

ಮಂಗಳೂರು, ಜೂ.20; ಸಂತ ಎಲೋಶಿಯಸ್ ಗೊನ್ಝಾಗ ಶಾಲೆಯಲ್ಲಿ ಸಂಸ್ಥಾಪಕ ಸಂತ ಅಲೋಶಿಯಸ್ ಗೊನ್ಝಾಗ ಅವರ ಸಂಸ್ಮರಣಾ ಹಬ್ಬವನ್ನು ಜೂನ್ 20ರಂದು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ನಿಕಟಪೂರ್ವ ಪ್ರಾಂಶುಪಾಲರಾದ ರೆ.ಫಾ.ಮೆಲ್ವಿನ್ ಅನಿಲ್ ಲೋಬೊ ಎಸ್.ಜೆ ಅವರ ಸಮರ್ಪಣಾ ಭಾವದ ಸೇವೆಗಾಗಿ ಸನ್ಮಾನಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್ ಮೆಲ್ವಿನ್ ಪಿಂಟೊ ಅವರು ಫಾ. ಮೆಲ್ವಿನ್ ಅನಿಲ್ ಲೋಬೊ ಅವರ ನಾಯಕತ್ವ ಗುಣವನ್ನು ಕೊಂಡಾಡಿದರು. ಫಾ. ಮೆಲ್ವಿನ್ ತಮ್ಮವರೊಂದಿಗೆ ಜೊತೆಗೂಡಿ ಸಾಗಿದರು. ಎಲ್ಲರ ಕೈಹಿಡಿದು ಮಾರ್ಗದರ್ಶನ ಮಾಡಿದರು. ಜೆಸ್ಯೂಟ್ ಮೌಲ್ಯಗಳನ್ನು ಆಧರಿಸಿ ಮುನ್ನಡೆಸಿದ ನಾಯಕತ್ವ ಗುಣ ಹೊಂದಿರುವ ಅಪರೂಪದ ವ್ಯಕ್ತಿತ್ವ ಎಂದರು. ವಿದ್ಯಾರ್ಥಿಗಳನ್ನುದ್ದೇಶಿಸಿ ಕುತೂಹಲ ಪ್ರಜ್ಞೆ, ದಯೆ ಹಾಗೂ ಜೆಸ್ಯೂಟ್ ಮೌಲ್ಯಗಳನ್ನು ಒಳಗೊಂಡು ಸಾಗಿದಲ್ಲಿ ಹಾಗೂ ಇತರರಿಗಾಗಿ ಬದುಕುತ್ತಾ ಕೃತಜ್ಞತಾ ಭಾವ, ಉದಾರತೆಯೊಂದಿಗೆ ಸಾಗಿದಲ್ಲಿ ಯಶಸ್ಸು ನಿಶ್ಚಿತ ಎಂದರು. ರೆ. ಫಾ. ಮೆಲ್ವಿನ್ ಅನಿಲ್ ಲೋಬೊ ಅವರು ವಿಶ್ವಾಸ ಹಾಗೂ ಸಹಕಾರದಿಂದ ತನ್ನ ಜೊತೆಗೆ ಕಾರ್ಯನಿರ್ವಹಿಸಿದ ಎಲ್ಲರಿಗೂ ಧನ್ಯವಾದವನ್ನಿತ್ತರು. ಸಂಸ್ಥೆಯ ಧ್ಯೇಯೋದ್ದೇಶಗಳನ್ನು ಈಡೇರಿಸುವಲ್ಲಿ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುವಂತೆ ಕರೆನೀಡಿದರು .ನೂತನ ಪ್ರಾಂಶುಪಾಲರಾದ ರೆ.ಫಾ. ರೋಹನ್ ಡಿ’ ಅಲ್ಮೇಡಾ ಜೆಸ್ಯೂಟ್ ಶಿಕ್ಷಣದ ಸಮಗ್ರ ಧ್ಯೇಯೋದ್ದೇಶಗೊಳನ್ನು ಕಾಯ್ದುಕೊಂಡು , ಪ್ರೀತಿ ವಿಶ್ವಾಸ ಹಾಗೂ ಸಾಮರ್ಥ್ಯಗಳನ್ನು ಆಧರಿಸಿ ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಸಂತ ಅಲೋಶಿಯಸ್ ಗೊನ್ಜಾಗ ಅವರ ಸೇವೆಯನ್ನು ಸ್ಮರಿಸುತ್ತ ಪ್ರಾರ್ಥನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು .ಉಪಪ್ರಾಂಶುಪಾಲರಾದ ಶ್ರೀಮತಿ ಲಾರೆಲ್ ಡಿ’ಸೋಜ ಹಾಗೂ ಶ್ರೀಮತಿ ಅಪರ್ಣ ಸುರೇಶ್ ಅವರು ಉಪಸ್ಥಿತರಿದ್ದರು.
St. Aloysius Gonzaga School – Founder’s Day Celebration – Honoring the immediate past principal

Mangaluru,June,20; St Aloysius Gonzaga School, Mangaluru, celebrated the Feast of its patron, St Aloysius Gonzaga, on 20th June 2025 with devotion and joy. The celebration also marked the felicitation of the outgoing Principal, Rev. Fr Melwyn Anil Lobo SJ, who was honoured for his dedicated service. The event unfolded in three sessions—for students of KG to V, VI to XII, and a special staff gathering.
Addressing the gathering, Fr Melwin Pinto SJ, Rector of St Aloysius Institutions, lauded Fr Melwyn for his transformative leadership, saying, “He walked with his people, holding hands and guiding with clarity, rooted in Jesuit values.” Speaking to the students, he urged them to remain curious, kind, and rooted in values, reminding them that “true success lies in being persons for others, living with gratitude and grace.” In his message to the staff, Fr Melwyn Anil Lobo SJ thanked them for their trust and cooperation, encouraging them to stay united in mission and purpose.
The newly appointed Principal, Fr Rohan D’Almeida SJ, expressed his commitment to carrying forward the mission of holistic Jesuit education grounded in compassion and competence.
The event included prayer, reflections on St Aloysius Gonzaga, and cultural presentations that celebrated service and faith. The staff programme concluded the day with warm farewells and shared memories. Vice-Principals Ms Laurel Dsouza Ms Aparna Suresh extended heartfelt appreciation, making it a day to remember.


























