

ಮಂಗಳೂರು; ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಕ್ರೈಸ್ತ ಧರ್ಮದವರು ಶಾಂತಿಪ್ರಿಯರಾಗಿದ್ದು ನಮ್ಮ ಧರ್ಮವನ್ನು ಪ್ರೀತಿಸುತ್ತಿದ್ದು ನಮ್ಮ ಧರ್ಮದ ಆಚಾರ ವಿಚಾರಗಳನ್ನು ಕ್ರೈಸ್ತ ದೇವಾಲಯಗಳಲ್ಲಿ ಹಾಗೂ ನಮ್ಮ ಮನೆಗಳಲ್ಲಿ ಮಾತ್ರ ಆಚರಿಸುತ್ತಾ ಬಂದಿರುತ್ತೇವೆ. ಅನಾದಿ ಕಾಲದಿಂದಲೂ ನಾವು ಇತರ ಧರ್ಮವನ್ನು ಗೌರವಿಸುತ್ತಾ ಬಂದಿರುತ್ತೇವೆ. ಸಾಮಾಜಿಕ, ಆರೋಗ್ಯ ಹಾಗೂ ಶೈಕ್ಷಣಿಕ ಕ್ಷ್ರೇತ್ರಗಳಲ್ಲಿ ನಮ್ಮ ಧರ್ಮದವರ ಕೊಡುಗೆ ಸಮಾಜಕ್ಕೆ ಅಪಾರವಾಗಿದೆ. ನಾವು ಕೇವಲ ಕ್ರೈಸ್ತ ಸಂಘಟನೆಗಳಲ್ಲದೆ ಲಯನ್ಸ್, ರೋಟರಿ, ಜೆ.ಸಿ., ಮುಂತಾದ ಅಂತಾರಾಷ್ಟ್ರೀಯ ಸೇವಾ ಸಂಸ್ಥೆಗಳಲ್ಲೂ ವಿವಿಧ ಹುದ್ದೆಗಳನ್ನು ಅಲಂಕರಿಸಿ ರಕ್ತದಾನ ಶಿಬಿರ ಹಾಗೂ ಇತರ ಜನೋಪಯೋಗಿ ಸೇವೆಯನ್ನು ಈ ಸಮಾಜಕ್ಕೆ ನೀಡುತ್ತಾ ಬಂದಿರುತ್ತೇವೆ,
ನಾವು ಕ್ರೈಸ್ತ ಧರ್ಮದ ವಿಷಯ ಬಿಟ್ಟು ಬೇರೆ ಯಾವುದೇ ಧರ್ಮದವರ ಬಗ್ಗೆ ಇದುವರೆಗೆ ಮಾತನಾಡಿಲ್ಲ ಹಾಗೂ ಮಾತನಾಡುವುದೂ ಇಲ್ಲ. ನಮ್ಮ ಮರಣಗಳಿಗೆ, ಮದುವೆ, ನಾಮಕರಣ, ನಮ್ಮ ಮಕ್ಕಳಿಗೆ ದೇವರ ಪ್ರಸಾದ ಸಿಗುವ ಸಮಯದಲ್ಲಿ ನಮ್ಮ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದಾಗ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ನಾವು ಪ್ರೀತಿಯಿಂದ ಕರೆದಾಗ ತನ್ನ ಬಿಡುವಿಲ್ಲದ ಕಾರ್ಯಕ್ರಮದಲ್ಲಿ ನಮ್ಮ ಮೇಲೆ ಪ್ರೀತಿಯನ್ನು ಇಟ್ಟು ಹಾಗೂ ಪ್ರತಿಭಟನೆಗಳಲ್ಲಿ ತಪ್ಪದೆ ಭಾಗವಹಿಸಿದಂತಹ ಅತೀ ಪ್ರೀತಿಯಿಂದ ಕಾಣುತ್ತಿರುವ ಕ್ರೈಸ್ತ ಸಮುದಾಯದವರ ಬಗ್ಗೆ ಮಾಜಿ ಕೇಂದ್ರೀಯ ಮಂತ್ರಿಗಳು ಹಾಗೂ ಲೋಕ ಸಭಾ ಸದಸ್ಯರಾದ ಶ್ರೀಯುತ ಜನಾರ್ಥನ ಪೂಜಾರಿಯವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಘಟನೆಯ ಬಗ್ಗೆ ಯಾವುದೇ ಪರ-ವಿರೋಧ ಪ್ರತಿಕ್ರಿಯೆಯನ್ನು ನೀಡದ ಕ್ರೈಸ್ತ ಧರ್ಮದವರನ್ನು ನಿಮ್ಮ ಚರ್ಚುಗಳಲ್ಲಿ ಶವಗಳನ್ನು ಹೂತಿಡಲಿಲ್ಲವಾ? ಯಾಕೆ ಹೂತಿಟ್ಟಿದ್ದೀರಿ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ.
