

ಕುಂದಾಪುರ, ಜೂ.22; ಸಂತ ಮೇರಿಸ್ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಜೂನ್ 21 ರಂದು ವಿದ್ಯಾರ್ಥಿ ಸಂಸತ್ತು ಉದ್ಘಾಟನಾ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ರೋಜರಿ ಮಾತಾ ಚರ್ಚಿನ ಧರ್ಮಗುರುಗಳು ಹಾಗೂ ವಿದ್ಯಾಸಂಸ್ಥೆಗಳ ಸಂಚಾಲಕರು ಆಗಿರುವ ರೆ. ಫಾ. ಪಾವ್ಲ್ ರೆಗೋ ರವವರು ಅಧ್ಯಕ್ಷತೆ ವಹ್ಸಿಸಿ ಆರಿಸಿ ಬಂದ ಸಂಸತ್ತಿನ ಅಧ್ಯಕ್ಷರಿಗೆ ಹಾಗೂ ಎಲ್ಲಾ ಪದಾಧಿಕಾರಿಗಳಿಗೆ ಶುಭ ಹಾರೈಸಿ, ನಾಯಕ ಈ ಪದದ ಅರ್ಥವನ್ನು ತಿಳಿಸಿ, ಶಿಸ್ತು ಅತಿ ಮುಖ್ಯ, ಪ್ರೀತಿಯಿಂದ ದ್ವೇಷವನ್ನು ದೂರ ಮಾಡಬೇಕು. ಶಾಂತಿ ಸಹನೆಯಿಂದ ಎಲ್ಲರೂ ಬಾಳಬೇಕು. ಪ್ರತಿಯೊಬ್ಬರೂ ನಿಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿ ಎಂದು ಹೇಳಿ, ಪ್ರಮಾಣವಚನ ಬೋಧಿಸಿ ಹರಸಿದರು
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿಯ ಹೆಸರಾಂತ ವಕೀಲರು, ಸಂಪನ್ಮೂಲ ವ್ಯಕ್ತಿ, ಹಲವಾರು ಸಂಘಟನಾ ಕಾರ್ಯದಲ್ಲಿ ತೊಡಗಿಸಿಕೊಂಡ ವಕೀಲರು, ರೋಟರ್ಯಾಕ್ಟ್ ಕ್ಲಬ್ ನ ‘ಅತ್ಯುತ್ತಮ ಅಧ್ಯಕ್ಷರು’ ಎಂಬ ಹೆಸರು ಪಡೆದ ಗೌರವಾನ್ವಿತ ಶ್ರೀ ರಾಯನ್ ಫೇರ್ನಾಂಡೀಸ್ ರವರು ಮಾತನಾಡಿ ಆರಂಭದಲ್ಲಿಯೇ ಸಂತ ಮೇರಿಸ್ ಕಾಲೇಜಿನ ವಿದ್ಯಾರ್ಥಿಗಳ ಶಿಸ್ತನ್ನು ಹೊಗಳುತ್ತಾ ಆತ್ಮ ವಿಶ್ವಾಸ ನಮಗೆ ಅತಿ ಮುಖ್ಯ ಎಂದು ಹೇಳಿ, ನಾವು ಜೀವನದಲ್ಲಿ ನಾಯಕತ್ವ ಗುಣ, ನಮ್ರತೆ ಹಾಗೂ ತಾಳ್ಮೆ ಈ ಮೂರು ಮುಖ್ಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ಜೀವನದಲ್ಲಿ ‘ಸೋಲು ಗೆಲುವಿನ ಸೋಪಾನ’ ಎನ್ನುತ್ತಾ ಸಾಮಾಜಿಕ ಜಾಲತಾಣದ ಪ್ರಾಮುಖ್ಯತೆ ತಿಳಿಸಿ, ವಯಸ್ಸಿಗೆ ಅನುಗುಣವಾಗಿ ನಿಮ್ಮ ನಡತೆ ಇರಲಿ, ಆದರ್ಶ ನಾಯಕರ ಧ್ಯೇಯ ವಾಕ್ಯ ಹೇಳಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ವಿದ್ಯಾರ್ಥಿ ನಾಯಕನಾಗಿ ಆಯ್ಕೆಯಾಗಿದ್ದ ಶಾನಿತ್ ವಾಸ್ ರವರು ತನ್ನನ್ನು ಮತನೀಡಿ ಆರಿಸಿದ್ದಕ್ಕೆ ವಂದನೆ ಸಲ್ಲಿಸಿ, ಕಾಲೇಜಿನ ಅಭಿವೃದ್ಫಿಗೆ ಶ್ರಮಿಸುತ್ತೇನೆ ಎಂದು ನುಡಿದರು.
ಸಭೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ರೇಶ್ಮಾ ಫೆರ್ನಾಂಡೀಸ್ ರವರು, ಸಂಸತ್ತಿನ ಕಾರ್ಯದರ್ಶಿ ಹಾಗೂ ಸಂಸತ್ತಿನ ಬೇರೆ ಬೇರೆ ವಿದ್ಯಾರ್ಥಿ ಮಂತ್ರಿಗಳು ಉಪಸ್ಥಿತರಿದ್ದರು.
ಉಪನ್ಯಾಸಕಿ, ಕಾರ್ಯಕ್ರಮದ ಸಂಯೋಜಕಿ ಪ್ರಫುಲ್ಲಾರವರು ಸ್ವಾಗತಿಸಿ,ವಿದ್ಯಾರ್ಥಿ ಸಂಸತ್ತಿನ ಕಾರ್ಯದರ್ಶಿ ರೇಚಲ್ ವಂದಿಸಿದರು.ಕಾಲೇಜಿನ ವಿದ್ಯಾರ್ಥಿಗಳ ಸುಶ್ರಾವ್ಯ ಸಂಗೀತದ ಪ್ರಾರ್ಥನೆಯೊಂದಿಗೆ,ಪ್ರಥಮ ಪಿ.ಯು ವಿಜ್ಞಾನ ವಿಭಾಗದ ವಿದ್ಯಾರ್ಥಿ ತಬ್ಶಿರ ರವರು ಕಾರ್ಯಕ್ರಮ ನಿರೂಪಿಸಿದರು.











































