

ಶ್ರೀನಿವಾಸಪುರ : ಕೆಂಪೇಗೌಡರು ಬೆಂಗಳೂರು ನಿರ್ಮಾಣಕರ್ತೃ, ಬೆಂಗಳೂರನ್ನು ಎಲ್ಲ ಸಮುದಾಯಗಳ ಸಹಕಾರ ದೊಂದಿಗೆ ಬೆಳಸಿ ಇಂದು ದೇಶದಲ್ಲೆ ಬೆಂಗಳೂರು ಹೆಚ್ಚು ಬೆಳೆಯುತ್ತಿರುವ ನಗರವಾಗಿ ಬಿಂಬಿಸುತ್ತಿದೆ. ಎಲ್ಲಾ ಜಾತಿ ಜನಾಂಗದವರು ಕೆಂಪೇಗೌಡರನ್ನ ನೆನೆಯಬೇಕು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಎಂದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಶುಕ್ರವಾರ ರಾಷ್ಟ್ರೀಯ ಹಬ್ಬಗಳ ಸಮಿತಿ ಹಾಗು ಒಕ್ಕಲಿಗ ಸಮುದಾಯವತಿಯಿಂದ ಹಮ್ಮಿಕೊಳ್ಳಲಾದ ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು.
ಕ್ಷೇತ್ರದ ಜನತೆಯ ಋಣವನ್ನು ತೀರಿಸಿಕೊಳ್ಳುವ ಸಲುವಾಗಿ ಹಗಲಿರಲು ನಿಮ್ಮ ಸೇವೆ ಮಾಡಲು ಸಿದ್ದನಿದ್ದೇನೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳುವ ಸಲುವಾಗಿ ಮುಳಬಾಗಿಲು ರಸ್ತೆಗೆ ಸಂಬಂದಿಸಿದಂತೆ ಹಾಗು ಮದನಪಲ್ಲಿ ರಸ್ತೆಗೆ ಸಂಬಂದಿಸದಂತೆ ನಾಲ್ಕೈದು ಸಾವಿರ ಎಕರೆಯಲ್ಲಿ ಕೈಗಾರಿಕಾ ವಲಯವನ್ನ ಸ್ಥಾಪಿಸಿ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುವ ಉದ್ದೇಶವನ್ನು ಹೊಂದಿದ್ದೇನೆ. ಇದರಿಂದ ಕ್ಷೇತ್ರದ ಜನತೆ ಆರ್ಥಿಕ ಸಭಲಾರಗಲು ಸಾಧ್ಯವಾಗುತ್ತದೆ . ಕ್ಷೇತ್ರ ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ಕೈಜೋಡಿಸಬೇಕಾಗಿದೆ ಸಭಾ ಕಾರ್ಯಕ್ರಮದಲ್ಲಿ ಇದ್ದ ಎಲ್ಲಾ ಪಕ್ಷದ ನಾಯಕರಿಗೆ ಮನವಿ ಮಾಡಿದರು.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್ ಮಾತನಾಡಿ ವೈಜ್ಞಾನಿಕ ದೃಷ್ಟಿಕೋನದೊಂದಿಗೆ ಮಹಾನಗರವನ್ನು ಬೆಳಸಿ ಜನಜೀವನಕ್ಕೆ ಆನೇಕ ಮೂಲ ಸೌಕರ್ಯಗಳನ್ನು ಕಲ್ಪಿಸುತ್ತಾ ಅವರ ಚಾರಿತ್ರಿಕ ವ್ಯಕ್ತಿ ಆಗಿದ್ದಾರೆ. ಕೃಷಿಗೆ ಆಧ್ಯತೆ ನೀಡಿದ ವ್ಯಕ್ತಿ ಇವರು ಆಗಿದ್ದು, ಒಟ್ಟಾರೆಯಾಗಿ ದೂರದೃಷ್ಟಿಯಳ್ಳ ವ್ಯಕ್ತಿ ಕೆಂಪೇಗೌಡರು ಒಂದು ಜಾತಿಗೆ ಸಿಮೀತವಲ್ಲ. ಕೆಂಪೇಗೌಡರ ಸಾದನೆಗಳು ಅವರ , ಮಾದರಿ ಕೆಲಸಗಳು ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಎನ್.ಬಿ.ಗೋಪಾಲಗೌಡ ಮಾತನಾಡಿ ಕೆಂಪೇಗೌಡರು ಅತ್ಯಂತ ಗೌರವಾನ್ವಿತ ವ್ಯಕ್ತಿತ್ವವು ಪರೋಪಕಾರಿ ಮತ್ತು ಸಹಾನಭೂತಿಯುಳ್ಳ ಆಡಳಿತಗಾರ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಮಹಾನ್ ಆಡಳಿತಗಾರ ಎಂದು ಬಣ್ಣಿಸಿದರು.