ಶ್ರೀ ಜನಾರ್ಧನ ಪೂಜಾರಿಯವರನ್ನು ಅತೀ ಪ್ರೀತಿಯಿಂದ ಕಾಣುತ್ತಿರುವ ಕ್ರೈಸ್ತ ಧರ್ಮದವರು ನಮ್ಮ ಮರಣಗಳಿಗೆ, ಮದುವೆ, ನಾಮಕರಣ, ನಮ್ಮ ಮಕ್ಕಳಿಗೆ ದೇವರ ಪ್ರಸಾದ ಸಿಗುವ ಸಮಯದಲ್ಲಿ ನಮ್ಮ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದಾಗ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ನಾವು ಪ್ರೀತಿಯಿಂದ ಕರೆದಾಗ ತನ್ನ ಬಿಡುವಿಲ್ಲದ ಕಾರ್ಯಕ್ರಮದಲ್ಲಿ ನಮ್ಮ ಮೇಲೆ ಪ್ರೀತಿಯನ್ನು ಇಟ್ಟು ಹಾಗೂ ಪ್ರತಿಭಟನೆಗಳಲ್ಲಿ ತಪ್ಪದೆ ಭಾಗವಹಿಸಿದಂತಹ ಮಾಜಿ ಕೇಂದ್ರೀಯ ಮಂತ್ರಿಗಳು ಹಾಗೂ ಲೋಕ ಸಭಾ ಸದಸ್ಯರಾದ ಶ್ರೀಯುತ ಜನಾರ್ಥನ ಪೂಜಾರಿಯವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಘಟನೆಯ ಬಗ್ಗೆ ಯಾವುದೇ ಪರ-ವಿರೋಧ ಪ್ರತಿಕ್ರಿಯೆಯನ್ನು ನೀಡದ ಕ್ರೈಸ್ತ ಧರ್ಮದವರನ್ನು ನಿಮ್ಮ ಚರ್ಚುಗಳಲ್ಲಿ ಶವಗಳನ್ನು ಹೂತಿಡಲಿಲ್ಲವಾ? ಯಾಕೆ ಹೂತಿಟ್ಟಿದ್ದೀರಿ? ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ನಾವು ಅತೀ ಗೌರವದಿಂದ ಕಾಣುತ್ತಿರುವ ಮಹನೀಯರು ಕೇಳಿದ ಈ ಪ್ರಶ್ನೆಯ ಬಗ್ಗೆ ಕ್ರೈಸ್ತ ಸಮುದಾಯದವರಿಗೆ ಅತೀವ ನೋವುಂಟಾಗಿದ್ದು ಶ್ರೀಯುತ ಜನಾರ್ಧನ ಪೂಜಾರಿಯವರ ಈ ಹೇಳೀಕೆಯನ್ನು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಖಂಡಿಸುತ್ತೇವೆ.
ಮರಣ ಹೊಂದಿದ ನಂತರ ನಾವು ಮರಣ ಹೊಂದಿದವರ ದೇಹವನ್ನು ಅತೀ ಪಾವಿತ್ರ್ಯತೆಯ ಭಾವನೆಯಿಂದ ದೈವಾಧೀನರಾಗಿದ್ದಾರೆ ಎಂದು ಸಂಭೋದಿಸುತ್ತೇವೆ. ಹಾಗೂ ಅನಾದಿ ಕಾಲದಿಂದಲೂ ಅತೀ ಶೃದ್ಧಾ ಭಕ್ತಿಯಿಂದ ವಿಧಿವಿಧಾನಗಳಿಂದ ಈ ಕಾರ್ಯವನ್ನು ನಡೆಸುತ್ತಾ ಬಂದಿರುತ್ತೇವೆ. ಈ ಎಲ್ಲಾ ಪ್ರಶ್ನೆಗಳಿಗೆ ನಾವು ಸೃಷ್ಠೀಕರಣ ನೀಡಲು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಇದರ ಅಧ್ಯಕ್ಷರಾದ ಶ್ರೀ ಸಂತೋಷ್ ಡಿಸೋಜಾರವರ ನೇತೃತ್ವದಲ್ಲಿ ತಮ್ಮ ಮೂಲಕ ಸೃಷ್ಠೀಕರಣ ನೀಡಲು ಈ ಪತ್ತಿಕಾಗೋಷ್ಠಿಯನ್ನು ಕರೆದಿದ್ದೇವೆ.
