

ಕುಂದಾಪುರ : 15.08.2025 ರಂದು ಕುಂದಾಪುರದ ಯು.ಬಿ.ಎಂ.ಸಿ. ಇಂಗ್ಲಿಷ್ ಮಾಧ್ಯಮ ಶಾಲೆ ಮತ್ತು ಸಿ.ಎಸ್.ಐ. ಕೃಪಾ ವಿದ್ಯಾಲಯದಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಪ್ರಾಂಶುಪಾಲರಾದ ಅನಿತಾ ಆಲಿಸ್ ಡಿಸೋಜಾ ಸ್ವಾಗತಿಸಿದರು. ಮುಖ್ಯ ಅತಿಥಿ ರೆವರೆಂಡ್ ಇಮ್ಯಾನುಯೆಲ್ ಜಯಕರ್ ತ್ರಿವರ್ಣ ಧ್ವಜಾರೋಹಣ ಮಾಡಿದರು. ಗೌರವಾರ್ಥವಾಗಿ, ಗಣ್ಯರು, ವಿದ್ಯಾರ್ಥಿಗಳು, ಪೋಷಕರು, ಅಧ್ಯಾಪಕರು ಮತ್ತು ಎಲ್ಲರೂ ರಾಷ್ಟ್ರಗೀತೆಯನ್ನು ಹೆಮ್ಮೆಯಿಂದ ಹಾಡಿದರು.
ಮುಖ್ಯ ಅತಿಥಿಗಳು ತ್ರಿವರ್ಣದ ಮಹತ್ವ, ಅದನ್ನು ಅಲಂಕರಿಸುವ ಬಣ್ಣಗಳನ್ನು ವಿವರಿಸಿದರು. ಶಾಲಾ ಸಂಚಾಲಕಿ ಐರೀನ್ ಸಾಲಿನ್ಸ್, ಶಾಲಾ ಸಮಿತಿ ಸದಸ್ಯ ಜೀವನ್ ಸಾಲಿನ್ಸ್, ಸಿಎಸ್ಐ ಕೃಪಾ ವಿದ್ಯಾಲಯದ ಮುಖ್ಯೋಪಾಧ್ಯಾಯಿನಿ ಸವಿತಾ, ಅಂಗನವಾಡಿ ಶಿಕ್ಷಕಿ ವಿದ್ಯಾಲಕ್ಷ್ಮಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಭಾಷಣ ಮಾಡಿದರು, ದೇಶಭಕ್ತಿ ಗೀತೆಯನ್ನು ಹಾಡಿದರು ನೃತ್ಯ ಮಾಡಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಿಗೆ ಪ್ರಮಾಣಪತ್ರ ಬಹುಮಾನಗಳನ್ನು ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ತಂಬಾಕಿನಿಂದ ದೂರವಿರುವಂತೆ, ತಂಬಾಕು ರಹಿತ ಪ್ರತಿಜ್ಞೆಯನ್ನು ಪಠಿಸಲಾಯಿತು. ಐರೀನ್ ಸಾಲಿನ್ಸ್, ಧನ್ಯವಾದಗಳನ್ನು ಅರ್ಪಿಸಿದರು. ಕಾರ್ಯಕ್ರಮವನ್ನು ಶಿಕ್ಷಕಿ ಪವಿತ್ರಾ ನಿರ್ವಹಿಸಿದರು, ಎಲ್ಲರಿಗೂ ಸಿಹಿತಿಂಡಿಗಳನ್ನು ವಿತರಿಸಿದ ನಂತರ ಕಾರ್ಯಕ್ರಮವು ಮುಕ್ತಾಯವಾಯಿತು.
Kundapur- 79th Independence Day Celebrations at UBMC English Medium School and CSI Kripa Vidyalaya

Kundapura; U.B.M.C. English Medium School and C.S.I. Krupa Vidyalaya, Kundapura, celebrated the 79th Independence Day. The event commenced with the Invocation by students . The Principal, Smt. Anita Alice Dsouza welcomed the gathering. The chief guest Rev.Imanuel Jayakar hoisted the Tricolour . As a mark of respect , the dignitaries , students , parents , faculty members, and everybody sang the National Anthem , the flag song proudly . The Chief guest explained the significance of the Tricolour, the colours adorning it, and urged the students to attain the qualities that the flag contains. The other dignitaries present were the Correspondent Smt.Irene Salins the Correspondent , Betterment Committee member, Sri Jeevan Salins , Headmistress of CSI Krupa Vidyalaya and Anganwadi teacher Smt Vidyalaxmi .During the cultural event , the students delivered speech, sang the patriotic song, and danced on it as well. The winners were felicitated with certificate prizes. Smt. Irene Salins , Parents , Students , faculty members The Correspondent expressed the vote of thanks. The programme was anchored by Pavithra teacher who also chanted the pledge to stay away from Tobacco. The event winded up after distributing sweets to all.









