಧಾ ಆಗಮಿಸಿದ್ದರು.
ಡಿಸೆಂಬರ್ 5ರಂದು ನಡೆಯಲಿರುವ “ಸಂಸ್ಥಾಪಕರ ದಿನಾಚರಣೆ” ಯಂದು ಬಹುಮಾನವನ್ನು ನೀಡಲಾಗುವುದು.

ಗ್ರಾಮೀಣ ಭಾಗದಲ್ಲಿನ ಕಲಾವಿದರು ಪುರಾತನ ಕಲೆಗಳಿಗೆ ಜೀವ ತುಂಬಿ ಬೆಳಸುತ್ತಿದ್ದಾರೆ:ಹಿರಿಯ ಕಲಾವಿದ ಪಿ.ಮುನಿರೆಡ್ಡಿ

ಶ್ರೀನಿವಾಸಪುರ 1 : ಗ್ರಾಮೀಣ ಭಾಗದಲ್ಲಿನ ಕಲಾವಿದರು ಪುರಾತನ ಕಲೆಗಳಿಗೆ ಜೀವ ತುಂಬಿ ಬೆಳಸುತ್ತಿದ್ದಾರೆ ಎಂದು ಹಿರಿಯ ಕಲಾವಿದ ಪಿ.ಮುನಿರೆಡ್ಡಿ ಹೇಳಿದರು.
ತಾಲೂಕಿನ ಆರಮಾಕನ ಶೆಟ್ಟಿಹಳ್ಳಿ ಗ್ರಾಮದ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಗುರುವಾರ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕೋಲಾರ. ಸಂಯುಕ್ತಾಶ್ರಯದಲ್ಲಿ ಗಿರಿಜನ ಯೋಜನೆಯಡಿ ಗ್ರಾಮದ ಶ್ರೀ ವಾಲ್ಮೀಕಿ ಸಂಘದ ವತಿಯಿಂದ ಜಾನಪದ ಗೀತೆ, ತತ್ವಪದಗಳ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ವಾಟ್ಸ್‍ಪ್, ಫೇಸ್‍ಬುಕ್ ಹಾಗು ಟಿವಿ ಸೀರಿಯಲ್ ಗಳ ಮಧ್ಯೆ ಜಾನಪದ, ತತ್ವಪದಗಳ ಪುರಾತನ ಕಲೆಗಳನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ಕಲಾವಿದರಿಗೆ ಕನ್ನಡ ಸಂಸ್ಕøತಿ ಇಲಾಖೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಕೆಲಸ ಎಂದು ಬಣ್ಣಸಿದರು.
ಕಲಾವಿದರಾದ ಯಲವಂಕಟೆ ಎನ್.ವೆಂಕಟಸ್ವಾಮಿ, ಗೋಪಾಲರೆಡ್ಡಿ, ಅಶ್ವತರೆಡ್ಡಿ, ಅಕ್ಕುಲಪ್ಪ, ಮುನಿರಡ್ಡಿ, ಗ್ರಾ.ಪಂ.ಸದಸ್ಯರಾದ ವೆಂಕಟಸ್ವಾಮಿ, ಎಸ್.ವಿ.ನರಸಿಂಹಪ್ಪ ಇತರರು ಇದ್ದರು.

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ವತಿಯಿಂದ ನಿಮೂನೀಯಾ ರೋಗದ ಲಕ್ಷಣಗಳ ಮುನ್ನೆಚ್ಚರಿಕೆ ಶಿಬಿರ

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ವತಿಯಿಂದ ಇತ್ತೀಚಿಗೆ ಪಟ್ಟಣದ ಕಸ್ತೂರಿಬಾ ಜ್ಞಾನವಿಕಾಶ ಕೇಂದ್ರದಲ್ಲಿ ಕೇಂದ್ರದ ಸದಸ್ಯರಿಗೆ ನಿಮೂನೀಯಾ ರೋಗದ ಲಕ್ಷಣಗಳ ಬಗ್ಗೆ ಹಾಗೂ ರೋಗ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜ್ಞಾನ ವಿಕಾಶ ಕೇಂದ್ರದ ಸಮನ್ವಯಾಧಿಕಾರಿ ಈರಮ್ಮ ನಾಗನಾಳ ವಿವರಿಸಿದರು. ಸೇವಾಪ್ರತಿನಿದಿ ಉಮಾ ಹಾಗೂ ಸದಸ್ಯರು ಇದ್ದರು

