

ಶಿಕ್ಷಣ ಕ್ಷೇತ್ರದಲ್ಲಿ ಮೂರು ದಶಕಗಳ ಕಾಲ ಸಮರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳ
ಬದುಕಿನಲ್ಲಿ ಜ್ಞಾನದ ಬೆಳಕು ಹರಡಿದ ಬೈ೦ದೂರು ಕುಂದಾಪುರದಲ್ಲಿನ ಶಿಕ್ಷಕಿ ಜೂಲಿಯಾನ ಡಯಾಸ್ ಅವರು ಮೇ 31 ರಂದು ಸರ್ಕಾರಿ ಸೇವೆಯಿಂದ ವಯೋನಿವೃತ್ತಿ ಹೊಂದಿದ್ದಾರೆ. ತಮ್ಮ ಬೋಧನಾ ಬದುಕಿನ ಆರಂಭವನ್ನು ವಂಡ್ಸೆಯ ಅಯ್ಯಂಗಾರ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು ಎರಡುವರೆ ವರ್ಷಗಳ ಸೇವೆಯೊಂದಿಗೆ ಆರಂಭಿಸಿದ ಅವರು, ಬಳಿಕ ತಲ್ಲೂರಿನ ಕೋಟಿಬಾಗಿಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 27 ವರ್ಷಗಳಿಗಿಂತ ಅಧಿಕ ಸುದೀರ್ಘ ಸೇವೆ ಸಲ್ಲಿಸಿ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಠ ಗುರುತನ್ನು ಮೂಡಿಸಿದರು. ಅಂತೀಮವಾಗಿ ಇವರು ಮುಖ್ಯ ಶಿಕ್ಷಕಿಯಾಗಿ ಭಡ್ತಿ ಹೊಂದಿ ಆಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗೌರವಯುತವಾಗಿ ನಿವೃತ್ತಿ ಹೊಂದಿದ್ದಾರೆ.
ಇವರು ಮೂಲತಹ ಬೈಂದುರಿನವರಾಗಿದ್ದು, ಕುಂದಾಪುರದ ವಿನ್ಸೆಂಟ್ ಡಿಸೋಜಾ ಇವರ ಪತ್ನಿಯಾಗಿದ್ದಾರೆ. ಶಿಕ್ಷಕಿ ಜೂಲಿಯಾನ ಇವರ ಸರಳತೆ ಸಜ್ಮನಿಕೆ, ಕರ್ತವ್ಯ ನಿಷ್ಠೆ ಹಾಗೂ ವಿದ್ಯಾರ್ಥಿಗಳ ಮೇಲಿನ ಅಪಾರ ಪ್ರೀತಿ ಮತ್ತು ಕಾಳಜಿಯಿಂದ ಶಿಕ್ಷಕಿ ಜೂಲಿಯಾನ ಡಯಾಸ್ ಅವರು ವಿದ್ಯಾರ್ಥಿಗಳು, ಪೋಷಕರು ಹಾಗೂ ಸಹೋದ್ಯೋಗಿಗಳ ಅಪಾರ ಗೌರವಕ್ಕೆ ಪಾತ್ರರಾಗಿದ್ದರು. ಪಾಠ ಬೋಧನೆಯನ್ನು ಕೇವಲ ಪಠ್ಯಕ್ರಮಕ್ಕೆ ಸೀಮಿತಗೊಳಿಸದೆ, ಮಕ್ಕಳಲ್ಲಿ ಉತ್ತಮ ಸಂಸ್ಕಾರ, ನೈತಿಕ ಮೌಲ್ಯಗಳು ಮತ್ತು ಜೀವನ ಕೌಶಲ್ಯಗಳನ್ನು ನೆಲೆಸುವಲ್ಲಿ ಇವರು ಮಹತ್ವದ ಪಾತ್ರವನ್ನು ವಹಿಸಿದ್ದರು
ಅವರ ಸೌಮ್ಯ ಸ್ವಭಾವ, ಆತ್ಮೀಯ ನಡೆ ಮತ್ತು ಸಮರ್ಪಿತ ಸೇವೆಯಿಂದ ಅನೇಕ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕಿಯಾಗಿ
ಗುರುತಿಸಿಕೊಂಡಿದ್ದರು. ಅವರ ಮಾರ್ಗದರ್ಶನದಲ್ಲಿ ಶಿಕ್ಷಣ ಪಡೆದ ಹಲವರು ಇಂದು ವಿವಿಧ ಕ್ಷೇತ್ರಗಳಲ್ಲಿ ಯಶಸ್ಸಿನ
ಹಾದಿಯಲ್ಲಿ ಸಾಗುತ್ತಿದ್ದು, ತಮ್ಮ ಶಿಕ್ಷಕಿಯ ಕೊಡುಗೆಯನ್ನು ಕೃತಜ್ಞತೆಯಿಂದ ಸ್ಮರಿಸುತ್ತಿದ್ದಾರೆ. ಕೋಟಿಬಾಗಿಲು-ತಲ್ಲೂರು ಗ್ರಾಮಸ್ಥರೊಂದಿಗೂ ಅವರು ಆತ್ಮೀಯ ಬಾಂಧವ್ಯ ಬೆಳೆಸಿಕೊಂಡಿದ್ದರು. ಗ್ರಾಮಸ್ಥರು ಅವರನ್ನು ತಮ್ಮ ಕುಟುಂಬದ ಸದಸ್ಯೆಯಂತೆಯೇ ಪ್ರೀತಿಸುತ್ತಿದ್ದರೆ, ಶಿಕ್ಷಕಿ ಜುಲಿಯಾನ ಡಯಾಸ್ ಅವರೂ ಜನರೊಂದಿಗೆ ಅತ್ಯ೦ತ ಆತ್ಮೀಯತೆಯಿಂದ ಬೆರೆತು ಸಮಾಜದ ವಿಶ್ವಾಸ ಗಳಿಸಿದ್ದರು.
ಇದೀಗ ಇವರಿಗೆ ಅಧ್ಯಾಪಕ ವ್ರಂದ, ವಿದ್ಯಾರ್ಥಿಗಳು ನೆಚ್ಚಿನವರು ಇವರನ್ನು ಆತ್ಮೀಯವಾಗಿ ಬಿಳ್ಕೊಟ್ಟು ಮುಂದಿನ ಜೀವನಕ್ಕೆ ಶುಭ ಕೋರಿದ್ದಾರೆ.




