

ಕುಂದಾಪುರ,ಅ.15: ಕಥೊಲಿಕ್ ಸಭಾ ಕುಂದಾಪುರ ಚರ್ಚ್ ಘಟಕದ ವತಿಯಿಂದ ಅ.15 ರಂದು ಕುಂದಾಪುರ ಹೋಲಿ ರೋಜರಿ ಮಾತಾ ಇಗರ್ಜಿಯ ಮೈದಾನದಲ್ಲಿ, 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಕುಂದಾಪುರ ನಗರ ಯೋಜನ ಪ್ರಾಧಿಕಾರ ಅಧ್ಯಕ್ಷರಾದ ವಿನೋದ್ ಕ್ರಾಸ್ಟೊ ಕೇಡೆಟಗಳಿಂದ ಗೌರವ ಸ್ವೀಕರಿಸಿ ನಮ್ಮ ಹಿರಿಯರು ಮಾಡಿದತ್ಯಾಗ ಸಾಹಸಗಳ ಬಲಿದಾನದಿಂದ ಇವತ್ತು ನಮ್ಮ ದೇಶ ಅಭಿವ್ರದ್ದಿ ಪಥದಲ್ಲಿ ಸಾಗುತ್ತಿದೆ, ನಮ್ಮ ದೇಶದ ಮೊದಲ ಪ್ರಧಾನಿ ಹಾಕಿದ ಅಡಿಗಲ್ಲಿನಂತೆ, ದೇಶ ಸಾಗುತ್ತಿದೆ, ಆದರೆ ಸಂವಿದಾನ ರಚಿಸಿದ ಡಾ। ಅಂಬೇಡ್ಕರ್ ಪೀಠಿಕೆಯಲ್ಲಿ ಸಮಾನತೆ, ಜಾತ್ಯಾತೀತೆ ಮತ್ತು ಸಮಾಜವಾದ ಈ ವಿಷಯಗಳಲ್ಲಿ ನಾವು ಯಶಸ್ವಿಗೊಳ್ಳಲ್ಲ ಎಂಬುದು ಬೇಸರದ ಸಂಗತಿ ಇದರಲ್ಲಿ ನಮಗೆ ನಮಗೆ ಸ್ವಾತಂತ್ರ ಸಿಕ್ಕಿದೆಯೋ ಅನುಮಾನ ಕಾಡುತ್ತದೆ’ ಎಂದು ತಿಳಿಸುತ್ತಾ ಸ್ವಾತಂತ್ಯದ ಶುಭಾಶಯಗಳನ್ನು ಹಂಚಿಕೊಂಡರು.
ಚರ್ಚಿನ ಗಾಯನ ಮಂಡಳಿ ದೇಶ ಭಕ್ತಿ ಗೀತೆಗಳನ್ನು ಹಾಡಿತು. ಸಂತ ಜೋಸೆಪ್ ಕಾನ್ವೆಂಟಿನ ಮುಖ್ಯಸ್ಥೆ ಭಗಿನಿ ಸುಪ್ರಿಯಾ, ಪಾಲನ ಮಂಡಳಿ ಉಪಾಧ್ಯಕ್ಷರಾದಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಸರ್ವ ಆಯೋಗಗಳ ಸಂಯೋಜಕಾರದ ಪ್ರೇಮಾ ಡಿಕುನ್ಹಾ,
ಘಟಕದ ನಿಕಟಪೂರ್ವ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ ಕಥೊಲಿಕ್ ಸಭಾದ ಪದಾಧಿಕಾರಿಗಳಾದ, ಬರ್ನಾಡ್ ಡಿಕೋಸ್ತಾ, ಜೋಸೆಫ್ ಡಿಸೋಜಾ ವಿನಯಾ ಡಿಕೋಸ್ತಾ, ಕ್ಲಿಫರ್ಡ್ ಡಿಸಿಲ್ವಾ ಜೋನ್ ಮಾಸ್ಟರ್, ಮುಂತಾದವರು ಉಪಸ್ಥಿತರಿದ್ದರು. ಕಥೊಲಿಕ್ ಸಭಾ ಕುಂದಾಪುರ ಘಟಕದ ಅಧ್ಯಕ್ಷ ವಿಲ್ಸನ್ ಡಿಆಲ್ಮೇಡಾ ಸ್ವಾಗತಿಸಿದರು. ಕಾರ್ಯಕ್ರಮದ ಸಂಚಾಲಕಿ ಜೂಲಿಯೆಟ್ ಪಾಯ್ಸ್, ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಶಾಂತಿ ಪಿಂಟೊ ವಂದಿಸಿದರು.




