ಕುಂದಾಪುರ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವ ನಡೆಯಿತು

ಕುಂದಾಪುರ, ಡಿ. 3: ಸ್ಥಳೀಯ ಸಂತ ಜೋಸೆಫರ ಪ್ರೌಢಶಾಲಾ ವಾರ್ಷಿಕ ಕ್ರೀಡೋತ್ಸವ ಸಂತ ಜೋಸೆಫ್ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ 02-12-2022 ರಂದು ನಡೆಯಿತು. ಕುಂದಾಪುರ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಪ್ರಕಾಶ್ಚಂದ್ರ ಶೆಟ್ಟಿ ಕ್ರೀಡಾ ಜ್ಯೋತಿ ಬೆಳಗಿಸಿ ಕ್ರೀಡೋತ್ಸವ ಉದ್ಘಾಟಿಸಿ ಮಾತನಾಡುತ್ತಾ “ಕ್ರೀಡೆ ವಿದ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ದೃಢತೆಗೆ ಸಹಕಾರಿಯಾಗುತ್ತದೆ. ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ” ಎಂದರು. ವಿದ್ಯಾರ್ಥಿಗಳು ಆಕರ್ಷಕ ಪಥ ಸಂಚಲನ ನಡೆಸಿದರು. ಕ್ರೀಡೋತ್ಸವದ ಅಧ್ಯಕ್ಷರಾದ ಸಿಸ್ಟರ್ ಸಂಗೀತಾ ರವರು ವಿದ್ಯಾರ್ಥಿಗಳಿಗೆ ಕ್ರೀಡಾ ಸ್ಪೂರ್ತಿಯ ನುಡಿಗಳನ್ನು ಆಡಿದರು. ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿ ಸಿಸ್ಟರ್ ಪ್ರೇಮಿಕಾ ಇವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯನಿ ಸಿಸ್ಟರ್ ಐ ವಿ ಸ್ವಾಗತಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿರುವ ರವಿ ಪೂಜಾರಿ ಅವರು ಉಪಸಿತರಿದ್ದರು. ಶಿಕ್ಷಕಿ ಶ್ರೀಮತಿ ಸ್ವಾತಿ ಅವರು ವಂದಿಸಿದರು. ದೈಹಿಕ ಶಿಕ್ಷಕರಾದ ಮೈಕಲ್ ಇವರು ನಿರೂಪಿಸಿದರು

ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ವಿವಿಧ ಕ್ಷೇತ್ರದ ಕ್ರೀಡೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ  ಮೂವರು ವಿದ್ಯಾರ್ಥಿನಿಯರು ವಿವಿಧ ಕ್ಷೇತ್ರ ಕ್ರೀಡೆ( ಫೀಲ್ಡ್ ಇವೆಂಟ್) ಗಳಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಪ್ರಥಮ ಪಿ.ಯು.ಸಿ ವಿಜ್ಞಾನ ವಿಭಾಗದ ಶೆರಿಲ್ ಡಿಸೋಜಾ ಇವರು ಶಾಟ್ ಪುಟ್ ತ್ರೋ ನಲ್ಲಿ, ಪ್ರಥಮ ಪಿ.ಯು.ಸಿ ವಿಜ್ಞಾನ ವಿಭಾಗದ ಶ್ರಾವ್ಯ ಜ್ಯಾವೆಲಿನ್ ತ್ರೋನಲ್ಲಿ ಹಾಗೂ ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದ ಸಂಹಿತಾ. ಕೆ. ಶೆಟ್ಟಿ ಹ್ಯಾಮರ್ ತ್ರೋ ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಈ ಮೂವರು ಕ್ರೀಡಾ ಸಾಧಕ ವಿದ್ಯಾರ್ಥಿನಿಯರನ್ನು ಕಾಲೇಜಿನ ಸಂಚಾಲಕರಾದ ಶ್ರೀ ಬಿ. ಎಮ್. ಸುಕುಮಾರ್ ಶೆಟ್ಟಿಯವರು,  ಪ್ರಾಂಶುಪಾಲರಾದ ನವೀನ್ ಕುಮಾರ ಶೆಟ್ಟಿ ಹಾಗೂ ಬೋಧಕ, ಬೋಧಕೇತರ ಸಿಬ್ಬಂಧಿಯವರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ. 

