

ಜೆಪ್ಪು, ಜೂನ್ 28: ‘ವಿದ್ಯಾರ್ಥಿಗಳ ಜೀವನದಲ್ಲಿ ಹೆತ್ತವರ ಪಾತ್ರ ಯಾವ ರೀತಿ ಇರಬೇಕು’ ಎಂದು ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆ ಸಂಚಾಲಕರಾದ ವಂದನೀಯ ಗುರು ಎರಿಕ್ ಕ್ರಾಸ್ತಾ ಹೇಳಿದರು. ಸೈಂಟ್ ರೀಟಾ ಶಾಲಾ ಸಭಾಂಗಣದಲ್ಲಿ ನಡೆದ ರಕ್ಷಕ ಶಿಕ್ಷಕ ಸಂಘದ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪಾದುವಾ ಸಂಸ್ಥೆಯ ಪ್ರಾಂಶುಪಾಲರಾದ ವಂದನೀಯ ಫಾದರ್ ಅರುಣ್ ವಿಲ್ಸನ್ ಲೋಬೋರವರು ಮಕ್ಕಳ ಶಿಸ್ತು, ಮೌಲ್ಯಗಳ ಬಗ್ಗೆ ಹೆತ್ತವರ ಪಾತ್ರ ಹೇಗಿರಬೇಕು ಎಂದು ಆಗಮಿಸಿದ ವಿದ್ಯಾರ್ಥಿಗಳ ಹೆತ್ತವರಿಗೆ ಮಾರ್ಗದರ್ಶನ ನೀಡಿದರು. ಶಾಲಾ ಮುಖ್ಯ ಶಿಕ್ಷಕಿಯಾದ ಮೆಟಿಲ್ಡಾ ಡಿಕೋಸ್ತ ಇವರು ಶಾಲೆಯ ನಿಯಮಾವಳಿಗಳು ಹಾಗೂ ಶೈಕ್ಶಣಿಕ ಚಟುವಟಿಕೆಗಳ ಬಗ್ಗೆ ತಿಳಿಸಿಕೊಟ್ಟರು. 2025-26ನೇ ಸಾಲಿಗೆ ಶಿಕ್ಷಕ ರಕ್ಷಕ ಸಂಘದ ಪ್ರತಿನಿಧಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಕಳೆದ ಸಾಲಿನ ರಕ್ಷಕಾ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಮೊಹಮ್ಮದ್ ಇಮ್ರಾನ್ ರವರು ಉಪಸ್ಥಿತರಿದ್ದರು. ಶಿಕ್ಷಕಿಯರಾದ ಶ್ರೀಮತಿ ರೇಷ್ಮಾ ಡಿಸೋಜರವರು ಕಾರ್ಯಕ್ರಮವನ್ನು ನಿರೂಪಿಸಿದರು ಶಿಕ್ಷಕಿ ಶ್ರೀಮತಿ ಲೆನಿಟಾ ರವರು ಸ್ವಾಗತಿಸಿ ಶ್ರೀಮತಿ ವಿದ್ಯಾ ರವರು ವಂದಿಸಿದರು.
ST. RITA ENGLISH MEDIUM SCHOOL, JEPPU : PTA GENERAL BODY MEETING 2025

JEPPU : St. Rita English Medium School held its PTA General Body Meeting for the year 2025-26 on 28th June. The Joint-Secretary Rev. Fr. Eric Crasta in his presidential address emphasized the role of parents in student’s life.
Resource person Rev. Fr. Arun Wilson Lobo, Principal of Padua College of Commerce and Management addressed the parents about the role of parents in teaching discipline and values to children. Headmistress Mrs. Matilda DCosta discussed the rules and regulations of the School. New PTA Executive committee members are selected for the year 2025-26. The former PTA Vice-President was present in the meeting. Mrs. Reshma DSouza compered the program, Mrs. Lenitha welcomed the gathering and Mrs. Vidya proposed the vote of thanks.









