

ಶ್ರೀನಿವಾಸಪುರ : ಗೋಕುಲಾಷ್ಟಮಿ ದಿನ ಪಾಲಕರು ತಮ್ಮ ಮಕ್ಕಳನ್ನು ಕೃಷ್ಣ , ರಾಧೆ ವೇಷಗಳೊಂದಿಗೆ ಅಲಂಕರಿಸಿ ಸಂತೋಷ ಪಡುತ್ತಾರೆ. ಕೃಷ್ಣನ್ನು ಮನದಲ್ಲಿ ಬಿಂಬಿಸುವದೇ ಗೋಕುಲಾಷ್ಟಮಿ. ಪ್ರತಿಯೊಬ್ಬ ತಂದೆತಾಯಿ ನಮಗೆ ಕೃಷ್ಣನಂತಹ ಗುಣಗಳುಳ್ಳ ಮಗು ಹುಟ್ಟಿಬರಲಿ ಎಂದು ಕದಂಬ ಮಹಿಳಾ ಘಟಕ ವೇದಿಕೆ ಜಿಲ್ಲಾ ಅಧ್ಯಕ್ಷ ಮಾಯಬಾಲಚಂದ್ರ ಆಶಿಸಿಸುತ್ತಾರೆ.
ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರ್ಸಿ ಈಶ್ವರಿ ವಿಶ್ವವಿದ್ಯಾಲಯದ ವತಿಯಿಂದ ಮಂಗಳವಾರ ವಾಸವಿ ಕಲ್ಯಾಣ ಮಂಟಪದಲ್ಲಿ ಗೋಕುಲಾಷ್ಟಮಿ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು.
ಶ್ರೀಕೃಷ್ಣನು ಭಗವತ್ ಗೀತೆಯಲ್ಲಿ ಅನೇಕ ಸಲಹೆಗಳು ಮತ್ತು ಉಪದೇಶ್ಳನ್ನು ನೀಡಿದ್ದಾನೆ. ಅತ ಉಚ್ಚರಿಸಿದ ಪ್ರತಿಯೊಂದು ಪದವೂ ಅನ್ಯಾಯದ ವಿರುದ್ಧ ಹೋರಾಡಲು ಯಾವಗಲೂ ಸ್ಫೂರ್ತಿಯಾಗಿದ್ದು, ಪ್ರತಿಯೊಬ್ಬರು ಭಗವತ್ ಗೀತೆಯಲ್ಲಿನ ಗೀತಾಸಾರವನ್ನು ಓದಿ ಅರಿತು ತಮ್ಮ ಜೀವನಕ್ಕೆ ಅಳವಡಿಸಿಕೊಂಡು ಜೀವನ ಶೈಲಿಯನ್ನು ಬದಲಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು .
ಶ್ರೀನಿವಾಸಪುರ ಪ್ರಜಾಪಿತ ಬ್ರಹ್ಮಕುಮಾರ್ಸಿ ಈಶ್ವರಿ ವಿಶ್ವವಿದ್ಯಾಲಯದ ಶಾಖೆಯ ಸಂಚಾಲಕಿ ಬಿ.ಕೆ.ರಾಜೇಶ್ವರಿ ಮಾತನಾಡಿ ಪ್ರತಿಯೊಬ್ಬರು ತಮ್ಮಲ್ಲಿರುವ ಅಜ್ಞಾನವನ್ನು ತೊಲಗಿಸಿ, ಜ್ಞಾನವನ್ನು ನೀಡಲಿ ಎಂರು ದೇವರನ್ನು ಪ್ರಾರ್ಥಿಸಿಕೊಳ್ಳಬೇಕು ಎಂದರು.
ಚಿಕ್ಕಮಕ್ಕಳಿಂದ ರಾಧೆಕೃಷ್ಣ ವೇಷಭೂಷಣಗಳನ್ನು ಧರಿಸಿದ್ದರು. ಚಿಂತಾಮಣಿ ಶಾಖೆ ಪ್ರಜಾಪಿತ ಬ್ರಹ್ಮಕುಮಾರ್ಸಿ ಈಶ್ವರಿ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ.ಶ್ಯಾಮಲ, ಮುಳಬಾಗಿಲು ಶಾಖೆ ಪ್ರಜಾಪಿತ ಬ್ರಹ್ಮಕುಮಾರ್ಸಿ ಈಶ್ವರಿ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ.ಗಾಯತ್ರಿ , ಶಿಕ್ಷಕಿ ಚಂದನ ಇದ್ದರು.