ಶೆರಿಲ್ ಡಿಸೋಜಾ
ಶ್ರಾವ್ಯ
ಸಂಹಿತಾ. ಕೆ. ಶೆಟ್ಟಿ

Sad  Demise Rithesh Monteiro 35 (Belman)

passed away on 1st December 2022 in the morning

Husband of Jenifer Preetha

Father of Rivan Monteiro.

Son of Walter Monteiro and Helen Monteiro

Brother of Nikil Rakesh/ Priya,

Son in Law of Jerald Dsouza and Philomena Dsouza.

Passed away on 1st December 2022 in the morning.

Funeral cortege leaves from Monteiro Villa on 3rd December 2022 for St. Joseph’s Church Belman at 3.15pm followed by Mass at 4.00 pm.
Contact no:- 9632004121 , 9833995799

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಿಗುವ ಎಲ್ಲಾ ಸೌಲಭ್ಯಗಳಿಂದ ಪ್ರತಿ ಕುಟುಂಬ, ಪ್ರತಿ ಗ್ರಾಮದವರು ಅಭಿವೃದ್ಧಿ ಆಗಬೇಕು ಕೆ.ಮುರಳಿಧರಶೆಟ್ಟಿ

ಶ್ರೀನಿವಾಸಪುರ 1 : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಗ್ರಾಮದ ಪ್ರತಿಯೊಂದು ಕುಟುಂಬದವರು ಹಾಗು ಗ್ರಾಮಸ್ಥರು ಬಳಸಿಕೊಂಡು ಅಭಿವೃದ್ಧಿಯಾಗಬೇಕು ಎಂದು ಕೋಲಾರ ಜಿಲ್ಲಾ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ನಿರ್ದೇಶಕ ಕೆ.ಮುರಳಿಧರಶೆಟ್ಟಿ ಹೇಳಿದರು.
ತಾಲೂಕಿನ ದೊಡಮಲದೊಡ್ಡಿ ಗ್ರಾಮದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಜೀರ್ಣೋಧ್ಧಾರಕ್ಕಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘವತಿಯಿಂದ 2.50 ಲಕ್ಷ ರೂ ಗಳ ಡಿಡಿಯನ್ನು ದೇವಸ್ಥಾನದ ಆಡಳಿತ ಮಂಡಲಿಗೆ ಬುಧವಾರ ಹಸ್ತಾಂತರಿಸಿದರು.
ತಾಲೂಕು ಯೋಜನಾಧಿಕಾರಿ ಎಸ್.ಸುರೇಶ್‍ಗೌಡ, ದೇವಸ್ಥಾನ ಕಮಿಟಿ ಅಧ್ಯಕ್ಷ ಎಂ.ಶ್ರೀನಿವಾಸಪ್ಪ, ಉಪಾಧ್ಯಕ್ಷ ಮುನಿರಾಜು, ಹಾಗೂ ಕಾರ್ಯದರ್ಶಿಗಳಾದ ಶಿವರಾಮಯ್ಯ, ನಂಬಿಹಳ್ಳಿ ವಲಯ ಮೇಲ್ವಿಚಾರಕ ಮೂರ್ತಿ ಸೇವಾಪ್ರತಿನಿಧಿ ಉಮಾ ಹಾಗೂ ಗ್ರಾಮಸ್ಥರು ಇದ್ದರು.
ಪೋಟು 1 : ತಾಲೂಕಿನ ದೊಡಮಲದೊಡ್ಡಿ ಗ್ರಾಮದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಜೀರ್ಣೋಧ್ಧಾರಕ್ಕಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘವತಿಯಿಂದ 2.50 ಲಕ್ಷ ರೂ ಗಳ ಡಿಡಿಯನ್ನು ದೇವಸ್ಥಾನದ ಆಡಳಿತ ಮಂಡಲಿಗೆ ಕೋಲಾರ ಜಿಲ್ಲಾ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ನಿರ್ದೇಶಕ ಕೆ.ಮುರಳಿಧರಶೆಟ್ಟಿ ಹಸ್ತಾಂತರಿಸಿದರು.