ಕ್ರೈಸ್ತ ಧರ್ಮದವರು ಸಹಜ ರೀತಿಯಲ್ಲಿ ಅನಾರೋಗ್ಯ ಪೀಡಿತರ ಅಥವಾ ವಯೋಮಿತಿ ದಾಟಿ ಮರಣ ಹೊಂದಿದಾಗ ವೈದ್ಯ್ತಕೀಯ ದಾಖಲೆ ಪಡಕೊಂಡು, ಅಪಘಾತ ಅಥವಾ ಆತ್ಮಹತ್ಯೆಗೈದು ಅಸಹಜ ರೀತಿಯಲ್ಲಿ ಮರಣ ಹೊಂದಿದ
ಸಮಯದಲ್ಲಿ ಪೊಲೀಸ್ ಇಲಾಖೆಯ ಹಾಗೂ ವೈದ್ಯಕೀಯ ವಿಧಿವಿಧಾನಗಳನ್ನು ಅನುಸರಿಸಿ ಅನುಮತಿ ಪತ್ರವನ್ನು ಪಡೆದು ಕಾನೂನು ಬದ್ಧವಾಗಿ ಚರ್ಚಿನಲ್ಲಿರುವ ಘಂಟೆಯನ್ನು ಸಮಯ ಸಮಯಕ್ಕೆ ಬಾರಿಸಿ ಧರ್ಮಗುರುಗಳು, ಉಪಾಧ್ಯಕ್ಷರು, ಕಾರ್ಯದರ್ಶಿ, ಗುರಿಕಾರರು, ಆಡಳಿತ ಮಂಡಳಿ ಹಾಗೂ ಚರ್ಚಿನ ಕ್ರೈಸ್ತ ಭಕ್ತರ ಸಮ್ಮುಖದಲ್ಲಿ ಧರ್ಮಗುರುಗಳು ಮರಣ ಹೊಂದಿದವರ ಮನೆಗೆ ಭೇಟಿ ನೀಡಿ ವಿಧಿ ವಿಧಾನವನ್ನು ನಡೆಸಿ ಮೆರವಣಿಗೆ ಮೂಲಕ ಸಂಬಂಧಪಟ್ಟ ಕ್ರೈಸ್ತ ದೇವಾಲಯಕ್ಕೆ ಮೃತ ದೇಹವನ್ನು ತಂದು ಪೂಜೆ ಮಾಡಿ ತದನಂತರ 6 ಅಡಿ ಆಳ ಮಾಡಿದ ಗುಂಡಿಯಲ್ಲಿ ಮೃತ ದೇಹವನ್ನು ಹೂತಿಟ್ಟ ಮೇಲೆ ಮಣ್ಣು ಹಾಕಿ ಅದರ ಮೇಲೆ ಕಾಂಕ್ರೀಟಿನ ಶಿಲುಬೆಯಲ್ಲಿ ಅವರ ಜನನ, ಮದುವೆ ಹಾಗೂ ಮರಣದ ದಿನಾಂಕವನ್ನು ನಮೂದಿಸಿ ಚರ್ಚಿನ ಧರ್ಮಗುರುಗಳ ಕಛೇರಿಯಲ್ಲಿರುವ ದಾಖಲೆ ಪುಸ್ತುಕದಲ್ಲಿ ವಿವರವಾಗಿ ಈ ಕುರಿತು ನಮೂದಿಸಿ ಏಳನೇ ದಿವಸ, ತಿಂಗಳು ಹಾಗೂ ವರ್ಷದ ಪೂಜೆಯನ್ನು ಭಕ್ತಾದಿಗಳನ್ನು, ಅವರ ಕುಟುಂಬದವರರನ್ನು, ಬಂಧುಮಿತ್ರರನ್ನು ಕರೆದು ಸತ್ತವರ ಆತ್ಮಕ್ಕೆ ದೇವರು ಸದ್ಗತಿಯನ್ನು ನೀಡಲಿ ಎಂದು ಸರ್ವರು ಸೇರಿ ಸಾಮೂಹಿಕವಾಗಿ ದೇವರಲ್ಲಿ ಬೇಡುತ್ತೇವೆ.
