

ಶ್ರೀನಿವಾಸಪುರ : ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಭಾಗವಾಗಿ ಗುರುವಾರ ಶ್ರೀನಿವಾಸಪುರದ ಸರ್ಕಾರಿ ಬಾಲಕಿಯರ ಕಾಲೇಜಿನ ಆವರಣದಿಂದ ಪ್ರಾರಂಭವಾದ ಕಾರ್ಮಿಕ ಮತ್ತು ರೈತರ ರ್ಯಾಲಿ ಎಂಜಿ ರಸ್ತೆ , ಸಂತೆ ಮೈದಾನ, ರಾಜಾಜಿ ರಸ್ತೆ ಮತ್ತು ಜೆ.ಸಿ ರಸ್ತೆಯ ಮೂಲಕ ಮೆರವಣಿಗೆ ನಡೆಸಿ ತಾಲೂಕು ಕಚೇರಿ ಆವರಣದಲ್ಲಿ ಮುಷ್ಕರದ ಬಹಿರಂಗ ಸಭೆಯನ್ನು ಯಶಸ್ವಿಯಾಗಿ ನಡೆಸಲಾಯಿತು.
ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳಾದ ಕಾರ್ಮಿಕ ವಿರೋಧಿ ನಾಲ್ಕು ಸಂಹಿತೆಗಳ ವಾಪಸ್ಸಿಗಾಗಿ, ಕಾರ್ಮಿಕರ ರಕ್ಷಣೆ, ಸಾಮಾಜಿಕ ಭದ್ರತೆ, ಹೋರಾಟದ ಹಕ್ಕಿಗಾಗಿ ಹಿಂದಿನ ಕಾರ್ಮಿಕ ಕಾನೂನುಗಳು ಮುಂದುವರಿಸಲು ಒತ್ತಾಯಿಸಿ ಅಸಂಘಟಿತ ಕಾರ್ಮಿಕರಿಗೆ ಕನಿಷ್ಠ ವೇತನ 36,000 ನೀಡಬೇಕೆಂದು, ಗ್ರಾಮ ಪಂಚಾಯಿತಿ, ಅಂಗನವಾಡಿ , ಬಿಸಿಯೂಟ ಸೇವಾ ಇಲಾಖೆಗಳಿಗೆ ಅನುದಾನ ಹೆಚ್ಚು ಮಾಡಬೇಕೆಂದು, ಈ ದೇಶದ ಜನಸಾಮಾನ್ಯರಿಗೆ ಮಾರಕವಾಗಿರುವ ವಿದ್ಯುತ್ ಖಾಸಗಿಕರಣ ,ಬೀಜ ಕಾಯ್ದೆ ,ರೈತ ವಿರೋಧಿ ಭೂಸುಧಾರಣೆ ಕಾಯ್ದೆ ವಾಪಸ್ ಆಗಬೇಕೆಂದು ಹಿಂದಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಮುಂದುವರಿಸಿ ಬಿಬಿಜಿ ರಾಮ್ ಜಿ ಕಾಯಿದೆ ರದ್ದುಗೊಳಿಸಲು ಒತ್ತಾಯಿಸಿ ನೂರಾರು ಸಂಖ್ಯೆಯಲ್ಲಿ ರೈತರು ಕಾರ್ಮಿಕರು ಇಂದು ಬೀದಿಗಿಳಿದು ಪ್ರತಿಭಟಿಸಿದರು.
ಮುಷ್ಕರವನ್ನು ಉದ್ದೇಶಿಸಿ ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಪಿಆರ್ ಸೂರ್ಯನಾರಾಯಣ, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾತಕೋಟೆ ನವೀನ್ ಕುಮಾರ್, ಗ್ರಾಮ ಪಂಚಾಯಿತಿ ನೌಕರ ಸಂಘದ ಜಿಲ್ಲಾ ಅಧ್ಯಕ್ಷ ಅಮರನಾರಾಯಣ, ಅಂಗನವಾಡಿ ನೌಕರ ಸಂಘದ ಜಿಲ್ಲಾ ಅಧ್ಯಕ್ಷ ಆರ್ ಆಂಜಲಮ್ಮ, ಬಿಸಿಯೂಟ ನೌಕರ ಸಂಘದ ಜಿಲ್ಲಾ ಸಂಚಾಲಕಿ ಜಿ.ಲಕ್ಷ್ಮೀದೇವಮ್ಮ, ದಲಿತ ಹಕ್ಕುಗಳ ಹೋರಾಟ ಸಮಿತಿ ಮುಖಂಡ ಶಿವರಾಜ್, ದಲಿತ ಸಂಘರ್ಷ ಸಮಿತಿಯ ಮುಖಂಡ ಶ್ರೀನಿವಾಸ್ ,ನರಸಿಂಹಮೂರ್ತಿ ಮುಂತಾದವರು ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಮಾತನಾಡಿದರು.
ಪ್ರತಿಭಟನಾ ಮುಷ್ಕರದಲ್ಲಿ ಸಿಐಟಿಯುನ ಅಂಗನವಾಡಿ ಸಂಘದ ತಾಲೂಕು ಕಾರ್ಯದರ್ಶಿ ಮಮತಾ, ಖಜಾಂಚಿ ಪುಷ್ಪ, ಶಾಂತಮ್ಮ ಲಕ್ಷ್ಮೀದೇವಮ್ಮ ಶಕುಂತಲಾ, ಗ್ರಾಮ ಪಂಚಾಯಿತಿ ನೌಕರ ಸಂಘದ ತಾಲೂಕು ಮುಖಂಡರಾದ ಆನಂದ್ ಕುಮಾರ್, ಆಂಜಲಪ್ಪ, ಶ್ರೀನಿವಾಸ ಶೆಟ್ಟಿ ,ನಾರಾಯಣಸ್ವಾಮಿ, ಬಿಸಿಯೂಟ ನೌಕರ ಸಂಘದ ತಾಲೂಕು ಮುಖಂಡರಾದ ನಾಗಮಣಿ ,ರಾಧಮ್ಮ ,ಅನಂತಮ್ಮ ,ಲಕ್ಷ್ಮೀದೇವಮ್ಮ ,ಶಾರದಾ, ಶಾಂತಮ್ಮ, ಶ್ರೀದೇವಿ, ಕಟ್ಟಡ ಕಾರ್ಮಿಕ ಸಂಘದ ಮುಖಂಡರಾದ ರಾಮಪ್ಪ, ರೈತ ಸಂಘದ ತಾಲೂಕು ಮುಖಂಡರುಗಳಾದ ಸೈಯದ್ ಫಾರೂಕ್, ಎನ್ ವೀರಪ್ಪರೆಡ್ಡಿ, ಜಿ. ಮಂಜುಳಾ ,ಆರ್ ವೆಂಕಟೇಶ್, ಭೂಸಂತರಸ್ತರ ಹೋರಾಟ ಸಮಿತಿಯ ಮುಖಂಡರಾದ ಹನುಮಪ್ಪ, ನರಸಿಂಹಪ್ಪ, ಲಕ್ಷ್ಮಣ ರೆಡ್ಡಿ, ರಾಮಪ್ಪ, ಸಿಪಿಎಂ ಪಕ್ಷದ ಮುಖಂಡರಾದ ಮುನಿರಾಜು, ಆಂಜಲಪ್ಪ, ರಾಮಪ್ಪ, ಪದ್ಮ ಮುಂತಾದವರು ಮುಷ್ಕರದ ನೇತೃತ್ವವನ್ನು ವಹಿಸಿದ್ದರು.

