

ಗಂಗೊಳ್ಳಿ; ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಜೂನ್ 21 ರಂದು ಯೋಗ ಗುರುಗಳಾದ ಶ್ರೀಯುತ ನಾರಾಯಣ್ ದೇವಾಡಿಗರು, ನಿವೃತ್ತ ಮುಖ್ಯ ಶಿಕ್ಷಕರು ಬೀಜೂರು ಪ್ರಾಥಮಿಕ ಶಾಲೆ, ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಯೋಗದ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿದ್ದಲ್ಲದೆ. ಧ್ಯಾನ,ಪ್ರಾಣಾಯಾಮ, ಸೂರ್ಯ ನಮಸ್ಕಾರ ವಿವಿಧ ಯೋಗದ ಆಸನಗಳನ್ನು ಪ್ರಾತ್ಯಕ್ಷತೆಯ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಗಳ ಮುಖ್ಯೋಪಾಧ್ಯಾಯಿನಿರಾದ ಭಗಿನಿ ಕ್ರಿಸೆನ್ಸ್ ಮತ್ತು ಭಗಿನಿ ಉಪಸ್ಥಿತರಿದ್ದರು. ವಿಜಯ ಸ್ವಾಗತಿಸಿದರು ಮತ್ತು ಯೋಗ ಶಿಕ್ಷಕರಿಗೆ ಗೌರವ ಸ್ಮರಣಕ್ಕೆ ನೀಡಿ ಗೌರವಿಸಿದರು. ಗಣೇಶ ಹೆಬ್ಬಾರ್ ನಿರೂಪಿಸಿದರು.