ಯಾವ ಸಂದರ್ಭದಲ್ಲೂ ಯಾರು ಕೇಳಿದರೂ ನಮ್ಮ ಜನನ ಹಾಗೂ ಮರಣದ ದಾಖಲೆಗಳು ನಾವು ಜೀವಂತವಿದ್ದರೂ ಅಥವಾ ತೀರಿಹೋದರೂ ಕಛೇರಿಯ ಪುಸ್ತಕದಲ್ಲಿ ಸದಾ ಸಿಗುತ್ತದೆ. ಯಾವುದೇ ಕಾನೂನು ಬಾಹಿರವಾಗಿ ಅಥವಾ ಚರ್ಚ್ ಆವರಣದಲ್ಲಿ ಅಲ್ಲದೇ ಬೇರೆ ಕಡೆ ಶವ ಸಂಸ್ಕಾರ ಮಾಡಿದ ದಾಖಲೆ ಇದುವರೆಗೆ ನಾವು ಕೇಳಿದ್ದು ಅಥವಾ ನೋಡಿದ್ದಿಲ್ಲ.
ಕಳೆದ 50 ವರ್ಷಗಳಿಂದ ಆಯಾ ಚರ್ಚುಗಳಲ್ಲಿ ನಿಗದಿಪಡಿಸಿದ ದಫನ ಭೂಮಿಯಲ್ಲೇ ಕ್ರೈಸ್ತರ ಮೃತದೇಹವನ್ನು ದಫನ ಮಾಡುವ ರೀತಿಯನ್ನು ನಾವು ನಡೆಸುತ್ತಾ ಬಂದಿರುತ್ತೇವೆ. ತಮ್ಮ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮದಲ್ಲಿ ನಮ್ಮೀ ವರದಿಯನ್ನು ಪ್ರಕಟಿಸಬೇಕಾಗಿ ಕೇಳಿಕೊಳ್ಳುತ್ತೇವೆ.
ಪಾವ್ಲ್ ರೋಲ್ಫಿ ಡಿಕೋಸ್ತಾ ಸಂತೋಷ್ ಡಿಸೋಜಾ
ಸಾರ್ವಜನಿಕ ಸಂಪರ್ಕ ಅಧಿಕಾರಿ ಅಧ್ಯಕ್ಷರು,
ಕಥೊಲಿಕ್ ಸಭಾ ಮಂಗ್ಳುರ್ ಪ್ರದೆಶ್(ರಿ) ಕಥೊಲಿಕ್ ಸಭಾ ಮಂಗ್ಳುರ್ ಪ್ರದೆಶ್(ರಿ)
9448723611 9686811367
ಉಪಸ್ಥಿತರು:
- ಸಂತೋಷ್ ಡಿಸೋಜಾ- ಕೇಂದ್ರೀಯ ಅಧ್ಯಕ್ಷರು, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ)
- ಪೌಲ್ ರೋಲ್ಫಿ ಡಿಕೋಸ್ತಾ-ಸಾರ್ವಜನಿಕ ಸಂಪರ್ಕ ಅಧಿಕಾರಿ, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ)
- ವಿಲ್ಮಾ ಮೊಂತೇರೊ – ಪ್ರಧಾನ ಕಾರ್ಯದರ್ಶಿ, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ)
- ಆಲ್ವಿನ್ ರೊಡ್ರಿಗಸ್, ಸಹ ಕಾರ್ಯದರ್ಶಿ, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ)
- ಆಲ್ವಿನ್ ಡಿಸೋಜಾ, ಪಾನೀರ್-ನಿಕಟಪೂರ್ವ ಅಧ್ಯಕ್ಷರು, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ)
- ಸ್ಟೇನಿ ಲೋಬೊ, ಮಾಜಿ ಅಧ್ಯಕ್ಷರು, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ)
- ಅರುಣ್ ಡಿಸೋಜಾ, ಅಂತರ್ಧರ್ಮೀಯ ಸಮಿತಿ ಸಂಚಾಲಕರು, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ)

