

ಶ್ರೀನಿವಾಸಪುರ : ಪಟ್ಟಣ ಹೊರವಲಯದ ಪುಂಗನೂರು ಕ್ರಾಸ್‌ನಲ್ಲಿ ಗುರುವಾರ ಅಭಯ ಆಂಜನೇಯಸ್ವಾಮಿ ಪ್ರತಿಷ್ಟೆಯು ಅದ್ದೂರಿಯಾಗಿ ನೆರವೇರಿತು. ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಎಂಎಲ್‌ಸಿ ವೈ.ಎ. ನಾರಾಯಣಸ್ವಾಮಿ ಅವರು ಸನಾತನ ಧರ್ಮವು ಎಲ್ಲಾ ಧರ್ಮಗಳಿಗಿಂತ ಶ್ರೇಷ್ಠವಾಗಿದ್ದು, ಸರ್ವರಿಗೂ ಸಮಪಾಲು, ಸಮಬಾಳು ನೀಡುವ ಧರ್ಮವಾಗಿದೆ. ಸರ್ವಜನಾಂಗದ ಶಾಂತಿಯ ತೋಟವೆಂದೇ ಸನಾತನ ಧರ್ಮವನ್ನು ಪರಿಗಣಿಸಬಹುದು. ಎಲ್ಲಾ ಧರ್ಮಸ್ಥರನ್ನು ಸಮಾನವಾಗಿ ಕಾಣುವ ಧರ್ಮವೇ ಇದು ಎಂದು
ಅವರು ಮುಂದುವರಿದು, ಈಗಾಗಲೇ ಪುಂಗನೂರು ಕ್ರಾಸ್‌ನಲ್ಲಿ ಶನೇಶ್ಚರಸ್ವಾಮಿ ದೇವಾಲಯ ನಿರ್ಮಾಣ ಹಂತದಲ್ಲಿದ್ದು, ಇದು ತಮಿಳುನಾಡು ಶಿಲ್ಪಕಲಾ ಶೈಲಿಯಲ್ಲಿ ಲೋಕಕಲ್ಯಾಣ ಟ್ರಸ್ಟ್ ವತಿಯಿಂದ ನಿರ್ಮಾಣಗೊಳ್ಳುತ್ತಿದೆ. ಹಿರಿಯರ ಸಲಹೆಯಂತೆ ಆರುಕಾಲು ಆಡಿಯ ಆಂಜನೇಯಸ್ವಾಮಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ ಎಂದು ಹೇಳಿದರು.
ಅವರು ಮುಂದೆ ಹೇಳುವಾಗ, ಸುಮಾರು ೧೫ ಕೋಟಿ ವೆಚ್ಚದಲ್ಲಿ ಈ ಭವ್ಯ ದೇವಸ್ಥಾನ ಸಂಕೀರ್ಣ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಈಗಾಗಲೇ ೧೦ ಕೋಟಿಯಷ್ಟು ಕೆಲಸ ಮುಗಿದಿದೆ. ಉಳಿದ ೫ ಕೋಟಿಯ ಬಾಕಿ ಕೆಲಸವನ್ನು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು.
ಈ ದೇವಸ್ಥಾನ ಲಕ್ಷಾಂತರ ಭಕ್ತರನ್ನು ಆಕರ್ಷಿಸುವ ದಿವ್ಯ ಸ್ಥಳವಾಗಿ ಬೆಳೆಯಲಿದೆ. ಶ್ರಾವಣ ಮಾಸದ ಶನಿವಾರಗಳಲ್ಲಿ ಸುಮಾರು ೧೫ ಸಾವಿರ ಭಕ್ತರು ದೇವರ ದರ್ಶನ ಪಡೆಯುತ್ತಾರೆ. ದೇವಸ್ಥಾನದಲ್ಲಿ ಬರುವ ಹಣವನ್ನು ಸಮಾಜ ಸೇವೆಗೆ ಬಳಸುವ ಉದ್ದೇಶವಿದೆ ಎಂದರು.
ತಿರುಪತಿ ಪಾದಯಾತ್ರಾರ್ಥಿಗಳು ಈ ದೇವಾಲಯಕ್ಕೆ ಬಂದು ನೆಲಸಲು ಸಾಧ್ಯವಾಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಸನಾತನ ಧರ್ಮವನ್ನು ಉಳಿಸಿ ಬೆಳಸಲು ನಾವು ಕಂಕಣಬದ್ದರಾಗಿದ್ದೇವೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆಎಂಎಫ್ ನಿರ್ದೇಶಕ ಕೆ.ಕೆ. ಮಂಜುನಾಥ್ ರೆಡ್ಡಿ, ತಾ.ಪಂ. ಮಾಜಿ ಅಧ್ಯಕ್ಷ ಬಂಡಪಲ್ಲಿ ಕೃಷ್ಣಾರೆಡ್ಡಿ, ಶನೇಶ್ಚರಸ್ವಾಮಿ ದೇವಾಲಯದ ಟ್ರಸ್ಟಿಗಳಾದ ನೀಲಟೂರು ಶ್ರೀರಾಮರೆಡ್ಡಿ, ಬಯ್ಯಪಳ್ಳಿ ಮುರಳಿ, ಆರಿಕುಂಟೆ ವೆಂಕಟರೆಡ್ಡಿ, ಮುನಿಸ್ವಾಮಿರೆಡ್ಡಿ, ನಾಗಬೂಷನ್, ರಘುನಾಥರೆಡ್ಡಿ, ಲಕ್ಷ್ಮಣ್ ಗೌಡ, ನಾರಾಯಣಸ್ವಾಮಿ, ಪ್ರಕಾಶ್ ರೆಡ್ಡಿ ಹಾಗೂ ಮುಖಂಡರಾದ ಹೊದಲಿ ಅಪ್ಪಿರೆಡ್ಡಿ, ತೂಪಲ್ಲಿ ಮಧು, ಚಂದ್ರಶೇಖರ್ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.