ಈ ಕಾರ್ಯಕ್ರಮದಲ್ಲಿ ಬೈರವೇಶ್ವರ , ಎಸ್ಎಫ್ಎಸ್ ಶಾಲೆ ವಿದ್ಯಾರ್ಥಿಗಳು ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಸಿಕೊಟ್ಟರು. ಸಮುದಾಯದಲ್ಲಿನ ಪಿಯುಸಿ, ಎಸ್ಎಸ್ಎಲ್ಸಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಅಲ್ಲದೆ ಈಜು ಸ್ಪರ್ಧೇಯ ರಾಷ್ಟ್ರೀಯ ಮಟ್ಟದ ಸ್ಪರ್ಧಿ ಡಿಂಪಲ್ಸೋನಾಕ್ಷಿಗೌಡ ರವರನ್ನು ಸನ್ಮಾನಿಸಲಾಯಿತು. ಕೆಂಪೇಗೌಡರ ಬಗ್ಗೆ ಪ್ರಬಂದ ಸ್ಪರ್ಧೇಯಲ್ಲಿ ವಿಜೇತರಾದವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಎನ್.ವಿ.ವೇಣುಗೋಪಾಲರೆಡ್ಡಿ ಮಾತನಾಡಿದರು. ಇಒ ಸರ್ವೇಶ್, ಬಿಇಒ ಬಿ.ಸಿ.ಮುನಿಲಕ್ಷ್ಮಯ್ಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಬೈರೇಗೌಡ, ಪುರಸಭೆ ಅಧ್ಯಕ್ಷ ಬಿ.ಆರ್.ಭಾಸ್ಕರ್, ಮುಖ್ಯಾಧಿಕಾರಿ ವಿ.ನಾಗರಾಜ್, ಸದಸ್ಯರಾದ ಆನಂದಗೌಡ, ಹೆಂಮತಕುಮಾರ್, ಒಕ್ಕಲಿಗರ ಸಂಘದ ತಾಲೂಕು ಕಾರ್ಯದರ್ಶಿ ವೆಂಕಟರೆಡ್ಡಿ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಕೆ.ಎನ್.ವೇಣುಗೋಪಾಲರೆಡ್ಡಿ, ಮಾವು ಬೆಳಗಾರರ ಸಂಘದ ಜಿಲ್ಲಾಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ, ಕೋಮುಲ್ ನಿರ್ದೇಶಕರಾದ ಕೆ.ಕೆ.ಮಂಜು, ಎನ್.ಹನುಮೇಶ್, ಬಿಜೆಪಿ ಪಕ್ಷದ ತಾಲೂಕು ಅಧ್ಯಕ್ಷ ರೋಣೂರು ಚಂದ್ರಶೇಖರ್, ಮುಖಂಡರಾದ ಎ.ವೆಂಕಟರೆಡ್ಡಿ, ಲಕ್ಷ್ಮಣರೆಡ್ಡಿ, ಪೆದ್ದರೆಡ್ಡಿ, ಸೀತಾರಾಮರೆಡ್ಡಿ, ಶಂಕರರೆಡ್ಡಿ, ಬೆಲ್ಲಂಶ್ರೀನಿವಾಸರೆಡ್ಡಿ, ಸುಬ್ಬಿರೆಡ್ಡಿ, ಕೋಡಿಪಲ್ಲಿ ಶ್ರೀನಾಥರೆಡ್ಡಿ, ಟಿಪಿಒ ವೆಂಕಟಸ್ವಾಮಿ, ಇಸಿಒ ಸುಬ್ರಮಣಿ, ಆರ್ಐ ಮುನಿರೆಡ್ಡಿ ಇದ್ದರು.

