

ನಗರದ ಸೈ0ಟ್ ಮೇರಿಸ್ ಪದವಿಪೂರ್ವ ಕಾಲೇಜಿನಲ್ಲಿ ಅಗಸ್ಟ ತಿಂಗಳ 1ನೇ ತಾರೀಖಿನಂದು ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಇದರ ವತಿಯಿಂದ ದೀಪ ಬೆಳಗುವುದರೊಂದಿಗೆ ಜೂನಿಯರ್ ರೆಡ್ ಕ್ರಾಸ್ ಸಾಂಕೇತಿಕ ಉದ್ಘಾಟನೆ ಹಾಗೂ ಪ್ರಥಮ ಚಿಕಿತ್ಸೆ ಅರಿವು ಕಾರ್ಯಕ್ರಮ ಜರುಗಿತು.
ಸಮಾರಂಭದಲ್ಲಿ ಹೋಲಿ ರೋಸರಿ ಚರ್ಚಿನ ಪ್ರಧಾನ ಧರ್ಮ ಗುರುಗಳು ಹಾಗೂ ವಿದ್ಯಾ ಸಂಸ್ಥೆಗಳ ಜೊತೆ ಕಾರ್ಯದರ್ಶಿಯವರಾದ ರೆ. ಫಾ. ಪಾವ್ಲ್ ರೆಗೊರವರು ಅಧ್ಯಕ್ಷತೆ ವಹಿಸಿ, ದೀಪ ಬೆಳಗಿಸಿ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯ ಸಾಧನೆಗಳನ್ನು ಶ್ಲಾಘಿಸಿ, ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬೇಕು. ಆರೋಗ್ಯವನ್ನು ಹದಗೆಡಿಸುವ ಆಹಾರದಿಂದ ದೂರವಿರಬೇಕು ಎನ್ನುತ್ತಾ, ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎನ್ನುತ್ತಾ ಶುಭ ಸಂದೇಶ ನೀಡಿದರು.
ಕಾರ್ಯಕ್ರದಲ್ಲಿ ಮುಖ್ಯ ಅತಿಯಾಗಿ ಭಾಗವಹಿಸಿದ ರೆಡ್ ಕ್ರಾಸ್ ಸಂಸ್ಥೆಯ ಚೇರ್ ಮನ್ ಶ್ರೀ ಜಯಕರ ಶೆಟ್ಟಿ ಯವರು ರೆಡ್ ಕ್ರಾಸ್ ಸಂಸ್ಥೆ ಬೆಳೆದು ಬಂದ ಬಗೆ, ಉದ್ದೇಶ ಹಾಗೂ ಅದರ ಕಾರ್ಯ ಕಲಾಪಗಳ ವಿವರ ತಿಳಿಸಿ ತಾರತಮ್ಯವಿಲ್ಲದೆ ಒಗ್ಗಟ್ಟು, ಮಾನವೀಯ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುವುದು ರೆಡ್ ಕ್ರಾಸ್ ಸಂಸ್ಥೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಕುಂದಾಪುರದ ಹೆಸರಾಂತ ವೈದ್ಯರು ಹಾಗೂ ಅನೇಕ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡವರು ಹಾಗೂ ಜೆಸಿಐ ಸಾಧನಾಶ್ರೀ ಪ್ರಶಸ್ತಿಗೆ ಭಾಜಾನರಾದ ಡಾ. ಸೋನಿ ಡಿಕೋಸ್ತಾ ರವರು ಸನ್ಮಾನ ಸ್ವೀಕರಿಸಿ, ಸಂಸ್ಥೆಯ ಹಳೇವಿದ್ಯಾರ್ಥಿಯಾಗಿದ್ದ ದಿನಗಳನ್ನು ನೆನಪಿಸಿಕೊಳ್ಳುತ್ತಾ ಪ್ರಥಮ ಚಿಕಿತ್ಸೆಯ ಕುರಿತು ಅನೇಕ ವಿಚಾರಧಾರೆಗಳನ್ನು ಪ್ರಾತ್ಯಕ್ಷಿತೆ ಮೂಲಕ ನಡೆಸಿಕೊಟ್ಟರು. ರೆಡ್ ಕ್ರಾಸ್ ನ ಸಂಯೋಜಕರಾದ ಯಾಗಿರುವ ಶ್ರೀ ದಿನಕರ ಶೆಟ್ಟಿಯವರು ಯವರು ಉಪಸ್ಥಿತರಿದ್ದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಮೂಲ ಉದ್ದೇಶ ತಿಳಿಸುತ್ತಾ ಪ್ರತಿಜ್ಞಾ ವಿಧಿಯನ್ನು ವಿದ್ಯಾರ್ಥಿಗಳಿಗೆ ಬೋಧಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ರೇಷ್ಮಾ ಫೆರ್ನಾಂಡಿಸ್ ರವರು ಸ್ವಾಗತ ಕೋರಿದರು.
ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿ ಉಪನ್ಯಾಸಕ ನಾಗರಾಜ ಶೆಟ್ಟಿ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ದ್ವಿತೀಯ ಪಿ ಯು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಕಿಶನ್ ಮತ್ತು ಸಾನ್ವಿ ಕ್ರಮವಾಗಿ ವಂದಿಸಿ ಸ್ವಾಗತಿಸಿದರು.