ಕ್ಷೇತ್ರದ ಅಭಿವೃದ್ದಿಯೇ ನನ್ನ ಮೂಲ ಮಂತ್ರ, ನನಗೆ ಮತ ಹಾಕಿದ ಜನತೆಯ ಅಭಿವೃದ್ದಿಯೇ ನನ್ನ ಗುರಿ:ಶಾಸಕ ಕೆ.ಆರ್.ರಮೇಶ್‍ಕುಮಾರ್

ಶ್ರೀನಿವಾಸಪುರ 2 : ಕ್ಷೇತ್ರದ ಅಭಿವೃದ್ದಿಯೇ ನನ್ನ ಮೂಲ ಮಂತ್ರ, ನನಗೆ ಮತ ಹಾಕಿದ ಜನತೆಯ ಅಭಿವೃದ್ದಿಯೇ ನನ್ನ ಗುರಿ ಎಂದು ಶಾಸಕ ಕೆ.ಆರ್.ರಮೇಶ್‍ಕುಮಾರ್ ಹೇಳಿದರು.
ತಾಲೂಕಿನ ನಂಬಿಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆ ಹಾಗು ಕುಂದ ಕೊರತೆ ಸಭೆಗೆ ಚಾಲನೆ ನೀಡಿ ಮಾತನಾಡಿದರು.
ನನ್ನ ಕ್ಷೇತ್ರಕ್ಕೆ ಸಂಬಂದಿಸಿದ ಗ್ರಾಮಗಳಲ್ಲಿ ಬಡಕುಟುಂಬಗಳ ಸಂಖ್ಯೆಯೇ ಹೆಚ್ಚಾಗಿದ್ದು , ಅವರ ಅಭಿವೃದ್ದಿಯೇ ನನ್ನ ಗುರಿ . ಅವರಿಗೆ ಸರ್ಕಾರದ ಯೋಜನೆಗಳಿಂದ ಸಿಗುವ ಸವಲತ್ತುಗಳನ್ನು ಪಕ್ಷಾತೀತವಾಗಿ ಮನೆಯ ಬಾಗಿಲಿಗೆ ನೀಡಿ, ಮತದಾರನ ಋಣವನ್ನು ತೀರಿಸುತ್ತಾ , ಮತದಾರನು ನೀಡಿರುವ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳುಲಾಗುವುದು ಎಂದರು.
ಗ್ರಾಮಗಳಲ್ಲಿ ಆಗಿರುವ ಪ್ರತಿ ಒಂದು ಅಭಿವೃದ್ದಿ ಕಾಮಗಾರಿಗಳ ಪರಿಶೀಲಿನೆ ಮಾಡಲಾಯಿತು. ಉಳಿದಿರುವ ಕಾಮಗಾರಿಗಳನ್ನು ಪೂರ್ಣಗಳಿಸುವಂತೆ ಗ್ರಾಮಸ್ಥರಿಗೆ ತಿಳಿಸಿದರು. ಸರ್ಕಾರದ ಅನುದಾನವನ್ನು ಗ್ರಾಮಸ್ಥರು ಸಮರ್ಪಕವಾಗಿ ಬಳಿಸಿಕೊಂಡಾಗ ಗ್ರಾಮಗಳು ಅಭಿವೃದ್ದಿಯಾಗಲು ಸಾಧ್ಯ ಎಂದರು.
ಮುಖಂಡರಾದ ದ್ವಾರಸಂದ್ರ ಮುನಿವೆಂಕಟರೆಡ್ಡಿ, ಸನಂತ್, ಸಾತಾಂಡ್ಲಹಳ್ಳಿ ಮಂಜುನಾಥರೆಡ್ಡಿ , ಟಿ.ನಾರಾಯಣಸ್ವಾಮಿ, ಮಂಜೇಶ್ ಇತರರು ಇದ್ದರು.